Tag: harbor

  • ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಮಧ್ಯರಾತ್ರಿಯೇ ಬೋಟ್‍ಗಳು ವಾಪಸ್

    ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಮಧ್ಯರಾತ್ರಿಯೇ ಬೋಟ್‍ಗಳು ವಾಪಸ್

    ಕಾರವಾರ: ಪಾಕಿಸ್ತಾನದ ಸಂಭಾವ್ಯ ದಾಳಿ ಹಿನ್ನೆಲೆಯಲ್ಲಿ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

    ಅರಬ್ಬೀ ಸಮುದ್ರದ ಆಳ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಮರಳಿ ತೀರಕ್ಕೆ ನಿರ್ಗಮಿಸುವಂತೆ ನೌಕಾದಳವು ಸೂಚನೆ ನೀಡಿದ್ದು, ಕರಾವಳಿ ತೀರದಿಂದ 12, 18 ನಾಟಿಕನ್ ಮೈಲು ದೂರದ ಗುಜರಾತ್, ಗೋವಾ ಭಾಗದ ಬುಲ್‍ಟ್ರಾಲ್, ಪರ್ಷಿಯನ್ ಬೋಟ್ ಗಳನ್ನು ಮರಳಿ ಬಂದರಿಗೆ ಬುಧವಾರ ಮಧ್ಯರಾತ್ರಿಯಿಂದ ನೌಕಾದಳ ಕಳುಹಿಸುತ್ತಿದೆ.

    ಗುಜರಾತ್ ಹಾಗೂ ಗೋವಾ ಭಾಗಕ್ಕೆ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆಯನ್ನು ಸಹ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಆಳ ಸಮುದ್ರಕ್ಕೆ ತೆರಳಿದ ಮಂಗಳೂರು, ಉಡುಪಿ ಜಿಲ್ಲೆಯ ಹಲವು ಬೋಟುಗಳು ಮರಳಿ ತೀರದ ಕಡೆ ನಿರ್ಗಮಿಸುತ್ತಿವೆ.

    ಕಾರವಾರದ ಕರಾವಳಿ ಕಾವಲುಪಡೆ, ಕಸ್ಟಮ್ಸ್, ಮೀನುಗಾರಿಕಾ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್ ನೋಟಿಸ್ ಜಾರಿ ಮಾಡಿದ್ದು, ಮೀನುಗಾರಿಕೆಗೆ ಯಾವುದೇ ನಿರ್ಬಂಧ ಹೇರದಿದ್ದರೂ ಮೀನುಗಾರಿಕೆ ಚಟುವಟಿಕೆ ಕುರಿತು ಪ್ರತಿ ದಿನದ ಮಾಹಿತಿ ನೀಡುವಂತೆ ನೋಟೀಸ್ ನಲ್ಲಿ ಸೂಚನೆ ನೀಡಿದೆ. ಈ ಮೂಲಕ ಕರಾವಳಿಯಲ್ಲಿ ನೌಕಾದಳ ಹದ್ದಿನ ಕಣ್ಣಿಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರಕು ಹಡಗುಗಳ ನಡುವೆ ಡಿಕ್ಕಿ-ಬೆಲೆಬಾಳುವ ಕಾರುಗಳಿದ್ದ 21 ಕಂಟೈನರ್ ಸಮುದ್ರಕ್ಕೆ ಬೀಳೋದನ್ನು ನೋಡಿ

    ಸರಕು ಹಡಗುಗಳ ನಡುವೆ ಡಿಕ್ಕಿ-ಬೆಲೆಬಾಳುವ ಕಾರುಗಳಿದ್ದ 21 ಕಂಟೈನರ್ ಸಮುದ್ರಕ್ಕೆ ಬೀಳೋದನ್ನು ನೋಡಿ

    ಲಾಹೋರ್: ಕಾರ್, ಬಸ್, ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗುವುದು ಸಾಮಾನ್ಯ. ಆದರೆ ಸಮುದ್ರದಲ್ಲಿ ಹಡಗಗಳು ಒಂದಕ್ಕೊಂದು ಡಿಕ್ಕಿಯಾಗಿರುವ ಘಟನೆ ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ನಡೆದಿದೆ .

    ದಕ್ಷಿಣ ಏಷ್ಯಾದ ದೊಡ್ಡ ಬಂದರುಗಳಲ್ಲಿ ಒಂದಾಗಿರುವ ಕರಾಚಿಯ ಬಂದರಿನಲ್ಲಿ ಎರಡು ಕಾರ್ಗೊ ಹಡಗುಗಳು ನಿಲ್ಲುವ ವೇಳೆ ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಬೆಲೆಬಾಳುವ ಕಾರುಗಳನ್ನು ಒಳಗೊಂಡಿದ್ದ ಕಂಟೈನರ್ ಗಳನ್ನು ಒಂದು ಹಡಗು ಸಾಗಿಸುತ್ತಿತ್ತು. ಡಿಕ್ಕಿಯಾಗಿದ್ದರಿಂದ 21 ಕಂಟೈನರ್ ಗಳು ಸಮುದ್ರಕ್ಕೆ ಬಿದ್ದಿದೆ.

    ಈ ಘಟನೆ ಮಾರ್ಚ್ 19ರಂದು ನಡೆದಿದ್ದು, ಬಂದರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಹಡಗು ಡಿಕ್ಕಿಯಾಗುವ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಕಂಟೈನರ್ ಗಳನ್ನು ನಂತರ ಸಮುದ್ರದಿಂದ ಮೇಲೆತ್ತಲಾಗಿದೆ ಅಂತಾ ವರದಿಯಾಗಿದೆ.

    https://www.youtube.com/watch?time_continue=181&v=97Xp-PBmDD4