Tag: harathalu halappa

  • ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ- ನಾಲ್ವರಿಗೆ ಗಾಯ, ಚಾಲಕ ವಶಕ್ಕೆ

    ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ- ನಾಲ್ವರಿಗೆ ಗಾಯ, ಚಾಲಕ ವಶಕ್ಕೆ

    ಬೆಂಗಳೂರು: ಶಾಸಕ ಹರತಾಳು ಹಾಲಪ್ಪ (Halappa Harathalu) ಬೀಗರ ಕಾರಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಸೋಮವಾರ ನೃಪತುಂಗ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿತ್ತು.

    ಇನ್ನೋವಾ ಕಾರ್ (Innova Car) ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಡ್ರೈವರ್ ಅಪಘಾತವೆಸಗಿ ಇಬ್ಬರ ಜೀವ ಬಲಿ ಪಡೆದಿದ್ದ. ಮಜೀದ್ ಖಾನ್ ಮತ್ತು ಅಯ್ಯಪ್ಪ ಎಂಬವರು ತಮ್ಮದಲ್ಲದ ತಪ್ಪಿಗೆ ಪ್ರಾಣ ಬಿಟ್ರೆ, ರಿಯಾಜ್ ಪಾಷಾ, ಮೊಹಮದ್ ರಿಯಾಜ್, ಮೊಹಮದ್ ಸಲೀಂ, ಮತ್ತು ಶೇರ್ ಗಿಲಾನಿ ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದಾರೆ.

    ಇಷ್ಟಕ್ಕೆಲ್ಲಾ ಕಾರಣ ಶಾಸಕ ಪಾಸ್ ಹೊಂದಿದ್ದ ಇನ್ನೋವಾ ಕಾರ್. ಶಾಸಕ ಹರತಾಳು ಹಾಲಪ್ಪರ ಪಾಸ್ ಕಾರ್‍ನಲ್ಲಿ ಅಂಟಿಸಲಾಗಿತ್ತು. ಅಸಲಿಗೆ ಕೆಎ 50 ಎಂಎ 6600 ನಂಬರಿನ ಇನ್ನೋವಾ ಕಾರ್ ಯಲಹಂಕದ ರಾಮು ಸುರೇಶ್ ಎಂಬವರ ಹೆಸರಲ್ಲಿದೆ. ಈ ರಾಮು ಸುರೇಶ್ ಶಾಸಕ ಹರತಾಳು ಹಾಲಪ್ಪರ ಬೀಗರು ಎನ್ನಲಾಗ್ತಿದೆ.

    ಡ್ರೈವರ್ ಮೋಹನ್ ರ್ಯಾಶ್ ಡ್ರೈವಿಂಗ್ ಮಾಡಿ ಆಕ್ಸಿಡೆಂಟ್ ಮಾಡಿದ್ದ. ವಿಚಾರ ಏನಂದ್ರೆ ಹೀಗೆ ಎಂಎಲ್‍ಎ ಪಾಸ್‍ಗಳನ್ನ ಯಾರು ಬೇಕಾದ್ರು ಬಳಸಬಹುದಾ..? ಶಾಸಕರ ಪಾಸ್ ಬೀಗರ ವೆಹಿಕಲ್ ಗೆ ಹೇಗೆ ಬಂತು..? ಹೀಗೆ ನೆಂಟ್ರು, ಹಿಂಬಾಲಕರು ಅಂತಾ ಎಲ್ರಿಗೂ ಪಾಸ್ ಕೊಡ್ತಿದ್ರೆ ನಿಯಮಗಳಿಲ್ವಾ.. ಒಂದೇ ಪಾಸನ್ನ ಕಲರ್ ಝೆರಾಕ್ಸ್ ಮಾಡಿಸಿ ಯಾರು ಬೇಕಾದ್ರು ಬಳಸಬಹುದಾ ಅನ್ನೊ ಪ್ರಶ್ನೆಯನ್ನ ಸಾರ್ವಜನಿಕರು ಕೇಳ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಜಿ ಸಚಿವ ಹರತಾಳು ಹಾಲಪ್ಪ, ಪತ್ನಿಗೆ ಕೊರೊನಾ ದೃಢ

    ಮಾಜಿ ಸಚಿವ ಹರತಾಳು ಹಾಲಪ್ಪ, ಪತ್ನಿಗೆ ಕೊರೊನಾ ದೃಢ

    ಬೆಂಗಳೂರು: ಸಿಎಂ ಬಿಎಸ್‍ವೈ, ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ ಇದೀಗ ಮಾಜಿ ಸಚಿವ, ಶಾಸಕ ಹರತಾಳು ಹಾಲಪ್ಪ ಅವರಿಗೂ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಮಾಜಿ ಸಚಿವರು, ಸಾಗರ ಕ್ಷೇತ್ರದ ಜನಪ್ರಿಯ ಶಾಸಕ ಹರತಾಳು ಹಾಲಪ್ಪನವರು ಮತ್ತು ಅವರ ಪತ್ನಿ ಕೊರೊನಾ ಸೋಂಕಿನಿಂದ ಬೇಗನೆ ಗುಣಮುಖರಾಗಲಿ, ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಇದಕ್ಕೂ ಮೊದಲು ಸಿದ್ದರಾಮಯ್ಯ ಅವರ ಆರೋಗ್ಯದ ಬಗ್ಗೆಯೂ ಶುಭಹಾರೈಸಿರುವ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊರೊನಾ ಸೋಂಕಿನಿಂದ ಶೀಘ್ರದಲ್ಲಿ ಗುಣಮುಖರಾಗಲಿ, ಉತ್ತಮ ಆರೋಗ್ಯದೊಂದಿಗೆ ಮತ್ತೆ ಎಂದಿನಂತೆ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುವುದಾಗಿ ತಿಳಿಸಿದ್ದರು.

    ಆಗಸ್ಟ್ 2 ರಂದು ರಾತ್ರಿ 11 ಗಂಟೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ದಾಖಲಿಸಿಕೊಳ್ಳಲಾಗಿದೆ. ಅವರಿಗೆ ಕೊರೊನಾ ರೋಗ ಲಕ್ಷಣದ ತೀವ್ರತೆ ಕಡಿಮೆ ಇದೆ. ಸದ್ಯಕ್ಕೆ ಸಿಎಂ ಅವರ ಆರೋಗ್ಯ ಉತ್ತಮವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಇತ್ತ ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪುತ್ರ ಯತೀಂದ್ರ, ನಿನ್ನೆ ಬೆಳಿಗ್ಗೆಯಿಂದ ತಂದೆಯವರಿಗೆ ಜ್ವರ ಬಂದಿದ್ದು, ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಆಂಟಿಜೆನ್ ಟೆಸ್ಟ್ ಮಾಡಲಾಗಿದ್ದು, ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ. ಇತ್ತೀಚೆಗೆ ಅವರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಆಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದರು.

  • ಸಾಗರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ

    ಸಾಗರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ

    ಶಿವಮೊಗ್ಗ: ಸಾಗರದಿಂದ ಬಿಜೆಪಿ ಟಿಕೆಟ್ ಕೈ ತಪ್ಪುತ್ತೆ ನಾನು ಪಕ್ಷ ಬಿಡುತ್ತೇನೆ ಎಂದಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಈಗ ಯೂಟರ್ನ್ ಹೊಡೆದಿದ್ದಾರೆ.

    ಸೊರಬಕ್ಕು ಹೋಗಲ್ಲ ಬಿಜೆಪಿಯನ್ನೂ ಬಿಡಲ್ಲ ಸಾಗರದಿಂದಲೇ, ಅದೂ ಬಿಜೆಪಿಯಿಂದಲೆ ಸ್ಪರ್ಧಿಸ್ತೀನಿ. ಸಾಗರ ಹಾಗೂ ಹೊಸನಗರದಲ್ಲಿ ಚುನಾವಣೆ ಕಚೇರಿ ತೆರೆಯಲು ಎರಡು ಜಾಗ ನೋಡಿ ಎಂದು ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ. ಇಂದು ಸಾಗರಕ್ಕೆ ಎಂಟ್ರಿ ಕೊಡುವ ಹಾಲಪ್ಪ ಇಂದಿನಿಂದಲೇ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಇದನ್ನೂ ಓದಿ:  ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

    2 ದಿನದ ಹಿಂದೆ ಬಿಜೆಪಿ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಹಾಲಪ್ಪ ಈ ಹೊಸ ವರಸೆ ಆರಂಭಿಸಿದ್ದಾರೆ. ಇತ್ತ ಸಾಗರದಿಂದ ನನಗೆ ಬಿಜೆಪಿ ಟಿಕೆಟ್ ಸಿಗುತ್ತೆ ಎಂದು ಪಟಾಕಿ ಹೊಡೆದು ಸಂಭ್ರಮಿಸಿದ್ದ ಬೇಳೂರು ಗೋಪಾಲ ಕೃಷ ಅವರಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ.

    ಬಿಜೆಪಿ ನಾಯಕರು ಹಾಲಪ್ಪ ಹಾಗೂ ಬೇಳೂರು ಗೋಪಾಲ ಕೃಷ್ಣ ಇಬ್ಬರಿಗೂ ಟಿಕೆಟ್ ಭರವಸೆ ನೀಡಿ ಕ್ಷೇತ್ರದಲ್ಲಿ ಜಂಗಿ ಕುಸ್ತಿಗೆ ಬಿಟ್ಟಂತಿದೆ. ಇಂದಿನಿಂದ ಸಾಗರ ಕ್ಷೇತ್ರದಲ್ಲಿ ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ನಡುವೆ ಬಿಜೆಪಿ ಟಿಕೆಟ್‍ಗಾಗಿ ಭರ್ಜರಿ ಫೈಟ್ ಅಂತು ಆರಂಭವಾಗಲಿದೆ.

  • ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

    ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

    ಬೆಂಗಳೂರು: ಯಾರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಹೋದರಿ ಶೋಭಕ್ಕ ಅವರಿಗೆ ಸಂಬಂಧ ಕಲ್ಪಿಸಿ ಹೀನಾಮಾನವಾಗಿ ಬೈದಿದ್ದಾರೋ ಅವರಿಗೆ ಸೀಟು ನೀಡುತ್ತಿದ್ದಾರೆ ಅಂತ ಮಾಜಿ ಸಚಿವ ಹರತಾಳು ಹಾಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

    ಬಸವೇಶ್ವರನಗರದ ತಮ್ಮ ನಿವಾಸದಲ್ಲಿ ಇಂದು ಕುಟುಂಬ ಸಮೇತರಾಗಿ ಸಂಕಷ್ಟಹರ ಪೂಜೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ನನ್ನ ಸಹೋದರಿ ಸಮಾನರಾದ್ರೆ, ಭಾರತಿ ಶೆಟ್ಟಿ ನನ್ನ ತಾಯಿ ಸಮಾನರಾಗಿದ್ದಾರೆ. ಇವರಿಬ್ಬರಿಗೂ ನಮ್ಮ ನಾಯಕರಿಗೂ ಸಂಬಂಧ ಕಲ್ಪಿಸಿದ್ದಾರೆ. ಆದ್ರೆ ಇದೀಗ ಸಂಬಂಧ ಕಲ್ಪಿಸಿದವರಿಗೂ ಟಿಕೆಟ್ ಕೊಡ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನು ಈಶ್ವರಪ್ಪ ಅವರ ಮುಖ ನೋಡಿದ್ರೆ ಮೂರು ಓಟು ಬರೋದಿಲ್ಲ. ಆರ್‍ಎಸ್‍ಎಸ್ ನವರು 200 ಕೋಟಿ ತಂದ್ರು ಎಂದ ಗೋಪಾಲಕೃಷ್ಣ ಅವರಿಗೆ ಸೀಟು ಕೊಡ್ತಾರಂತಾದ್ರೆ ಇದಕ್ಕೆ ನಾನು ಏನ್ ಹೇಳ್ಬೇಕು. ಇದರಿಂದ ಸಹಜವಾಗಿಯೇ ನನಗೆ ಬೇಸರ ಆಗಿದೆ ಅಂತ ಹೇಳಿದ್ರು.

    ನನಗೆ ಸೀಟು ಸಿಗಬಹುದೆಂಬ ನಂಬಿಕೆ ಇದೆ. ಅದು ನಿಜವಾಗುತ್ತೋ ಇಲ್ಲವೋ ಗೊತ್ತಿಲ್ಲ. ವೆಂಕಯ್ಯ ನಾಯ್ಡು ಅವರಿಗೆ ಬೈದೋರಿಗೂ ಟಿಕೆಟ್ ನೀಡ್ತಿದ್ದಾರೆ. ಆಯನೂರ್ ಮಂಜಣ್ಣ ಬೂಟ್ ನೆಕ್ಕೋನು, ಬಸ್ ಸ್ಟ್ಯಾಂಡ್ ರಾಘು ಅಂತ ಬೈದಿದ್ರು. ವಿಕಾಸ್ ಸೌಧ ವಿಜಯೇಂದ್ರರಿಗೆ, ವಿಧಾನಸೌಧ ರಾಘವೇಂದ್ರ ಅವರಿಗೆ ಬರೆದು ಕೊಡ್ತಾರೆ ಅಂತ ಒಬ್ರು ಹೇಳಿದ್ರು. ಅವರಿಗೂ ಟಿಕೆಟ್ ನೀಡ್ತಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.

    ಇರ್ಲಿ ಬಿಡಿ ಇನ್ನೇನು ಜೀವನ. ನನ್ನಂತೋರು ಸತ್ತ ದಿನ ಮಾಜಿ ಸಚಿವ ಹಾಲಪ್ಪ ನಿಧನ ಅಂತ ಬರೀತೀರಿ. ಅದನ್ನಂತೂ ತಪ್ಪಿಸಲು ಸಾಧ್ಯವಿಲ್ಲ ಅಲ್ವ. ಏನೇ ಆಗಲಿ ನಾವಿನ್ನು ಸುಮ್ಮನಿರುವ ಪ್ರಶ್ನೆಯಿಲ್ಲ. ನಾವು ಸುಮ್ನಿರುತ್ತೇವೆ ಅಂದಿದ್ದೀಕೆ ಹಿಂಗೆ ಮಾಡಿದ್ರು ಅಂತ ಅವರು ಟಾಂಗ್ ನೀಡಿದ್ರು.

  • ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಆರೋಪ – ಮಾಜಿ ಸಚಿವ ಹರತಾಳ್ ಹಾಲಪ್ಪ ಭವಿಷ್ಯ ಇಂದು ನಿರ್ಧಾರ

    ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಆರೋಪ – ಮಾಜಿ ಸಚಿವ ಹರತಾಳ್ ಹಾಲಪ್ಪ ಭವಿಷ್ಯ ಇಂದು ನಿರ್ಧಾರ

    ಶಿವಮೊಗ್ಗ: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬಿಜೆಪಿ ನಾಯಕ, ಮಾಜಿ ಸಚಿವ ಹರತಾಳು ಹಾಲಪ್ಪ ಭವಿಷ್ಯ ಇಂದು ನಿರ್ಧಾರ ಆಗಲಿದೆ.

    ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಏಳು ವರ್ಷಗಳ ಕಾಲ ವಿಚಾರಣೆ ನಡೆಸಿದ ಶಿವಮೊಗ್ಗ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ.

    ಏನಿದು ಪ್ರಕರಣ?: ಹರತಾಳು ಹಾಲಪ್ಪ ಅವರು ವಿನೋಬಾ ನಗರದ ಕಲ್ಲಹಳ್ಳಿಯಲ್ಲಿರುವ ಸ್ನೇಹಿತ ವೆಂಕಟೇಶಮೂರ್ತಿಯವರ ಪತ್ನಿ ಚಂದ್ರಾವತಿ ಮೇಲೆ 2009ರ ನವೆಂಬರ್ 26ರಂದು ಅತ್ಯಾಚಾರ ಎಸಗಿದ್ದಾರೆ ಅಂತಾ ಆರೋಪ ಮಾಡಲಾಗಿತ್ತು. ಈ ಪ್ರಕರಣ ಮೇ 2, 2010 ರಂದು ಬೆಳಕಿಗೆ ಬಂದಿತ್ತು. ಕಲ್ಲಹಳ್ಳಿಯಲ್ಲಿನ ಗೆಳೆಯ ವೆಂಕಟೇಶ್ ಮನೆಗೆ ಊಟಕ್ಕೆ ಹೋಗಿದ್ದಾಗ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಅರಣ್ಯ ಇಲಾಖೆ ಗೆಸ್ಟ್ ಹೌಸ್‍ನಲ್ಲಿ ಮಾತ್ರೆ ತರುವಂತೆ ಗೆಳಯನನ್ನು ಕಳುಹಿಸಿ ರೇಪ್ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಮಾತ್ರೆ ತೆಗೆದುಕೊಂಡು ಬಂದಾಗ ಹೆಂಡತಿ ಕಿರುಚಾಡಿಕೊಂಡು ಓಡಿಬಂದಿದ್ದು, ಈ ದೃಶ್ಯವನ್ನು ಸಂತ್ರಸ್ತೆ ಪತಿ ವೆಂಕಟೇಶ್ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು.

    ಸಂತ್ರಸ್ತೆ ಚಂದ್ರಾವತಿ ಬೆಂಗಳೂರಲ್ಲಿ ಪೊಲೀಸ್ ಮಹಾನಿರ್ದೇಶಕ, ರಾಜ್ಯಪಾಲ ಹಾಗೂ ಶಿವಮೊಗ್ಗದ ವಿನೋಬಾನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಕುರಿತು ರಾಜ್ಯಾದ್ಯಂತ ವ್ಯಾಪಕ ಹೋರಾಟ ನಡೆದ ಬಳಿಕ ಒತ್ತಡಕ್ಕೆ ಮಣಿದಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರು.

    ಪ್ರಕರಣದ ತನಿಖೆ ನಡೆಸಿದ ಸಿಐಡಿ ಪೊಲೀಸರು ಶಾಸಕ ಹರತಾಳು ಹಾಲಪ್ಪ ಅವರ ವಿರುದ್ಧ ಶಿವಮೊಗ್ಗ 2ನೇ ಜೆಎಂಎಫ್ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.