Tag: Happy Birthday

  • ಶ್ರೀಮುರಳಿ ಹುಟ್ಟು ಹಬ್ಬಕ್ಕೆ ‘ಪರಾಕ್’ ಸಿನಿಮಾ ಘೋಷಣೆ

    ಶ್ರೀಮುರಳಿ ಹುಟ್ಟು ಹಬ್ಬಕ್ಕೆ ‘ಪರಾಕ್’ ಸಿನಿಮಾ ಘೋಷಣೆ

    ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ (Srimurali) ಇಂದು ಜನ್ಮದಿನದ (Happy Birthday) ಸಂಭ್ರಮದಲ್ಲಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಈ ಬಾರಿ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ನೋವುಗಳು ಇದ್ದರೂ ಅದನ್ನು ಬದಿಗಿಟ್ಟು ಫ್ಯಾನ್ಸ್ ಭೇಟಿ ಮಾಡುತ್ತಿದ್ದಾರೆ. ಶ್ರೀಮುರಳಿ ಜನ್ಮದಿನ ಅಂಗವಾಗಿ ಸಖತ್ ಉಡುಗೊರೆಗಳು ಸಿಕ್ಕಿವೆ.

    ಶ್ರೀಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

    ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್ (Halesh Kogundi) ಪರಾಕ್ (Parak) ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು  ಬ್ರ್ಯಾಂಡ್ ಕೋಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

     

    ಬಹುತೇಕ ಬೆಣ್ಣೆ ನಗರಿ ದಾವಣಗೆರೆ ಪ್ರತಿಭೆಗಳೇ ಒಂದಾಗಿ ಮಾಡುತ್ತಿರುವ ಪರಾಕ್ ಚಿತ್ರದ ಟೈಟಲ್ ಪೋಸ್ಟರ್ ಆಕರ್ಷಕವಾಗಿದೆ. ಹೊಸ ಅವತಾರದಲ್ಲಿ ಶ್ರೀ ದರ್ಶನ ಕೊಟ್ಟಿದ್ದಾರೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಪರಾಕ್ ಬಳಗ ಮೇ ಅಥವಾ ಜೂನ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕುವ ಯೋಜನೆ ಹಾಕಿಕೊಂಡಿದೆ.

  • ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಮಂತಾ: `ಶಾಕುಂತಲಂ’ ನ್ಯೂ ಲುಕ್ ವೈರಲ್

    ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಮಂತಾ: `ಶಾಕುಂತಲಂ’ ನ್ಯೂ ಲುಕ್ ವೈರಲ್

    `ಯೇ ಮಾಯಾ ಚೇಸಾವೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ ಸಮಂತಾ, ಈಗ ಸ್ಟಾರ್ ನಟಿಯಾಗಿ ಸೌತ್ ಸಿನಿಮಾ ಜಗತ್ತನ್ನು ಆಳುತ್ತಿದ್ದಾರೆ. ದೇಶದ್ಯಾದಂತ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಆಪಲ್ ಬ್ಯೂಟಿ ಸಮಂತಾ 35ರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

    ʻದುಕುಡುʼ, ಈಗ, ಓ ಬೇಬಿ, ಮಹಾ ನಟಿ, ಯು ಟರ್ನ್, ಮಜಿಲಿ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ, ಹಿಂದಿಯ `ದಿ ಫ್ಯಾಮಿಲಿಮೆನ್ 2′ ಸಿರೀಸ್‌ನಲ್ಲಿ ಸಮಂತಾ ನಟನೆಯ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಬಳಿಕ ವಯಕ್ತಿಕ ಜೀವನದಲ್ಲಿ ನಾಗಚೈತನ್ಯ ಜತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಮತ್ತೆ ಸ್ಟ್ರಾಂಗ್‌ ಆಗಿ ನಿಂತು `ಪುಷ್ಪ’ ಚಿತ್ರಕ್ಕೆ ಹೆಜ್ಜೆ ಹಾಕೋದರ ಮೂಲಕ ಧೂಳೆಬ್ಬಿಸಿದ್ರು. ಸದ್ಯ ಸಮಂತಾ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

    ಮದುವೆ, ವಿಚ್ಛೇಧನದ ಬಳಿಕ ನಟಿಯ ಕೆರಿಯರ್ ಮುಗಿದು ಹೋಯ್ತು ಅಂದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಈ ನಟಿ. ಇದೀಗ ಹಾಲಿವುಡ್, ಬಾಲಿವುಡ್ ಸೇರಿದಂತೆ ಸಾಕಷ್ಟು ಸಿನಿಮಾಗಳು ಸಮಂತಾ ಕೈಯಲ್ಲಿದೆ. ತೆಲುಗಿನ `ಶಾಕುಂತಲಂ’ ಮತ್ತು ವಿಜಯ್ ದೇವರಕೊಂಡ ಜತೆ ಕೂಡ ನಟಿಸುತ್ತಿದ್ದಾರೆ. ಇದೇ ವೇಳೆ `ಶಾಕುಂತಲಂ’ ಚಿತ್ರತಂಡದಿಂದ ಸಮಂತಾ ನ್ಯೂ ಲುಕ್ ರಿವೀಲ್ ಮಾಡುವುದರ ನಟಿಗೆ ವಿಶ್ ಮಾಡಿದ್ದಾರೆ. ಈ ಹಿಂದೆ ಕೂಡ `ಶಾಕುಂತಲಂ’ ಸಮಂತಾ ಫಸ್ಟ್ ಲುಕ್ ರಿಲೀಸ್ ಮಾಡಿ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

    ಕಹಿ ಘಟನೆ ಎಲ್ಲಾ ಮರೆತು ಮತ್ತೆ ಸಿನಿಮಾಗಳತ್ತ ಸಮಂತಾ ಮುಖ ಮಾಡಿದ್ದಾರೆ. ಪವರ್‌ಫುಲ್ ಪಾತ್ರಗಳ ಮೂಲಕ ರಂಜಿಸಲು `ಪುಷ್ಪ’ ಬ್ಯೂಟಿ ಸಜ್ಜಾಗಿದ್ದಾರೆ. ಇನ್ನು ನೆಚ್ಚಿಯ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು, ಸೆಲೆಬ್ರೆಟಿ ಸ್ನೇಹಿತರು ಶುಭಹಾರೈಸುತ್ತಿದ್ದಾರೆ.

  • ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ – ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆ

    ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ – ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಇಂದು 46ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಬಾಲಿವುಡ್‍ನ ಖ್ಯಾತ ನಟಿಯರು ಸೇರಿದಂತೆ ಅನೇಕ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡುತ್ತಿದ್ದಾರೆ.

    ಮೂಲತಃ ಕರ್ನಾಟಕದ ಕರಾವಳಿ ಮೂಲದವರೆ ಆಗಿದ್ದರೂ, ಶಿಲ್ಪಾ ಶೆಟ್ಟಿಯವರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದರು. ಸದ್ಯ ಮುಂಬೈನಲ್ಲಿ ಬದುಕು ಕಟ್ಟಿಕೊಂಡು, ಸುಂದರವಾದ ಕುಟುಂಬ ಹೊಂದಿರುವ ಶಿಲ್ಪಾ ಶೆಟ್ಟಿ ಎಷ್ಟೇ ವಯಸ್ಸಾದರೂ ಇಂದಿನ ನಟಿಯರಿಗೆ ತಾವೇನು ಕಡಿಮೆ ಇಲ್ಲ ಎಂಬಂತೆ ಫಿಟ್‍ನೆಸ್ ಮೈನ್‍ಟೆನ್ ಮಾಡಿದ್ದಾರೆ.

    ಜೂನ್ 8ರಂದು ನಟಿ ಶಿಲ್ಪಾಶೆಟ್ಟಿಯವರು 46ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಬಾಲಿವುಡ್ ಸ್ಟಾರ್ ನಟಿ ಮಾಧುರಿ ದೀಕ್ಷಿತ್, ಹುಟ್ಟು ಹಬ್ಬದ ಶುಭಾಶಯಗಳು ಶಿಲ್ಪಾ. ಸಕಾರಾತ್ಮಕ ಆಲೋಚನೆಗಳು ನಿಮ್ಮದಾಗಿರಲಿ ಎಂದು ಶುಭಹಾರೈಸುತ್ತೇನೆ. ನೀವು ಮತ್ತು ನಿಮ್ಮವರು ಕ್ಷೇಮವಾಗಿದ್ದೀರಾ ಎಂದು ಭಾವಿಸುತ್ತೇನೆ. ಫಿಟ್ ಹಾಗೂ ಅದ್ಭುತವಾಗಿರಿ ಎಂದು ವಿಶ್ ಮಾಡಿದ್ದಾರೆ. ಇದನ್ನು ಓದಿ:ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ

    ರವೀನಾ ಟಂಡನ್‍ರವರು ಹುಟ್ಟು ಹಬ್ಬದ ಶುಭಾಶಯಗಳು ಶಿಲ್ಪಾ ಶೆಟ್ಟಿ. ಲವ್ ಯೂ ಲಾಟ್. ಈ ದಿನ ಅದ್ಭುತವಾಗಿರಲಿ ಎಂದು ವಿಶ್ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಮಲೈಕಾ ಅರೋರಾ, ನಿರೂಪಕ ಮನೀಷ್ ಪೌಲ್ ಸೇರಿದಂತೆ ಅನೇಕ ಮಂದಿ ಶುಭಾಶಯ ತಿಳಿಸಿದ್ದಾರೆ.

    ಸುಮಾರು 13 ವರ್ಷಗಳ ಬಳಿಕ ಶಿಲ್ಪಾಶೆಟ್ಟಿಯವರು ನಿಕ್ಕಾಮಾ ಸಿನಿಮಾದ ಮೂಲಕ ಮತ್ತೆ ಬಾಲಿವುಡ್‍ಗೆ ಕಮ್ ಬ್ಯಾಕ್ ಮಾಡಿದ್ದು, ಜೂನ್ 5 ರಂದು ಚಿತ್ರ ತೆರೆ ಕಾಣಬೇಕಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿದೆ. ಇದನ್ನು ಓದಿ:ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?

  • ಬಿಎಸ್‍ವೈಗೆ ರೈತಪರ ಕೆಲಸ ಮಾಡುವ ಶಕ್ತಿಕೊಡು ಭಗವಂತ: ಶೋಭಾ ಕರಂದ್ಲಾಜೆ

    ಬಿಎಸ್‍ವೈಗೆ ರೈತಪರ ಕೆಲಸ ಮಾಡುವ ಶಕ್ತಿಕೊಡು ಭಗವಂತ: ಶೋಭಾ ಕರಂದ್ಲಾಜೆ

    ಉಡುಪಿ: 78ನೇ ವಸಂತಕ್ಕೆ ಕಾಲಿಟ್ಟ ಸಿಎಂ ಯಡಿಯೂರಪ್ಪ ಅವರಿಗೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಶುಭ ಕೋರಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸನ್ಮಾನ್ಯ ಸಿಎಂ ಯಡಿಯೂರಪ್ಪನವರಿಗೆ 77 ವರ್ಷ ತುಂಬಿದೆ. 77 ವರ್ಷ ವಯಸ್ಸಾದರು ಕೂಡ ರಾಜ್ಯದಲ್ಲಿ ನಿರಂತರ ಪ್ರವಾಸವನ್ನು ಮಾಡುತ್ತಿದ್ದಾರೆ. ಅತ್ಯಂತ ಹೆಚ್ಚು ಪ್ರವಾಸವನ್ನು ಮಾಡುತ್ತಿರುವಂತಹ ಒಬ್ಬ ಮುಖ್ಯಮಂತ್ರಿ ಅಂದರೆ ಅದು ಯಡಿಯೂರಪ್ಪನವರು ಎಂದು ಹೇಳಿದರು.

    ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭವಾಗಲಿ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರ ಗಟ್ಟಿಯಾಗಿ, ಜನರ ಸಮಸ್ಯೆಗೆ ರಾಜ್ಯದ ರೈತರ ಸಮಸ್ಯೆಗೆ ಸ್ಪಂದಿಸುವಂತಹ ಒಂದು ಸರ್ಕಾರ ಆಗಲಿ. ಅವರಿಗೆ ಆ ಶಕ್ತಿ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.