Tag: Harshavardhan

  • ನಟಿ ಶಶಿಕಲಾ ವಿರುದ್ಧ ಎಫ್‌ಐಆರ್ ದಾಖಲು

    ನಟಿ ಶಶಿಕಲಾ ವಿರುದ್ಧ ಎಫ್‌ಐಆರ್ ದಾಖಲು

    ಕಿರುತೆರೆ ಹಿರಿಯ ನಟಿ ಶಶಿಕಲಾ (Shashikala) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾಗಿ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ಶಶಿಕಲಾ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಶಶಿಕಲಾ ವಿರುದ್ಧ ‘ಪ್ರಜಾರಾಜ್ಯ’ ಚಿತ್ರದ ನಿರ್ದೇಶಕ ಹರ್ಷವರ್ಧನ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾಗಿದ್ದು, ದೂರವಿದ್ದರೂ ಕೂಡ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ.

    ಸಿನಿಮಾಗೆ ಹಣ ಹೂಡಿಕೆ ಮಾಡೋದಾಗಿ ನನ್ನನ್ನು ನಂಬಿಸಿ ಮದುವೆಯಾದರು. ಮದುವೆಯ ಬಳಿಕ ಯಾವುದಾದರೂ ವಿಚಾರಕ್ಕೆ ಪ್ರಶ್ನೆ ಮಾಡಿದಂತಹ ಸಂದರ್ಭದಲ್ಲಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಹರ್ಷವರ್ಧನ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಹರ್ಷವರ್ಧನ್ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡು ವಿದ್ಯಾರಣ್ಯಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಇಂದು ಡಿವೈಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿದ್ದ ಅಧಿಕಾರಿ ದುರಂತ ಸಾವು – ಜೀಪ್‌ ಚಾಲಕನ ವಿರುದ್ಧ FIR

    ಇಂದು ಡಿವೈಎಸ್ಪಿ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿದ್ದ ಅಧಿಕಾರಿ ದುರಂತ ಸಾವು – ಜೀಪ್‌ ಚಾಲಕನ ವಿರುದ್ಧ FIR

    – ವೃತ್ತಿ ಜೀವನದ ಆರಂಭದಲ್ಲೇ ಇದೆಂಥಾ ವಿಧಿಯಾಟ?
    – ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ ಮಾಡಿದ್ದ ಹರ್ಷಬರ್ದನ್‌

    ಹಾಸನ: ಜೀಪ್‌ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಸಾವಿಗೀಡಾದ ಘಟನೆ ಪ್ರಕರಣ ಸಂಬಂಧ ಹಾಸನ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀಪ್‌ ಚಾಲಕ ಮಂಜೇಗೌಡ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ.

    ಹೌದು. ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಅಕಾಡೆಮಿಲ್ಲಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ವೇಳೆ ಯುವ ಐಪಿಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಮೈಸೂರಿನಿಂದ (Mysuru) ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬರುತ್ತಿದ್ದ ವೇಳೆ ಜೀಪ್ ಟಯರ್ ಸಿಡಿದು ವಾಹನ ಪಲ್ಟಿಯಾಗಿ ತೀವ್ರವಾಗಿ ಗಾಯಗೊಂಡಿದ್ದ 26 ವರ್ಷದ ಹರ್ಷಬರ್ದನ್ ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯುವ ಐಪಿಎಸ್ ಅಧಿಕಾರಿಯನ್ನು (IPS Officer) ಉಳಿಸಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳು ಶತಾಯಗತಾಯ ಹೋರಾಟ ನಡೆಸಿದರು ವಿಧಿ ಮೇಲಾಟ ನಡೆಸಿದೆ.

    ಸಾವು ಎಲ್ಲಿ ಹೇಗೆ ಬರುತ್ತೆ? ಅಂತ ಒಂದು ಸಣ್ಣ ಸುಳಿವು ಆ ಯಮರಾಯ ಕೊಡಲ್ಲ. ಧೊಪ್ಪನೇ ಅಂತ ಜವರಾಯ ಎದುರುಗಡೆ ಬಂದು ಬಿಡ್ತಾನೆ. ಈ ಫೋಟೋದಲ್ಲಿರುವವರ ಹೆಸರು ಹರ್ಷಬರ್ದನ್ ಪ್ರೊಬೆಷನರಿ ಐಪಿಎಸ್ ಅಧಿಕಾರಿ. ಡ್ಯೂಟಿಗೆ ರಿಪೋರ್ಟ್ ಮಾಡಲು ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ವೃತ್ತಿ ಜೀವನದ ಆರಂಭದಲ್ಲೇ 25 ವರ್ಷದ ಹರ್ಷಬರ್ಧನ್ ಜೀವನದಲ್ಲಿ ವಿಧಿಯಾಟ ಕ್ರೂರ ನರ್ತನವಾಡಿದ್ದಾನೆ.

    ಹಾಸನನದ ಕಿತ್ತಾನೆ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಯುವ ಅಧಿಕಾರಿ ಹರ್ಷಬರ್ದನ್ ದುರಂತ ಅಂತ್ಯ ಕಂಡಿದ್ದಾರೆ. ಅವಘಾತದಲ್ಲಿ ತಲೆ ತೀವ್ರವಾಗಿ ಗಾಯಗೊಂಡ ಹರ್ಷಬರ್ದನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಸನದ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ಹಾಸನದ ಕಡೆ ಬರುತ್ತಿದ್ದ ವೇಳೆ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಮೊದಲ ದಿನವೇ ಹರ್ಷಬರ್ದನ್ ಅಸುನೀಗಿದ್ದಾರೆ.

    ಹರ್ಷಬರ್ಧನ್ ನಿನ್ನೆಯಷ್ಟೇ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಟ್ರೇನಿಂಗ್ ಮುಗಿಸಿದ್ದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಇವತ್ತು ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಡಿವೈಎಸ್‌ಪಿಯಾಗಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು. ಐಜಿಪಿ ಬೋರಲಿಂಗಯ್ಯ ರಿಪೋರ್ಟ್ ಮಾಡಿಕೊಂಡು ಹಾಸನಕ್ಕೆ ಜೀಪ್‌ನಲ್ಲಿ ಬರುತ್ತಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಅನ್ನುವಷ್ಟರಲ್ಲಿ ದುರಂತ ಸಂಭವಿಸಿದೆ.

    ಹಾಸನದ ಕಿತ್ತಾನೆ ಬಳಿ ಸಂಜೆ 4.30ರ ವೇಳೆಗೆ ಜೀಪ್‌ನ ಟೈರ್ ಸ್ಫೋಟಗೊಂಡಿದೆ. ಪರಿಣಾಮ ಜೀಪ್ ಮೂರು ಸುತ್ತು ಉರುಳಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷಬರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು ತೀವ್ರ ರಕ್ತಸ್ರಾವ ಆಗಿದೆ. ಚಾಲಕ ಮಂಜೇಗೌಡ ಎಂಬುವರಿಗೂ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ರಕ್ತಸ್ರಾವವಾಗಿ ಬಿದ್ದಿದ್ದ ಅಧಿಕಾರಿ ಮತ್ತು ಚಾಲಕನನ್ನು 108 ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

    ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ, ಹರ್ಷಬರ್ಧನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲಿಲ್ಲ. ಬದಲಾಗಿ ಕ್ಷಣಕ್ಷಣಕ್ಕೂ ಆರೋಗ್ಯ ಹದಗೆಡುತ್ತಿತ್ತು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಕರೆದೊಯ್ಯುವ ಚಿಂತನೆ ಮಾಡಿ ಆಂಬ್ಯುಲೆನ್ಸ್ ಸಹ ಕರೆಸಲಾಗಿತ್ತು. ಏನೆಲ್ಲ ಪ್ರಯತ್ನ ಮಾಡಿದರೂ ವಿಧಿಯಾಟದ ಮುಂದೆ ಏನೂ ನಡೀಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಹರ್ಷಬರ್ದನ್‌ ಪ್ರಾಣಪಕ್ಷಿ ಹಾರಿಹೋಗಿದೆ.

    ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್:
    ಅಂದ್ಹಾಗೆ ಐಎಎಸ್, ಐಪಿಎಸ್ ಆಗಬೇಕೆನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಯುಪಿಎಸ್‌ಸಿ ಪಾಸಾಗೊದು ಅಷ್ಟೊಂದು ಸುಲಭವಲ್ಲ. ಅದಕ್ಕೆ ತಕ್ಕಂತೆ ಗುರಿ ಇರಬೇಕು. ಛಲ ಬೇಕು. ಹರ್ಷಬರ್ದನ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಹಗಲು ರಾತ್ರಿ ಎನ್ನದೇ ಓದಿ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ ಮಾಡಿದ್ದರು. ಮೂಲತಃ ಬಿಹಾರದ ಹರ್ಷಬರ್ದನ್‌ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 2022-23ರ ಐಪಿಎಸ್ ಬ್ಯಾಚ್‌ನಲ್ಲಿ 153ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದರು. ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು. ಮೃತರ ತಂದೆ ಕೂಡ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ನವೆಂಬರ್ 4ರಿಂದ ಪೊಲೀಸ್ ತರಬೇತಿ ಶುರುವಾಗಿ ಟ್ರೇನಿಂಗ್ ಮುಗಿಸಿ ಇವತ್ತು ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಯಮನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇತ್ತ ಮಗನ ಸಾವಿನಿಂದ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ದೊಡ್ಡ ಅಧಿಕಾರಿಯಾಗಿ ಹೆಸರು ಮಾಡಬೇಕೆನ್ನುವ ಕನಸು ಕಂಡು ಅದೇ ದಾರಿಯಲ್ಲಿದ್ದ ಹರ್ಷಬರ್ಧನ್ ದುರಂತ ಅಂತ್ಯ ಕಂಡಿದ್ದಾರೆ.

  • ಶ್ರೀನಿವಾಸಪ್ರಸಾದ್ ಬಿಜೆಪಿ ತೊರೆಯುವ ಯೋಚನೆ ಮಾಡಿರಲಿಲ್ಲ; `ಕೈ’ ವಿರುದ್ಧ ಸಿಡಿದ ಅಳಿಯ ಹರ್ಷವರ್ಧನ್!

    ಶ್ರೀನಿವಾಸಪ್ರಸಾದ್ ಬಿಜೆಪಿ ತೊರೆಯುವ ಯೋಚನೆ ಮಾಡಿರಲಿಲ್ಲ; `ಕೈ’ ವಿರುದ್ಧ ಸಿಡಿದ ಅಳಿಯ ಹರ್ಷವರ್ಧನ್!

    – ಪ್ರಸಾದ್‌ಗೆ ಮೋದಿ ಬಗ್ಗೆ ಗೌರವವಿತ್ತು ಎಂದ ಮಾಜಿ ಶಾಸಕ

    ಚಾಮರಾಜನಗರ: ಸಂಸದ ದಿವಂಗತ ವಿ. ಶ್ರೀನಿವಾಸಪ್ರಸಾದ್ (Srinivasa Prasad) ಅವರು ಬಿಜೆಪಿ ತೊರೆಯುವ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೂ ಅವರು ಬಿಜೆಪಿ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ ಅಂತ ಸುಳ್ಳು ಹಬ್ಬಿಸಿದರು ಎಂದು ಪ್ರಸಾದ್ ಅಳಿಯ, ಮಾಜಿ ಶಾಸಕ ಹರ್ಷವರ್ಧನ್ (Harshavardhan) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಾಮರಾಜನಗರದಲ್ಲಿ (Chamarajanagara) ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ಷವರ್ಧನ್, ಶ್ರೀನಿವಾಸಪ್ರಸಾದ್ ಅವರು ಬಿಜೆಪಿ (BJP) ತೊರೆಯುವ ಬಗ್ಗೆ ಯೋಚನೆಯೇ ಮಾಡಿರಲಿಲ್ಲ. ಅವರ ಭಾವನೆಗಳನ್ನು ಕೆಲವರು ಬೇರೆ ರೀತಿ ಅರ್ಥಮಾಡಿಕೊಂಡರು. ತಮಗೆ ಲಾಭ ಆಗುವ ರೀತಿಯಲ್ಲಿ ಬಳಸಿಕೊಂಡರು. ಚುನಾವಣೆ ಸಂದರ್ಭದಲ್ಲಿ ಗೊಂದಲ ಮೂಡಿಸಿದ್ರು. ಶ್ರೀನಿವಾಸಪ್ರಸಾದ್‌ಗೆ ಬಿಜೆಪಿ ಬಗ್ಗೆ ಬೇಸರವಿದೆ ಅಂತ ಸುಳ್ಳು ಹಬ್ಬಿಸಿದ್ರು ಎಂದು ಕಿಡಿ ಕಾರಿದ್ದಾರೆ.

    ಪ್ರಸಾದ್ ಅವರಿಗೆ ಬೇಸರ ಇದ್ದಿದ್ದರೆ, ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದರು. ಆದ್ರೆ ಅವರಿಗೆ ಆ ಯೋಚನೆ ಬಂದಿಲ್ಲ. ಏಕೆಂದರೆ ಪ್ರಸಾದ್ ಅವರಿಗೆ ಮೋದಿ ಅವರ ಬಗ್ಗೆ ಅಪಾರ ಗೌರವ ಇತ್ತು. ಅಂಬೇಡ್ಕರ್ ಅವರ 5 ಪುಣ್ಯ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಕ್ಕೆ ಮೋದಿ ಬಗ್ಗೆ ಅವರಿಗೆ ಹೆಮ್ಮೆ ಇತ್ತು. ಕಾಂಗ್ರೆಸ್ ಮಾಡದ ಕೆಲಸವನ್ನು ಮಾಡಿ ತೋರಿಸಿದೆ ಅಂತಾ ಬಿಜೆಪಿಯನ್ನು ತುಂಬಾ ಹಚ್ಚಿಕೊಂಡಿದ್ದರು ಎಂದು ನುಡಿದಿದ್ದಾರೆ.

    ಕೆಲವರು ಪ್ರಸಾದ್ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಸಿದ್ದರಾಮಯ್ಯ (Siddaramaiah) ಅವರು ಪ್ರಸಾದ್ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಅಂತ ಹೇಳಿದ್ದರು. ತಮ್ಮ ಸಚಿವ ಸಂಪುಟದಿಂದ ಶ್ರೀನಿವಾಸಪ್ರಸಾದ್‌ರನ್ನ ತೆಗೆದಾಗ ಏನಾಗಿತ್ತು? ಆಗ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಸಿದ್ದರಾಮಯ್ಯಗೆ ತಿಳಿದಿರಲಿಲ್ಲವೇ? ಸಂದರ್ಭ ಬರಲಿ, ಇದಕ್ಕೆಲ್ಲ ಉತ್ತರಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ

    ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ

    ಬೆಂಗಳೂರು: ಸ್ಯಾಂಡಲ್‍ವುಡ್ ನಾಯಕ ನಟ, ನಿರ್ದೇಶಕರೊಬ್ಬರ ವಿರುದ್ಧ ಅತ್ಯಾಚಾರ ಪ್ರಕರಣವೊಂದು ದಾಖಲಾಗಿದೆ. ಇನ್ನೊಬ್ಬಳ ಬಾಳಿನಲ್ಲಿ ಆಕ್ಷನ್ ಕಟ್ ಹೇಳಿದ ಸೆಕ್ಸ್ ಸ್ಕ್ಯಾಂಡಲ್ ಸ್ಟೋರಿ ಇದಾಗಿದೆ.

    ವಿಷನ್ 2023 ಚಿತ್ರದ ನಿರ್ದೇಶಕ ಮತ್ತು ನಾಯಕ ನಟನಾಗಿರುವ ಹರ್ಷವರ್ಧನ್ ವಿರುದ್ಧ ಈ ಆರೋಪ ಕೇಳಿಬಂದಿದೆ. ನೀಲಿ ಚಿತ್ರ ತೋರಿಸಿ ಸಹ ನಟಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಬೈಕ್ ಅಪಘಾತ – ಟಿಎಂಸಿ ನಾಯಕ ಮದನ್ ಮಿತ್ರಾಗೆ ಗಾಯ

    ಮದುವೆಯಾಗುವುದಾಗಿ ನಂಬಿಸಿ ಹರ್ಷವರ್ಧನ್, 8 ತಿಂಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಹ ನಟಿ ದೂರು ನೀಡಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಇದೀಗ ಹರ್ಷವರ್ಧನ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ. ಅಲ್ಲದೆ ನ್ಯಾಯಾಂಗ ಬಂಧನಕ್ಕೆ ಕಳುಹಿದ್ದಾರೆ.

    ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಎಂಗೆ ಮುಖ ತೋರಿಸಲು ಆಗುತ್ತಿಲ್ಲ: ಶಾಸಕ ಹರ್ಷವರ್ಧನ್

    ಸಿಎಂಗೆ ಮುಖ ತೋರಿಸಲು ಆಗುತ್ತಿಲ್ಲ: ಶಾಸಕ ಹರ್ಷವರ್ಧನ್

    ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅವರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಶಾಸಕ ಹರ್ಷವರ್ಧನ್ ಬಿಜೆಪಿ ತೊರೆಯುತ್ತಿದ್ದಾರೆ ಎಂಬ ಊಹಾಪೋಹಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಪಕ್ಷೀಯರ ವಿರುದ್ಧ ಕೂಡ ಹರಿಹಾಯ್ದರು. ಬಿಜೆಪಿ ಬಿಡುವ ಯಾವುದೇ ಪ್ರಶ್ನೆ ನಮ್ಮ ಮುಂದೆ ಇಲ್ಲ. ನಾನು ಕಾಂಗ್ರೆಸ್ ನಾಯಕರನ್ನೆ ಬಿಜೆಪಿಗೆ ಕರೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕುರ್ಚಿಗಾಗಿ ಹಗಲುಗನಸು ಕಾಣ್ತಿದ್ದಾರೆ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ: ಶ್ರೀರಾಮುಲು

    ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಹರ್ಷವರ್ಧನ್ ಬಿಜೆಪಿ ತೊರೆಯುವ ಮುನ್ಸೂಚನೆ ಇದೆ ಎಂದು ಮಾಧ್ಯಮಗಳು ಬಿಂಬಿಸಿವೆ. ನನ್ನನ್ನು ಯಾವುದೇ ಮಾಧ್ಯಮದವರು ದೂರವಾಣಿ ಕರೆ ಮಾಡಿಯೂ ಸಹ ಈ ವಿಚಾರವಾಗಿ ಪ್ರಶ್ನಿಸಿಲ್ಲ. ಈ ಸುದ್ದಿ ನೋಡಿ ಸಿಎಂ ನನ್ನನ್ನು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಸಿಎಂಗೆ ಮುಖ ತೋರಿಸಲು ಆಗುತ್ತಿಲ್ಲ ಎಂದರು. ಇದನ್ನೂ ಓದಿ: ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ

    ನಮ್ಮ ಪಕ್ಷದವರೇ ನನ್ನ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳುತ್ತಿಲ್ಲ. ಪಕ್ಷದಲ್ಲಿರುವ ಕೆಲ ನನ್ನ ಹಿತಶತ್ರುಗಳೇ ಇಂತಹ ಕೆಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಅವರ ಈ ಆಟದ ಬಗ್ಗೆ ನನಗೆ ತಿಳಿದಿದೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.

  • 20 ಲಕ್ಷ ಬಿಡುಗಡೆ ಮಾಡಿ – ದೇವಸ್ಥಾನ ಮರು ನಿರ್ಮಾಣಕ್ಕೆ ಸಿಎಂಗೆ ಹರ್ಷವರ್ಧನ್ ಪತ್ರ

    20 ಲಕ್ಷ ಬಿಡುಗಡೆ ಮಾಡಿ – ದೇವಸ್ಥಾನ ಮರು ನಿರ್ಮಾಣಕ್ಕೆ ಸಿಎಂಗೆ ಹರ್ಷವರ್ಧನ್ ಪತ್ರ

    ಬೆಂಗಳೂರು: ಮಹದೇವಮ್ಮ, ಹುಚ್ಚಗಣಿ ದೇಗಲ ಮರು ನಿರ್ಮಾಣ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಂಜನಗೂಡು ಶಾಸಕ ಹರ್ಷವರ್ಧನ್ ಪತ್ರ ಬರೆದಿದ್ದಾರೆ.

    Karnataka administered 29.5 Lakh covid vaccine doses in a single day CM Bommai Thanks Modi

    ಬಿಜೆಪಿ ಸರ್ಕಾರ ದೇಗುಲ ಮರು ನಿರ್ಮಾಣಕ್ಕೆ ನಿರ್ಧಾರ ಮಾಡಿರುವ ವಿಚಾರವಾಗಿ ಮಾತನಾಡಿದ ಶಾಸಕ ಹರ್ಷವರ್ಧನ್, ಡ್ಯಾಮೇಜ್ ಕಂಟ್ರೋಲ್‍ಗಾಗಿ ದೇವಸ್ಥಾನ ಕಟ್ಟುತ್ತಿಲ್ಲ. ದೇಗುಲ ತೆರವಿನಿಂದ ಎಲ್ಲರ ಭಾವನೆಗೆ ಪೆಟ್ಟಾಗಿದೆ. ನಾನು ದೇವಸ್ಥಾನ ಮರು ನಿರ್ಮಾಣ ಮಾಡಿಕೊಡುವಂತೆ ಸಿಎಂಗೆ ಕೇಳಿಕೊಂಡಿದ್ದೇನೆ. ದೇವಸ್ಥಾನವನ್ನೂ ಸರ್ಕಾರವಾದರೂ ಕಟ್ಟಲಿ. ಪಕ್ಷವಾದರೂ ಕಟ್ಟಲಿ ನಮ್ಮ ಭಾಗದ ಜನರಿಗೆ ನೋವಾಗಿದೆ. ದೇವಸ್ಥಾನ ನಿರ್ಮಾಣಕ್ಕೆ ಜಾಗ ಹುಡುಕಲಾಗಿದೆ. ಈ ವಿಚಾರವಾಗಿ ಸಿಎಂಗೆ ಪತ್ರವನ್ನು ಬರೆದು ತಕ್ಷಣಕ್ಕೆ 20 ಲಕ್ಷ ರೂ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆ ಎಂದರು. ಇದನ್ನೂ ಓದಿ:KRS ಭರ್ತಿಯಾಗಿಲ್ಲ ಎದುರಾಗಲಿದೆ ಕುಡಿಯುವ ನೀರಿಗೆ ಹಾಹಾಕಾರ

    ಪತ್ರದಲ್ಲೇನಿದೆ..?
    ನನ್ನ ಮತಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-57ರ ಬಳಿಯಿರುವ ಮಹದೇವಮ್ಮ, ಹುಚ್ಚಗಣಿ ದೇವಸ್ಥಾನವನ್ನು ನ್ಯಾಯಲಯದ ಆದೇಶದಂತೆ ಮೈಸೂರು ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಇದರಿಂದ ನಮ್ಮ ಭಾಗದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ದೇವಸ್ಥಾನ ಮರು ನಿರ್ಮಾಣ ಮಾಡಲು ಜನರು ಜಾಗ ಕೊಟ್ಟಿದ್ದಾರೆ. ಈ ಕೂಡಲೇ ಮರು ನಿರ್ಮಾಣ ಕಾರ್ಯಕ್ಕೆ 20 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹರ್ಷವರ್ಧನ್ ಮನವಿ ಮಾಡಿದ್ದಾರೆ.

    ನಂಜನಗೂಡು ದೇವಸ್ಥಾನ ತೆರುವಿನ ಬಳಿಕ ರಾಜ್ಯಾದ್ಯಂತ ಜನರು ಪ್ರತಿಭಟನೆ ನಡೆಸಿದ್ದರು. ಹಿಂದೂ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದವು. ಇದನ್ನೂ ಓದಿ:ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ

  • ಧಾರ್ಮಿಕ ಕಟ್ಟಡ ತೆರವು ವಿಚಾರ, ಅಧಿಕಾರಿಗಳು ಒತ್ತಡದಲ್ಲಿ ಅಸಹಾಯಕರಾಗಿದ್ದಾರೆ: ಹರ್ಷವರ್ಧನ್

    ಧಾರ್ಮಿಕ ಕಟ್ಟಡ ತೆರವು ವಿಚಾರ, ಅಧಿಕಾರಿಗಳು ಒತ್ತಡದಲ್ಲಿ ಅಸಹಾಯಕರಾಗಿದ್ದಾರೆ: ಹರ್ಷವರ್ಧನ್

    ಮೈಸೂರು: ಧಾರ್ಮಿಕ ಕಟ್ಟಡ ತೆರವು ವಿಚಾರ, ಅಧಿಕಾರಿಗಳು ಒತ್ತಡದಲ್ಲಿ ಅಸಹಾಯಕರಾಗಿದ್ದಾರೆ ಎಂದು ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕಟ್ಟಡ ವಿಚಾರವಾಗಿ ಸಿಎಸ್ ಒತ್ತಡ ಹೇರುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಹೇಳಿರಬಹುದು. ಸುಪ್ರೀಂಕೋರ್ಟ್ ಆದೇಶ ಪಾಲನೆ ಅನಿವಾರ್ಯವಾಗಿದೆ. ನಂಜನಗೂಡು ದೇವಸ್ಥಾನ ತೆರವು ವಿಚಾರ ನನ್ನ ಗಮನಕ್ಕೆ ತಂದು ತೆರವುಗೊಳಿಸಲಾಗಿದೆ ಎಂದರು. ಇದನ್ನೂ ಓದಿ: ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ: ಲಕ್ಷ್ಮಣ್ ಸವದಿ 

    ಸಿದ್ದರಾಮಯ್ಯ ಟ್ವೀಟ್ ನನಗೆ ಬೇಸರ ತರಿಸಿದೆ. ಬಹುಶಃ ಇಂತಹ ಬೇಜವಾಬ್ದಾರಿ ಹೇಳಿಕೆ ಅವರದ್ದಾಗಿರುವುದಿಲ್ಲ. ಅವರ ಹೆಸರಲ್ಲಿ ಬೇರೆ ಯಾರೋ ಟ್ವೀಟ್ ಮಾಡಿರಬಹುದು. ಸಿಎಂ ಆಗಿದ್ದವರು ಅವರಿಗೆ ನ್ಯಾಯಾಲಯದ ಆದೇಶದ ಅರಿವಿದೆ. ಕೇವಲ ನಂಜನಗೂಡು ದೇವಸ್ಥಾನ ತೆರವು ವಿಚಾರ ಮಾತ್ರ ಹೈಲೈಟ್ ಮಾಡಲಾಗುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    ಹಿಂದೂ ದೇಗುಲಗಳ ರಕ್ಷಣೆಗೆ ಪ್ರತ್ಯೇಕ ಕಾಯ್ದೆಯ ಅವಶ್ಯಕತೆ ಇದೆ. ಬೇರೆ ಧರ್ಮಗಳಲ್ಲಿ ಪ್ರತ್ಯೇಕ ಕಾಯ್ದೆಯಿದೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಬೇಕಿದೆ. ಆಗ ಮಾತ್ರ ದೇಗುಲಗಳ ರಕ್ಷಣೆ ಸಾಧ್ಯ. ಈ ಬಗ್ಗೆ ಶಾಸಕರ ಸಭೆಯಲ್ಲಿ ನಾನು ಸಿಎಂ ಗಮನಕ್ಕೆ ತರುತ್ತೇನೆ. ನಾನು ಸಾಕಷ್ಟು ದೇಗುಲಗಳನ್ನು ಉಳಿಸಿದ್ದೇನೆ ಎಂದು ತಿಳಿಸಿದರು.

  • ಕತ್ರಿನಾ, ವಿಕ್ಕಿ ಸಂಬಂಧ ರಿವೀಲ್ ಮಾಡಿದ ಅನಿಲ್ ಕಪೂರ್ ಪುತ್ರ

    ಕತ್ರಿನಾ, ವಿಕ್ಕಿ ಸಂಬಂಧ ರಿವೀಲ್ ಮಾಡಿದ ಅನಿಲ್ ಕಪೂರ್ ಪುತ್ರ

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ಒಂದೆರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಇದೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಇದೀಗ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ನಟ ಹರ್ಷವರ್ಧನ್ ಕಪೂರ್ ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ.

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ನಟ ಅನಿಲ್ ಕಪೂರ್ ಪುತ್ರ ಹರ್ಷವರ್ಧನ್‍ರವರು, ವಿಕ್ಕಿ ಮತ್ತು ಕತ್ರಿನಾ ಒಟ್ಟಿಗೆ ಇದ್ದಾರೆ. ಅದು ನಿಜ. ಈ ವಿಚಾರವನ್ನು ಹೇಳುವ ಮೂಲಕ ನಾನು ತೊಂದರೆಗೆ ಸಿಲುಕಿಕೊಳ್ಳುತ್ತೇನೋ? ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ನಾನು 5ಜಿ ವಿರೋಧಿ ಅಲ್ಲ, ಅದರ ಸಮಸ್ಯೆಗಳನ್ನು ತಡೆಯಬೇಕು: ಜೂಹಿ ಚಾವ್ಲಾ

    ಏಪ್ರಿಲ್‍ನಲ್ಲಿ ವಿಕ್ಕಿ ಕೌಶಲ್‍ಗೆ ಕೊರೊನಾ ದೃಢಪಟ್ಟಿತ್ತು. ಈ ಕುರಿತಂತೆ ಮರು ದಿನ ಕತ್ರಿನಾ ಸೋಶಿಯಲ್ ಮೀಡಿಯಾದಲ್ಲಿ ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದರು. ಇದನ್ನು ಓದಿ:ನುಸ್ರತ್ ಜಹಾನ್ 6 ತಿಂಗಳ ಗರ್ಭಿಣಿ, ಮಗು ನನ್ನದಲ್ಲ ಎಂದ ಗಂಡ – ಬಿರುಕಿಗೆ ಕಾರಣರಾದ್ರಾ ಯಶ್?

    2018ರಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ, ವಿಕ್ಕಿ ಕೌಶಲ್ ಜೊತೆ ಸ್ಕ್ರೀನ್ ಶೇರ್ ಮಾಡುವ ಇಚ್ಛೆಯನ್ನು ಕತ್ರಿನಾ ವ್ಯಕ್ತಪಡಿಸಿದ್ದರು. ಬಳಿಕ 2019ರಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮುಂಬೈನಲ್ಲಿ ಡಿನ್ನರ್ ಡೇಟಿಂಗ್ ಎಂದು ಹೆಚ್ಚು ಕಾಲ ಕಳೆಯುತ್ತಿದ್ದರು. ಇವರಿಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  • 2021ರ ನೀಟ್ ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ

    2021ರ ನೀಟ್ ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ

    ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯಬೇಕಾಗಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET PG 2021)ಯನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ತಿಳಿಸಿದ್ದಾರೆ.

    ಈ ಹಿಂದೆ ನೀಟ್ ಪರೀಕ್ಷೆ ಏಪ್ರಿಲ್ 18 ರಂದು ನಿಗದಿಯಾಗಿತ್ತು, ಆದರೆ ಇದನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರ ನಿಗದಿಪಡಿಸಲಾಗುವುದು, ನಮ್ಮ ಯುವ ವೈದ್ಯಕೀಯ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

    ಕೊರೊನಾ ದೇಶದಲ್ಲಿ 2ನೇ ಅಲೆ ಅಪಾಯ ಸೃಷ್ಟಿಸುತ್ತೀರುವ ಹಿನ್ನೆಲೆ ಕೇಂದ್ರ ಸರ್ಕಾರ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆ ರದ್ದುಮಾಡಿ, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿತ್ತು. ಇದರ ಬೆನ್ನಲ್ಲೆ ಇದೀಗ ನೀಟ್ ಪರೀಕ್ಷೆಯನ್ನು ಕೂಡ ಮುಂದೂಡಿಕೆ ಮಾಡಿದೆ.