Tag: Harsh Limbachiyaa

  • ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ

    ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ

    ಬಾಲಿವುಡ್ ಡ್ರಾಮಾ ಕ್ವೀನ್, ಹಾಸ್ಯ ಕಲಾವಿದೆ ಭಾರತಿ ಸಿಂಗ್ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ದಂಪತಿ ಈ ಖುಷಿ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈಗ ಮತ್ತೆ ಅಭಿಮಾನಿಗಳಿಗೆ ತಮ್ಮ ಹೆರಿಗೆ ಸಮಯದಲ್ಲಿ ಆದ ಅನುಭವಗಳನ್ನು ಅವರು ಶೇರ್ ಮಾಡಿದ್ದಾರೆ.


    ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ದಂಪತಿ ಏಪ್ರಿಲ್ 3 ರಂದು ಗಂಡು ಮಗುವಿನ ಪೋಷಕರಾಗಿದ್ದಾರೆ. ದಂಪತಿ ಎಲ್ಒಎಲ್(ಲೈಫ್ ಆಫ್ ಲಿಂಬಾಚಿಯಾಸ್) ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಈ ಚಾನೆಲ್ನಲ್ಲೇ ತಮ್ಮ ಎಲ್ಲ ಅಪ್ಡೇಟ್ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಈ ಚಾನಲ್‌ನಲ್ಲಿಯೇ ಭಾರತಿ ತಾಯ್ತನದ ಪ್ರಯಾಣವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    ವೀಡಿಯೋದಲ್ಲಿ ನನ್ನ ಮಗ ಕೊನೆಗೂ ನನ್ನ ಕೈಗೆ ಬಂದಿದ್ದಾನೆ. ಅವನು ಆರೋಗ್ಯವಾಗಿದ್ದಾನೆ. ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದೆಲ್ಲ ಕನಸಿನಂತಿದೆ. ಈ ಅನುಭವವು ತುಂಬಾ ಭಾವನಾತ್ಮಕವಾದ್ದು. ಇದು ನನಗೆ ತುಂಬಾ ಸಂತೋಷದ ಸಂಗತಿಯಾಗಿದೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.

    ನನ್ನ ಮಗುವನ್ನು ಮೊದಲ ಬಾರಿಗೆ ಹಿಡಿದುಕೊಂಡಾಗ ನನಗೆ ಏನೋ ಒಂದು ರೀತಿ ಖುಷಿಯ ಅನುಭವವಾಯಿತು. ದಯವಿಟ್ಟು ನಿಮ್ಮ ಪ್ರೀತಿಯನ್ನು ನಮ್ಮ ಮಗುವಿನ ಮೇಲೂ ತೋರಿಸಿ ಎಂದು ಕೇಳಿದ್ದಾರೆ.

    ಭಾರತಿ ಅವರು ಮೊದಲು ತಮ್ಮ ಬೆನ್ನುನೋವಿನ ಬಗ್ಗೆ ಮಾತನಾಡುವುದರೊಂದಿಗೆ ವೀಡಿಯೊ ಆರಂಭಿಸುತ್ತಾರೆ. ಈ ವೇಳೆ ಅವರು, ನಾನು ಕಾರಿನಲ್ಲಿ ಕುಳಿತಾಗ ಹೆರಿಗೆ ನೋವು ಆಗಿದೆಯೋ ಇಲ್ಲವೋ ಎಂದು ಖಚಿತವಾಗಿರಲಿಲ್ಲ. ನನಗೆ ಭಯವಾಗಿತ್ತು. ಆದರೂ ಉತ್ಸಾಹದಲ್ಲೇ ಇದ್ದೆ. ಇದಕ್ಕೂ ಮೊದಲು ನಾನು ಈ ಭಯವನ್ನು ಅನುಭವಿಸಿರಲಿಲ್ಲ ಎಂದು ವಿವರಿಸಿದ್ದಾರೆ.

    ಇದೇ ವೇಳೆ ಹರ್ಷ್, ಇದು ನಿಮ್ಮ ಮೊದಲ ಗರ್ಭಧಾರಣೆ. ಅದಕ್ಕಾಗಿಯೇ ನೀವು ಭಯಪಡುತ್ತೀರಿ. ಮುಂದಿನ ಬಾರಿ ನಿಮಗೆ ಏನು ಆಗುವುದಿಲ್ಲ. ನನಗೆ ಇನ್ನೂ 6 ಮಕ್ಕಳು ಬೇಕು ಎಂದಿದ್ದಾರೆ. ಇದನ್ನೂ ಓದಿ: ಕಳುವಾದ ನವಜಾತ ಶಿಶು 21 ದಿನಗಳ ಬಳಿಕ ಪತ್ತೆ – ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ

    ವಿಡಿಯೋ ಕೊನೆಯಲ್ಲಿ ಭಾರತಿ ಅವರು 4:30ಕ್ಕೆ ನನಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆ ಸಮಯದಲ್ಲಿ ನಾನು ನನ್ನ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಈ ವೇಳೆಯೂ ನಾನು ನನ್ನ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

  • ಡ್ರಗ್ಸ್ ಪ್ರಕರಣ- ಹಾಸ್ಯ ಕಲಾವಿದೆ ಭಾರತಿ ಸಿಂಗ್, ಪತಿ ಹರ್ಷ್ ಬಂಧನ

    ಡ್ರಗ್ಸ್ ಪ್ರಕರಣ- ಹಾಸ್ಯ ಕಲಾವಿದೆ ಭಾರತಿ ಸಿಂಗ್, ಪತಿ ಹರ್ಷ್ ಬಂಧನ

    ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಹಾಗೂ ಪತಿ ಹರ್ಷ್ ಲಿಂಬಚಿಯಾ ಅವರನ್ನು ಬೆಳಗಿನಿಂದ ಎನ್‍ಸಿಬಿ ವಿಚಾರಣೆ ನಡೆಸಿದ್ದು, ಇದೀಗ ಇಬ್ಬರನ್ನೂ ಬಂಧಿಸಿದೆ.

    ಭಾರತಿ ಸಿಂಗ್ ಹಾಗೂ ಪತಿ ಹರ್ಷ್ ಇಬ್ಬರೂ ಡ್ರಗ್ಸ್ ಸೇವನೆ ಮಾಡುತ್ತಿದ್ದ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಇಂದು ಬೆಳಗ್ಗೆ ಅಂಧೇರಿಯ ಭಾರತಿ ಸಿಂಗ್ ನಿವಾಸದ ಮೇಲೆ ಎನ್‍ಸಿಬಿ ದಾಳಿ ನಡೆಸಿತ್ತು. ಇದೀಗ ಭಾರತಿ ಹಾಗೂ ಹರ್ಷ್ ಅವರನ್ನು ಬಂಧಿಸಲಾಗಿದೆ. ದಾಳಿ ವೇಳೆ ಅವರ ಮನೆಯಲ್ಲಿ ಅಲ್ಪ ಪ್ರಮಾಣದ ಗಾಂಜಾ ಕೂಡ ವಶಪಡಿಸಿಕೊಳ್ಳಲಾಗಿದೆ.

    ಎನ್‍ಸಿಬಿ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೇಡೆ ನೇತೃತ್ವದ ತಂಡ ದಾಳಿ ನಡೆಸಿದ್ದು, ಭಾರತಿ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸಿತ್ತು. ಈ ವೇಳೆ ಮನೆಯಲ್ಲಿ ಅಲ್ಪ ಪ್ರಮಾಣದ ಗಾಂಜಾವನ್ನು ಸಹ ವಶಪಡಿಸಿಕೊಳ್ಳಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಭಾರತಿ ಸಿಂಗ್ ಮನೆ ಮಾತ್ರವಲ್ಲದೆ ಇನ್ನೂ ಎರಡು ಕಡೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣ ದಾಖಲಿಸಿಕೊಂಡಿದ್ದ ಎನ್‍ಸಿಬಿ ತನ್ನ ಬೇಟೆಯನ್ನು ಮುಂದುವರಿಸಿದೆ. ಈಗಾಗಲೇ ನಟಿ ರಿಯಾ ಚಕ್ರವರ್ತಿ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಸಹ ಎನ್‍ಸಿಬಿ ವಿಚಾರಣೆಯನ್ನ ಎದುರಿಸಿದ್ದಾರೆ.

    ಕೆಲ ದಿನಗಳ ಹಿಂದೆ ನಟ ಅರ್ಜುನ್ ರಾಂಪಾಲ್ ಸಹ ಎನ್‍ಸಿಬಿ ಮುಂದೆ ಹಾಜರಾಗಿದ್ದರು. ನವೆಂಬರ್ 11 ಮತ್ತು 12ರಂದು ಎನ್‍ಸಿಬಿ ಅಧಿಕಾರಿಗಳ ಮುಂದೆ ರಾಂಪಾಲ್ ಗೆಳತಿ ಗ್ಯಾಬ್ರಿಯೆಲಾ ಸಹ ಹಾಜರಾಗಿದ್ದರು.