Tag: Harrasment

  • Bidar | ಮದ್ಯ ಸೇವಿಸಿ ಕಿರುಕುಳ – ಪೋಷಕರ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ

    Bidar | ಮದ್ಯ ಸೇವಿಸಿ ಕಿರುಕುಳ – ಪೋಷಕರ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ

    ಬೀದರ್: ಪ್ರತಿದಿನ ಮದ್ಯ (Alcohol) ಸೇವಿಸಿ ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನು (Husband) ಪೋಷಕರ ಜೊತೆ ಸೇರಿ ಪತ್ನಿ ಕೊಲೆ ಮಾಡಿದ ದಾರುಣ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಬಾಚೆಪಳ್ಳಿ ಗ್ರಾಮದಲ್ಲಿ ನಡೆದಿದೆ.

    ಶ್ರೀಧರ್ ಶಿವರಾಜ್ (30) ಕೊಲೆಯಾದ ಪತಿ. ಕುಡಿದು ಬಂದು ಈತ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದು ಪೋಷಕರ ಜೊತೆ ಸೇರಿ ಪತಿಯನ್ನು ಪತ್ನಿ ಸವಿತಾ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಖರ್ಜೂರದೊಳಗೆ ಇಟ್ಟು ಸಾಗಿಸುತ್ತಿದ್ದ 172 ಗ್ರಾಂ ಚಿನ್ನ ಏರ್‌ಪೋರ್ಟ್‌ನಲ್ಲಿ ವಶಕ್ಕೆ

    ಕಳೆದ ಐದಾರು ವರ್ಷಗಳ ಹಿಂದೆ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ಚಾಲಕನ ಕೆಲಸ ಮಾಡುತ್ತಿದ್ದ ಪತಿ ಶ್ರೀಧರ್ ಕುಡಿದು ಬಂದು ಪ್ರತಿ ದಿನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಪೋಷಕರನ್ನು ಕರೆಸಿಕೊಂಡು ಹಗ್ಗದಿಂದ ಪತಿಯ ಕೈಕಾಲು ಕಟ್ಟಿ ಹಾಕಿ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಮಡಿಕೇರಿಯ ಇಗ್ಗುತಪ್ಪ, ನಾಲಾಡಿ ಬೆಟ್ಟದಲ್ಲಿ ಕಾಡ್ಗಿಚ್ಚು – 20 ಎಕ್ರೆಗೆ ಬೆಂಕಿ

    ಹಲ್ಲೆ ಮಾಡಿದ ಬಳಿಕ ಮೂವರೂ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಪತಿ ಶ್ರೀಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಆಹಾರ ಪ್ರಿಯರಿಗೆ ಶಾಕ್‌ – ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ

  • ರಾಯಚೂರಲ್ಲಿ ಅಮಾನವೀಯ ಘಟನೆ – ಮರಕ್ಕೆ ಕಟ್ಟಿ ಮಹಿಳೆ ಮೇಲೆ ಮನಬಂದಂತೆ ಹಲ್ಲೆ

    ರಾಯಚೂರಲ್ಲಿ ಅಮಾನವೀಯ ಘಟನೆ – ಮರಕ್ಕೆ ಕಟ್ಟಿ ಮಹಿಳೆ ಮೇಲೆ ಮನಬಂದಂತೆ ಹಲ್ಲೆ

    ರಾಯಚೂರು: ಅನೈತಿಕ ಸಂಬಂಧದಿಂದಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಿ ಮೃತನ ಕಡೆಯವರು ಮಹಿಳೆಯೊರ್ವಳನ್ನು ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ರಾಯಚೂರು (Raichuru) ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತನ ಕುಟುಂಬಸ್ಥರಾದ ಬಸವರಾಜ್ ನಾಯಕ, ಯಂಕಮ್ಮ, ದುರ್ಗಮ್ಮ ಮತ್ತು ರೇಣುಕಾ ಸೇರಿ ಇತರರು ಹಲ್ಲೆ ಮಾಡಿದ್ದಾರೆ.ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

    20 ದಿನಗಳ ಹಿಂದೆ ರಂಗಪ್ಪ ಎಂಬಾತ ಮೂರ್ಛೆ ರೋಗದಿಂದ ಸಾವನ್ನಪ್ಪಿದ್ದರು. ಆತನ ಸಾವಿಗೆ ಈ ಮಹಿಳೆ ಕಾರಣ ಎಂದು ಶಂಕಿಸಿದ್ದಾರೆ. ಮಹಿಳೆಯ ಮನೆಗೆ ಬಂದು ಆಕೆಯ ಮನೆಯ ಎದುರಿಗಿದ್ದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ನೂರಾರು ಜನರ ಮುಂದೆಯೇ ದೌರ್ಜನ್ಯ ಎಸಗಿದ್ದರೂ ಕೂಡ ಯಾರು ರಕ್ಷಣೆಗೆ ಮುಂದಾಗಿಲ್ಲ.

    ವಿಷಯ ತಿಳಿದ ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ರಕ್ಷಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಬಿಗ್‌ ಬಾಸ್‌ ಶೋ ಕಪ್‌ ಗೆಲ್ತೀನಿ ಅಂತ ನನ್ನ ತಲೆಯಲ್ಲೇ ಇರಲಿಲ್ಲ: ವಿನ್ನರ್‌ ಹನುಮಂತ

  • ಮಹಿಳೆಯ ಖಾಸಗಿ ಭಾಗಕ್ಕೆ ಸುಡುವ ರಾಡ್‌ನಿಂದ ಹಲ್ಲೆ – ಮೆಣಸಿನ ಪುಡಿ ಹಾಕಿ ವಿಕೃತಿ

    ಮಹಿಳೆಯ ಖಾಸಗಿ ಭಾಗಕ್ಕೆ ಸುಡುವ ರಾಡ್‌ನಿಂದ ಹಲ್ಲೆ – ಮೆಣಸಿನ ಪುಡಿ ಹಾಕಿ ವಿಕೃತಿ

    – ಸುಮಾರು 2 ಗಂಟೆ ಚಿತ್ರಹಿಂಸೆ

    ಭೋಪಾಲ್: ತನ್ನ ಖಾಸಗಿ ಭಾಗಕ್ಕೆ ಸುಡುವ ಕಬ್ಬಿಣದ ರಾಡ್ ಇಡಲಾಗಿದ್ದು, ಬಳಿಕ ಮೆಣಸಿನ ಪುಡಿ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ತನ್ನ ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಮಧ್ಯಪ್ರದೇಶ (Madhyapradesh) ರಾಜ್‌ಗಢ್‌ನಲ್ಲಿ ನಡೆದಿದೆ. ರೋಹಿತ್ ರುಹೇಲಾ ಎಂಬ ವ್ಯಕ್ತಿ ಸಂತ್ರಸ್ಥ ಮಹಿಳೆಯ ಮನೆಗೆ ಬಂದು ಸ್ಟೀಮ್ ಯಂತ್ರವನ್ನು ಕೇಳಿದ್ದಾನೆ. ಮಹಿಳೆ ಗೇಟ್ ಬಳಿ ಕಾಯಲು ಹೇಳಿದಾಗ, ಅವನು ಬಾಗಿಲು ಮುಚ್ಚಿ, ಅವಳ ಕೋಣೆಗೆ ಪ್ರವೇಶಿಸಿ ಕಿರುಕುಳ ನೀಡಲು ಪ್ರಯತ್ನಿಸಿದನು. ಇದನ್ನು ನೋಡಿ ಮಹಿಳೆ ಮೇಲೆ ಅನುಮಾನ ಪಟ್ಟ ಪತಿಯ ಕುಟುಂಬಸ್ಥರು ಎರಡು ಗಂಟೆಗಳ ಕಾಲ ದೈಹಿಕ ದೌರ್ಜನ್ಯ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ

    ದೂರಿನ ಪ್ರಕಾರ, ಪತಿ, ಅತ್ತಿಗೆ, ಅತ್ತೆ ಮತ್ತು ಮಾವ ಸಂತ್ರಸ್ತೆಗೆ ಸುಮಾರು ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಒದೆಯುವುದು, ಗುದ್ದುವುದು ಸೇರಿದಂತೆ ವಿವಸ್ತ್ರಗೊಳಿಸಿ ದೈಹಿಕ ಹಿಂಸೆ ನೀಡಿದ್ದಾರೆ. ತನ್ನ ಖಾಸಗಿ ಭಾಗಗಳು, ತೊಡೆ ಮತ್ತು ದೇಹದ ಇತರ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟಿದ್ದಾರೆ. ಮಾವ ಆಕೆಯ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಚ್ಚಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

    ಮಹಿಳೆಯ ದೂರಿನ ಅನ್ವಯ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೆಕ್ಷನ್ 115 (2) ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದಕ್ಕಾಗಿ ಸೆಕ್ಷನ್ 74 ಮಹಿಳೆಯ ಮೇಲೆ ಹಲ್ಲೆಗಾಗಿ, ಸೆಕ್ಷನ್ 64 ಅತ್ಯಾಚಾರಕ್ಕಾಗಿ ಮತ್ತು ಸೆಕ್ಷನ್ 3(5) ಸಾಮಾನ್ಯ ಉದ್ದೇಶಗಳ ಅಡಿಯಲ್ಲಿ ದೂರು ದಾಖಲಾಗಿದೆ.ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ

  • ಅಪ್ರಾಪ್ತೆಗೆ ಕಿರುಕುಳ; ಅನ್ಯಕೋಮಿನ ಯುವಕ ಅರೆಸ್ಟ್ – ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

    ಅಪ್ರಾಪ್ತೆಗೆ ಕಿರುಕುಳ; ಅನ್ಯಕೋಮಿನ ಯುವಕ ಅರೆಸ್ಟ್ – ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

    ಮಂಗಳೂರು: ಅಪ್ರಾಪ್ತೆಗೆ ಕಿರುಕುಳ (Harrasment) ನೀಡುತ್ತಿದ್ದ ಆರೋಪದ ಮೇಲೆ ಅನ್ಯಕೋಮಿನ ಯುವಕನನ್ನು (Youth) ಪೊಲೀಸರು (Police) ಬಂಧಿಸಿರುವ ಘಟನೆ ಪುತ್ತೂರಿನಲ್ಲಿ  (Puttur) ನಡೆದಿದೆ.

    ಕಡಬ (Kadaba) ಮೂಲದ ಶಾಕೀರ್ ಕಿರುಕುಳ ನೀಡಿದ ಆರೋಪಿ. ಯುವಕನ ವರ್ತನೆಯಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಯುವಕನನ್ನು ತಮಗೆ ಒಪ್ಪಿಸುವಂತೆ ಪುತ್ತೂರು ತಾಲೂಕಿನ ನಗರ ಪೊಲೀಸ್ ಠಾಣೆಗೆ ಮುತ್ತಿಗೆಹಾಕಲು ಯತ್ನಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿ – ರೊಚ್ಚಿಗೆದ್ದ ಗ್ರಾಮಸ್ಥರು

    ಪುತ್ತೂರಿನಲ್ಲಿ ನಡೆಯುತ್ತಿದ್ದ ಕಂಬಳ ವೀಕ್ಷಿಸಲು ತೆರಳುತ್ತಿದ ವೇಳೆ ಕಿರುಕುಳ ನೀಡಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ಈ ಹಿನ್ನೆಲೆ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: 6,000 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಕೇಸ್ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಅರೆಸ್ಟ್

    ಘಟನೆಯಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಆರೋಪಿಯನ್ನು ತಮಗೆ ಒಪ್ಪಿಸುವಂತೆ ಠಾಣೆ ಎದುರು ಜಮಾಯಿಸಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಹಿಂದೂ ಮುಖಂಡ ಅರುಣ್ ಪುತ್ತಿಲ ಯುವಕರನ್ನು ಸಮಾಧಾನಪಡಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿಂದು ಶೋಷಿತ ಸಮುದಾಯಗಳ ಬೃಹತ್ ಸಮಾವೇಶ – 2 ಲಕ್ಷಕ್ಕೂ ಅಧಿಕ ಜನ ಭಾಗಿ ನಿರೀಕ್ಷೆ

    ಸದ್ಯ ಆರೋಪಿ ಶಾರೀಕ್‌ನನ್ನು ಬಂಧಿಸಿರುವ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಂತರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಠಾಣೆ ಮುಂದೆ ಸೇರಿದ ಗುಂಪನ್ನು ಚದುರಿಸಿ ಕಳುಹಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಆಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

  • ಮಕ್ಳಾಗಿಲ್ಲ ಅಂದ್ರೆ ದೆವ್ವ ಮೆಟ್ಕೊಂಡಿದೆ ಅಂತಾನೆ- ವಶೀಕರಣ ಮಾಡಿ ವಂಚಿಸ್ತಾನೆ ಕಳ್ ಸ್ವಾಮಿ

    ಮಕ್ಳಾಗಿಲ್ಲ ಅಂದ್ರೆ ದೆವ್ವ ಮೆಟ್ಕೊಂಡಿದೆ ಅಂತಾನೆ- ವಶೀಕರಣ ಮಾಡಿ ವಂಚಿಸ್ತಾನೆ ಕಳ್ ಸ್ವಾಮಿ

    – ಛಾಟಿಯೇಟು ಕೊಟ್ಟು ಮಹಿಳೆಯರಿಗೆ ಚಿತ್ರಹಿಂಸೆ

    ಕೋಲಾರ: ಆತ ಖ್ಯಾತ ಜ್ಯೋತಿಷಿಯೂ ಅಲ್ಲ, ಮಂತ್ರ- ತಂತ್ರ ಗೊತ್ತಿರುವ ಕೊಳ್ಳೆಗಾಲದ ಸ್ವಾಮೀಜಿನೂ ಅಲ್ಲ. ಆದರೂ ದಿಢೀರ್‌ನೆ ದೆವ್ವ ಬಿಡಿಸೋ ಶಕ್ತಿ ಇರೋ ಕಳ್ಳ ಸ್ವಾಮಿ. ಅಮಾಯಕ ಹೆಣ್ಣು ಮಕ್ಕಳಿಗೆ ದೆವ್ವ ಮೈಮೇಲೆ ಇದೆ ಎಂದು ಹೊಡೆದು, ಬಡೆದು ಚಿತ್ರ ಹಿಂಸೆ ಕೊಟ್ಟು ಕೋಲಾರದ ಸ್ವಘೋಷಿತ ಸ್ವಾಮೀಜಿಯೋರ್ವ ಕಾಟ ಕೊಟ್ಟಿದ್ದಾನೆ.

    ಕೋಲಾರ ತಾಲೂಕಿನ ಅಬ್ಬಣಿ ಗ್ರಾಮದ ಕಾಳಿಕಾಂಬ ದೇವಾಲಯದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಈ ರೀತಿ ಮಹಿಳೆಯರಿಗೆ ಚಿತ್ರಹಿಂಸೆ ಕೊಡುತ್ತಿದ್ದಾನೆ. ಮಹಿಳೆಯರ ಮೇಲೆ ದೆವ್ವ ಬಂದಿದೆ ಅಂತ ಮನಸ್ಸೋ ಇಚ್ಛೆ ಛಾಟಿಯಿಂದ ಹೊಡೆಯೋದಕ್ಕೆನೇ ಈ ಮಲ್ಲಿಕಾರ್ಜುನ ಸ್ವಾಮೀಜಿ ಫೇಮಸ್. ದೆವ್ವ ಬಿಡಿಸುವ ನೆಪದಲ್ಲಿ ಈತ ಮಹಿಳೆಯನ್ನ ಛಾಟಿಯಿಂದ ಹೊಡೆದು ಮಾನಸಿಕ, ದೈಹಿಕವಾಗಿ ಚಿತ್ರಹಿಂಸೆ ಕೊಡುತ್ತಾನೆ.

    ಈ ಮಲ್ಲಿಕಾರ್ಜುನ ಸ್ವಾಮೀಜಿ ಸ್ವಯಂ ಘೋಷಿತ ಸ್ವಾಮೀಜಿಯಾಗಿದ್ದು, ಇತ್ತೀಚೆಗೆ ಅಬ್ಬಣಿಯಲ್ಲಿ ಕಾಳಿಕಾಂಬ ದೇವಾಲಯವನ್ನು ನಿರ್ಮಿಸಿಕೊಂಡಿದ್ದಾನೆ. ತನ್ನ ಬಳಿ ಬರುವ ಮಹಿಳೆಯರಿಗೆ ದೆವ್ವ ಬಿಡಿಸುವ ಕೆಲಸ ಮಾಡುತ್ತಾನೆ. ಮಕ್ಕಳಾಗಿಲ್ಲ ಎಂದು ದೇವರಿಗೆ ಹರಕೆ ಹೊತ್ತು ಬರುವ ಭಕ್ತಾದಿಗಳ ಬಳಿ ನಿಮಗೆ ದೆವ್ವ ಹಿಡಿದಿದೆ, ಅದನ್ನು ಹೋಗಿಸಬೇಕು. ಆಗ ಮಾತ್ರ ನಿಮಗೆ ಒಳ್ಳೆಯದಾಗುತ್ತೆ ಎಂದು ಛಾಟಿಯಿಂದ ಮನಸ್ಸೋ ಇಚ್ಛೆ ಹೊಡೆಯುತ್ತಾನೆ.

    ಮಲ್ಲಿಸ್ವಾಮಿ ದೇಗುಲಕ್ಕೆ ಬಂದ ಮಹಿಳೆಯರಿಗೆ ಛಾಟಿಯಲ್ಲಿ ಹೊಡೆಯುವ ದೃಶ್ಯಗಳು ಪಬ್ಲಿಕ್ ಟಿವಿಗೆ ದೊರೆತಿದೆ. ಈತ ಕಳೆದ ಕೆಲವು ವರ್ಷಗಳಿಂದ ಮಾಟ ಮಂತ್ರ-ತಂತ್ರ ಮಾಡುವುದು, ವಶೀಕರಣದ ಮೂಲಕ ಅಮಾಯಕ ಮಹಿಳೆಯರನ್ನ ವಂಚಿಸುತ್ತಿದ್ದಾನೆ. ಅಲ್ಲದೆ ತನ್ನ ಬಳಿ ಬರುವ ಮಹಿಳೆಯರಿಗೆ ಕೆಲವು ವಾಗ್ದಾನಗಳನ್ನ ನೀಡಿ ಸಂಸಾರಗಳನ್ನ ಹಾಳು ಮಾಡಿದ್ದಾನೆ. ಮಹಿಳೆಯರಿಗೆ ವಶೀಕರಣ ಆಗಿದೆ. ನೀನು ನಿನ್ನ ಗಂಡನನ್ನ ಬಿಟ್ಟು ಕೆಲವು ತಿಂಗಳು ದೂರ ಇರು ಎಂದು ಭೀತಿ ಹುಟ್ಟಿಸಿ, ಸಂಸಾರ ಒಡೆಯುತ್ತಿದ್ದಾನೆ.

    21ನೇ ಶತಮಾನದಲ್ಲೂ ಹೀಗೆ ದೆವ್ವ, ಗಾಳಿ ಎಂದು ನಂಬಿ ಇಂತಹ ಕಳ್ಳ ಸ್ವಾಮೀಜಿಗಳ ಮಾತಿಗೆ ಮಹಿಳೆಯರು ಮರಳಾಗುತ್ತಿರುವುದು ದುರಂತವೇ ಸರಿ. ದೆವ್ವ ಆದರೆ ಹೋಗು ಎಂದು ಮಹಿಳೆಯನ್ನ ಛಾಟಿಯಲ್ಲಿ ಹೊಡೆಯುವ ಮಲ್ಲಿ ಸ್ವಾಮಿಯ ಭಕ್ತರಂತೂ ಇದೇನು ಕರ್ಮ ಎನ್ನುತ್ತಿದ್ದಾರೆ.

  • ಪ್ರೀತಿಸಿ ಮದ್ವೆಯಾದ 25 ದಿನದಲ್ಲೇ ಬಿಪಿಒ ಉದ್ಯೋಗಿ ಆತ್ಮಹತ್ಯೆ!

    ಪ್ರೀತಿಸಿ ಮದ್ವೆಯಾದ 25 ದಿನದಲ್ಲೇ ಬಿಪಿಒ ಉದ್ಯೋಗಿ ಆತ್ಮಹತ್ಯೆ!

    ಬೆಂಗಳೂರು: ಮದುವೆಯಾದ ಕೇವಲ 25 ದಿನದಲ್ಲೇ 24 ವರ್ಷದ ಬಿಪಿಒ(ಹೊರಗುತ್ತಿಗೆ ಸೇವಾ ಕ್ಷೇತ್ರ) ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಹಲಸೂರು ನಿವಾಸಿ ಆರ್ ಶಂಕರ್ ಆತ್ಮಹತ್ಯೆಗೆ ಶರಣಾಗಿರುವ ಉದ್ಯೋಗಿಯಾಗಿದ್ದು, ಈತ ತನ್ನ 19 ವರ್ಷದ ತನ್ನ ಪತ್ನಿ ಲಕ್ಷಿತಾಳ ನಿರಂತರ ಕಿರುಕುಳ ಹಾಗೂ ತವರು ಮನೆಗೆ ತೆರಳಿ ವಾಪಸ್ಸಾಗದೇ ಇರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಶಂಕರ್ ಮದುವೆಗೂ ಮುನ್ನ ತನ್ನದೇ ಪ್ರದೇಶದ ನಿವಾಸಿ ಲಕ್ಷಿತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಮದುವೆಯ ಬಳಿಕ ಆಕೆ ತನ್ನ ಹೆತ್ತವರ ಮನೆಗೆ ತೆರಳಿ ವಾಪಸ್ಸಾಗಿಲ್ಲ. ಅಲ್ಲದೆ ಶಂಕರ್ ಕರೆ ಮತ್ತು ಮೆಸೇಜ್ ಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಿದ್ದಳು. ಇದರಿಂದ ನೊಂದಿದ್ದ ಶಂಕರ್, ಕಳೆದ ಭಾನುವಾರ ವಿಷ ಸೇವಿಸುವುದಾಗಿ ಪತ್ನಿಗೆ ಮೆಸೇಜ್ ಮಾಡಿದ್ದಾನೆ. ಆದರೆ ಆಕೆ ಈ ಮೆಸೇಜ್‍ಗೂ ಪ್ರತಿಕ್ರಿಯಿಸಿಲ್ಲ. ಅಲ್ಲದೆ ಪತಿಯ ಮನೆಗೂ ವಾಪಸ್ಸಾಗಿರಲಿಲ್ಲ.

    ಪತ್ನಿಯ ನಡತೆಯಿಂದ ಮತ್ತಷ್ಟು ನೊಂದ ಶಂಕರ್, ತಾನು ಸೇವಿಸುತ್ತಿರುವ ವಿಷದ ಬಾಟಲಿಯ ಫೋಟೋ ತೆಗೆದು ಪತ್ನಿಗೆ ಕಳುಹಿಸಿದ್ದಾನೆ. ಆದರೂ ಆಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದೇ ಪತಿ ವಿಷ ಕುಡಿದರೆ ಕುಡಿದು ಸಾಯಲಿ ಎಂದು ಸುಮ್ಮನಾಗಿದ್ದಾಳೆ. ಇತ್ತ ಪತ್ನಿ ಯಾವುದಕ್ಕೂ ಪ್ರತಿಕ್ರಿಯೆ ನೀಡದಿದ್ದರಿಂದ ಬೇಸತ್ತ ಪತಿ ಶಂಕರ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಮಗನ ಆತ್ಮಹತ್ಯೆಯ ಮರುದಿನವೇ ಶಂಕರ್ ತಂದೆ ಸೊಸೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೂಡ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಶಂಕರ್ ಪತ್ನಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

    ಬಿಬಿಎ (ವ್ಯವಹಾರ ಆಡಳಿತ ಅಧ್ಯಯನ) ಪದವಿ ಪಡೆದಿರೋ ಶಂಕರ್, ಇತ್ತೀಚೆಗಷ್ಟೇ ಮರತ್ತಹಳ್ಳಿಯಲ್ಲಿ ಬಿಪಿಒ ಆಗಿ ಕೆಲಸಕ್ಕೆ ಸೇರಿದ್ದನು. ಶಂಕರ್ ಹಾಗೂ ಲಕ್ಷಿತ ಕಳೆದ ಒಂದು ವರ್ಷದ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಇದೇ ವರ್ಷದ ಏಪ್ರಿಲ್ 18 ರಂದು ವಿವಾಹವಾಗಿದ್ದರು.

    ನನ್ನ ಮಗ ಆಕೆಯನ್ನು ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಸೊಸೆಯ ಸಹೋದರ ಹಾಗೂ ಆತನ ಸಹಪಾಠಿಗಳು ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಲಕ್ಷಿತ, ನನ್ನ ಮನೆಗೆ ಬಂದು ನಾನು ನನ್ನ ಮನೆಗೆ ಹೋಗಲ್ಲ ಎಂದು ಹಠ ಹಿಡಿದು ಕುಳಿತಿದ್ದಳು. ಹೀಗಾಗಿ ಇವರಿಬ್ಬರಿಗೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಸಿದೆ. ಆದರೆ ಇವರಿಬ್ಬರು ಕಾನೂನಾತ್ಮಕವಾಗಿ ಕಳೆದ 25 ದಿನದ ಹಿಂದೆ ಸತಿ-ಪತಿಗಳಾದರು. ಮದುವೆಯಾದ ಕೆಲ ದಿನಗಳ ಬಳಿಕ ನಾನು ತವರು ಮನೆಗೆ ಹೋಗುವುದಾಗಿ ಹೇಳಿದಳು. ಹೀಗಾಗಿ ಮನೆಗೆ ತೆರಳಿದ ಬಳಿಕ ಆಕೆ, ತನ್ನ ಕುಟುಂಬದವರೊಂದಿಗೆ ಸೇರಿ ವಿಲಕ್ಷಣವಾಗಿ ವರ್ತಿಸಲು ಆರಂಭಿಸಿದ್ದಾಳೆ. ಅಲ್ಲದೆ ನಾವು ಬೇರೆ ಮನೆ ಮಾಡಿ ಇರುವ ಎಂದು ನನ್ನ ಮಗನನ್ನು ಪೀಡಿಸಲು ಆರಂಭಿಸಿದ್ದಾಳೆ. ಈ ಎಲ್ಲಾ ಬೆಳವಣಿಗೆಗಳಿಂದ ಮದುವೆಯಾದ 25 ದಿನಕ್ಕೇ ನನ್ನ ಮಗ, ಪತ್ನಿಯಿಂದ ಕಿರುಕುಳ ಆರಂಭಿಸಿದ್ದಾನೆ. ಪತ್ನಿ ಫೋನ್ ರಿಸೀವ್ ಮಾಡದೇ ಮೆಸೇಜ್ ಗೂ ರಿಪ್ಲೈ ಮಾಡದೇ ಇರುವುದರಿಂದ ಆತ ಬಹಳಷ್ಟು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಜನ್ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ವಿಷ ಸೇವಿಸಿದ ಬಳಿಕ ಶಂಕರ್, ತಾನು ಅವಳಿಲ್ಲದೆ ಬದುಕಲ್ಲ ಎಂದು ತನ್ನ ಗೆಳೆಯರಿಗೆ ಕರೆ ಮಾಡಿ ನೋವು ತೋಡಿಕೊಂಡಿದ್ದಾನೆ. ಕೂಡಲೇ ಆತನ ಗೆಳೆಯರು ಶಂಕರ್ ಇದ್ದಲ್ಲಿಗೆ ದೌಡಾಯಿಸಿ ನಗರ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆ ಬಳಿಕ ಗೆಳೆಯರು ಶಂಕರ್ ತಂದೆಗೆ ವಿಷಯ ತಿಳಿಸಿದ್ದಾರೆ.

    ಈ ಸಂಬಂಧ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಮಾರ್ಕ್ಸ್ ಬೇಕಂದ್ರೆ ಮಂಚಕ್ಕೆ ಬಾ ಅಂತಾನೆ- ಕಾರವಾರದಲ್ಲಿ ಪ್ರಿನ್ಸಿಯ `ಕಾಮ ಕಿರಿಕ್’

    ಮಾರ್ಕ್ಸ್ ಬೇಕಂದ್ರೆ ಮಂಚಕ್ಕೆ ಬಾ ಅಂತಾನೆ- ಕಾರವಾರದಲ್ಲಿ ಪ್ರಿನ್ಸಿಯ `ಕಾಮ ಕಿರಿಕ್’

    ಕಾರವಾರ: ವಿದ್ಯೆ ಕಲಿಸೋ ಶಿಕ್ಷಕ, ಪ್ರಾಂಶುಪಾಲರಿಗೆ ಅತ್ಯುನ್ನತ ಸ್ಥಾನ ಇದೆ. ಆದ್ರೆ ಈ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಪ್ರಾಂಶುಪಾಲನ ಕಾಟದಿಂದ ಪ್ರತಿನಿತ್ಯ ಹಿಂಸೆ ಅನುಭವಿಸ್ತಿದ್ದಾರೆ. ಇರೋ ಕೆಲಸ ಮಾಡೋದು ಬಿಟ್ಟು, ಈ ಪ್ರಾಂಶುಪಾಲ ಇಲ್ಲದ ಕೆಲಸ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸರ್ಕಾರಿ ನರ್ಸಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರು ಕಾಲೇಜಿನ ಪ್ರಿನ್ಸಿಪಾಲ್‍ನ ಕಾಟಕ್ಕೆ ನಲುಗಿ ಹೋಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಸಂಸ್ಥೆಯ ಪ್ರಾಂಶುಪಾಲ ಗೋವಿಂದಪ್ಪ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಡ್ತಿದ್ದಾನೆ. 80 ಜನ ವಿದ್ಯಾರ್ಥಿನಿಯರು ಇರೋ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ವಿನಾಕಾರಣ ಹಣ ಪೀಕ್ತಾನೆ ಅಂತ ಆರೋಪಿಸಲಾಗಿದೆ.

    ಮಾತ್ರವಲ್ಲ ಹಣ ನೀಡದ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ತೆಗೆದು ಹಾಕುತ್ತೇನೆ. ಇಂಟರ್ನಲ್ ಅಂಕಗಳನ್ನ ಕೊಡಲ್ಲ ಅಂತಾ ಬೆದರಿಕೆ ಸಹ ಹಾಕುತ್ತಿದ್ದನು. ಇದ್ರಿಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೂ ಕೂಡ ಯತ್ನಿಸಿದ್ದಾಳೆ. ಇಷ್ಟೇ ಅಲ್ಲ ಈತನ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೂಡ ಕೇಳಿ ಬರ್ತಿದ್ದು, ವಿದ್ಯಾರ್ಥಿನಿಯರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

    ಈ ಬಗ್ಗೆ ಸ್ವತಃ ಗೋವಿಂದಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಸತ್ಯಕ್ಕೆ ದೂರವಾದಂತಹ ಮಾತಾಗಿದೆ. ವೈಯಕ್ತಿಕ ದ್ವೇಷಕ್ಕೋಸ್ಕರವೇ ನನ್ನ ಮೇಲೆ ಈ ಆರೋಪಗಳನ್ನು ಮಾಡುತ್ತಿದ್ದಾರೆ. 80 ಜನ ಮಕ್ಕಳು ಹಾಗೂ 80 ಜನ ಪೋಷಕರನ್ನು ಕರೆಸಿ ಒಂದು ವಿದ್ಯಾರ್ಥಿನಿಯಿಂದ ಪ್ರೂವ್ ಮಾಡಿಸಿ. ಯಾವ ಶಿಕ್ಷೆಗೂ ನಾನು ಸಿದ್ಧನಿದ್ದೇನೆ ಅಂತ ತನ್ನ ಮೇಲೆ ಕೇಳಿಬರುತ್ತಿರುವ ಆರೋಪವನ್ನು ಅಲ್ಲಗೆಳೆದಿದ್ದಾನೆ.

    ವಿದ್ಯಾರ್ಥಿನಿಯರು ಕಾಲೇಜಿಗೆ ಬರದಿದ್ರೂ ಬೇಕಾಬಿಟ್ಟಿ ಹಾಜರಾತಿ ಕೊಟ್ಟಿದ್ದಾನಂತೆ. ಸಾಮಾಜಿಕ ಕಾರ್ಯಕರ್ತನೋರ್ವ ಆರ್.ಟಿಐ ಮೂಲಕ ಪಡೆದಿರುವ ಮಾಹಿತಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ಕಾಲೇಜಿನ ಉನ್ನತ ಅಧಿಕಾರಿಗಳಿಗೆ, ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರನ್ನ ಸಹ ನೀಡಿದ್ದಾರೆ.

    ಪ್ರಾಂಶುಪಾಲನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆಯೇ ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವಂತೆ ಸಂಸ್ಥೆಯ ಅಧಿಕಾರಿಗಳು ಸೂಚಿಸಿದ್ದಾರೆ. ಆರೋಪ ಖಚಿತವಾದರೆ ಶಿಸ್ತುಕ್ರಮ ಕೈಗೊಳ್ತೀವಿ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಕನನ್ನು ಅಂಗಡಿಯೊಳಗೆ ಎಳೆದು ಗುದದ್ವಾರಕ್ಕೆ ರಾಡ್ ತುರುಕಿ, ವಿಡಿಯೋ ಮಾಡಿದ್ರು!

    ಬಾಲಕನನ್ನು ಅಂಗಡಿಯೊಳಗೆ ಎಳೆದು ಗುದದ್ವಾರಕ್ಕೆ ರಾಡ್ ತುರುಕಿ, ವಿಡಿಯೋ ಮಾಡಿದ್ರು!

    ಪಾಟ್ನಾ: 17 ವರ್ಷದ ಬಾಲಕನ ಮೇಲೆ ಐವರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗಾಜಿಯಾಬಾದ್ ನ ಮೋದಿನಗರದಲ್ಲಿ ನಡೆದಿದೆ.

    ಈ ಘಟನೆ ಗುರುವಾರದಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಲಕ 12ನೇ ತರಗತಿಯಲ್ಲಿ ಓದುತ್ತಿದ್ದು, ದುಷ್ಕರ್ಮಿಗಳು ಹಲ್ಲೆ ನಡೆಸಿ ಬಾಲಕನ ಕೈಯಲ್ಲಿದ್ದ 1,600 ರೂ. ಹಣ ದರೋಡೆ ಮಾಡಿದ್ದಾರೆ.

    ಘಟನೆ ವಿವರ: ಗುರುವಾರ ರಿಪೇರಿ ಅಂಗಡಿಯಲ್ಲಿ ತನ್ನ ಸೈಕಲ್ ಬಿಟ್ಟು ಬಾಲಕ ಮನೆಗೆ ವಾಪಸ್ಸಾಗುತ್ತಿದ್ದನು. ಈ ವೇಳೆ ಐವರು ಯುವಕರು ಬಾಲಕನನ್ನು ಎಳೆದು ಅಂಗಡಿಯೊಳಗೆ ಕೂಡಿ ಹಾಕಿದ್ದಾರೆ. ಅಲ್ಲದೇ ಆತನ ಗುದದ್ವಾರದೊಳಗೆ ಕಬ್ಬಿಣದ ರಾಡ್ ತುರುಕಿದ್ದಾರೆ. ಇಷ್ಟು ಮಾತ್ರವಲ್ಲದೇ ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ ಅಂತ ಹಿರಿಯ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಹೇಳಿದ್ದಾರೆ.

    ಜಾತಿ ವಿಚಾರಕ್ಕಾಗಿ ಈ ಹಿಂದೆಯೂ ಆರೋಪಿಗಳ ತನ್ನ ಮಗನಿಗೆ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ಬಾಲಕನ ತಂದೆ ಆರೋಪಿಸಿದ್ದಾರೆ. ಅಲ್ಲದೇ ಆರೋಪಿಗಳಲ್ಲಿ ಓರ್ವ ಪೊಲೀಸರೊಬ್ಬರ ಮಗನಾಗಿದ್ದಾನೆ ಅಂತ ಹೇಳಿದ್ದಾರೆ.

    ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ದೆಹಲಿಯ ವಿಮಾನದಲ್ಲಿ ದಂಗಲ್ ನಟಿ ಮೇಲೆ ಲೈಂಗಿಕ ಕಿರುಕುಳ

    ದೆಹಲಿಯ ವಿಮಾನದಲ್ಲಿ ದಂಗಲ್ ನಟಿ ಮೇಲೆ ಲೈಂಗಿಕ ಕಿರುಕುಳ

    ನವದೆಹಲಿ: ದಂಗಲ್, ಸೀಕ್ರೆಟ್ ಸೂಪರ್ ಸ್ಟಾರ್ ಖ್ಯಾತಿಯ ಝೈರಾ ವಾಸಿಂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ತನ್ನ ಮೇಲೆ ಆದ ಈ ಕಿರುಕುಳದ ಬಗ್ಗೆ ನಟಿ ಜೈರಾ ವಾಸೀಮ್ ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.

    ವಿಮಾನದಲ್ಲಿ ಕಿಡಿಗೇಡಿಯೊರ್ವ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಮನನೊಂದ ‘ದಂಗಲ್’ ನಟಿ ಝೈರಾ ವಾಸಿಂ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏರ್ ವಿಸ್ತಾರ್ ದಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ನಟಿ ಝೈರಾ ಫ್ಲೈಟ್‍ ನಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ಹಿಂಬದಿ ಸೀಟ್ ನಲ್ಲಿ ಕುಳಿತುಕೊಂಡಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊರ್ವ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಝೈರಾಳನ್ನು ಹಿಂದಿನಿಂದ ಕಾಲಿನಲ್ಲಿ ಸ್ಪರ್ಶಿಸಿದ್ದಾನೆ.

    https://www.youtube.com/watch?v=QLYr2Kq4FtI

    https://www.youtube.com/watch?v=V08GqgaR9kE

    ಇದರಿಂದ ನಾನು ಕೂಡಲೇ ಎಚ್ಚರಗೊಂಡು ಆ ವ್ಯಕ್ತಿಯ ಅಸಭ್ಯ ಚಟುವಟಿಕೆಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದೆ. ಆದರೆ ಅಲ್ಲಿ ಬೆಳಕು ಕಡಿಮೆ ಇದಿದ್ದರಿಂದ ನಾನು ಅವನ ಮುಖವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಆಗಲಿಲ್ಲ. ಆ ವ್ಯಕ್ತಿ ಸುಮಾರು 5-10 ನಿಮಿಷವರೆಗೂ ನನ್ನ ಕತ್ತನ್ನು ಸವರಿದ್ದಾನೆ ಹಾಗೂ ನನ್ನ ಕಾಲುಗಳನ್ನು ಸವರಿದ್ದಾನೆ ಎಂದು ಝೈರಾ ಪೋಸ್ಟ್ ಮಾಡಿದ್ದಾರೆ.

    ನಾನು ಈಗ ತಾನೇ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಿದ್ದೇನೆ. ವಿಮಾನದಲ್ಲಿ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಹುಡುಗಿಯರ ಜೊತೆ ಈ ರೀತಿ ಮಾಡುವುದು ಸರಿಯಿಲ್ಲ. ನಾವು ನಮ್ಮನ್ನು ರಕ್ಷಿಸಿಕೊಳ್ಳಲಿಲ್ಲ ಎಂದರೆ ನಮಗೆ ಯಾರು ಸಹಾಯ ಮಾಡುತ್ತಾರೆ. ಇದು ಬಹಳ ಕೆಟ್ಟದ್ದು ಎಂದು ಝೈರಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಅಲ್ಲದೇ ಝೈರಾ ಸಹಾಯಕ್ಕಾಗಿ ಕ್ಯಾಬೀನ್ ಸಿಬ್ಬಂದಿಯನ್ನು ಕರೆದಿದ್ದಾರೆ. ಆದರೆ ಯಾವುದೇ ಪ್ರಯೋಜವಾಗಿಲ್ಲ. ಝೈರಾ ಸಹಾಯಕ್ಕೆ ಯಾರು ಬಾರದೇ ಇದ್ದಿದ್ದು, ಅವರಿಗೆ ತುಂಬಾ ಬೇಸರ ಮೂಡಿಸಿದೆ. ಹೀಗಾಗಿ ಮುಂಬೈಗೆ ಬಂದ ಝೈರಾ ಮರುಕ್ಷಣವೇ ಇನ್ ಸ್ಟಾಗ್ರಾಂನಲ್ಲಿ ಫ್ಲೈಟ್‍ನಲ್ಲಿ ನಡೆದ ಘಟನೆ ಬಗ್ಗೆ ಅಳುತ್ತಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

  • 10 ವರ್ಷ ಪ್ರೀತಿಸಿದ್ದ ಹೂ ಮಾರೋ ಪ್ರಿಯಕರನನ್ನು ಬರ್ಬರವಾಗಿ ಕೊಲೆ ಮಾಡಿದ್ಳು!

    10 ವರ್ಷ ಪ್ರೀತಿಸಿದ್ದ ಹೂ ಮಾರೋ ಪ್ರಿಯಕರನನ್ನು ಬರ್ಬರವಾಗಿ ಕೊಲೆ ಮಾಡಿದ್ಳು!

    ಚೆನ್ನೈ: 10 ವರ್ಷಗಳಿಂದ ಪ್ರೀತಿಸಿದ್ದ ಬಳಿಕ ಪ್ರಿಯತಮೆಯೊಬ್ಬಳು ಪ್ರಿಯಕರನ್ನೇ ಕೊಲೆ ಮಾಡಿಸಿದ ಘಟನೆ ಚೆನ್ನೈನ ಗೌರಿಪೇಟ್ ನಲ್ಲಿ ನಡೆದಿದೆ.

    ಸುಂದರಮ್(38) ಕೊಲೆಯಾದ ವ್ಯಕ್ತಿ. ಕೊಲೆ ಎಸಗಿದ ಆರೋಪದ ಅಡಿ ಯುವತಿ ಅಮುದಾಳನ್ನು ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟಂಬರ್ 2ರಂದು ಸುಂದರಮ್ ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಗೆ ಹೋದವನು ಮತ್ತೆ ಹಿಂತಿರುಗಲಿಲ್ಲ. ಮಗ ಮನೆಗೆ ಮರಳದ ಹಿನ್ನೆಲೆಯಲ್ಲಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.

    ಕೊಲೆ ಮಾಡಿದ್ದು ಯಾಕೆ?
    ಹೂ ಮಾರಾಟ ಮಾಡುತ್ತಿದ್ದ ಸುಂದರಮ್ ಗಾಂಜಾ ಸೇವಿಸಿದ ಮತ್ತಿನಲ್ಲಿ ಅಮುದಾಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಇದ್ದರಿಂದ ಬೇಸತ್ತ ಅಮುದಾ ತನ್ನ ಪಕ್ಕದ ಮನೆಯಲ್ಲಿರುವ ಆಟೋ ಡ್ರೈವರ್ ದೀವನ್ ಮೊಹಮ್ಮದ್ ಜೊತೆ ಸ್ನೇಹ ಬೆಳಸಿ ಸುಂದರಮ್ ಬಗ್ಗೆ ಹೇಳಿದ್ದಳು.

    ಸಪ್ಟೆಂಬರ್ 2 ರಂದು ಅಮುದಾ ಹಾಗೂ ಆಕೆಯ ಅತ್ತಿಗೆ ಇಬ್ಬರು ಸೇರಿ ಸುಂದರಮ್ ನನ್ನು ಆಟೋ ಡ್ರೈವರ್ ಮೊಹಮ್ಮದ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸುಂದರಮ್ ಗೆ ಅಡುಗೆಗೆ ಬಳಸುವ ಚಾಕುವಿನಿಂದ ಇರಿದಿದ್ದಾರೆ. ಇದಾದ ಬಳಿಕ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೊಹಮ್ಮದ್ ಮನೆಯ ಹಿಂದೆ ಸುಂದರಮ್ ದೇಹವನ್ನು ಹೂತಿದ್ದರು.

    ಬೆಳಕಿಗೆ ಬಂದಿದ್ದು ಹೇಗೆ?
    ಕೊಲೆ ಪ್ರಕರಣದಲ್ಲಿ ಮಗ ಮೊಹಮ್ಮದ್ ಆತಂಕಗೊಂಡಿರುವುದನ್ನು ತಾಯಿ ಪೊಲೀಸರಿಗೆ ತಿಳಿಸಿದ್ದರು. ವಿಚಾರಣೆ ವೇಳೆಯಲ್ಲಿ ಅಮುದಾ ತಾನು ಕೊಲೆ ಮಾಡಿದ್ದು ಯಾಕೆ ಮತ್ತು ಈ ಕೃತ್ಯಕ್ಕೆ ಸಹಕಾರ ನೀಡಿದವರು ಯಾರು ಎನ್ನುವುದನ್ನು ಹೇಳಿದಾಗ ಪ್ರಕರಣದ ರಹಸ್ಯ ಬೆಳಕಿಗೆ ಬಂದಿದೆ. ಈಗ ಮೊಹಮ್ಮದ್ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.