Tag: Harshavardhan

  • ಕೆಲ ದಿನಗಳಲ್ಲಿ ಭಾರತೀಯರ ಕೈ ಸೇರಲಿದೆ ಲಸಿಕೆ: ಹರ್ಷವರ್ಧನ್

    ಕೆಲ ದಿನಗಳಲ್ಲಿ ಭಾರತೀಯರ ಕೈ ಸೇರಲಿದೆ ಲಸಿಕೆ: ಹರ್ಷವರ್ಧನ್

    ಚೆನ್ನೈ: ಕೋವಿಡ್-19 ಲಸಿಕೆ ಅಭಿವೃದ್ಧಿಗಾಗಿ ವಿಜ್ಞಾನಿಗಳು ಮತ್ತು ವೈದ್ಯರು ನಡೆಸಿದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶ್ಲಾಘಿಸಿ, ಮುಂದಿನ ಕೆಲ ದಿನಗಳಲ್ಲಿ ಲಸಿಕೆಯನ್ನು ದೇಶದ ಜನರಿಗೆ ನೀಡಲಾಗುವುದು ಎಂದರು.

    ದೇಶದಲ್ಲಿ ನಡೆಯುತ್ತಿರುವ ಎರಡನೇ ಸುತ್ತಿನ ಡ್ರೈ ರನ್ ಲಸಿಕಾ ಚಾಲನೆಯ ವ್ಯವಸ್ಥೆಯನ್ನು ಪರಿಶೀಲಿಸಲು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಅಲ್ಪಾಕಾಲವಧಿಯಲ್ಲಿ ಭಾರತ ಲಸಿಕೆಯನ್ನು ಅಭಿವೃದ್ಧಿಪಡಿಸಿ ಉತ್ತಮ ಸಾಧನೆ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ನಾವು ಈ ಲಸಿಕೆಯನ್ನು ನಮ್ಮ ದೇಶವಾಸಿಗಳಿಗೆ ನೀಡಲು ತಯಾರಿ ನಡೆಸುತ್ತಿದ್ದೇವೆ. ಮೊದಲು ನಮ್ಮ ಆರೋಗ್ಯ ಕಾರ್ಯಕರ್ತರಿಗೆ ನಂತರ ಕೊರೊನಾದ ಸಂದರ್ಭ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ ಕೊರೊನಾ ವಾರಿಯರ್ಸ್‍ಗೆ ನೀಡಲಾಗುದು ಎಂದು ತಿಳಿಸಿದರು.

    ಪ್ರತಿಯೊಂದು ವಿವರಗಳನ್ನು ರಾಷ್ಟ್ರಮಟ್ಟದಿಂದ ತಳ ಮಟ್ಟದ ಜನರಿಗೆ ತಲುಪಿಸುವುದು ಖಚಿತ. ಈಗಾಗಲೇ ಲಕ್ಷಾಂತರ ಆರೋಗ್ಯ ಕಾರ್ಯಕರ್ತರು ತರಬೇತಿ ಪಡೆದಿದ್ದಾರೆ. ಬಾಕಿ ಇರುವವರಿಗೆ ತರಬೇತಿ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದರು.

     

    ದೇಶದಲ್ಲಿ ಮೊದಲ ಸುತ್ತಿನ ಡ್ರೈರನ್ ಜನವರಿ 2ರಂದು ಸುಮಾರು 125 ಜಿಲ್ಲೆಗಳಲ್ಲಿ ಮಾಡಿದ್ದೇವೆ. ಇದೀಗ ಎರಡನೇ ಸುತ್ತಿನ ಡ್ರೈರನ್ 33 ರಾಜ್ಯಗಳಲ್ಲಿ ಇಂದು ನಡೆಸುತ್ತಿದ್ದೇವೆ. ಮೊದಲು ಉತ್ತರ ಪ್ರದೇಶ, ಹರಿಯಾಣ ಮತ್ತು ಅರುಣಾಚಲ ಪ್ರದೇಶದಲ್ಲಿ ಡ್ರೈರನ್ ನಡೆಸಿದ್ದೇವು ಈ ರಾಜ್ಯಗಳನ್ನು ಹೊರತು ಪಡಿಸಿ ಎಲ್ಲಾ ರಾಜ್ಯಗಳಲ್ಲೂ ಡ್ರೈರನ್ ನಡೆಸುತ್ತೇವೆಂದು ಮಾಹಿತಿ ನೀಡಿದರು.

    ಕೋವಿಡ್-19 ಲಸಿಕಾ ಕಾರ್ಯಕ್ರಮ ಸುಗಮವಾಗಿ ಮತ್ತು ಸೂಸೂತ್ರವಾಗಿ ಫಲಾನುಭವಿಗಳಿಗೆ ದೊರಕಲು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎನ್‍ಜಿಒ ಗಳು ಕೈ ಜೋಡಿಸಿ ಎಂದು ವಿನಂತಿಸಿಕೊಂಡರು.

    3 ದಿನಗಳ ಪೋಲಿಯೋ ರೋಗ ನಿರೋಧಕ ಲಸಿಕಾ ಆಭಿಯಾನ ಜನವರಿ 17 ರಂದು ಪ್ರಾರಂಭಗೊಳ್ಳಲಿದೆ. ಇದು ಪೋಲಿಯೋ ಮತ್ತು ದೇಶದ ಒಟ್ಟಾರೆ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

  • ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

    ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

    ನವದೆಹಲಿ: ದೀಪಗಳ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಪರಿಸರಕ್ಕೆ ಹಾನಿಕಾರಕ ಪಟಾಕಿಗಳನ್ನು ಸಿಡಿಸಿ ಮಾಲಿನ್ಯ ಮಾಡುವುದನ್ನು ತಡೆಯಲು ಪರಿಸರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆದ್ದರಿಂದ ಶನಿವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಹಸಿರು ಪಟಾಕಿಗಳನ್ನು ಬಿಡುಗಡೆ ಮಾಡಿದ್ದಾರೆ.

    ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಈ ಹಸಿರು ಪಟಾಕಿಯಿಂದ ಶೇ.30ರಷ್ಟು ಮಾಲಿನ್ಯ ಕಡಿಮೆಯಾಗಲಿದೆ. ಆದ್ದರಿಂದ ಭಾವನೆ ಹಾಗೂ ಪರಿಸರಕ್ಕೆ ಅಡ್ಡಿಯಾಗದಂತೆ ಪರಿಸರ ಸ್ನೇಹಿ ಪಟಾಕಿಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದರು.

    ಹಸಿರು ಪಟಾಕಿಗಳನ್ನು ವೈಜ್ಞಾನಿಕ ಹಾಗೂ ಕೈಗಾರಿಕ ಸಂಶೋಧನ ಕೌನ್ಸಿಲ್(ಸಿಎಸ್‍ಐಆರ್) ತಯಾರಿಸಿದೆ. ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳಲ್ಲಿ ಕಡಿಮೆ ಕೆಮಿಕಲ್ ಬಳಸಲಾಗುತ್ತದೆ. ಹೀಗಾಗಿ ಇದರಿಂದ ಪರಿಸರಕ್ಕೆ ಹೆಚ್ಚು ಹಾನಿ ಆಗುವುದಿಲ್ಲ. ಜೊತೆಗೆ ಸಾಮಾನ್ಯ ಪಟಾಕಿಗಳಿಂತ ಈ ಹಸಿರು ಪಟಾಕಿಗಳ ಬೆಲೆಯೂ ಕಡಿಮೆ ಇದೆ ಎನ್ನಲಾಗಿದೆ. ಆದರೆ ಈ ಪಟಾಕಿಗಳ ನಿಖರ ಬೆಲೆ ಬಗ್ಗೆ ಸಿಎಸ್‍ಐಆರ್ ಯಾವುದೇ ಮಾಹಿತಿ ನೀಡಿಲ್ಲ.

    ಈ ಹಿಂದೆ 2018ರಲ್ಲಿ ದೀಪಾವಳಿ ಹಬ್ಬಕ್ಕೂ ಮುಂಚೆಯೇ ಸುಪ್ರೀಂ ಕೋರ್ಟ್ ಪರಿಸರ ಮಾಲಿನ್ಯ ಉಂಟುಮಾಡುವ ಪಟಾಕಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿತ್ತು. ಹಾಗೆಯೇ ಕಡಿಮೆ ಕೆಮಿಕಲ್ ಬಳಸಿ ತಯಾರಿಕೆ ಮಾಡುವ ಹಸಿರು ಪಟಾಕಿಗಳ ತಯಾರಿಕೆ ಹಾಗೂ ಮಾರಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಆದೇಶಿಸಿತ್ತು. ಆದರೆ ಆಗ ಈ ಬಗ್ಗೆ ಹಲವು ಪಟಾಕಿ ತಯಾರಕರು ಹಾಗೂ ಮಾರಾಟಗಾರರಿಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣಕ್ಕೆ ಆಗ ಹಸಿರು ಪಟಾಕಿ ಮಾರುಕಟ್ಟೆಗೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ತಯಾರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಈ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

    ಈ ಮೂಲಕ ಪರಿಸರ ಕಾಳಜಿ ಮೆರೆದ ಕೇಂದ್ರ ಸರ್ಕಾರದ ನಿಲುವು ಸಾರ್ವಜನಿಕರ ಗಮನ ಸೆಳೆದಿದ್ದು, ಸಿಎಸ್‍ಐಆರ್ ಹಾಗೂ ಕೇಂದ್ರ ಸರ್ಕಾರದ ಹೊಸ ಪ್ರಯತ್ನಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಸಭೆಯಲ್ಲಿ ಬಿಸ್ಕೆಟ್‍ಗೆ ಎಂಟ್ರಿ ಇಲ್ಲ, ಆರೋಗ್ಯಕರ ಸ್ನ್ಯಾಕ್ಸ್ ಮಾತ್ರ ಕೊಡಿ: ಆರೋಗ್ಯ ಇಲಾಖೆ ಸೂಚನೆ

    ಸಭೆಯಲ್ಲಿ ಬಿಸ್ಕೆಟ್‍ಗೆ ಎಂಟ್ರಿ ಇಲ್ಲ, ಆರೋಗ್ಯಕರ ಸ್ನ್ಯಾಕ್ಸ್ ಮಾತ್ರ ಕೊಡಿ: ಆರೋಗ್ಯ ಇಲಾಖೆ ಸೂಚನೆ

    ನವದೆಹಲಿ: ಇನ್ಮುಂದೆ ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಯ ಸಭೆಗಳಲ್ಲಿ ಬಿಸ್ಕೆಟ್‍ಗೆ ಎಂಟ್ರಿ ಇಲ್ಲ. ಅದರ ಬದಲಿಗೆ ಆರೋಗ್ಯಕರ ಸ್ನ್ಯಾಕ್ಸ್ ಮಾತ್ರ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವರಾದ ಹರ್ಷವರ್ಧನ್ ಅವರು ಸೂಚನೆ ನೀಡಿದ್ದಾರೆ.

    ಹೌದು. ಸಾಮನ್ಯವಾಗಿ ಎಲ್ಲಾ ಸಭೆಗಳಲ್ಲಿ ಸ್ಯಾಕ್ಸ್ ಗೆ ಟೀ ಜೊತೆ ಬಿಸ್ಕೆಟ್ ನೀಡುತ್ತಾರೆ. ಆದರೆ ಆರೋಗ್ಯಯುತ ಆಹಾರದ ಬಗ್ಗೆ ಕಾಳಜಿವಹಿಸಿರುವ ಹರ್ಷ ವರ್ಧನ್ ಅವರು ಇಲಾಖೆಯ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ವಿಶೇಷ ಸುತ್ತೋಲೆ ಹೊರಡಿಸಿದ್ದಾರೆ.

    ಇನ್ಮುಂದೆ ಸರ್ಕಾರಿ ಸಭೆಯಲ್ಲಿ ಬಿಸ್ಕೆಟ್ ನೀಡುವಂತಿಲ್ಲ, ಅದರ ಬದಲಿಗೆ ಡ್ರೈ ಫ್ರೂಟ್ಸ್ಗಳಾದ ಬಾದಾಮಿ, ವಾಲ್ನೆಟ್ ಸೇರಿದಂತೆ ಹುರಿದ ಕಾಳುಗಳನ್ನು ಸ್ನ್ಯಾಕ್ಸ್ ಗೆ ನೀಡಿ ಎಂದು ತಿಳಿಸಿದ್ದಾರೆ.

    ಜೂನ್ 19ರಂದು ಈ ಬಗ್ಗೆ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಇನ್ಮುಂದೆ ಅನಾರೋಗ್ಯಯುತ ಆಹಾರಗಳನ್ನು ಇಲಾಖೆಯ ಸಭೆಗಳಲ್ಲಿ ನೀಡುವಂತಿಲ್ಲ ಎಂದು ಹೇಳಿದೆ.

    ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ, ಇದು ಒಳ್ಳೆಯ ನಿರ್ಧಾರ. ನಮ್ಮ ಬಗ್ಗೆ ಸಚಿವರು ಕಾಳಜಿ ವಹಿಸುತ್ತಿರುವುದು ನಮಗೆ ಸಂತೋಷವಾಗಿದೆ. ಸಚಿವರು ವೈದ್ಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಅನಾರೋಗ್ಯವಾದ ಪದಾರ್ಥಗಳು ಯಾವ ರೀತಿ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವಿದೆ. ಆದ್ದರಿಂದ ಈ ರೀತಿ ನಿರ್ಣಯ ಕೈಗೊಂಡಿದ್ದಾರೆ. ನಾವು ಈ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

  • ಇಡೀ ಪ್ರಪಂಚ ನಮ್ಮತ್ತ ನೋಡುವಂತೆ ಮಾಡಿದ್ದು ಪ್ರಧಾನಿ ಮೋದಿ: ಡಾ.ಹರ್ಷವರ್ಧನ್

    ಇಡೀ ಪ್ರಪಂಚ ನಮ್ಮತ್ತ ನೋಡುವಂತೆ ಮಾಡಿದ್ದು ಪ್ರಧಾನಿ ಮೋದಿ: ಡಾ.ಹರ್ಷವರ್ಧನ್

    ಬೆಳಗಾವಿ: ಪ್ರಪಂಚದ 20 ರಾಷ್ಟ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಆದರೇ ಇಡೀ ಪ್ರಪಂಚದ ಚಿತ್ತ ಭಾರತದ ಮೇಲಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ, ಅವರು ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯಲ್ಲಿ ವೈದ್ಯರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ ಕೇಂದ್ರ ಸಚಿವರು, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಮೋದಿ ಅವರು ಇಡೀ ಪ್ರಪಂಚವೇ ನಮ್ಮತ್ತ ನೋಡುವಂತೆ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ರಫೆಲ್ ಹಾಗೂ ಡೈರಿ ಕುರಿತ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡದಿರುವುವುದೇ ಒಳಿತು. ಕಾಂಗ್ರೆಸ್ಸಿನವರ ಬಗ್ಗೆ ಮಾತನಾಡಿ ಸಮಯ ಹಾಳುಮಾಡುವುದ್ಯಾಕೆ ಎಂದು ಟಾಂಗ್ ನೀಡಿದ್ದಾರೆ.

    ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರ ಕೇವಲ ವದಂತಿ. ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಊಹಾಪೋಹಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದೇಶದಲ್ಲಿ ಬಿಜೆಪಿ ಬಹುಮತ ಬರುವಷ್ಟು ಸೀಟುಗಳನ್ನು ಗೆಲ್ಲುತ್ತೆ. ಎಷ್ಟು ಸೀಟುಗಳು ಬರುತ್ತವೆ ಎನ್ನುವುದನ್ನು ಹೇಳುವುದಿಲ್ಲ. ಆದ್ರೆ ಕರ್ನಾಟಕದಲ್ಲಿ ಕಳೆದ ಬಾರಿಯ 17 ಸೀಟುಗಳಿಗಿಂತ ಹೆಚ್ಚು ಬಿಜೆಪಿ ಗೆಲ್ಲುತ್ತದೆ. ಕೊನೆಗಳಿಗೆಯಲ್ಲಿ ರಾಜ್ಯದಲ್ಲಿ ಕ್ಲೀನ್‍ಸ್ವಿಪ್ ಕೂಡ ಆಗಬಹುದು. ಹಾಗೆಯೇ ಪಕ್ಷದ ಶಿಸ್ತಿನ ಸಿಪಾಯಿ ಸುರೇಶ್ ಅಂಗಡಿ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ ಎಂದು ಸಂಸದ ಹರ್ಷವರ್ಧನ್ ಹೊಗಳಿದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಾಹುಲಿಯ ಕುಚುಕು ಗೆಳೆಯ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಾಹುಲಿಯ ಕುಚುಕು ಗೆಳೆಯ

    ಬೆಂಗಳೂರು: ರಾಜಾಹುಲಿಯ ಕುಚುಕು ಗೆಳೆಯ ನಟ ಹರ್ಷವರ್ಧನ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮಾಡೆಲ್ ಐಶ್ವರ್ಯ ಅವರೊಂದಿಗೆ ಇಂದು ಹರ್ಷವರ್ಧನ್ ತಿರುಪತಿಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಇದೇ ತಿಂಗಳ 8ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

    ರಾಜಾಹುಲಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದ ಹರ್ಷವರ್ಧನ್ ಮಾಡೆಲ್ ಐಶ್ವರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ವರ್ಷ ಮೇ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಹರ್ಷವರ್ಧನ್ ಮತ್ತು ಮಾಡೆಲ್ ಐಶ್ವರ್ಯ ಅವರ ನಿಶ್ಚಿತಾರ್ಥ ನೆರವೇರಿತ್ತು.

    ಹರ್ಷವರ್ಧನ್ `ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಮೊಗ್ಗಿನ ಮನಸ್ಸು ಸಿನಿಮಾ ನಂತರ, ರಾಜಹುಲಿ, ಗಜಪಡೆ ಹೀಗೇ ಕೆಲವು ಸಿನಿಮಾಗಳಲ್ಲಿ ಹರ್ಷವರ್ಧನ್ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ರಾಜ್ ಕುಮಾರ್ ಜೊತೆ `ಪವರ್’ ಸಿನಿಮಾದಲ್ಲಿ ಕೂಡಾ ಅಭಿನಯಿಸಿದ್ದಾರೆ. ಆದರೆ ಯಶ್ ಅಭಿನಯದ `ರಾಜಾಹುಲಿ’ ಸಿನಿಮಾದಲ್ಲಿ ಹರ್ಷವರ್ಧನ ಯಶ್ ಸ್ನೇಹಿತನಾಗಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. `ರಘುವೀರ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಹರ್ಷ ಅವರು ಅಭಿನಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದ್ದಿಲ್ಲದೇ ರಾಜಾಹುಲಿಯ ಕುಚುಕು ಗೆಳೆಯನ ನಿಶ್ಚಿತಾರ್ಥ

    ಸದ್ದಿಲ್ಲದೇ ರಾಜಾಹುಲಿಯ ಕುಚುಕು ಗೆಳೆಯನ ನಿಶ್ಚಿತಾರ್ಥ

    ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರು ಒಬ್ಬೊಬ್ಬರಾಗಿ ದಾಂಪತ್ಯ ಜೀವನಕ್ಕೆ ಸದ್ದಿಲ್ಲದೇ ಪಾದಾರ್ಪಣೆ ಮಾಡಲು ಸಿದ್ಧರಾಗುತ್ತಿದ್ದಾರೆ. ಈಗ ರಾಜಾಹುಲಿಯ ಕುಚುಕು ಗೆಳೆಯ ನಟ ಹರ್ಷವರ್ಧನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ರಾಜಾಹುಲಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದ ಹರ್ಷವರ್ಧನ್ ಮಾಡೆಲ್ ಐಶ್ವರ್ಯ ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಭಾನುವಾರ ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಹರ್ಷವರ್ಧನ್ ಮತ್ತು ಮಾಡೆಲ್ ಐಶ್ವರ್ಯ ಅವರ ನಿಶ್ಚಿತಾರ್ಥ ನೆರವೇರಿದೆ.

    ಹರ್ಷವರ್ಧನ್ `ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ಸ್ಯಾಂಡಲ್‍ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಮೊಗ್ಗಿನ ಮನಸ್ಸು ಸಿನಿಮಾ ನಂತರ, ರಾಜಹುಲಿ, ಗಜಪಡೆ ಹೀಗೇ ಕೆಲವು ಸಿನಿಮಾಗಳಲ್ಲಿ ಹರ್ಷವರ್ಧನ್ ಅಭಿನಯಿಸಿದ್ದಾರೆ.

    ಅಷ್ಟೇ ಅಲ್ಲದೇ ಪುನೀತ್ ರಾಜ್ ಕುಮಾರ್ ಜೊತೆ `ಪವರ್’ ಸಿನಿಮಾದಲ್ಲಿ ಕೂಡಾ ಅಭಿನಯಿಸಿದ್ದಾರೆ. ಆದರೆ ಯಶ್ ಅಭಿನಯದ `ರಾಜಾಹುಲಿ’ ಸಿನಿಮಾದಲ್ಲಿ ಹರ್ಷವರ್ಧನ ಯಶ್ ಸ್ನೇಹಿತನಾಗಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಇತ್ತೀಚೆಗೆ ‘ರಘುವೀರ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಹರ್ಷ ಅವರು ಅಭಿನಯಿಸಿದ್ದಾರೆ.