Tag: Harsh Vardhan

  • ‘ಇನ್ ಕಾರ್’ ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ರಿತಿಕಾ ಸಿಂಗ್

    ‘ಇನ್ ಕಾರ್’ ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ರಿತಿಕಾ ಸಿಂಗ್

    ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ರಿತಿಕಾ ಸಿಂಗ್ (Ritika Singh) ನಟಿಸಿರುವ ’ಇನ್ ಕಾರ್’ (In Car) ಪ್ಯಾನ್ ಇಂಡಿಯಾ ಚಿತ್ರವು ಹರಿಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಂತ ನೈಜ ಅಂಶಗಳನ್ನು ಆರಿಸಿಕೊಂಡು ಅದನ್ನು ಚಿತ್ರರೂಪಕ್ಕೆ ತರಲಾಗಿದೆ. ರಚನೆ, ಚಿತ್ರಕಥೆ ಮತ್ತು ನಿರ್ದೇಶನ ಹರ್ಷವರ್ಧನ್ (Harsh Vardhan) ಅವರದ್ದು. ಅಂಜುಮ್‌ ಖುರೇಶಿ ಹಾಗೂ ಸಾಜಿದ್‌ ಖುರೇಶಿ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

    ಸಸ್ಪೆನ್ಸ್, ಥ್ರಿಲ್ಲರ್ ಕಥೆಯು ಒಂದು ದಿನದಲ್ಲಿ ನಡೆಯುತ್ತದೆ. ಕಥಾನಾಯಕಿ ಮುಗ್ದೆ 23 ವಯಸ್ಸಿನ ಸಾಕ್ಷಿ ಗುಲಾಟಿ ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿರುವಾಗ, ಸೋದರರಾದ ರಿಚ್ಚಿ, ಯಶ್ ಹಾಗೂ ಈತನ ಮಾಮ ಕಾರೊಂದರಲ್ಲಿ ಈಕೆಯನ್ನು ಅಪಹರಿಸುತ್ತಾರೆ. ಈಗಾಗಲೇ ಮುತ್ಸದ್ದಿ ಬ್ರಿಜೇಶ್ ಚಲಾಯಿಸುತ್ತಿದ್ದ ಆ ಕಾರನ್ನು ಹೈಜಾಕ್ ಮಾಡಿದ್ದು, ಕೊಲೆ ಕೇಸ್‌ನಲ್ಲಿ ಅಪರಾಧಿಯಾಗಿರುವ ರಿಚ್ಚಿಯನ್ನು ಪೋಲೀಸರಿಂದ ಮರೆಮಾಚಲು ವಾಹನವನ್ನು ಬಳಸಿಕೊಂಡಿರುತ್ತಾರೆ. ಇದನ್ನೂ ಓದಿ: ಸಂಬಂಧಿಕರ ಮದುವೆಯಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್

    ಆಕೆ ದುರಳರಿಂದ ರಕ್ಷಿಸಿಕೊಳ್ಳಲು ಎರಡು ಗಂಟೆ ಸಮಯವಿರುತ್ತದೆ. ಇಲ್ಲದಿದ್ದಲ್ಲಿ ಪಾಣಿಪತ್ ಬಳಿ ಇರುವ ಸುಟ್ಟುಹೋದ ಕಾರ್ಖಾನೆಯಲ್ಲಿ ಅತ್ಯಾಚಾರವೆಸಗಿ ನಂತರ ಸಾಯಿಸಲು ಸಂಚು ರೂಪಿಸಿರುತ್ತಾರೆ. ಎಲ್ಲರೂ ಸುರಕ್ಷಿತ ಸ್ಥಳ ತಲುಪಿದಾಗ ಇವಳನ್ನು ಏನು ಮಾಡುವುದೆಂದು ಚರ್ಚೆ ನಡೆಸುತ್ತಾರೆ. ಹಾಗೆಯೇ ಚಿತ್ರದಲ್ಲಿ ಮಹಿಳೆಯನ್ನು ಒಂದು ವಸ್ತುವಾಗಿ ತೋರಿಸಲಾಗಿದೆ. ರಿಚ್ಚಿ ತನ್ನ ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದರಿಂದ ವ್ಯಕ್ತಿಯನ್ನು ಕೊಲೆ ಮಾಡಲು ಪರಾರಿಯಾಗಿರುತ್ತಾನೆ. ಪುರುಷರು ಮಹಿಳೆಯೊಂದಿಗಿನ ಅವರ ಸಂಬಂಧವನ್ನು ಅವಲಂಬಿಸಿದಾಗ ಹೇಗೆ ಕುರುಡರಾಗುತ್ತಾರೆ. ಇದೇ ಸಮಯದಲ್ಲಿ ಅವಳು ಇವರಿಂದ ತಪ್ಪಿಸಿಕೊಳ್ಳಲು ತನ್ನದೆ ಮಾರ್ಗಗಳನ್ನು ಕಂಡುಕೊಳ್ಳುತ್ತಾಳೆ. ಸಾಕ್ಷಿ ನರಕದಿಂದ ಬದುಕಿ ಬರುತ್ತಾಳಾ ಎನ್ನುವ ಕುತೂಹಲಕಾರಿ ಅಂಶಗಳು ಇದರಲ್ಲಿದೆ ಎನ್ನುತ್ತಾರೆ ನಿರ್ದೇಶಕರು.  ಈ ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಸಿಕೆ ಕುರಿತು ಟೀಕಿಸುವ ಕಾಂಗ್ರೆಸ್ ನಿಮ್ಮ ಸೂಚನೆಯನ್ನು ಪಾಲಿಸಲಿ – ಮನಮೋಹನ್ ಸಿಂಗ್‍ಗೆ ಹರ್ಷವರ್ಧನ್ ಪತ್ರ

    ಲಸಿಕೆ ಕುರಿತು ಟೀಕಿಸುವ ಕಾಂಗ್ರೆಸ್ ನಿಮ್ಮ ಸೂಚನೆಯನ್ನು ಪಾಲಿಸಲಿ – ಮನಮೋಹನ್ ಸಿಂಗ್‍ಗೆ ಹರ್ಷವರ್ಧನ್ ಪತ್ರ

    ನವದೆಹಲಿ: ಲಸಿಕೆ ಕುರಿತು ಟೀಕಿಸುವ ಕಾಂಗ್ರೆಸ್ ನಿಮ್ಮ ಸೂಚನೆಯನ್ನು ಪಾಲಿಸಲಿ ಎಂದು ಮನಮೋಹನ್ ಸಿಂಗ್‍ಗೆ ಹರ್ಷವರ್ಧನ್ ಪತ್ರ ಬರೆದಿದ್ದಾರೆ.

    ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರದ ಕೊರೊನಾ ನಿರ್ವಹಣೆಯ ಕುರಿತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಮರು ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು, ನೀವು ಮೊದಲು ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಿಗೆ ಮೊದಲು ಲಸಿಕೆ ಪಡೆಯುವಂತೆ ಸಲಹೆ ನೀಡಿ, ಲಸಿಕೆ ಕುರಿತು ಟೀಕಿಸುವುದನ್ನು ಕಾಂಗ್ರೆಸ್ ಇನ್ನು ಕೂಡ ಬಿಟ್ಟಿಲ್ಲ. ಅವರಿಗೆ ಸರಿಯಾಗಿ ಸಲಹೆ ನೀಡಿ ಎಂದು ಹೇಳಿದ್ದಾರೆ.

    ಮನಮೋಹನ್ ಸಿಂಗ್ ಅವರಿಗೆ ಪತ್ರಬರೆದು ಅದನ್ನು ಟ್ವಿಟ್ಟರ್‍ ನಲ್ಲಿ ಪೋಸ್ಟ್ ಮಾಡಿರುವ ಹರ್ಷವರ್ಧನ್ ಅವರು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು, ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸುವ ಬದಲು ಲಸಿಕೆ ಬಗ್ಗೆ ಅನುಮಾನ ಪಡುವುದರಲ್ಲಿ ಕಾಲ ಕಳೆಯುತ್ತಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವವನ್ನು ಮನಮೋಹನ್ ಸಿಂಗ್ ಅವರು ಅರ್ಥಮಾಡಿಕೊಂಡಿರುವುದು ಸ್ವಾಗತಾರ್ಹ. ಆದರೆ ಇವರು ಇತರ ಕಾಂಗ್ರೆಸ್ ನಾಯಕರಿಗು ಅರ್ಥ ಮಾಡಿಸ ಬೇಕಾಗಿದೆ. ಕೆಲ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ಹಿರಿಯ ನಾಗರಿಕರು, ಮುಂಚೂಣಿ ಕಾರ್ಯಕರ್ತರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕೊಡಲಿಲ್ಲ ಎಂದು ಟೀಕಿಸಿದ್ದಾರೆ.

    ನೀವು ಕೊಟ್ಟಿರುವ ಅಮೂಲ್ಯವಾದ ಸಲಹೆಗಳನ್ನು ನಿಮ್ಮದೇ ಪಕ್ಷದವರಾದ ಕಾಂಗ್ರೆಸ್ ಮುಖಂಡರು ಪಾಲಿಸಿದರೆ ಅದು ಒಂದು ಇತಿಹಾಸದ ಭಾಗವಾಗಲಿದೆ. ನೀವು ಮೋದಿ ಅವರಿಗೆ ಪತ್ರ ಬರೆದು ವಾಕ್ಸಿನೇಷನ್ ಹೆಚ್ಚಳ ಸೇರಿದಂತೆ ಕೋವಿಡ್-19 ಬಿಕ್ಕಟ್ಟು ಹೋರಾಟದದ ಕುರಿತು ಹಲವು ಸಲಹೆ ನೀಡಿದ್ದೀರಿ. ಇದು ಒಳ್ಳೆಯದು. ಆದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮೊದಲು ನೀವು ನೀಡಿರುವ ಸಲಹೆಯನ್ನು ಪಾಲನೆ ಮಾಡುವಂತೆ ಮಾಡಿ. ಎಂದು ತಿಳಿಸಿದ್ದಾರೆ.

  • 147 ಜಿಲ್ಲೆಗಳಲ್ಲಿ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ: ಹರ್ಷವರ್ಧನ್

    147 ಜಿಲ್ಲೆಗಳಲ್ಲಿ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ: ಹರ್ಷವರ್ಧನ್

    ನವದೆಹಲಿ: 147 ತಾಲೂಕುಗಳಲ್ಲಿ ಕಳೆದ 7 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ ಎಂಬ ಸಂತಸದ ಸುದ್ದಿಯನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

    ಉನ್ನತ ಮಟ್ಟದ ಮಂತ್ರಿಗಳ ಜೊತೆಗಿನ 23ನೇ ಸಭೆಯಲ್ಲಿ ಭಾಗಿಯಾಗಿ ಮಾತಾನಾಡಿದ ಸಚಿವರು, ದೇಶದಲ್ಲಿರುವ 147 ತಾಲೂಕುಗಳಲ್ಲಿ ಕಳೆದ 7 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಹಾಗೆ 18 ತಾಲೂಕುಗಳಲ್ಲಿ 14 ದಿನಗಳಿಂದ, 6 ತಾಲೂಕುಗಳಲ್ಲಿ 21 ದಿನಗಳಿಂದ ಮತ್ತು 21 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ದಾಖಲಾಗದೆ ಇರುವುದು ಒಳ್ಳೆಯ ಬೆಳವಣಿಗೆ ಎಂದರು.

    ಇನ್ನೂ ಕೊರೊನಾ ಸಂದರ್ಭದಲ್ಲಿ ದೇಶದ ಜನರು ಎಲ್ಲಾ ರೀತಿಯಿಂದ ಈ ರೋಗದ ವಿರುದ್ಧ ಹೋರಾಡಿ ಮುಕ್ತಿ ಹೊಂದುತ್ತಿದ್ದು, ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಶೇ.1.44 ರಷ್ಟಿದೆ. 1 ಕೋಟಿ 3 ಲಕ್ಷದ 73 ಸಾವಿರದ 606ಜನ ಕೊರೊನಾ ಗುಣಮುಖರಾಗಿದ್ದಾರೆ. ನಮ್ಮ ದೇಶದಲ್ಲಿ ಗುಣಮುಖರಾದವರ ಸಂಖ್ಯೆ ಶೇ.97 ರಷ್ಟಿದೆ.

    ದೇಶದಲ್ಲಿ ಈಗಾಗಲೇ 15,473 ಕೊರೊನಾ ಆಸ್ಪತ್ರೆಯನ್ನು ತೆರೆದು ಆರೋಗ್ಯ ಸೇವೆಯನ್ನು ನೀಡಿದ್ದೇವೆ. ಇದರೊಂದಿಗೆ ಕೊರೊನಾ ಆರೈಕೆ ಕೇಂದ್ರ ಮತ್ತು 19 ಲಕ್ಷದ 714 ಬೆಡ್ ಹಾಗೂ 12 ಸಾವಿರದ 673 ಕ್ವಾರಂಟೈನ್ ಸೆಂಟರ್ ಗಳನ್ನು ಸ್ಥಾಪಿಸಿದ್ದೇವೆ ಎಂದು ವರದಿ ನೀಡಿದರು.

    ಕೊರೊನಾ ಲಸಿಕೆಯನ್ನು ಈಗಾಗಲೇ 42,674 ಕೇಂದ್ರಗಳಲ್ಲಿ ದೇಶದಾದ್ಯಂತ ನೀಡಲಾಗಿದ್ದು, 23 ಲಕ್ಷದ 55 ಸಾವಿರ್ 979 ಜನರಿಗೆ ಕೊರೊನಾ ಲಸಿಕೆಯನ್ನು ಕೊಡಲಾಗಿದೆ. 3 ಲಕ್ಷದ 26 ಸಾವಿರದ 499 ಜನ ಕೊರೊನಾ ವಾರಿಯರ್ಸ್ ಗಳಿಗೂ ಲಸಿಕೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

  • ದೇಶಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ಉಚಿತ: ಹರ್ಷವರ್ಧನ್

    ದೇಶಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ಉಚಿತ: ಹರ್ಷವರ್ಧನ್

    ನವದೆಹಲಿ: ದೇಶಾದ್ಯಂತ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ವ್ಯಾಕ್ಸಿನ್ ಹಂಚಿಕೆ ಕುರಿತು ಡ್ರೈ ರನ್ ನಡೆಯುತ್ತಿದ್ದು, ದೇಶಾದ್ಯಂತ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಘೋಷಿಸಿದ್ದಾರೆ.

    ನಗರದ ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿನ ಡ್ರೈ ರನ್ ವೀಕ್ಷಿಸಿದ ಸಚಿವರು, ಲಸಿಕೆ ಪರಿಣಾಮ ಹಾಗೂ ಸುರಕ್ಷತೆ ಬಗ್ಗೆ ಭರವಸೆ ನೀಡಿದರು. ಅಲ್ಲದೆ ಲಸಿಕೆ ವಿರೋಧಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

    ಲಸಿಕೆ ದೆಹಲಿಯಲ್ಲಿ ಉಚಿತವಾಗಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ದೆಹಲಿಯಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಸಿಗಲಿದೆ ಎಂದು ತಿಳಿಸಿದರು.

    ಟ್ವೀಟ್‍ನಲ್ಲಿ ಈ ವಿಡಿಯೋವನ್ನು ಹರ್ಷವರ್ಧನ್ ಅವರು ಹಂಚಿಕೊಂಡಿದ್ದು, ದೇಶಾದ್ಯಂತ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲಾಗುವುದು. ಆರಂಭದಲ್ಲಿ 1 ಕೋಟಿ ಆರೋಗ್ಯ ಸಿಬ್ಬಂದಿ, 2 ಕೋಟಿ ಫ್ರಂಟ್‍ಲೈನ್ ವರ್ಕರ್ಸ್ ಗೆ ಲಸಿಕೆ ನೀಡಲಾಗುವುದು. ಜುಲೈ ವೇಳೆಗೆ ಅಗತ್ಯವಿರುವ 27 ಕೋಟಿ ಜನರಿಗೆ ಲಸಿಕೆ ನೀಡುವ ಕುರಿತ ನಿರ್ಧಾರವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

    ಇದೀಗ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನಡೆಯುತ್ತಿದ್ದು, ಯೋಜನೆ ಹಾಗೂ ಅನುಷ್ಠಾನದ ನಡುವಿನ ಸಂಪರ್ಕಗಳನ್ನು ಪರೀಕ್ಷಿಸಿ ಸವಾಲುಗಳನ್ನು ಗುರುತಿಸಲಾಗುತ್ತಿದೆ. ಈ ಹಿಂದೆ ನಾಲ್ಕು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಡ್ರೈ ರನ್ ನಡೆಸಲಾಗಿತ್ತು. ಬಳಿಕ ತಜ್ಞರ ವರದಿಯನ್ನು ಆಧರಿಸಿ ಇದೀಗ ಎಲ್ಲ ರಾಜ್ಯಗಳಲ್ಲಿ ಡ್ರೈ ರನ್ ನಡೆಸಲಾಗುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದರು.

  • 3-4 ತಿಂಗಳಿನಲ್ಲಿ ಲಸಿಕೆ ಲಭ್ಯ, ನನಗೆ ವಿಶ್ವಾಸವಿದೆ – ಹರ್ಷವರ್ಧನ್

    3-4 ತಿಂಗಳಿನಲ್ಲಿ ಲಸಿಕೆ ಲಭ್ಯ, ನನಗೆ ವಿಶ್ವಾಸವಿದೆ – ಹರ್ಷವರ್ಧನ್

    ನವದೆಹಲಿ: ಇನ್ನು 3-4 ತಿಂಗಳಿನಲ್ಲಿ ಕೊರೊನಾಗೆ ಭಾರತದಲ್ಲಿ ಲಸಿಕೆ ಸಿಗಲಿದೆ. ಲಸಿಕೆ ಲಭ್ಯವಾಗುವ ವಿಚಾರದಲ್ಲಿ ನನಗೆ ಬಹಳ ವಿಶ್ವಾಸವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

    ಕಾರ್ಯಕ್ರಮದ ಒಂದರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಮಾನದಂಡಗಳ ಅಡಿಯಲ್ಲಿ ಲಸಿಕೆ ವಿತರಣೆ ಮಾಡಲಾಗುವುದು. ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೊರೊನಾ ವಾರಿಯರ್ಸ್‍ಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಬಳಿಕ ಹಿರಿಯ ನಾಗರಿಕರಿಗೆ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು.

    ಜನತಾ ಕರ್ಫ್ಯೂ ಮತ್ತು ಲಾಕ್‌ಡೌನ್‌ ಯಶಸ್ವಿಯಾದ ಕಾರಣ ನಮ್ಮ ದೇಶದಲ್ಲಿ ಕೊರೊನಾ ಈಗ ನಿಯಂತ್ರಣದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಬಹಳ ಕಠಿಣ ನಿರ್ಧಾರ ತೆಗೆದುಕೊಂಡು ಹಂತ ಹಂತವಾಗಿ ಅನ್‌ಲಾಕ್‌ ಮಾಡಿದ್ದು ಸಹಕಾರಿಯಾಗಿದೆ. 2021 ಎಲ್ಲರಿಗೂ ಸಿಹಿ ತರುವ ವರ್ಷವಾಗಲಿದೆ ಎಂದು ಈ ವೇಳೆ ಹರ್ಷವರ್ಧನ್‌ ಆಶಿಸಿದರು.  ಇದನ್ನೂ ಓದಿ: ಕೊರೊನಾದಿಂದ ಮೃತ ವಾರಿಯರ್ಸ್ ಮಕ್ಕಳಿಗೆ MBBS ನಲ್ಲಿ 5 ಸೀಟ್ ಮೀಸಲು

    ಯಾವ ಹಂತದಲ್ಲಿದೆ?
    ಈಗಾಗಲೇ ಲಸಿಕೆ ಪ್ರಯೋಗ ಪೂರ್ಣಗೊಳಿಸಿರುವ ಫೈಜರ್, ಎಲ್ಲಾ ಅಂದುಕೊಂಡಂತೆ ಆದರೆ ಕ್ರಿಸ್‍ಮಸ್‍ಗೆ ಮೊದಲೇ ಲಸಿಕೆಯನ್ನು ಮಾರುಕಟ್ಟೆಗೆ ಬಿಡಲು ಪ್ಲಾನ್ ಮಾಡಿದೆ. ಈಗಾಗಲೇ ತುರ್ತು ಅನುಮತಿ ಕೋರಿ ಅಮೆರಿಕಾದ ಎಫ್‍ಡಿಎ, ಐರೋಪ್ಯ ಒಕ್ಕೂಟಕ್ಕೆ ಅರ್ಜಿ ಸಲ್ಲಿಸಲಾಗಿದೆ.

    ಡಿಸೆಂಬರ್ 2ನೇ ವಾರ ಅನುಮತಿ ಸಿಗಬಹುದು ಎಂದು ಬಯೋ ಎನ್‍ಟೆಕ್ ಸಂಸ್ಥೆ ಹೇಳಿಕೊಂಡಿದೆ. ಈ ಮಧ್ಯೆ, ಆಸ್ಟ್ರಾಜೆನಿಕಾ ಲಸಿಕೆಯ 2ನೇ ಹಂತದ ಪ್ರಯೋಗ ಯಶಸ್ವಿಯಾಗಿದೆ. ಸುಲಭವಾಗಿ ಸೋಂಕಿಗೆ ತುತ್ತಾಗುವ ವೃದ್ಧರ ಮೇಲೆ ಈ ಲಸಿಕೆ ಉತ್ತಮ ಪರಿಣಾಮ ಬೀರಿದೆ ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ.

    ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸಿನ್, ಸ್ಪುಟ್ನಿಕ್ ಪೈಕಿ ಯಾವುದಾದರೊಂದು ಲಸಿಕೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಭಾರತಕ್ಕೆ ಲಭ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಲಸಿಕೆ ವಿತರಣೆ ಮತ್ತು ಸಂಗ್ರಹಕ್ಕೆ ಯುದ್ದೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ತಿದೆ. ಲಸಿಕೆ ಹಂಚಿಕೆಯ ಪ್ರಾಥಮಿಕ ರೂಪುರೇಷೆಗಳನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಹಿರಂಗಪಡಿಸಿದ್ದಾರೆ.

    ಲಸಿಕೆ ಹಂಚಿಕೆ ಹೇಗೆ?
    ಆರಂಭದಲ್ಲಿ ದೇಶದ 25-30 ಕೋಟಿ ಮಂದಿಗೆ ಲಸಿಕೆ ನೀಡಲು ಕೇಂದ್ರ ಸಿದ್ಧತೆ ಮಾಡಿಕೊಂಡಿದೆ. ಜೂನ್ ಹೊತ್ತಿಗೆ 40-50 ಕೋಟಿ ಡೋಸ್ ಸಿದ್ಧವಾಗಲಿದ್ದು ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ವ್ಯಾಕ್ಸಿನ್ ಹಂಚಿಕೆ ಮಾಡಲಾಗುತ್ತದೆ.

    ಕೊರೊನಾ ವಾರಿಯರ್ಸ್, ಆರೋಗ್ಯ ಸಿಬ್ಬಂದಿಗೆ ಮೊದಲ ಆದ್ಯತೆಯ ಬಳಿಕ ವಯೋವೃದ್ಧರು, ರೋಗಪೀಡಿತರಿಗೂ ಲಸಿಕೆ ನೀಡಲಾಗುತ್ತದೆ. ವಯಸ್ಸಿನ ಆಧಾರದ ಮೇಲೆಯೂ ಕೊರೋನಾ ಲಸಿಕೆ ಹಾಕಲಾಗುತ್ತದೆ. ಲಸಿಕೆ ಎಲ್ಲಿದೆ? ಹೇಗೆ ಹಂಚಿಕೆ ಆಗ್ತಿದೆ ಎಂಬುದರ ಬಗ್ಗೆ ಇ-ಟ್ರ್ಯಾಕಿಂಗ್ ಮಾಡಿ ನಿಗಾ ಇಡಲಾಗುತ್ತದೆ.

  • ಲೋಕಸಭೆಯಲ್ಲಿ ಹೈಡ್ರಾಮಾ: ಕಲಾಪದಲ್ಲಿ ಕೈಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಸಂಸದರು

    ಲೋಕಸಭೆಯಲ್ಲಿ ಹೈಡ್ರಾಮಾ: ಕಲಾಪದಲ್ಲಿ ಕೈಕೈ ಮಿಲಾಯಿಸಿದ ಕಾಂಗ್ರೆಸ್-ಬಿಜೆಪಿ ಸಂಸದರು

    ನವದೆಹಲಿ: ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು ಕಲಾಪದ ವೇಳೆ ಕೈಕೈ ಮಿಲಾಯಿಸಿದ ಪ್ರಸಂಗ ಇಂದು ನಡೆಯಿತು.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಾಠಿಯಿಂದ ಹೊಡೆಯಬೇಕು ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆ ಇಂದೂ ಕೂಡ ಕಲಾಪದಲ್ಲಿ ಪ್ರಸ್ತಾಪವಾಯಿತು. ಪ್ರಶ್ನೋತ್ತರ ಸಮಯದಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದ ಪೂರಕ ಪ್ರಶ್ನೆಗಳನ್ನು ಕೇಳಲು ಸ್ಪೀಕರ್ ಬಿರ್ಲಾ ಅವರು ರಾಹುಲ್ ಗಾಂಧಿ ಅವರಿಗೆ ಕೇಳಿದರು. ಆಗ ಪ್ರಶ್ನೆಯನ್ನು ಕೇಳಲು ಮುಂದಾಗುತ್ತಿದ್ದಂತೆ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು, ಪ್ರಧಾನಿ ಬಗ್ಗೆ ರಾಹುಲ್ ಗಾಂಧಿ ಅವರ ವಿಲಕ್ಷಣ ಹೇಳಿಕೆಯನ್ನು ಸದನವು ಖಂಡಿಸಬೇಕು ಎಂದು ಆಗ್ರಹಿಸಿದರು.

    ಹರ್ಷವರ್ಧನ್ ಒತ್ತಾಯದ ಬೆನ್ನಲ್ಲೇ ಬಿಜೆಪಿ ಸಂಸದರು ಜೋರು ಧ್ವನಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮಧ್ಯೆ ಕಾಂಗ್ರೆಸ್ ಸದಸ್ಯರೊಬ್ಬರು ಆಡಳಿತ ಪಕ್ಷದ ಮುಂದಿನ ಸಾಲಿಗೆ ತಲುಪಿದ್ದು ಮತ್ತಷ್ಟು ಗಲಾಟೆಗೆ ಕಾರಣವಾಯಿತು.

    ತಮಿಳುನಾಡಿನ ಕಾಂಗ್ರೆಸ್ ಸಂಸದ ಟ್ಯಾಗೋರ್ ಅವರು ಹರ್ಷವರ್ಧನ್ ಮುಂದೆ ಆಗಮಿಸಿದರು. ಅವರನ್ನು ತಡೆಯಲು ಅನೇಕ ಸಚಿವರು ಮತ್ತು ಬಿಜೆಪಿ ಸಂಸದರು ಮುಂದೆ ಬಂದರು. ಟ್ಯಾಗೋರ್ ನಂತರ, ಕೇರಳದ ಕಾಂಗ್ರೆಸ್ ಸಂಸದರೊಬ್ಬರು ಸಹ ಆಡಳಿತ ಪಕ್ಷದತ್ತ ಬಂದರು. ಈ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಸೇರಿದಂತೆ ಅನೇಕ ಸಚಿವರು ಮತ್ತು ಬಿಜೆಪಿ ಸದಸ್ಯರು ಅವರನ್ನು ತಡೆಯಲು ಮುಂದಾದರು. ಆದರೆ ಕಾಂಗ್ರೆಸ್ ಸಂಸದರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು.

    ಕಾಂಗ್ರೆಸ್-ಬಿಜೆಪಿ ನಾಯಕರು ಕೈಕೈ ಮಿಲಾಯಿಸಿದ್ದು ಕಲಾಪವನ್ನು ಕೋಲಾಹಲಕ್ಕೆ ನೂಕಿತು. ಆಗ ಸ್ಪೀಕರ್ ಬಿರ್ಲಾ ಅವರು ಸಭೆಯನ್ನು ಮಧ್ಯಾಹ್ನ ಒಂದು ಗಂಟೆಯವರೆಗೆ ಮುಂದೂಡಿದರು.

  • ಯಾದಗಿರಿಗೆ ಮೆಡಿಕಲ್ ಕಾಲೇಜು ಮಂಜೂರು

    ಯಾದಗಿರಿಗೆ ಮೆಡಿಕಲ್ ಕಾಲೇಜು ಮಂಜೂರು

    ಯಾದಗಿರಿ: ಜಿಲ್ಲೆಯ ಜನರ ಬಹು ದಿನ ಕನಸು ಕೊನೆಗೂ ನನಸಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶ ಎನ್ನಲಾಗುತ್ತಿದ್ದ ಯಾದಗಿರಿ ಜಿಲ್ಲೆಗೆ ಅಗತ್ಯವಿದ್ದ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ.

    ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ ಮಾಡಿದ್ದಾರೆ.ಸಂಸದ ರಾಜಾ ಅಮರೇಶ್ ನಾಯಕ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು, ನಿಮ್ಮ ನಾಯಕತ್ವದಲ್ಲಿ ಕಾರ್ಯ ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ.

    ಗ್ರಾಮ ವಾಸ್ತವ್ಯ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೆಡಿಕಲ್ ಕಾಲೇಜು ಮಂಜೂರಾತಿಗೆ ತಡೆ ನೀಡಿದ್ದರು. ಇದರಿಂದ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಯಾದಗಿರಿ ಬಂದ್ ಸಹ ಮಾಡಲಾಗಿತ್ತು. ಈ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ನಾನು ಮುಖ್ಯಮಂತ್ರಿಯಾದರೆ ಮೆಡಿಕಲ್ ಕಾಲೇಜು ಮಂಜೂರು ಮಾಡುತ್ತೇನೆ ಎಂದು ಬಿಜೆಪಿ ನಾಯಕರು ಹಾಗೂ ಜಿಲ್ಲೆಯ ಜನರಿಗೆ ಮಾತು ಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಜಿಲ್ಲೆಯ ಜನರಿಗೆ ಖುಷಿ ತಂದಿದೆ.

    ರಾಜ್ಯ ಸಂಪುಟ ಸಭೆಯ ಬಳಿಕ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಅವರು, ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 525 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.