Tag: Hardeep Singh Puri

  • ಪೆಟ್ರೋಲ್ – ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಲ್ಲ: ಹರ್ದೀಪ್ ಸಿಂಗ್ ಪುರಿ

    ಪೆಟ್ರೋಲ್ – ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಲ್ಲ: ಹರ್ದೀಪ್ ಸಿಂಗ್ ಪುರಿ

    ಪುಣೆ: ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಮ್ಮತ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಶುಕ್ರವಾರ ತಿಳಿಸಿದರು.

    ಇಂಧನದ ಮೇಲಿನ ಜಿಎಸ್‌ಟಿ ಜಾರಿಯಲ್ಲಿನ ಪ್ರಮುಖ ಅಡಚಣೆಯನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಎತ್ತಿ ತೋರಿಸಿದ್ದಾರೆ. ಪುಣೆ ಇಂಟರ್‌ನ್ಯಾಶನಲ್ ಸೆಂಟರ್‌ನ (PIC) 14ನೇ ಸಂಸ್ಥಾಪನಾ ದಿನದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಮುಂಬರುವ ದಶಕದಲ್ಲಿ ಭಾರತದ ಇಂಧನ ಭದ್ರತೆಯನ್ನು ಹೆಚ್ಚಿಸುವ ತಂತ್ರ ಮತ್ತು ಕ್ರಮಗಳು ಕುರಿತು ಉಪನ್ಯಾಸ ನೀಡಿದರು. ಇದನ್ನೂ ಓದಿ: Madhya Pradesh | ಅತ್ಯಾಚಾರವೆಸಗಿ ಕಾಡಲ್ಲಿ ತಲೆಮರೆಸಿಕೊಂಡಿದ್ದವನ ಪತ್ತೆಗೆ ನೈಟ್ ವಿಷನ್ ಡ್ರೋನ್ ಬಳಕೆ

    ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ನಾನು ಸಲಹೆ ಕೇಳಿದ್ದೇನೆ. ಈಗ ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ಅನ್ನು (Petrol, Diesel) ತರಬೇಕು ಎಂದು ನಾನು ಬಹಳ ಸಮಯದಿಂದ ಪ್ರತಿಪಾದಿಸುತ್ತಾ ಬಂದಿದ್ದೇನೆ. ಈಗ ನನ್ನ ಹಿರಿಯ ಸಹೋದ್ಯೋಗಿ, ಹಣಕಾಸು ಸಚಿವರು ಕೂಡ ಹಲವಾರು ಸಂದರ್ಭಗಳಲ್ಲಿ ಇಂಧನವನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಬಗ್ಗೆ ಮಾತನಾಡಿದ್ದಾರೆ ಎಂದು ನನಗೆ ಖಚಿತವಾಗಿದೆ ಎಂದು ಹೇಳಿದ್ದಾರೆ.

    ಇಂಧನದ ಮೇಲಿನ ಜಿಎಸ್‌ಟಿಯನ್ನು ಪ್ರತಿಪಾದಿಸುವ ವೇಳೆ ಅದರ ಅನುಷ್ಠಾನದಲ್ಲಿನ ಪ್ರಮುಖ ಅಡಚಣೆಯನ್ನು ಸಹ ಸಚಿವರು ಎತ್ತಿ ತೋರಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಅವರಿಗೆ ಗಮನಾರ್ಹ ಆದಾಯವನ್ನು ಉತ್ಪಾದಿಸುವ ಕಾರಣ ಇದು ತುಂಬಾ ಸವಾಲಿನ ಸಂಗತಿಯಾಗಿದೆ. ಆದ್ದರಿಂದ ಇದಕ್ಕೆ ಎಲ್ಲಾ ರಾಜ್ಯಗಳ ಅನುಮೋದನೆಯ ಅಗತ್ಯವಿದೆ ಎಂದರು. ಇದನ್ನೂ ಓದಿ: ಪೇಜರ್‌ ಸ್ಫೋಟ ಬೆನ್ನಲ್ಲೇ ಚೀನಿ ಸಿಸಿಟಿವಿ ಬಳಕೆ ನಿಯಂತ್ರಿಸಲು ಮುಂದಾದ ಕೇಂದ್ರ

    ಮದ್ಯ ಮತ್ತು ಇಂಧನವು ಪ್ರಮುಖ ಆದಾಯದ ಮೂಲಗಳಾಗಿರುವುದರಿಂದ ರಾಜ್ಯಗಳು ಈ ಕ್ರಮವನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ಜಿಎಸ್‌ಟಿ ಮಂಡಳಿಯಲ್ಲಿ ಈ ವಿಷಯ ಚರ್ಚಿಸಲು ಕೇರಳ ಹೈಕೋರ್ಟ್ ಸೂಚಿಸಿದೆ. ಆದರೆ ಕೇರಳದ ಹಣಕಾಸು ಸಚಿವರು ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ. ಹೆಚ್ಚುವರಿ ವ್ಯಾಟ್‌ಅನ್ನು ಬಿಟ್ಟುಕೊಡಲು ಬಿಜೆಪಿಯೇತರ ರಾಜ್ಯಗಳು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕಾಶ್ಮೀರವನ್ನ ಪ್ಯಾಲೆಸ್ತೀನ್‌ಗೆ ಹೋಲಿಸಿದ ಪಾಕ್ ಪ್ರಧಾನಿಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

  • LPG ಸಿಲಿಂಡರ್‌ಗಳ eKYC ದೃಢೀಕರಣಕ್ಕೆ ಗಡುವು ಇಲ್ಲ – ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

    LPG ಸಿಲಿಂಡರ್‌ಗಳ eKYC ದೃಢೀಕರಣಕ್ಕೆ ಗಡುವು ಇಲ್ಲ – ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

    ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ಗಳಿಗೆ (LPG Cylinder) ಇಕೆವೈಸಿ (eKYC) ದೃಢೀಕರಣ ಪ್ರಕ್ರಿಯೆಯನ್ನು ಅನುಸರಿಸಲು ಯಾವುದೇ ಗಡುವು ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ (Hardeep Singh Puri) ಪುರಿ ಸ್ಪಷ್ಟಪಡಿಸಿದ್ದಾರೆ. ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.

    ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಒಎಮ್‌ಸಿಗಳು (OMC) ನಕಲಿ ಖಾತೆಗಳನ್ನು ತೊಡೆದು ಹಾಕಲು ಮತ್ತು ವಾಣಿಜ್ಯ ಸಿಲಿಂಡರ್‌ಗಳ ಮೋಸದ ಬುಕ್ಕಿಂಗ್ ಅನ್ನು ತಡೆಯಲು ಎಲ್‌ಪಿಜಿ ಗ್ರಾಹಕರಿಗೆ ಇಕೆವೈಸಿ ಆಧಾರ್ ದೃಢೀಕರಣವನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿವೆ. ಕಳೆದ ಎಂಟು ತಿಂಗಳಿನಿಂದ ಈ ಪ್ರಕ್ರಿಯೆ ಜಾರಿಯಲ್ಲಿದೆ. ನಿಜವಾದ ಗ್ರಾಹಕರು ಮಾತ್ರ ಎಲ್‌ಪಿಜಿ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿಯಮ ಮಾಡಿದೆ ಎಂದು ಹರ್ದೀಪ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ನಿಖಿಲ್ ಕುಮಾರಸ್ವಾಮಿಯನ್ನು ಎಳೆದಾಡಿದ ಪೊಲೀಸರು

    ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ತಲುಪಿಸುವಾಗ ಎಲ್‌ಪಿಜಿ ವಿತರಣಾ ಸಿಬ್ಬಂದಿ ರುಜುವಾತುಗಳನ್ನು ಪರಿಶೀಲಿಸುತ್ತಾರೆ. ವಿತರಣಾ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಬಳಸಿ ಗ್ರಾಹಕರ ಆಧಾರ್ ಮಾಹಿತಿಯನ್ನು ಅಪ್ಲಿಕೇಶನ್ ಮೂಲಕ ಅಪ್ಲೋಡ್ ಮಾಡುತ್ತಾರೆ. ಗ್ರಾಹಕರು ಸ್ವೀಕರಿಸುವ ಒಟಿಪಿಯನ್ನು ಬಳಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿತರಕರ ಶೋರೂಮ್ ಅನ್ನು ಸಹ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹತ್ರಾಸ್‌ ಕಾಲ್ತುಳಿತ ಪ್ರಕರಣ – ಯೋಗಿ ಆದಿತ್ಯನಾಥ್‌ ಸರ್ಕಾರಕ್ಕೆ ಎಸ್‌ಐಟಿ ವರದಿ ಸಲ್ಲಿಕೆ

    ಪರ್ಯಾಯವಾಗಿ ಗ್ರಾಹಕರು ಒಎಮ್‌ಸಿ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಬಹುದು ಮತ್ತು ಇಕೆವೈಸಿ ಅನ್ನು ಖುದ್ದು ಪೂರ್ಣಗೊಳಿಸಬಹುದು. ಈ ಚಟುವಟಿಕೆಗೆ ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಗಡುವು ಇಲ್ಲ. ಎಲ್‌ಪಿಜಿ ವಿತರಕರ ಶೋರೂಮ್‌ಗಳಲ್ಲಿ ಗ್ರಾಹಕರ ‘ಮಸ್ಟರಿಂಗ್’ ಇಲ್ಲ ಎಂದು ಒಎಮ್‌ಸಿಗಳು ಸ್ಪಷ್ಟಪಡಿಸಿವೆ ಎಂದರು. ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್

  • ಇವಿಎಂ ಫಿಕ್ಸಿಂಗ್ ಎಂದ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

    ಇವಿಎಂ ಫಿಕ್ಸಿಂಗ್ ಎಂದ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

    ನವದೆಹಲಿ: ಕೇಂದ್ರ ಚುನಾವಣಾ ಆಯೋಗದಲ್ಲಿ (Election Commission) ಸರ್ಕಾರವು ತನ್ನದೇ ಆದ ಜನರನ್ನು ಹೊಂದಿದೆ ಮತ್ತು ಇವಿಎಂ (EVM) ಇಲ್ಲದೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿ ದೂರು ನೀಡಿದೆ. ಬಿಜೆಪಿ ಹಿರಿಯ ನಾಯಕ ಹರ್ದೀಪ್ ಸಿಂಗ್ ಪುರಿ (Hardeep Singh Puri) ನೇತೃತ್ವದ ನಿಯೋಗ ದೇಶ ವಿರೋಧಿ ಹೇಳಿಕೆ ಎಂದು ವ್ಯಾಖ್ಯಾನಿಸಿ ದೂರು ನೀಡಿದೆ.

    ಸಿಎಂ ಅರವಿಂದ್ ಕೇಜ್ರಿವಾಲ್ ಇಡಿ ಬಂಧನ ಖಂಡಿಸಿ ಭಾನುವಾರ ಇಂಡಿಯಾ ಒಕ್ಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಐಪಿಎಲ್ ನಡೆಯುವಂತೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಪಂದ್ಯ ಆರಂಭಕ್ಕೂ ಮುನ್ನ ನಮ್ಮ ಆಟಗಾರರನ್ನು ಬಂಧಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಪತ್ನಿ ಸೇರಿ ಒಟ್ಟು 60.78 ಕೋಟಿ ರೂ. ಆಸ್ತಿ ಘೋಷಿಸಿದ ಸೋಮಣ್ಣ

    ಮುಂದುವರಿದು ಮಾತನಾಡಿ, ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಬಿಜೆಪಿ 400 ಪಾರ್ ಘೋಷಣೆ ಸಾಧ್ಯವಿಲ್ಲ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ‘ಅಂಪೈರ್’ಗಳನ್ನು ಆಯ್ಕೆ ಮಾಡಿದ್ದಾರೆ. ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ಸಾಮಾಜಿಕ ಮಾಧ್ಯಮಗಳು ಮತ್ತು ಮಾಧ್ಯಮ ಸಹಕಾರವಿಲ್ಲದೇ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 180ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ. ಬಿಜೆಪಿಯ ಮ್ಯಾಚ್ ಫಿಕ್ಸಿಂಗ್ ಯಶಸ್ವಿಯಾದರೆ ಸಂವಿಧಾನ ಇರುವುದಿಲ್ಲ. ಸಂವಿಧಾನ ಇಲ್ಲದಿದ್ದರೆ ದೇಶವಿಲ್ಲ. ಬಿಜೆಪಿ ಅಧಿಕಾರದಲ್ಲಿ ನಾವು ಎಲ್ಲೆಡೆ ಬೆಂಕಿ ಕಾಣಬಹುದು ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಾಜವಂಶದವರು ಜನರ ಕೈಗೆ ಸಿಗ್ತಾರಾ? ಎದೆ ಮುಟ್ಟಿಕೊಂಡು ಸಿಗ್ತಾರೆ ಎನಿಸಿದ್ರೆ ಮತ ಹಾಕಿ: ಪೊನ್ನಣ್ಣ

    ಸದ್ಯ ಈ ಹೇಳಿಕೆ ವಿರುದ್ಧ ಬಿಜೆಪಿ ದೂರು ನೀಡಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, ರಾಹುಲ್ ಗಾಂಧಿ ಅವರು ಗಂಭೀರವಾದ ಪರಿಣಾಮಗಳೊಂದಿಗೆ ಆಕ್ಷೇಪಾರ್ಹವಾದ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಸಂವಿಧಾನ ಬದಲಾಯಿಸುವುದಾಗಿ ಯಾವ ಕಾರ್ಯಕರ್ತ ಹೇಳಿದ್ದಾರೋ ನಮಗೆ ಗೊತ್ತಿಲ್ಲ. ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ಚಿತ್ರವನ್ನು ಎಕ್ಸ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಅತ್ಯಾಚಾರಿಗಳನ್ನು ರಕ್ಷಿಸಲು ಪ್ರಾಣ ಕೊಡುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ಸಂಸದ ದಿಲೀಪ್ ಘೋಷ್, ಕಾಂಗ್ರೆಸ್‌ನ ಸುಪ್ರಿಯಾಗೆ ಚು‌ನಾವಣಾ ಆಯೋಗ ಛೀಮಾರಿ

    ಇವಿಎಂ, ಮ್ಯಾಚ್ ಫಿಕ್ಸಿಂಗ್‌ನಂತಹ ಪದಗಳನ್ನು ಬಳಸುವ ಮೂಲಕ ದೇಶದ್ರೋಹದ ರೀತಿಯ ಹೇಳಿಕೆ ನೀಡಿದ್ದು, ಕೀಳುಮಟ್ಟದ ರಾಜಕೀಯ ಭಾಷಣ ಅವರ ಹತಾಶೆಯನ್ನು ತೋರುತ್ತಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ರಾಹುಲ್ ಗಾಂಧಿಗೆ ಕೇವಲ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭೇಟಿ ಮಾಡಲು ಬರುವವರು ಒಬ್ಬರೇ ಬಂದು ಭೇಟಿ ಮಾಡಬೇಕು: ಸುಧಾಕರ್‌ಗೆ ವಿಶ್ವನಾಥ್‌ ತಿರುಗೇಟು

  • ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಪಟ್ಟಿ ಕನ್ನಡದಲ್ಲೂ ಇರುತ್ತೆ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ

    ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಪಟ್ಟಿ ಕನ್ನಡದಲ್ಲೂ ಇರುತ್ತೆ: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ

    – ನಾಳೆಯಿಂದಲೇ ಜಾರಿಗೆ ಸೂಚನೆ

    ಬೆಂಗಳೂರು: ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ (Petrol, Diesel) ದರ ಪಟ್ಟಿ ಕನ್ನಡದಲ್ಲೂ ಇರಲಿದೆ. ನಾಳೆಯಿಂದಲೇ ಕನ್ನಡದಲ್ಲಿ ಪ್ರದರ್ಶಿಸಲು ಸೂಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ (Hardeep Singh Puri) ಹೇಳಿದ್ದಾರೆ.

    ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಕ್‌ಗಳಲ್ಲಿ ಪೆಟ್ರೋಲ್ ಬೆಲೆ (Fuel Prices) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇದ್ದು, ಕನ್ನಡದಲ್ಲಿ ನೀಡಬೇಕು ಎಂಬ ಮನವಿ ಇದೆ. ಇಂಧನ ಬೆಲೆಗಳನ್ನು ಕನ್ನಡದಲ್ಲಿ ಪ್ರದರ್ಶಿಸಬೇಕು ಎಂಬ ಬೇಡಿಕೆಯಿತ್ತು. ನಾಳೆಯಿಂದ ಕನ್ನಡದಲ್ಲಿ ಲಭ್ಯವಿರುತ್ತದೆ ಎಂದು ನಾನು ತಕ್ಷಣ ಘೋಷಿಸಿದೆ. ತೈಲ ಕಂಪನಿಗಳಿಗೆ ಕನ್ನಡದಲ್ಲಿ ಪ್ರದರ್ಶಿಸುವ ಬೆಲೆಗಳನ್ನು ಹೊಂದಿರಬೇಕು ಎಂದು ಸೂಚಿಸಲು ನನ್ನ ಸಹೋದ್ಯೋಗಿಗಳಿಗೆ ಹೇಳಿದ್ದೇನೆ ತಿಳಿಸಿದ್ದಾರೆ. ಇದನ್ನೂ ಓದಿ: ಸಿಇಟಿ ಪರೀಕ್ಷೆ ದಿನಾಂಕ ಬದಲಾವಣೆ

    ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಇದ್ದೇನೆ. ಹಾಸನ, ಬೇಲೂರಿನಲ್ಲಿ‌ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಕೇಂದ್ರದ ಯೋಜನೆಗಳಿಗೆ ಇಲ್ಲಿ ಉತ್ತಮ ಸ್ಪಂದನೆ ಇದೆ. ಕೇಂದ್ರದ ಬಹಳಷ್ಟು ಯೋಜನೆಗಳು ಮಹಿಳಾ ಕೇಂದ್ರಿತವಾಗಿವೆ. ಅನೇಕ ಮಹಿಳೆಯರು ಫಲಾನುಭವಿಗಳಾಗಿ ಕೇಂದ್ರದ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ ಎಂದಿದ್ದಾರೆ.

    ಲೋಕಸಭೆ ಚುನಾವಣೆಯಲ್ಲಿ ಜನರೇ ನಮ್ಮನ್ನು ಗೆಲ್ಲಿಸ್ತಾರೆ. ಚುನಾವಣೆಗಳು ಬರ್ತವೆ, ಹೋಗ್ತವೆ. ಆದರೆ ಕೇಂದ್ರದ ಯೋಜನೆಗಳು ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಮೋದಿಯವರು ಮತ್ತು ಕೇಂದ್ರದ ಯೋಜನೆಗಳ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ವಿಪಕ್ಷಗಳು ಏನೇ ರಾಜಕೀಯ ಆರೋಪ ಮಾಡಬಹುದು. ನಾವು ಹೆಚ್ಚಿನ ಸಂಸತ್ ಸ್ಥಾನಗಳನ್ನು ಗೆಲ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2023ರ ಅರ್ಜುನ ಪ್ರಶಸ್ತಿ ಪಡೆದ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ – ಸಾಧನೆಗಳೇನು?

    petrol

    ರಾಜ್ಯದ ದೇವಸ್ಥಾನಗಳಲ್ಲಿ ರಾಮಮಂದಿರ ಉದ್ಘಾಟನೆ ದಿನ ವಿಶೇಷ ಪೂಜೆಗೆ ಆದೇಶ ವಿಚಾರವಾಗಿ ಮಾತನಾಡಿ, ಇದು ಒಳ್ಳೆಯ ನಡೆ. ನಾನು ಇದನ್ನು ಸ್ವಾಗತ ಮಾಡುತ್ತೇನೆ. ಪೂಜೆಯನ್ನು ದೇವಸ್ಥಾನಗಳಲ್ಲೇ ಮಾಡಬೇಕು. ರೈಲ್ವೆ ಸ್ಟೇಷನ್‌ನಲ್ಲಿ ಮಾಡೋಕೆ ಆಗತ್ತದಾ? ಒಳ್ಳೆಯ ಬೆಳವಣಿಗೆ, ಸನಾತನ ಸಂಸ್ಕೃತಿಯನ್ನು ಅವರು ಒಪ್ಪಿದ್ದಾರೆ ಎಂದರ್ಥ ಎಂದು ರಾಜ್ಯ ಸರ್ಕಾರದ ಕ್ರಮವನ್ನ ಸ್ವಾಗತಿಸಿದ್ದಾರೆ.

    ಭಾರತದಲ್ಲಿ ಮಾತ್ರ ಕಳೆದ ಎರಡು ವರ್ಷದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಆಗಿರೋದು ಎಂದ ಸಚಿವರು, ಲೋಕಸಭೆ ಚುನಾವಣೆ‌ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರ ಕೊಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ – ಜ.22ರಂದು ಉತ್ತರ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

  • ಮೂರು ವರ್ಷದ ಬಳಿಕ ವೆನೆಜುವಲಾದಿಂದ ತೈಲ ಖರೀದಿಗೆ ಮುಂದಾದ ಭಾರತ

    ಮೂರು ವರ್ಷದ ಬಳಿಕ ವೆನೆಜುವಲಾದಿಂದ ತೈಲ ಖರೀದಿಗೆ ಮುಂದಾದ ಭಾರತ

    ನವದೆಹಲಿ: ಮೂರು ವರ್ಷದ ಬಳಿಕ ವೆನೆಜುವಲಾದಿಂದ (Venezuela) ಭಾರತ (India) ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿದೆ.

    ವೆನೆಜುವೆಲಾ ಸೇರಿದಂತೆ ನಿರ್ಬಂಧ ಇಲ್ಲದ ಯಾವುದೇ ದೇಶದಿಂದ ತೈಲ (Crude Oil) ಆಮದು ಮಾಡಿಕೊಳ್ಳಲು ಭಾರತ ಸಿದ್ಧ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ.

    ಭಾರತದ ಮೂರು ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ (RIL), ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಮತ್ತು ಎಚ್‌ಪಿಸಿಎಲ್-ಮಿತ್ತಲ್ ಎನರ್ಜಿ (HMEL) ವೆನೆಜುವೆಲಾದ ತೈಲ ಖರೀದಿಸಿದ್ದು, ಇದು ಮುಂದಿನ ಎರಡು ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಾಧ್ಯತೆಯಿದೆ.  ಇದನ್ನೂ ಓದಿ: ಜಾರ್ಜ್‌ ವಿರುದ್ಧ ಪೋಸ್ಟ್‌ – ತೆಲಂಗಾಣ ಮಾಜಿ ಪಾಲಿಕೆ ಸದಸ್ಯನ ಪುತ್ರ ಅರೆಸ್ಟ್‌

    ಭಾರತದಲ್ಲಿ ನಿರ್ದಿಷ್ಟವಾಗಿ ಖಾಸಗಿ ವಲಯದ ರಿಫೈನರ್ಸ್ ಆರ್‌ಐಎಲ್‌ ಮತ್ತು ನಯಾರಾ ಎನರ್ಜಿ (NEL) ವೆನೆಜುವೆಲಾದ ತೈಲವನ್ನು ಖರೀದಿಸುತ್ತಿದ್ದವು. ಆದರೆ ಅಮೆರಿಕ ಹೇರಿದ ನಿರ್ಬಂಧದ ಬಳಿಕ ಆಮದು ನಿಂತಿತ್ತು. ಭಾರತವು ಕೊನೆಯದಾಗಿ ವೆನೆಜುವೆಲಾದ ಕಚ್ಚಾ ತೈಲವನ್ನು ನವೆಂಬರ್ 2020 ರಲ್ಲಿ ಆಮದು ಮಾಡಿಕೊಂಡಿತ್ತು.

    ಭಾರತದ ಅಧಿಕೃತ ವ್ಯಾಪಾರದ ಮಾಹಿತಿಯ ಪ್ರಕಾರ 2019 ರಲ್ಲಿ ವೆನೆಜುವೆಲಾ ಐದನೇ ಅತಿ ದೊಡ್ಡ ತೈಲ ಪೂರೈಸುವ ದೇಶವಾಗಿದ್ದು, ಭಾರತೀಯ ಸಂಸ್ಕರಣಾಗಾರಗಳಿಗೆ ಸುಮಾರು 16 ಮಿಲಿಯನ್ ಟನ್ ಕಚ್ಚಾ ತೈಲವನ್ನು ಒದಗಿಸುತ್ತದೆ. ವೆನೆಜುವೆಲಾದಿಂದ 2019 ರಲ್ಲಿ ಭಾರತ 5.70 ಬಿಲಿಯನ್ ಡಾಲರ್‌ ತೈಲವನ್ನು ಆಮದು ಮಾಡಿಕೊಂಡಿದೆ.

     

    ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ ಒಪೆಕ್‌ (OPEC) ಸದಸ್ಯ ದೇಶವಾದ ವೆನೆಜುವೆಲಾವು ವಿಶ್ವದಲ್ಲೇ ಅತಿ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿದೆ.

    ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡುವ ಮೂರನೇ ಅತಿ ದೊಡ್ಡ ದೇಶ ಭಾರತವಾಗಿದ್ದು, ಅಗತ್ಯತೆಯ 85% ಪ್ರತಿಶತವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಎಲ್ಲಿ ಅಗ್ಗವಾಗಿ ಸಿಗುತ್ತದೋ ಅಲ್ಲಿಂದ ಭಾರತ ತೈಲ ಖರೀದಿಸುತ್ತದೆ ಎಂದು ಸಮರ್ಥಿಸಿಕೊಂಡಿದೆ.

    ಭಾರತವು ಅಕ್ಟೋಬರ್‌ನಲ್ಲಿ ರಷ್ಯಾದ ತೈಲಕ್ಕೆ ಪ್ರತಿ ಬ್ಯಾರೆಲ್‌ಗೆ 84.20 ಡಾಲರ್‌ ಸರಾಸರಿ ಬೆಲೆಯನ್ನು ಪಾವತಿಸಿದೆ. ಇದು ಜಿ7 ರಾಷ್ಟ್ರಗಳು ನಿಗದಿಪಡಿಸಿದ 60 ಡಾಲರ್‌ ಬೆಲೆಯ ಮಿತಿಗಿಂತಲೂ ಹೆಚ್ಚಾಗಿದೆ.

     

  • ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಆಗುತ್ತಾ? – ಪೆಟ್ರೋಲಿಯಂ ಸಚಿವ ಹೇಳಿದ್ದೇನು?

    ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಆಗುತ್ತಾ? – ಪೆಟ್ರೋಲಿಯಂ ಸಚಿವ ಹೇಳಿದ್ದೇನು?

    ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಸ್ಥಿರವಾಗಿದ್ದರೆ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಈ ಸಂಸ್ಥೆಗಳು ಉತ್ತಮವಾಗಿದ್ದರೆ, ಪೆಟ್ರೋಲ್‌ ಮತ್ತು ಡೀಸೆಲ್‌ (Petrol Diesel Price) ಬೆಲೆ ಇಳಿಕೆ ಮಾಡಬಹುದು ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ (Hardeep Singh Puri) ಹೇಳಿದ್ದಾರೆ.

    ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರವು 2022ರ ಏಪ್ರಿಲ್‌ನಿಂದ ತೈಲ ಬೆಲೆಯಲ್ಲಿ ಯಾವುದೇ ಏರಿಕೆಯಾಗದಂತೆ ನೋಡಿಕೊಂಡಿದೆ. ಆ ಮೂಲಕ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮಕೈಗೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ಅನುದಾನ

    ಮೋದಿ ಸರ್ಕಾರದ ಒಂಬತ್ತು ವರ್ಷ ಪೂರೈಸಿರುವ ಕುರಿತು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಮತ್ತು ಇತರ ವಿಷಯಗಳ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗಳಿಗಾಗಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಾಯಕರ ಹೇಳಿಕೆಗಳು ಸುಳ್ಳು ಎಂದು ಈಗಾಗಲೇ ಸಾಬೀತಾಗಿದೆ ಎಂದು ಮಾತನಾಡಿದ್ದಾರೆ.

    ಮೋದಿ ಸರ್ಕಾರದ ನೇತೃತ್ವದಲ್ಲಿ ಮೂಲಸೌಕರ್ಯ ವಲಯದಲ್ಲಿ ಬೆಳವಣಿಗೆಯಾಗಿದೆ. ಇತರರನ್ನು ದೂಷಿಸಲು ಕೆಲವರು ಯಾವಾಗಲೂ ಎದುರು ನೋಡುತ್ತಿರುತ್ತಾರೆ ಎಂದು ರಾಹುಲ್‌ ಗಾಂಧಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಸಮಸ್ಯೆ ಬಗೆಹರಿದರೆ ಮಾತ್ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತೇನೆ: ಪಟ್ಟು ಬಿಡದ ಸಾಕ್ಷಿ ಮಲಿಕ್

    ಬೆಲೆ ನಿಗದಿ ವಿಷಯವು ಕ್ರಿಯಾತ್ಮಕ ವಿಷಯವಾಗಿದೆ. ಸರ್ಕಾರವು ತನ್ನ ಒಂಬತ್ತು ವರ್ಷಗಳ ಅವಧಿಯಲ್ಲಿ ಜನರಿಗೆ ಸಹಾಯ ಮಾಡಲು ಹಲವಾರು ಕಲ್ಯಾಣ ಕ್ರಮಗಳನ್ನು ಕೈಗೊಂಡಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳು ವ್ಯಾಟ್ ಅನ್ನು ಕಡಿಮೆ ಮಾಡದೇ ಬಿಜೆಪಿ ಆಡಳಿತವಿರುವ ಸರ್ಕಾರಗಳಿಗಿಂತ ಹೆಚ್ಚಿನ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಾರಾಟ ಮಾಡುತ್ತಿವೆ. ಆದರೂ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಶೀಘ್ರವೇ LPG ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ – ಗ್ಯಾಸ್‌ ಕಳ್ಳತನಕ್ಕೆ ಬೀಳುತ್ತೆ ಬ್ರೇಕ್‌

    ಶೀಘ್ರವೇ LPG ಸಿಲಿಂಡರ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿಕೆ – ಗ್ಯಾಸ್‌ ಕಳ್ಳತನಕ್ಕೆ ಬೀಳುತ್ತೆ ಬ್ರೇಕ್‌

    ನವದೆಹಲಿ: ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ (LPG Cylinders) ಶೀಘ್ರವೇ ಕ್ಯೂಆರ್‌ ಕೋಡ್‌ ಅಳವಡಿಸಲಾಗುವುದು ಎಂದು ಕೇಂದ್ರ ಪೆಟ್ರೋಲ್‌ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್‌ ಸಿಂಗ್‌ ಪುರಿ (Hardeep Singh Puri) ತಿಳಿಸಿದ್ದಾರೆ.

    ಕಡಿಮೆ ಗ್ಯಾಸ್‌ ತುಂಬಿಸಿ ಸಿಲಿಂಡರ್‌ ವಿತರಿಸಿ ಗ್ರಾಹಕರಿಗೆ ಮೋಸ ಮಾಡುವವರನ್ನು ಸುಲಭವಾಗಿ ಪತ್ತೆಹಚ್ಚಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಕೋಡ್-ಆಧಾರಿತ ಟ್ರ್ಯಾಕ್ ಮತ್ತು ಟ್ರೇಸ್ ಉಪಕ್ರಮವು ಕಳ್ಳತನದ ಸಮಸ್ಯೆ ಪರಿಹರಿಸಲು ಪೂರಕವಾಗಿದೆ. ಅಲ್ಲದೇ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆ ಪತ್ತೆ ಮತ್ತು ಖಚಿತಪಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಇದನ್ನೂ ಓದಿ: ಟೋಲ್ ಬೂತ್ ಸಿಬ್ಬಂದಿಗೆ ಕಪಾಳಮೋಕ್ಷ – ಎಎಪಿ ನಾಯಕನ ವಿರುದ್ಧ FIR

    ಈ ಕ್ಯೂಆರ್ ಕೋಡ್ ಅನ್ನು ಸಿಲಿಂಡರ್‌ಗಳ ಮೇಲೆ ಅಂಟಿಸಲಾಗುತ್ತದೆ. ಇದು ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ಮಾಡುತ್ತದೆ. ಜೊತೆಗೆ ಉತ್ತಮ ದಾಸ್ತಾನು ನಿರ್ವಹಣೆ ಸರಿಯಾಗಿ ಆಗುತ್ತಿಯೇ ಎಂಬುದನ್ನು ಖಚಿತಪಡಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಈ ಕುರಿತು ಸಚಿವರು ಟ್ವಿಟ್ಟರ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ‘ವಿಶ್ವ ಎಲ್‌ಪಿಜಿ ವೀಕ್ 2022’ ಕಾರ್ಯಕ್ರಮದ ವೀಡಿಯೋ ಇದಾಗಿದೆ. ವೀಡಿಯೋದಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಕ್ಯೂಆರ್‌ ಕೋಡ್‌ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳುತ್ತಿರುವ ದೃಶ್ಯವಿದೆ. ಇದನ್ನೂ ಓದಿ: 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ರಾಮ್‌ಪುರ ಚುನಾವಣೆಯಿಂದ ದೂರ ಉಳಿದ ಅಜಂ ಖಾನ್ ಕುಟುಂಬ

    Live Tv
    [brid partner=56869869 player=32851 video=960834 autoplay=true]

  • ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ

    ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಂತಾ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ: ಹರ್ದೀಪ್ ಸಿಂಗ್ ಪುರಿ

    ನವದೆಹಲಿ: ಭಾರತ ಎಲ್ಲಿಂದ ಬೇಕಾದರೂ ತೈಲವನ್ನು ಖರೀದಿಸುತ್ತದೆ. ಆದರೆ ಈ ರೀತಿಯ ವಿಚಾರಗಳನ್ನು ಭಾರತ ಜನರವರೆಗೂ ಕೊಂಡೊಯ್ಯುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ.

    RUSSIA OIL

    ರಷ್ಯಾ ಮತ್ತು ಉಕ್ರೇನ್ (Russia-Ukraine) ನಡುವಿನ ಸಂಘರ್ಷದಿಂದ ಇಂಧನ ಪೂರೈಕೆಗೆ ಅಡ್ಡಿಯುಂಟಾಗಿ ತೈಲ ಬೆಲೆ ಭಾರೀ ಏರಿಕೆಯಾಯಿತು. ಇದರಿಂದ ಜಾಗತಿಕವಾಗಿ ಇಂಧನ ವ್ಯವಸ್ಥೆ ಮೇಲೆ ಅಡ್ಡಪರಿಣಾಮ ಬೀರಿತು. ಈ ಬಿಕ್ಕಟ್ಟಿನ ಮಧ್ಯೆ ಹರ್ದೀಪ್ ಸಿಂಗ್ ಪುರಿ ಅವರು, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಯಾವುದೇ ದೇಶ ಭಾರತಕ್ಕೆ ಹೇಳಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ

    “ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯಿರುವುದರಿಂದ ತೈಲವನ್ನು ಖರೀದಿಸಲಾಗಿದೆ ಎಂಬ ಚರ್ಚೆಗಳು ಬೇಡ. ಭಾರತ ಎಲ್ಲಿಂದ ಬೇಕಾದರೂ ತೈಲವನ್ನು ಖರೀದಿಸುತ್ತದೆ. ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುವಂತೆ ನಮಗೆ ಯಾರೂ ಹೇಳಿಲ್ಲ. ಭಾರತ ಸರ್ಕಾರವು ತನ್ನ ನಾಗರಿಕರಿಗೆ ಇಂಧನವನ್ನು ಒದಗಿಸುವ ನೈತಿಕ ಜವಾಬ್ದಾರಿ ಹೊಂದಿದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತಕ್ಕೆ ಯಾವ ದೇಶವೂ ಹೇಳಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಂದೂಗಳಿಂದ ಅಲ್ಪಸಂಖ್ಯಾತರಿಗೆ ಅಪಾಯವಿಲ್ಲ; ನೀವು ಭಯಪಡಬೇಕಾಗಿಲ್ಲ – ಮೋಹನ್‌ ಭಾಗವತ್‌

    ಭಾರತವು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವುದನ್ನು ಯುಕೆ (UK) ಮತ್ತು ಯುಎಸ್ (US) ಟೀಕಿಸಿದೆ. ರಷ್ಯಾ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನ ಮೇಲೆ ಯುರೋಪಿಯನ್ ದೇಶಗಳು ನಿರ್ಬಂಧ ಹೇರಿತ್ತು. ಭಾರತಕ್ಕೂ ರಷ್ಯಾದಿಂದ ಇಂಧನ ಖರೀದಿಸದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (US President Joe Biden) ಮನವಿ ಮಾಡಿದರು. ಹಾಗೆ ಮಾಡುವುದು ಭಾರತದ ಹಿತಾಸಕ್ತಿಗೆ ಒಳಪಡುವುದಿಲ್ಲ ಎಂದು ಮೋದಿ ತಿಳಿಸಿದ್ದರು. ಉಕ್ರೇನ್ ಮೇಲೆ ನಡೆದ ದಾಳಿಯನ್ನು ಅಮೆರಿಕ ಖಂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ ನೀಡಲ್ಲ: ಗೊಂದಲಗಳಿಗೆ ತೆರೆ ಎಳೆದ ಕೇಂದ್ರ

    ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ ನೀಡಲ್ಲ: ಗೊಂದಲಗಳಿಗೆ ತೆರೆ ಎಳೆದ ಕೇಂದ್ರ

    ನವದೆಹಲಿ: ರೋಹಿಂಗ್ಯಾ ಮುಸ್ಲಿಮರಿಗೆ ವಸತಿ ನೀಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಈಗ ಯಾವುದೇ ಫ್ಲ್ಯಾಟ್‌ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ದೆಹಲಿಯಲ್ಲಿರುವ ರೋಹಿಂಗ್ಯಾ ಮುಸ್ಲಿಮರಿಗೆ ಇಡಬ್ಲ್ಯುಎಸ್ ಫ್ಲಾಟ್‌ಗಳನ್ನು ನೀಡಲು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಅಷ್ಟೇ ಅಲ್ಲದೇ ಅಕ್ರಮ ವಿದೇಶಿಗರು ಅವರು ನೆಲೆಸಿರುವ ಸ್ಥಳದಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಸೂಚಿಸಿದೆ.

    ದೆಹಲಿಯ ಬಕ್ಕರ್‌ವಾಲಾ ಪ್ರದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ ನೀಡಲು ಮುಂದಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಸಚಿವ ಹರ್ದೀಪ್‌ ಸಿಂಗ್‌ ಪುರಿ ಟ್ವೀಟ್‌ ಮಾಡಿ ತಿಳಿಸಿದ್ದರು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಸಮಸ್ಯೆ ಎಂದು ಹಿಂದೆ ಹೇಳಿದ್ದ ಕೇಂದ್ರ ಈಗ ಫ್ಲ್ಯಾಟ್‌ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಜನ ಎತ್ತಿದ್ದರು. ಚರ್ಚೆ ಜಾಸ್ತಿ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ರೋಹಿಂಗ್ಯಾ ಮುಸ್ಲಿಮರಿಗೆ ಯಾವುದೇ ಫ್ಲ್ಯಾಟ್‌ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದೆ.

    ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದೇನು?
    ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 1,100 ರೋಹಿಂಗ್ಯಾ ಮುಸ್ಲಿಮರು ಟೆಂಟ್‌ನಲ್ಲಿ ವಾಸಿಸುತ್ತಿದ್ದು ಅವರನ್ನು ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಈ ಅಪಾರ್ಟ್‌ಮೆಂಟ್‌ಗೆ ಪೊಲೀಸ್ ರಕ್ಷಣೆ ಒದಗಿಸಲಾಗುತ್ತದೆ. ದೇಶದ ನಿರಾಶ್ರಿತರ ಯೋಜನೆಯನ್ನು ಸಿಎಎಗೆ ಜೋಡಿಸಿ ಸುಳ್ಳು ಹಬ್ಬಿಸಿದವರಿಗೆ ಇದು ಕಹಿ ಸುದ್ದಿ.  ಇದನ್ನೂ ಓದಿ:  ರೋಹಿಂಗ್ಯಾ ಮುಸ್ಲಿಂ ಉಗ್ರರಿಂದ 28 ಹಿಂದೂಗಳ ಮಾರಣಹೋಮ

    ದೇಶದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್ವಾಲಾ ಪ್ರದೇಶದ EWS ಫ್ಲಾಟ್‌ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳು, ರಾತ್ರಿಯಿಡೀ ದೆಹಲಿ ಪೊಲೀಸರಿಂದ ಭದ್ರತೆ ನೀಡಲಾಗುತ್ತದೆ. ದೇಶದ ಆಶ್ರಯವನ್ನು ಅರಸಿ ಬಂದವರಿಗೆ ಆಶ್ರಯ ಕೊಡಲಿದ್ದೇವೆ. ಭಾರತ 1951 ರ ನಿರಾಶ್ರಿತರ ಸಮಾವೇಶವನ್ನು ಗೌರವಿಸುತ್ತದೆ. ಜನಾಂಗ, ಧರ್ಮವನ್ನು ಲೆಕ್ಕಿಸದೇ ಎಲ್ಲರಿಗೂ ಆಶ್ರಯ ನೀಡುತ್ತದೆ ಎಂದಿದ್ದರು.

    ಕೇಂದ್ರ ಈ ಹಿಂದೆ ಹೇಳಿದ್ದೇನು?
    ಮ್ಯಾನ್ಮಾರ್‌ನಲ್ಲಿ ನೆಲೆಯಿಲ್ಲದೇ ನಿರಾಶ್ರಿತರಾಗಿ ಭಾರತಲ್ಲಿರುವ ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ನೀಡುವುದು ದೇಶದ ಭದ್ರತೆಗೆ ಕಂಟಕವಾಗಲಿದೆ. ಈ ನಿರಾಶ್ರಿತರು ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆ. ಇವರನ್ನು ದೇಶದೊಳಗೆ ಇರಲು ಬಿಡುವುದು ದೇಶಕ್ಕೆ ಕಂಟಕವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.

    ಪಾಕ್‌ ಸೇರಿದಂತೆ ಉಗ್ರ ಸಂಘಟನೆ ಜೊತೆ ಈ ಮುಸ್ಲಿಮರು ಸಂಬಂಧ ಹೊಂದಿದ್ದಾರೆ. ದೇಶದಲ್ಲಿ ಕೋಮುವಾದ ಹರಡುತ್ತಿದ್ದಾರೆ. ಭಾರತದಲ್ಲಿ ನಕಲಿ ಗುರುತಿನ ಪತ್ರ ಪಡೆದು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.

    ಎಲ್ಲ ದೇಶಗಳಂತೆ ವಲಸೆಗೆಂದು ಬರುವ ಜನರ ಮೇಲೆ ನಮಗೆ ಅನುಕಂಪವಿದೆ. ಆದರೆ ವಿಶೇಷವಾಗಿ ಈ ಪ್ರಕರಣದಲ್ಲಿ ದೇಶದ ಭದ್ರತೆ ವಿಚಾರವೂ ಇರುವ ಕಾರಣ ಈ ಅನುಕಂಪ ದುರ್ಬಳಕೆಯಾಗಬಾರದು.

    ಗುಪ್ತಚರ ವರದಿಗಳು ಅಧಿಕೃತವಾಗಿ ಪಾಕಿಸ್ತಾನ ಮೂಲದ ಉಗ್ರರು ಮತ್ತು ಇತರ ದೇಶಗಳಲ್ಲಿರುವ ಉಗ್ರರ ಜೊತೆ ರೋಹಿಂಗ್ಯಾ ಮುಸ್ಲಿಮರಿಗೆ ಸಂಪರ್ಕವಿದೆ ಎನ್ನುವ ಮಾಹಿತಿಯನ್ನು ನೀಡಿವೆ. ಅಷ್ಟೇ ಅಲ್ಲದೇ ದೇಶದಲ್ಲಿರುವ ಬೌದ್ಧರ ಮೇಲೆ ಹಿಂಸಾಚಾರ ನಡೆಯುವ ಭೀತಿಯೂ ಇದೆ.

    ವಲಸಿಗರ ನೀತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ನೀತಿಗೆ ಭಾರತ ಬದ್ಧವಾಗಿದೆ. ಆದರೆ ಇದರ ಜೊತೆಗೆ ದೇಶದಲ್ಲಿರುವ ಪ್ರಜೆಗಳ ಮಾನವ ಹಕ್ಕುಗಳ ರಕ್ಷಣೆಯನ್ನು ಕಾಪಾಡುವ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ಅಫಿಡವಿತ್‌ನಲ್ಲಿ ಹೇಳಿತ್ತು.

    ಏನಿದು ಪ್ರಕರಣ?
    ಮ್ಯಾನ್ಮಾರ್‌ ದೇಶದ ದಕ್ಷಿಣದಲ್ಲಿರುಗ ರಾಖೈನ್ ರಾಜ್ಯದಲ್ಲಿ ರೋಹಿಂಗ್ಯಾ ಜನರಿದ್ದಾರೆ. ಬೌದ್ಧರೆ ಹೆಚ್ಚಾಗಿರುವ ಈ ದೇಶದಲ್ಲಿ ಈಗ ರೋಹಿಂಗ್ಯಾ ಮುಸ್ಲಿಮರ ಮೇಲೆ ದೌರ್ಜನ್ಯ ಆಗುತ್ತಿದ್ದು ಭಾರತ, ಬಾಂಗ್ಲಾದೇಶಕ್ಕೆ ವಲಸೆ ಬರುತ್ತಿದ್ದಾರೆ. ಭದ್ರತೆ ವಿಚಾರವನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ  ವಲಸೆಗಾರರನ್ನು ದೇಶದಿಂದ ಹೊರ ಹಾಕಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರು ರೋಹಿಂಗ್ಯ ಮುಸ್ಲಿಮರು ಸುಪ್ರೀಂ ಮೊರೆ ಹೋಗಿ, ನಮಗೆ ಭಾರತದಲ್ಲಿ ನಿರಾಶ್ರಿತರ ಮಾನ್ಯತೆಯನ್ನು ನೀಡಬೇಕು ಎಂದು ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಇಂಧನ ಬೆಲೆ ನಿರ್ಧಾರ: ಪೆಟ್ರೋಲಿಯಂ ಸಚಿವ

    ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಇಂಧನ ಬೆಲೆ ನಿರ್ಧಾರ: ಪೆಟ್ರೋಲಿಯಂ ಸಚಿವ

    ನವದೆಹಲಿ: ಉಕ್ರೇನ್‌ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಪರಿಣಾಮ ಭಾರತದ ಮೇಲೂ ಬೀರಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಲಿದೆ ಎಂಬ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಪ್ರತಿಕ್ರಿಯಿಸಿದ್ದಾರೆ.

    ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಇಂಧನ ಬೆಲೆಗಳ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ತೈಲ ಬೆಲೆಗಳನ್ನು ಜಾಗತಿಕ ಬೆಲೆಗಳಿಂದ ನಿರ್ಧರಿಸಲಾಗುತ್ತದೆ. ದೇಶದ ಒಂದು ಭಾಗದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ತೈಲ ಕಂಪನಿಗಳು ಇದಕ್ಕೆ ಕಾರಣವಾಗುತ್ತವೆ. ನಮ್ಮ ನಾಗರಿಕರ ಹಿತದೃಷ್ಟಿಯಿಂದ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ರಾಜಕೀಯವಾಗಿ ನಿರ್ಣಾಯಕ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಮತ್ತು ಗೋವಾ ಹಾಗೂ ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಕಾರಣಕ್ಕೆ ಇಂಧನ ಬೆಲೆ ನಿಯಂತ್ರಿಸಿಲ್ಲ. ಚುನಾವಣೆಗಳ ಕಾರಣದಿಂದಾಗಿ ಸರ್ಕಾರವು ತೈಲ ಬೆಲೆಗಳನ್ನು ನಿಯಂತ್ರಿಸಿದೆ ಎಂದು ಹೇಳುವುದು ಸರಿಯಲ್ಲ. ನಮ್ಮ ಸಾಮರ್ಥ್ಯದ ಅವಶ್ಯಕತೆಗಳನ್ನು ಪೂರೈಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೈಲಾದಷ್ಟು ಹೋರಾಡಿದ್ದೇವೆ, ಫಲಿತಾಂಶವನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ

    ದೇಶದಲ್ಲಿ ಕಚ್ಚಾ ತೈಲದ ಕೊರತೆಯಾಗುವುದಿಲ್ಲ. ಕಚ್ಚಾ ತೈಲದ ಕೊರತೆಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಮ್ಮ ಅವಶ್ಯಕತೆಗಳಲ್ಲಿ 85 ಪ್ರತಿಶತದಷ್ಟು ಕಚ್ಚಾ ತೈಲದ ಆಮದು ಮತ್ತು 50-55 ಪ್ರತಿಶತ ಅನಿಲದ ಮೇಲೆ ಅವಲಂಬಿತವಾಗಿದ್ದರೂ, ನಮ್ಮ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲಾಗಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಬ್ರೆಂಟ್‌ ಕಚ್ಚಾ ತೈಲವು ಬ್ಯಾರೆಲ್‌ಗೆ 126 ಡಾಲರ್‌ ತಲುಪಿದೆ. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ