Tag: harihara veera mallu film

  • ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ಹರಿ ಹರ ವೀರ ಮಲ್ಲು’ ಫಸ್ಟ್ ಸಾಂಗ್ ರಿಲೀಸ್

    ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ಹರಿ ಹರ ವೀರ ಮಲ್ಲು’ ಫಸ್ಟ್ ಸಾಂಗ್ ರಿಲೀಸ್

    ಟಾಲಿವುಡ್‌ ನಟ ಹಾಗೂ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಡಿಸಿಎಂ ಸ್ಥಾನಕ್ಕೇರಿದ ಬಳಿಕ ಪವನ್ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ‌ ಬಿಟ್ಟಿದ್ದರು. ಹೀಗಾಗಿ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿದ್ದರು. ಇದೀಗ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹರಿ ಹರ ವೀರ ಮಲ್ಲು’ ಮೊದಲ ಹಾಡು ರಿಲೀಸ್‌ ಆಗಿದೆ.

    ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾದ ಮೊದಲ ಹಾಡು ಅನಾವರಣ ಮಾಡಲಾಗಿದೆ. ಮಾತು ಕೇಳಯ್ಯ ಎಂಬ ಹಾಡು ರಿಲೀಸ್‌ ಆಗಿದೆ. ಕನ್ನಡ ಮಾತ್ರವಲ್ಲ ಎಲ್ಲಾ ಭಾಷೆಯಲ್ಲಿಯೂ ಸಾಂಗ್‌ ರಿಲೀಸ್‌ ಆಗಿದೆ. ಜನಪದ ಶೈಲಿಯಲ್ಲಿ ಮೂಡಿ ಬಂದಿರುವ ಗೀತೆಗೆ ಆಸ್ಕರ್ ವಿಜೇತ ಎಂ ಎಂ ಕೀರವಾಣಿ ಟ್ಯೂನ್ ಹಾಕಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ:BBK 11: ಕ್ಯಾಪ್ಟನ್‌ ಹನುಮಂತ ಅಚ್ಚರಿಯ ನಿರ್ಧಾರ- ಫಿನಾಲೆ ವಾರಕ್ಕೆ ಕಾಲಿಟ್ಟ ಮೋಕ್ಷಿತಾ

    ‘ಹರಿ ಹರ ವೀರ ಮಲ್ಲು’ವಾಗಿ ಪವನ್ ಕಲ್ಯಾಣ್ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕನಾಗಿ ನಟ ಮಿಂಚಿದ್ದಾರೆ. ಜ್ಯೋತಿ ಕೃಷ್ಣ ಮತ್ತು ಕ್ರಿಶ್ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬಂದಿದೆ. ಬಾಬಿ ಡಿಯೋಲ್, ನಿಧಿ, ನೋರಾ ಫತೇಹಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

  • ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್

    ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್

    ತೆಲುಗು ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಸದ್ಯ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ‘ಹರಿಹರ ವೀರ ಮಲ್ಲು’ (Harihara Veera Mallu) ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್‌ನಲ್ಲಿ ಸಖತ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಧರ್ಮಕ್ಕೋಸ್ಕರ ಯುದ್ಧ ಮಾಡಲು ಪವನ್ ಸಜ್ಜಾಗಿದ್ದಾರೆ.

    17ನೇ ಶತಮಾನದ ಮೊಘಲರು ಆಳ್ವಿಕೆಯಲ್ಲಿ ನಡೆದ ಒಂದಿಷ್ಟು ನೈಜ ಕಥೆಯನ್ನಿಟ್ಟು ಸಿನಿಮಾ ಮಾಡಲಾಗಿದ್ದು, ಇದರ ಝಲಕ್‌ ಅನ್ನು ಟೀಸರ್‌ನಲ್ಲಿ ತೋರಿಸಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ಬರಲಿದೆ. 5 ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಇದನ್ನೂ ಓದಿ:‘ಪುಷ್ಪ 2’ ಸಾಂಗ್ ಟ್ರೆಂಡಿಂಗ್- ತಗ್ಗೋದೇ ಇಲ್ಲ ಎಂದ ಪುಷ್ಪರಾಜ್‌ಗೆ ಫ್ಯಾನ್ಸ್ ಫಿದಾ

    ರಾಜರು, ನವಾಬರು ಜನರ ಡುಡಿಮೆಯನ್ನು ಕಿತ್ತುಕೊಳ್ಳಲು ಬಂದರೆ ಅವರಿಂದ ಕಾಪಾಡಲು ದೇವರು ಒಂದಲ್ಲ ಒಂದು ರೂಪದಲ್ಲಿ ಬರುತ್ತಾನೆ ಎಂದು ಹಿನ್ನೆಲೆ ಧ್ವನಿ ಟೀಸರ್‌ನಲ್ಲಿ ಹೈಲೆಟ್ ಆಗಿದೆ. ಅದರಲ್ಲಿ ಪವನ್ ಕಲ್ಯಾಣ್ ಎಂಟ್ರಿ ಮತ್ತು ಮೊಘಲ್ ಚಕ್ರವರ್ತಿ ಆಗಿರುವ ಬಾಬಿ ಡಿಯೋಲ್ (Bobby Deol) ಆಗಮನ ಖಡಕ್ ಆಗಿದೆ.

    ಪವನ್ ಕಲ್ಯಾಣ್‌ಗೆ ನಾಯಕಿಯಾಗಿ ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ (Nidhdhi Agerwal) ನಟಿಸಿದ್ದಾರೆ. ಸ್ಟಾರ್ ಕಲಾವಿದರ ದಂಡೆ ಇರುವ ಈ ಚಿತ್ರವು ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಚುನಾವಣೆ ಪ್ರಚಾರ ಜೋರಾಗಿದೆ. ಈ ಹೊತ್ತಲ್ಲಿ ಅಭಿಮಾನಿಗಳ ಗಮನ ಸೆಳೆಯಲು ಚಿತ್ರದ ಟೀಸರ್ ರಿಲೀಸ್ ಮಾಡಿ ತಂತ್ರ ರೂಪಿಸಿದ್ದಾರೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.