Tag: Harry Brook

  • 69 ರನ್‌ಗಳ ಭರ್ಜರಿ ಜಯ – ಇಂಗ್ಲೆಂಡ್ ಶಾಕ್, ಅಫ್ಘಾನ್ ರಾಕ್

    69 ರನ್‌ಗಳ ಭರ್ಜರಿ ಜಯ – ಇಂಗ್ಲೆಂಡ್ ಶಾಕ್, ಅಫ್ಘಾನ್ ರಾಕ್

    ನವದೆಹಲಿ: ರಹ್ಮನುಲ್ಲಾ ಗುರ್ಬಾಝ್‌ ಬೆಂಕಿ ಬ್ಯಾಟಿಂಗ್‌ ಹಾಗೂ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಮಾರಕ ಬೌಲಿಂಗ್‌ ದಾಳಿಯಿಂದಾಗಿ ಇಂಗ್ಲೆಂಡ್‌ ವಿರುದ್ಧ ಆಫ್ಘಾನಿಸ್ತಾನ (England vs Afghanistan) 69 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ.

    ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ (Cricket World Cup 2023) 13ನೇ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಇಂಗ್ಲೆಂಡ್‌ (England) ಫೀಲ್ಡಿಂಗ್‌ ಆಯ್ದುಕೊಂಡಿತ್ತು. ಉತ್ತಮ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಆಂಗ್ಲ ಬೌಲರ್‌ಗಳನ್ನು ಚೆಂಡಾಡಿದ ಆಫ್ಘಾನಿಸ್ತಾನ (Afghanistan) ತಂಡ ಆಲೌಟ್‌ ಆಗಿ ಇಂಗ್ಲೆಂಡ್‌ಗೆ 285 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ 40.3 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 215 ರನ್‌ಗಳನ್ನಷ್ಟೇ ಗಳಿಸಿ ಸೋಲನುಭವಿಸಿತು. ಇದನ್ನೂ ಓದಿ: ಹೈವೋಲ್ಟೇಜ್ ಪಂದ್ಯದ ಬಳಿಕ ಪಾಕ್ ನಾಯಕನಿಗೆ ಜೆರ್ಸಿ ಗಿಫ್ಟ್ ಮಾಡಿದ ಕೊಹ್ಲಿ: ವಾಸಿಂ ಅಕ್ರಮ್ ಗರಂ

    ಆರಂಭಿಕರಾಗಿ ಕಣಕ್ಕಿಳಿದಿದ್ದ ಜಾನಿ ಬೈರ್‌ಸ್ಟೋವ್‌ ಕೇವಲ 2 ರನ್‌ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದರು. ನಂತರ ಜೊತೆಯಾದ ಡೇವಿಡ್ ಮಲನ್ ಮತ್ತು ಜೋ ರೂಟ್‌ ಜೊತೆಯಾಗಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಡೇವಿಡ್ ಮಲನ್ 32 ರನ್‌ ಗಳಿಸಿ (39 ಬಾಲ್‌, 4 ಫೋರ್‌) ಕ್ಲೀನ್‌ ಬೌಲ್ಡ್‌ ಆದರು. ಜೋ ರೂಟ್‌ ಕೇವಲ 11 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದ ಹ್ಯಾರಿ ಬ್ರೂಕ್‌ ಮೈದಾನದಲ್ಲಿ 61 ಬಾಲ್‌ಗಳಿಗೆ 66 ರನ್‌ ಗಳಿಸಿ (7 ಫೋರ್‌, 1 ಸಿಕ್ಸ್‌) ಉತ್ತಮ ಪ್ರದರ್ಶನ ನೀಡಿದರು. ಆದರೆ ಅವರಿಗೆ ಜೊತೆಯಾಗಿ ಸಾಥ್‌ ಕೊಡುವಲ್ಲಿ ಇತರೆ ಆಟಗಾರರು ವಿಫಲರಾದರು. ಆಫ್ಘನ್ನರ ಸ್ಪಿನ್‌ ದಾಳಿಗೆ ಆಂಗ್ಲ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಹೋದರು.

    ಪರಿಣಾಮವಾಗಿ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಕೇವಲ 9 ರನ್‌ ಗಳಿಸಿ ಔಟಾದರು. ಲಿಯಾಮ್ ಲಿವಿಂಗ್ಸ್ಟೋನ್ 10 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಸ್ಯಾಮ್ ಕರ್ರನ್ ಕೂಡ ಕೇವಲ 10 ರನ್‌ ಗಳಿಸಲಷ್ಟೇ ಶಕ್ತರಾದರು. ಕ್ರಿಸ್ ವೋಕ್ಸ್ 9 ರನ್‌ಗಳಿಸಿ ಔಟಾದರು. ಆದಿಲ್ ರಶೀದ್ 20 ರನ್‌, ಮಾರ್ಕ್ ವುಡ್ 18 ರನ್‌ ಗಳಿಸಿ ಪೆವಿಲಿಯನ್‌ನತ್ತ ನಡೆದರು. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

    ಇಂಗ್ಲೆಂಡ್‌ ವಿರುದ್ಧ ಆಫ್ಘನ್‌ ಬೌಲರ್‌ಗಳು ಅಮೋಘ ಪ್ರದರ್ಶನ ತೋರಿದರು. ಮುಜೀಬ್ ಉರ್ ರೆಹಮಾನ್ ಹಾಗೂ ರಶೀದ್ ಖಾನ್ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಮೊಹಮ್ಮದ್ ನಬಿ 2, ಫಜಲ್ಹಕ್ ಫಾರೂಕಿ ಹಾಗೂ ನವೀನ್-ಉಲ್-ಹಕ್ ತಲಾ 1 ಕಿತ್ತು ತಂಡದ ಗೆಲುವಿಗೆ ಸಹಕಾರಿಯಾದರು.

    ಗುರ್ಬಾಝ್‌ ಬೆಂಕಿ ಬ್ಯಾಟಿಂಗ್‌
    ಟಾಸ್ ಗೆದ್ದ ಇಂಗ್ಲೆಂಡ್‌ ತಂಡ ಅಫ್ಘಾನಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್‌ಗೆ ಇಳಿದ ಅಫ್ಘಾನ್ ಭರ್ಜರಿ ಆರಂಭ ಪಡೆಯಿತು. ರಹ್ಮನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝರ್ದಾನ್ ತಂಡಕ್ಕೆ 114 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. 16.4 ಓವರ್‌ನಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಇಬ್ರಾಹಿಂ ಝರ್ದಾನ್ (28) ಔಟ್ ಆಗುವುದರೊಂದಿಗೆ ಅಫ್ಘಾನ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ರಹ್ಮನುಲ್ಲಾ ಗುರ್ಬಾಝ್ 57 ಎಸೆತಗಳಲ್ಲಿ 80 ರನ್ ಸಿಡಿಸಿ (8 ಬೌಂಡರಿ, 4 ಸಿಕ್ಸರ್) ಸಿಡಿಸಿ ಆಂಗ್ಲರನ್ನು ಚೆಂಡಾಡಿದರು. ನಂತರ ಗುರ್ಬಾಝ್‌ ರನ್‌ಔಟ್‌ ಆದರು. ಇದನ್ನೂ ಓದಿ: Record… Record… Record: ಇಂಡೋ-ಪಾಕ್‌ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್‌!

    ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಇಂಗ್ಲೆಂಡ್‌ ಬಲಿಷ್ಟ ಬೌಲಿಂಗ್ ಎದುರು ಹೆಚ್ಚು ಸಮಯ ಕ್ರೀಸಿನಲ್ಲಿ ನಿಲ್ಲಲು ಸಾಧ್ಯವಾಗದೇ ದಿಢೀರ್ ಕುಸಿತ ಕಂಡಿತು. ರಹಮತ್ ಶಾ 3 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆದರೆ, ನಾಯಕ ಹಶ್ಮತುಲ್ಲಾ ಶಾಹಿದಿ 14 ರನ್ ಗಳಿಸಿ ಜೊ ರೂಟ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಅಝ್ಮತುಲ್ಲಾ ಓಮರ್ಝೈ, ಮೊಹಮ್ಮದ್ ನಬಿ ಕ್ರಮವಾಗಿ 19, 9 ಗಳಿಸಿ ಪೆವಿಲಿಯನ್ ಪರೇಡ್‌ ನಡೆಸಿದರು. ಬಳಿಕ ಕೊಂಚ ಚೇತರಿಸಿಕೊಂಡ ಅಫ್ಘಾನ್ ಇಕ್ರಂ ಅಲಿಖಿಲ್ ಮತ್ತು ರಶೀದ್ ಖಾನ್ ಜೋಡಿ 43 ರನ್‌ಗಳ ಜೊತೆಯಾಟ ನೀಡಿ ಮೊತ್ತ ಹೆಚ್ಚಿಸುವ ಯೋಜನೆಯಲ್ಲಿ ಇದ್ದರು. ಆದರೆ ರಶೀದ್ ಖಾನ್ 23 ರನ್ ಗಳಸಿ ಕ್ಯಾಚ್ ನೀಡಿ ಔಟಾದರು. ಇಕ್ರಂ ಅಲಿಖಿಲ್ 58 ಗಳಿಸಿ ಅರ್ಧಶತಕ ಬಾರಿಸಿ (3 ಬೌಂಡರಿ, 2 ಸಿಕ್ಸರ್) ಮಿಂಚಿದರು. ಮುಜೀಬ್ ಉರ್ ರಹ್ಮಾನ್ 28 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಅಂತಿಮ ಜೋಡಿಯಾದ ನವೀನ್ 5 ರನ್‌ಗೆ ರನೌಟ್ ಆದರು. ಫಝಲ್ ಹಕ್ ಫಾರೂಕಿ 2 ರನ್ ಗಳಿಸಿದರು.

    ಇಂಗ್ಲೆಂಡ್‌ ಪರ ಆದಿಲ್ ರಶೀದ್ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 2, ಲಿಯಾಮ್ ಲಿವಿಂಗ್‌ಸ್ಟೋನ್‌, ಜೋ ರೂಟ್, ರೀಸ್ ಟೋಪ್ಲಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ

    ಕೊನೆಯವರೆಗೂ ಹೋರಾಡಿದ ರಿಂಕು – ಹೈದರಾಬಾದ್‌ಗೆ 23 ರನ್‌ಗಳ ಜಯ

    ಕೋಲ್ಕತ್ತಾ: ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಅವರ ಸ್ಫೋಟಕ ಶತಕದಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧ 23 ರನ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 4 ವಿಕೆಟ್‌ ನಷ್ಟಕ್ಕೆ 228 ರನ್‌ ಹೊಡೆಯಿತು. 229 ರನ್‌ಗಳ ಸವಾಲು ಪಡೆದ ಕೋಲ್ಕತ್ತಾ 7 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಕೋಲ್ಕತ್ತಾ 30 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ನಾಯಕ ನಿತೀಶ್‌ ರಾಣಾ (Nitish Rana) ಮತ್ತು ರಿಂಕು ಸಿಂಗ್‌ (Rinku Singh) ಸ್ಫೋಟಕ ಆಟವಾಡಿದರು. ರಾಣಾ 75 ರನ್‌(41 ಎಸೆತ, 5 ಬೌಂಡರಿ, 6 ಸಿಕ್ಸರ್‌) ಹೊಡೆದು ಔಟಾದರು. ಕೊನೆಯವರೆಗೂ ಹೋರಾಡಿದ ರಿಂಕು ಔಟಾಗದೇ 58 ರನ್‌(31 ಎಸೆತ, 4 ಬೌಂಡರಿ, 4 ಸಿಕ್ಸರ್‌) ಚಚ್ಚಿದ್ದರು.

    ಕೊನೆಯ 24 ಎಸೆತದಲ್ಲಿ ಕೋಲ್ಕತ್ತಾ ಗೆಲ್ಲಲು 70 ರನ್‌ಗಳ ಅವಶ್ಯಕತೆಯಿತ್ತು. ರಾಣಾ ಮತ್ತು ರಿಂಕು ಸಿಂಗ್‌ 6ನೇ ವಿಕೆಟಿಗೆ 39 ಎಸೆತಗಳಲ್ಲಿ 69 ರನ್‌ ಹೊಡೆದಿದ್ದರು. 17ನೇ ಓವರ್‌ನ ಮೊದಲ ಎಸೆತವನ್ನು ರಾಣಾ ಸಿಕ್ಸರ್‌ಗೆ ಅಟ್ಟಿದ್ದರೆ ಎರಡನೇ ಎಸೆತವನ್ನೂ ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ನಡೆಸಿದರು. ಆದರೆ ಕ್ಯಾಚ್‌ ಔಟಾದ ಪರಿಣಾಮ ಪಂದ್ಯ ಹೈದರಬಾದ್‌ ಕಡೆಗೆ ತಿರುಗಿತು.

    ಬ್ರೂಕ್‌ ಶತಕ:
    ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ ಈ ಐಪಿಎಲ್‌ (IPL 2023) ಅವೃತ್ತಿಯಲ್ಲಿ ಮೊದಲ ಶತಕ (Century) ಸಿಡಿಸಿದ್ದಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೇ 100 ರನ್‌ (12 ಬೌಂಡರಿ, 3 ಸಿಕ್ಸರ್‌) ಚಚ್ಚಿದ್ದರು. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಅತಿ ಹೆಚ್ಚು ಸ್ಕೋರ್‌ ಆಗಿರುವುದು ವಿಶೇಷ.

    ಮೊದಲ 32 ಎಸೆತಗಳಲ್ಲಿ 50 ರನ್‌ ಬಂದರೆ ನಂತರ 33 ಎಸೆತದಲ್ಲಿ ಬ್ರೂಕ್‌ 50 ರನ್‌ ಚಚ್ಚಿದ್ದಾರೆ. ಹೈದರಾಬಾದ್‌ ಪರ ನಾಯಕ ಐಡೆನ್ ಮಾರ್ಕ್ರಾಮ್ 50 ರನ್‌(26 ಎಸೆತ, 2 ಬೌಂಡರಿ, 5 ಸಿಕ್ಸರ್‌), ಅಭಿಷೇಕ್‌ ಶರ್ಮಾ 32 ರನ್‌ (17 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಕ್ಲಾಸೆನ್‌ ಔಟಾಗದೇ 1 6 ರನ್‌ (6 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಇತರೇ ರೂಪದಲ್ಲಿ 12 ರನ್‌ (1 ನೋಬಾಲ್‌, 11 ವೈಡ್‌) ಬಂದಿತ್ತು.

    ರನ್‌ ಏರಿದ್ದು ಹೇಗೆ?
    50 ರನ್‌ – 26 ಎಸೆತ
    100 ರನ್‌ – 66 ಎಸೆತ
    150 ರನ್‌ – 59 ಎಸೆತ
    200 ರನ್‌ – 109 ಎಸೆತ
    228 ರನ್‌ – 120 ಎಸೆತ

  • ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

    ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

    ಕೋಲ್ಕತ್ತಾ: ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡದ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಈ ಐಪಿಎಲ್‌ (IPL 2023) ಅವೃತ್ತಿಯಲ್ಲಿ ಮೊದಲ ಶತಕ (Century) ಸಿಡಿಸಿದ್ದಾರೆ.

    ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧದ ಪಂದ್ಯದಲ್ಲಿ 55 ಎಸೆತಗಳಲ್ಲಿ ಔಟಾಗದೇ 100 ರನ್‌ (12 ಬೌಂಡರಿ, 3 ಸಿಕ್ಸರ್‌) ಚಚ್ಚಿದ್ದಾರೆ. ಪರಿಣಾಮ ಹೈದರಾಬಾದ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 228 ರನ್‌ ಗಳಿಸಿದೆ. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಟಾಪ್‌ ಸ್ಕೋರ್‌ ಆಗಿರುವುದು ವಿಶೇಷ.

    ಮೊದಲ 32 ಎಸೆತಗಳಲ್ಲಿ 50 ರನ್‌ ಬಂದರೆ ನಂತರ 33 ಎಸೆತದಲ್ಲಿ ಬ್ರೂಕ್‌ 50 ರನ್‌ ಚಚ್ಚಿದ್ದಾರೆ. ಹೈದರಾಬಾದ್‌ ಪರ ನಾಯಕ ಐಡೆನ್ ಮಾರ್ಕ್ರಾಮ್ 50 ರನ್‌(26 ಎಸೆತ, 2 ಬೌಂಡರಿ, 5 ಸಿಕ್ಸರ್‌), ಅಭಿಷೇಕ್‌ ಶರ್ಮಾ 32 ರನ್‌(17 ಎಸೆತ, 3 ಬೌಂಡರಿ, 2 ಸಿಕ್ಸರ್)‌, ಕ್ಲಾಸೆನ್‌ ಔಟಾಗದೇ 1 6 ರನ್‌( 6 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಇತರೇ ರೂಪದಲ್ಲಿ 12 ರನ್‌ (1 ನೋಬಾಲ್‌, 11 ವೈಡ್‌) ಬಂದಿತ್ತು.

    ರನ್‌ ಏರಿದ್ದು ಹೇಗೆ?
    50 ರನ್‌ – 26 ಎಸೆತ
    100 ರನ್‌ – 66 ಎಸೆತ
    150 ರನ್‌ – 59 ಎಸೆತ
    200 ರನ್‌ – 109 ಎಸೆತ
    228 ರನ್‌ – 120 ಎಸೆತ

  • ಕೋಟಿ ಕೋಟಿ ಸುರಿದು ಖರೀದಿಸಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಫ್ಲಾಪ್‌ – ಮಾಲೀಕರಿಗೆ ನಿರಾಸೆ

    ಕೋಟಿ ಕೋಟಿ ಸುರಿದು ಖರೀದಿಸಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಫ್ಲಾಪ್‌ – ಮಾಲೀಕರಿಗೆ ನಿರಾಸೆ

    ಲಕ್ನೋ: ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lacknow Super Gaints) ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ನಡುವೆ ನಡೆದ ಪಂದ್ಯದಲ್ಲಿ ಲಕ್ನೋ ತಂಡ 5 ವಿಕೆಟ್‌ಗಳ ಜಯ ಸಾಧಿಸಿತು.

    121 ಅತ್ಯಲ್ಪ ರನ್‌ ಗಳಿಸಿದ್ದ ಹೈದರಾಬಾದ್‌ ತಂಡ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಹಾಗೂ ಬೌಲರ್‌ಗಳ ಕಳಪೆ ಪ್ರದರ್ಶನದಿಂದ 2ನೇ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    ಲಕ್ನೋ ಸೂಪರ್‌ ಜೈಂಟ್ಸ್ ತಂಡ ಚೇಸಿಂಗ್‌ ಆರಂಭಿಸುತ್ತಿದ್ದಂತೆ ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಹೈದರಾಬಾದ್‌ ಪವರ್‌ ಪ್ಲೇ ನಂತರ ರನ್‌ ಬಿಟ್ಟುಕೊಟ್ಟಿತು. ಕಳೆದ ಎರಡೂ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಆರಂಭಿಕ ಕೇಲ್‌ ಮೇಯರ್ಸ್‌ 13 ರನ್‌ಗಳಿಗೆ ಔಟಾಗುತ್ತಿದ್ದಂತೆ ಹೈದರಾಬಾದ್‌ ತಂಡದ ಮಾಲೀಕರಾದ ಕಾವ್ಯ ಮಾರನ್‌ (Kavya Maran) ಹುಚ್ಚೆದ್ದು ಕುಣಿದಿದ್ದರು. ಕೊನೆಯಲ್ಲಿ ತಂಡದ ಸೋಲಿನಿಂದ ನಿರಾಸೆ ಅನುಭವಿಸಿದರು. ಈ ಕುರಿತ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಕೈಕೋಟ್ಟ ದುಬಾರಿ ಆಟಗಾರರು: ಇನ್ನೂ ಐಪಿಎಲ್‌ ಹರಾಜಿನಲ್ಲಿ ಕೋಟಿ ಕೋಟಿ ಹಣ ಸುರಿದು ಬಿಕರಿ ಮಾಡಿದ ಹೈದರಾಬಾದ್‌ ತಂಡದ ಆಟಗಾರರು ಕಳೆದ 2 ಪಂದ್ಯಗಳಲ್ಲೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಇಂಗ್ಲೆಂಡ್‌ ತಂಡದಲ್ಲಿ ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಹ್ಯಾರಿ ಬ್ರೂಕ್‌ (Harry Brook) ಅವರನ್ನ ಹೈದರಾಬಾದ್‌ ತಂಡ 13.25 ಕೋಟಿ ರೂ.ಗೆ ಖರೀದಿಸಿತ್ತು. ಅದೇ ರೀತಿ ರಣಜಿಯಲ್ಲಿ ಏಕಾಂಗಿ ಹೋರಾಟ ನಡೆಸಿ ಕರ್ನಾಟಕ ತಂಡವನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದ ಮಯಾಂಕ್‌ ಅಗರ್ವಾಲ್‌ (Mayank Agarwal) ಅವರನ್ನ 8.25 ಕೋಟಿ ರೂ. ನೀಡಿ ಖರೀದಿಸಿದೆ. ಟೀಂ ಇಂಡಿಯಾ ಆಟಗಾರರಾದ ರಾಹುಲ್‌ ತ್ರಿಪಾಠಿ (Rahul Tripathi) ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನ ಕ್ರಮವಾಗಿ 8.50 ಕೋಟಿ ರೂ., 8.75 ಕೋಟಿ ರೂ. ನೀಡಿ ಖರೀದಿಸಿದೆ. ತಂಡಕ್ಕೆ ದುಬಾರಿ ಬೆಲೆಗೆ ಬಿಕರಿಯಾದ ಆಟಗಾರರ ಕಳಪೆ ಪ್ರದರ್ಶನದಿಂದ ತಂಡ ಸೋಲನುಭವಿಸಿದ್ದು, ಮಾಲೀಕರೂ ನಿರಾಸೆ ಹೊಂದಿದ್ದಾರೆ.

    ಕಳೆದ ಎರಡೂ ಪದ್ಯಗಳಲ್ಲೂ ಹೈದರಾಬಾದ್‌ ತಂಡ ಬೌಲಿಂಗ್‌ನಲ್ಲಿ ಸ್ವಲ್ಪ ಹಿಡಿತ ಸಾಧಿಸಿದರೂ, ಬ್ಯಾಟಿಂಗ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಎಡವಿದೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 131 ರನ್‌ ಗಳಿಸಿ 72 ರನ್‌ಗಳ ಅಂತರದಲ್ಲಿ ಸೋತರೆ, 2ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 121ರನ್‌ ಗಳಿಸಿ 5 ವಿಕೆಟ್‌ಗಳ ಹೀನಾಯ ಸೋಲುಕಂಡಿದೆ. ಮುಂದಿನ ಪಂದ್ಯಗಳಲ್ಲಿ ತಂಡ ಗೆಲುವಿನ ತಂತ್ರ ಹೇಗೆ ರೂಪಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ.

  • IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    IPL 2023: ಜೋಸ್, ಜೈಸ್ವಾಲ್‌, ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ರಾಜಸ್ಥಾನ್‌ಗೆ 72 ರನ್‌ಗಳ ಭರ್ಜರಿ ಜಯ

    ಹೈದರಾಬಾದ್‌: ಜೋಸ್ ಬಟ್ಲರ್ (Jos Buttler), ಯಶಸ್ವೀ ಜೈಸ್ವಾಲ್ (Yashasvi Jaiswal) ಹಾಗೂ ಸಂಜು ಸ್ಯಾಮ್ಸನ್‌ (Sanju Samson) ಅವರ ಸಿಡಿಲಬ್ಬರದ ಅರ್ಧಶತಕ ಹಾಗೂ ಯಜುವೇಂದ್ರ ಚಾಹಲ್‌ ಸ್ಪಿನ್‌ ಬೌಲಿಂಗ್‌ ದಾಳಿ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ (Rajasthan Royals) 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಪೇರಿಸಿತ್ತು. 204 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿ ಹೀನಾಯ ಸೋಲನುಭವಿಸಿತು.

    ಬೌಲಿಂಗ್‌ ವಿಭಾಗದಲ್ಲಿ ಕಳಪೆ ಪ್ರದರ್ಶನ ತೋರಿ, ರನ್‌ ಚಚ್ಚಿಸಿಕೊಂಡ ಹೈದರಾಬಾದ್‌ ಆಟಗಾರರು ಬ್ಯಾಟಿಂಗ್‌ ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿದರು. ಚೇಸಿಂಗ್‌ ಆರಂಭಿಸಿದ ಹೈದರಾಬಾದ್‌ ಆರಂಭದಲ್ಲೇ ಅಗ್ರಕ್ರಮಾಂಕದ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಮಯಾಂಕ್‌ ಅಗರ್ವಾಲ್‌ (Mayank Agarwal) 23 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 27 ರನ್‌ ಗಳಿಸಿದರೆ, ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಹ್ರಾರಿ ಬ್ರೂಕ್‌ (Harry Brook) 21 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 13 ರನ್‌ ಗಳಿಸಿ ಔಟಾದರು. ಇದರಿಂದ ಪವರ್‌ ಪ್ಲೇ ಮುಗಿಯುವಷ್ಟರಲ್ಲೇ ಹೈದರಾಬಾದ್‌ ಕೇವಲ 30 ರನ್‌ ಗಳಿಸಿ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

    ನಂತರ ಕಣಕ್ಕಿಳಿದವರು ರಾಜಸ್ಥಾನ್‌ ಬೌಲರ್‌ಗಳ ದಾಳಿಗೆ ದಂಗಾದರು. ಆದಿಲ್‌ ರಶೀದ್‌ 18 ರನ್‌, ಗ್ಲೇನ್‌ ಫಿಲಿಪ್ಸ್‌ 8 ರನ್‌, ನಾಯಕ ಭುವನೇಶ್ವರ್‌ ಕುಮಾರ್‌ 6 ರನ್‌, ವಾಷಿಂಗ್ಟನ್‌ ಸುಂದರ್‌ 1 ರನ್‌ ಗಳಿಸಿದರೆ, ಆರಂಭಿಕ ಅಭಿಷೇಕ್‌ ಶರ್ಮಾ, ರಾಹುಲ್‌ ತ್ರಿಪಾಠಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ಇದರಿಂದ ತಂಡವು 100 ರನ್‌ಗಳ ಗಡಿ ತಲುಪುವುದೇ ಕಷ್ಟವಾಗಿತ್ತು. ಆದರೆ ಕೊನೆಯಲ್ಲಿ ಉಮ್ರಾನ್‌ ಮಲಿಕ್‌, ಅಬ್ದುಲ್‌ ಸಮದ್‌ ಸಿಕ್ಸರ್‌, ಬೌಂಡರಿ ಚಚ್ಚಿ ತಂಡದ ಮೊತ್ತ 130ರ ಗಡಿ ದಾಟಿಸಿದರು. ಸಮದ್ 32 ರನ್‌ ಗಳಿಸಿದರೆ, ಮಲಿಕ್‌‌ ಕೇವಲ 8 ಎಸೆತಗಳಲ್ಲಿ 19 ರನ್‌ ಗಳಿಸಿ ತಂಡಕ್ಕೆ ನೆರವಾದರು.

    ಚಾಹಲ್‌ ಸ್ಪಿನ್‌ ಕಮಾಲ್:‌ ರಾಜಸ್ಥಾನ್‌ ರಾಯಲ್ಸ್‌ ಪರ ಬೌಲಿಂಗ್‌ ಕಮಾಲ್‌ ಮಾಡಿದ ಯಜುವೇಂದ್ರ ಚಾಹಲ್‌ (Yuzvendra Chahal) 4 ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೋಲ್ಟ್‌ 4 ಓವರ್‌ಗಳಲ್ಲಿ 21 ರನ್‌ ನೀಡಿ 2 ವಿಕೆಟ್‌ ಪಡೆದರು. ಜೇಸನ್‌ ಹೋಲ್ಡರ್‌, ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌: ಇನ್ನೂ ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜೋಸ್ ಬಟ್ಲರ್ ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಬೆಂಕಿ ಬ್ಯಾಟಿಂಗ್‌ ಮಾಡಿ, ಫಾರ್ಮ್ ಮುಂದುವರಿಸಿದರು. ಆರಂಭದಲ್ಲೇ ಅಬ್ಬರಿಸಿದ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಸನ್‌ರೈಸರ್ಸ್ ಹೈದರಾಬಾದ್ ಬೌಲರ್‌ಗಳನ್ನು ಚೆಂಡಾಡಿದರು. ಇದರಿಂದಾಗಿ ರಾಜಸ್ಥಾನ್‌ ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಭರ್ಜರಿ 85 ರನ್‌ ಗಳಿಸಿತ್ತು.

    ಜೋಸ್ ಬಟ್ಲರ್ ಕೇವಲ 22 ಎಸೆತಗಳಲ್ಲಿ 54 ರನ್ (7 ಬೌಂಡರಿ, 3 ಸಿಕ್ಸರ್) ಗಳಿಸಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ 3 ಅರ್ಧಶತಕ ಗಳಿಸುವ ಮೂಲಕ ಕ್ರಿಸ್‌ಗೇಲ್ ಸಾಧನೆಯನ್ನು ಜೋಸ್ ಬಟ್ಲರ್ ಸರಿಗಟ್ಟಿದರು. ಪವರ್ ಪ್ಲೇನಲ್ಲಿ 6 ಅರ್ಧಶತಕ ಗಳಿಸಿರುವ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಇನ್ನೂ ಜೋಸ್ ಬಟ್ಲರ್ ಔಟಾಗುತ್ತಿದ್ದಂತೆ ಜೊತೆಗೂಡಿದ ಸಂಜು ಸ್ಯಾಮ್ಸನ್‌ ಹಾಗೂ ಯಶಸ್ವೀ ಜೈಸ್ವಾಲ್ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದರು. ಯಶಸ್ವೀ ಜೈಸ್ವಾಲ್ 37 ಎಸೆತಗಳಲ್ಲಿ 9 ಬೌಂಡರಿ ಸಹಿತ 37 ರನ್ ಗಳಿಸಿದರೆ, ನಿಧಾನಗತಿಯಲ್ಲಿ ಬ್ಯಾಟಿಂಗ್‌ ಆರಂಭಿಸಿದ ನಾಯಕ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲೇ 55 ರನ್ (3 ಬೌಂಡರಿ, 4 ಸಿಕ್ಸರ್) ಚಚ್ಚಿದರು. ನಂತರ ಬಂದ ದೇವದತ್ ಪಡಿಕ್ಕಲ್ ಕೇವಲ 2 ರನ್ ಗಳಿಸಿ ಔಟಾದರೆ, ರಿಯಾನ್ ಪರಾಗ್ ಕೂಡ 7 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು.

    ಕೊನೆಯಲ್ಲಿ ಶಿಮ್ರಾನ್ ಹೆಟ್ಮೇರ್ 16 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರೆ, ಅಶ್ವಿನ್ ಅಜೇಯ 1 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್‌ 203 ರನ್ ಗಳಿಸಿತ್ತು.

    ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಫಜಲಕ್ ಫಾರ್‍ಹೂಕಿ ಮತ್ತು ಟಿ. ನಟರಾಜನ್ ತಲಾ 2 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ ಒಂದು ವಿಕೆಟ್ ಪಡೆದು ಮಿಂಚಿದರು.

  • ಫಾಲೋ ಆನ್‌ಗೆ ತುತ್ತಾದ್ರೂ 1 ರನ್ ರೋಚಕ ಜಯ – 22 ವರ್ಷದ ಬಳಿಕ ನ್ಯೂಜಿಲೆಂಡ್ ಸಾಧನೆ

    ಫಾಲೋ ಆನ್‌ಗೆ ತುತ್ತಾದ್ರೂ 1 ರನ್ ರೋಚಕ ಜಯ – 22 ವರ್ಷದ ಬಳಿಕ ನ್ಯೂಜಿಲೆಂಡ್ ಸಾಧನೆ

    ವೆಲ್ಲಿಂಗ್ಟನ್: ನೀಲ್ ವಾಗ್ನರ್ (Neil Wagner) ಬೆಂಕಿ ಬೌಲಿಂಗ್ ಹಾಗೂ ಕೇನ್ ವಿಲಿಯಮ್ಸನ್ (Kane Williamson) ಶತಕದ ಬ್ಯಾಟಿಂಗ್ ನೆರವಿನಿಂದ ಕಿವೀಸ್ ಪಡೆ ಇಂಗ್ಲೆಂಡ್ (England) ವಿರುದ್ಧ 1 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿದೆ.

    2ನೇ ಟೆಸ್ಟ್ ಪಂದ್ಯದ 5ನೇ ದಿನದಂದು ಕಿವೀಸ್ ಪಡೆ 1 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 1 ರನ್‌ನಿಂದ ಟೆಸ್ಟ್ ಪಂದ್ಯವನ್ನು ಗೆದ್ದ ವಿಶ್ವದ 2ನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1993ರ ಜನವರಿ 26ರಂದು ವೆಸ್ಟ್ ಇಂಡೀಸ್ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು 1 ರನ್ ಅಂತರದಿಂದ ಮಣಿಸಿ ಈ ಸಾಧನೆ ಮಾಡಿತ್ತು. ಇದನ್ನೂ ಓದಿ: ಮ್ಯಾಜಿಕ್ ಮೆಸ್ಸಿಗೆ `ಅತ್ಯುತ್ತಮ ಪುರುಷರ ಆಟಗಾರ-2022′ ಪ್ರಶಸ್ತಿ

    ಫಾಲೋ ಆನ್‌ಗೆ ಸಿಲುಕಿದ್ದ ನ್ಯೂಜಿಲೆಂಡ್ (New Zealand) ತಂಡ ಕೆನ್ ವಿಲಿಯಮ್ಸನ್ ಅವರ ಶತಕದ ನೆರವಿನಿಂದ ಎರಡನೇ ಇನ್ನಿಂಗ್ಸ್‌ನಲ್ಲಿ 483 ರನ್ ಕಲೆ ಹಾಕಿತ್ತು. ಆರಂಭಿಕರಾದ ಟಾಮ್ ಲಾಂಥಮ್ ಹಾಗೂ ಡಿವೋನ್ ಕಾನ್ವೆ ಮುರಿಯದ ಮೊದಲ ವಿಕೆಟ್ ಜೊತೆಯಾಟಕ್ಕೆ 149 ರನ್ ಕಲೆಹಾಕಿದ್ದರು. ಕಾನ್ವೆ 61 ರನ್ ಗಳಿಸಿ ಔಟಾದರೆ, ಲಾಂಥಮ್ 83 ರನ್ ಚಚ್ಚಿ ಪೆವಿಲಿಯನ್ ಸೇರಿದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಳಿದ ಕೇನ್ ವಿಲೀಯಮ್ಸನ್ 282 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 132 ರನ್ ಬಾರಿಸಿದರು. ಇದರೊಂದಿಗೆ ಡ್ಯಾರಿಯಲ್ ಮಿಚೆಲ್ 54 (54 ಎಸೆತ, 5 ಬೌಂಡರಿ, 1 ಸಿಕ್ಸರ್), ಟಾಮ್ ಬ್ಲಂಡೆಲ್ 90 ರನ್ (166 ಎಸೆತ, 9 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು.

    ಅಂತಿಮವಾಗಿ 2ನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 162.3 ಓವರ್‌ಗಳಲ್ಲಿ 483 ರನ್ ಗಳಿಸಿತ್ತು. ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ 258 ರನ್‌ಗಳ ಗುರಿ ನೀಡಿತ್ತು.

    ತನ್ನ ಸರದಿ ಆರಂಭಿಸಿದ್ದ ಇಂಗ್ಲೆಂಡ್ 4ನೇ ದಿನದಾಟದ ಅಂತ್ಯಕ್ಕೆ 48 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ 153 ರನ್ ಗಳಿಸಿದ್ದ ಮಾಜಿ ನಾಯಕ ಜೋ ರೂಟ್, 2ನೇ ಇನ್ನಿಂಗ್ಸ್‌ನಲ್ಲಿಯೂ 113 ಎಸೆತಗಳಲ್ಲಿ 95 ರನ್ ಬಾರಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ನೀಲ್ ವ್ಯಾಗ್ನರ್ ಅವರು ಜೋ ರೂಟ್ (Joe Root) ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (32 ರನ್) ನಿರ್ಣಾಯಕ ವಿಕೆಟ್ ಪಡೆಯುವ ಮೂಲಕ ಗೆಲುವಿನ ಕನಸನ್ನು ಕಸಿದುಕೊಂಡರು. ಈ ನಡುವೆ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಹ್ಯಾರಿ ಬ್ರೂಕ್ ಒಂದು ಎಸೆತವನ್ನೂ ಎದುರಿಸದೇ ರನೌಟ್‌ಗೆ ತುತ್ತಾಗಿದ್ದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಪೆಟ್ಟು ನೀಡಿತ್ತು. ಅಂತಿಮವಾಗಿ ಇಂಗ್ಲೆಂಡ್ 74.2 ಓವರ್‌ಗಳಲ್ಲಿ 256 ರನ್ ಗಳಿಸುವ ಮೂಲಕ ವಿರೋಚಿತ ಸೋಲು ಕಂಡಿತು.

    ನೀಲ್ ವ್ಯಾಗ್ನರ್ 2ನೇ ಇನ್ನಿಂಗ್ಸ್‌ನಲ್ಲಿ 62 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಪಡೆದರು. ನಾಯಕ ಟಿಮ್ ಸೌಥಿ 45 ರನ್ ನೀಡಿ 3 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 75 ರನ್ ನೀಡಿ 2 ವಿಕೆಟ್ ಕಿತ್ತರು. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    ಸಂಕ್ಷಿಪ್ತ ಸ್ಕೋರ್
    ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 435/8 ಡಿಕ್ಲೇರ್
    ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 209/10
    ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 483/10
    ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 256/10

    22 ವರ್ಷದ ಬಳಿಕ ಸಾಧನೆ:
    ಆಸ್ಟ್ರೇಲಿಯಾ ವಿರುದ್ಧ 2001ರಲ್ಲಿ ಫಾಲೋ ಆನ್‌ಗೆ ತುತ್ತಾಗಿದ್ದರೂ ಭಾರತ ಲಕ್ಷ್ಮಣ್‌ ಮತ್ತು ದ್ರಾವಿಡ್ ಸಾಹಸದಿಂದ ಜಯಗಳಿಸಿತ್ತು. ಆದಾದ ಬಳಿಕ ಇಲ್ಲಿಯವರೆಗೆ ಈ ಸಾಧನೆಯನ್ನು ಯಾವ ತಂಡ ಮಾಡಿರಲಿಲ್ಲ. ಈಗ 22 ವರ್ಷದ ಬಳಿಕ ನ್ಯೂಜಿಲೆಂಡ್ ಫಾಲೋ ಆನ್‌ಗೆ ಸಿಲುಕಿದ್ದರೂ ಪಂದ್ಯವನ್ನು ಗೆದ್ದುಕೊಂಡ ಸಾಧನೆ ಮಾಡಿದೆ. ಅಷ್ಟೇ ಅಲ್ಲದೇ ಫಾಲೋ ಆನ್ ಹೇರಿದ ಬಳಿಕ ಜಯಗಳಿಸಿದ ನಾಲ್ಕನೇ ಟೆಸ್ಟ್ ಪಂದ್ಯ ಇದಾಗಿದೆ.