Tag: harihara

  • ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ ಗೋಲ್ಮಾಲ್‌ – ರೈತರಿಗೆ ಸೇರಬೇಕಿದ್ದ 3.85 ಕೋಟಿ ಮೌಲ್ಯದ ವಿದ್ಯುತ್ ಪರಿಕರಗಳು ಭ್ರಷ್ಟರ ಪಾಲು!

    ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ ಗೋಲ್ಮಾಲ್‌ – ರೈತರಿಗೆ ಸೇರಬೇಕಿದ್ದ 3.85 ಕೋಟಿ ಮೌಲ್ಯದ ವಿದ್ಯುತ್ ಪರಿಕರಗಳು ಭ್ರಷ್ಟರ ಪಾಲು!

    ದಾವಣಗೆರೆ: ಬೆಸ್ಕಾಂ (BESCOM) ಇಲಾಖೆಯಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ರೈತರಿಗೆ (Farmers) ಸೇರಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಪರಿಕರಗಳು ನಾಪತ್ತೆಯಾಗಿದ್ದು ಇದ್ದ ಮೂವರಲ್ಲಿ ಕದ್ದವರು ಯಾರು ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.

    ದಾವಣಗೆರೆಯ (Davanagere) ಹರಿಹರದ (Harihara) ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಆಂತರಿಕ ಲೆಕ್ಕಪರಿಶೋಧನೆ ವೇಳೆ ಅಧಿಕಾರಿಗಳ ಕಳ್ಳಾಟ ಬಯಲಿಗೆ ಬಂದಿದೆ.ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಆದರೂ ಸಹ ಅಲ್ಲಿನ ಅಧಿಕಾರಿಗಳು ಯಾವುದೇ ತನಿಖೆಗೆ ಮುಂದಾಗಿಲ್ಲ. ಕನಿಷ್ಠ ಠಾಣೆಗೆ ದೂರು ಸಹ ದಾಖಲಿಸದೇ ಇರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇನ್ನೇನು ನನ್ನ ತಲೆ ಬಂದರೆ ಕಷ್ಟ ಆಗಬಹುದು ಎಂದು ಭಾವಿಸಿ ಈಗ ಅಧಿಕಾರಿಗಳು ತುರ್ತಾಗಿ ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ತನಿಖೆಯ ವೇಳೆ ಉಗ್ರಾಣದಿಂದ ಬರೋಬರಿ 72.58 ಲಕ್ಷ ರೂ. ಮೌಲ್ಯದ 102 ಪರಿವರ್ತಕಗಳೇ (TC) ಮಾಯವಾಗಿವೆ ಎಂಬುದು ಆಂತರಿಕ ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿದೆ ಎಂದು ದಾವಣಗೆರೆ ಎಸ್‌ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.

    ಇಲ್ಲಿ ನಾಪತ್ತೆಯಾಗಿರುವುದು ಒಂದೇರಡಲ್ಲ. 89,270 ಲೀಟರ್ ಟಿ.ಸಿ. ಆಯಿಲ್‌ನ ಲೆಕ್ಕವಂತೂ ಇಲ್ವೇ ಇಲ್ಲ. ಒಟ್ಟು 3.85 ಕೋಟಿ ಮೌಲ್ಯದ 42 ವಿವಿಧ ಸಾಮಗ್ರಿಗಳ ದುರುಪಯೋಗ ಮಾಡಿಕೊಳ್ಳಲಾಗಿದೆ. ವಿದ್ಯುತ್ ಪರಿವರ್ತಕ, ಪೋಲ್, ವಯರ್‌,  ಲೈನ್ ಮಟೇರಿಯಲ್ಸ್ ಪಿವಿಸಿ ಅಲ್ಯುಮಿನಿಯಮ್ ರೀಡ್ ವೈರ್, ಆಯಿಲ್ ಸೇರಿ 42 ಸಾಮಗ್ರಿಗಳನ್ನು ದುರುಪಯೋಗ ಮಾಡಲಾಗಿದೆ.

    2018 ರ ಜೂನ್ 19 ರಿಂದ 2025 ರ ಸೆಪ್ಟೆಂಬರ್ 16 ರವರೆಗೆ ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅರುಣಕುಮಾರ್ ಅವರು ಸಾಮಾಗ್ರಿಗಳು ಉಗ್ರಣದಲ್ಲೇ ಇರುವಂತೆ ಕಡತದಲ್ಲಿ ನಮೂದಿಸಿ ಅವುಗಳನ್ನು ಹೊರಕ್ಕೆ ಸಾಗಿಸಿ ದುರುಪಯೋಗ ಮಾಡಿಕೊಂಡಿದ್ದು, ಇನ್ ವಾಯ್ಸ್ ಸಂಖ್ಯೆಗಳನ್ನು ಮಾತ್ರ ಕಡತದಲ್ಲಿ ದಾಖಲಿಸಿ ವಂಚಿಸಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದನ್ನೂ ಓದಿಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

    2025 ರ ಏಪ್ರಿಲ್ ನಲ್ಲಿ ತ್ರೈಮಾಸಿಕ ಪರಿಶೀಲನೆ ನಡೆಸಿದ್ದು, ಪರಿವರ್ತನೆ ತೈಲದಲ್ಲಿ 89,270 ಲೀಟರ್ ಕೊರತೆ ಕಂಡು ಬಂದಿದ್ದು 56,67,864 ರೂ. ನಷ್ಟ ಉಂಟಾಗಿದೆ. ಅಷ್ಟೇ ಅಲ್ಲದೇ 72.58 ಲಕ್ಷ ರೂ.ಮೌಲ್ಯದ 102 ಪರಿವರ್ತಕಗಳು ಬಫರ್ ಸ್ಟಾಕ್ ನಿಂದ ಕಣ್ಮರೆಯಾಗಿದ್ದವು. ಇದರಲ್ಲದೇ 12.75 ಲಕ್ಷ ರೂ. ಮೌಲ್ಯದ 21 ಪರಿವರ್ತಕಗಳನ್ನು ಲೆಡ್ಜರ್ ನಲ್ಲಿ ದುರಸ್ಥಿದಾರರಿಗೆ ಇನ್ ವಾಯ್ಸ್ ಮಾಡಿದಂತೆ ದಾಖಲಾಗಿದ್ದರೂ ವಾಸ್ತವದಲ್ಲಿ ದುರಸ್ಥಿದಾರರಿಗೆ ಹಸ್ತಾಂತರವಾಗಿರಲಿಲ್ಲ. ಈ ರೀತಿಯಲ್ಲಿ ಒಟ್ಟು 3.85 ಕೋಟಿ ರೂ. ಮೌಲ್ಯದ ಸಾಮಾಗ್ರಿಗಳನ್ನು ದುರುಪಯೋಗ ಮಾಡಲಾಗಿದೆ ಎಂಬುದು ಪರಿಶೀಲನೆಯಿಂದ ದೃಢಪಟ್ಟಿದ್ದು ಕಾನೂನು ಕ್ರಮ ಜರುಗಿಸಬೇಕೆಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ್ ಇದೀಗ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬೆಸ್ಕಾಂ ಹರಿಹರ ಉಗ್ರಾಣಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೂರುದಾರ ಇಇ ರವಿಕುಮಾರ್ ನಿಂದ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂಧನ ಇಲಾಖೆಯ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಇದೇ ರೀತಿ ಗೋಲ್‌ಮಾಲ್ ಆಗಿದೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ.

    ಕೆಪಿಟಿಸಿಎಲ್ ಅಡಿಯಲ್ಲಿ ಬರುವ ಬೆಸ್ಕಾಂ, ಎಸ್ಕಾಂ ಜೆಸ್ಕಾಂ ಸೇರಿದಂತೆ ಎಲ್ಲಾ ನಿಗಮಗಳಲ್ಲಿ ಕೂಡ ತನಿಖೆ ನಡೆಸಿದರೆ ಇನ್ನು ಹೆಚ್ಚಿನ ಅವ್ಯವಹಾರ ಬೆಳಕಿಗೆ ಬರುತ್ತದೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಎಸ್ ದೇವರಮನಿ ತಿಳಿಸಿದ್ದಾರೆ.

  • ಒಪ್ಪಂದದಿಂದ ಹಿಂದೆ ಸರಿದ ರಾಜ್ಯ ಸರ್ಕಾರ – ಶಿವಮೊಗ್ಗ To ಹರಿಹರ ರೈಲ್ವೆ ಯೋಜನೆ ಕೈಬಿಟ್ಟ ಕೇಂದ್ರ

    ಒಪ್ಪಂದದಿಂದ ಹಿಂದೆ ಸರಿದ ರಾಜ್ಯ ಸರ್ಕಾರ – ಶಿವಮೊಗ್ಗ To ಹರಿಹರ ರೈಲ್ವೆ ಯೋಜನೆ ಕೈಬಿಟ್ಟ ಕೇಂದ್ರ

    ನವದೆಹಲಿ: ಶಿವಮೊಗ್ಗ – ಹರಿಹರ (Shivamogga – Harihara) ನಡುವಿನ ರೈಲ್ವೆ ಯೋಜನೆಯನ್ನು ಕೈಬಿಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.

    ಲೋಕಸಭೆಯಲ್ಲಿ ದಾವಣಗೆರೆ (Davanagere) ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಶ್ನೆಗೆ ಪ್ರಶ್ನೋತ್ತರ ಅವಧಿಯಲ್ಲಿ ಅವರು ಉತ್ತರಿಸಿದರು. ಈ ವೇಳೆ 79 ಕಿಲೋಮೀಟರ್ ಉದ್ದದ ರೈಲು ಮಾರ್ಗಕ್ಕೆ 832 ಕೋಟಿ ರೂ. ವೆಚ್ಚ ತಗುಲಲಿದೆ. ಈ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಯೋಜನೆಗೆ ಅಗತ್ಯವಿರುವ 488 ಹೆಕ್ಟರ್ ಜಾಗವನ್ನು ರಾಜ್ಯ ಸರ್ಕಾರ ಉಚಿತವಾಗಿ ಸ್ವಾಧೀನ ಪಡಿಸಿ ಹಸ್ತಾಂತರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ರಾಜ್ಯ ಸರ್ಕಾರ ಒಪ್ಪಂದದಿಂದ ಹಿಂದೆ ಸರದಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಸೇತುವೆ ಮೇಲೆ ಚಲಿಸುತ್ತಿದ್ದಾಗ ಬೇರ್ಪಟ್ಟ ರೈಲಿನ ಬೋಗಿಗಳು!

    ಈ ಯೋಜನೆಯನ್ನು ಮಾಡುವುದಾಗಿ ಹಿಂದಿನ ಸರ್ಕಾರಗಳು ಭರವಸೆ ನೀಡಿದ್ದವು. ಈಗ ರಾಜ್ಯ ಸರ್ಕಾರದ ಈ ನಡೆ ಮತ್ತು ಹಿತಾಸಕ್ತಿ ಕೊರೆತೆಯಿಂದ ಈ ಯೋಜನೆ ಕನಸಾಗೇ ಉಳಿದಿದೆ. ಇದನ್ನೂ ಓದಿ: ಆತ್ಮಹತ್ಯೆಗಾಗಿ ರೈಲ್ವೆ ಹಳಿ ಮೇಲೆ ಮಲಗಿದ್ದ ವೃದ್ಧನ ರಕ್ಷಣೆ – 30 ಸೆಕೆಂಡ್ ತಡವಾಗಿದ್ರೂ ದೇಹ ಛಿದ್ರ!

  • ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರೈಲಿಗೆ ತಲೆಕೊಟ್ಟು ತಾಯಿ, ಅಂಗವಿಕಲೆ ಮಗಳು ಆತ್ಮಹತ್ಯೆ

    ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರೈಲಿಗೆ ತಲೆಕೊಟ್ಟು ತಾಯಿ, ಅಂಗವಿಕಲೆ ಮಗಳು ಆತ್ಮಹತ್ಯೆ

    ದಾವಣಗೆರೆ: ಸಾಲ ಮರುಪಾವತಿಸುವಂತೆ ಮೈಕ್ರೋ ಫೈನಾನ್ಸ್ (Micro Finance) ಹಾಗೂ ಸ್ವಸಹಾಯ ಸಂಘಗಳ ಕಿರುಕುಳಕ್ಕೆ ಬೇಸತ್ತು ತಾಯಿ ಹಾಗೂ ಅಂಗವಿಕಲೆ ಮಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihara) ನಗರದ ಬಳಿ ಇರುವ ತುಂಗಭದ್ರ ನದಿ ಸೇತುವೆ ಬಳಿ ನಡೆದಿದೆ.

    ಗಂಗನರಸಿ ಗ್ರಾಮದ ಸುವರ್ಣಮ್ಮ (56), ಅಂಗವಿಕಲ ಮಗಳು ಗೌರಮ್ಮ (26) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಸುವರ್ಣಮ್ಮ, ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಪುತ್ರಿಯರಲ್ಲಿ ಇಬ್ಬರ ವಿವಾಹವಾಗಿದ್ದು, ಅಂಗವಿಕಲೆಯಾದ ಗೌರಮ್ಮ ತಾಯಿಯೊಂದಿಗೆ ನೆಲೆಸಿದ್ದರು. ಕೂಲಿ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದ ಸುವರ್ಣಮ್ಮ, ಸಾಲದ ಹೊರೆಗೆ ಬಳಲಿದ್ದರು ಎನ್ನಲಾಗುತ್ತಿದ್ದು, ಮೈಕ್ರೊ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳಲ್ಲಿ 3 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು. 2 ಸಾಲಕ್ಕೆ ವಾರಕ್ಕೊಮ್ಮೆ ಹಾಗೂ 1 ಸಾಲಕ್ಕೆ ತಿಂಗಳ ಕಂತುಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಸಾಲದ ಕಂತು ಸರಿಯಾಗಿ ಪಾವತಿಸಲು ಕಷ್ಟಪಡುತ್ತಿದ್ದರು. ಇದನ್ನೂ ಓದಿ: ಕಲಬುರಗಿ | ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಕಾಲ್ತುಳಿತ – ಮಹಿಳೆ ಸಾವು

    ಸಾಲಗಾರರ ಕಾಟ ತಾಳಲಾರದೆ ಇಂದು ತುಂಗಾಭದ್ರಾ ನದಿಗೆ ನಿರ್ಮಿಸಿದ ರೈಲ್ವೆ ಸೇತುವೆಯ ಮೇಲೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಮುಡಾ ಹಗರಣ | ಸಿಎಂ ಪತ್ನಿಗೆ ಹೈಕೋರ್ಟ್ ನೋಟಿಸ್

  • ಬೈಕ್‌ಗೆ ಡಿಕ್ಕಿ ಹೊಡೆದ ಕಾರು – ಇಬ್ಬರು ಯುವತಿಯರು ಸಾವು

    ಬೈಕ್‌ಗೆ ಡಿಕ್ಕಿ ಹೊಡೆದ ಕಾರು – ಇಬ್ಬರು ಯುವತಿಯರು ಸಾವು

    ದಾವಣಗೆರೆ: ಕಾರು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ ದಾವಣಗೆರೆ(Davanagere) ಜಿಲ್ಲೆಯ ಹರಿಹರ(Harihara) ತಾಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೊಳೆಸಿರಿಗೆರೆ ಸುಮಾ(24), ಕಡರನಾಯ್ಕನಹಳ್ಳಿ ಪಲ್ಲವಿ(23) ಮೃತ ದುರ್ದೈವಿಗಳು. ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಬೈಕ್ ಸವಾರ ಸಚಿನ್‌ಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: Madikeri | ನಾಲ್ಕೈದು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

    ಸಚಿನ್ ಬುಧವಾರ ಸಂಜೆ ಸಂಬಂಧಿಗಳಾದ ಸುಮಾ ಮತ್ತು ಪಲ್ಲವಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಬರುವಾಗ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಯುವತಿಯರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಸುಮಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗಳಾಗಿದ್ದ ಪಲ್ಲವಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 31 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಗಂಭೀರ ಗಾಯಗಳಾದ ಸಚಿನ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಹಾಗೂ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ(Malebennuru Police Station) ಪ್ರಕರಣ ದಾಖಲಾಗಿದೆ.

  • ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದ ಪಾಪಿ ಗಂಡ

    ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದ ಪಾಪಿ ಗಂಡ

    ದಾವಣಗೆರೆ: ವರದಕ್ಷಿಣೆಗಾಗಿ ಪತಿಯೇ, ಪತ್ನಿಯ ಕತ್ತನ್ನು ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿರುವ ಘಟನೆ ಹರಿಹರ (Harihara) ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನೇತ್ರಾವತಿ(26) ಕೊಲೆಯಾದ ಪತ್ನಿ. ಕಳೆದ 7 ವರ್ಷದ ಹಿಂದೆ ಕುಟುಂಬಸ್ಥರು ಹರಳಹಳ್ಳಿ ಗ್ರಾಮದ ದೇವೇಂದ್ರಪ್ಪನ ಜೊತೆ ನೇತ್ರಾವತಿಯವರನ್ನು ಮದುವೆ ಮಾಡಿಕೊಟ್ಟಿದ್ದರು. ಮದುವೆ ಸಂದರ್ಭದಲ್ಲಿ ಕುಟುಂಬಸ್ಥರು ವರದಕ್ಷಿಣೆಯಾಗಿ 10 ತೊಲ ಬಂಗಾರ 1 ಲಕ್ಷ ರೂ. ನಗದು ಹಾಗೂ ಬೈಕ್ ಕೊಡಿಸಿದ್ದರು. ಮೃತ ನೇತ್ರಾವತಿ ಒಂದು ಗಂಡು ಮತ್ತು ಹೆಣ್ಣು ಮಗುವನ್ನು ಹೊಂದಿದ್ದರು. ಇದನ್ನೂ ಓದಿ: Gold Smuggling Case | ಸ್ವಂತ ಚಿನ್ನಾಭರಣ ಮಳಿಗೆ ಆರಂಭಿಸಲು ಪ್ಲ್ಯಾನ್‌ ಮಾಡಿದ್ದ ರನ್ಯಾ

    ದೇವೇಂದ್ರಪ್ಪನ ಕುಟುಂಬಸ್ಥರು ವರದಕ್ಷಿಣೆಗಾಗಿ ಹಲವು ಬಾರಿ ಪೀಡಿಸಿ ಹಲ್ಲೆ ನಡೆಸಿದ್ದರು. ಈ ಹಿಂದೆ ಕೂಡಾ ನೇತ್ರಾವತಿ ಮೇಲೆ ಹಲ್ಲೆ ನಡೆಸಿದ್ದರು. ಹಿರಿಯರು ರಾಜಿ ಸಂಧಾನ ಮಾಡಿ ಇಬ್ಬರನ್ನು ಒಂದು ಮಾಡಿದ್ದರು. ಆದರೆ ಸೋಮವಾರ ರಾತ್ರಿ ದೇವೇಂದ್ರಪ್ಪ ಹಾಗೂ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ನೇತ್ರಾವತಿ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸಂವಿಧಾನ ವಿರುದ್ಧವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟು, ಮತಬ್ಯಾಂಕ್‌ ಗಟ್ಟಿಮಾಡಿಕೊಳ್ತಿದೆ: ಬೊಮ್ಮಾಯಿ

    ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ನೇತ್ರಾವತಿ ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

  • ದಾವಣಗೆರೆ | ಹೊತ್ತಿ ಉರಿದ ಟಾಕಿಸ್ – ಪೀಠೋಪಕರಣಗಳು ಭಸ್ಮ

    ದಾವಣಗೆರೆ | ಹೊತ್ತಿ ಉರಿದ ಟಾಕಿಸ್ – ಪೀಠೋಪಕರಣಗಳು ಭಸ್ಮ

    ದಾವಣಗೆರೆ: ಟಾಕಿಸ್ ಒಂದರಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಪೀಠೋಪಕರಣಗಳು ಭಸ್ಮವಾದ ಘಟನೆ ಹರಿಹರ (Harihara) ತಾಲೂಕಿನ ಮಲೆಬೆನ್ನೂರಿನಲ್ಲಿ ನಡೆದಿದೆ.

    ಕಳೆದ ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿದ್ದ ಗಣೇಶ ಚಿತ್ರಮಂದಿರದಲ್ಲಿ ಈ ಅವಘಡ ಸಂಭವಿಸಿದೆ. ಇದರಿಂದ ಆಸನಗಳು ಸೇರಿದಂತೆ ಹಲವು ಪರಿಕರಗಳು ಸುಟ್ಟು ಭಸ್ಮವಾಗಿದೆ. ಇದರಿಂದ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ದಟ್ಟ ಹೊಗೆ ಕಾಣಿಸಿದೆ. ಇದರಿಂದ ಆತಂಕಕ್ಕೊಳಗಾದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರಮಂದಿರ ಬಂದ್ ಆಗಿದ್ದರಿಂದ ಅಲ್ಲಿ ಯಾರೂ ಜನ ಇರಲಿಲ್ಲ. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

  • ಪೂಜೆಯ ನೆಪದಲ್ಲಿ ಚಿನ್ನಾಭರಣ ದೋಚಿದ್ದ ಖತರ್‌ನಾಕ್‌ ಜೋಡಿ ಅಂದರ್‌!

    ಪೂಜೆಯ ನೆಪದಲ್ಲಿ ಚಿನ್ನಾಭರಣ ದೋಚಿದ್ದ ಖತರ್‌ನಾಕ್‌ ಜೋಡಿ ಅಂದರ್‌!

    ದಾವಣಗೆರೆ: ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು, ಪೂಜೆ ಮಾಡುವ ನೆಪದಲ್ಲಿ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ (Gold) ದೋಚಿದ್ದ ಇಬ್ಬರು ಆರೋಪಿಗಳನ್ನು ಹರಿಹರ (Harihar) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಒಡಿಶಾ ಮೂಲದ ಇಸ್ಮಾಯಿಲ್ ಜಬೀವುಲ್ಲಾ (30) ಮತ್ತು ರುಕ್ಸಾನ ಬೇಗಂ (30) ಎಂದು ಗುರುತಿಸಲಾಗಿದೆ. ಇಬ್ಬರು ದಾವಣಗೆರೆಯಲ್ಲಿ (Davanagere) ವಾಸವಾಗಿದ್ದರು. ಬಂಧಿತ ಆರೋಪಿಗಳಿಂದ 8,65,000 ರೂ. ಮೌಲ್ಯದ 90 ಗ್ರಾಂ ಚಿನ್ನ ಹಾಗೂ 750 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್‌

    ಆರೋಪಿಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ ಎಂಬವರ ಹಣಕಾಸಿನ ಸಮಸ್ಯೆ ಅರಿತು ಪೂಜೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೋಗಿದ್ದರು. ಸಂಜೆ 4 ರಿಂದ 6 ಗಂಟೆ ವೇಳೆಗೆ ಪೂಜೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಪೂಜೆ ವೇಳೆ ಚಿನ್ನಾಭರಣ ಹಾಗೂ ನಗದು ಇಡುವಂತೆ ಹೇಳಿದ್ದರು. ಅವರು ಹೇಳಿದಂತೆ ಶಶಿಕಲಾ ಹಾಗೂ ಆಕೆಯ ಕುಟುಂಬಸ್ಥರು ಪೂಜೆ ವೇಳೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಇರಿಸಿದ್ದರು. ಈ ವೇಳೆ ಆರೋಪಿಗಳು ಶಶಿಕಲಾ ಕುಟುಂಬದವರನ್ನು ಯಾಮಾರಿಸಿ ಚಿನ್ನ ಹಾಗೂ ಬೆಳ್ಳಿಯನ್ನು ಎಗರಿಸಿದ್ದರು.

    ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಪೊಲೀಸರು ತಂಡವನ್ನು ರಚಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಸಿಗರೇಟ್ ಸೇದುವ ವಿಚಾರಕ್ಕೆ ಗಲಾಟೆ – ಪಾರ್ಟಿಯಲ್ಲೇ ಸೇಹಿತನ ಕೊಲೆ

  • ದೀಪಾವಳಿ ಪೂಜೆಗೆ ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲು

    ದೀಪಾವಳಿ ಪೂಜೆಗೆ ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲು

    ದಾವಣಗೆರೆ: ದೀಪಾವಳಿ ಅಮಾವಾಸ್ಯೆಗೆ ಟ್ರ‍್ಯಾಕ್ಟರ್ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲಾದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಬಳಿ ನಡೆದಿದೆ.

    ತುಂಗಾಭದ್ರ ನದಿ (Tungabhadra River) ಪಾತ್ರದಲ್ಲಿ ಟ್ರ‍್ಯಾಕ್ಟರ್ ತೊಳೆಯಲು ಹೋಗಿದ್ದ ಗ್ರಾಮದ ಪರಶುರಾಮ್(14) ಹಾಗೂ ಆತನ ಚಿಕ್ಕಪ್ಪ ಅಣ್ಣಪ್ಪ (45) ಮೃತ ದುರ್ದೈವಿಗಳು. ಮರಳುಗಾರಿಕೆಯಿಂದ ತುಂಗಾಭದ್ರ ನದಿಯಲ್ಲಿ ಗುಂಡಿಗಳಾಗಿರುವ ಹಿನ್ನೆಲೆ, ಗುಂಡಿಗಳಲ್ಲಿ ಸಿಲುಕಿ ನೀರಲ್ಲಿ ಮುಳುಗಿದ್ದಾರೆ. ಈ ವೇಳೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದರು. ದುರಾದೃಷ್ಟವಶಾತ್ ರಕ್ಷಣೆ ಮಾಡುವ ವೇಳೆಗೆ ಇಬ್ಬರೂ ಸಾವನ್ನಪ್ಪಿದ್ದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆ ಕೊಡಲು ಆಗದ ಕಾಂಗ್ರೆಸ್ ಸರ್ಕಾರ ಯೂಟರ್ನ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

    ತುಂಗಾಭದ್ರ ನದಿಪಾತ್ರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಕ್ರಮ ಮರಳುಗಾರಿಕೆಯಿಂದಲೇ ಇಂತಹ ಅನಾಹುತ ಆಗಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಹರಿಹರ (Harihara) ಗ್ರಾಮಾಂತರ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಒಳಮೀಸಲಾತಿಗೆ ಆಯೋಗ ರಚನೆ, ವಿಳಂಬ ನೀತಿ ಅಲ್ಲ: ಸಿದ್ದರಾಮಯ್ಯ

  • ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು

    ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು

    ದಾವಣಗೆರೆ: ತುಂಗಭದ್ರಾ ನದಿ (Tungabhadra River) ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಾನುವಾರು ಮೈತೊಳೆಯಲು ಹೋಗಿದ್ದ ಯುವಕ ನೀರುಪಾಲಾದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

    ಹರಿಹರ (Harihara) ತಾಲೂಕಿನ ಧೂಳೆಹೊಳೆ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಘಟನೆ ನಡೆದಿದ್ದು, ಇಂಗಳಗೊಂದಿ ಜಯಪ್ಪ (32) ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ನದಿ ನೀರಿನ ಮಟ್ಟ ಹೆಚ್ಚಾಗಿದ್ದನ್ನು ಗಮನಿಸದೆ ಜಯಪ್ಪ ನದಿಗಿಳಿದು ಜಾನುವಾರುಗಳ ಮೈತೊಳೆಯಲು ಮುಂದಾಗಿದ್ದರು. ಇದ್ದಕ್ಕಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಕಂಡಲ್ಲಿ ಗುಂಡು ಹಾರಿಸಲು ಸೂಚನೆ

    ಧೂಳೆಹೊಳೆಯಿಂದ 2 ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 2 ಅಡಿಯಷ್ಟೇ ಬಾಕಿ

  • ಉಪವಾಸ ಅಂತ್ಯಗೊಳಿಸಿ ಪಾನಿಪುರಿ ತಿಂದ 19 ಮಕ್ಕಳು ಅಸ್ವಸ್ಥ – ನಾಲ್ವರ ಸ್ಥಿತಿ ಚಿಂತಾಜನಕ

    ಉಪವಾಸ ಅಂತ್ಯಗೊಳಿಸಿ ಪಾನಿಪುರಿ ತಿಂದ 19 ಮಕ್ಕಳು ಅಸ್ವಸ್ಥ – ನಾಲ್ವರ ಸ್ಥಿತಿ ಚಿಂತಾಜನಕ

    ದಾವಣಗೆರೆ: ಪಾನಿಪುರಿ (Panipuri) ತಿಂದು 19 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihara) ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ.

    ಮಲೆಬೆನ್ನೂರಿನ ಜಾಮಿಯಾ ಮಸೀದಿ ಬಳಿ ಘಟನೆ ನಡೆದಿದ್ದು, ಉಪವಾಸ (Fasting) ಅಂತ್ಯ ಮಾಡಿದ ನಂತರ ಮಸೀದಿ (Mosque) ಮುಂಭಾಗ ಮಾರಾಟ ಮಾಡುತ್ತಿದ್ದ ಪಾನಿಪುರಿ ತಿಂದು 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಪಾನಿಪುರಿ ತಿಂದು ಕೆಲವೇ ಹೊತ್ತಿನಲ್ಲಿ ವಾಂತಿಯಾಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ – ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಅರೆಸ್ಟ್‌

    19 ಮಕ್ಕಳ ಪೈಕಿ 4 ಮಕ್ಕಳ ಆರೋಗ್ಯ ಚಿಂತಾಜನಕವಾಗಿದೆ. ಇವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಗುರುಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಭಾನುವಾರವೂ ತೆರೆಯಲಿದೆ ಉಪನೋಂದಣಿ ಕಚೇರಿ