Tag: Harsha

  • ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

    ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

    ಬಳ್ಳಾರಿ: ಶಿವಮೊಗ್ಗ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳ ಆಟಾಟೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರದ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಡಿಐಜಿ ಶೇಷಾ ಬಳ್ಳಾರಿ ಜೈಲಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಆರೋಪಿಗಳಾದ ಜಿಲಾನ್ ಹಾಗೂ ಸೈಯದ್ ಇಬ್ಬರೂ ಜೈಲಿನಲ್ಲಿರೋ ಹಳೆಯ ವಿಡಿಯೋ ವೈರಲ್ ಮಾಡುವುದಾಗಿ ಜೈಲಿನ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಸಿಬ್ಬಂದಿ ಜೊತೆ ಕಿರಿಕ್ ಮಾಡುತ್ತಾ ದಾಂಧಲೆ ಮಾಡುತ್ತಿದ್ದರು. ಈ ಕುರಿತು ವಿಡಿಯೋ ಸಮೇತವಾಗಿ ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು.  ಇದನ್ನೂ ಓದಿ: Chinnaswamy Stampede| ಕುಮಾರಸ್ವಾಮಿ ಸಿಡಿಸಿದ ಬಾಂಬ್‌ಗೆ ಗೋವಿಂದರಾಜ್ ತಲೆದಂಡ!

    ವರದಿ ಬೆನ್ನಲ್ಲೇ ಕಾರಾಗೃಹ ಇಲಾಖೆ ವರದಿ ಕೇಳಿದೆ. ಕೈದಿಗಳು ಯಾವ ವಿಡಿಯೋ ಇಟ್ಟುಕೊಂಡು ಕೈದಿಗಳು ಬ್ಲಾಕ್ ಮೇಲ್ ಮಾಡ್ತಿದ್ದಾರೆ? ಜೈಲು ಸಿಬ್ಬಂದಿ ಜೊತೆ ಕೈದಿಗಳು ಜಗಳವಾಡುತ್ತಿರುವ ವಿಡಿಯೋ ಹೊರಗೆ ಹೋಗಿದ್ದೇಗೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ಬಂದಿರುವ ಡಿಐಜಿ ಶೇಷಾ, ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದ ಆರೋಪಿಗಳಿಗೆ ಕ್ಲಾಸ್ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ಸರ್ಕಾರಕ್ಕೆ ಪತ್ರ – ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡದೇ ತೆರಳಿದ ಡಿಕೆಶಿ

    ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ
    ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ

    ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯ್ಯದ್ ಅವರನ್ನು ಕಳೆದ ತಿಂಗಳು ಧಾರವಾಡದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಕಿರಿಕ್‌ ಮಾಡುತ್ತಿರುವ ವಿಡಿಯೋ ಹೊರಬಂದಿತ್ತು. Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

    ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು ನೀವು ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಸಣ್ಣ ಪುಟ್ಟ ವಿಚಾರಕ್ಕೂ ಜೈಲು ಸಿಬ್ಬಂದಿಯನ್ನು ಆರೋಪಿಗಳು ನಿಂದಿಸುತ್ತಿದ್ದಾರೆ.

    ಆರೋಪಿಗಳು ಇದೇ ರೀತಿ ಕಿರಿಕ್ ಮಾಡಿ ಬೆಂಗಳೂರು, ಗುಲ್ಬರ್ಗ, ಧಾರವಾಡ ಜೈಲಿಗೆ ಹೋಗಿದ್ದರು. ಈಗ ಅದೇ ಚಾಳಿಯನ್ನು ಬಳ್ಳಾರಿ ಜೈಲಿನಲ್ಲೂ ಮುಂದುವರಿಸುತ್ತಿದ್ದಾರೆ.

  • ಜೈಲಿನಲ್ಲಿ ನಿತ್ಯ ಒಂದೊಂದು ಸೌಲಭ್ಯ ನೀಡುವಂತೆ ಹರ್ಷ ಕೊಲೆ ಆರೋಪಿಗಳು ಕಿರಿಕ್‌

    ಜೈಲಿನಲ್ಲಿ ನಿತ್ಯ ಒಂದೊಂದು ಸೌಲಭ್ಯ ನೀಡುವಂತೆ ಹರ್ಷ ಕೊಲೆ ಆರೋಪಿಗಳು ಕಿರಿಕ್‌

    – ಬಳ್ಳಾರಿ ಜೈಲಿನಲ್ಲಿರುವ ಜಿಲಾನ್, ಸೈಯ್ಯದ್ ನಿಹಾಲ್

    ಬಳ್ಳಾರಿ: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ (Harsha Muder Case)  ಆರೋಪಿಗಳು ಬಳ್ಳಾರಿ ಜೈಲಿನಲ್ಲಿ (Ballari Jail) ರಂಪಾಟ ಮಾಡುತ್ತಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯ್ಯದ್ ನಿಹಾಲ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಕಿರಿಕ್‌ ಮಾಡುತ್ತಿರುವ ವಿಡಿಯೋ ಈಗ ಲಭ್ಯವಾಗಿದೆ.

    ನಿತ್ಯ ಒಂದೊಂದು ಸೌಲಭ್ಯ ಕೇಳಿ ಜೈಲು ಸಿಬ್ಬಂದಿಗೆ ಧಮ್ಕಿ ಹಾಕುತ್ತಿದ್ದಾರೆ. ಜೈಲಿನಲ್ಲಿ ನಡೆದ ಹಳೆ ಘಟನೆಗಳ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳುತ್ತಿದ್ದಾರೆ. ನಮ್ಮನ್ನು ಸಾಮಾನ್ಯ ಕೈದಿಗಳಂತೆ ಟ್ರೀಟ್ ಮಾಡಿ ಪ್ರತ್ಯೇಕ ಕೊಠಡಿ ಕೊಡಿ, ವಿಶೇಷ ಸೌಲಭ್ಯ ನೀಡಿ ಎಂದು ಇಬ್ಬರು ಗಲಾಟೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಯೋಧರಿಂದಲೇ `ಆಪರೇಷನ್ ಸಿಂಧೂರ’ ಲೋಗೋ ವಿನ್ಯಾಸ

    ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ

    ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು ನೀವು ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಸಣ್ಣ ಪುಟ್ಟ ವಿಚಾರಕ್ಕೂ ಜೈಲು ಸಿಬ್ಬಂದಿಯನ್ನು ಆರೋಪಿಗಳು ನಿಂದಿಸುತ್ತಿದ್ದಾರೆ. ಇದನ್ನೂ ಓದಿ: ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

    ಆರೋಪಿಗಳು ಇದೇ ರೀತಿ ಕಿರಿಕ್ ಮಾಡಿ ಬೆಂಗಳೂರು, ಗುಲ್ಬರ್ಗ, ಧಾರವಾಡ ಜೈಲಿಗೆ ಹೋಗಿದ್ದರು. ಈಗ ಅದೇ ಚಾಳಿಯನ್ನು ಬಳ್ಳಾರಿ ಜೈಲಿನಲ್ಲೂ ಮುಂದುವರಿಸುತ್ತಿದ್ದಾರೆ.

  • Exclusive: ನೀಲಿ ಚಿತ್ರದಲ್ಲಿ ಆಕ್ಟ್‌ ಮಾಡ್ತೀಯಾ ಎಂದು ಕೇಳಿದ್ರಾ ಹರ್ಷ? ಸ್ಪಷ್ಟನೆ ನೀಡಿದ ನಟ

    Exclusive: ನೀಲಿ ಚಿತ್ರದಲ್ಲಿ ಆಕ್ಟ್‌ ಮಾಡ್ತೀಯಾ ಎಂದು ಕೇಳಿದ್ರಾ ಹರ್ಷ? ಸ್ಪಷ್ಟನೆ ನೀಡಿದ ನಟ

    ನ್ನಡದ ‘ಪೆಂಟಗನ್’ (Pentagon) ಚಿತ್ರದ ನಟಿ ತನಿಷಾ ಕುಪ್ಪಂಡ (Tanisha Kuppanda)  ಕಳೆದೆರೆಡು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಯುಟ್ಯೂಬರ್‌ಯೊಬ್ಬ ಬ್ಲೂಫಿಲ್ಮ್ ಮಾಡ್ತೀರಾ ಎಂದು ಕೇಳಿದ್ದಕ್ಕೆ ನಟಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ‘ರಾಜಹುಲಿ’ (Rajahuli) ನಟ ಹರ್ಷ (Harsha) ವಿರುದ್ಧ ತನಿಷಾ ಆರೋಪಿಸಿದ್ದರು. ಅಸಭ್ಯ ಸಂದೇಶ ಕಳುಹಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟಿದ್ದರು. ತನಿಷಾ ಮಾಡಿರುವ ಆರೋಪಕ್ಕೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ನಟ ಹರ್ಷ ಸ್ಪಷ್ಟನೆ ನೀಡಿದ್ದಾರೆ.

    ‘ಮಂಗಳ ಗೌರಿ’ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ತನಿಷಾ ಕುಪ್ಪಂಡ ಸದ್ಯ ‘ಪೆಂಟಗನ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ, ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದರು. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ತನಿಷಾ ಖಡಕ್ ಉತ್ತರ ನೀಡಿದ್ದರು. ಇದನ್ನೂ ಓದಿ: ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್

    ನಟ ಹರ್ಷ ಕೂಡ ನೀಲಿ ಸಿನಿಮಾ ಮಾಡ್ತೀರಾ ಎಂದು ಕೇಳಿದ್ದರು. ಅಸಭ್ಯ ಸಂದೇಶ ಕಳುಹಿಸಿದ್ದಾರೆ ಎಂದು ತನಿಷಾ ಆರೋಪಿಸಿದರು. ಈ ಬೆನ್ನಲ್ಲೇ ನಟ ಹರ್ಷ ಕೂಡ ತನಿಷಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮತ್ತು ತನಿಷಾ ಒಳ್ಳೆಯ ಸ್ನೇಹಿತರು. ನೀಲಿ ಚಿತ್ರದ ಬಗ್ಗೆ ಕೇಳಿದ್ದ ಯುಟ್ಯೂಬರ್ ವೈರಲ್ ವೀಡಿಯೋಗೆ ಪ್ರತಿಕ್ರಿಯಿಸಿ, ನಾನು ಸಂದೇಶ ಕಳಿಸಿದ್ದೇ ನಿಜ. ಆದರೆ ಯಾವುದೇ ಕೆಟ್ಟ ಆಲೋಚನೆಯಿಂದ ಅಲ್ಲ. ಬ್ಲೂಫಿಲ್ಮ್ ಮಾಡ್ತೀರಾ ಎಂದು ಆ ಯುಟ್ಯೂಬರ್ ಹೀಗ್ಯಾಕೆ ಕೇಳಿದ್ದರು ಎಂದು ಪ್ರಶ್ನೆ ಮಾಡುವ ರೀತಿಯಲ್ಲಿ ನಗುವಿನ ಇಮೋಜಿ ಕಳುಹಿಸಿದೆ ಅಷ್ಟೇ. ಆ ಸಂದೇಶವೇ ಈ ಗೊಂದಲಕ್ಕೆ ಕಾರಣವಾಗಿದೆ. ಅನ್ಯತಾ ಭಾವಿಸಬಾರದು ಎಂದು ಮತ್ತೆ ವಾಯ್ಸ್ ನೋಟ್ ಕಳುಹಿಸಿದ್ದೀನಿ. ಯುಟ್ಯೂಬರ್ ಯಾಕೆ ಹೀಗೆ ಪ್ರಶ್ನೆ ಮಾಡಿದ್ದರು ಎಂದು ಕೇಳಿದ್ದೀನಿ. ಅದು ಬಿಟ್ಟು ನೀಲಿ ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ ಎಂದು ನಾನು ಪ್ರಶ್ನೆ ಮಾಡಿಲ್ಲ. ಎಲ್ಲವೂ ನಾವು ಅರ್ಥ ಮಾಡಿಕೊಳ್ಳುವ ದೃಷ್ಟಿಕೋನದಲ್ಲಿದೆ ಎಂದು ನಟ ಹರ್ಷ ಸ್ಪಷ್ಟನೆ ನೀಡಿದ್ದಾರೆ.

    ಇನ್ನೂ ತನಿಷಾ ಅವರನ್ನು ಕೆಟ್ಟ ಆಲೋಚನೆಯಿಂದ ನಾನು ಸಂದೇಶ ಕಳುಹಿಸಿಲ್ಲ. ಇದೀಗ ಅವರ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ತನಿಷಾ ಅವರ ನಡೆ ಎಷ್ಟು ಸರಿ ಎಂದು ಹರ್ಷ ಪ್ರಶ್ನೆ ಮಾಡಿದ್ದಾರೆ. ನಟಿಯಾಗಿ ಬೋಲ್ಡ್ ಸಿನಿಮಾದಲ್ಲಿ ನಟಿಸಿದ ಮೇಲೆ ಬೋಲ್ಡ್ ಪ್ರಶ್ನೆಗಳನ್ನ ಕೂಡ ಎದುರಿಸಲು ರೆಡಿಯಾಗಿಬೇಕು ಎಂದು ಹರ್ಷ ಮಾತನಾಡಿದ್ದಾರೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

  • ಒಟಿಟಿಯಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ವೇದ’ ಹೊಸ ರೆಕಾರ್ಡ್

    ಒಟಿಟಿಯಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ವೇದ’ ಹೊಸ ರೆಕಾರ್ಡ್

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (ShivrajKumar) ಅಭಿನಯದ 125ನೇ ಸಿನಿಮಾ ‘ವೇದ’ (Veda) ಚಿತ್ರಮಂದಿರದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದು ಗೊತ್ತೇ ಇದೆ. ಚಿತ್ರಮಂದಿರದಲ್ಲಿ ಸೂಪರ್ ಸಕ್ಸಸ್ ಕಂಡ ಸಿನಿಮಾ ಫೆಬ್ರವರಿ 10ರಂದು ZEE5ನಲ್ಲಿ ಬಿಡುಗಡೆಗೊಂಡು ಇಲ್ಲಿಯೂ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಕೆಲವೇ ದಿನದಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡು ರೆಕಾರ್ಡ್ (Record) ಕ್ರಿಯೇಟ್ ಮಾಡಿದೆ. ಇದೇ ಖುಷಿಯಲ್ಲಿ ZEE5 ಸಂತೋಷ್ ಚಿತ್ರಮಂದಿರದಲ್ಲಿ ಸಂಭ್ರಮ ಆಚರಿಸಿದೆ.

    ಸಂತೋಷ್ ಚಿತ್ರಮಂದಿರದಲ್ಲಿ ‘ವೇದ’ ಚಿತ್ರದ ಶಿವಣ್ಣ ಕಟೌಟ್ ನಿಲ್ಲಿಸಿ ZEE5 ಸಂಭ್ರಮ ಆಚರಣೆ ಮಾಡಿದೆ. ಈ ಸಂಭ್ರಮಾಚರಣೆಯಲ್ಲಿ ದೊಡ್ಮನೆ ಅಭಿಮಾನಿಗಳು ಭಾಗಿಯಾಗಿ ಸಂತಸ ಪಟ್ಟಿದ್ದಾರೆ. ಒಟಿಟಿಯಲ್ಲಿ ಅತಿ ಕಡಿಮೆ ಅವಧಿಯಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡಿದ್ದು ZEE5 ನಲ್ಲಿ ದಾಖಲೆ ಬರೆದಿದೆ. ಈ ಮೂಲಕ ಚಿತ್ರಮಂದಿರದ ಜೊತೆಗೆ ZEE5 ಒಟಿಟಿಯಲ್ಲೂ ಸಿನಿಮಾ ಹೊಸ ದಾಖಲೆ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

    ‘ವೇದ’ ಸಿನಿಮಾ ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಸಾಕಷ್ಟು ನಿರೀಕ್ಷೆಯೊಂದಿಗೆ ಡಿಸೆಂಬರ್ 23ರಂದು ಬಿಡುಗಡೆಗೊಂಡಿತ್ತು. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾವಾಗಿರುವ ಈ ಚಿತ್ರ ಶಿವಣ್ಣ ಅಭಿನಯದ 125ನೇ ಸಿನಿಮಾ ಅನ್ನೋದು ಚಿತ್ರದ ವಿಶೇಷ.

    ಚಿತ್ರದಲ್ಲಿ ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೋಡಿ ಮಾಡಿದ್ದು, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.

  • ನಟ ಇಶಾನ್ ಹಿಂದೆ ಬಿದ್ದ ಕನ್ನಡದ ಸ್ಟಾರ್ ನಿರ್ದೇಶಕರು

    ನಟ ಇಶಾನ್ ಹಿಂದೆ ಬಿದ್ದ ಕನ್ನಡದ ಸ್ಟಾರ್ ನಿರ್ದೇಶಕರು

    ಪವನ್ ಒಡೆಯರ್ ಮತ್ತು ಇಶಾನ್ ಕಾಂಬಿನೇಶನ್ ನಲ್ಲಿ ಬರ್ತಿರುವ ‘ರೆಮೋ’ ಸಿನಿಮಾ ಸೌಂಡ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಜೋರಾಗಿದೆ. ಸೆಟ್ಟೇರಿದ ದಿನದಿಂದ ಸಖತ್ ಸುದ್ದಿಯಲ್ಲಿರುವ ಈ ಅದ್ದೂರಿ ಚಿತ್ರ ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಆದ್ರೆ ಸಿನಿಮಾ ಬಿಡುಗಡೆಗೂ ಮುನ್ನವೇ ನಾಯಕ ನಟ ಇಶಾನ್ ಗೆ ಸ್ಟಾರ್ ನಿರ್ದೇಶಕರಿಂದ ಆಫರ್ ಮೇಲೆ ಆಫರ್ ಬರ್ತಿದ್ದು, ‘ರೆಮೋ’ ನಂತರ ಇಂಡಸ್ಟ್ರಿಯಲ್ಲಿ ಫುಲ್ ಬ್ಯುಸಿಯಾಗಲಿದ್ದಾರೆ ಹ್ಯಾಂಡ್ಸಮ್ ಹಂಕ್.

    ಹೌದು, ‘ರೆಮೋ’ ಹಾಡು, ಟೀಸರ್, ಟ್ರೇಲರ್ ಎಲ್ಲವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದ್ರೆ ಅದಕ್ಕೂ ಮಿಗಿಲಾಗಿ ನಾಯಕ ನಟ ಇಶಾನ್ ನಟನೆ, ಲುಕ್, ಪರ್ಸನಾಲಿಟಿ, ಸ್ಕ್ರೀನ್ ಅಪಿಯರೆನ್ಸ್ ಎಲ್ಲವೂ ಪ್ರೇಕ್ಷಕರ ಜೊತೆಗೆ ಚಂದನವನದ ಸ್ಟಾರ್ ನಿರ್ದೇಶಕರನ್ನೂ ಇಂಪ್ರೆಸ್ ಮಾಡಿದೆ. ಇದ್ರಿಂದಾಗಿ ಇಶಾನ್ ಜೊತೆ ಸಿನಿಮಾ ಮಾಡಲು ಚಂದನವನದ ಖ್ಯಾತ ನಿರ್ದೇಶಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ:ಕೇಕ್‌ ಕತ್ತರಿಸಿ ಸಕ್ಸಸ್ ಆಚರಿಸಿದ ‌ʻಗಂಧದ ಗುಡಿʼ ಟೀಮ್

    ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಇಶಾನ್ ಜೊತೆ ಈಗಾಗಲೇ ಹೊಸ ಸಿನಿಮಾ ಘೋಷಿಸಿದ್ದಾರೆ. ಲೇಟೆಸ್ಟ್ ಸಮಾಚಾರ ಅಂದ್ರೆ ಭಜರಂಗಿ ಖ್ಯಾತಿಯ ಎ ಹರ್ಷ, ರ್ಯಾಂಬೋ ಖ್ಯಾತಿಯ ಅನಿಲ್ ಹಾಗೂ ಯುವ ರಾಜ್ ಕುಮಾರ್ ಮೊದಲ‌ ಸಿನಿಮಾ ಘೋಷಿಸಿದ್ದ ಪುನೀತ್ ರುದ್ರನಾಗ್ ಇಶಾನ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಬಗ್ಗೆ ನಾಯಕ ಇಶಾನ್ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದು, ಇಶಾನ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ರೆಮೋ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಇಶಾನ್ ಸಿನಿಮಾ ಬಿಡುಗಡೆಯ ನಂತರ ಹೊಸ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಲಿದ್ದಾರೆ.

    ರೆಮೋ ಬಿಡುಗಡೆಯ ಮುನ್ನವೇ ಇಷ್ಟೊಂದು ನಿರ್ದೇಶಕರನ್ನು ಇಂಪ್ರೆಸ್ ಮಾಡಿದ್ದಾರೆ ಅಂದ್ರೆ ಭವಿಷ್ಯದಲ್ಲಿ ಸ್ಯಾಂಡಲ್ ವುಡ್ ಅಂಗಳಕ್ಕೆ ಇಶಾನ್ ಒಬ್ಬ ಭರವಸೆಯ ನಾಯಕ ನಟನಾಗಿ ನಿಲ್ಲೋದ್ರಲ್ಲಿ ಡೌಟೇ ಇಲ್ಲ.

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗದಲ್ಲಿ ಅಹಿತಕರ ಘಟನೆ ಮರುಕಳಿಸಿರುವುದಕ್ಕೆ ಮುಸ್ಲಿಂ ಗೂಂಡಾಗಳು ಕಾರಣ: ರೇಣುಕಾಚಾರ್ಯ

    ಶಿವಮೊಗ್ಗದಲ್ಲಿ ಅಹಿತಕರ ಘಟನೆ ಮರುಕಳಿಸಿರುವುದಕ್ಕೆ ಮುಸ್ಲಿಂ ಗೂಂಡಾಗಳು ಕಾರಣ: ರೇಣುಕಾಚಾರ್ಯ

    ದಾವಣಗೆರೆ: ಪದೇ ಪದೇ ಶಿವಮೊಗ್ಗದಲ್ಲಿ ಅಹಿತಕರ ಘಟನೆ ಭಯಭೀತ ವಾತಾವರಣ ಮರುಕಳಿಸಿರುವುದಕ್ಕೆ ಮುಸ್ಲಿಂ ಗೂಂಡಾಗಳು ಕಾರಣವಾಗಿದ್ದು, ಇದಕ್ಕೆ ಕಾಂಗ್ರೆಸ್ (Congress) ಪ್ರಚೋದನೆ ಮಾಡುವುದರಿಂದ ಇಂತಹ ಘಟನೆಗಳಾಗುತ್ತಿವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ (Renukacharya) ಕಿಡಿಕಾರಿದರು.

    ಶಿವಮೊಗ್ಗದಲ್ಲಿ (Shivamogga) ಹರ್ಷನ (Harsha) ಕುಟುಂಬಕ್ಕೆ ಕೊಲೆ ಬೆದರಿಗೆ ಹಾಗೂ ಬೈಕ್‍ನಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಿರುವ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಪ್ರತಿಕ್ರಿಯಿಸಿದರು. ಕೆಲ ಮುಸ್ಲಿಂ ಗೂಂಡಾಗಳಿಂದ ಈ ರೀತಿ ಘಟನೆಗಳು ನಡೆಯುತ್ತಿದ್ದು, ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ. ಅದರಲ್ಲಿ ಕೆಲ ಕಿಡಿಗೇಡಿಗಳು ಈ ರೀತಿ ಮಾಡುತ್ತಾರೆ. ಅಲ್ಲದೇ ಶಿವಮೊಗ್ಗದಲ್ಲಿ ಮುಸ್ಲಿಂ ಗೂಂಡಾಗಳು ಬಹಿರಂಗವಾಗಿ ತಲವಾರುಗಳನ್ನು ಹಿಡಿದು ಬೈಕ್ ಮೇಲೆ ಓಡಾಡುತ್ತಿದ್ದಾರೆ. ಇದು ಕಾಂಗ್ರೆಸ್‍ನವರ ಪ್ರಚೋದನೆಯಿಂದ ಈ ಗೂಂಡಾಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂದು ತಿಳಿಸಿದರು.

    ಎಸ್ಸಿ-ಎಸ್ಟಿಗಳು ಈಗ ಕಾಂಗ್ರೆಸ್ ಜೊತೆಗಿಲ್ಲ. ಮುಸ್ಲಿಂ ವೋಟ್ ಬ್ಯಾಂಕ್ ಅಷ್ಟೇ ಅವರ ಜೊತೆಗಿದೆ. ಅವರನ್ನು ಓಲೈಕೆ ಮಾಡಲು ಅವರು ಏನು ಮಾಡಿದರು ಬೆಂಬಲಿಸಿಕೊಂಡು ಬಂದಿದ್ದಾರೆ. ಪಿಎಫ್‍ಐ ಸೇರಿದಂತೆ 9 ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಿದೆ. ಇದರಿಂದ ಅವರು ತಲೆಹರಟೆ ಮಾಡುತ್ತಿದ್ದಾರೆ. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅವರನ್ನು ಬಗ್ಗು ಬಡಿಯುತ್ತದೆ ಎಂದರು.

    ಉಡುಪಿ (Udupi), ಶಿವಮೊಗ್ಗ, ಮಂಗಳೂರಲ್ಲಿ (Mangaluru) ಹಿಂದೂ ಕಾರ್ಯಕರ್ತರು ಭಯಗೊಂಡಿದ್ದಾರೆಂದು ಆ ರೀತಿ ಮಾಡುತ್ತಿದ್ದಾರೆ. ಎಲ್ಲಾ ಮುಸ್ಲಿಮರು ಆ ರೀತಿ ಇಲ್ಲ ಕೆಲ ದೇಶದ್ರೋಹಿ ಮುಸ್ಲಿಮರು ಈ ರೀತಿ ಮಾಡುತ್ತಿದ್ದಾರೆ. ಅವರನ್ನು ನಮ್ಮ ಸರ್ಕಾರ ಮಟ್ಟ ಹಾಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ

    ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ

    ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸೀಗೆಹಟ್ಟಿಯ ಹಿಂದೂ ಕಾರ್ಯಕರ್ತ ಮೃತ ಹರ್ಷ (Harsha) ಕುಟುಂಬಸ್ಥರಿಗೆ ಬೆದರಿಕೆ ಬಂದಿದೆ.

    ಸೀಗೆಹಟ್ಟಿಯ ನಿವಾಸ, ರವಿ ವರ್ಮ ಬೀದಿ, ಕೆ.ಆರ್ ಪುರಂ ರಸ್ತೆ ಮುಂತಾದೆಡೆ 2 ಬೈಕ್‍ಗಳಲ್ಲಿ ಬಂದ 6 ಮಂದಿ ಮುಸ್ಲಿಂ ಯುವಕರು ಮಚ್ಚು-ಲಾಂಗ್ ಹಿಡಿದು ಭಯ ಹುಟ್ಟಿಸಿದ್ದಾರೆ. ಮುಸ್ಲಿಂ ಪರ ಘೋಷಣೆ ಕೂಗುತ್ತಾ, ಲಾಂಗ್ ಬೀಸಿದ್ದಾರೆ.

    ಮತ್ತೊಂದೆಡೆ ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿದ್ದು, ಪ್ರಕಾಶ್ (25) ಎಂಬಾತ ಗಾಯಗೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ದುಷ್ಕರ್ಮಿಗಳಿಂದ ಭಯ ಹುಟ್ಟಿಸೋ ಪ್ರಕರಣ- ನಮಗೆ ಸೂಕ್ತ ರಕ್ಷಣೆ ಬೇಕು: ಹರ್ಷ ಸಹೋದರಿ

    ನಿನ್ನೆಯಷ್ಟೇ ಆಜಾದ್ ನಗರದಲ್ಲಿ ಕಾರು ಜಖಂ ಪ್ರಕರಣಕ್ಕೆ ಸಂಬಂಧಿಸಿ ಹರ್ಷ ಸಹೋದರಿ ಅಶ್ವಿನಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಕಲ್ಲಪ್ಪನಕೇರಿಯಿಂದ ಅಜಾನ್ ನಗರಕ್ಕೆ ಬೈಕ್‍ನಲ್ಲಿ ಬಂದ 10 ರಿಂದ 15 ಜನರ ಗುಂಪು ಸಯ್ಯದ್ ಫರ್ವೀಜ್ ಎಂಬವರಿಗೆ ಸೇರಿದ್ದ ಇನ್ನೋವಾ ಕಾರನ್ನು ಜಖಂ ಮಾಡಿದ್ದರು. ಈ ವೇಳೆ ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಹಾನಿಯಾಗಿತ್ತು. ಅಷ್ಟೇ ಅಲ್ಲದೇ ಆ ಗುಂಪು ಜೈ ಶ್ರೀರಾಮ್ ಎಂದು ಕೂಗುತ್ತಾ ಕೇಸರಿ ಬಾವುಟ ಹಿಡಿದುಕೊಂಡಿತ್ತು.

    ಘಟನೆಗೆ ಸಂಬಂಧಿಸಿ ಹರ್ಷನ ಸಹೋದರಿ ಅಶ್ವಿನಿ ಸೇರಿ 10-15 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಫೆ.20ರಂದು ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೀಡಾಗಿದ್ದ.

    Live Tv
    [brid partner=56869869 player=32851 video=960834 autoplay=true]

  • ದುಷ್ಕರ್ಮಿಗಳಿಂದ ಭಯ ಹುಟ್ಟಿಸೋ ಪ್ರಕರಣ- ನಮಗೆ ಸೂಕ್ತ ರಕ್ಷಣೆ ಬೇಕು: ಹರ್ಷ ಸಹೋದರಿ

    ದುಷ್ಕರ್ಮಿಗಳಿಂದ ಭಯ ಹುಟ್ಟಿಸೋ ಪ್ರಕರಣ- ನಮಗೆ ಸೂಕ್ತ ರಕ್ಷಣೆ ಬೇಕು: ಹರ್ಷ ಸಹೋದರಿ

    ಶಿವಮೊಗ್ಗ: ದುಷ್ಕರ್ಮಿಗಳಿಂದ ಭಯ ಹುಟ್ಟಿಸುವ ಪ್ರಕರಣ ಹಿನ್ನೆಲೆಯಲ್ಲಿ ಇದೀಗ ನಮಗೆ ಸೂಕ್ತ ರಕ್ಷಣೆ ಬೇಕು ಎಂದು ಹಿಂದೂ ಕಾರ್ಯಕರ್ತ ದಿ. ಹರ್ಷ (Harsha) ಸಹೋದರಿ ಅಶ್ವಿನಿ (Ashwini) ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಹರ್ಷ ತಾಯಿ ಪದ್ಮಾವತಿ ಹಾಗೂ ಹರ್ಷ ಸಹೋದರಿ ಅಶ್ವಿನಿ ಮಾತನಾಡಿ, ರಾತ್ರಿ 11.15 ರ ಸಮಯಕ್ಕೆ 3-4 ಬೈಕ್ ನಲ್ಲಿ ಯುವಕರು ಬಂದಿದ್ದರು. ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದರು ಎಂದು ಹೇಳಿದರು.

    ಹರ್ಷನ ತೆಗೆದಿದ್ದು ಸಾಲದಾ, ನಿಮ್ಮನ್ನೂ ತೆಗೆಯಬೇಕಾ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವಕರ ಗುಂಪು ಅವಾಜ್ ಹಾಕಿದ್ದಾರೆ. ಇನ್ನು ಎಷ್ಟು ಮಂದಿ ಹಿಂದೂ ಯುವಕರ ಬಲಿಯಾಗಬೇಕು..?. ನನ್ನ ಸಹೋದರ ಹರ್ಷ ಹೋದ, ಪ್ರವೀಣ್ ನೆಟ್ಟಾರ್ (Praveen Nettar) ಹೋದ. ಆದರೂ ಅವರ ದಾಹ ಇನ್ನೂ ತೀರಿಲ್ಲ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಮಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR

    ಸೀಗೆಹಟ್ಟಿಯ ನಿವಾಸ, ರವಿ ವರ್ಮ ಬೀದಿ, ಕೆ.ಆರ್ ಪುರಂ ರಸ್ತೆ ಮುಂತಾದೆಡೆ 2 ಬೈಕ್‍ಗಳಲ್ಲಿ ಬಂದ 6 ಮಂದಿ ಮುಸ್ಲಿಂ ಯುವಕರು ಮಚ್ಚು-ಲಾಂಗ್ ಹಿಡಿದು ಭಯ ಹುಟ್ಟಿಸಿದ್ದಾರೆ. ಮುಸ್ಲಿಂ ಪರ ಘೋಷಣೆ ಕೂಗುತ್ತಾ, ಲಾಂಗ್ ಬೀಸಿದ್ದಾರೆ. ಮತ್ತೊಂದೆಡೆ ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿದ್ದು, ಪ್ರಕಾಶ್ (25) ಎಂಬಾತ ಗಾಯಗೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಘಟನೆಗೆ ಸಂಬಂಧಿಸಿ ಹರ್ಷನ ಸಹೋದರಿ ಅಶ್ವಿನಿ ಸೇರಿ 10-15 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಫೆ.20ರಂದು ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೀಡಾಗಿದ್ದ.

    Live Tv
    [brid partner=56869869 player=32851 video=960834 autoplay=true]

  • ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR

    ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR

    ಶಿವಮೊಗ್ಗ: ಆಜಾದ್ ನಗರದಲ್ಲಿ ಕಾರು (Car) ಜಖಂ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ (Shivamogga) ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹರ್ಷ (Harsha) ಸಹೋದರಿ ಅಶ್ವಿನಿ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.

    ಕಲ್ಲಪ್ಪನಕೇರಿಯಿಂದ ಅಜಾನ್ ನಗರಕ್ಕೆ ಬೈಕ್‍ನಲ್ಲಿ (Bike) ಬಂದ 10ರಿಂದ 15 ಜನರ ಗುಂಪು ಸಯ್ಯದ್ ಫರ್ವೀಜ್ ಎಂಬವರಿಗೆ ಸೇರಿದ್ದ ಇನ್ನೋವಾ ಕಾರನ್ನು ಜಖಂ ಮಾಡಿದ್ದಾರೆ. ಈ ವೇಳೆ ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಹಾನಿಯಾಗಿದೆ. ಅಷ್ಟೇ ಅಲ್ಲದೇ ಆ ಗುಂಪು ಜೈ ಶ್ರೀರಾಮ್ ಎಂದು ಕೂಗುತ್ತಾ ಕೇಸರಿ ಬಾವುಟ ಹಿಡಿದುಕೊಂಡಿತ್ತು ಎಂದು ಸಯ್ಯದ್ ಫರ್ವೀಜ್ ಆರೋಪಿಸಿದ್ದಾರೆ. ಇದನ್ನೂ ಓದಿ: 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್- ಓರ್ವ ಮಹಿಳೆ ಸೇರಿ ಮೂವರು ಅರೆಸ್ಟ್

    ಘಟನೆಗೆ ಸಂಬಂಧಿಸಿ ಹರ್ಷನ ಸಹೋದರಿ ಅಶ್ವಿನಿ ಸೇರಿ 10-15 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಫೆ.20ರಂದು ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೀಡಾಗಿದ್ದ. ಇದನ್ನೂ ಓದಿ: ಮೊಬೈಲ್‍ ನೋಡ್ತಿದ್ದಕ್ಕೆ ಗದರಿದ ತಾಯಿ – ಮನನೊಂದು ನೇಣಿಗೆ ಶರಣಾದ ಮಗಳು

    Live Tv
    [brid partner=56869869 player=32851 video=960834 autoplay=true]

  • ಶಿವಣ್ಣ ಅಭಿಮಾನಿಗಳಿಗೆ ಗುಡ್‌ ನ್ಯೂಸ್: `ವೇದ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಶಿವಣ್ಣ ಅಭಿಮಾನಿಗಳಿಗೆ ಗುಡ್‌ ನ್ಯೂಸ್: `ವೇದ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    `ಭಜರಂಗಿ 2′(Bhajarangi 2) ಚಿತ್ರದ ನಂತರ ಮತ್ತೆ ಎ.ಹರ್ಷ ಮತ್ತು ಶಿವರಾಜ್‌ಕುಮಾರ್ (Shivarajkumar)  ಕಾಂಬಿನೇಷನ್‌ನಲ್ಲಿ `ವೇದ’ (Vedha) ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಮೂಲಕ  ತಮ್ಮ ಅಭಿಮಾನಿಗಳಿಗೆ ಶಿವಣ್ಣ ಮತ್ತು ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ವೇದ’ ಸಿನಿಮಾದ ಡೇಟ್ ರಿವೀಲ್ ಮಾಡಿದ್ದಾರೆ.

    ಎ.ಹರ್ಷ (A. Harsha) ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ `ವಜ್ರಕಾಯ’, `ಭಜರಂಗಿ’, `ಭಜರಂಗಿ 2′, ಸಿನಿಮಾಗಳು ಚಿತ್ರಮಂದಿರದಲ್ಲಿ ಕಮಾಲ್ ಮಾಡಿತ್ತು. ಇದೀಗ `ವೇದ’ ಚಿತ್ರದ ಮೂಲಕ ಹೈಪ್ ಕ್ರಿಯೇಟ್ ಮಾಡಲು ಮುಂದಾಗಿದ್ದಾರೆ. ಕ್ರಿಸ್ಮಸ್ ಹಬ್ಬದ ವೇಳೆ ಶಿವಣ್ಣ ವೇದವತಾರದಲ್ಲಿ ಬರಲು ಸಜ್ಜಾಗಿದ್ದಾರೆ. ಡಿಸೆಂಬರ್ 23ಕ್ಕೆ ಸಿಲ್ವರ್ ಸ್ಕ್ರೀನ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಮದುವೆ ಸಂಭ್ರಮದಲ್ಲಿ ಕನ್ನಡದ `ಶಕೀಲಾ’ ನಟಿ ರಿಚಾ ಚಡ್ಡಾ: ಫೋಟೋ ವೈರಲ್

     

    View this post on Instagram

     

    A post shared by A Harsha (@nimmaaharsha)

    ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ಗಾನವಿ ನಟಿಸಿದ್ದಾರೆ. ನಟಿ ಶ್ವೇತಾ ಚೆಂಗಪ್ಪ, ಉಮಾಶ್ರೀ, ಜಗಪ್ಪ, ರಘು ಶಿವಮೊಗ್ಗ, ವೀಣಾ ಪೊನ್ನಪ್ಪ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ. ಇನ್ನು 1960ರ ನೈಜ ಕಥೆಯನ್ನ ಹೇಳಲು  ಭಿನ್ನ ಅವತಾರದ ಮೂಲಕ ರಂಜಿಸಲು ಬರುತ್ತಿರುವ ಶಿವಣ್ಣನ ಹೊಸ ಅವತಾರ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]