Tag: Harshal Patel

  • ತವರಿನಲ್ಲಿ ಮತ್ತೆ ಸೋತ ಚೆನ್ನೈ – ಸನ್‌ ರೈಸರ್ಸ್‌ಗೆ ಚೆಪಾಕ್‌ನಲ್ಲಿ ಐತಿಹಾಸಿಕ ಜಯ!

    ತವರಿನಲ್ಲಿ ಮತ್ತೆ ಸೋತ ಚೆನ್ನೈ – ಸನ್‌ ರೈಸರ್ಸ್‌ಗೆ ಚೆಪಾಕ್‌ನಲ್ಲಿ ಐತಿಹಾಸಿಕ ಜಯ!

    – ಸಿಎಸ್‌ಕೆ ಬಹುತೇಕ ಪ್ಲೇ ಆಫ್‌ನಿಂದ ಹೊರಕ್ಕೆ

    ಚೆನ್ನೈ: ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಹೀನಾಯ ಸೋಲು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬಹುತೇಕ ಈ ಆವೃತ್ತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ. ಆದ್ರೆ ಸನ್‌ ರೈಸರ್ಸ್‌ ಹೈದರಾಬಾದ್‌ ಇದೇ ಮೊದಲ ಬಾರಿಗೆ ಸಿಎಸ್‌ಕೆ ವಿರುದ್ಧ ಚೆಪಾಕ್‌ ಮೈದಾನದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 19.5 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟ್‌ ಆಯಿತು. 155 ರನ್‌ಗಳ ಸವಾಲಿನ ಮೊತ್ತ ಗುರಿ ಬೆನ್ನಟ್ಟಿದ ಸನ್‌ ರೈಸರ್ಸ್‌ ಹೈದರಾಬಾದ್‌‌ 18.4 ಓವರ್‌ಗಳಲ್ಲೇ ಗುರಿ ಪೂರೈಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿತ ಕಂಡಿತು.

    ಸಿಎಸ್‌ಕೆ ಪರ ದೇವಾಲ್‌ ಬ್ರೇವಿಸ್‌ ಸ್ಫೋಟಕ 42 ರನ್‌, ಆಯುಷ್‌ ಮಾತ್ರೆ 30 ರನ್‌, ಜಡೇಜಾ 21 ರನ್‌, ದೀಪಕ್‌ ಹೂಡ 22 ರನ್‌ ಹೊರತುಪಡಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ನೆಲಕಚ್ಚಿದರು.

    ಹೈದರಾಬಾದ್‌ ಪರ ಹರ್ಷಲ್‌ ಪಟೇಲ್‌ ಪ್ರಮುಖ 4 ವಿಕೆಟ್‌ ಕಿತ್ತರೆ, ಪ್ಯಾಟ್ ಕಮ್ಮಿನ್ಸ್‌, ಜಯದೇವ್‌ ಉನದ್ಕಟ್‌ 2 ವಿಕೆಟ್‌ ಹಾಗೂ ಶಮಿ, ಕಮಿಂಡು ಮೆಂಡೀಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಇನ್ನೂ 155 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಬಳಿಕ ಇಶಾನ್‌ ಕಿಶನ್‌ ತಾಳ್ಮೆಯ ಆಟ, ಕೊನೆಯಲ್ಲಿ ಕಮಿಂಡು ಮೆಂಡೀಸ್‌, ನಿತೀಶ್‌ ರೆಡ್ಡಿ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನಿಂದ ತಂಡಕ್ಕೆ ಗೆಲುವು ಒಲಿದು ಬಂದಿತು.

    ಹೈದರಾಬಾದ್‌ ಪರ ಟ್ರಾವಿಸ್‌ ಹೆಡ್‌ 19ರನ್‌, ಇಶಾನ್‌ ಕಿಶನ್‌ 44 ರನ್‌, ಅನಿಕೇತ್‌ 19 ರನ್‌, ಕಮಿಂಡು ಮೆಂಡೀಸ್‌ 32 ರನ್‌, ನಿತೀಶ್‌ ರೆಡ್ಡಿ 19ರನ್‌ ಗಳಿಸಿದ್ರೆ ವೈಡ್‌, ನೋಬಾಲ್‌, ಬೈಸ್‌ನಿಂದಲೇ 15 ರನ್‌ ತಂಡಕ್ಕೆ ಸೇರ್ಪಡೆ ಆಯ್ತು.

  • 8 ಓವರ್‌ 100 ರನ್‌ – ದುಬಾರಿಯಾದ ಭುವಿ, ಹರ್ಷಲ್‌: ರೋಹಿತ್‌ ಹೇಳಿದ್ದೇನು?

    8 ಓವರ್‌ 100 ರನ್‌ – ದುಬಾರಿಯಾದ ಭುವಿ, ಹರ್ಷಲ್‌: ರೋಹಿತ್‌ ಹೇಳಿದ್ದೇನು?

    ಮೊಹಾಲಿ: ಬುಮ್ರಾ(Jasprit Bumrah) ಅನುಪಸ್ಥಿತಿ ಟೀಂ ಇಂಡಿಯಾಗೆ(Team India) ಕಾಡುತ್ತಿದ್ದು ಮತ್ತೆ ಬೌಲರ್‌ಗಳು ಕೈಕೊಟ್ಟಿದ್ದಾರೆ. ಕೊನೆಯ ಓವರ್‌ಗಳಲ್ಲಿ ರನ್‌ಗೆ ಕಡಿವಾಣ ಹಾಕದ ಕಾರಣ ಭಾರತ(India) ಮತ್ತೆ ಸೋಲನ್ನು ಅನುಭವಿಸಿದೆ.

    ಕೊನೆಯ 24 ಎಸೆತಗಳಲ್ಲಿ ಆಸ್ಟ್ರೇಲಿಯಾ(Australia) 55 ರನ್‌ ಗಳಿಸಬೇಕಿತ್ತು. 17ನೇ ಓವರ್‌ ಎಸೆದ ಭುವನೇಶ್ವರ್‌ ಕುಮಾರ್‌(Bhuvneshwar Kumar) 15 ರನ್‌ ಕೊಟ್ಟರೆ 18ನೇ ಓವರ್‌ನಲ್ಲಿ ಹರ್ಷಲ್‌ ಪಟೇಲ್‌(Harshal Patel) 22 ರನ್‌ ನೀಡಿದರು. 19ನೇ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ 16 ರನ್‌ ಹೊಡೆಸಿಕೊಂಡಿದ್ದಾರೆ.

    ತಮ್ಮ 4 ಓವರ್‌ಗಳ ಕೋಟಾದಲ್ಲಿ ಭುವನೇಶ್ವರ್‌ ಕುಮಾರ್‌ 52 ರನ್‌, ಹರ್ಷಲ್‌ ಪಟೇಲ್‌ 49 ರನ್‌ ನೀಡಿದ್ದಾರೆ. ಇವರಿಬ್ಬರೇ 101 ರನ್‌ ನೀಡಿದ್ದು ಟೀ ಇಂಡಿಯಾಗೆ ಮುಳುವಾಯಿತು. ಭುವನೇಶ್ವರ್‌ ಕುಮಾರ್‌ ಏಷ್ಯಾ ಕಪ್‌ನಲ್ಲೂ 19ನೇ ಓವರ್‌ನಲ್ಲಿ ದುಬಾರಿ ರನ್‌ ನೀಡಿದ್ದರು. ಸೂಪರ್‌ ಸಿಕ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ 19 ರನ್‌ ನೀಡಿದ್ದರೆ ಶ್ರೀಲಂಕಾದ ವಿರುದ್ಧ 17 ರನ್‌ ಹೊಡೆಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ 16 ರನ್‌ ಹೊಡೆಸಿಕೊಂಡಿದ್ದಾರೆ. ಇಬ್ಬರು ಒಂದು ವಿಕೆಟ್‌ ಪಡೆಯದೇ ಇಷ್ಟು ರನ್‌ ಚಚ್ಚಿಸಿಕೊಂಡಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

    ಪದೇ ಪದೇ ಭುವನೇಶ್ವರ್‌ ಕುಮಾರ್‌ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಲಾಗುತ್ತಿದೆ. ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅರ್ಶ್‌ದೀಪ್‌ ಅವರನ್ನು ಕೈಬಿಟ್ಟಿದ್ದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಪಾಂಡ್ಯ, ಕೆ.ಎಲ್ ರಾಹುಲ್ ಕ್ಲಾಸಿಕ್ ಬ್ಯಾಟಿಂಗ್ – ಅಕ್ಷರ್ ಆಟ ವ್ಯರ್ಥ, ಆಸೀಸ್‌ಗೆ 4 ವಿಕೆಟ್‌ಗಳ ಜಯ

    ಬೌಲರ್‌ಗಳ ಬಗ್ಗೆ ನಾಯಕ ರೋಹಿತ್‌ ಶರ್ಮಾ(Rohith Sharma) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. 200 ರನ್‌ ಉತ್ತಮ ಮೊತ್ತವಾಗಿದ್ದು ನಾವು ಡಿಫೆಂಡ್‌ ಮಾಡಬಹುದಿತ್ತು. ನಮ್ಮ ಬ್ಯಾಟರ್‌ಗಳ ಪ್ರಯತ್ನ ಉತ್ತಮವಾಗಿತ್ತು. ಕೊನೆಯ 4 ಓವರ್‌ಗಳಲ್ಲಿ 60 ರನ್‌ ಬಂತು. ಅವರ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

    ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿದರೆ ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 211 ರನ್‌ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು. 30 ಎಸೆತಗಳಲ್ಲಿ61 ರನ್‌(8 ಬೌಂಡರಿ, 4 ಸಿಕ್ಸರ್‌) ಚಚ್ಚಿದ ಕ್ಯಾಮರೂನ್‌ ಗ್ರೀನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    Live Tv
    [brid partner=56869869 player=32851 video=960834 autoplay=true]

  • T20 ವಿಶ್ವಕಪ್ ಆಡಲು ಬುಮ್ರಾ, ಹರ್ಷಲ್ ಪಟೇಲ್ ಫಿಟ್ – ಜಡೇಜಾ ಆಡಲ್ಲ?

    T20 ವಿಶ್ವಕಪ್ ಆಡಲು ಬುಮ್ರಾ, ಹರ್ಷಲ್ ಪಟೇಲ್ ಫಿಟ್ – ಜಡೇಜಾ ಆಡಲ್ಲ?

    ಮುಂಬೈ: ಗಾಯಾಳುವಾಗಿ ಏಷ್ಯಾಕಪ್‍ನಿಂದ (Asia Cup 2022) ಹೊರಗುಳಿದಿದ್ದ ಟೀಂ ಇಂಡಿಯಾದ ವೇಗಿಗಳಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಹರ್ಷಲ್ ಪಟೇಲ್ (Harshal Patel)  ಟಿ20 ವಿಶ್ವಕಪ್‍ಗೆ (T20 World) ಆಯ್ಕೆ ಆಗುವುದು ಖಚಿಗೊಂಡಿದ್ದು, ಆಲ್‍ರೌಂಡರ್ ರವೀಂದ್ರ ಜಡೇಜಾ ಬಹುತೇಕ ಹೊರಗುಳಿಯುವ ಸಾಧ್ಯತೆ ಬಗ್ಗೆ ವರದಿಯಾಗಿದೆ.

    ಮೂಲಗಳ ಪ್ರಕಾರ ಈಗಾಗಲೇ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್‍ನೆಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಟಿ20 ವಿಶ್ವಕಪ್ ಆಯ್ಕೆಗೆ ಲಭ್ಯರಾಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ವೇಗಿಗಳು ಏಷ್ಯಾಕಪ್‍ಗೂ ಮುನ್ನ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದರು. ಹರ್ಷಲ್ ಪಟೇಲ್ ಕೈ ಸೆಳೆತಕ್ಕೊಳಗಾಗಿ ಹೊರಗುಳಿದರೆ, ಬುಮ್ರಾ ಬೆನ್ನುನೋವಿನಿಂದಾಗಿ ಹೊರಗುಳಿದಿದ್ದರು. ಇದನ್ನೂ ಓದಿ: ಸೆ.20ರಿಂದ ಭಾರತ-ಆಸಿಸ್ ಟಿ20 ಸರಣಿ – ಬುಮ್ರಾ ಮೇಲೆ ಬೆಂಕಿ ಕಣ್ಣು

    ಆ ಬಳಿಕ ಬುಮ್ರಾ ಮತ್ತು ಹರ್ಷಲ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy in Bengaluru) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಚೇತರಿಕೆ ಕಂಡಿದ್ದಾರೆ. ಈ ಮೂಲಕ ಮತ್ತೆ ತಂಡಕ್ಕೆ ವಾಪಾಸ್ ಆಗಲು ಸಿದ್ಧತೆ ಆರಂಭಿಸಿದ್ದಾರೆ. ಜೊತೆಗೆ ಮುಂದಿನ ವಾರದೊಳಗಾಗಿ ಬಿಸಿಸಿಐ (BCCI) ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾವನ್ನು ಆಯ್ಕೆಮಾಡುವ ಸಾಧ್ಯತೆ ಇದೆ.

    ಏಷ್ಯಾಕಪ್‍ನಲ್ಲಿ ಬುಮ್ರಾ ಅಲಭ್ಯತೆ ಕಾಡಿತು. ಜೊತೆಗೆ ಆಲ್‍ರೌಂಡರ್ ರವೀಂದ್ರ ಜಡೇಜಾ (Ravindra Jadeja) ಗಾಯಗೊಂಡು ತಂಡದಿಂದ ಹೊರುಗುಳಿದಿದ್ದು, ಹಿನ್ನಡೆ ತಂದಿತ್ತು. ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಡೇಜಾ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ

    ಬುಮ್ರಾ, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಶಮಿ ಮತ್ತೆ ತಂಡಕ್ಕೆ ವಾಪಸ್ ಆಗುವುದು ಬಹುತೇಕ ಖಚಿಗೊಂಡಿದ್ದು, ಆವೇಶ್ ಖಾನ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಏಷ್ಯಾಕಪ್‍ನಲ್ಲಿ ಶಮಿಯನ್ನು ಆಯ್ಕೆ ಮಾಡದೇ ಇದ್ದಿದ್ದಕ್ಕೆ ಟೀಕೆಗಳು ಕೇಳಿಬಂದಿತ್ತು. ಇದೀಗ ಶಮಿ ಟಿ20 ವಿಶ್ವಕಪ್ ಆಡುವುದು ಬಹುತೇಕ ಕನ್ಫರ್ಮ್ ಅಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಕ್ಸ್ ಸಿಡಿಸಿದಕ್ಕೆ ಕೋಪ – ಕ್ರೀಡಾ ಸ್ಫೂರ್ತಿ ಮರೆತ ಹರ್ಷಲ್ ಪಟೇಲ್

    ಸಿಕ್ಸ್ ಸಿಡಿಸಿದಕ್ಕೆ ಕೋಪ – ಕ್ರೀಡಾ ಸ್ಫೂರ್ತಿ ಮರೆತ ಹರ್ಷಲ್ ಪಟೇಲ್

    ಪುಣೆ: ರಾಜಸ್ಥಾನ ರಾಯಲ್ಸ್ ಮತ್ತು ಆರ್​ಸಿಬಿ ನಡುವಿನ ಪಂದ್ಯದ ಬಳಿಕ ರಾಜಸ್ಥಾನ ತಂಡದ ಆಲ್‍ರೌಂಡರ್ ರಿಯಾನ್ ಪರಾಗ್‍ಗೆ ಆರ್​ಸಿಬಿ ಬೌಲರ್ ಹರ್ಷಲ್ ಪಟೇಲ್ ಶೇಕ್ ಹ್ಯಾಂಡ್ ಮಾಡದೆ ಕ್ರೀಡಾ ಸ್ಫೂರ್ತಿ ಮರೆತ ಪ್ರಸಂಗ ನಡೆದಿದೆ.

    ನಿನ್ನೆ ನಡೆದ ಆರ್​ಸಿಬಿ ಮತ್ತು ರಾಜಸ್ಥಾನ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರಾಜಸ್ಥಾನ ತಂಡಕ್ಕೆ ಆಲ್‍ರೌಂಡರ್ ರಿಯಾನ್ ಪರಾಗ್ ನೆರವಾದರು. ತಂಡದ ರನ್ ಹಿಗ್ಗಿಸಲು ಕೊನೆಯ ಓವರ್‌ನಲ್ಲಿ ಸ್ಫೋಟಕ ಆಟಕ್ಕೆ ಮುಂದಾದ ಪರಾಗ್, ಹರ್ಷಲ್ ಪಟೇಲ್ ಎಸೆದ ಕೊನೆಯ ಓವರ್‌ನಲ್ಲಿ 1 ಫೋರ್ ಮತ್ತು 2 ಸಿಕ್ಸ್ ಚಚ್ಚಿದರು. ಇದರಿಂದ ಕೋಪಗೊಂಡ ಹರ್ಷಲ್ ಪಟೇಲ್ ಡಗೌಟ್ ಕಡೆಗೆ ಸಾಗುತ್ತಿದ್ದ ಪರಾಗ್‍ರನ್ನು ಕೆಣಕಿದರು. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: ಕೊನೆಯಲ್ಲಿ ಪರಾಗ್ ಸ್ಫೋಟಕ ಆಟ – ಆರ್‌ಆರ್‌ಗೆ 29 ರನ್‍ಗಳ ಜಯ, ಮತ್ತೆ ಕೊಹ್ಲಿ ವಿಫಲ

    ಆ ಬಳಿಕ ಹಿರಿಯ ಆಟಗಾರರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿತು. ಆ ನಂತರ ರಾಜಸ್ಥಾನ ತಂಡ ಆರ್​ಸಿಬಿ ವಿರುದ್ಧ ಗೆದ್ದ ಬಳಿಕ ಆಟಗಾರರು ಪರಸ್ಪರ ಶೇಕ್ ಹ್ಯಾಂಡ್ ಮಾಡುತ್ತಿದ್ದರು. ಪರಾಗ್, ಹರ್ಷಲ್ ಪಟೇಲ್‍ಗೆ ಶೇಕ್ ಹ್ಯಾಂಡ್ ಮಾಡಲು ಮುಂದಾದಾಗ ಪಟೇಲ್ ನಿರಾಕರಿಸಿ ಕಿರಿಯ ಆಟಗಾರನ ಮುಂದೆ ಕ್ರೀಡಾ ಸ್ಫೂರ್ತಿ ಮರೆತರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಹರ್ಷಲ್ ಪಟೇಲ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

    ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆರ್​ಸಿಬಿ ತಂಡ ರಾಜಸ್ಥಾನ ನೀಡಿದ 145 ರನ್‍ಗಳ ಅಲ್ಪಮೊತ್ತವನ್ನು ಚೇಸ್ ಮಾಡಲಾಗದೇ 29 ರನ್‍ಗಳ ಅಂತರದಿಂದ ಸೋಲು ಕಂಡಿತು. ಇತ್ತ ರಾಜಸ್ಥಾನ ತಂಡ ಆರ್​ಸಿಬಿ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

  • ಮುಂಬೈ ವಿರುದ್ಧದ ಗೆಲುವಿನ ಬಳಿಕ ಆರ್​ಸಿಬಿಗೆ ಶಾಕ್ – ಬಯೋ ಬಬಲ್ ತೊರೆದ ಹರ್ಷಲ್ ಪಟೇಲ್

    ಮುಂಬೈ ವಿರುದ್ಧದ ಗೆಲುವಿನ ಬಳಿಕ ಆರ್​ಸಿಬಿಗೆ ಶಾಕ್ – ಬಯೋ ಬಬಲ್ ತೊರೆದ ಹರ್ಷಲ್ ಪಟೇಲ್

    ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧದ ಪಂದ್ಯ ಗೆದ್ದ ಬಳಿಕ ಆರ್​ಸಿಬಿ ತಂಡವನ್ನು ಬಿಟ್ಟು ಹೊರನಡೆದಿದ್ದಾರೆ.

    ಹರ್ಷಲ್ ಪಟೇಲ್ ಅವರ ತಂಗಿ ಮರಣ ಹೊಂದಿದ ಪರಿಣಾಮ ತಂಡದ ಬಯೋ ಬಬಲ್ ತೊರೆದು ಮನೆಗೆ ತೆರಳಿದ್ದಾರೆ ಎಂದು ಆರ್​ಸಿಬಿ ಮೂಲಗಳಿಂದ ವರದಿಯಾಗಿದೆ. ಹರ್ಷಲ್ ಪಟೇಲ್ ಮುಂಬೈ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಕಿತ್ತು 7 ವಿಕೆಟ್‍ಗಳ ಅಂತರದ ಜಯದಲ್ಲಿ ಆರ್​ಸಿಬಿ ಪರ ಮಹತ್ವದ ಪಾತ್ರ ವಹಿಸಿದ್ದರು. ಇದನ್ನೂ ಓದಿ: ಧೋನಿ ಬಳಿಕ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶರ್ ಎನಿಸಿಕೊಂಡ ತೆವಾಟಿಯಾ

    ಹರ್ಷಲ್ ಪಟೇಲ್ 14ನೇ ಆವೃತ್ತಿಯ ಐಪಿಎಲ್‍ನ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದು, ಇದೀಗ 15ನೇ ಆವೃತ್ತಿ ಐಪಿಎಲ್‍ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಬಯೋ ಬಬಲ್ ತೊರೆದಿರುವ ಹರ್ಷಲ್ ಪಟೇಲ್ ಏಪ್ರಿಲ್ 12ರ ಬಳಿಕ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ರಾವತ್, ಕೊಹ್ಲಿ ಘರ್ಜನೆಗೆ ಮಂಕಾದ ಮುಂಬೈ – ಆರ್​ಸಿಬಿಗೆ 7 ವಿಕೆಟ್‌ಗಳ ಅಂತರದ ಜಯ

    ಆರ್​ಸಿಬಿ ತಂಡ ಏಪ್ರಿಲ್ 12 ರಂದು ಚೆನ್ನೈ ವಿರುದ್ಧ ಆಡಲಿದೆ. ಈ ಪಂದ್ಯದ ವೇಳೆ ಹರ್ಷಲ್ ಪಟೇಲ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ಆರ್​ಸಿಬಿ ಮೂಲಗಳಿಂದ ವರದಿಯಾಗಿದೆ.

     

  • ಧೋನಿ ನನ್ನ ಫೇವರಿಟ್ ಕ್ಯಾಪ್ಟನ್ – CSK ಪರ ಆಡಲು ಬಯಸುತ್ತೇನೆಂದ ಮಾಜಿ RCB ಆಟಗಾರ

    ಧೋನಿ ನನ್ನ ಫೇವರಿಟ್ ಕ್ಯಾಪ್ಟನ್ – CSK ಪರ ಆಡಲು ಬಯಸುತ್ತೇನೆಂದ ಮಾಜಿ RCB ಆಟಗಾರ

    ಮುಂಬೈ: ಐಪಿಎಲ್ ಮೆಗಾ ಹರಾಜಿಗೆ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಆರ್​ಸಿಬಿ ತಂಡದ ಮಾಜಿ ಆಟಗಾರ ಹರ್ಷಲ್ ಪಟೇಲ್, ಧೋನಿ ನನ್ನ ಫೇವರಿಟ್ ಕ್ಯಾಪ್ಟನ್ ನಾನು ಸಿಎಸ್‍ಕೆ ಪರ ಆಡಲು ಬಯಸುತ್ತೇನೆ ಎಂದಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ವಿಶ್ವಕಂಡ ಶ್ರೇಷ್ಠ ನಾಯಕರಲ್ಲಿ ಧೋನಿ ಮೊದಲಿಗರು. ಐಪಿಎಲ್‍ನಲ್ಲಿ ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಬಯಕೆ ಇದೆ. ಅವರಿಂದ ಕಲಿಯುವಂತಹ ಹಲವು ವಿಷಯಗಳು ಇನ್ನೂ ಬಾಕಿ ಇದೆ. ಮುಂದೆ ಅವಕಾಶ ಸಿಕ್ಕರೆ ಬಳಸಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ರಾಹುಲ್‌ಗೆ ಕ್ಯಾಪ್ಟನ್‌ ಪಟ್ಟ ಕಟ್ಟಿದ ಲಕ್ನೋ

    ಹರ್ಷಲ್ ಪಟೇಲ್ 2022ರ ಐಪಿಎಲ್ ಹರಾಜು ಪಟ್ಟಿಯಲ್ಲಿ ಮೂಲಬೆಲೆ 2 ಕೋಟಿಗೆ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಬಾರಿಯ ಐಪಿಎಲ್‍ನಲ್ಲಿ ಪಟೇಲ್ ಆರ್​ಸಿಬಿ ಪರ ಭರ್ಜರಿ ಪ್ರದರ್ಶನ ನೀಡಿದರಲ್ಲದೆ, 14ನೇ ಆವೃತ್ತಿ ಐಪಿಎಲ್‍ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ಪಡೆದಿದ್ದರು. ಆದರೆ ಆರ್​ಸಿಬಿ ಮಾತ್ರ ಪಟೇಲ್‍ರನ್ನು ರಿಟೈನ್ ಮಾಡಿಕೊಳ್ಳದೇ ಹರಾಜಿಗೆ ಬಿಟ್ಟು ಕೊಟ್ಟಿದೆ.  ಇದನ್ನೂ ಓದಿ: ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆಹಾಕಿದ ಪಾಂಡ್ಯ

    ಪಟೇಲ್ ಈ ಬಾರಿಯ ಹರಾಜಿನಲ್ಲಿ ಮೂಲಬೆಲೆಗಿಂತ ಹೆಚ್ಚಿನ ಬೆಲೆಗೆ ಹರಾಜಾಗುವ ಸಾಧ್ಯತೆ ಇದೆ. ಈಗಾಗಲೇ ಹರ್ಷಲ್ ಪಟೇಲ್ ಟೀಂ ಇಂಡಿಯಾದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್

  • ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ದುಬೈ: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಅನ್​ಕ್ಯಾಪ್ಡ್​ ಪ್ಲೇಯರ್ ಆಗಿ ನೂತನ ದಾಖಲೆಯೊಂದನ್ನು ಮಾಡಿದ್ದಾರೆ.

    14ನೇ ಆವೃತ್ತಿಯ ಐಪಿಎಲ್‍ನಲ್ಲಿ ಹರ್ಷಲ್ ಪಟೇಲ್ ಪ್ರತಿ ಪಂದ್ಯದಲ್ಲೂ ಕೂಡ ಉತ್ತಮವಾದ ದಾಳಿ ಸಂಘಟಿಸಿ ವಿಕೆಟ್ ಬೇಟೆಯಾಡುತ್ತಿದ್ದು, ಈ ಮೂಲಕ ಆರ್​ಸಿಬಿ ಪಾಳಯದಲ್ಲಿ ಹರ್ಷ ತಂದಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಒಂದು ಬಾರಿ ಹ್ಯಾಟ್ರಿಕ್ ಸಹಿತ 11 ಪಂದ್ಯದಲ್ಲಿ 26 ವಿಕೆಟ್ ಪಡೆದು ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಅನ್​ಕ್ಯಾಪ್ಡ್​ ಪ್ಲೇಯರ್( 3 ಮಾದರಿಯ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರ) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.  ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?

    ಈ ಹಿಂದೆ 2015ರಲ್ಲಿ ತಮ್ಮದೆ ತಂಡದ ಆಟಗಾರ ಯಜುವೇಂದ್ರ ಚಹಲ್ ಸೀಸನ್ ಒಂದರಲ್ಲಿ 25 ವಿಕೆಟ್ ಕಿತ್ತು ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಹರ್ಷಲ್ ಪಟೇಲ್ ಮುರಿದಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಯುವ ಆಟಗಾರರ ದರ್ಬಾರ್

    ಐಪಿಎಲ್‍ನಲ್ಲಿ ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಸಿಎಸ್‍ಕೆ ತಂಡದ ಆಟಗಾರ ಡ್ವೇನ್ ಬ್ರಾವೋ ಹೆಸರಲ್ಲಿದೆ. ಬ್ರಾವೋ 2013ರ ಐಪಿಎಲ್‍ನಲ್ಲಿ 32 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯಲು ಪಟೇಲ್‍ಗೆ ಇನ್ನು 6 ವಿಕೆಟ್‍ಗಳ ಅವಶ್ಯಕತೆ ಇದೆ. ಈ ರೀತಿ ವಿಕೆಟ್ ಬೇಟೆಯಾಡುತ್ತ ಹೋದರೆ ಹರ್ಷಲ್ ಪಟೇಲ್ ಈ ದಾಖಲೆ ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

  • ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

    ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ರೋಚಕ ಜಯ

    – 5 ವಿಕೆಟ್ ಕಿತ್ತು ಹರ್ಷಲ್ ಪಟೇಲ್ ಇತಿಹಾಸ ಸೃಷ್ಟಿ

    ಚೆನ್ನೈ: ಹರ್ಷಲ್ ಪಟೇಲ್ ಭರ್ಜರಿ ಬೌಲಿಂಗ್,  ಎಬಿಡಿ ವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಮುಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಬೆಂಗಳೂರು ತಂಡ ಜಯವನ್ನು ಸಾಧಿಸಿ ಶುಭಾರಂಭ ಮಾಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು 20ನೇ ಓವರಿನ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಪಂದ್ಯವನ್ನು 2 ವಿಕೆಟ್‍ಗಳಿಂದ ಗೆದ್ದುಕೊಂಡಿತು.

    ಗೆದ್ದದ್ದು ಹೇಗೆ?
    14 ಓವರ್ ಅಂತ್ಯಕ್ಕೆ ಜಯಗಳಿಸಲು  36 ಎಸೆತಕ್ಕೆ 57 ರನ್ ಬೇಕಿತ್ತು. 18ನೇ ಓವರ್‌ನಲ್ಲಿ 1 ಸಿಕ್ಸ್, 1 ಬೌಂಡರಿ ಸೇರಿದಂತೆ 15 ರನ್ ಬಂದ ಕಾರಣ ಕೊನೆಯ 12 ಎಸೆತದಲ್ಲಿ 19 ರನ್ ಬೇಕಿತ್ತು. ಬುಮ್ರಾ ಎಸೆದ 19ನೇ ಓವರ್‌ನಲ್ಲಿ ಎಬಿಡಿ ವಿಲಿಯರ್ಸ್ 2 ಬೌಂಡರಿ ಹೊಡೆದ ಪರಿಣಾಮ 12 ರನ್ ಬಂತು. ಕೊನೆಯ 6 ಬಾಲಿಗೆ 7 ರನ್ ಬೇಕಿತ್ತು. ಈ ವೇಳೆ ಜನ್‍ಸೇನ್ ಎಸೆದ ಮೊದಲ ಮೂರು ಎಸೆತಕ್ಕೆ 1, 2, 1 ರನ್ ಬಂತು. 4ನೇ ಎಸೆತದಲ್ಲಿ ಎಬಿಡಿ 2 ರನ್ ಓಡಲು ಹೋಗಿ ರನೌಟ್ ಆದರು. ಕೊನೆಯ 2 ಎಸೆತದಲ್ಲಿ 2 ರನ್ ಬೇಕಿತ್ತು. 5ನೇ ಎಸೆತದಲ್ಲಿ ಲೆಗ್‍ಬೈ ಮೂಲಕ 1 ರನ್ ಬಂದರೆ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಶಾರ್ಟ್ ಫೈನ್ ಕಡೆಗೆ ಬಾಲ್ ತಳ್ಳಿ 1 ರನ್ ಗಳಿಸಿ ಆರ್‌ಸಿಬಿ  ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಎಬಿಡಿ ವಿಲಿಯರ್ಸ್ 48 ರನ್(27 ಎಸೆತ, 4 ಬೌಂಡರಿ, 2 ಸಿಕ್ಸರ್), ಗ್ಲೇನ್ ಮ್ಯಾಕ್ಸ್‌ವೆಲ್ 39 ರನ್(28 ಎಸೆತ, 3 ಬೌಂಡರಿ, 2 ಸಿಕ್ಸರ್) ನಾಯಕ ವಿರಾಟ್ ಕೊಹ್ಲಿ 33 ರನ್(29 ಎಸೆತ, 4 ಬೌಂಡರಿ) ಹೊಡೆದು ಔಟಾದರು.

    ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಕ್ರಿಸ್ ಲೀನ್ ಉತ್ತಮ ಆರಂಭ ಒದಗಿಸಿದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಕ್ರಿಸ್ ಲೀನ್ 49 ರನ್(35 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ 1 ರನ್ ನಿಂದ ಅರ್ಧಶತಕ ವಂಚಿತರಾಗಿ ಔಟ್ ಆದರು.

    ಈ ಮೊದಲೇ ರೋಹಿತ್ ಶರ್ಮಾ 19 ರನ್(15 ಎಸೆತ, 1 ಬೌಂಡರಿ ಮತ್ತು 1 ಸಿಕ್ಸರ್) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ನಡೆಸಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 31 ರನ್‍ಗೆ ಔಟಾದರು.

    ಬಳಿಕ ಬಂದ ಯಾವ ಬ್ಯಾಟ್ಸ್‍ಮ್ಯಾನ್ ಕೂಡ ಹೆಚ್ಚುಹೊತ್ತು ಕ್ರಿಸ್‍ನಲ್ಲಿ ಅಬ್ಬರಿಸಲಿಲ್ಲ. ಇಶಾನ್ ಕಿಶನ್ ಸ್ವಲ್ಪ ಹೊತ್ತು ಬ್ಯಾಟಿಂಗ್ ಪರಾಕ್ರಮ ತೋರಿಸಿದರು ಕೂಡ 28 ರನ್(19 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಆಡುತ್ತಿದ್ದಾಗ ಹರ್ಷಲ್ ಪಟೇಲ್ ಬೌಲಿಂಗ್‍ನಲ್ಲಿ ಎಲ್‍ಬಿ ಬಲೆಗೆ ಬಿದ್ದರು.

    ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಹಾರ್ದಿಕ್ ಪಾಂಡ್ಯ 13ರನ್, ಕೀರನ್ ಪೋಲಾರ್ಡ್ 7 ರನ್, ಕೃಣಲ್ ಪಾಂಡ್ಯ 7 ರನ್ ಮತ್ತು ಮಾರ್ಕೊ ಜಾನ್ಸೆನ್ ಮತ್ತು ರಾಹುಲ್ ಚಹಾರ್ ಕ್ರಮವಾಗಿ ಸೊನ್ನೆ ಸುತ್ತಿದರು.

    ಆರ್‍ಸಿಬಿ ಪರ ಉತ್ತಮ ದಾಳಿ ಸಂಘಟಿಸಿದ ಹರ್ಷಲ್ ಪಟೇಲ್ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರೆ, ಕೈಲ್ ಜಾಮೀಸನ್ ಮತ್ತು ವಾಷಿಂಗ್ಟ್‍ನ್ ಸುಂದರ್ ತಲಾ ಒಂದು ವಿಕೆಟ್ ಕಿತ್ತರು.

  • ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಹರ್ಷಲ್ ಪಟೇಲ್

    ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಹರ್ಷಲ್ ಪಟೇಲ್

    ಚೆನ್ನೈ: 2021ರ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ.

    5 ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ತಂಡದ ವಿರುದ್ಧ ಇಲ್ಲಿಯಯವರೆಗೆ ಯಾರೂ 5 ವಿಕೆಟ್ ಪಡೆದಿರಲಿಲ್ಲ. ಆದರೆ ಈ ಬಾರಿ ಹರ್ಷಲ್ ಪಟೇಲ್ 5 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಹರ್ಯಾಣದ ಮಧ್ಯಮ ವೇಗಿ ಬೌಲರ್ ಹರ್ಷಲ್ ಪಟೇಲ್ ಅವರನ್ನು ಕೊಹ್ಲಿ 5ನೇಯವರಾಗಿ ಬೌಲಿಂಗ್ ಇಳಿಸಿದ್ದರು. ಹರ್ಷಲ್ ಪಟೇಲ್ ಬೌಲಿಂಗ್‍ಗೆ ಇಳಿದದ್ದೇ ತಡ 105 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಮುಂಬೈ ತಂಡದ ವಿಕೆಟ್ ದಿಢೀರ್ ಪತನಗೊಳ್ಳಲು ಆರಂಭವಾಯಿತು.

    ಇಶನ್ ಕಿಶಾನ್ ಅವರನ್ನು ಎಲ್‍ಬಿಗೆ ಕೆಡವಿ ನಂತರ ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೋ ಜನ್‍ಸೆನ್ ಅವರನ್ನು ಔಟ್ ಮಾಡಿ ರನ್‍ಗೆ ಕಡಿವಾಣ ಹಾಕಿದರು. ಅಂತಿಮವಾಗಿ ಹರ್ಷಲ್ ಪಟೇಲ್ 4 ಓವರ್ ಎಸೆದು 27 ರನ್ ನೀಡಿ 5 ವಿಕೆಟ್ ಪಡೆದರು.

    ಈ ಸಂಭ್ರಮವನ್ನು ಹಂಚಿಕೊಂಡ ಹರ್ಷಲ್ ಪಟೇಲ್, ನನ್ನ ಟಿ20 ಕ್ರಿಕೆಟ್ ಜೀವನದಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದಿದ್ದೇನೆ. ಅದರಲ್ಲೂ ಮಂಬೈ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಕ್ಕೆ ನನಗೆ ಬಹಳ ಸಂತಸವಿದೆ ಎಂದು ಹೇಳಿದ್ದಾರೆ.