Tag: harassment of student

  • 5ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ- ಶಿಕ್ಷಕ ಅರೆಸ್ಟ್

    5ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ- ಶಿಕ್ಷಕ ಅರೆಸ್ಟ್

    ಮುಂಬೈ: 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿರುವ ಜಿಲ್ಲಾ ಪರಿಷತ್ ಶಾಲೆಯ ಶಿಕ್ಷಕ ಶಾಲೆ ರೀ ಓಪನ್ ಆದ ದಿನವೇ 5ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ವಸತಿ ಸಂಕೀರ್ಣಕ್ಕೆ ಬೀಗ – ಬೀದಿಗೆ ಬಿದ್ದ 32 ಕುಟುಂಬಗಳು

    ಶಾಲೆ ಸೋಮವಾರ ರೀ ಓಪನ್ ಆಗಿದ್ದು, ಆ ದಿನವೇ ಶಿಕ್ಷಕ ಎಲ್ಲ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಸಂತ್ರಸ್ತ ಬಾಲಕಿಯನ್ನು ಮಾತ್ರ ಇರಿಸಿಕೊಂಡಿದ್ದಾರೆ. ಈ ವೇಳೆ ಬಾಲಕಿಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಗಳಿವೆ. ಅದು ಅಲ್ಲದೇ ಅಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿ ಕೆಲವು ವಿದ್ಯಾರ್ಥಿಗಳು ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಕುರಿತು ಸಂತ್ರಸ್ತ ಬಾಲಕಿ ಮನೆಗೆ ಹೋಗಿ ತನ್ನ ಕುಟುಂಬದ ಸದಸ್ಯರಿಗೆ ಘಟನೆ ಬಗ್ಗೆ ಹೇಳಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಸಿದ ಸ್ಥಳೀಯರು ಗುಂಪು ಗುಂಪಾಗಿ ಶಿಕ್ಷಕರನ್ನು ಎದುರಿಸಲು ಶಾಲೆಯ ಬಳಿ ಸೇರಿಕೊಂಡಿದ್ದು, ನಂತರ ಆ ಗುಂಪನ್ನು ಪೆÇಲೀಸರು ತಡೆದು ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ‘ಟೇಕ್ ಕೇರ್ ಕಿಂಗ್’ ಎಂದ ಶಾರೂಖ್ ಅಭಿಮಾನಿಗಳು

    ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.