Tag: harrasement

  • ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕಿರುಕುಳ- ಆರೋಪಿ ಬಂಧನ

    ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದ ನಟಿಗೆ ಕಿರುಕುಳ- ಆರೋಪಿ ಬಂಧನ

    ತಿರುವನಂತಪುರಂ: ದಕ್ಷಿಣ ಭಾರತದ ಜನಪ್ರಿಯ ನಟಿ ಪಾರ್ವತಿ ತಿರುವೋತು ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲ್ಲಂ ಮೂಲದ ಅಫ್ಸಲ್ (34) ಬಂಧಿತ ಆರೋಪಿ. ನಟಿಗೆ ನಿರಂತರ ಫೋನ್ ಕರೆಗಳ ಮೂಲಕ ಆರೋಪಿಯು ತೊಂದರೆಯನ್ನು ನೀಡುತ್ತಿದ್ದ. ಅಷ್ಟೇ ಅಲ್ಲದೆ ಈತ ಆಹಾರ ಪೊಟ್ಟಗಳನ್ನು ನೀಡಲು ಕೊಚ್ಚಿಯಲ್ಲಿರುವ ನಟಿ ಪಾರ್ವತಿ ನಿವಾಸಕ್ಕೆ ಆಗಾಗ ಬಂದು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿದ್ದ.

    ಕಳೆದ ಕೆಲವು ವರ್ಷಗಳಿಂದ ಫೋನ್ ಸಂದೇಶಗಳ ಮೂಲಕ ನಟಿಗೆ ತೊಂದರೆ ನೀಡುತ್ತಿದ್ದನು. ಇದರ ಬೆನ್ನಲ್ಲೇ ನಟಿ ಎರ್ನಾಕುಲಂನ ಮರಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿ ಅಫ್ಸಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ: ಯುವರತ್ನ ನಟಿ 

    ನಟಿ ಪಾರ್ವತಿ ಅವರು ಕನ್ನಡದಲ್ಲೂ ನಟಿಸಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜೊತೆ ‘ಮಿಲನ್’ ಹಾಗೂ ‘ಪೃಥ್ವಿ’ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರು. ಇತ್ತೀಚೆಗೆ ವಸಂತ್ ನಿರ್ದೇಶನದ ಸಿವರಂಜಿನಿಯಂ ಇನ್ನುಮ್ ಸಿಲಾ  ಪೆಂಗಲುಮ್ ನಲ್ಲಿನ ಅಭಿನಯಿಸಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು. ಸಿವರಂಜಿನಿಯಂ ಇನ್ನುಮ್ ಸಿಲಾ ಪೆಂಗಲುಮ್ ಸಿನಿಮಾವು ಅಶೋಕ ಮಿತ್ರನ್, ಅಧವನ್ ಮತ್ತು ಜಯಮೋಹನ್ ಬರೆದ ಕಥೆಗಳನ್ನು ಆಧರಿಸಿದ ಮೂರು ಮಹಿಳಾ ಕೇಂದ್ರಿತ ಕಿರುಚಿತ್ರಗಳ ಸಂಕಲನವಾಗಿದೆ. ಈ ಚಿತ್ರದಲ್ಲಿ ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಪಾರ್ವತಿ ತಿರುವೋತ್ತು ಮತ್ತು ಕಾಳೇಶ್ವರಿ ಶ್ರೀನಿವಾಸನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಇದನ್ನೂ ಓದಿ: ಕಪಿಲ್‌ ದೇವ್‌ ಆಗಲು ನಿತ್ಯ 4 ಗಂಟೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದ ರಣವೀರ್‌ ಸಿಂಗ್‌!

     

  • ಪತ್ನಿಯ ಖಾಸಗಿ ಅಂಗಕ್ಕೆ ಬಿಸಿ ಚಾಕು ಇಟ್ಟ ಕ್ರೂರ ಪತಿ!

    ಪತ್ನಿಯ ಖಾಸಗಿ ಅಂಗಕ್ಕೆ ಬಿಸಿ ಚಾಕು ಇಟ್ಟ ಕ್ರೂರ ಪತಿ!

    ಅಹಮದಾಬಾದ್: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಖಾಸಗಿ ಅಂಗವನ್ನು ಬಿಸಿ ಚಾಕುವಿನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ಗುಜರಾತ್‍ನ ರಾಯಗಢ ಪ್ರದೇಶದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಶುಕ್ರವಾರದಂದು 40 ವರ್ಷದ ಮಹಿಳೆ ತನ್ನ ಸ್ನೇಹಿತನ ಜೊತೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಮನೆಗೆ ಬಂದ ಪತಿ, ಪತ್ನಿ ಫೋನ್‍ನಲ್ಲಿ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದಾನೆ. ಬಳಿಕ ಇಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಅನುಮಾನ ಪಟ್ಟು ಜಗಳವಾಡಿದ್ದಾನೆ. ಆಗ ತಾನು ಏನು ತಪ್ಪು ಮಾಡಿಲ್ಲ ಅಂತ ಪತ್ನಿ ಮಕ್ಕಳ ಮೇಲೆ ಪ್ರಮಾಣ ಮಾಡಿದಾಗ ಇನ್ನಷ್ಟು ಕೋಪಗೊಂಡ ಪತಿ ಆಕೆಗೆ ಬೆಲ್ಟ್‍ನಿಂದ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿದ್ದಾನೆ.

    ಥಳಿತದಿಂದ ಪತ್ನಿ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಆಗ ಆಕೆಯ ಖಾಸಗಿ ಅಂಗಕ್ಕೆ ಚಾಕುವೊಂದನ್ನು ಬಿಸಿ ಮಾಡಿ ಇಟ್ಟು ಚಿತ್ರಹಿಂಸೆ ನೀಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಮರುದಿನ ಮತ್ತೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಇತ್ತ ಪತಿ ಮನೆಯಿಂದ ಹೊರ ಹೋಗ್ತಿದ್ದಂತೆ ಅಲ್ಲಿಂದ ತಪ್ಪಿಸಿಕೊಂಡ ಪತ್ನಿ, ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿ ಬಳಿಕ ಆಸ್ಪತ್ರೆ ಸೇರಿದ್ದಾಳೆ.

    ಈ ಘಟನೆಯಿಂದ ಆಕ್ರೋಶಗೊಂಡ ಸಂಬಂಧಿಕರು ವಿಕೃತಿ ಮೆರೆದ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಪಾಪಿ ಪತಿ ಪರಾರಿಯಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv