Tag: Harsha

  • ಹರ್ಷನ ಕೊಲೆಗೆ ಹಂತಕರು ಸ್ವತಃ ಕುಲುಮೆಯಲ್ಲಿ ಕುಳಿತು ಮಚ್ಚು ರೆಡಿ ಮಾಡಿಸಿದ್ರು!

    ಹರ್ಷನ ಕೊಲೆಗೆ ಹಂತಕರು ಸ್ವತಃ ಕುಲುಮೆಯಲ್ಲಿ ಕುಳಿತು ಮಚ್ಚು ರೆಡಿ ಮಾಡಿಸಿದ್ರು!

    ಶಿವಮೊಗ್ಗ: ಹರ್ಷನ ಕೊಲೆಗೆ ಹಂತಕರೇ ಸ್ವತಃ ಕುಲುಮೆಯಲ್ಲಿ ಕುಳಿತುಕೊಂಡು ಕುಲುಮೆಯವನಿಗೆ ಸೂಚನೆ ನೀಡಿ ಮಚ್ಚು ರೆಡಿ ಮಾಡಿಸಿದ್ದರು. ಹರ್ಷ ಕೊಲೆಗೆ ಮೊದಲೇ ಪ್ಲಾನ್ ಮಾಡಿದ್ರಾ ಎಂಬ ಶಂಕೆ ಬರುತ್ತಿದೆ.

    ಹರ್ಷ ಕೊಲೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು, ಒಂದೊಂದೇ ಸತ್ಯ ತೆರೆದುಕೊಳ್ಳುತ್ತಿದೆ. ಈ ನಡುವೆ ಹರ್ಷನ ಕೊಲೆಗೆ ಸ್ವತಃ ಹಂತಕರೇ ಕುಲುಮೆಯಲ್ಲಿ ಕುಳಿತುಕೊಂಡು ಕುಲುಮೆಯವನಿಗೆ ನಿರ್ದೇಶನ ನೀಡಿ ಮಚ್ಚು ತಯಾರಿ ಮಾಡಿಸಿದ್ದರು. ಈ ಹಂತಕರು ಹರ್ಷನ ಕೊಲೆಗೆ 3 ಮಚ್ಚುಗಳನ್ನು ರೆಡಿ ಮಾಡಿಸಿದ್ದರು. ಭಾನುವಾರ ಮುಂಜಾನೆಯೇ ಭದ್ರಾವತಿಯ ಕುಲುಮೆಯೊಂದರಲ್ಲಿ ಸ್ವತಃ ನಾಲ್ವರು ಹಂತಕರು ಕುಳಿತುಕೊಂಡು ಇದನ್ನು ರೆಡಿ ಮಾಡಿಸಿದ್ದಾರೆ. ಇದನ್ನೂ ಓದಿ:  ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಹಂತಕರು ಮಚ್ಚುಗಳು ಹೀಗೆಯೇ ಇರಬೇಕು. ಇಷ್ಟೇ ಉದ್ದ ಇರಬೇಕು. ಇಷ್ಟೇ ಹರಿತವಾಗಿ ಇರಬೇಕು ಎಂದು ಹೇಳಿ ಮಾಡಿಸಿದ್ದಾರೆ. ಮೂರು ಮಚ್ಚುಗಳನ್ನು ತಯಾರಿಸಲು 1,200 ರೂ. ಹಣ ಖರ್ಚು ಮಾಡಿದ್ದಾರೆ. ಹರ್ಷನ ಕೊಲೆ ಮಾಡಲು ಈ ಮೊದಲೇ ನಿರ್ಧರಿಸಿದ್ದರಿಂದ ಭಾನುವಾರ ಮುಂಜಾನೆ ಮಚ್ಚು ರೆಡಿ ಮಾಡಿಸಿದ್ದರು. ಭಾನುವಾರ ರಾತ್ರಿ ಹರ್ಷನನ್ನು ಕೊಲೆ ಮಾಡಲಾಗಿದೆ.

    ಹಂತಕರು ಭಾನುವಾರ ಸಂಜೆ ಕಾರಿನಲ್ಲಿ ಕುಳಿತುಕೊಂಡು ಹರ್ಷನ ಚಲನವಲನ ಗಮನಿಸಿದ್ದಾರೆ. ಹರ್ಷ ಸೀಗೆಹಟ್ಟಿ ಬಡಾವಣೆಯಲ್ಲಿ ನಡೆದುಕೊಂಡು ಬರುತ್ತಿರುವಾಗ, ಹಂತಕರು ಅವನನ್ನು ಕಾರಿನಲ್ಲಿ ಕುಳಿತು ಗಮನಿಸಿದ್ದಾರೆ. ನಂತರ ಸೀಗೆಹಟ್ಟಿಯ ಹಲವೆಡೆ ಕಾರಿನಲ್ಲಿ ಓಡಾಟ ನಡೆಸಿದ್ದ ಹಂತಕರು, ಹರ್ಷನ ಕೊಲೆ ಮಾಡುವ ಮೊದಲು ಒಂದು ಕಾರು ಬಳಕೆ ಮಾಡಿದ್ದಾರೆ. ಹರ್ಷನ ಕೊಲೆ ಮಾಡಿದ ನಂತರ ಎಸ್ಕೇಪ್ ಆಗಲು ಮತ್ತೊಂದು ಕಾರು ಬಳಕೆ ಮಾಡಿದ್ದಾರೆ. ಇದನ್ನೂ ಓದಿ:  BJP, RSS ನಾಯಕರ ಮಾಹಿತಿಯನ್ನು SDPIಗೆ ಕೊಟ್ಟ ಪೊಲೀಸ್ ಅಮಾನತು!

    ಹರ್ಷ ಒಬ್ಬನೇ ಇರುವುದು ಗಮನಿಸಿದ ಹಂತಕರು, ಸೀಗೆಹಟ್ಟಿ ಬಳಿ ಮಚ್ಚು ಹಿಡಿದುಕೊಂಡು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಹಂತಕರು ಕಾರಿನಿಂದ ಕೆಳಗೆ ಇಳಿಯುತ್ತಿದ್ದ ಹಾಗೆ ಆ ಸ್ಥಳದಿಂದ ಕಾರು ಹೊರಟು ಹೋಗಿದೆ. ಹರ್ಷನ ಕೊಲೆಯ ನಂತರ ಓಡಿ ಹೋಗಿ ಮತ್ತೊಂದು ಕಾರು ಹತ್ತಿಕೊಂಡು ಪರಾರಿಯಾಗಿದ್ದಾರೆ.

  • ಹರ್ಷನ ಕೊಲೆಗೆ ಬಳಸಿದ್ದ ಮಾರಕಾಸ್ತ್ರ ಭದ್ರಾವತಿ ಬಳಿ ಪೊಲೀಸ್ ವಶಕ್ಕೆ – ಇನ್ನೂ ಸಿಕ್ಕಿಲ್ಲ ಮೊಬೈಲ್

    ಹರ್ಷನ ಕೊಲೆಗೆ ಬಳಸಿದ್ದ ಮಾರಕಾಸ್ತ್ರ ಭದ್ರಾವತಿ ಬಳಿ ಪೊಲೀಸ್ ವಶಕ್ಕೆ – ಇನ್ನೂ ಸಿಕ್ಕಿಲ್ಲ ಮೊಬೈಲ್

    ಶಿವಮೊಗ್ಗ: ಹರ್ಷ ಕೊಲೆ ಪ್ರಕರಣದ ತನಿಖೆ ಚುರುಕು ಪಡೆದಿದೆ. ಇದುವರೆಗೆ 8 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹರ್ಷನ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಭದ್ರಾವತಿ ಬಳಿ ವಶಕ್ಕೆ ಪಡೆದಿದ್ದಾರೆ.

    ವಿಚಾರಣೆ ತೀವ್ರಗೊಳಿಸಿರುವ ಪೊಲೀಸರು ಎಲ್ಲಾ ಆರೋಪಿಗಳು ಎ1 ಆರೋಪಿ ಖಾಸೀಫ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ವಿಚಾರ ಕಾಲ್ ಡಿಟೇಲ್ಸ್‌ನಲ್ಲಿ  ಪತ್ತೆ ಹಚ್ಚಿದ್ದಾರೆ. ಆದ್ರೆ ಇದುವರೆಗೂ ಹರ್ಷ ಮೊಬೈಲ್ ಸಿಕ್ಕಿಲ್ಲ. ಮೊಬೈಲ್‍ನ ಟ್ರೇಸ್ ಮಾಡ್ತಿದ್ದೀವಿ ಎಂದು ಎಸ್‍ಪಿ ತಿಳಿಸಿದ್ದಾರೆ. ಹರ್ಷ ಕೊಲೆ ಕೇಸನ್ನು ಎನ್‍ಐಎಗೆ ವಹಿಸೋ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ – ಹಿಂದೂಗಳಿಗೆ ಮುಸ್ಲಿಂ ಸಹೋದರರ ಸಾಂತ್ವನ

    ಈ ಮಧ್ಯೆ, ಹತ್ಯೆ ನಂತರ ನಡೆದ ಗಲಭೆ ಸಂಬಂಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜಾಯಿಂಟ್ ಆಕ್ಷನ್ ಕಮಿಟಿ ಆಪಾದಿಸಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕೆಲ ಬಿಜೆಪಿ ನಾಯಕರು ಗಲ್ಲುಶಿಕ್ಷೆ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    ಸಿದ್ದರಾಮಯ್ಯ ಸರ್ಕಾರದ 5 ವರ್ಷ ಆಡಳಿತಾವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ. ಈ ಪೈಕಿ ಒಂದು ಕೇಸ್ ಕೂಡ ತಾರ್ಕಿಕ ಅಂತ್ಯ ಕಂಡಿಲ್ಲ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕೊಲೆಗಡುಕ ಸರ್ಕಾರ ಎಂದಿದ್ದ ಬಿಜೆಪಿ ನಾಯಕರು, ಈಗ ಅಧಿಕಾರಕ್ಕೆ ಬಂದ ಮೇಲೆ ಈ ಕೇಸ್‍ಗಳನ್ನು ಮರೆತೆ ಬಿಟ್ಟಿದ್ದಾರೆ. ಹತ್ಯೆ ಆರೋಪ ಹೊತ್ತವರು ಜಾಮೀನಿನ ಮೇಲೆ ತಿರುಗಾಡುತ್ತಿದ್ದಾರೆ. ಕೆಲ ಪ್ರಕರಣಗಳಲ್ಲಿ ಮಾತ್ರ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಮಾತ್ರ ಹಿಂದೂ ಕಾರ್ಯಕರ್ತರ ಕೊಲೆಯನ್ನು ದಾಳವಾಗಿ ಬಳಸಿಕೊಳ್ಳುತ್ತೆ ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಮುಸ್ಲಿಂನವರ ಕೊಲೆಯಾಗಿದ್ರೆ ರಾಹುಲ್, ಸೋನಿಯಾ ಗಾಂಧಿ ಬರ್ತಿದ್ರು: ಯತ್ನಾಳ್

  • ಹರ್ಷ ಕೊಲೆ ಪ್ರಕರಣ – ಹಿಂದೂಗಳಿಗೆ ಮುಸ್ಲಿಂ ಸಹೋದರರ ಸಾಂತ್ವನ

    ಹರ್ಷ ಕೊಲೆ ಪ್ರಕರಣ – ಹಿಂದೂಗಳಿಗೆ ಮುಸ್ಲಿಂ ಸಹೋದರರ ಸಾಂತ್ವನ

    ಶಿವಮೊಗ್ಗ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರ್ಷ ಕೊಲೆ ಪ್ರಕರಣದ ವೇಳೆ ಆಸ್ತಿ, ಪಾಸ್ತಿ ಹಾನಿಯಾದ ಹಿಂದೂ ಸಹೋದರರ ಮನೆಗೆ ಮುಸ್ಲಿಂ ಸಹೋದರರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ದುಷ್ಕರ್ಮಿಗಳು ನಿರ್ದಾಕ್ಷಿಣ್ಯವಾಗಿ ಹರ್ಷನ ಹತ್ಯೆ ಗೈದಿದ್ದರು. ಈ ಘಟನೆ ಬಳಿಕ ಶಿವಮೊಗ್ಗದ ಟಿಪ್ಪುನಗರದಲ್ಲಿ ಹಿಂದೂ ಸಮುದಾಯದವರ ಹಲವರ ಆಸ್ತಿ, ಪಾಸ್ತಿ ಹಾಗೂ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹಾನಿ ಮಾಡಿದ್ದರು. ಇದನ್ನೂ ಓದಿ: ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ

    Shivamogga

    ಇದೀಗ ಹಿಂದೂ ಸಹೋದರರು ಮನೆಗೆ ಮುಸ್ಲಿಂ ಸಹೋದರರ ಭೇಟಿ ನೀಡಿ ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಆಸ್ತಿ, ಪಾಸ್ತಿಗೆ ಏನೇ ಹಾನಿ ಆಗಿದ್ದರೂ ನಾವು ಸಹಾಯ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಈ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಇಂತಹ ಘಟನೆ ಈ ಹಿಂದೆ ನಡೆದಿಲ್ಲ. ಮುಂದೆಯೂ ನಡೆಯಬಾರದು ಎಂದು ತಿಳಿಸಿದ್ದಾರೆ.

    ಭಾನುವಾರ ಕ್ಯಾಂಟೀನ್‍ವೊಂದರ ಬಳಿ ಟೀ ಕುಡಿಯುತ್ತಾ ನಿಂತಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷನ ಮೇಲೆ ಯುವಕರ ಗುಂಪೊಂದು ಏಕಾಏಕಿ ದಾಳಿ ನಡೆಸಿತ್ತು. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿತ್ತು. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದನು. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.  ಇದನ್ನೂ ಓದಿ: ಮಗಳನ್ನು ಕೊಂದು, ಆತ್ಮಹತ್ಯೆಗೆ ಶರಣಾದ ತಂದೆ

  • ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ

    ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ

    ಶಿವಮೊಗ್ಗ: ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನು ಪೈಕಿ 6 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಖಾಸಿಫ್, ನದೀಮ್, ಆಸೀಫ್ ಖಾನ್, ರಿಯಾನ್ ಷರೀಫ್ ಖಾಸಿ, ನಿಹಾನ್ ಮುಜಾಹಿದ್, ಅಬ್ದುಲ್ ಆಫಾನ್ ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹರ್ಷನ ಕೊಲೆ ಪ್ರಕರಣದಲ್ಲಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಗಳನ್ನು ಕೊಂದು, ಆತ್ಮಹತ್ಯೆಗೆ ಶರಣಾದ ತಂದೆ

    ಮಾರ್ಚ್ 8ರವರೆಗೆ 6 ಆರೋಪಿಗಳಿಗೆ ಜೈಲು ಗತಿಯಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಮರ್ಡರ್ ಕೇಸ್‌ನ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಎಡಿಜಿಪಿ ಮುರುಗನ್ ಬೆಂಗಳೂರಿಗೆ ವಾಪಸ್ ಆದ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತಗೆ ತನಿಖೆ ಹೊಣೆ ವಹಿಸಲಾಗಿದೆ.

    ಭಜರಂಗದಳದ ಹರ್ಷ ಎಂಬ ಯುವಕನನ್ನು ಗುಂಪೊಂದು ಮೂರು ದಿನಗಳ ಹಿಂದೆ ಹತ್ಯೆ ಮಾಡಿ ಪರಾರಿಯಾಗಿತ್ತು. ಕೊಲೆಯಾದ ತಕ್ಷಣ ಶಿವಮೊಗ್ಗ ಜಿಲ್ಲೆಯಲ್ಲಿ 144 ಸೆಕ್ಷನ್‌ ಜಾರಿಗೊಳಿಸಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹರ್ಷ ಕೊಲೆ ಕೇಸ್ ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ: ಮುತಾಲಿಕ್

  • ಹರ್ಷ ಕೊಲೆ ಕೇಸ್ ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ: ಮುತಾಲಿಕ್

    ಹರ್ಷ ಕೊಲೆ ಕೇಸ್ ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ: ಮುತಾಲಿಕ್

    ಬೆಂಗಳೂರು: ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಬೇಗ ಪೂರ್ಣಗೊಳಿಸಿ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬಳಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮನವಿ ಸಲ್ಲಿಸಿದ್ದಾರೆ.

    ಗೃಹ ಸಚಿವರ ನಿವಾಸಕ್ಕೆ ಭೇಟಿ ನೀಡಿದ ಮುತಾಲಿಕ್, ಹರ್ಷ ಕೊಲೆ ಪ್ರಕರಣ ಸಂಬಂಧ ತ್ವರಿತ ಗತಿಯಲ್ಲಿ ತನಿಖೆ ನಡೆಸಬೇಕು. ಪ್ರಕರಣ ಸಂಬಂಧ ಕೋಕಾ ಕಾಯ್ದೆ ಮೂಲಕ ಅಪರಾಧಿಗಳನ್ನು ಹೊರ ಬಿಡಬಾರದು. ಈ ಪ್ರಕರಣವನ್ನು ವಿಶೇಷ ನ್ಯಾಯಾಲಯದ ಮೂಲಕ ವಿಚಾರಣೆ ಆಗಬೇಕೆಂದು ಮನವಿ ಸಲ್ಲಿಸಿದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ

    ಗೃಹಸಚಿವರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಘಟನೆ ಹಿನ್ನೆಲೆ 24 ಗಂಟೆಗಳಲ್ಲಿ ಕೊಲೆಗಡುಕರನ್ನು ಬಂಧನ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಕೊಲೆ ಮಾಡಿದವರನ್ನು ಎನ್‍ಕೌಂಟರ್ ಮಾಡಲು ಬೇಡಿಕೆಯಿಟ್ಟಿದ್ದೇವೆ. ಕಾನೂನಿನ ಮೂಲಕ ಗಲ್ಲು ಶಿಕ್ಷೆ ತ್ವರಿತಗತಿಯಲ್ಲಿ ನೀಡಬೇಕು. ಕೋಕಾ ಸೆಕ್ಷನ್ ಹಾಕಲು ಮನವಿ ಮಾಡಲಾಗಿದೆ. ವಿಶೇಷ ನ್ಯಾಯಾಲಯ ರಚಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ. ನಮ್ಮ ಮನವಿ ಬಗ್ಗೆ ನಾಳೆ ತೀರ್ಮಾನ ಮಾಡೋದಾಗಿ ಗೃಹಸಚಿವರು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್

  • ಶಿವಮೊಗ್ಗದಲ್ಲಿ ಟ್ರೈಲರ್ ನೋಡಿದ್ದೀರಿ, ಪಿಚ್ಚರ್ ತೋರಿಸುತ್ತೇವೆ – ಭಜರಂಗದಳ ನೇರ ಎಚ್ಚರಿಕೆ

    ಶಿವಮೊಗ್ಗದಲ್ಲಿ ಟ್ರೈಲರ್ ನೋಡಿದ್ದೀರಿ, ಪಿಚ್ಚರ್ ತೋರಿಸುತ್ತೇವೆ – ಭಜರಂಗದಳ ನೇರ ಎಚ್ಚರಿಕೆ

    ಉಡುಪಿ: ಶಿವಮೊಗ್ಗದಲ್ಲಿ ಎರಡು ದಿನ ಟ್ರೈಲರ್ ನೋಡಿದ್ದೀರಿ ಶೀಘ್ರ ಪಿಚ್ಚರ್‌ ತೋರಿಸ್ತೇವೆ ಎಂದು ಉಡುಪಿಯಲ್ಲಿ ಭಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ನೇರ ಎಚ್ಚರಿಕೆ ನೀಡಿದ್ದಾರೆ.

    ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಡುಪಿಯಲ್ಲಿ ಖಂಡನಾ ಪ್ರತಿಭಟನೆ ನಡೆಯಿತು. ಭಜರಂಗದಳ – ವಿಶ್ವ ಹಿಂದೂಪರಿಷತ್, ಹಿಂದು ಜಾಗರಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸುನೀಲ್ ಕೆ.ಆರ್, ಶಿವಮೊಗ್ಗದಲ್ಲಿ ಎರಡು ದಿನ ಟ್ರೈಲರ್ ತೋರಿಸಿದ್ದೇವೆ. ಪಿಚ್ಚರ್ ಅಭಿ ಬಾಕಿ ಹೇ. ಕೊಲೆಗಟುಕರಿಗೆ ಮುಂದಿನ ದಿನಗಳಲ್ಲಿ ಪೂರ್ಣ ಚಿತ್ರ ತೋರಿಸುತ್ತೇವೆ. ಗಲ್ಲಿ ಗಲ್ಲಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ಹೋರಾಡಲು ನಮಗೆ ಗೊತ್ತಿದೆ ಎಂದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ

    ಹೋರಾಟ ಮಾಡಲು ನಮಗೆ ತಲವಾರು ಮಾರಕಾಸ್ತ್ರ ಬೇಡ. ಜೈಲಿನಲ್ಲಿ ಒಂದು ಚಮಚ ಇದ್ದರೂ ಸಾಕು. ಚಮಚದಲ್ಲಿ ನಮಗೆ ಪ್ರತೀಕಾರ ತೀರಿಸಿ ಅನುಭವ ಇದೆ. ಸರ್ಕರಕ್ಕೆ ಹಿಂದೂ ಕಾರ್ಯಕರ್ತರ ಮೇಲೆ ಪ್ರೀತಿ ಅಭಿಮಾನ ಇದ್ದರೆ, ಹರ್ಷ ಕೊಲೆ ಆರೋಪಿಗಳನ್ನು ಶೂಟೌಟ್ ಮಾಡಿ. ಕೊಲೆ ಆರೋಪಿಗಳನ್ನು ಕೂಡಲೇ ನೇಣಿಗೇರಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್

    ಗಲ್ಲಿ ಗಲ್ಲಿಯಲ್ಲಿ ಭಜರಂಗಿಗಳು ಕಾರ್ಯಾಚರಣೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು. ಪಿಎಫ್‍ಐ, ಎಸ್‍ಡಿಪಿಐಗೆ ಸೂಕ್ತ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮಗೆ ಗೊತ್ತಿದೆ ಎಂದು ಸುನೀಲ್ ಕೆ.ಆರ್ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

  • ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ

    ಹರ್ಷ ಕೊಲೆ ಪ್ರಕರಣ: 8ನೇ ಆರೋಪಿ ಬಂಧನ – ಶಿವಮೊಗ್ಗದಲ್ಲಿ 7 ಡ್ರೋಣ್‍ಗಳ ಕಾರ್ಯಾಚರಣೆ

    ಶಿವಮೊಗ್ಗ: ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆ ಸಂಬಂಧ ಬಂಧಿತರ ಸಂಖ್ಯೆ 8ಕ್ಕೆ ಏರಿದೆ. 8ನೇ ಆರೋಪಿ ಫರಾನ್ ಪಾಷಾನನ್ನು ವಶಕ್ಕೆ ಪಡೆಯಲಾಗಿದೆ.

    ಶಿವಮೊಗ್ಗ ನಗರದಲ್ಲಿ ಈಗಾಗಲೇ ಕರ್ಫ್ಯೂ ಜಾರಿಮಾಡಲಾಗಿದ್ದು ಸದ್ಯ ಶಾಂತಿ ನೆಲೆಸಿದ್ದು, ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದೆ. ಆದರೂ, ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಮುಮದುವರಿಯಲಿದೆ. ಶಿವಮೊಗ್ಗ ನಗರ ಸೇರಿದಂತೆ ಇಡೀ ಜಿಲ್ಲೆಯ ಮೇಲೆ ಪೊಲೀಸ್ ಹದ್ದಿನಕಣ್ಣು ಇಡಲಾಗಿದೆ. ಹರ್ಷ ಕೊಲೆ ಬೆನ್ನಲ್ಲೇ ಎಚ್ಚೆತ್ತ ಶಿವಮೊಗ್ಗ ಪೊಲೀಸರು ಇವತ್ತು ಹೈವೋಲ್ಟೇಜ್ ಸಭೆ ನಡೆಸಿದ್ರು. ಕರ್ಫ್ಯೂ ಮುಂದುವರಿಸಬೇಕಾ? ಬೇಡ್ವಾ? ಜೊತೆಗೆ ಕಳೆದೆರಡು ದಿನಗಳಲ್ಲಾದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಇದನ್ನೂ ಓದಿ:  ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

    ಇಂದು ಮಹತ್ವದ ಬದಲಾವಣೆಯೊಂದು ನಡೆದಿದ್ದು, ಶಿವಮೊಗ್ಗ ಕಾನೂನು ಸುವ್ಯವಸ್ಥೆ ಹೊಣೆಯನ್ನು ಮುರುಗನ್ ಬದಲಿಗೆ ರಮಣ್ ಗುಪ್ತಾಗೆ ವಹಿಸಲಾಗಿದೆ. ಸದ್ಯ ಜಿಲ್ಲಾದ್ಯಂತ ಬಿಗಿಭದ್ರತೆ ಒದಗಿಸಲಾಗಿದ್ದು ಡ್ರೋಣ್ ಮೂಲಕ ಕಟ್ಟೆಚ್ಚರ ವಹಿಸಿದೆ. ಒಟ್ಟು 7 ಡ್ರೋಣ್ ಕಾರ್ಯಾಚರಣೆ ನಡೆಸ್ತಿದ್ದು, ಒಂದೊಂದು ಡ್ರೋಣ್ 5 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯನಿರ್ವಸುತ್ತಿದೆ. ಮತ್ತೊಂದ್ಕಡೆ ನಗರದಾದ್ಯಂತ ಡಿಸಿ, ಎಸ್‍ಪಿ ಸಿಟಿ ರೌಂಡ್ಸ್ ನಡೆಸಿದರು.  ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

    ನಿನ್ನೆ ಖಾಸೀಫ್, ನದೀಮ್, ಆಸೀಫ್ ಖಾನ್, ರಿಯಾನ್ ಶರೀಫ್ ಅಲಿಯಾಸ್ ಖಸಿ, ನಿಹಾನ್ ಅಲಿಯಾಸ್ ಮುಜಾಹಿದ್, ಅಬ್ದುಲ್ ಅಪ್ನಾನ್, ಜಿಲಾನ್ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿತ್ತು. ಇಂದು ಇನ್ನೋರ್ವ ಆರೋಪಿ ಫರಾನ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು, ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಸಾಬೀತಾಗಿದೆ. ಇಷ್ಟಾದರೂ ಇವರ ಹೆಡೆಮುರಿ ಕಟ್ಟಿಲ್ಲ ಯಾಕೆ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್

    ಆರೋಪಿಗಳ ಬಗ್ಗೆ ಹಲವು ಪ್ರಶ್ನೆಗಳು ಕಾಡುತ್ತಿದ್ದಂತೆ, ಕ್ರೈಂ ಆಡಿಟ್‍ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ. ಡಿಜಿಗೆ ಪತ್ರ ಬರೆದಿದ್ದು ಕೋಟೆ, ದೊಡ್ಡಪೇಟೆ ಪೊಲೀಸ್ ಠಾಣೆಗಳಲ್ಲಿ ಕ್ರೈಂ ಆಡಿಟ್‍ಗೆ ಸೂಚಿಸಿದ್ದಾರೆ. ಒಂದು ವಾರದೊಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಇಲ್ಲಿದ್ದ ಅಧಿಕಾರಿಗಳು ಯಾರು? ಆರೋಪಿಗಳ ಮೇಲೆ ಕೇಸ್ ಇದ್ದರೂ ಏನ್ ಕ್ರಮ ಆಗಿದೆ? ಆರೋಪಿಗಳ ವಿರುದ್ಧ ಪೊಲೀಸರು ಹೇಗೆ ಕ್ರಮ ತೆಗೆದುಕೊಂಡಿದ್ದಾರೆ ಅಂತ ತನಿಖೆ ಆಗಲಿದೆ. ಸೆಕ್ಷನ್ 144 ಕೆಲ ದಿನ ಮುಂದುವರಿಸುತ್ತೇವೆ. ಸಂಘಟನೆಗಳ ಕೈವಾಡ ಇರುವ ಬಗ್ಗೆಯೂ ತನಿಖೆ ಆಗುತ್ತೆ ಎಂದು ಆರಗ ಜ್ಞಾನೆಂದ್ರ ಹೇಳಿಕೆ ನೀಡಿದ್ದಾರೆ.

  • ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್

    ಹತ್ಯೆಗೂ ಮೊದಲು ಅಪರಿಚಿತ ಹುಡುಗಿಯರಿಂದ ಹರ್ಷಗೆ ಪದೇ ಪದೇ ವೀಡಿಯೋ ಕಾಲ್

    ಶಿವಮೊಗ್ಗ: ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆಗೂ ಕೆಲ ಗಂಟೆಗಳ ಮೊದಲು ಇಬ್ಬರೂ ಹುಡುಗಿಯರು ವೀಡಿಯೋ ಕಾಲ್ ಮಾಡಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ತನಿಖೆ ಆರಂಭಗೊಂಡಿದ್ದು ಆರೋಪಿಗಳ ಇತಿಹಾಸ ಪತ್ತೆಯಾಗುತ್ತಿದ್ದಂತೆ ಈಗ ಕೊನೆ ಕ್ಷಣದ ಮಾಹಿತಿಗಳು ಲಭ್ಯವಾಗುತ್ತಿದೆ. ಹತ್ಯೆಗೂ ಮುನ್ನ ಇಬ್ಬರು ಅಪರಿಚಿತ ಹುಡುಗಿಯರು ಸಹಾಯಕ್ಕಾಗಿ ಹರ್ಷಗೆ ವೀಡಿಯೋ ಕಾಲ್ ಮಾಡಿದ್ದ ವಿಚಾರವನ್ನು ಹರ್ಷನ ಸ್ನೇಹಿತ ನವೀನ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ:  ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

    ಸ್ನೇಹಿತ ಹೇಳಿದ್ದು ಏನು?
    ಹರ್ಷ ಕೊಲೆಯಾಗುವ ಮೊದಲು ಸಹಾಯ ಕೇಳುವ ನೆಪದಲ್ಲಿ 2 ಹುಡುಗಿಯರು ಪದೇ ಪದೇ ವೀಡಿಯೋ ಕಾಲ್ ಮಾಡಿದ್ದರು. ಈ ವೇಳೆ ಹರ್ಷನ ಜೊತೆ ನಾವು ನಾಲ್ಕು ಜನ ಇದ್ದೆವು. ಹರ್ಷನಿಗೆ ಪದೇ ಪದೇ ಕಾಲ್ ಬರುತ್ತಿದ್ದಂತೆ ಹರ್ಷ ಕಾಲ್ ಕಟ್ ಮಾಡುತ್ತಿದ್ದ. ಆದರೆ ಅವರು ಮತ್ತೆ, ಮತ್ತೆ ನಾನು ನಿನ್ನ ಸ್ನೇಹಿತೆ ಸಹಾಯಕ್ಕಾಗಿ ಫೋನ್ ಮಾಡುತ್ತಿದ್ದೇವೆ ಎಂದು ಕಾಲ್ ಮಾಡುತ್ತಿದ್ದರು. ಇದನ್ನೂ ಓದಿ: ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

    ಬಳಿಕ 4 ಜನ ಜೊತೆಗೆ ಹೊರಟಾಗ ಹರ್ಷ ಬೈಕ್ ಬೇಡ ನಡೆದುಕೊಂಡು ಹೋಗೋಣ ಎಂದ, ನಡೆದು ಕೊಂಡು ಹೋಗುತ್ತಿದ್ದೆವು. ಅಮ್ಮ ಕ್ಯಾಂಟೀನ್ ಬಳಿ ಬರುತ್ತಿದ್ದಂತೆ ಹರ್ಷ ನಡೆದುಕೊಂಡು ಹೋಗುವುದು ಬೇಡ ಬೈಕ್ ತನ್ನಿ ಎಂದು ನಮ್ಮನ್ನು ಕಳುಹಿಸಿದ ಬಳಿಕ ಘಟನೆ ನಡೆದಿದೆ. ನಾವು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಖಾಸೀಫ್ ಬಾಟಲ್ ಹಿಡಿದುಕೊಂಡು ಓಡಿ ಹೋಗುತ್ತಿದ್ದ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಹತ್ಯೆಯ ದಿನ ರಾತ್ರಿ 10 ಗಂಟೆಯ ವರೆಗೆ ಜೊತೆಗೆ ಇದ್ದೆವು. 2 ವಾರದಿಂದ ಹರ್ಷನನ್ನು ಆರೋಪಿಗಳು ಫಾಲೋ ಮಾಡಿದ್ದರು. ತನ್ನನ್ನು ಫಾಲೋ ಮಾಡುತ್ತಿರುವ ಬಗ್ಗೆ ಹರ್ಷನಿಗೂ ಅನುಮಾನವಿತ್ತು. ಎಂದು ತಿಳಿಸಿದ್ದಾರೆ. ದನ್ನೂ ಓದಿ: 9 ಎಫ್‍ಐಆರ್, 7 ಮಂದಿ ಅರೆಸ್ಟ್‌ – ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆ

    ಕರೆ ಮಾಡಿದ ಹುಡುಗಿಯರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಹತ್ಯೆಗೆ ಸಹಕಾರ ಮಾಡಲೆಂದೇ ಇಬ್ಬರು ಹುಡುಗಿಯರು ಕರೆ ಮಾಡಿದ್ದಾರಾ? ಅಥವಾ ನಿಜವಾಗಿಯೂ ಸಹಾಯ ಕೇಳಿ ಕರೆ ಮಾಡಿದ್ದಾರಾ ಎಂಬುದು ಮುಂದಿನ ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.

    ಕೊಲೆಯಾಗುವ ವೇಳೆ ಮೊಬೈಲ್ ಹರ್ಷ ಬಳಿಯೇ ಇತ್ತು. ಆದರೆ ಕೊಲೆಯಾದ ಬಳಿಕ ಮೊಬೈಲ್ ನಾಪತ್ತೆಯಾಗಿದೆ. ಈಗ ಆ ಮೊಬೈಲ್ ಎಲ್ಲಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

  • ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

    ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ವಿಚಾರವಾಗಿ 7 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಹಿನ್ನೆಲೆ ಆರೋಪಿಗಳ ಕುಟುಂಬದವರು ‘ನಮ್ಮ ಮಕ್ಕಳು ಅಮಾಯಕರು’ ಎಂದು ಅಳಲು ತೋಡಿಕೊಂಡಿದ್ದಾರೆ.

    ಪರ್ವಿನ್ ತಾಜ್, ಆರೋಪಿ ನದೀಮ್ ತಾಯಿ:
    ನನ್ನ ಮಗನಿಗೆ ಯಾರು ಸತ್ತಿದ್ದಾರೆ, ಏನೂ ನಡೆದಿದೆ ಎಂಬುದೇ ತಿಳಿದಿಲ್ಲ. ಏನೂ ತಿಳಿಯದ ನನ್ನ ಮಗನ ಮೇಲೆ ಈ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಅವನು ತಪ್ಪು ಮಾಡಿದರೆ ಅವನನ್ನು ಬಂಧಿಸಿ. ಸರಿಯಾಗಿ ತನಿಖೆ ಮಾಡಿ ಎಂದು ಆರೋಪಿ ನದೀಮ್ ತಾಯಿ ಪರ್ವಿನ್ ತಾಜ್ ಕಣ್ಣಿರಿಟ್ಟಿದ್ದಾರೆ. ಇದನ್ನೂ ಓದಿ:  ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

    ಹರ್ಷನ ಕೊಲೆಯಾದ ದಿನ ಅವನು ಮನೆಯಲ್ಲೇ ಇದ್ದ. ಅಂದು ಅವನಿಗೆ ಆರೋಗ್ಯದಲ್ಲಿ ಸಮಸ್ಯೆ ಇತ್ತು. ಅದಕ್ಕೆ ಮನೆಯಲ್ಲಿಯೇ ಇದ್ದ. ಎರಡು ದಿನ ಅವನು ಸರಿಯಾಗಿ ಊಟ ಮಾಡಿರಲಿಲ್ಲ. ಆದರೆ ನಾನೇ ಅವನಿಗೆ ಊಟ ಮಾಡಿಸಿ, ಮಾತ್ರೆ ಕೊಟ್ಟು ಮಲಗಿಸಿದ್ದೆ ಎಂದು ತಿಳಿಸಿದ್ದಾರೆ.

    ನಾನು ಊಟ ಮಾಡಿಸಿದ ಮೇಲೆ ಬೆಳಗ್ಗೆ ಕೆಲಸಕ್ಕೆ ಹೋಗಬೇಕು ಎಂದು ಬೇಗ ಮಲಗಿಕೊಂಡ. ಅಷ್ಟೊಂದು ಅನುಮಾನವಿದ್ದರೆ ಅವನು ಕೆಲಸ ಮಾಡುವ ಜಾಗದಲ್ಲಿ ಮೇಸ್ತ್ರಿ ಇದ್ದಾರೆ, ಅವರನ್ನು ಕೇಳಿ. ಅವನು ಇಲ್ಲೇ ಕೆಲಸ ಮಾಡುತ್ತಿದ್ದ ಎಂದಿದ್ದಾರೆ. ಇದನ್ನೂ ಓದಿ: 9 ಎಫ್‍ಐಆರ್, 7 ಮಂದಿ ಅರೆಸ್ಟ್‌ – ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆ

    ಪೊಲೀಸರು ಬೆಳಗ್ಗೆ 3 ಗಂಟೆಗೆ ಮನೆಗೆ ಬಂದು ನನ್ನ ಮಗನನ್ನು ಕರೆದುಕೊಂಡು ಹೋದರು. ಅವರು ಏಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬುದು ಸಹ ನಮಗೆ ತಿಳಿದಿರಲಿಲ್ಲ. ನನ್ನ ಮಗನಿಗೂ ಈ ಕೊಲೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಬೇಕೆಂದು ನನ್ನ ಮಗನಿಗೆ ತೊಂದರೆ ಕೊಡುತ್ತಿದ್ದಾರೆ. ನಿಜವಾದ ಆರೋಪಿಗಳನ್ನು ಬಂಧಿಸಿ. ಸುಮ್ಮನೆ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಏಕೆ ನನ್ನ ಮಗನ ಮೇಲೆ ಇಷ್ಟು ದೊಡ್ಡ ಆರೋಪ ಮಾಡುತ್ತಿದ್ದಾರೆ ಎಂದು ಸಂಕಟ ತೋಡಿಕೊಂಡಿದ್ದಾರೆ.

    ಖಾಸಿಫ್ ಪತ್ನಿ:
    ರಾತ್ರಿ 8 ಗಂಟೆಗೆ ಮನೆಯಿಂದ ಅವರು ಆಚೆ ಹೋದ್ರು. ರಾತ್ರಿ 11 ರಿಂದ 11:30ಗೆ ವಾಪಸ್ ಬಂದ್ರು. ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ್ದೆ. ಅದಕ್ಕೆ ಅವರು ಫ್ರೆಂಡ್ಸ್ ಜೊತೆ ಹೋಗಿದ್ದೆ ಅಂದ್ರು. ರಾತ್ರಿ 1.30ಕ್ಕೆ ಪೊಲೀಸರು ಬಂದ್ರು. ನಂತರ ಅವನನ್ನು ಮಾಡಿ ಕರೆದುಕೊಂಡು ಹೋದ್ರು ಎಂದು ವಿವರಿಸಿದ್ದಾರೆ.

  • ಇದೊಂದು ವ್ಯವಸ್ಥಿತ ಕೊಲೆಗಳ ಷಡ್ಯಂತ್ರ – 5 ಲಕ್ಷ ರೂ. ಚೆಕ್ ನೀಡಿದ ತೇಜಸ್ವಿ ಸೂರ್ಯ

    ಇದೊಂದು ವ್ಯವಸ್ಥಿತ ಕೊಲೆಗಳ ಷಡ್ಯಂತ್ರ – 5 ಲಕ್ಷ ರೂ. ಚೆಕ್ ನೀಡಿದ ತೇಜಸ್ವಿ ಸೂರ್ಯ

    ಶಿವಮೊಗ್ಗ: ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಕ್ಕೆ ಬಿಜೆಪಿ ಯುವ ಮೋರ್ಚಾದ ವತಿಯಿಂದ 5 ಲಕ್ಷ ರೂ. ಚೆಕ್ ನೀಡಿದ್ದಾರೆ.

    ಹರ್ಷ ಮನೆಗೆ ಭೇಟಿ ನೀಡಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಯುವ ಘಟಕ ರಾಜ್ಯದ ತಂಡದವರೆಲ್ಲರು ಅವರ ಮನೆಗೆ ಭೇಟಿ ನೀಡಿದ್ದೇವೆ. ಹರ್ಷ ಹಿಂದುತ್ವಕ್ಕಾಗಿ ಬದುಕಿದ ಹುಡುಗನಾಗಿದ್ದನು. ಅವರನ್ನು ಅತ್ಯಂತ ಅಮಾನುಷವಾಗಿ ಬರ್ಬರವಾಗಿ ಕೊಲ್ಲಲಾಗಿದೆ. ದೇಶಕ್ಕಾಗಿ ಹೇಗೆ ಯೋಧರು ಹುತ್ಮಾತ್ಮರಾಗುತ್ತಾರೋ ಹಾಗೇ ನನ್ನ ಮಗ ಹುತಾತ್ಮ ನಾಗಿದ್ದಾನೆ ಅಂತ ಅವರ ತಾಯಿ ಹೇಳಿದರು ಎಂದರು. ಇದನ್ನೂ ಓದಿ: ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    ಪ್ರತಿ ಮನೆಯಲ್ಲಿಯೂ ಹರ್ಷ ನಂತ ಹಿಂದೂ ಹುಟ್ಟಬೇಕು ಅಂದಿದ್ದಾರೆ. ಫೇಸ್ ಬುಕ್ ಪೋಸ್ಟ್ ಮಾಡಿದ್ದಾಗ ಈ ರೀತಿ ಆಗುತ್ತದೆ ಅಂದರೆ ಐಸಿಸಿಗೂ ನಮಗೂ ಏನೂ ವ್ಯತ್ಯಾಸ ಇದೆ? ಹತ್ಯೆ ಮಾಡಿದ ರಾಕ್ಷಕರಿಗೆ ಒಂದು ಮಾತು ಹೇಳುತ್ತೇನೆ. ರಾಜ್ಯದಲ್ಲಿ ಹಿಂದೂತ್ವದ ಸರ್ಕಾರ ಇದ್ದು, ನಿಮ್ಮನ್ನು ಹುಡುಕಿ ಗಲ್ಲಿಗೇರಿಸಬೇಕು ಎಂದು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮನವಿ ಮಾಡಿಕೊಳ್ಳುತ್ತೇನೆ. ಹಿಂದೂ ಹರ್ಷನ ಹತ್ಯೆ ಮರ್ಡರ್ ಅಲ್ಲ, ಭಯೋತ್ಪಾದಕ ಕೃತ್ಯ ಅಂತಾನೇ ಪ್ರಕರಣ ದಾಖಲಾಗಬೇಕು ಎಂದರು.  ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

     

    ಈಗಾಗಲೇ ನಾಲ್ಕು ಜನ ಸುಪಾರಿ ಕಿಲ್ಲರ್‍ಗಳನ್ನು ಅರೆಸ್ಟ್ ಮಾಡಲಾಗಿದೆ. ರಾಜ್ಯದಲ್ಲಿ ಕೋಕಾ ಕಾಯ್ದೆ ಜಾರಿಗೊಳಿಸಬೇಕು. ಎಸ್‍ಡಿಪಿಐ, ಪಿಎಫ್‍ಐ, ಸಿಎಫ್‍ಐ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಇವುಗಳನ್ನೂ ಬ್ಯಾನ್ ಮಾಡಲು ಕೇಂದ್ರ ಸರ್ಕಾರಕ್ಕೆ ದಾಖಲೆ ಸಮೇತ ಕರುಡು ಸಲ್ಲಿಕೆ ಮಾಡಬೇಕು. ಹಿಂದೂಗಳ ಹತ್ಯೆ ಕೇವಲ ಮರ್ಡರ್ ಅಲ್ಲ. ಅದೊಂದು ವ್ಯವಸ್ಥಿತ ಮರ್ಡರ್‍ಗಳ ಷಡ್ಯಂತ್ರ ಎಂದರು.