Tag: Harish Kumar

  • ‘ಅನಾವರಣ’ ಚಿತ್ರದ ಮೊದಲ ಹಾಡು ರಿಲೀಸ್: ಅರ್ಜುನ್ ಯೋಗಿ ಸಿನಿಮಾ

    ‘ಅನಾವರಣ’ ಚಿತ್ರದ ಮೊದಲ ಹಾಡು ರಿಲೀಸ್: ಅರ್ಜುನ್ ಯೋಗಿ ಸಿನಿಮಾ

    ಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್. ರಾಮಚಂದ್ರ, ಸತ್ಯ ರಾಣಿ ಜಿ ಮತ್ತು ರಚನಾ ಬಿ. ಹೆಚ್ ನಿರ್ಮಾಣದ ‘ಅನಾವರಣ’ (Anavarana) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಏನಾಗಿದೆ ಎಂಬ ಪ್ರೇಮಗೀತೆಗೆ ಶಶಿಕುಮಾರ್ ಬೆಳವಾಡಿ ಸಾಹಿತ್ಯ ಬರೆದಿದ್ದು, ವಿಶಾಲ್ ಸಿ ಕೃಷ್ಣ ಟ್ಯೂನ್ ಹಾಕಿದ್ದಾರೆ. ಅರ್ಜುನ್ ಯೋಗಿ (Arjun Yogi), ಸಾರಿಕಾ ರಾವ್ (Sarika Rao) ಹಾಡಿನಲ್ಲಿ ಮಿಂಚಿದ್ದಾರೆ.

    ನಿರ್ದೇಶಕ ಹರೀಶ್ ಕುಮಾರ್ (Harish Kumar) ಮಾತನಾಡಿ, ಇದು ನಮ್ಮ ಹಲವಾರು ವರ್ಷದ ಕನಸು. ನಾನು 15 ವರ್ಷ ರಂಗಭೂಮಿಯಲ್ಲಿ ದುಡಿದೆವು. ಸಿನಿಮಾ ಸೆಳೆತ ಬಂತು. 40 ಕಿರುಚಿತ್ರ ನಿರ್ದೇಶಿಸಿದ್ದೇವೆ. ನಮ್ಮ ಕಥೆ ಒಳ್ಳೆ ಒಮ್ಮತ ಬಂತು. ಹೀಗಾಗಿ ಚಿತ್ರ ಮಾಡಲು ಹೆಜ್ಜೆ ಇಟ್ಟೆವು. ಚಿತ್ರದಲ್ಲಿ ಬರುವ ಹಲವಾರು ವಿಶೇಷತೆಗಳ ಅನಾವರಣ. ನಮ್ಮ ನಿರ್ದೇಶಕರ ಪಯಣಕ್ಕೆ ಅನಾವರಣ. ಒಳ್ಳೆ ಸಾಹಿತ್ಯದ ಅನಾವರಣ, ಇಬ್ಬರು ಬೆನ್ನುತಟ್ಟಿದ ನಿರ್ಮಾಪಕ ಅನಾವರಣ.. ನಮ್ಮದೇ ಕಥೆ ಅನಿಸುವ ಸಿನಿಮಾವಿದು ಎಂದರು. ನಿರ್ದೇಶಕ ಮಂಜುನಾಥ್ ಮಾತನಾಡಿ, ತುಂಬಾ ಪ್ರೀತಿ ಮಾಡುವವರು, ತುಂಬಾ ಪ್ರೀತಿಯಾದರೆ ಯಾವ ರೀತಿ, ಕಾಟ, ಭಾದೆ ಇರುತ್ತದೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ ಎಂದರು.

    ಅರ್ಜುನ್ ಯೋಗಿ ಮಾತನಾಡಿ, ನನ್ನ ಹಿಂದಿನ ಸಿನಿಮಾ ಚೇಸ್ ನೋಡಿ ಕಾಲ್ ಮಾಡಿದ್ದರು. ಚಿತ್ರ ರಿಲೀಸ್ ದಿನ ನಮ್ಮ ಕೆಲಸ ನೋಡಿ ಮೆಚ್ಚಿ ಇನ್ನೊಂದು ಕೆಲಸ ಕೊಡ್ತಾರೆ ಅದೇ ಖುಷಿ ವಿಚಾರ. ಅನಾವರಣ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಅವರು ಏನ್ ಕಥೆ ಹೇಳಿದ್ದರು ಅದಕ್ಕಿಂತ ದುಪ್ಪಟ್ಟಾಗಿ ಸಿನಿಮಾ ಮೂಡಿಬಂದಿದೆ. ಗ್ಲಿಂಪ್ಸ್, ಟ್ರೇಲರ್ ನೋಡಿದ್ದೇನೆ. ಈ ತಂಡ ಗೆದ್ದರೆ ಇನ್ನೊಂದಿಷ್ಟು ಸಿನಿಮಾಗಳು ಹುಟ್ಟಿಕೊಳ್ಳುತ್ತದೆ. ತುಂಬಾ ಚೆನ್ನಾಗಿ ಕಥೆ ಕಟ್ಟಿದ್ದಾರೆ. ನನಗೆ ಬಹಳ ಇಷ್ಟವಾಗಿದೆ. ನಾನು ಸಾಫ್ಟ್ ವೇರ್ ಇಂಜಿನಿಯರ್ ಪಾತ್ರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದರು.

    ನಟಿ ಸಾರಿಕಾ ಮಾತನಾಡಿ, ತುಂಬಾ ಪೊಸೆಸಿವ್ ನೆಸ್ ಆಗಿರುವ ಹುಡುಗಿ ಪಾತ್ರ ನನ್ನದು. ನಿಮಗೆ ಎಲ್ಲರಿಗೂ ಕೋಪ ಬರುತ್ತದೆ ಅಂತಹ ಕಾರೆಕ್ಟರ್. ಗಂಡ ಎಲ್ಲಿ ಹೋಗಲಿ ಬಿಡ್ಲಿ ಅವನಿಗೆ ಅಷ್ಟು ಟಾರ್ಚರ್ ಕೊಟ್ಟಾಗಿ ಬಿಟ್ಟಿದ್ದೇನೆ. ಶೂಟಿಂಗ್ ಸೆಟ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇನೆ. ಶೂಟಿಂಗ್ ಅನಿಸುತ್ತನೆ ಇರಲಿಲ್ಲ. ಹಾಲಿಡೇ ತರ ಇತ್ತು. ಮಂಜು ಸರ್ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಬೇಕು ಎಂದರು.

     

    ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ,ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರತಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ ತಾರಾಬಳಗದಲ್ಲಿದ್ದಾರೆ. ಆಗಿದೆ. ಹರೀಶ್ ಕುಮಾರ್, ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಿ ಸಂಕಲನ, ಶಶಿಕುಮಾರ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ವಿಶಾಲ್ ಸಿ ಕೃಷ್ಣ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಶೂಟಿಂಗ್ ಮುಗಿಸಿ ಸೆನ್ಸಾರ್ ಅಂಗಳ ಹೋಗಲು ರೆಡಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈದ್ಗಾ ಮೈದಾನ ಆಟದ ಮೈದಾನ, ಬಿಬಿಎಂಪಿ ಆಸ್ತಿ: ಹರೀಶ್ ಕುಮಾರ್

    ಈದ್ಗಾ ಮೈದಾನ ಆಟದ ಮೈದಾನ, ಬಿಬಿಎಂಪಿ ಆಸ್ತಿ: ಹರೀಶ್ ಕುಮಾರ್

    ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನವು ಆಟದ ಮೈದಾನವಾಗಿದ್ದು, ಬಿಬಿಎಂಪಿ ಆಸ್ತಿ ಆಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಕೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋರ್ಟ್ ನಿರ್ದೇಶನದ ಪ್ರಕಾರ ವರ್ಷದಲ್ಲಿ 2 ಬಾರಿ ಪ್ರಾರ್ಥನೆಗೆ ಅವಕಾಶ ಕೊಡಲಾಗುತ್ತಿದೆ. ಕೋರ್ಟ್ ನೀಡಿರುವ 2 ಅವಧಿ ಬಿಟ್ಟು ಅವಕಾಶ ಕೇಳಿದ್ದರೆ ಬೇರೆ ಚಟುವಟಿಕೆಗೆ ಅವಕಾಶ ಕೊಡಲಾಗುತ್ತದೆ. ಆದರೆ ಕೋಮು ಸೌಹರ್ದತೆ ಹಾಳಾಗುವ ವಿಚಾರ ಹಾಗೂ ಕಾನೂನು ವಿಚಾರ ತೊಂದರೆ ಆದರೆ ಕೂಡಲೇ ಪೊಲೀಸ್ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.

    ಭಾನುವಾರ ಹಿಂದೂಗಳಿಗೂ ಇತರೆ ಕಾರ್ಯಕ್ರಮಗಳಿಗೆ ಮೈದಾನ ನೀಡಬೇಕು. ಮುಸ್ಲಿಂ ಸಮುದಾಯಕ್ಕೊಂದೇ ಈ ಜಾಗ ಸೀಮಿತವಾಗಿಲ್ಲ ಎಂದು ವಂದೇ ಮಾತರಂ ಸಂಘಟನೆಯ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ್ ಮತ್ತು ಅವರ ತಂಡ, ಈದ್ಗಾ ಮೈದಾನದ ಕಟ್ಟೆಯ ಮೇಲೆ ಕೂತು ಆಗ್ರಹಿಸಿದ್ದರು. ಸ್ಥಳೀಯರು ಕೂಡ ಜಮಾಯಿಸ್ತಿದ್ದಂತೆ ಎಚ್ಚೆತ್ತ ಪೊಲೀಸರು ವಶಕ್ಕೆ ಪಡೆದಿದ್ದರು.

    ಕಳೆದ ಮೂರು ದಿನಗಳ ಹಿಂದೆ, ಈ ವಿಚಾರವಾಗಿ ಸನಾತನ ಹಿಂದೂ ಪರಿಷತ್ತು ಕಿಡಿಕಾರಿತ್ತು. ನಮಗೂ ಚಾಮರಾಜಪೇಟೆಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬದ ದಿವಸ ರಾಷ್ಟ್ರಧ್ವಜ ಹಾರಿಸಲು ಅವಕಾಶ ಕೊಡಿ ಎಂದು ಸಿಎಂಗೆ ಪತ್ರ ಬರೆದಿತ್ತು. ಇದನ್ನೂ ಓದಿ: ಮಸೀದಿ ಆಯ್ತು ಈಗ ಈದ್ಗಾ ಮೈದಾನ – ಏನಿದು ವಿವಾದ? ಹಿಂದೂಗಳ ವಾದವೇನು? ಬಿಬಿಎಂಪಿ ದಾಖಲೆಯಲ್ಲಿ ಏನಿದೆ?

    ಚಾಮರಾಜಪೇಟೆಯ ಮೈದಾನ ಸಾರ್ವಜನಿಕರ ಆಸ್ತಿ. ಆದರೆ ಒಂದೇ ಸಮುದಾಯಕ್ಕೆ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟು, ನಮಗ್ಯಾಕೆ ತಾರತಮ್ಯ ಮಾಡ್ತಾ ಇದ್ದೀರಿ ಅಂತ ಕಿಡಿಕಾರಿದ್ದರು. ಇದರಿಂದ ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಲು ಪೊಲೀಸರ ಭದ್ರತೆ ಹೆಚ್ಚಿಸಲಾಗಿತ್ತು. ಇದರ ನಡುವೆಯೂ ಇಂದು ಕನ್ನಡ ಸಂಘಟನೆಯ ಮುಖಂಡರ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

  • ಹುಟ್ಟಿದ ಮಗು ಹೆಣ್ಣೆಂದು ಗೊತ್ತಾಗ್ತಿದ್ದಂತೆ ಬಾಯೊಳಗೆ ಬೆರಳು ತುರುಕಿ ಉಸಿರುಗಟ್ಟಿಸಿ ಕೊಂದ!

    ಹುಟ್ಟಿದ ಮಗು ಹೆಣ್ಣೆಂದು ಗೊತ್ತಾಗ್ತಿದ್ದಂತೆ ಬಾಯೊಳಗೆ ಬೆರಳು ತುರುಕಿ ಉಸಿರುಗಟ್ಟಿಸಿ ಕೊಂದ!

    ಶಿಮ್ಲಾ: ಆಗ ತಾನೇ ಹುಟ್ಟಿದ ಮಗು ಹೆಣ್ಣು ಎಂದು ಗೊತ್ತಾಗುತ್ತಿದ್ದಂತೆ ಅದರ ಬಾಯೊಳಗೆ ತನ್ನ ಬೆರಳು ತುರುಕಿ ಉಸಿರುಗಟ್ಟಿಸಿ ಕೊಲೆಗೈದ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಕೃತ್ಯ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಆರೋಪಿಯನ್ನು ಹರೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆಯ ನಸ್ಲೋಹ್ ಗ್ರಾಮದ ನಿವಾಸಿ. ಈತನ ವಿರುದ್ಧ ಪತ್ನಿ ಮೀನಾ ದೇವಿ(27) ಪೊಲೀಸರ ಬಳಿ ಪತಿಯ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ.

    8 ವರ್ಷಗಳ ಹಿಂದೆ ನಾನು ಕುಮಾರ್ ನನ್ನು ಮದುವೆಯಾಗಿದ್ದು, ಈಗಾಗಲೇ ನಮಗೆ 7 ಮತ್ತು 4 ವರ್ಷದ ಹೆಣ್ಣು ಹಾಗೂ ಗಂಡು ಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ನನಗೆ ಇಬ್ಬರು ಗಂಡು ಮಕ್ಕಳು ಬೇಕು ಎಂದು ಕುಮಾರ್ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನು ಎಂದು ಮೀನಾ ಪೊಲೀಸರ ಬಳಿ ತಿಳಿಸಿದ್ದಾಳೆ.

    ಇತ್ತ ಬುಧವಾರ ಮೀನಾ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದರಿಂದ ಸಿಟ್ಟಿಗೆದ್ದ ಕುಮಾರ್, ಪತ್ನಿಗೆ ಚೆನ್ನಾಗಿ ಥಳಿಸಿದ್ದಾನೆ. ಅಲ್ಲದೆ ಆಗ ತಾನೇ ಹುಟ್ಟಿದ ಮಗುವನ್ನು ತಲೆಕೆಳಗೆ ಮಾಡಿ ಹಿಡಿದುಕೊಂಡು ಬಾಯೊಳಗೆ ತನ್ನ ಕೈ ಬೆರಳು ತುರುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇಷ್ಟಾದ ನಂತರ ಕೆಲ ಸಮಯದ ಬಳಿಕ ಮತ್ತೆ ನನ್ನ ಬಳಿ ಬಂದು ತಾನು ಮಗುವನ್ನು ಸಮಾಧಿ ಮಾಡಿದೇನೆ ಎಮದು ಹೇಳಿದ್ದಾನೆ ಅಂತ ಮೀನಾ ಪೊಲೀಸರ ಬಳಿ ಕಣ್ಣೀರು ಹಾಕಿದ್ದಾಳೆ.

  • ಸಿಎಂ, ಪುತ್ರರ ಕಿರುಕುಳದಿಂದ ಸೆಂಥಿಲ್ ರಾಜೀನಾಮೆ: ಹರೀಶ್ ಕುಮಾರ್

    ಸಿಎಂ, ಪುತ್ರರ ಕಿರುಕುಳದಿಂದ ಸೆಂಥಿಲ್ ರಾಜೀನಾಮೆ: ಹರೀಶ್ ಕುಮಾರ್

    – ರಾಜೀನಾಮೆ ಹಿಂದಿದೆ ಷಡ್ಯಂತ್ರ

    ಮಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರರ ಕಿರುಕುಳದಿಂದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದಾರೆ.

    ಸಸಿಕಾಂತ್ ರಾಜೀನಾಮೆ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಹರೀಶ್ ಕುಮಾರ್, ಬಿಜೆಪಿ ಸರ್ಕಾರದ ಕಿರುಕುಳ ಮತ್ತು ಒತ್ತಡದಿಂದ ಸಸಿಕಾಂತ್ ರಾಜೀನಾಮೆ ನೀಡಿದ್ದಾರೆ. ಸಿಎಂ ಮತ್ತು ಪುತ್ರರು ಅಧಿಕಾರಿಗಳ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಇದೇ ಸರ್ಕಾರ ಮುಂದುವರಿದ್ರೆ ಕೇವಲ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಅಲ್ಲದೇ ಕೆಳವರ್ಗದ ನೌಕರರು ರಾಜಿನಾಮೆ ನೀಡುವ ಪರಿಸ್ಥಿತಿ ಬರಲಿದೆ. ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ಸರ್ಕಾರ ಸುಸ್ಥಿತ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.

    ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮಾತನಾಡಿ, ಸಸಿಕಾಂತ್ ಸೆಂಥಿಲ್ ಕಾರಣವಿಲ್ಲದೇ ರಾಜೀನಾಮೆ ನೀಡುವಂತಹ ಅಧಿಕಾರಿ ಅಲ್ಲ. ಒಬ್ಬ ಐಎಎಸ್ ಅಧಿಕಾರಿ ರಾಜೀನಾಮೆ ನೀಡಿರುವ ಹಿಂದೆ ಒಂದು ಷಡ್ಯಂತ್ರವಿರುವ ಅನುಮಾನಗಳಿವೆ. ಓರ್ವ ಐಎಎಸ್ ಅಧಿಕಾರಿ ಯಾಕೆ ರಾಜೀನಾಮೆ ನೀಡಿದ್ರು ಎಂಬ ವಿಷಯವನ್ನು ಮುಖ್ಯಮಂತ್ರಿಗಳು ರಾಜ್ಯದ ಜನತೆ ತಿಳಿಸಬೇಕು. ಸೆಂಥಿಲ್ ಜಿಲ್ಲೆಯಲ್ಲಿ ಡ್ರಗ್ ಮಾಫಿಯಾ ಸೇರಿದಂತೆ ಹಲವು ಅವ್ಯವಹಾರಗಳನ್ನು ತಡೆದಿದ್ದರು. ಏಕಚಕ್ರಾಧಿಪತ್ಯ ಹೊಂದಿರುವ ಬಿಜೆಪಿ ಸರ್ಕಾರ ಮರಳು ದಂಧೆಗೆ ಮುಂದಾಗಿತ್ತು. ತಮಗೆ ಸಂಬಂಧಿಸಿದ ಜನರಿಗೆ ಮರಳು ದಂಧೆಗೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಅಕ್ರಮ ಮರಳು ದಂಧೆಗೆ ಸಸಿಕಾಂತ್ ಸೆಂಥಿಲ್ ಬಲಿ?

    ದೇಶದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ನಾನು ಹೊಂದಾಣಿಕೆ ಮತ್ತು ಅನೈತಿಕ ಕಾರ್ಯಗಳಲ್ಲಿ ಭಾಗಿಯಾಗಲು ಇಷ್ಟಪಡಲ್ಲ. ಮನಸ್ಸಿಗೆ ಒಪ್ಪದ ವಿಚಾರಗಳಿಗೆ ಅಡ್ಜಸ್ಟ್ ಮಾಡಿಕೊಳ್ಳದೇ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ನೀಡಿ ಓರ್ವ ಸಾಮಾನ್ಯ ವ್ಯಕ್ತಿಯಾಗಿ ಹೋರಾಟ ಮಾಡುತ್ತೇನೆ ಎಂದು ಸೆಂಥಿಲ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಸೆಂಥಿಲ್ ಮರಳು ಮಾಫಿಯಾಗೆ ಬಲಿಯಾಗಿದ್ದು, ಮುಖ್ಯಮಂತ್ರಿಗಳು ಅಧಿಕಾರಿಯ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡಬೇಕೆಂದು ಐವಾನ್ ಡಿಸೋಜ ಆಗ್ರಹಿಸಿದರು. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ರಾಜಿನಾಮೆ

  • ಟೀ ಮಾರುತ್ತಿದ್ದಾರೆ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ!

    ಟೀ ಮಾರುತ್ತಿದ್ದಾರೆ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ!

    ನವದೆಹಲಿ: ಭಾರತದ ಪರ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಕಂಚು ಪದಕ ಪಡೆದಿದ್ದ ಹರೀಶ್ ಕುಮಾರ್ ಹೊಟ್ಟೆ ಪಾಡಿಗಾಗಿ ಟೀ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ.

    ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಹರೀಶ್, ನಮ್ಮದು ದೊಡ್ಡ ಕುಟುಂಬವಾಗಿದ್ದು, ಮನೆಯ ಆದಾಯ ಪ್ರಮಾಣ ಕಡಿಮೆ ಇದೆ. ಅದ್ದರಿಂದ ತಂದೆಗೆ ಸಹಾಯವಾಗಲು ಪ್ರತಿನಿತ್ಯ ಟೀ ಹೋಟೆಲ್‍ನಲ್ಲಿ ಕೆಲಸ ಮಾಡುತ್ತೇನೆ. ಇದನ್ನು ಹೊರತು ಪಡಿಸಿ ನಿತ್ಯ 2 ರಿಂದ 6 ಗಂಟೆಗಳ ಕಾಲ ತರಬೇತಿ ಪಡೆಯಲು ಶ್ರಮವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಉತ್ತಮ ಉದ್ಯೋಗ ಪಡೆದು ಕುಟುಂಬಕ್ಕೆ ಆಸರೆಯಾಗುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

    2018 ರ ಏಷ್ಯನ್ ಗೇಮ್ಸ್ ನ ಕಾಲಿನ ಮೂಲಕ ಚೆಂಡನ್ನು ಕಳುಹಿಸುವ ಸೆಪಕ್ ಟಕ್ರಾವ್(ಕಿಕ್ ವಾಲಿಬಾಲ್) ಹರೀಶ್ ತಂಡದ ಸದಸ್ಯರಾಗಿದ್ದರು. 2011 ರಲ್ಲಿ ತಾನು ಕ್ರೀಡಾ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಕೋಚ್ ಹೇಮ್ರಾಜ್ ಅವರು ನನ್ನನ್ನು ಈ ಕ್ರೀಡೆಗೆ ಪರಿಚಯಿಸಿದರು. ಬಳಿಕ ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಬಲ ನೀಡಿದೆ. ಈ ಕ್ರೀಡೆಯಲ್ಲಿ ದೇಶಕ್ಕಾಗಿ ಉತ್ತಮ ಹೆಸರು ತರಲು ಶ್ರಮವಹಿಸುತ್ತಿದ್ದೇನೆ ಎಂದರು.

    ಹರೀಶ್ ಅವರ ಈ ಸಾಧನೆಗೆ ಕುಟುಂಬಸ್ಥರ ಬೆಂಬಲವೂ ಇದ್ದು ಮಗನ ಸಾಧನೆಯನ್ನು ಗುರುತಿಸಿದ ಕೋಚ್‍ಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ದೇಶಕ್ಕಾಗಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಹೊಂದಿರುವ ತಮ್ಮ ಮಗನಿಗೆ ಸರ್ಕಾರ ಊಟ ಹಾಗೂ ವಸತಿ ನೀಡಿದೆ ಎಂದು ತಿಳಿಸಿದ್ದಾರೆ. ಅಂದಹಾಗೇ ವೃತ್ತಿಯಲ್ಲಿ ಹರೀಶ್ ಅವರ ತಂದೆ ಆಟೋ ಚಾಲಕರಾಗಿದ್ದು, ದೆಹಲಿಯಲ್ಲಿ ಸಣ್ಣ ಟೀ ಅಂಗಡಿ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv