Tag: Harapanahalli

  • ಕ್ಷುಲ್ಲಕ ಕಾರಣಕ್ಕೆ ಮಕ್ಕಳ ಮೇಲೆ ಹಲ್ಲೆಗೈದ ತಾಯಿ – ಮಗಳು ಸಾವು, ಮಗನ ಸ್ಥಿತಿ ಗಂಭೀರ

    ಕ್ಷುಲ್ಲಕ ಕಾರಣಕ್ಕೆ ಮಕ್ಕಳ ಮೇಲೆ ಹಲ್ಲೆಗೈದ ತಾಯಿ – ಮಗಳು ಸಾವು, ಮಗನ ಸ್ಥಿತಿ ಗಂಭೀರ

    – ಹಲ್ಲೆ ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ

    ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ತಾಯಿಯೇ ಮಕ್ಕಳ ಮೇಲೆ ದೊಣ್ಣೆಯಿಂದ ಹಲ್ಲೆಗೈದು ಮಗಳನ್ನು ಹತ್ಯೆಗೈದು ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಹರಪ್ಪನಹಳ್ಳಿ (Harapanahalli) ತಾಲ್ಲೂಕಿನ ಹುಲಿಕಟ್ಟೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯ ಮತ್ತೋರ್ವ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಬೇಗಮ್ ಎಂಬಾಕೆ ತನ್ನ ಮಕ್ಕಳಾದ ಶಮಬಾನು ಹಾಗೂ ಮಗ ಅಮಾನುಲ್ಲಾ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಗ ಅಮಾನುಲ್ಲಾ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಇದನ್ನೂ ಓದಿ: ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ

    ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಬೇಗಮ್, ಕ್ಷುಲ್ಲಕ ಕಾರಣಕ್ಕೆ ಮಕ್ಕಳೊಂದಿಗೆ ಜಗಳ ಮಾಡಿದ್ದಾಳೆ. ಅದೇ ಸಿಟ್ಟಿನಲ್ಲಿ ತಡರಾತ್ರಿ ಮಲಗಿದ್ದ ಇಬ್ಬರೂ ಮಕ್ಕಳ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ.

    ಯಾವಾಗಲೂ ಅವರ ಮನೆಯಲ್ಲಿ ಜಗಳವಾಗುತ್ತಿತ್ತು. ಕಳೆದ ರಾತ್ರಿ ಕೂಡ ಅದೇ ರೀತಿ ಜಗಳವಾಡಿರಬಹುದು ಎಂದು ಈ ಬಗ್ಗೆ ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ. ಬೆಳಗ್ಗೆ ಎಷ್ಟೊತ್ತಾದರೂ ಬಾಗಿಲು ತೆರೆಯದ ಹಿನ್ನೆಲೆ ಅನುಮಾನಗೊಂಡ ಸಂಬಂಧಿಕರು ಮನೆ ಒಳಗೆ ನೋಡಿದಾಗ ಈ ವಿಚಾರ ತಿಳಿದಿದೆ. ಬಳಿಕ ಗಾಯಗೊಂಡು ನರಳುತ್ತಿದ್ದ ಅಮಾನುಲ್ಲನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ವಿಜಯನಗರ (vijayanagar) ಎಸ್‍ಪಿ ಶ್ರೀಹರಿಬಾಬು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹರಪ್ಪನಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 15 ವರ್ಷದಲ್ಲಿ ಒಮ್ಮೆಯೂ ತವರಿಗೆ ಕಳುಹಿಸದೆ ಕಿರುಕುಳ – ವಿಷ ಕುಡಿಸಿ ಪತ್ನಿಯ ಕೊಂದ ದುರುಳ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತೀಕಾರಕ್ಕಾಗಿ ನೀರಿನ ಟ್ಯಾಂಕ್‍ಗೆ ಕ್ರಿಮಿನಾಶಕ ಹಾಕಿದ್ದ ಕಿರಾತಕ ಅರೆಸ್ಟ್

    ಪ್ರತೀಕಾರಕ್ಕಾಗಿ ನೀರಿನ ಟ್ಯಾಂಕ್‍ಗೆ ಕ್ರಿಮಿನಾಶಕ ಹಾಕಿದ್ದ ಕಿರಾತಕ ಅರೆಸ್ಟ್

    ದಾವಣಗೆರೆ: ಕುಡಿಯುವ ನೀರಿನ ಟ್ಯಾಂಕ್ ವಿಷ ಬೆರೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಚ್ಚಾಪುರ ಗ್ರಾಮದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಮಂಜುನಾಥ್(50) ಬಂಧೀತ ಆರೋಪಿ ಆಗಿದ್ದಾನೆ. ನೀರಿಗೆ ವಿಷದ ಹಾಕಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿತ್ತು. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಮಂಜುನಾಥ್ ಮೇಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹಾಗೂ ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕಳ್ಳತನ ಪ್ರಕರಣವಿತ್ತು. ಕಳ್ಳತನ ಮಾಡಿ ಜೈಲಿಗೂ ಹೋಗಿ ಬಂದಿದ್ದ. ಚಿಗಟೇರಿ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಮಂಜುನಾಥ್‍ಗೆ ಅವಮಾನವಾಗಿತ್ತು. ಇದೇ ಕಾರಣಕ್ಕೆ ನೀರಿನ ಟ್ಯಾಂಕ್‍ಗೆ ವಿಷ ಹಾಕಿರುವುದಾಗಿ ಆರೋಪಿ ಮಂಜುನಾಥ್ ತಪ್ಪು ಒಪ್ಪಿಕೊಂಡಿದ್ದಾನೆ. ಈ ಪ್ರಕರಣ ಚಗಟೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    ಪ್ರಕರಣದ ಹಿನ್ನೆಲೆ:
    ಆರೋಪಿ ಮಂಜುನಾಥ ಏಪ್ರಿಲ್ 9ರಂದು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್‍ಗೆ ವಿಷ ಬೆರೆಸಿದ್ದ. ಟ್ಯಾಂಕ್‍ನಲ್ಲಿ ಕ್ರಿಮಿನಾಶಕ ಬಾಟಲ್ ಪತ್ತೆಯಾಗಿತ್ತು. ಇದನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದರು. ಘಟನೆ ನಡೆಯುವ ಮುನ್ನ ಆರೋಪಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಓಡಾಡುವುದನ್ನು ಸ್ಥಳೀಯರು ನೋಡಿದ್ದರಂತೆ.

    ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಮಾತ್ರೆಗಳುಳ್ಳ ಬಾಟೆಲ್ ಇದಾಗಿದೆ. ಬೆಳಗ್ಗೆ ನೀರು ಸರಬರಾಜು ಮಾಡುವ ಸಿಬ್ಬಂದಿ ಟ್ಯಾಂಕ್ ಮೇಲೇರಿ ಪರಿಶೀಲಿಸಿದಾಗ ನೀರಿನಲ್ಲಿ ವಿಷದ ಬಾಟೆಲ್ ಬಿದ್ದಿರೋದು ಕಂಡು ಬಂದಿದೆ. ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನೀರಿನಲ್ಲಿದ್ದ ವಿಷದ ಬಾಟೆಲ್ ಮೇಲಕ್ಕೆತ್ತಿ ಟ್ಯಾಂಕ್ ಸ್ವಚ್ಛಗೊಳಿಸಿದ್ದರು.

    ಗ್ರಾಮಕ್ಕೆ ಡಿವೈಎಸ್‍ಪಿ ಹಾಲಮೂರ್ತಿರಾವ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಸಕ ಕರುಣಾಕರ್ ರೆಡ್ಡಿ ಸೂಚನೆ ನೀಡಿದ್ದರು. ಇದೀಗ ಪ್ರಕರಣದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

  • ಪ್ರೀತಿಸಿ ಊರು ಬಿಟ್ಟ ಜೋಡಿ – ಯುವತಿ ಮನೆಯವರಿಂದ ಯುವಕನ 5 ಮನೆ ಧ್ವಂಸ

    ಪ್ರೀತಿಸಿ ಊರು ಬಿಟ್ಟ ಜೋಡಿ – ಯುವತಿ ಮನೆಯವರಿಂದ ಯುವಕನ 5 ಮನೆ ಧ್ವಂಸ

    ದಾವಣಗೆರೆ: ಅಂತರ್ಜಾತಿ ಯುವಕ-ಯುವತಿ ಪ್ರೀತಿಸಿ, ಮನೆಗಳಲ್ಲಿ ವಿರೋಧವಿದ್ದ ಕಾರಣ ಊರು ಬಿಟ್ಟು ಹೋಗಿದ್ದರು. ಯುವತಿಯ ಕಡೆಯವರು ಯುವಕನ ಕುಟುಂಬಸ್ಥರ ಹಾಗೂ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ, 5 ಮನೆ ಧ್ವಂಸ ಮಾಡಿದ ಪ್ರಕರಣ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ (ಅಗ್ರಹಾರ) ನಡೆದಿದೆ.

    ಒಂದೇ ಗ್ರಾಮದ ದುರಗೇಶ್, ಕವಿತಾ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರದ್ದು ಜಾತಿ ಬೇರೆಯಾಗಿದ್ದಂದ ಮದುವೆಗೆ ಎರಡೂ ಕುಟುಂಬಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ದುರಗೇಶ್ ಮತ್ತು ಕವಿತಾ ದೇವಸ್ಥಾನದಲ್ಲಿ ಮದುವೆಯಾಗಿ ಊರು ಬಿಟ್ಟಿದ್ದಾರೆ.

    ದುರುಗೇಶ್ ಮತ್ತು ಸಂಬಂಧಿಕರ ಮನೆಯ ದಾಳಿ ನಡೆಸಿರುವ ಕವಿತಾ ಕುಟುಂಬಸ್ಥರು ಪೀಠೋಪಕರಣ, ಟಿವಿ, ಪಾತ್ರಗೆಳನ್ನ ಧ್ವಂಸ ಮಾಡಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕ್ ಗಳನ್ನ ಸಹ ಜಖಂಗೊಳಿದ್ದಾರೆ. ದುರುಗೇಶ್ ಕುಟುಂಬ ಗ್ರಾಮಕ್ಕೆ ಬರದಂತೆ ಬೆದರಿಕೆ ಸಹ ಹಾಕಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿದ್ರೂ ಪೊಲೀಸರು ಯಾರನ್ನ ಬಂಧಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ದುರಗೇಶ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

  • ಲಾಕ್‍ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ ಹೊಡೆಸಿದ್ದು ಪೊಲೀಸರಲ್ಲ, ನರ್ಸ್

    ಲಾಕ್‍ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ ಹೊಡೆಸಿದ್ದು ಪೊಲೀಸರಲ್ಲ, ನರ್ಸ್

    ದಾವಣಗೆರೆ: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಹಲವೆಡೆ ಪೊಲೀಸರು ಲಾಕ್‍ಡೌನ್ ಉಲ್ಲಂಘಿಸಿದ ಪುಂಡರಿಗೆ ಬಸ್ಕಿ ಹೊಡೆಸಿರುವುದು ಹಳೆಯ ಸುದ್ದಿ. ಆದರೆ ಇಲ್ಲೊಬ್ಬರು ನರ್ಸ್, ಮಾಸ್ಕ್ ಹಾಕದೇ ಮನೆಯಿಂದ ಹೊರಬಂದವರಿಗೆ ಬಸ್ಕಿ ಹೊಡೆಸಿದ್ದಾರೆ.

    ಇಂಥದ್ದೊಂದು ಪ್ರಸಂಗ ನಡೆದಿರುವುದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ. ಮನೆಯಿಂದ ಯಾರೂ ಹೊರಬರಬಾರದು ಎಂದು ಮನವಿ ಮಾಡಿದ್ದರೂ ಯುವಕರು ಮಸ್ತಿಗಾಗಿ ಮನೆಯಿಂದ ಹೊರಬಂದಿದ್ದರು. ಈ ವೇಳೆ ನರ್ಸ್ ಸೀಮಾ ಅವರು ಯುವಕರಿಗೆ ಬೆತ್ತದ ರುಚಿ ತೋರಿಸುವ ಜೊತೆಗೆ ಬಸ್ಕಿ ಹೊಡೆಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

    ಮನೆಯಿಂದ ತೆಲಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದರು. ಈ ವೇಳೆ ಬೇಕಾಬಿಟ್ಟಿಯಾಗಿ ಯುವಕರು, ಸಾರ್ವಜನಿಕರು ತಿರುಗಾಡುತ್ತಿದ್ದರು. ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ. ಈ ವೇಳೆ ಸೋಂಕು ಹರಡುವ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೂ ಈ ರೀತಿಯಾಗಿ ಓಡಾಡುವುದಕ್ಕೆ ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ನೀಡಿದ್ದು, ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಕಳೆದ ಹತ್ತು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸೀಮಾ ಅವರಿಗೆ ಗ್ರಾಮದಲ್ಲಿ ಒಳ್ಳೆಯ ಹೆಸರಿದೆ. ಯಾರೇ ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಗೆ ಹೋದರೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಾಗಾಗಿ ಅವರು ಕೊಟ್ಟ ಶಿಕ್ಷೆ ಒಪ್ಪಿಕೊಂಡು ಅವರ ಮಾತು ಪಾಲಿಸುತ್ತೇವೆ. ಅವರು ನಮ್ಮ ಒಳ್ಳೆಯದಕ್ಕೆ ಹೇಳುವುದು ಅಲ್ವಾ ಎಂದು ಸ್ಥಳೀಯರು ತಿಳಿಸಿದ್ದಾರೆ.

  • 3.5 ಲಕ್ಷ ರೂ.ಗೆ 750 ಗ್ರಾಂ ನಕಲಿ ಬಂಗಾರದ ನಾಣ್ಯಗಳನ್ನ ಮಾರಿದ್ದ ಆರೋಪಿ ಅರೆಸ್ಟ್

    3.5 ಲಕ್ಷ ರೂ.ಗೆ 750 ಗ್ರಾಂ ನಕಲಿ ಬಂಗಾರದ ನಾಣ್ಯಗಳನ್ನ ಮಾರಿದ್ದ ಆರೋಪಿ ಅರೆಸ್ಟ್

    ಹುಬ್ಬಳ್ಳಿ: ಜೈನ್ ಮಂದಿರದ ಬಳಿ ಮನೆಯ ಪಾಯಾ ತಗೆಯುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನ ಕಡಿಮೆ ದರಕ್ಕೆ ಕೊಡುತ್ತೇನೆ ಎಂದು ಸುಳ್ಳು ಹೇಳಿ ರಾಜಸ್ಥಾನದ ಉದ್ಯಮಿಗೆ ನಂಬಿಸಿ ಹಣ ಪಡೆದು ಮೋಸ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಹರಪನಹಳ್ಳಿ ತಾಲೂಕಿನ ಕೊರಚರಹಟ್ಟಿ ಮಾಚೆಹಳ್ಳಿಯ ಸಾತಪ್ಪ ಕೊರಚಾ ಬಂಧಿತ ಆರೋಪಿ. ಬಂಧಿತನಿಂದ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಎರಡೂವರೆ ಲಕ್ಷ ರೂ.ವನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ. ಆರೋಪಿ ಸಾತಪ್ಪ ಹುಬ್ಬಳ್ಳಿಯ ಹೊಸ ಗಬ್ಬೂರು ಸಮೀಪದ ಜೈನ ಮಂದಿರದ ಬಳಿ ಮನೆಯ ಪಾಯಾ ಕಡಿಯುವಾಗ ಹಳೇ ಕಾಲದ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಮಾರುತ್ತಿದ್ದೇನೆ ಎಂದು ರಾಜಸ್ಥಾನ ಮೂಲದ ಸಹದೇವ್ ಶಿರೋಹಿ ಅವರಿಗೆ ಹೇಳಿದ್ದ. ಹೀಗಾಗಿ ಸಹದೇವ್ ಅವರು 3.5 ಲಕ್ಷ ರೂಪಾಯಿ ಹಣ ನೀಡಿ 750 ಗ್ರಾಂ ತೂಕದ ಸಣ್ಣ ಸಣ್ಣ ನಕಲಿ ಬಂಗಾರದ ನಾಣ್ಯಗಳನ್ನ ಖರೀದಿಸಿದ್ದರು.

    ಆರೋಪಿಯ ಮೋಸ ತಿಳಿಯುತ್ತಿದ್ದಂತೆ ಸಹದೇವ್ ಶಿರೋಹಿ ಅವರು ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು. ಸದ್ಯ ಆರೋಪಿ ಸಾತಪ್ಪನನ್ನು ಬಂಧಿಸಿ, 2 ಲಕ್ಷ ರೂ.ವನ್ನು ಜಪ್ತಿ ಮಾಡಿದ್ದಾರೆ.

    ಆರೋಪಿ ಬಂಧನಕ್ಕಾಗಿ ವಿಶೇಷ ತಂಡವು ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ, ಆತನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದೆ. ಹೀಗಾಗಿ ತನಿಖಾ ತಂಡದ ಸಿಬ್ಬಂದಿಯ ಕಾರ್ಯವೈರ್ಖರಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರು ಮೆಚ್ಚಿ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

  • ರೈತರ ಮೇಲೆ ಮಾಜಿ ಸಚಿವ ಪರಮೇಶ್ವರ ನಾಯ್ಕ ಪುತ್ರನಿಂದ ಹಲ್ಲೆ

    ರೈತರ ಮೇಲೆ ಮಾಜಿ ಸಚಿವ ಪರಮೇಶ್ವರ ನಾಯ್ಕ ಪುತ್ರನಿಂದ ಹಲ್ಲೆ

    ದಾವಣಗೆರೆ: ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ಪುತ್ರ ಹಾಗೂ ಬೆಂಬಲಿಗರು ರೈತರ ಮೇಲೆ ಹಲ್ಲೆ ನಡೆಸಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಹೊರವಲಯದಲ್ಲಿ ನಡೆದಿದೆ.

    ಕಲ್ಲು ಗಣಿಗಾರಿಕೆ ವಿಚಾರವಾಗಿ ಪ್ರಶ್ನಿಸಿದ ಹರಪನಹಳ್ಳಿಯ ರೈತರ ಮೇಲೆ ಮಾಜಿ ಸಚಿವರ ಪುತ್ರ ಭರತ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಕಲ್ಲು ಗಣಿಗಾರಿಕೆಯಿಂದ ತಮ್ಮ ಜಮೀನಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಧೂಳಿನಿಂದ ಭಾರೀ ಸಮಸ್ಯೆಯಾಗಿದೆ ಎಂದು ರೈತರು ಆರೋಪಿಸಿದ್ದರು. ಹೀಗಾಗಿ ರೈತರು ಉಪವಿಭಾಗಾಧಿಕಾರಿಗಳನ್ನು ಪರಿಶೀಲನೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಇದೇ ಮಾರ್ಗದಲ್ಲಿ ಪಿ.ಟಿ. ಪರಮೇಶ್ವರ ನಾಯ್ಕ್ ಕಾರಿನಲ್ಲಿ ಹೋಗುವಾಗ ಧೂಳು ಬಂದ ಕಾರಣ ರೈತರು ಆಕ್ಷೇಪಿಸಿದರು.

    ರೈತರ ಆಕ್ಷೇಪಣೆಯಿಂದ ಕೋಪಗೊಂಡ ಪರಮೇಶ್ವರ ನಾಯ್ಕ್ ಅವರ ಪುತ್ರ ಹಾಗೂ ಬೆಂಬಲಿಗರು ಕಾರಿನಿಂದ ಇಳಿದು ಬಂದು ಹಲ್ಲೆ ಮಾಡಿದ್ದಾರೆ. ತಕ್ಷಣವೇ ಕಾರಿನಿಂದ ಇಳಿದು ಬಂದ ಪರಮೇಶ್ಚರ ನಾಯ್ಕ ಗಲಾಟೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರೈತರು ಹರಪನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸೇರಿಸಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಆಸ್ತಿಗಾಗಿ ಮಲಗಿದ್ದ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಂದ ತಮ್ಮ

    ಆಸ್ತಿಗಾಗಿ ಮಲಗಿದ್ದ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಂದ ತಮ್ಮ

    ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಎರಡೆತ್ತಿನಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ತಮ್ಮನೋರ್ವ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ.

    33 ವರ್ಷದ ಹಾಲೇಶ್ ತಾಳೇದಹಳ್ಳಿ ಕೊಲೆಯಾದ ಅಣ್ಣ. 31 ವರ್ಷದ ಹೊನ್ನಪ್ಪ ತಾಳೇದಹಳ್ಳಿ ಅಣ್ಣನನ್ನು ಕೊಲೆಗೈದ ಆರೋಪಿ. ಆಸ್ತಿ ವಿಚಾರದಲ್ಲಿ ಸೋದರರಿಬ್ಬರ ನಡುವೆ ಕಲಹವಿತ್ತು. ಶುಕ್ರವಾರ ರಾತ್ರಿ ಸಹ ಆಸ್ತಿಯ ವಿಚಾರವಾಗಿ ಹಾಲೇಶ್ ಮತ್ತು ಹೊನ್ನಪ್ಪನ ನಡುವೆ ಗಲಾಟೆ ನಡೆದಿದೆ. ರಾತ್ರಿ ಸುಮಾರು 2 ಗಂಟೆಗೆ ಮಲಗಿದ್ದ ಹಾಲೇಶ್ ನನ್ನು ಕೊಡಲಿಯಿಂದ ಕಡಿದು ಬರ್ಬರವಾಗಿ ಕೊಲೆಗೈದು ಹೊನ್ನಪ್ಪ ಪರಾರಿಯಾಗಿದ್ದಾನೆ.

    ಘಟನಾ ಸ್ಥಳಕ್ಕೆ ಹರಪನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ಸಂಬಂಧ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.