Tag: hariyali mutton curry

  • ಹರಿಯಾಲಿ ಮಟನ್ ಗ್ರೇವಿ ಮಾಡುವುದು ಹೇಗೆ ಗೊತ್ತಾ?

    ಹರಿಯಾಲಿ ಮಟನ್ ಗ್ರೇವಿ ಮಾಡುವುದು ಹೇಗೆ ಗೊತ್ತಾ?

    ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾಂಸಾಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ.  ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ,  ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಹರಿಯಾಲಿ ಮಟನ್ ಗ್ರೇವಿಯನ್ನು ತಯಾರಿಸಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಮಟನ್- 1 ಕೆಜಿ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಹಸಿ ಮೆಣಸಿನಕಾಯಿ- 3
    * ಈರುಳ್ಳಿ- 1
    * ಶುಂಠಿ-ಬೆಳ್ಳುಳ್ಳಿ- ಪೇಸ್ಟ್
    * ಗೋಡಂಬಿ- 6-7
    * ಚಕ್ಕೆ-1
    * ಜೀರಿಗೆ ಪುಡಿ- 1 ಚಮಚ
    * ದನಿಯಾ ಪೌಡರ್-2 ಚಮಚ
    * ರುಚಿಗೆ ತಕ್ಕ ಉಪ್ಪು-
    * ಎಣ್ಣೆ – ಅರ್ಧ ಕಪ್

    ಮಾಡುವ ವಿಧಾನ:
    * ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ, ಗೋಡಂಬಿ, ಚಕ್ಕೆ, ಲವಂಗ, ಕರಿ ಮೆಣಸು ಹಾಕಿ ಪೇಸ್ಟ್ ಮಾಡಿಕೊಳ್ಳಿ.

    * ಪಾತ್ರೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗಾಗಲೇ ತಯಾರು ಮಾಡಿದ ಮಿಶ್ರಣದ ಪೇಸ್ಟ್ ಹಾಕಿ ಚೆನ್ನಾಗಿ ಬೇಯಿಸಬೇಕು.

    * ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ದನಿಯಾ ಪೌಡರ್, ಜೀರಿಗೆ ಪುಡಿ ಹಾಗೂ ರುಬ್ಬಿದ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ.

    * ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಟನ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆ ಬೇಯಿಸಿದರೆ ರುಚಿಯಾದ ಹರಿಯಾಲಿ ಮಟನ್ ಸವಿಯಲು ಸಿದ್ಧವಾಗುತ್ತದೆ.