Tag: Harsha Hospital

  • ಉಪೇಂದ್ರ ಆರೋಗ್ಯದಲ್ಲಿ ಏರುಪೇರು: ಹರ್ಷ ಆಸ್ಪತ್ರೆಗೆ ದಾಖಲು, ಡಿಸ್ಚಾರ್ಜ್

    ಉಪೇಂದ್ರ ಆರೋಗ್ಯದಲ್ಲಿ ಏರುಪೇರು: ಹರ್ಷ ಆಸ್ಪತ್ರೆಗೆ ದಾಖಲು, ಡಿಸ್ಚಾರ್ಜ್

    ಟ, ನಿರ್ದೇಶಕ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ನೆಲಮಂಗಲ ಹತ್ತಿರದ ಹರ್ಷಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಯುಐ’ ಚಿತ್ರೀಕರಣದಲ್ಲಿ ತೊಡಗಿದ್ದ ಉಪೇಂದ್ರ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ಕ್ಷಣ ಆತಂಕದ ವಾತಾವರಣವೇ ಅಲ್ಲಿ ಉಂಟಾಗಿತ್ತು.

    ನೆಲಮಂಗಲದ ಮೋಹನ್ ಬಿ ಕೆರೆ ಸ್ಡುಡಿಯೋದಲ್ಲಿ ನಡೆಯುತ್ತಿದ್ದ ‘ಯುಐ ‘ ಚಿತ್ರೀಕರಣದಲ್ಲಿ ಸ್ಮೋಕ್ ಎಫೆಕ್ಟ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ದಟ್ಟ ಹೊಗೆಯಲ್ಲಿ ಚಿತ್ರೀಕರಣದ ನಡೆಯುತ್ತಿರೋದ್ರಿಂದ ಕೆಮ್ಮು ತೀವ್ರವಾಗಿ‌ ಉಸಿರಾಟದ ಸಮಸ್ಯೆ ಎದುರಾಗಿತ್ತು ಎಂದು ಹೇಳಲಾಗುತ್ತಿದೆ. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಹತ್ತಿರದಲ್ಲೇ ಇರುವ ಹರ್ಷ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ಸಕ್ಸಸ್‌ ಸಂಭ್ರಮದಲ್ಲಿ ʻಕಾಂತಾರʼ ಸಿನಿಮಾ ತಂಡ

    ಚಿಕಿತ್ಸೆ ಕೊಡಿಸಿದ ಬಳಿಕ ಉಪೇಂದ್ರ ಸುಧಾರಿಸಿಕೊಂಡಿದ್ದು, ಕೆಲ ಹೊತ್ತು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ. ನಂತರ ಮತ್ತೆ ಶೂಟಿಂಗ್ ಸ್ಥಳಕ್ಕೆ ಬಂದು, ಎಂದಿನಂತೆ ಕೆಲಸದಲ್ಲಿ ತೊಡಗಿದ್ದಾರೆ. ಚಿತ್ರೀಕರಣದ ಸ್ಥಳದಿಂದಲೇ ಫೇಸ್ ಬುಕ್ ಲೈವ್‍ಗೆ ಬಂದ ಉಪೇಂದ್ರ, ‘ನಾನು ಶೂಟಿಂಗ್ ಸ್ಪಾಟ್‍ ನಲ್ಲಿ ಇದ್ದೇನೆ. ಆರೋಗ್ಯವಾಗಿದ್ದೇನೆ. ಯಾರೂ ಆತಂಕ ಪಡಬೇಕಿಲ್ಲ. ಇದೀಗ ಚಿತ್ರೀಕರಣದಲ್ಲಿ ಮತ್ತೆ ತೊಡಗಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಳಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ

    ಕಾಳಸಂತೆಯಲ್ಲಿ ರೆಮ್ ಡಿಸಿವರ್ ಮಾರಾಟ

    ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ರೆಮ್‍ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.

    ರಾಷ್ಟ್ರಾದ್ಯಂತ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಜನರು ಬಳಲುತ್ತಿದ್ದಾರೆ ಮತ್ತು ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಸಹ ಪ್ರಮುಖ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ಪೊಲೀಸರು ಮತ್ತು ಇತರ ಅನೇಕ ಸಂಬಂಧಿತ ಅಧಿಕಾರಿಗಳು ಸರ್ಕಾರದೊಂದಿಗೆ ವೈರಸ್ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

    ಈ ಮಧ್ಯೆ ಸಿ, ಎಫ್ ಮತ್ತು ಸಗಟು ವಿತರಕರು ಬ್ಯಾಚ್ ನಂ ಆರ್ ಎಂ121004ಎ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ರೆಮ್ ಡಿಸಿವರ್ ಅನ್ನು ಸರಬರಾಜು ಮಾಡುತ್ತಿಲ್ಲ ಎಂದು ನೆಲಮಂಗಲ ನಗರದ ಪ್ರತಿಷ್ಟಿತ ಹರ್ಷ ರಾಮಯ್ಯ ಆಸ್ಪತ್ರೆ ಮಾಲೀಕ ಶಿವಕುಮಾರ್ ಆರೋಪ ಮಾಡಿದ್ದಾರೆ.

    ಕಳೆದ 10 ದಿನಗಳಿಂದ ಚುಚ್ಚುಮದ್ದಿನ ಬಗ್ಗೆ ವಿಚಾರಿಸಿದಾಗ, ಅವರು ಯಾವುದೇ ಸ್ಟಾಕ್ ಇಲ್ಲದೆ ಉತ್ತರಿಸುತ್ತಿದ್ದಾರೆ. ಸಿ&ಎಫ್ ವಿತರಕರು ಸರಿಯಾಗಿ ವಿತರಣೆ ಮಾಡುತ್ತಿಲ್ಲ. 1500 ರಿಂದ 2000 ಸಾವಿರಕ್ಕೆ ಸಿಗುವ ಔಷಧಿಯನ್ನು ಕಾಳ ಸಂತೆಯಲ್ಲಿ 15 ರಿಂದ 25 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಈ ಕುರಿತಂತೆ ಕೂಡಲೇ ಕ್ರಮ ವಹಿಸುವಂತೆ ಮಾನ್ಯ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಕಮಿಷನರ್ ಸೇರಿದಂತೆ ಅನೇಕರಿಗೆ ಶಿವಕುಮಾರ್‍ರವರು ಪತ್ರ ಬರೆದು ಕೂಡಲೇ ಈ ಪ್ರಕರಣವನ್ನು ಸಿಬಿಐ, ಸಿಸಿಬಿ, ಸಿಐಡಿಗೆ ಹಸ್ತಾಂತರ ಮಾಡಿ ಕರ್ನಾಟಕದಲ್ಲಿ ಸ್ಟಾಕ್ ಲಭ್ಯವಿರುವಂತೆ ಮನವಿ ಮಾಡಿಕೊಂಡಿದ್ದಾರೆ.