Tag: Harsha Bogle

  • ಹರ್ಷ ಬೋಗ್ಲೆಯನ್ನು ಟ್ರೋಲ್ ಮಾಡಿದ ಜಡೇಜಾ

    ಹರ್ಷ ಬೋಗ್ಲೆಯನ್ನು ಟ್ರೋಲ್ ಮಾಡಿದ ಜಡೇಜಾ

    ಕಟಕ್: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಇದೇ ವೇಳೆ ಪಂದ್ಯದ ಬಳಿಕ ನಡೆದ ಕಿರು ಸಂದರ್ಶನದ ವೇಳೆ ವಿವರಣೆಗಾರ ಹರ್ಷ ಭೋಗ್ಲೆ ಅವರನ್ನು ಟ್ರೋಲ್ ಮಾಡಿದ್ದಾರೆ ಎಂಬರ್ಥದ ಕಮೆಂಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಬರತೊಡಗಿದೆ.

    ಪಂದ್ಯದ ಬಳಿಕ ಶಾರ್ದೂಲ್ ಠಾಕೂರ್ ಮತ್ತು ಜಡೇಜಾ ಇಬ್ಬರನ್ನು ಹರ್ಷ ಭೋಗ್ಲೆ ಕಿರು ಸಂದರ್ಶನ ಮಾಡಿದ್ದರು. ಈ ವೇಳೆ ಶಾರ್ದೂಲ್ ಅವರಿಗೆ ಇಂಗ್ಲೀಷ್‍ನಲ್ಲಿ ಪ್ರಶ್ನೆ ಕೇಳಿದ್ದ ಭೋಗ್ಲೆ, ಜಡೇಜಾ ಅವರಲ್ಲಿ ಹಿಂದಿಯಲ್ಲಿ ಪ್ರಶ್ನಿಸಿದ್ದರು. ಇದನ್ನು ಓದಿ: ಜಡೇಜಾ ಬಳಿ ಕ್ಷಮೆ ಕೋರಿದ ಸಂಜಯ್ ಮಂಜ್ರೇಕರ್

    ಭೋಗ್ಲೆ ಅವರ ಪ್ರಶ್ನೆಗೆ ಹಿಂದಿಯಲ್ಲೇ ತಾಳ್ಮೆಯಿಂದ ಉತ್ತರಿಸಿದ್ದ ಜಡೇಜಾ, ಕೊಹ್ಲಿ ಔಟಾದ ಬಳಿಕ ತಮ್ಮ ಮನಸ್ಸಿನಲ್ಲಿ ಯಾವ ರೀತಿ ಬ್ಯಾಟ್ ಮಾಡಬೇಕೆಂದು ಯೋಚಿಸುತ್ತಿದ್ದಾಗಿ ವಿವರಿಸಿದರು. ಅಲ್ಲದೇ ಹಿಂದಿಯಲ್ಲಿ ಮಾತು ಆರಂಭಿಸಿದ್ದ ಜಡೇಜಾ, ಇಂಗ್ಲೀಷ್ ನಲ್ಲಿ ಅಂತ್ಯಗೊಳಿಸಿದ್ದರು. ಕೂಡಲೇ ಎಚ್ಚೆತ್ತ ಭೋಗ್ಲೆ ತಮ್ಮ 2ನೇ ಪ್ರಶ್ನೆಯನ್ನು ಇಂಗ್ಲೀಷ್‍ನಲ್ಲಿ ಕೇಳಿದರು. ಅಲ್ಲದೇ ಮೈದಾನದಲ್ಲಿರುವ ವೇಳೆ ಬಾಲ್, ರನ್ ಲೆಕ್ಕಾಚಾರ ನಡೆಸುತ್ತೀರಾ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಜಡೇಜಾ, ದೊಡ್ಡ ಸ್ಕ್ರೀನ್ ಮೇಲೆ ಅವರು ರನ್, ಬಾಲ್ ಅಂತರದ ಬಗ್ಗೆ ತೋರಿಸುತ್ತಾರೆ. ಆದ್ದರಿಂದ ಈ ಲೆಕ್ಕಾಚಾರ ಮಾಡಲು ಸಹಾಯಕವಾಗುತ್ತದೆ ಎಂದು ಟ್ರೋಲ್ ಮಾಡಿದ್ದರು.

    ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಹರ್ಷ ಭೋಗ್ಲೆ, ಆಟಗಾರರು ಯಾವ ಭಾಷೆಯಲ್ಲಿ ಮಾತನಾಡಲು ಇಷ್ಟಪಡುತ್ತಾರೆ ಆದೇ ಭಾಷೆಯಲ್ಲಿ ನಾನು ಅವರೊಂದಿಗೆ ಮಾತನಾಡುತ್ತೇನೆ. ಜಡೇಜಾ ಅವರನ್ನು ಕಳೆದ 10 ವರ್ಷಗಳಿಂದ ತಿಳಿದಿರುವ ಕಾರಣ ಅವರದ್ದೇ ಭಾಷೆಯಲ್ಲಿ ನಾನು ಮಾತನಾಡಿದೆ. ಆದರೆ ಅವರು ಇಂಗ್ಲೀಷ್‍ನಲ್ಲಿ ಉತ್ತಮ ಎಂದು ಸೂಚಿಸಿದ ಕೂಡಲೇ ನಾನು ಕೂಡ ಇಂಗ್ಲೀಷ್ ನಲ್ಲೇ ಮಾತನಾಡಿದೆ ಎಂದು ತಿಳಿಸಿದ್ದಾರೆ.

    https://twitter.com/sn_sumanth/status/1209053609502986240