Tag: Harikathe Alla Girikathe

  • ಸೀತಾ ಮಾತೆಯ ಲುಕ್‌ನಲ್ಲಿ ಕಂಗೊಳಿಸಿದ ನಟಿ ತಪಸ್ವಿನಿ ಪೂಣಚ್ಚ

    ಸೀತಾ ಮಾತೆಯ ಲುಕ್‌ನಲ್ಲಿ ಕಂಗೊಳಿಸಿದ ನಟಿ ತಪಸ್ವಿನಿ ಪೂಣಚ್ಚ

    ಸ್ಯಾಂಡಲ್‌ವುಡ್ (Sandalwood) ನಟಿ ತಪಸ್ವಿನಿ ಪೂಣಚ್ಚ (Thapaswini Poonacha) ಅವರು ಸೀತಾ ಮಾತೆಯ ಥೀಮ್‌ನಲ್ಲಿ ಸಖತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸೀತೆಯ ಗೆಟಪ್‌ನಲ್ಲಿ ನಟಿ ಗಮನ ಸೆಳೆದಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಧ್ರುವ ಸರ್ಜಾ ಮಕ್ಕಳ ನಾಮಕರಣದಲ್ಲಿ ಭಾಗಿಯಾದ ಸಂಜಯ್ ದತ್

    ‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಅವರು ಕೆಂಪು ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ.  ಸೀತಾ ಮಾತೆಯಂತೆ ಕಾಣಿಸಿಕೊಳ್ಳುವ ಮೂಲಕ ತಪಸ್ವಿನಿ ನೋಡುಗರ ಮನಗೆದ್ದಿದ್ದಾರೆ. ನಟಿಯ ಲುಕ್‌ಗೆ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಹರಿದು ಬರುತ್ತಿವೆ.

    ರಿಷಬ್ ಶೆಟ್ಟಿಗೆ (Rishab Shetty) ನಾಯಕಿಯಾಗಿ ತಪಸ್ವಿನಿ ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ಕೊಡಗಿನ ಕುವರಿ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಪ್ರಸ್ತುತ ‘ಗಜರಾಮ’ (Gajarama) ಸಿನಿಮಾದಲ್ಲಿ ತಪಸ್ವಿನಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ರಿಲೀಸ್ ಆಗಲಿದೆ.

    ಬಗೆ ಬಗೆಯ ಪಾತ್ರಗಳ ಮೂಲಕ ತಪಸ್ವಿನಿ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಸದ್ಯ ‘ಗಜರಾಮ’ ಚಿತ್ರದಲ್ಲಿ ರಾಜವರ್ಧನ್‌ಗೆ ನಾಯಕಿಯಾಗಿ ತಪಸ್ವಿನಿ ನಟಿಸಿದ್ದು, ಈ ಚಿತ್ರದ ಮೂಲಕ ಕೊಡಗಿನ ಕುವರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೀಗ ವೈವಾಹಿಕ ಬದುಕು ಮತ್ತು ಸಿನಿಮಾರಂಗ ಎರಡನ್ನು ನಟಿ ನಿಭಾಹಿಸುತ್ತಿದ್ದಾರೆ.

  • ಹೊಸತನದ ಪ್ರಯೋಗದೊಂದಿಗೆ ಹರಿಕಥೆ ಅಲ್ಲ ಗಿರಿಕಥೆ ಎಂಟ್ರಿಗೆ ತಯಾರಿ..!

    ಹೊಸತನದ ಪ್ರಯೋಗದೊಂದಿಗೆ ಹರಿಕಥೆ ಅಲ್ಲ ಗಿರಿಕಥೆ ಎಂಟ್ರಿಗೆ ತಯಾರಿ..!

    ಬಿಡುಗಡೆಗೂ ಮುನ್ನವೇ ಸಖತ್ ಟಾಕ್ ಕ್ರಿಯೇಟ್ ಮಾಡಿದೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ. ರಿಷಬ್ ಶೆಟ್ಟಿ ಅವರ ನಟನೆಯಲ್ಲಿ ಇಂತಹದ್ದೊಂದು ಸಿನಿಮಾ ಮೂಡಿಬರಲಿದೆ ಅಂದಾಗ್ಲೇ ಈ ಚಿತ್ರದಲ್ಲಿ ಸಂತಿಂಗ್ ಸ್ಪೆಷಾಲಿಟಿ ಇದ್ದೇ ಇರುತ್ತೆ ಅನ್ನೋದು ಕನ್ಫರ್ಮ್ ಆಗಿತ್ತು. ಚಿತ್ರದ ಟೀಸರ್ ಹಾಗೂ ಟ್ರೈಲರ್ ಗಳು ರಿವೀಲ್ ಆದ್ಮೇಲೆ ಮತ್ತೆ ಅದು ಖಾತ್ರಿಯಾಗಿದೆ.

    ನಿರ್ದೇಶಕ ಗಿರಿಕೃಷ್ಣ ಅವರು ರಿಷಬ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಕಥೆಯನ್ನು ಸೃಷ್ಟಿಸಿದ್ದರಂತೆ. ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದ ಭಾಗವಾಗಿ ಗಿರಿಕೃಷ್ಣ ಅವರು ಕಾರ್ಯ ನಿರ್ವಹಿಸಿದ್ರು. ಆ ಸಿನಿಮಾ ಸೂಪರ್ ಹಿಟ್ ಆದ ಸಂದರ್ಭದಲ್ಲೇ ಇಂತಹದ್ದೊಂದು ಕಥೆಯ ಬಗ್ಗೆ ಅವರು ರಿಷಬ್ ಅವರ ಬಳಿ ಪ್ರಸ್ತಾಪಿಸಿದ್ರಂತೆ. ನಿರ್ದೇಶಕ ಗಿರಿಕೃಷ್ಣ ಅವರಿಗೆ ಒಳಿತಾಗಲಿ ಅನ್ನುವ ಕಾರಣದಿಂದ್ಲೇ ಈ ಸಿನಿಮಾ ಮಾಡಲು ರಿಷಬ್ ಒಪ್ಪಿಗೆ ಸೂಚಿಸಿದ್ರಂತೆ. ಆದರೆ ಕಥೆ, ಚಿತ್ರಕತೆ ಹಾಗೂ ಪಾತ್ರಗಳೆಲ್ಲವೂ ಇಷ್ಟವಾಗದೇ ಅಷ್ಟು ಸುಲಭವಾಗಿ ರಿಷಬ್ ಓಕೆ ಅನ್ನೋದಿಲ್ಲ. ಈ ಚಿತ್ರದಲ್ಲಿನ ನಾಯಕನ ಪಾತ್ರ ಹಾಗೂ ಕಥೆ ಹೆಚ್ಚು ಮಹತ್ವಪೂರ್ಣವಾಗಿದೆ. ಹೀಗಾಗಿಯೇ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಬಹಳ ಇಷ್ಟಪಟ್ಟು ನಿರ್ದೇಶಕ ಗಿರಿಯ ಪಾತ್ರದಲ್ಲಿ ನಟಿಸಿದ್ದಾರೆ. ಕಥೆ, ಎಲ್ಲಾ ವಿಭಾಗಗಳಲ್ಲಿಯೂ ಇದ್ದ ಹೊಸತನ ಹಾಗೂ ನವ ಉತ್ಸಾಹದ ತಂಡದೊಂದಿಗೆ ಖುಷಿಯಿಂದಲೇ ಭಾಗಿಯಾಗಿದ್ದಾರೆ.

    ಕೊರೋನಾ ಲಾಕ್‍ಡೌನ್ ಬಂದು ನಿರ್ದೇಶಕ ಗಿರಿಕೃಷ್ಣ ಖಾಯಿಲೆಗೆ ಬಿದ್ದಿದ್ದರು. ಹೀಗಾಗಿ ಆ ಸಮಯದಲ್ಲಿ ಸಿನಿಮಾ ನಿಂತೇ ಹೋಗುವಂಥಾ ಅಪಾಯವಿತ್ತು. ಅಂತಹ ಸಂದರ್ಭದಲ್ಲಿ ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡರು. ಜೊತೆಗೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗೆ ಹೊಸ ಸ್ಪರ್ಶವನ್ನೂ ನೀಡಿದ್ರು. ಇದನ್ನೂ ಓದಿ: ತುರ್ತು ನಿರ್ಗಮನ: ದಶಕಗಳ ನಂತರ ಪ್ರತ್ಯಕ್ಷರಾದ ಸುನೀಲ್

    ಸಿನಿಮಾ ಮಾಡೋದಕ್ಕಾಗಿ ಸಾಕಷ್ಟು ಕಷ್ಟ ಪಟ್ಟಂತಹ ಕಥೆಗಳೇ ಅನೇಕ ಬಾರಿ ಸಿನಿಮಾಗಳಾದ ಉದಾಹರಣೆಗಳಿವೆ. ಸಿನಿಮಾ ಗುಂಗು ಹತ್ತಿಸುಕೊಂಡಿರುವವರ ಕಥೆಯೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ. ಹೀಗೆ ಸಿನಿಮಾ ಕನಸು ಹೊತ್ತು ಗಾಂಧೀನಗರಕ್ಕೆ ಆಗಮಿಸುವವರ ಕಥೆಗಳಿಗೂ, ಸಿನಿಮಾ ಕಥೆಗೂ ಅವಿನಾಭಾವ ನಂಟಿರೋದಂತೂ ನಿಜ. ಅದೇ ರೀತಿ ಫಿಲ್ಮ್ ಮೇಕರ್ ಒಬ್ಬನ ಕಥೆಯನ್ನೇ ಆಧರಿಸಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಮಾಡಲಾಗಿದೆ. ಆದ್ರೆ ಈ ಚಿತ್ರದ ಕಥೆ ಇದುವರೆಗೂ ಬಂದಿರುವ ಕಥೆಗಳಿಗಿಂತ ಬಹಳ ವಿಭನ್ನವಾಗಿರಲಿದೆ ಅನ್ನೋದನ್ನು ಚಿತ್ರತಂಡ ಟ್ರೈಲರ್ ನಲ್ಲಿಯೇ ತಿಳಿಸಿದೆ. ಚಿತ್ರದಲ್ಲಿನ ಮೂರು ಗಿರಿಗಳಲ್ಲಿ ಪ್ರಧಾನವಾದ ಡೈರೆಕ್ಟರ್ ಗಿರಿ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಈಗಾಗ್ಲೇ ಎಲ್ಲರ ಗಮನ ಸೆಳೆದಿದೆ.

    ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಕಥೆ ಹಾಗೂ ಪಾತ್ರವರ್ಗದಲ್ಲಿ ಹೊಸತನವಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಪ್ರೇಕ್ಷಕರಿಗೆ ಭರಪೂರ ಮನೋರಂಜನೆಯೂ ಈ ಚಿತ್ರದಲ್ಲಿದೆ. ಇನ್ನೂ ಈ ಸಿನಿಮಾ ರಿಷಬ್ ಶೆಟ್ಟಿ ಅವರ ಸಿನಿ ಕೆರಿಯರ್ ಗೆ ಮತ್ತೊಂದು ಬಿಗ್ ಟ್ವಿಸ್ಟ್ ನೀಡುವ ಸಾಧ್ಯತೆ ಇದೆ. ಇದೇ ತಿಂಗಳ 23ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

    Live Tv

  • ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಜೂನ್ 23ಕ್ಕೆ ರಿಲೀಸ್

    ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಜೂನ್ 23ಕ್ಕೆ ರಿಲೀಸ್

    ಸಂದೇಶ್ ಎನ್ ನಿರ್ಮಿಸಿರುವ, ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ

    ಸಿನಿಮಾ ನಿರ್ದೇಶಕನಾಗುವ ಆಸೆಹೊತ್ತ ಮಧ್ಯಮವರ್ಗದ ಯವಕನೊಬ್ಬನ ಸುತ್ತ ನಡೆಯುವ ಕಥೆ ಇದು. ಇದರಲ್ಲಿ ನಾನು ಗಿರಿಕೃಷ್ಣ ಎಂಬ ಪಾತ್ರ ಮಾಡಿದ್ದೀನಿ.  ಗಿರಿ ಅಂದರೆ ನಾನ್ನೊಬ್ಬನ ಹೆಸರಲ್ಲ. ಹೀರೋಯಿನ್ ಹೆಸರು ಗಿರಿಜಾ ಥಾಮಸ್ ಹಾಗೂ ವಿಲನ್ ಹೆಸರು ಗಿರಿ ಅಂತ. ಹೀಗೆ ನಮ್ಮ ಚಿತ್ರದಲ್ಲಿ ಹಲವು ಗಿರಿಗಳ ಸಂಗಮವಾಗಿದೆ. ಸಿನಿಮಾ ಮಾಡಲು ಹೊರಟಿರುವ ಅನೇಕರ ಕಥೆಯಿದು. ಅದ್ಭುತವಾದ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎರಡು ಗಂಟೆಗಳ ಕಾಲ ಸಂಪೂರ್ಣ ಮನೋರಂಜನೆಯಿರುವ ಸಿನಿಮಾ ನಮ್ಮದು. ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು ರಿಷಭ್ ಶೆಟ್ಟಿ.

     

    ನಮ್ಮ ಚಿತ್ರತಂಡದ ಸಹಕಾರದಿಂದ ಚೆನ್ನಾಗಿ ಬಂದಿದೆ. ನಾನು ಹಾಗೂ ರಿಷಭ್ “ಕಥಾಸಂಗಮ” ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ಗಿರಿಕೃಷ್ಣ ಈ ಚಿತ್ರದ ಕಥೆ ಬರೆದಿದ್ದರು. ಆನಂತರ ನಾನು ಹಾಗೂ ಅನಿರುದ್ಧ್ ಮಹೇಶ್ ಸೇರಿ ಈ ಚಿತ್ರ ನಿರ್ದೇಶನ‌ ಮಾಡಿದ್ದೇವೆ ಎಂದರು ಕರಣ್ ಅನಂತ್. ಮತ್ತೊಬ್ಬ ನಿರ್ದೇಶಕ ಅನಿರುದ್ಧ್ ಮಹೇಶ್ ಚಿತ್ರದ ಕುರಿತು ಮಾತನಾಡಿದರು. ನಾನು ಈ ಚಿತ್ರದಲ್ಲಿ ಗಿರಿಜಾ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನಟಿಯಾಗಬೇಕೆಂಬ ಆಸೆ ಹೊತ್ತ‌ ಹುಡುಗಿ. ತಾಯಿ ಇರುವುದಿಲ್ಲ. ತಂದೆ ಹಾಗೂ ಅಣ್ಣ ಇರುತ್ತಾರೆ ಎಂದು ನಾಯಕಿ ರಚನಾ ಇಂದರ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

    ನನ್ನ ಪಾತ್ರ ಕೂಡ ಚೆನ್ನಾಗಿದೆ. ಖುಷಿ ಜೋಕುಮಾರಸ್ವಾಮಿ ನನ್ನ ಪಾತ್ರದ ಹೆಸರು ಎಂದರು ನಟಿ ತಪಸ್ವಿನಿ. ನಾನು ಈ ಹಿಂದೆ ಜೋಕುಮಾರಸ್ವಾಮಿ ನಾಟಕದಲ್ಲಿ ಅಭಿನಯಿಸಿದ್ದೆ‌.‌ ಇದರಲ್ಲೂ ಅದೇ ಹೆಸರು. ಆದರೆ ಮಂತ್ರಿಯಾಗಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ ನಟ ದಿನೇಶ್ ಮಂಗಳೂರು. ನಾನು ಎಲ್ಲಾ‌ ಜವಾಬ್ದಾರಿಯನ್ನು ರಿಷಭ್ ಅವರಿಗೆ ನೀಡಿದ್ದೀನಿ. ಅವರ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಜಯಣ್ಣ ಈ ಚಿತ್ರದ ಹಂಚಿಕೆದಾರರು.  ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಸಂದೇಶ್ ಎನ್. ರಿಷಭ್ ಶೆಟ್ಟಿ, ರಚನ ಇಂದರ್, ತಪಸ್ವಿನಿ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ರಂಗನಾಥ್ – ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಭರತ್ – ಪ್ರದೀಪ್ ಅವರ ಸಂಕಲನ ಈ ಚಿತ್ರಕ್ಕಿದೆ.

    Live Tv

  • ಹರಿತವಾದ ಕಥೆಯ ಸುಳಿವಿನೊಂದಿಗೆ ಬಂತು ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್!

    ಹರಿತವಾದ ಕಥೆಯ ಸುಳಿವಿನೊಂದಿಗೆ ಬಂತು ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್!

    ರಿಷಬ್ ಶೆಟ್ಟಿ, ನಾಯಕರಾಗಿ ನಟಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಈಗಾಗಲೇ ಹಲವಾರು ದಿಕ್ಕುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಸಂದೇಶ ಅವರು ನಿರ್ಮಾಣ ಮಾಡಿರುವ ಈ ಸಿನಿಮಾ ಜನರನ್ನು ಸೆಳೆದಿರುವುದೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಭಿನ್ನವಾದ ಕಥೆಯ ಸುಳಿವಿನಿಂದ. ಟ್ರೈಲರ್‌ನಲ್ಲಿ ಒಂದಷ್ಟು ವಿಶೇಷತೆಗಳು ಕಾಣಿಸಬಹುದೆಂಬ ಕಾರಣದಿಂದ ಅದರತ್ತ ಜನ ಆಸೆಯಿಟ್ಟು ಕಾದು ಕೂತಿದ್ದರು. ಕಡೆಗೂ ಇದೀಗ ಹರಿತವಾದ, ವಿಶೇಷವಾದ ಕಥೆಯ ಸುಳಿವಿನೊಂದಿಗೆ ‘ಹರಿಕಥೆ ಅಲ್ಲ ಗಿರಿಕಥೆ’ಯ ಟ್ರೈಲರ್ ಬಿಡುಗಡೆಗೊಂಡಿದೆ.

    ಇದು ಮೂರು ‘ಗಿರಿ’ಗಳ ಸುತ್ತ ನಡೆಯೋ ಕಥಾನಕ ಎಂಬಂಥಾ ಸಣ್ಣ ಸುಳಿವನ್ನಷ್ಟೇ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಹಾಗಾದರೆ ಈ ಗಿರಿ ಅಂದರೇನೆಂಬ ಹುಳವನ್ನು ಪ್ರತಿಯೊಬ್ಬರೂ ತಲೆಗೆ ಬಿಟ್ಟುಕೊಂಡಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಈಗ ರಿಲೀಸ್ ಆಗಿರುವ ಟ್ರೈಲರ್ ಎಲ್ಲ ವಿಧದಲ್ಲಿಯೂ ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ: ಯೂಟ್ಯೂಬ್ ನೋಡಿ ಕಳ್ಳತನ ಮಾಡಿದ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದ 

    ಇಲ್ಲಿ ರಿಷಬ್‌ ಶೆಟ್ಟಿ ನಿರ್ದೇಶಕನಾಗೋ ಕನಸು ಹೊತ್ತು ತಿರುಗಾಡುವ ಡೈರೆಕ್ಟರ್ ಗಿರಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆಂಬ ಸುಳಿವು ಸಿಕ್ಕಿದೆ. ಅದರ ಜೊತೆ ಜೊತೆಗೇ ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ ಮುಂತಾದವರ ಪಾತ್ರಗಳು ಕೂಡಾ ಸಣ್ಣಮಟ್ಟದಲ್ಲಿ ಸುಳಿವು ಬಿಟ್ಟುಕೊಟ್ಟಿವೆ. ಇದುವರೆಗೆ ಜಾಹೀರಾಗಿರುವ ವಿಚಾರಗಳಾಚೆಗೆ ಇಲ್ಲಿನ ಕಥೆ ಹಬ್ಬಿಕೊಂಡಿದೆ ಎಂಬ ಸ್ಪಷ್ಟ ನಂಬಿಕೆ ಮೂಡಿಸುವಲ್ಲಿಯೂ ಈ ಟ್ರೈಲರ್ ಯಶಸ್ಸು ಕಂಡಿದೆ.

    ಇದುವರೆಗೂ ಸಿನಿಮಾ ಕನಸು ಹೊತ್ತು ಗಾಂಧಿನಗರದಲ್ಲಿ ಸುಳಿದಾಡುವವರ ಕಥೆಗಳು ಸಾಕಷ್ಟು ಕಾಣಿಸಿಕೊಂಡಿವೆ. ಆದರೆ ‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿರೋದು ಡಿಫರೆಂಟಾದ ಕಥೆ ಎಂಬುದನ್ನು ನಿರ್ದೇಶಕದ್ವಯರು ನಿಖರವಾಗಿಯೇ ನಿರೂಪಿಸಿದ್ದಾರೆ. ಅದು ಈ ಟ್ರೈಲರ್‌ನ ನಿಜವಾದ ಪ್ಲಸ್ ಪಾಯಿಂಟ್.

    ಈ ಮೂಲಕ ದೊಡ್ಡ ಚಾಲೆಂಜೊಂದರಲ್ಲಿ ಚಿತ್ರತಂಡ ಗೆದ್ದಂತಾಗಿದೆ. ಈ ಟ್ರೈಲರ್‍ಗೆ ಸಿಗುತ್ತಿರುವ ವ್ಯಾಪಕ ಮೆಚ್ಚುಗೆ ಮತ್ತು ಬೆಂಬಲಗಳೇ ಸಿನಿಮಾದ ಗೆಲುವನ್ನು ನಿಕ್ಕಿಯಾಗಿಸಿದೆ. ಇದು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನಿಖರವಾಗಿ ಹೇಳಬೇಕೆಂದರೆ ‘ಹರಿಕಥೆ ಅಲ್ಲ ಗಿರಿಕಥೆ’ಯ ಟ್ರೈಲರ್ ನಿಜಕ್ಕೂ ಪರಿಣಾಮಕಾರಿಯಾಗಿದೆ.

    ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರ ‘ಹರಿಕಥೆ ಅಲ್ಲ ಗಿರಿಕಥೆ’. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದು ಓರ್ವ ನಟನಾಗಿ ರಿಷಬ್ ಶೆಟ್ಟಿ ವೃತ್ತಿ ಬದುಕಿನ ಮಹತ್ವದ ಚಿತ್ರವಾಗೋದರಲ್ಲಿ ಯಾವ ಸಂದೇಹವೂ ಇಲ್ಲ. ಇದನ್ನೂ ಓದಿ:  ಕುವೆಂಪು, ಬಸವಣ್ಣಗೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು: ಹಂಸಲೇಖ 

    ಈ ಚಿತ್ರ ಕೇವಲ ಕಥೆಯ ದಿಕ್ಕಿನಿಂದ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತವಾಗಿದೆ. ಅದರ ಲಕ್ಷಣಗಳು ಈ ಟ್ರೈಲರ್‌ನಲ್ಲೂ ಕಾಣಿಸಿವೆ. ಇನ್ನುಳಿದಂತೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ, ಹೊನ್ನವಳ್ಳಿ ಕೃಷ್ಣ ಮುಂತಾದವರ ತಾರಾಗಣದಿಂದ ‘ಹರಿಕಥೆ ಅಲ್ಲ ಗಿರಿಕಥೆ’ ಮೈಕೈ ತುಂಬಿಕೊಂಡಿದೆ. ಈ ಸಿನಿಮಾ ಜೂನ್‌ 23ಕ್ಕೆ ರಿಲೀಸ್‌ ಆಗುತ್ತಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • ತಡವಾಗಿ ಬಂದಿದ್ದಕ್ಕೆ ಕ್ಲಾಸ್ ತೆಗೆದುಕೊಳ್ಳುವ ಹುಡುಗಿ ಬೇಕು- ರಿಷಬ್ ಶೆಟ್ಟಿ

    ತಡವಾಗಿ ಬಂದಿದ್ದಕ್ಕೆ ಕ್ಲಾಸ್ ತೆಗೆದುಕೊಳ್ಳುವ ಹುಡುಗಿ ಬೇಕು- ರಿಷಬ್ ಶೆಟ್ಟಿ

    ಬೆಂಗಳೂರು: ಚಿತ್ರೀಕರಣಕ್ಕೆ ಸರ್ಕಾರದಿಂದ ಅವಕಾಶ ಸಿಗುತ್ತಿದ್ದಂತೆ ಹಲವು ಚಿತ್ರಗಳ ಕೆಲಸಗಳು ಗರಿಗೆದರಿದ್ದು, ಸ್ಯಾಂಡಲ್‍ವುಡ್ ನಟ, ನಟಿಯರು ತಮ್ಮ ಸಿನಿಮಾಗಳ ಕೆಲಸಗಳಲ್ಲಿ ಮತ್ತೆ ತೊಡಗಿಕೊಳ್ಳುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ತಾವು ನಟಿಸುತ್ತಿರುವ ಮುಂದಿನ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಸಿಂಪಲ್ ಆಗಿ ಮಾಡಿ ಮುಗಿಸಿದ್ದು, ಇದರ ಬೆನ್ನಲ್ಲೇ ಇದೀಗ ವಿಶೇಷ ಆಹ್ವಾನವೊಂದನ್ನು ನೀಡಿದ್ದಾರೆ.

    ಹೌದು ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ತಾವು ನಟಿಸುತ್ತಿರುವ ಮುಂದಿನ ಚಿತ್ರ ‘ಹರಿಕಥೆ ಅಲ್ಲಾ ಗಿರಿಕಥೆ’ ಸಿನಿಮಾ ಮೂಹೂರ್ತ ಸಮಾರಂಭವನ್ನು ನೆರವೇರಿಸಿದ್ದಾರೆ. ಇದೀಗ ತಮಗೆ ಜೋಡಿಯಾಗಿ ನಟಿಸುವ ಹೀರೋಯಿನ್ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಈ ಕುರಿತು ಮನವಿ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ ‘ಹರಿಕಥೆ ಅಲ್ಲಾ ಗಿರಿಕಥೆ’ ಸಿನಿಮಾಗೆ ಹೀರೋಯಿನ್ ಬೇಕು. ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ಛಾನ್ಸ್!!! ಎಂಬ ಸಾಲುಗಳನ್ನು ಬರೆದು ಪೋಸ್ಟರ್ ಹಾಕಿದ್ದಾರೆ. ಈ ಪೋಸ್ಟರ್ ಫೋಟೋದಲ್ಲಿ ಆಡಿಶನ್ ವಿಡಿಯೋ ಕಳುಹಿಸುವ ನಟಿಯರಿಗೆ ವಿಶೇಷ ಸೂಚನೆಯೊಂದನ್ನು ನೀಡಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.

    ತನ್ನ ತಂದೆಯನ್ನು ಮೀಟ್ ಮಾಡಲು ತಡವಾಗಿ ಬಂದ ಪ್ರೇಮಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳೊ ಪ್ರೇಯಸಿಯಂತೆ ಅಭಿನಯಿಸಿ, ಒಂದು ನಿಮಿಷದ ವಿಡಿಯೋ ಕಳುಹಿಸಿ ಎಂದು ಯುವ ಕಲಾವಿದರಲ್ಲಿ ಕೇಳಿಕೊಂಡಿದ್ದಾರೆ. ಜಾಲತಾಣಗಳಲ್ಲಿ ಈ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ನೋಟ್ ವಾಸ್ ಬೆಂಕಿ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಬಾಲಿವುಡ್‍ನವರು ಇವರನ್ನು ನೋಡಿ ಕಲಿಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

    ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಗಿರಿಕೃಷ್ಣ ಬರೆದು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ಕಚೇರಿಯಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ರಿಷಬ್ ಕುಟುಂಬದವರು, ನಟ ರಕ್ಷಿತ್ ಶೆಟ್ಟಿ ಮತ್ತು ಸಂದೇಶ್ ನಾಗರಾಜ್ ಹಾಗೂ ಚಿತ್ರತಂಡ ಭಾಗವಹಿಸಿತ್ತು. ಜುಲೈನಲ್ಲಿ ಚಿತ್ರೀಕರಣ ಆರಂಭಿಸಲು ಚಿಂತ್ರತಂಡ ಸಿದ್ಧತೆ ನಡೆಸಿದೆ. ಶೂಟಿಂಗ್ ಜೊತೆಗೆ ಪಾತ್ರಕ್ಕೆ ಸೂಕ್ತವಾದ ನಾಯಕಿ ಆಯ್ಕೆ ಸಹ ನಡೆಯಲಿದೆ. ಉಳಿದಂತೆ ಬಾಕಿ ಪಾತ್ರಗಳಲ್ಲಿ ಕೆಲ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈಗಾಗಲೇ ಅನೇಕರು ತಮ್ಮ ವಿಡಿಯೋಗಳನ್ನು ಕಳುಹಿಸುತ್ತಿದ್ದು, ಚಿತ್ರತಂಡ ಸಹ ಪರಿಶೀಲಿಸುತ್ತಿದೆ.