Tag: Hardware shop

  • ಅಂಗಡಿಗೆ ನುಗ್ಗಿ, ಗುಂಡು ಹಾರಿಸಿ ಹಣ ದೋಚಿದ ಖದೀಮರು

    ಅಂಗಡಿಗೆ ನುಗ್ಗಿ, ಗುಂಡು ಹಾರಿಸಿ ಹಣ ದೋಚಿದ ಖದೀಮರು

    ನವದೆಹಲಿ: ಹಾರ್ಡ್‍ವೇರ್ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ನುಗ್ಗಿ ಬಂದೂಕಿನಿಂದ ಅಂಗಡಿಯಲ್ಲಿದ್ದ ವ್ಯಕಿಗೆ ಬೆದರಿಸಿ ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಘಟನೆ ದೆಹಲಿಯ ಖೇರಾ ಖುರ್ದ್ ಪ್ರದೇಶದಲ್ಲಿ ನಡೆದಿದೆ.

    delhi hardware shop

    ಶನಿವಾರ ಈ ಘಟನೆ ನಡೆದಿದ್ದು, ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಈ ಕುರಿತಂತೆ ಪೊಲೀಸರು ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮುಖ ಮುಚ್ಚಿಕೊಂಡು ಅಂಗಡಿಗೆ ಪ್ರವೇಶಿ ಅಂಗಡಿಯಲ್ಲಿದ್ದ ವ್ಯಕ್ತಿಗೆ ಹಣ ನೀಡುವಂತೆ ಬೆದರಿಕೆಯೊಡ್ಡಿದ್ದಾರೆ. ಈ ವೇಳೆ ಹಣ ನೀಡಲು ನಿರಾಕರಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಟಾಟಾ ಉತ್ಪನ್ನದ ಗೋದಾಮಿಗೆ ಆಕಸ್ಮಿಕ ಬೆಂಕಿ – ದಿನ ಬಳಕೆಯ ವಸ್ತುಗಳು ಬೆಂಕಿಗಾಹುತಿ

    delhi hardware shop

    ಈ ಬಗ್ಗೆ ಉತ್ತರ ದೆಹಲಿ ಜಿಲ್ಲೆಯ ಉಪಪೊಲೀಸ್ ಆಯುಕ್ತ ರಾಜೀವ್ ರಂಜನ್ ಸಿಂಗ್, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಅವರ ಪತ್ತೆಗಾಗಿ ದೆಹಲಿಯ ಹಲವು ಪೊಲೀಸರ ತಂಡ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲದೇ ಆರೋಪಿಗಳು ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದು, ಹೆಲ್ಮೆಟ್ ಧರಿಸಿ ಅಂಗಡಿಗೆ ಪ್ರವೇಶಿಸಿದ್ದರು. ಸದ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ವೇಳೆ ಅಂಗಡಿಯಲ್ಲಿದ್ದ ವ್ಯಕ್ತಿಯನ್ನು ಬಿಟ್ಟು ಬೇರೆ ಯಾರೂ ಗಾಯಗೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ:  ಸಲ್ಲು ತುಟಿಗೆ ಮುತ್ತಿಡಲು ಗಳಗಳನೇ ಕಣ್ಣೀರಿಟ್ಟಿದ್ದ ನಟಿ ಭಾಗ್ಯ ಶ್ರೀ

    ಆರೋಪಿಗಳು ಮೊದಲಿಗೆ ಅಂಗಡಿಯೊಳಗೆ ಪ್ರವೇಶಿಸಿ ಅಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿಗೆ ಬೆದರಿಕೆಯೊಡ್ಡಿ, ನಂತರ ಕ್ಯಾಶ್ ಕೌಂಟರ್‌ನ ಡ್ರಾಯರ್‌ನಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಅಂಗಡಿಯಲ್ಲಿದ್ದ ವ್ಯಕ್ತಿಗೆ ಬಂದೂಕು ತೋರಿಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಹಣ ನೀಡಲು ನಿರಾಕರಿಸಿದ ವ್ಯಕ್ತಿ ಕಾಲಿಗೆ ಗುಂಡು ಹಾರಿಸಿರುವುದನ್ನು ದೃಶ್ಯಾವಳಿಯಲ್ಲಿ ಕಾಣಬಹುದು. ನಂತರ ಆರೋಪಿಗಳು ಹಣ ಮತ್ತು ಬೆಲೆ ಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಇದೀಗ ಘಟನೆ ವೇಳೆ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ- ಖತರ್ನಾಕ್ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

    ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ- ಖತರ್ನಾಕ್ ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

    ಕೋಲಾರ: ಖತರ್ನಾಕ್ ಕಳ್ಳನೊರ್ವ ಬನಿಯನ್ ಧರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಬಂದು ಥೇಟ್ ಸಿನಿಮಾ ಸ್ಟೈಲ್‍ನಲ್ಲಿ ಎರಡು ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆ. ಕತರ್ನಾಕ್ ಕಳ್ಳನ ಕೈಚಳಕ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಿಸಿ ಟಿವಿ ಆಧರಿಸಿ ಕಳ್ಳನ ಪತ್ತೆಗೆ ಕೋಲಾರ ನಗರ ಠಾಣೆ ಪೊಲೀಸರು ಮುಂದಾಗಿದ್ದಾರೆ.

    ಹೌದು ಕೋಲಾರ ನಗರದ ಕಾಳಮ್ಮ ಗುಡಿ ರಸ್ತೆಯಲ್ಲಿ ಕಳ್ಳತನವಾಗಿದೆ. ಅಂಗಡಿಗಳ ಶಟರ್ ಮುರಿದು ಕಳ್ಳತನ ಮಾಡಿರುವ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಾಳಮ್ಮ ಗುಡಿಯಲ್ಲಿರುವ ಸೂರ್ಯ ಗಾಮೆರ್ಂಟ್ಸ್ ಹಾಗೂ ಮದೀನಾ ಹಾರ್ಡ್ ವೇರ್ ಶಾಪ್‍ನಲ್ಲಿ ಕಳವು ಮಾಡಿರುವ ಆರೋಪಿ, ಸೂರ್ಯ ಗಾಮೆರ್ಂಟ್ಸ್‍ನಲ್ಲಿ 17 ಸಾವಿರ ರೂಪಾಯಿ ನಗದು ಹಾಗೂ ಲಕ್ಷಾಂತರ ರೂಪಾಯಿ ಬೆಲೆಯ ಬಟ್ಟೆ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

    ಮದೀನಾ ಹಾರ್ಡ್‍ವೇರ್ ಶಾಪ್‍ನಲ್ಲಿ ಟೂಲ್ ಕಿಟ್‍ಗಳನ್ನ ತೆಗೆದುಕೊಂಡು ಹೋಗಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಗಲ್‍ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನ ಅಂಗಡಿ ಮುಂದೆ ವಾಮಾಚಾರ

    ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನ ಅಂಗಡಿ ಮುಂದೆ ವಾಮಾಚಾರ

    ಬೆಂಗಳೂರು: ಕೆಲಸದಿಂದ ತೆಗೆದಿದ್ದರಿಂದ ಕೋಪಗೊಂಡ ಕೆಲಸಗಾರನೊಬ್ಬ ಮಾಲೀಕನ ಅಂಗಡಿ ಮುಂದೆ ವಾಮಾಚಾರ ನಡೆಸಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಕುರುಬರ ಹಳ್ಳಿಯಲ್ಲಿ ನಡೆದಿದೆ.

    ಕುರುಬರಹಳ್ಳಿ ಸರ್ಕಲ್‍ನ ಭುವನೇಶ್ವರಿ ಹಾರ್ಡ್ ವೇರ್‌ನಲ್ಲಿ ಶ್ರೀನಿವಾಸ್ ಎಂಬ ಯುವಕ ಕೆಲಸ ಮಾಡುತ್ತಿದ್ದ. ಆದರೆ ಅಂಗಡಿಗಳಲ್ಲಿ ಯಾರು ಇಲ್ಲದೆ ಇದ್ದಾಗ ಶ್ರೀನಿವಾಸ್ ಆಗಾಗ ಕ್ಯಾಶ್ ಕೌಂಟರ್‌ನಿಂದ ಹಣ ಕದಿಯುತ್ತಿದ್ದ. ಇದನ್ನು ಗಮನಿಸಿ ದ ಮಾಲೀಕ ವಿಶ್ವನಾಥ್ ಕೆಲ ದಿನಗಳ ಹಿಂದೆ ಶ್ರೀನಿವಾಸ್‍ನನ್ನು ತೆಗೆದು ಹಾಕಿದ್ದರು.

    ಮಾಲೀಕ ವಿಶ್ವನಾಥ್ ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಶ್ರೀನಿವಾಸ್ ಕೋಪಗೊಂಡಿದ್ದ. ಹೀಗಾಗಿ ಭಾನುವಾರ ಬೆಳಗ್ಗೆ ಅಂಗಡಿ ಮುಂಭಾಗದಲ್ಲಿ ಬಂದು ಕುಳಿದಿದ್ದ ಶ್ರೀನಿವಾಸ್, ಕಬ್ಬಿಣದ ಮೊಳೆ, ನಿಂಬೆ ಹಣ್ಣು, ಕರಿ ಎಳ್ಳು, ಅರಿಶಿಣ, ಕುಂಕುಮ ಎರಚಿ ಪರಾರಿಯಾಗಿದ್ದಾನೆ. ಶ್ರೀನಿವಾಸ್ ವಾಮಾಚಾರದ ವಸ್ತುಗಳನ್ನು ಎರಚುವ ದೃಶ್ಯವು ಅಂಗಡಿ ಮುಂಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆಯಾದಲ್ಲಿ ಸೆರೆಯಾಗಿದೆ.