Tag: Hardeep Singh Puri

  • ರಾಜ್ಯ ಸರ್ಕಾರಗಳು ಜಿಎಸ್‍ಟಿಗೆ ಸೇರಿಸಲು ಒಪ್ಪದ ಹೊರತು ಪೆಟ್ರೋಲ್ ಬೆಲೆ ಇಳಿಯಲ್ಲ: ಹರ್ದೀಪ್ ಸಿಂಗ್ ಪುರಿ

    ರಾಜ್ಯ ಸರ್ಕಾರಗಳು ಜಿಎಸ್‍ಟಿಗೆ ಸೇರಿಸಲು ಒಪ್ಪದ ಹೊರತು ಪೆಟ್ರೋಲ್ ಬೆಲೆ ಇಳಿಯಲ್ಲ: ಹರ್ದೀಪ್ ಸಿಂಗ್ ಪುರಿ

    ನವದೆಹಲಿ: ಒಂದು ಬ್ಯಾರೆಲ್ ಪೆಟ್ರೋಲಿಗೆ 19 ಡಾಲರ್ ಇದ್ದಾಗಲೂ ಒಂದು ಲೀಟರ್ ಪೆಟ್ರೋಲ್ ಮೇಲೆ 32 ರೂ. ತೆರಿಗೆ ವಿಧಿಸಿದ್ದೇವೆ. ಈಗ ದರ 75 ಡಾಲರ್‌ಗೆ ಏರಿಕೆ ಆದಾಗಲೂ 32 ರೂ. ತೆರಿಗೆ ವಿಧಿಸುತ್ತಿದ್ದೇವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಅವರು, ಪೆಟ್ರೋಲ್ ಬೆಲೆ ಕಡಿಮೆಯಾಗಬೇಕು ಎಂದು ನೀವು ಕೇಳಿದರೆ ನಾನು ಕಡಿಮೆಯಾಗಬೇಕು ಎಂದು ಹೇಳುತ್ತೇನೆ. ಆದರೆ ಯಾಕೆ ಕಡಿಮೆಯಾಗುತ್ತಿಲ್ಲ ಎಂದು ಪ್ರಶ್ನಿಸಿದರೆ ರಾಜ್ಯ ಸರ್ಕಾರಗಳು ಜಿಎಸ್‍ಟಿ ವ್ಯಾಪ್ತಿಗೆ ತರಲು ಅನುಮತಿ ನೀಡುತ್ತಿಲ್ಲ ಎಂಬ ಉತ್ತರ ನೀಡುತ್ತೇನೆ ಎಂದಿದ್ದಾರೆ.  ಇದನ್ನೂ ಓದಿ: ಸೀರೆ ಉಟ್ಟವರಿಗೆ ರೆಸ್ಟೋರೆಂಟ್‍ಗೆ ಪ್ರವೇಶ ಇಲ್ಲ- ವೀಡಿಯೋ ವೈರಲ್

     

    ಪೆಟ್ರೋಲಿನಿಂದ ಬರುತ್ತಿರುವ 32 ರೂಪಾಯಿಯಿಂದ ಸರ್ಕಾರ ಉಚಿತ ಪಡಿತರ, ಉಚಿತ ಮನೆ, ಉಜ್ವಲಾ ಸೇರಿದಂತೆ ಜನರಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

    ಪಶ್ಚಿಮ ಬಂಗಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಲು ಟಿಎಂಸಿ ಸರ್ಕಾರವೇ ಕಾರಣ. ಬಂಗಾಳ ಸರ್ಕಾರ ಭಾರೀ ತೆರಿಗೆ ಹಾಕುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದರು.

  • ಕೇರಳ ವಿಮಾನ ದುರಂತ – ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ

    ಕೇರಳ ವಿಮಾನ ದುರಂತ – ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ

    -ಮಂಗಳೂರು ವಿಮಾನ ದುರಂತದಿಂದ ನಾವು ಪಾಠ ಕಲಿತಿದ್ದೇವೆ

    ತಿರುವನಂತಪುರ: ದುಬೈ-ಕೋಯಿಕ್ಕೋಡ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ ಹತ್ತು ಲಕ್ಷ ಪರಿಹಾರವನ್ನು ಏರ್ ಇಂಡಿಯಾ ನೀಡಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರಿದೀಪ್‍ಸಿಂಗ್ ಪುರಿ ತಿಳಿಸಿದ್ದಾರೆ.

    ಇಂದು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡದ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದ ಅವರು ದುರ್ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಬಳಿಕ ಮಾತನಾಡಿ, ಜೀವಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಿದ್ದು ಸಾವನ್ನಪ್ಪಿದರ ಕುಟುಂಬಕ್ಕೆ ಹತ್ತು ಲಕ್ಷ, ಗಂಭೀರ ಗಾಯಗೊಂಡವರಿಗೆ ಎರಡು ಲಕ್ಷ ಮತ್ತು ಸಣ್ಣ ಪುಟ್ಟ ಗಾಯಾಳುಗಳಿಗೆ 50 ಸಾವಿರ ಪರಿಹಾರ ಏರ್ ಇಂಡಿಯಾ ಕಡೆಯಿಂದ ನೀಡಲಾಗುವುದು. ಈಗಾಗಲೇ 23 ಮಂದಿ ಆಸ್ಪತ್ರೆ ಡಿಸ್ಚಾರ್ಜ್ ಆಗಿದ್ದಾರೆ. 149 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ದುರಂತ ನಡೆದ ಸ್ಥಳದಲ್ಲಿ ವಿಮಾನದ ಎರಡು ಬ್ಲಾಕ್ ಬಾಕ್ಸ್ ಸಿಕ್ಕಿವೆ, ಮುಂದಿನ ಹಂತದಲ್ಲಿ ದುರಂತಕ್ಕೆ ನಿಖರ ಕಾರಣ ಪತ್ತೆಹಚ್ಚಲಾಗುವುದು ಈ ಬಗ್ಗೆ ತನಿಖೆ ನಡೆಸಿದೆ. ವಿಮಾನ ಹಾರಾಟ ನಡೆಸುತ್ತಿದ್ದವರು ಅನುಭವಿ ಪೈಲೆಟ್ ಗಳು ಈ ಪೈಕಿ ಮುಖ್ಯ ಪೈಲೈಟ್ ಸಾಠೆ ಹಿಂದೆ 27 ಬಾರಿ ಇದೇ ರನ್ ವೇ ಲ್ಯಾಂಡ್ ಮಾಡಿದ್ದಾರೆ ಅವರಿಗೆ 10,848 ಗಂಟೆ ವಿಮಾನ ಹಾರಾಟ ನಡೆಸಿರುವ ಅನುಭವ ಇದೆ ಆದರು ಅವಘಡ ಸಂಭವಿಸಿದೆ. ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು 

    ನಾವು ಮಂಗಳೂರು ವಿಮಾನ ದುರಂತದಿಂದ ಪಾಠ ಕಲಿತಿದ್ದೇವೆ, ಪ್ರತಿನಿತ್ಯವೂ ಹೊಸ ಪಾಠ ವಿಮಾನಯಾನ ಕ್ಷೇತ್ರದಲ್ಲಿ ಕಲಿಯುತ್ತಿದ್ದೇವೆ, ಈಗ ಈ ಘಟನೆ ಮತ್ತೊಂದು ಹೊಸ ಪಾಠ ಕಲಿಸಿದೆ, ಅಪಘಾತಕ್ಕೆ ಕಾರಣ ನೈಜ ಸಮಯ ಆಧರಿಸಿ ಹೊರ ಬರಲಿದ್ದು ಇದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

  • ಜೂನ್-ಜುಲೈನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಶುರು?

    ಜೂನ್-ಜುಲೈನಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಶುರು?

    ನವದೆಹಲಿ: ಆಗಸ್ಟ್‌ಗೂ ಮುನ್ನವೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಪುನಾರಂಭಿಸಲು ಪ್ರಯತ್ನಿಸುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು ಮೇ 25ರಿಂದ ದೇಶಿಯ ವಿಮಾನ ಹಾರಾಟ ಪುನಾರಂಭಗೊಂಡ ಬೆನ್ನಲ್ಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಸುಳಿವು ನೀಡಿದ್ದಾರೆ. “ಸಾಧ್ಯವಾದಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೇವೆ. ಮತ್ತಷ್ಟು ವಿಮಾನಗಳನ್ನು ಹೆಚ್ಚಿಸಲಿದ್ದೇವೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭಿಸಲು ಪ್ರಯತ್ನಿಸಲಿದ್ದೇವೆ” ಎಂದು ತಿಳಿಸಿದರು.

    ಆಗಸ್ಟ್-ಸೆಪ್ಟೆಂಬರ್‌ವರೆಗೆ ಏಕೆ ಕಾಯಬೇಕು? ಪರಿಸ್ಥಿತಿ ಸುಧಾರಿಸಿದರೆ ಅಥವಾ ಕೊರೊನಾ ನಿಯಂತ್ರಣಕ್ಕೆ ಬರದೆ ಇದ್ದರೆ ಮುಂಜಾಗ್ರತಾ ಕ್ರಮಕೈಗೊಂಡು ಜೂನ್ ಮಧ್ಯದಲ್ಲಿ ಅಥವಾ ಜುಲೈ ಅಂತ್ಯದ ವೇಳೆಗೆ ನಾವೇಕೆ ಅಂತಾರಾಷ್ಟ್ರೀಯ ವಿಮಾನ ಹಾರಟ ಪ್ರಾರಂಭಿಸಬಾರದು?

    ದೇಶಿಯ ವಿಮಾನಗಳ ಹಾರಾಟದ ಮಾರ್ಗಸೂಚಿ ಸಂಬಂಧ ಮಾತನಾಡಿ, ಆರೋಗ್ಯ ಸೇತು ಅತ್ಯುತ್ತಮ ಆ್ಯಪ್. ಸೋಂಕಿತರ ಸಂಪರ್ಕ ಪತ್ತೆಹಚ್ಚಲು ಇದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ. ಹೀಗಾಗಿ ಎಲ್ಲರೂ ಇದನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಆರೋಗ್ಯ ಸೇತುವಿನಲ್ಲಿ ಗ್ರೀನ್ ಸ್ಟೇಟಸ್ ಬಂದ ಬಳಿಕ ಕ್ವಾರಂಟೈನ್ ಅವಶ್ಯಕತೆ ಇಲ್ಲ ಎಂದು ಭಾವಿಸಬಾರದು. ಪ್ರಯಾಣದ ಬಳಿಕ ಸಂಪರ್ಕ ತಡೆ ಕಡ್ಡಾಯ. ಕೊರೊನಾ ಟೆಸ್ಟ್ ಬಳಿಕ ನಿಮ್ಮ ವರದಿ ನೆಗೆಟಿವ್ ಬಂದರೆ ಆಗ ಮಾತ್ರ ಕ್ವಾರಂಟೈನ್ ಅವಶ್ಯಕತೆ ಇರುವುದಿಲ್ಲ. ಸದ್ಯ ವಿಮಾನ ಸಂಚಾರಕ್ಕೆ ಆರೋಗ್ಯ ಸೇತು ಆ್ಯಪ್. ಪಾಸ್‍ಪೋರ್ಟ್ ಇದ್ದಂತೆ ಎಂದು ಸ್ಪಷ್ಟನೆ ನೀಡಿದರು.