Tag: Harlin Doel

  • ಹರ್ಲೀನ್ ಡಿಯೋಲ್‍ಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ

    ಹರ್ಲೀನ್ ಡಿಯೋಲ್‍ಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ

    ನವದೆಹಲಿ: ಭಾರತ ಮಹಿಳಾ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್‍ನಿಂದ ಇಡೀ ವಿಶ್ವದ ಗಮನಸೆಳೆದಿದ್ದಾರೆ. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಡಿಯೋಲ್ ಅವರ ಕ್ಯಾಚ್‍ನ ವೀಡಿಯೋವನ್ನು ಸ್ಟೋರಿ ಹಾಕುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹರ್ಲೀನ್ ಡಿಯೋಲ್ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್‍ಗೆ ದಿಗ್ಗಜ ಕ್ರಿಕೆಟಿಗರು ಸಹಿತ ಅಭಿಮಾನಿಗಳು ಮನಸೋತಿದ್ದರು. ಇದೀಗ ಮೋದಿ ಕೂಡ ಈ ಮಹಿಳಾ ಕ್ರಿಕೆಟ್ ತಾರೆಯ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಅದ್ಭುತ, ಉತ್ತಮ ಪ್ರದರ್ಶನ ಇದನ್ನು ನೋಡದೆ ಇರಬೇಡಿ ಎಂದು ವೀಡಿಯೋದ ತುಣುಕನ್ನು ಇನ್‍ಸ್ಟಾ ಸ್ಟೋರಿ ಹಾಕಿಕೊಂಡಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಮೊದಲ ಟ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5ನೇ ಓವರ್‍ ನಲ್ಲಿ ಎಮಿ ಜೋನ್ಸ್ ಬಾರಿಸಿದ ಬಿಗ್ ಶಾಟ್ ಒಂದನ್ನು ಲಾಂಗ್ ಆಫ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲೀನ್ ಕ್ಷಣ ಮಾತ್ರದಲ್ಲಿ ಜಿಂಕೆಯಂತೆ ನೆಗೆದು ಸ್ಟನ್ನಿಂಗ್ ಕ್ಯಾಚ್ ಹಿಡಿದು ವೀಕ್ಷರನ್ನು ನಿಬ್ಬೆರಗಾಗುವಂತೆ ಮಾಡಿದರು. ಇದನ್ನೂ ಓದಿ: ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್ – ದಿಗ್ಗಜರು ಬೆರಗು

    ಜೋನ್ಸ್ ಹೊಡೆದ ಬಿಗಿಯಾದ ಹೊಡೆತ ಇನ್ನೆನೂ ಸಿಕ್ಸರ್ ಹೊಗಬೇಕೆನ್ನುವಷ್ಟರಲ್ಲಿ ಚಂಗನೆ ಜಿಗಿದ ಹರ್ಲೀನ್ ಬಾಲ್ ಹಿಡಿದರು. ಈ ವೇಳೆ ಸಮತೋಲನ ಕಳೆದುಕೊಂಡು ಚೆಂಡನ್ನು ಮತ್ತೆ ಮೇಲಕ್ಕೆಸೆದರು. ಬಳಿಕ ಬೌಂಡರಿ ಗೆರೆ ದಾಟಿ ಮತ್ತೆ ಮೈದಾನದೊಳಗೆ ಹಾರಿ ಕ್ಯಾಚ್ ಹಿಡಿಯುವ ಮೂಲಕ ಸ್ವತಃ ಭಾರತ ತಂಡದ ನಾಯಕಿ ಸೃತಿ ಮಂಧಾನ ಅವರನ್ನೂ ಕೂಡ ದಂಗುಬಡಿಸಿದರು.