Tag: haridwar

  • ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು

    ಹರಿದ್ವಾರ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು

    ಡೆಹ್ರಾಡೂನ್: ಹರಿದ್ವಾರದ (Haridwar) ಮಾನಸ ದೇವಿ ದೇವಸ್ಥಾನದಲ್ಲಿ (Mansa Devi Temple) ಕಾಲ್ತುಳಿತ (Stampede) ಸಂಭವಿಸಿದ ಪರಿಣಾಮ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.

    ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಭಾರೀ ಜನಸಂದಣಿಯಿಂದ ಕಾಲ್ತುಳಿತ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಹಲವು ಭಕ್ತರು ಗಾಯಗೊಂಡಿದ್ದಾರೆ. ಇನ್ನೂ ಹಲವರು ಅಸ್ವಸ್ಥಗೊಂಡಿದ್ದಾರೆ.

    ಗಾಯಾಳು ಭಕ್ತರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಗರ್ವಾಲ್ ವಿಭಾಗದ ಆಯುಕ್ತ ವಿನಯ್ ಶಂಕರ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

  • ತನ್ನ ಬಾಯ್‌ಫ್ರೆಂಡ್‌ನಿಂದ ಮಗಳ ಮೇಲೆಯೇ ರೇಪ್‌ ಮಾಡಿಸಿದ್ದ ಬಿಜೆಪಿ ನಾಯಕಿ ಅರೆಸ್ಟ್‌

    ತನ್ನ ಬಾಯ್‌ಫ್ರೆಂಡ್‌ನಿಂದ ಮಗಳ ಮೇಲೆಯೇ ರೇಪ್‌ ಮಾಡಿಸಿದ್ದ ಬಿಜೆಪಿ ನಾಯಕಿ ಅರೆಸ್ಟ್‌

    ಡೆಹ್ರಾಡೂನ್‌ (ಹರಿದ್ವಾರ): ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ, ಆದ್ರೆ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿಗೆ ಅಪ ಚಾರವೆಂಬಂತೆ, ಉತ್ತರಾಖಂಡದ ಹರಿದ್ವಾರದಲ್ಲಿ (Haridwar) ಬಿಜೆಪಿ ನಾಯಕಿ (BJP Women Leader) ನಡೆದುಕೊಂಡಿದ್ದಾಳೆ. ತನ್ನ ಬಾಯ್‌ಫ್ರೆಂಡ್ ಹಾಗೂ ಆತನ ಸ್ನೇಹಿತನಿಂದಲೇ ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಹರಿದ್ವಾರದ ಬಿಜೆಪಿ ಮಹಿಳಾ ಮೋರ್ಚಾದ (BJP Mahila Morcha) ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿದ್ದಾಳೆ. ಘಟನೆ ಸಂಬಂಧ ಅನಾಮಿಕಾ, ಆಕೆಯ ಬಾಯ್‌ಫ್ರೆಂಡ್ ಸುಮಿತ್ ಪತ್ವಾಲ್ ಮತ್ತು ಆತನ ಸ್ನೇಹಿತ ಶುಭಂನನ್ನ ಪೊಲೀಸರು (Haridwar Police) ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಬಿಜೆಪಿ ಆಕೆಯನ್ನ ಪಕ್ಷದಿಂದಲೇ ವಜಾ ಮಾಡಿದೆ. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ಏನಿದು ಘಟನೆ?
    ಅನಾಮಿಕಾ ಶರ್ಮಾ 2024ರ ವರೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದಳು. ನಂತರ ಪಕ್ಷದ ಸದಸ್ಯೆ ಆಗಿ ಮುಂದುವರಿದಿದ್ದಳು. ಆಕೆ ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಆದ್ರೆ ಮಗಳು ಅಪ್ಪನೊಂದಿಗೆ ಉಳಿದುಕೊಂಡಿದ್ದಳು. ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು. ಈ ವೇಳೆ ಅನಾಮಿಕಾ, ಸುಮಿತ್‌ನ ಪ್ರೇಮ ಸಂಪಾದಿಸಿ ಆತನ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಳು. ಜನವರಿಯಿಂದ ಮಾರ್ಚ್‌ ವೇಳೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಮಗಳ ಮೇಲೆ ಸುಮಿತ್ ಹಾಗೂ ಆತನ ಸ್ನೇಹಿತ ಶುಭಂನಿಂದ ಅತ್ಯಾಚಾರ ಮಾಡಿಸಿದ್ದಳು. ಈ ವಿಷಯವನ್ನ ತಂದೆಗೆ ಹೇಳದಂತೆ ಬೆದರಿಕೆಯೂ ಹಾಕಿದ್ದಳು ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್‌, ಉಳಿದವರು ಎಸ್ಕೇಪ್‌

    ಮಂಗಳವಾರ ನಡೆದ ಘಟನೆ ಬಗ್ಗೆ ಅಪ್ರಾಪ್ತೆ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ಪರಿಣಾಮ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆ ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತಕ್ಕೆ 11 ಸಾವು ಕೇಸ್‌ – ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಸಿಎಂ ಸೂಚನೆ

  • ಬೀಳ್ಕೊಡುಗೆ ಸಮಾರಂಭದ ವೇಳೆ ವಿದ್ಯಾರ್ಥಿಗಳಿಂದ ಗಾಳಿಯಲ್ಲಿ ಗುಂಡು – ಕೇಸ್‌ ದಾಖಲು

    ಬೀಳ್ಕೊಡುಗೆ ಸಮಾರಂಭದ ವೇಳೆ ವಿದ್ಯಾರ್ಥಿಗಳಿಂದ ಗಾಳಿಯಲ್ಲಿ ಗುಂಡು – ಕೇಸ್‌ ದಾಖಲು

    ಡೆಹ್ರಾಡೂನ್: ಉತ್ತರಾಖಂಡದ ಹರಿದ್ವಾರದ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿಗಳು ತಮ್ಮ ಬೀಳ್ಕೊಡುಗೆ ಸಮಾರಂಭದ ವೇಳೆ ಅಪಾಯಕಾರಿ ಕಾರ್ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೇ ಗಾಳಿಯಲ್ಲಿ ಗುಂಡು ಹಾರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಹರಿದ್ವಾರ ಸಮೀಪದ ಬಿಎಚ್‌ಇಎಲ್‌ ಸ್ಟೇಡಿಯಂ ಬಳಿ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವ ವಿಡಿಯೋದಲ್ಲಿ ಸುಮಾರು 70 ವಿದ್ಯಾರ್ಥಿಗಳು ಕಾಣಿಸಿಕೊಂಡಿದ್ದಾರೆ. ಈ ವೇಳೆ ಕೆಲವರು ಕಾರನ್ನು ವೇಗವಾಗಿ ಚಲಾಯಿಸಿ ಪುಂಡಾಟ ಮೆರೆದಿದ್ದಾರೆ. ಕೆಲವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ವಿಡಿಯೋ ರೆಕಾರ್ಡ್ ಮಾಡಲು ಚಲಿಸುವ ಕಾರಿನ ಮೇಲೆ ನಿಂತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.

    ವೈರಲ್ ಆಗಿರುವ ವಿಡಿಯೋವನ್ನು ಆಧರಿಸಿ ವಿದ್ಯಾರ್ಥಿಗಳನ್ನು ಗುರುತಿಸಲು ಪೋಲಿಸರು ಕ್ರಮಕೈಗೊಂಡಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 223,125 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • 200 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್‌ – ಮದುವೆಗೆ ಹೊರಟಿದ್ದ 30 ಮಂದಿ ದಾರುಣ ಸಾವು

    200 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್‌ – ಮದುವೆಗೆ ಹೊರಟಿದ್ದ 30 ಮಂದಿ ದಾರುಣ ಸಾವು

    ಉತ್ತರಾಖಂಡ: ಚಾಲಕನ ನಿಯಂತ್ರಣ ತಪ್ಪಿ ಮದುವೆ  ಬಸ್ 200 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು 30 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರಾಖಂಡದ (Uttarakhand) ಪೌರಿ (Pauri) ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ ಸುಮಾರು 8 ಗಂಟೆ ಘಟನೆ ನಡೆದಿದ್ದು, ಘಟನೆ ನಡೆದಾಗ ಬಸ್ಸಿನಲ್ಲಿ 50-55 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಹರಿದ್ವಾರ (Haridwar) ಜಿಲ್ಲೆಯ ಲಾಲ್ಧಾಂಗ್‌ನಿಂದ ಪೌರಿಯ ಬಿರೋನ್‌ಖಾಲ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಧುವಿನ ಮನೆಯಿಂದ ಎರಡು ಕಿ.ಮೀ. ದೂರದಲ್ಲಿ ಅಪಘಾತ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಸರ್ವರ್‌ ಸಮಸ್ಯೆ; ಚೆಕ್-ಇನ್‌, ಫ್ಲೈಟ್ ಕಾರ್ಯಾಚರಣೆಯಲ್ಲಿ ತೊಂದರೆ

    ವಿಚಾರ ತಿಳಿದು ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ  ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯುತ್ತಿರುವ ಅಧಿಕಾರಿಗಳು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ ಎಂದು ಹೇಳಿದ್ದಾರೆ. ಸ್ಥಳೀಯ ಶಾಸಕಿ ರಿತು ಖಂಡೂರಿ ಸ್ಥಳಕ್ಕೆ ಆಗಮಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದರು. ಇದನ್ನೂ ಓದಿ: ಮಂಜಿನ ನಗರಿ ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ

    ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅಪಘಾತದ ಹಿನ್ನೆಲೆಯಲ್ಲಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಧಾರವಾಡ| ಖಾಸಗಿ ಬಸ್‌ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ

  • ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ

    ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ

    – ಕಾವೇರಿ ಆರತಿ ಒಮ್ಮೆ ಶುರು ಮಾಡಿದ್ರೆ ನಿಲ್ಲಿಸುವಂತಿಲ್ಲ

    ಲಕ್ನೋ: ದಸರಾದಲ್ಲಿ (Mysuru Dasara) ಗಂಗಾರತಿಯಂತೆ (Gangarathi) ಕಾವೇರಿ ಆರತಿ ಮಾಡಬೇಕು ಎನ್ನುವುದು ಆಸೆ ಇದೆ. ಸಾಂಕೇತಿಕವಾಗಿ ಮಾಡುವ ಬಗ್ಗೆ ಚಿಂತಿಸಲಾಗುವುದು. ನಮ್ಮಲ್ಲಿ ಸರ್ಕಾರದಿಂದ ಮಾಡಬೇಕು ಅಂದುಕೊಂಡಿದ್ದೇವೆ. ಕಾವೇರಿ ಆರತಿ ಮಾಡುವ ಬಗ್ಗೆ ಚರ್ಚಿಸಿದಾಗ ಇಲ್ಲಿ ಗಂಗಾರತಿ ಆಯೋಜಕರು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧ್ಯಯನ ವರದಿ ನೀಡಲಾಗುವುದು ಎಂದು ವಾರಣಾಸಿಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N Chaluvarayaswamy) ಹೇಳಿಕೆ ನೀಡಿದ್ದಾರೆ.

    ವಾರಣಾಸಿಯಲ್ಲಿ (Varanasi) ಕಾವೇರಿ ಆರತಿ ಅಧ್ಯಯನ ತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿದ್ವಾರ ಮತ್ತು ವಾರಣಾಸಿಯಲ್ಲಿ ಭಿನ್ನ ಅನುಭವವಾಗಿದೆ. ಗಂಗಾ ಮಹಾ ಸಭಾ ಸೊಸೈಟಿ ಅಡಿಯಲ್ಲಿ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಹರಿದ್ವಾರದಲ್ಲಿ ನೂರಕ್ಕೂ ಅಧಿಕ ವರ್ಷದ ಅನುಭವ ಇದೆ. ವಾರಣಾಸಿಯಲ್ಲಿ 35 ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. ಗಂಗಾನದಿಯಂತೆ ಕಾವೇರಿ ಕೂಡಾ ಅತಿ ಮುಖ್ಯವಾದ ನದಿ. ಪ್ರವಾಹ ಬಂದು ಜನರು ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ಅದು ನಿಯಂತ್ರಣಕ್ಕೆ ಬರಲಿ ಎಂದು ಆರತಿ ಶುರು ಮಾಡಿದ ಪ್ರತಿತಿ ಇದೆ. ರಾಜ್ಯದಲ್ಲಿ ಒಳ್ಳೆ ಮಳೆಯಾಗಲಿ, ನದಿ ಸಮಸ್ಯೆ ಇತ್ಯರ್ಥವಾಗಲಿ ಎಂದು ನಾವು ಮಾಡಲಿದ್ದೇವೆ ಎಂದರು. ಇದನ್ನೂ ಓದಿ: ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ರಾಜ್ಯದಲ್ಲಿ ಒಳ್ಳೆ ಮಳೆಯಾದಲಿ, ನದಿ ಸಮಸ್ಯೆ ಇತ್ಯರ್ಥ ವಾಗಲಿ ಅಂತಾ ನಾವು ಮಾಡಲಿದ್ದೇವೆ. ಆರತಿ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಸಿಎಂ, ಡಿಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ಮಾಡ್ತೇವೆ. ಅಧಿಕಾರಿಗಳನ್ನು ಕಳುಹಿಸಿ ಇನ್ನು ಹೆಚ್ಚಿನ ಮಾಹಿತಿ ಪಡೆಯಲಿದ್ದೇವೆ. ಒಮ್ಮೆ ಶುರು ಮಾಡಿದ ಮೇಲೆ ನಿಲ್ಲಿಸಬಾರದು. ಯಾರೇ ಬಂದರು ಇದನ್ನ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ಇನ್ನಷ್ಟು ಪರಿಶೀಲನೆ ಮಾಡಲಾಗುವುದು. ಬಳಿಕ ಸೂಕ್ತ ತಿರ್ಮಾನ ಬೆಂಗಳೂರಿನಲ್ಲಿ (Bengaluru) ತಿರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು ಪ್ರಕರಣ; ಕಾರ್ಮಿಕ ಸಚಿವಾಲದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಲುವರಾಯಸ್ವಾಮಿ ನೇತೃತ್ವದ ಸುಮಾರು 25ಕ್ಕೂ ಹೆಚ್ಚು ಶಾಸಕರಿರುವ ನಿಯೋಗ ವಾರಣಾಸಿಗೆ ಭೇಟಿ ನೀಡಿದೆ. ಹರಿದ್ವಾರದಲ್ಲಿ ಗಂಗಾರತಿ ಬಗ್ಗೆ ಅಧ್ಯಯನ ಮಾಡಿದ ತಂಡ ವಾರಣಾಸಿಗೆ ತೆರಳಿ ವ್ಯವಸ್ಥೆಯನ್ನು ಅಧ್ಯಯನ ನಡೆಸಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ; ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ – ಪೇಜಾವರ ಶ್ರೀ

    ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ನಾವು ಇದನ್ನು ರಾಜಕೀಯ ಕಾರಣಕ್ಕೆ ಮಾಡುತ್ತಿಲ್ಲ, ಕಾವೇರಿ ನದಿಗೆ ತನ್ನದೇಯಾದ ಇತಿಹಾಸವಿದೆ ಹೀಗಾಗೀ ಆರತಿ ಮಾಡುವ ಚಿಂತನೆ ಮಾಡಿದೆ. ಕಾಂಗ್ರೇಸ್ (Congress) ಸರ್ವ ಧರ್ಮಗಳನ್ನು ಒಂದೇ ರೀತಿಯಲ್ಲಿ ನೋಡುತ್ತದೆ. ಯಾವುದೇ ಸರ್ಕಾರ ಬಂದರು ಇದನ್ನು ಮುಂದುವರಿಸಬೇಕು ಎಂದರು. ಇದನ್ನೂ ಓದಿ: ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ವಿಶೇಷ ರೈಲನ್ನು ಸ್ಫೋಟಿಸಲು ಯತ್ನ

    ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಗಂಗಾನದಿಗೆ ತನ್ನದೇ ಆದ ಇತಿಹಾಸವಿದೆ. ಅದೇ ರೀತಿ ಕಾವೇರಿಗೂ ತನ್ನದೇ ಇತಿಹಾಸ ಇದೆ. ಕಾವೇರಿ ಲಕ್ಷಾಂತರ ರೈತರಿಗೆ ಕೃಷಿಗೆ ಅನುಕೂಲವಾಗಿದೆ. ಕೊಟ್ಯಾಂತರ ಜನರಿಗೆ ಜೀವ ಜಲವಾಗಿದೆ. ಇದಕ್ಕೆ ಕೃತ್ಯಜ್ಞತೆ ಸಲ್ಲಿವುದು ಎನ್ನುವುದು ನನ್ನ ಉದ್ದೇಶ ಹೀಗಾಗೀ ನಾನು ಡಿಸಿಎಂ ಡಿ.ಕೆ ಶಿವಕಿಮಾರ್ (DK Shivakumar) ಜೊತೆಗೆ ಚರ್ಚಿಸಿದೆ ಅವರು ಸಕಾರಾತ್ಮವಾಗಿ ಸ್ಪಂಧಿಸಿದರು. ತಂಡ ಬಂದು ಅಧ್ಯಯನ ಮಾಡಿದ್ದು ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ರಾಜ್ಯಪಾಲರೇ ವಿರೋಧ ಪಕ್ಷದ ನಾಯಕನಂತೆ ನಡೆದುಕೊಳ್ಳುತ್ತಿದ್ದಾರೆ: ದಿನೇಶ್ ಗುಂಡೂರಾವ್

  • ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    -ದಸರಾ ವೇಳೆಗೆ ಕಾವೇರಿ ಆರತಿ ಶುರು ಮಾಡುವ ಪ್ರಯತ್ನ

    ಬೆಂಗಳೂರು: ಉತ್ತರ ಭಾರತದಲ್ಲಿ (North India) ನಡೆಯುವ ಗಂಗಾರತಿ (Gangarathi) ಮಾದರಿಯಲ್ಲಿಯೇ ರಾಜ್ಯದಲ್ಲಿ ಕಾವೇರಿ ಆರತಿ ನಡೆಸಲು ತಯಾರಿ ಆರಂಭವಾಗಿದೆ. ಸಂಬಂಧ ಅಧ್ಯಯನ ನಡೆಸಲು ಸಚಿವ ಚಲುವರಾಯಸ್ವಾಮಿ (Cheluvarayaswamy) ನೇತೃತ್ವದ ನಿಯೋಗ ಹರಿದ್ವಾರ ಮತ್ತು ವಾರಾಣಾಸಿಗೆ ತೆರೆಳಿದೆ. ನಿನ್ನೆ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಸಭೆ ನಡೆಸಿದ್ದು, ಹಲವು ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡಿದೆ.

    ಗಂಗೆಯಷ್ಟೇ ಪವಿತ್ರ ನದಿ ಕಾವೇರಿ (Kaveri) ಎಂಬ ನಿಟ್ಟಿನಲ್ಲಿ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಕಾವೇರಿ ಆರತಿಯ ರೂಪುರೇಷೆ ತಯಾರಿಸಲಿದೆ. ಇದಕ್ಕಾಗಿ ನಿಯೋಗ ಹರಿದ್ವಾರ ಹಾಗೂ ವಾರಣಾಸಿಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಿದ್ದು, ಇದರ ಭಾಗವಾಗಿ ಮೊದಲು ಹರಿದ್ವಾರಕ್ಕೆ ಭೇಟಿ ನೀಡಿತು. ಹರ್ ಕೀ ಪೌಡಿ ಘಾಟ್‌ನಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ನಿಯೋಗ ಭಾಗಿಯಾಯಿತು. ಸಚಿವ ಚಲುವರಾಯಸ್ವಾಮಿ ಆದಿಯಾಗಿ ಎಲ್ಲ ಸದಸ್ಯರು ವಿಶೇಷ ಆರತಿ ಮಾಡಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಬಳಿಕ ಆರತಿ ನಡೆಯುವ ರೀತಿ ರಿವಾಜುಗಳನ್ನು ಪರಿಶೀಲಿಸಿದರು.ಇದನ್ನೂ ಓದಿ: ‘ದಳಪತಿ 69’ ಅಸಲಿ ಸ್ಟೋರಿ ರಿವೀಲ್- ಕಮಲ್ ಹಾಸನ್‌ಗೆ ಹೇಳಿದ್ದ ಕಥೆಯಲ್ಲಿ ವಿಜಯ್?

    ಬಳಿಕ ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಆಡಳಿತ ಸಮಿತಿ ಜೊತೆಗೆ ಮಾತುಕತೆ ನಡೆಸಿದ ನಿಯೋಗ ಕರ್ನಾಟಕ ಸರ್ಕಾರದ ಪ್ರಸ್ತಾವನೆ ಬಗ್ಗೆ ತಿಳಿಸಿದರು. ಇದಕ್ಕೆ ಖುಷಿ ವ್ಯಕ್ತಪಡಿಸಿದ ಆಡಳಿತ ಸಮಿತಿ ಕಾರ್ಯದರ್ಶಿ ತನ್ಮಯ ವಶಿಷ್ಠ, ಗಂಗಾರತಿ ರೀತಿಯಲ್ಲಿ ಕಾವೇರಿ ಆರತಿ ಮಾಡುವುದು ಖುಷಿಯ ಸಂಗತಿ ಎಂದರು.

    ಗಂಗಾರತಿ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಗಂಗಾನದಿಯಂತೆ ಕಾವೇರಿ ನದಿ ಕೂಡಾ ಜೀವ ನದಿಯಾಗಿದೆ. ಅದಕ್ಕಾಗಿ ಇಲ್ಲಿಯೂ ಆರತಿ ಮಾಡಲು ನಿರ್ಧರಿಸಿದ್ದು, ಡಿಸಿಎಂ ಶಿ.ಕೆ ಶಿವಕುಮಾರ್ ನಿರ್ದೇಶನದ ಮೇರೆಗೆ ಈ ಬಗ್ಗೆ ನಮ್ಮ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಅಧ್ಯಯನಕ್ಕೆ ಬಂದಿದ್ದೇವೆ. ಸಾಧ್ಯವಾದಷ್ಟು ಬೇಗ ಆರತಿ ಶುರು ಮಾಡಬೇಕು ಅಂದುಕೊಂಡಿದ್ದು, ದಸರಾದೊಳಗೆ ನಾವು ಶುರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಒಮ್ಮೆ ಆರತಿಯನ್ನು ಶುರು ಮಾಡಿದರೆ ನಿಲ್ಲಿಸುವ ಮಾತಿಲ್ಲ ಎಂದಿದ್ದಾರೆ.

    ಇನ್ನು ಸಮಿತಿಯೂ ಶನಿವಾರ ವಾರಣಾಸಿಗೆ ತೆರಳಲಿದ್ದು, ಅಲ್ಲೂ ಗಂಗಾರತಿಯನ್ನು ನೋಡಿಕೊಂಡು ಬೆಂಗಳೂರಿಗೆ (Bengaluru) ವಾಪಸ್ ಬರಲಿದ್ದಾರೆ. ಬಳಿಕ ಈ ಬಗ್ಗೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಲಿದೆ.ಇದನ್ನೂ ಓದಿ: ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

  • ಗಂಗಾ ನದಿಯಲ್ಲಿ ಪದಕ ವಿಸರ್ಜಿಸಲು ಮುಂದಾದ ಕುಸ್ತಿಪಟುಗಳನ್ನು ತಡೆದ ರೈತ ಹೋರಾಟಗಾರ

    ಗಂಗಾ ನದಿಯಲ್ಲಿ ಪದಕ ವಿಸರ್ಜಿಸಲು ಮುಂದಾದ ಕುಸ್ತಿಪಟುಗಳನ್ನು ತಡೆದ ರೈತ ಹೋರಾಟಗಾರ

    ನವದೆಹಲಿ: ಸರ್ಕಾರ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ಮುಖ್ಯಸ್ಥ ಹಾಗೂ ಬಿಜೆಪಿ (BJP) ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಬೇಸತ್ತ ಕುಸ್ತಿಪಟುಗಳು (Wrestlers) ತಮ್ಮ ಪದಕಗಳನ್ನು (Medals) ಗಂಗಾ ನದಿಯಲ್ಲಿ (Ganga River) ವಿಸರ್ಜಿಸಲು ಮುಂದಾಗಿದ್ದರು. ಕುಸ್ತಿಪಟುಗಳ ಈ ನಡೆಯನ್ನು ಸದ್ಯ ತಡೆಯಲಾಗಿದ್ದು, ಸಿಂಗ್ ಬಂಧನಕ್ಕೆ 5 ದಿನಗಳ ಕಾಲಾವಕಾಶ ನೀಡಲು ಒಪ್ಪಿಕೊಂಡಿದ್ದಾರೆ.

    ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪವನ್ನು ಹೊರಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಮ್ಮ ಪದಕಗಳನ್ನು ಸಂಜೆ 6 ಗಂಟೆಗೆ ಹರಿದ್ವಾರದ ಬಳಿ ಗಂಗಾ ನದಿಯಲ್ಲಿ ಎಸೆಯುವುದಾಗಿ ಪ್ರಕಟಿಸಿದ್ದರು. ಗಂಗೆಯಲ್ಲಿ ಪದಕಗಳನ್ನು ವಿಸರ್ಜಿಸಲು ಮುಂದಾದಾಗ ರೈತ ಹೋರಾಟಗಾರ ನರೇಶ್ ಟಿಕಾಯತ್ ಕುಸ್ತಿಪಟುಗಳ ಮೆಡಲ್‌ಗಳನ್ನು ಪಡೆದುಕೊಂಡಿದ್ದಾರೆ.

    ಬಳಿಕ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದ ನರೇಶ್ ಟಿಕಾಯತ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರೆ. ಮುಂದಿನ 5 ದಿನಗಳೊಳಗೆ ಬ್ರಿಜ್ ಭೂಷಣ್ ಬಂಧನವಾಗದಿದ್ದರೆ ಮತ್ತೆ ಹರಿದ್ವಾರಕ್ಕೆ ಬಂದು ಪದಕಗಳನ್ನು ವಿಸರ್ಜಿಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ

    ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ಹಲವು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರು. ನೂತನ ಸಂಸತ್ ಭವನದತ್ತವೂ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದರು. ಇದನ್ನೂ ಓದಿ: ಮನೆಗೆ ಅತ್ತೆಯೇ ಸಿನಿಯರ್, ಅತ್ತೆ ಒಪ್ಪಿದ್ರಷ್ಟೇ ಸೊಸೆಗೆ 2,000 – ಲಕ್ಷ್ಮಿ ಹೆಬ್ಬಾಳ್ಕರ್

  • ಗಂಗಾನದಿಗೆ ಸೇತುವೆಯಿಂದ ಜಿಗಿದ 75ರ ವೃದ್ಧೆ – ಸಾಹಸ ಕಂಡು ಬೆರಗಾದ ಜನ

    ಗಂಗಾನದಿಗೆ ಸೇತುವೆಯಿಂದ ಜಿಗಿದ 75ರ ವೃದ್ಧೆ – ಸಾಹಸ ಕಂಡು ಬೆರಗಾದ ಜನ

    ಡೆಹ್ರಾಡೂನ್: ಸಾಧಿಸುವ ಛಲವೊಂದಿದ್ದರೆ ಸಾಕು ಅದಕ್ಕೆ ವಯಸ್ಸಿನ ಅಂತರ ಅಡ್ಡಿ ಬರುವುದಿಲ್ಲ. ಎನ್ನುವುದಕ್ಕೆ ಅನೇಕ ನಿದರ್ಶನಗಳು ಸಾಕ್ಷಿಯಾಗಿವೆ. ಹಾಗೆಯೇ ಉತ್ತರಾಖಂಡದ ಹರಿದ್ವಾರದಲ್ಲಿ 75 ವರ್ಷದ ವೃದ್ಧೆಯೊಬ್ಬರು ಸೇತುವೆಯ ಮೇಲಿನಿಂದ ಗಂಗಾನದಿಗೆ ಧುಮುಕಿ ಈಜುವ ಮೂಲಕ ಜನರನ್ನು ನಿಬ್ಬೆರಗಾಗಿಸಿದ್ದಾರೆ.

    ಹಿಂದೂಗಳ ಪವಿತ್ರ ಹಾಗೂ ಧಾರ್ಮಿಕ ಕ್ಷೇತ್ರವಾದ ಹರಿದ್ವಾರದ ಹರ್ ಕಿಪುರಿ ಘಾಟ್‌ನ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಮೂಲತಃ ಹರಿಯಾಣದ ಸೋನಿಪತ್ ಬಂದೇಪುರ ಗ್ರಾಮದ 75 ವರ್ಷದ ವೃದ್ಧೆ ಈ ಸಾಹಸ ಮಾಡಿದ್ದಾರೆ. ಇದನ್ನೂ ಓದಿ: 16 ವರ್ಷಗಳಿಂದ ಅಳಿಯನನ್ನೇ ಪ್ರೀತಿಸ್ತಿದ್ದ ಅತ್ತೆ- ಒಟ್ಟಿಗೆ ಇರಲು ಸಾಧ್ಯವಾಗದೇ ಇಬ್ಬರೂ ಆತ್ಮಹತ್ಯೆ

    ಹರಿದ್ವಾರದಲ್ಲಿ ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿನಿಂದ ವೃದ್ಧೆಯೊಬ್ಬರು ತುಂಬಿ ಹರಿಯುತ್ತಿರುವ ಆಳವಾದ ಗಂಗಾನದಿಗೆ ಹಾರಿ ಈಜಿದ್ದಾರೆ. ತಾನು ಸೇತುವೆಗೆ ಧುಮುಕಲು ಹೊರಟಾಗ ಯಾರೂ ತನ್ನನ್ನು ಹಿಂಬಾಲಿಸದಂತೆ ನೋಡಿಕೊಂದ್ದಾರೆ. ಆದರೂ ಸೇತುವೆ ಮೇಲಿದ್ದವರೆ ಯಾರೋ ಈ ಘಟನೆಯನ್ನು ಸೆರೆ ಹಿಡಿದು, ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವೀಡಿಯೋ ವೈರಲ್ ಆಗಿದೆ.

    Live Tv

  • ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲ 5 ಕೋಟಿ ಪರಿಹಾರ ಕೊಡಿ – ಮಗ, ಸೊಸೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಅತ್ತೆ

    ವರ್ಷದೊಳಗೆ ಮೊಮ್ಮಗು ನೀಡಿ, ಇಲ್ಲ 5 ಕೋಟಿ ಪರಿಹಾರ ಕೊಡಿ – ಮಗ, ಸೊಸೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಅತ್ತೆ

    ಡೆಹ್ರಾಡೂನ್: ಮಗ ಮತ್ತು ಸೊಸೆ ಮೊಮ್ಮಗುವನ್ನು ನೀಡಲು ನಿರಾಕರಿಸಿದ್ದರಿಂದ ತಾನು ಮಾನಸಿಕ ಸಂಕಟವನ್ನು ಅನುಭವಿಸುತ್ತಿದ್ದು, ಇದಕ್ಕೆ ಪರಿಹಾರ ನೀಡುವಂತೆ ಮಹಿಳೆಯೊಬ್ಬಳು ಇದೇ ಮೊದಲ ಬಾರಿಗೆ ಹರಿದ್ವಾರದ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

    ಸದ್ಯ ಈ ವಿಚಾರವಾಗಿ ಮಗ ಮತ್ತು ಸೊಸೆ ವಿರುದ್ಧ 5 ಕೋಟಿ ರೂ.ಗಳ ಮೊಕದ್ದಮೆ ಹೂಡಿ, ವಕೀಲ ಎ.ಕೆ. ಶ್ರೀವಾಸ್ತವ್ ಮೂಲಕ ಮಹಿಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣ ಖರ್ಚು ಮಾಡಿ ಉತ್ತಮ ಪೈಲಟ್ ಮಾಡಿದ್ದೇನೆ. 2016ರಲ್ಲಿ ಭಾರೀ ಖರ್ಚು ಮಾಡಿ ತನ್ನ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದೇನೆ. ಅಲ್ಲದೇ ನವದಂಪತಿಯನ್ನು ಹನಿಮೂನ್‍ಗೆ ನನ್ನ ಸ್ವಂತ ಹಣದಿಂದ ಥೈಲ್ಯಾಂಡ್‍ಗೆ ಕಳುಹಿಸಿದ್ದೇನೆ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.

    ಮದುವೆಯ ನಂತರ ನನ್ನ ಸೊಸೆ ಮಗನನ್ನು ಹೈದರಾಬಾದ್‍ಗೆ ಶಿಫ್ಟ್ ಆಗೋಣಾ ಎಂದು ಒತ್ತಾಯಿಸಿದಳು. ಅಂದಿನಿಂದ ಮಗ, ಸೊಸೆ ನಮ್ಮೊಂದಿಗೆ ಮಾತನಾಡುತ್ತಿಲ್ಲ. ಅಲ್ಲದೇ ನನ್ನ ಸೊಸೆಯ ಕುಟುಂಬದ ಜವಾಬ್ದಾರಿಯನ್ನು ನನ್ನ ಮಗನ ಸಂಪೂರ್ಣ ಸಂಬಳದಲ್ಲಿ ನಡೆಸಲಾಗುತ್ತಿದೆ. ಪ್ರತಿ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮಗ ಹೆಂಡತಿಯ ಮಾತನ್ನು ಕೇಳುತ್ತಾನೆ ಮತ್ತು ಆಕೆಯನ್ನೇ ಬೆಂಬಲಿಸುತ್ತಾನೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ:  ಅಂಧ ವ್ಯಕ್ತಿ ಮಗಳ ಕನಸ್ಸನ್ನು ಕೇಳಿ ಮೋದಿ ಭಾವುಕ – ವೀಡಿಯೋ ವೈರಲ್

    ಒಂದು ವರ್ಷದೊಳಗೆ ಸೊಸೆ ಗರ್ಭಧರಿಸಬೇಕು ಎಂದು ಮಗ ಮತ್ತು ಸೊಸೆಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಪೋಷಕರಿಗೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮೊಕದ್ದಮೆಯಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ:  ನನಗೆ ಅವಕಾಶ ಕೊಟ್ಟಿದ್ದು, ಬೆನ್ನಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ ಟ್ವೀಟ್

  • ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ ಡಿಕೆಶಿ

    ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ ಡಿಕೆಶಿ

    ಬೆಂಗಳೂರು: ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಈ ತಿಂಗಳಿನಲ್ಲಿ ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ.

    ಮೇ 13,14, 15 ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್‌ ಚಿಂತಕರ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಭಾಗಿಯಾಗಲಿರುವ ಡಿಕೆಶಿ ಕಾರ್ಯಕ್ರಮ ಮುಗಿದ ಬಳಿಕ ತೀರ್ಥಯಾತ್ರೆ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ನನ್ನನ್ನು ತಿಹಾರ್ ಜೈಲಿಗಾದ್ರೂ ಹಾಕಲಿ, ಪರಪ್ಪನ ಅಗ್ರಹಾರ ಜೈಲಿಗಾದ್ರೂ ಹಾಕಲಿ ಹೆದರಲ್ಲ: ಡಿಕೆಶಿ

    ಉತ್ತರಾಖಂಡದಲ್ಲಿರುವ ಪವಿತ್ರ ದೇವಸ್ಥಾನಗಳಾದ ಕೇದರಾನಾಥ, ಬದರೀನಾಥ, ಹರಿದ್ವಾರಕ್ಕೆ ಡಿಕೆ ಶಿವಕುಮಾರ್‌ ತೆರಳಲಿದ್ದಾರೆ. ಎರಡು ದಿನ ಪ್ರವಾಸ ಕೈಗೊಂಡ ಬಳಿಕ ಡಿಕೆಶಿ ಕರ್ನಾಟಕಕ್ಕೆ ಮರಳಲಿದ್ದಾರೆ.