Tag: Hardhik Pandya

  • ಭಾರತದ ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ – ಸುರೇಶ್ ರೈನಾ

    ಭಾರತದ ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ – ಸುರೇಶ್ ರೈನಾ

    ನವದೆಹಲಿ: ಈ ಬಾರಿಯ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಭಾರತದ ತಂಡದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಒಬ್ಬ ಪ್ರಮುಖ ಆಟಗಾರ ಎಂದು ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

    ಐಪಿಎಲ್ 12 ಅವೃತ್ತಿಯಲ್ಲಿ ಉತ್ತಮ ಫಾರ್ಮ್‍ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರು ಇದೇ ಆಟವನ್ನು ವಿಶ್ವಕಪ್‍ನಲ್ಲಿ ತೋರಿದರೆ ಅದು ಭಾರತ ತಂಡಕ್ಕೆ ವರದಾನವಾಗಲಿದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

    ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ರೈನಾ, ಮೇ 30 ರಿಂದ ಇಂಗ್ಲೆಂಡ್‍ನಲ್ಲಿ ಆರಂಭ ಆಗಲಿರುವ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಪ್ರಮುಖ ಆಟಗಾರನಾಗುತ್ತಾರೆ ಎಂದು ನನಗೆ ನಂಬಿಕೆ ಇದೆ. ಹಾರ್ದಿಕ್ ಪಾಂಡ್ಯ ತನೊಬ್ಬ ಉತ್ತಮ ಆಲ್ ರೌಂಡರ್ ಎಂದು ಐಪಿಎಲ್‍ನಲ್ಲಿ ಸಾಬೀತು ಮಾಡಿದ್ದಾರೆ. ಇದೇ ರೀತಿಯಲ್ಲಿ ಆಟವಾಡಿದರೆ ಈ ಬಾರಿಯ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಕೀ ಪ್ಲೇಯರ್ ಆಗುತ್ತಾರೆ ಎಂದು ಹೇಳಿದ್ದಾರೆ.

    ಐಪಿಎಲ್‍ನಲ್ಲಿ ಇದ್ದ ಲಯದಲ್ಲೇ ವಿಶ್ವಕಪ್‍ನಲ್ಲಿ ಬ್ಯಾಟ್ ಬೀಸಿದರೆ ಪಾಂಡ್ಯ ಭಾರತ ತಂಡದ ಗೇಮ್ ಚೇಂಜರ್ ಆಗಲಿದ್ದಾರೆ. ಫೀಲ್ಡಿಂಗ್‍ನಲ್ಲಿ ಮತ್ತು ಬ್ಯಾಟಿಂಗ್‍ನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಮತ್ತು ಯಾವುದೇ ಸಮಯದಲ್ಲದರೂ ಬಂದ ಬ್ಯಾಟ್ ಬೀಸುವ ಸಾಮರ್ಥ್ಯ ವನ್ನು ಹೊಂದಿದ್ದಾರೆ. ತಂಡಕ್ಕೆ ಬೌಲರ್‍ಗಳ ಸಮಸ್ಯೆಯಾದಾಗ ನಿರ್ಣಾಯಕ ಓವರಗಳನ್ನು ಬೌಲ್ ಮಾಡಲು ಪಾಂಡ್ಯ ಸೂಕ್ತವಾದ ಬೌಲರ್. ಈ ಎಲ್ಲಾ ವಿಭಾಗದಲ್ಲೂ ಉತ್ತಮ ಆಟವಾಡುವ ಪಾಂಡ್ಯ ಭಾರತ ತಂಡಕ್ಕೆ ವರದಾನವಾಗಲಿದ್ದಾರೆ ಎಂದು ಹೇಳಿದ್ದಾರೆ.

    ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಮ್ಯಾಚ್ ವಿನ್ನಿಂಗ್ ಆಟವಾಡಿದ ಹಾರ್ದಿಕ್ ಪಾಂಡ್ಯ ಆಡಿದ 15 ಪಂದ್ಯಗಳಲ್ಲಿ 190 ಭರ್ಜರಿ ಸ್ಟ್ರೈಕ್ ರೇಟ್‍ನೊಂದಿಗೆ 402 ರನ್ ಸಿಡಿಸಿದ್ದರು ಇದರಲ್ಲಿ 38 ಬೌಡಂರಿ ಮತ್ತು 29 ಸಿಕ್ಸರ್ ಹೊಡೆದಿದ್ದರು. ಬೌಲಿಂಗ್‍ನಲ್ಲೂ ಮಿಂಚಿದ್ದ ಈ 25 ವರ್ಷದ ಆಲ್ ರೌಂಡರ್ 16 ಪಂದ್ಯಗಳಲ್ಲಿ 14 ವಿಕೆಟ್ ಸಾಧನೆ ಮಾಡಿದ್ದರು.

  • ‘ಪಾಂಡ್ಯ ಇವತ್ತು ಮಾಡ್ಬಿಟ್ಟು ಬಂದಿದ್ದೀಯಾ’- ಪ್ಲೇ ಕಾರ್ಡ್ ಪ್ರದರ್ಶಿಸಿ ಕಾಲೆಳೆದ ಅಭಿಮಾನಿ

    ‘ಪಾಂಡ್ಯ ಇವತ್ತು ಮಾಡ್ಬಿಟ್ಟು ಬಂದಿದ್ದೀಯಾ’- ಪ್ಲೇ ಕಾರ್ಡ್ ಪ್ರದರ್ಶಿಸಿ ಕಾಲೆಳೆದ ಅಭಿಮಾನಿ

    ಆಕ್ಲೆಂಡ್: ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರುವ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯರನ್ನು ಮಹಿಳಾ ಅಭಿಮಾನಿಯೊಬ್ಬರು ಕಾಲೆಳೆದು ಕಿಚಾಯಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಸೆಕ್ಸ್ ಹಾಗೂ ಮಹಿಳೆಯ ಬಗ್ಗೆ ಕಮೆಂಟ್ ಮಾಡಿ ಸಾಮಾಜಿಕ ಜಾಲತಾಣಲದಲ್ಲಿ ಪಾಂಡ್ಯ ಟ್ರೋಲ್ ಆಗಿದ್ದರು. ಇದನ್ನು ಪುನಃ ನೆನಪಿಸುವಂತೆ ಮಾಡಿದ ಅಭಿಮಾನಿಯೊಬ್ಬರು ನ್ಯೂಜಿಲೆಂಡ್ ವಿರುದ್ಧ 2ನೇ ಟಿ20 ಪಂದ್ಯದ ವೇಳೆ ‘ಪಾಂಡ್ಯ ಇವತ್ತು ಮಾಡ್ಬಿಟ್ಟು ಬಂದಿದ್ದೀಯಾ’ ಬರೆದಿರುವ ಪ್ಲೇ ಕಾರ್ಡ್ ಪ್ರದರ್ಶಿಸಿದ್ದರು.

    ಮಹಿಳೆಯ ಮೇಲೆ ಪಾಂಡ್ಯ ಮಾಡಿರುವ ಕೆಟ್ಟ ಕಮೆಂಟ್‍ಗಳನ್ನು ಮರೆತಂತೆ ಕಾಣದ ಅಭಿಮಾನಿ ಫ್ಲೇ ಕಾರ್ಡ್ ಪ್ರದರ್ಶಿಸಿದ್ದು, ಸದ್ಯ ಅಭಿಮಾನಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಫೋಟೋ ನೋಡಿದ ನೆಟ್ಟಿಗರು ತಮ್ಮದೇ ಭಿನ್ನ ಅಭಿಪ್ರಾಯಗಳನ್ನು ತಿಳಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಅಂದಹಾಗೇ ಅಭಿಮಾನಿ ಈ ರೀತಿ ಪ್ಲೇ ಕಾರ್ಡ್ ಬರೆಯಲು ಕಾರಣವಿದ್ದು, ಕಾರ್ಯಕ್ರಮದಲ್ಲಿ ವರ್ಜಿನಿಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಅಂದು ನಾನು ಪೋಷಕರಿಗೆ ‘ಮೈ ಕರ್ಕೆ ಆಯಾ’ ಎಂದು ಹೇಳಿದ್ದಾಗಿ ಪಾಂಡ್ಯ ತಿಳಿಸಿದ್ದರು. ಪೋಷಕರೊಂದಿಗೆ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದ ಎಂದು ಹೇಳಿರುವ ಪಾಂಡ್ಯ, ಒಳ್ಳೆಯ ವಿಚಾರಗಳಾಗಲಿ ಅಥವಾ ಕೆಟ್ಟ ವಿಚಾರಗಳಾಗಿ ತಮ್ಮ ಎಲ್ಲಾ ಸಿಕ್ರೆಟ್ ಗಳನ್ನು ಹೇಳುತ್ತಿದೆ. ಅಂದು ಕೂಡ ನಾನು ರಾತ್ರಿ ಯಾರೊಂದಿಗೆ ಇದ್ದೇ ಎಂಬುವುದನ್ನು ತಿಳಿಸಿದ್ದೇ ಎಂದು ಉತ್ತರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

    ಪಾದಾರ್ಪಣೆ ಪಂದ್ಯದಲ್ಲೇ ಮತ್ತೊಂದು ಸಾಧನೆ ಮಾಡಿದ ರಿಷಭ್ ಪಂತ್

    ಲಂಡನ್: ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ರಿಷಭ್ ಪಂತ್ ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ 5 ಕ್ಯಾಚ್ ಪಡೆದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರಿಷಭ್ ಪಂತ್ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಕುಕ್, ಕೀಟನ್ ಜೆನ್ನಿಂಗ್ಸ್, ಒಲೀ ಪೋಪ್, ಕ್ರಿಸ್ ವೋಕ್ಸ್ ಮತ್ತು ಅದಿಲ್ ರಶೀದ್ ಕ್ಯಾಚ್ ಪಡೆದು ಮಿಂಚಿದರು. ಈ ಹಿಂದೆ ಟೀಂ ಇಂಡಿಯಾದ ನರೇನ್ ತಮ್ಹಾನೆ (1955), ಕಿರಣ್ ಮೋರೆ (1986), ನಮನ್ ಓಜಾ (2015) ತಂಡದ ಪರ ಈ ಸಾಧನೆ ಮಾಡಿದ್ದರು. ಉಳಿದಂತೆ ನಾನಾ ಜೋಶಿ (1951), ಚಂದ್ರಕಾಂತ್ ಪಟಾನ್ಕರ್ (1955) ಪಾದಾರ್ಪಣೆ ಪಂದ್ಯದಲ್ಲಿ 4 ಕ್ಯಾಚ್ ಪಡೆದಿದ್ದರು.

    ವಿಶೇಷವೆಂದರೆ ಪಾದಾರ್ಪಣೆ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 5 ಕ್ಯಾಚ್ ಪಡೆದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಯನ್ನು ರಿಷಭ್ ಪಂತ್ ಪಡೆದಿದ್ದಾರೆ. ಇದಕ್ಕೂ ಮುನ್ನ ಪಂದ್ಯದಲ್ಲಿ ರಿಷಭ್ ಎದುರಿಸಿದ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ರನ್ ಖಾತೆ ತೆರೆದಿದ್ದರು. ಅಲ್ಲದೇ ಸಿಕ್ಸರ್ ಮೂಲಕ ರನ್ ಖಾತೆ ತೆರೆದ ಟೀಂ ಇಂಡಿಯಾ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 51 ಎಸೆತ ಎದುರಿಸಿದ ರಿಷಭ್ ಪಂತ್ 24 ರನ್ ಗಳಿಸಿ ಔಟಾಗಿದ್ದರು.

    ಪಾಂಡ್ಯ 5 ವಿಕೆಟ್: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲ ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕೇವಲ 29 ಎಸೆತಗಳನ್ನು ಎಸೆದು 5 ವಿಕೆಟ್ ಪಡೆದ ಹಾರ್ದಿಕ್, ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಟೀಂ ಇಂಡಿಯಾ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 2006 ಹಭರ್ಜನ್ ಸಿಂಗ್ ಸಿಂಗ್ ಕೇವಲ 27 ಎಸೆತಗಳನ್ನು ಹಾಕಿ 5 ವಿಕೆಟ್ ಪಡೆದಿದ್ದರು.

    ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಪಾಂಡ್ಯ ಹಲವು ವಿಮರ್ಶೆಗಳನ್ನು ಎದುರಿಸಿದ್ದರು. ಸದ್ಯ ಪಾಂಡ್ಯ ತಮ್ಮ ಬೌಲಿಂಗ್ ಮೂಲಕ ವಿಮರ್ಶಕರಿಗೆ ತಿರುಗೇಟು ನೀಡಿದ್ದಾರೆ. ಪಾಂಡ್ಯ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 161 ರನ್ ಗಳಿಗೆ ಅಲೌಟ್ ಆಯಿತು. ಉಳಿದಂತೆ ಟೀಂ ಇಂಡಿಯಾ ಪರ ಜಸ್‍ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದ್ದು, 292 ರನ್ ಮುನ್ನಡೆ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv