Tag: hanumanthaiah

  • ದಲಿತರ ಮಕ್ಕಳು, ಮುಸ್ಲಿಮ್‌ ಮಹಿಳೆಯರು ಶಿಕ್ಷಣದಿಂದ ವಂಚಿತವಾಗಬಹುದಾದ ಸೂಚನೆಯಿದು: ಹನುಮಂತಯ್ಯ

    ದಲಿತರ ಮಕ್ಕಳು, ಮುಸ್ಲಿಮ್‌ ಮಹಿಳೆಯರು ಶಿಕ್ಷಣದಿಂದ ವಂಚಿತವಾಗಬಹುದಾದ ಸೂಚನೆಯಿದು: ಹನುಮಂತಯ್ಯ

    ನವದೆಹಲಿ: ದಲಿತರ ಮಕ್ಕಳು ಮತ್ತು ಮುಸ್ಲಿಮ್‌ ಮಹಿಳೆಯರು ಶಿಕ್ಷಣದಿಂದ ವಂಚಿತವಾಗಬಹುದಾದ ಸೂಚನೆಯಿದು ಎಂದು ಸಂಸದ ಎಲ್‌ ಹನುಮಂತಯ್ಯ ಕಳವಳ  ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್‌ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕಾಂಗ್ರೆಸ್‌ ಸಂಸದರಾದ ಎಲ್‌ ಹನುಮಂತಯ್ಯ, ನಾಸೀರ್‌ ಹುಸೇನ್‌, ಮಾಜಿ ಸಚಿವ ಆರ್‌.ಬಿ ತಿಮ್ಮಾಪುರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನೀಲಿ ಶಾಲು ಹಾಕಿ ದಲಿತ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಹೀಗೆ ಎಲ್ಲರೂ ಅವರವರ ಧರ್ಮ ಲಾಂಛನ ಹಾಕಿಕೊಂಡು ಬರಲು ಶುರು ಮಾಡಿದ್ರೆ ನಮ್ಮ ಶಿಕ್ಷಣ ಎಲ್ಲಿಗೆ ತಲುಪುತ್ತದೆ? ವಿವಾದವನ್ನು ಆರಂಭದಲ್ಲಿ ತಡೆಯಬೇಕಿತ್ತು. ಬಿಜೆಪಿ ಇದರ ನೈತಿಕ ಹೊಣೆ ಹೊರಬೇಕು ಎಂದು ಹೇಳಿದರು.

    ಕರಾವಳಿ ಬಲಪಂಥಿಯ ರಾಜಕಾರಣದ ಪ್ರಯೋಗ ಶಾಲೆ. ಅಲ್ಲಿಂದ ಬೇರೆ ಜಿಲ್ಲೆಗಳಿಗೆ ಈಗ ಹರಡುತ್ತಿದೆ. ಈಗ ಶಾಂತಿ ಸಂಧಾನ ಸಭೆಗಳನ್ನು ನಡೆಸಿ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರಿಗೆ ತಿಳುವಳಿಕೆ ನೀಡಬೇಕು ಎಂದು ಹನುಮಂತಯ್ಯ ಆಗ್ರಹಿಸಿದರು.

    ಹಿಜಬ್‌ ಧಾರಣೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಇದು ಕಳೆದು ಒಂದು ವಾರದಿಂದ ವಿವಾದ ಆಗಿರೋದ್ಯಾಕೆ ಎನ್ನುವುದು ಪ್ತಶ್ನಿಸಿಕೊಳ್ಳಬೇಕಿದೆ. ಸಂವಿಧಾನ ಧರ್ಮ ಪಾಲನೆಗೆ ಅವಕಾಶ ನೀಡಿದೆ. ಇನ್ನೊಂದು ಧರ್ಮಕ್ಕೆ ಧಕ್ಕೆ ಆಗದಂತೆ ಧರ್ಮಾಚರಣೆಗೆ ಅವಕಾಶ ಇದೆ. ಆದರೆ ಈ ವಿವಾದಕ್ಕೆ ಕಾರಣಕ್ಕೆ ರಾಜಕೀಯ ಹಿತಾಸಕ್ತಿ ಇದೆ. ಒಡೆದು ಆಳುವ ನಾಯಕರು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
    ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ರೆ ಇಡೀ ರಾಜ್ಯದ ಜನರಿಗೆ ಹಿಜಬ್ ಹಾಕಿಸುತ್ತಾರೆ: ಸುನಿಲ್ ಕುಮಾರ್

    ಮಕ್ಕಳಲ್ಲಿ ತಿಳುವಳಿಕೆ ಮಟ್ಟ ಕಡಿಮೆಯಿದ್ದು ಹಿಜಬ್‌ ಧರಿಸಿದ್ರೆ ನಾವು ಶಾಲು ಧರಿಸುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಇದರ ಹಿಂದೆ ದೊಡ್ಡ ಚಿತಾವಣೆ ಇದೆ. ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತಬಾರದು. ಸಿಖ್ಬರ್‌ ಟರ್ಬನ್‌ ಧರಿಸಬಾರದು. ಹಿಂದೂಗಳು ಮಾಂಗಲ್ಯ, ಬಿಂದಿ, ಬಳೆ ಹಾಕಿದವರು ಶಾಲೆ ಬರಬಾರದು ಎಂದು ಶುರುವಾದರೆ ಏನು ಆಗಬಹುದು? ಹಿಜಬ್‌ ಒಂದು ಮುನ್ಸೂಚನೆ. ಇದು ದೇಶದ ಸಮಗ್ರತೆಗೆ ದೊಡ್ಡ ಪೆಟ್ಟು ನೀಡಲಿದೆ ಎಂದರು. ದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

    ಪ್ರಕರಣ ಕೋರ್ಟ್‌ನಲ್ಲಿದ್ದು ಕೋರ್ಟ್ ಆದೇಶಕ್ಕೆ ನಾವೆಲ್ಲ ಬದ್ಧ. ಅಲ್ಲಿಯವರೆಗೂ ರಾಜಕಾರಣಿಗಳು ನೀಡುತ್ತಿರುವ ಹೇಳಿಕೆ ಗಮನಿಸಬೇಕು. ಕೆಲವು ಸಂಸದರು ಶಾಸಕರು ದೇಶ ಒಡೆಯುವ ಮಾತುಗಳನ್ನು ಆಡುತ್ತಿದ್ದಾರೆ. ರಾಜಕಾರಣಿಗಳು ಕೂಡಲೇ ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.