Tag: Hanumanth

  • ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ

    ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ

    ಚಂಡೀಗಢ: ಹನುಮ ವೇಷಧಾರಿಯೊಬ್ಬರು (Lord Hanuman) ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.

    ಮೃತರನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಇವರು ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಲೀಲಾ ಸ್ಕಿಟ್‌ ಹಮ್ಮಿಕೊಳ್ಳಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಹರೀಶ್‌ ಮೆಹ್ತಾ (Harish Mehta) ಅವರು ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸ್ಕಿಟ್‌ ಮಾಡ್ತಿದ್ದಂತೆಯೇ  ಹರೀಶ್‌ ಮೆಹ್ತಾ ಏಕಾಏಕಿ ಕುಸಿದು ಬಿದ್ದರು. ಆದರೆ ಪ್ರೇಕ್ಷಕರು ಮಾತ್ರ ಇದು ಸ್ಕಿಟ್‌ ಭಾಗವೆಂದು ಭಾವಿಸಿ ಕೂಡಲೇ ಯಾರೂ ರಕ್ಷಣೆಗೆ ಬರಲಿಲ್ಲ. ಆದರೆ ಕೆಲಹೊತ್ತಾದರೂ ಮೆಹ್ತಾ ಅವರು ಎದ್ದೇಳಲೇ ಇಲ್ಲ. ಇದರಿಂದ ಆತಂಕಗೊಂಡ ಜನ ತಕ್ಷಣವೇ ಕಾರ್ಯಪ್ರವೃತ್ತರಾದರು.

    ಕೂಡಲೇ ಸ್ಥಳೀಯರು ಮೆಹ್ತಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಅವರಿಗೆ ಹೃದಯಾಘಾತವಾಗಿರುವುದಾಗಿ ವೈದರು ಹೇಳಿದ್ದಾರೆ. ಹರೀಶ್‌ ಮೆಹ್ತಾ ಅವರು, ಕಳೆದ 25 ವರ್ಷಗಳಿಂದ ಹಲವಾರು ರಾಮಲೀಲಾ ಸ್ಕಿಟ್‌ಗಳಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

    ಇತ್ತ ನಿನ್ನೆ ಅಯೋಧ್ಯೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದ 65 ವರ್ಷದ ವ್ಯಕ್ತಿಯನ್ನು ಇಂಡಿಯನ್ ಏರ್ ಫೋರ್ಸ್ (IAF) ತಂಡವು ರಕ್ಷಿಸಿದೆ.

  • ಮೊದಲ ಬಾರಿ ಮತದಾನ ಮಾಡಿ ಸಂದೇಶ ರವಾನಿಸಿದ್ರು ಹನುಮಂತ!

    ಮೊದಲ ಬಾರಿ ಮತದಾನ ಮಾಡಿ ಸಂದೇಶ ರವಾನಿಸಿದ್ರು ಹನುಮಂತ!

    ಹಾವೇರಿ: ಸರಿಗಮಪ ಮೂಲಕ ಮನೆಮತಾದ ಕುರಿಗಾಹಿ ಹನುಮಂತ ಸದೃಢ ದೇಶದ ನಿರ್ಮಾಣಕ್ಕಾಗಿ ತಮ್ಮ ಮೊದಲ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

    ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ನೀವು ಕೂಡ ತಪ್ಪದೇ ಮತದಾನ ಮಾಡಿ. ಮತದಾನ ನಿಮ್ಮ ಹಕ್ಕಾಗಿದ್ದು, ನೀವೇ ಮತ ಚಲಾಯಿಸಿ. ಅಲ್ಲದೆ ಸೂಕ್ತವಾದ ಜನಪ್ರತಿನಿಧಿ ಆಯ್ಕೆ ಮಾಡಿ ಎಂದು ಇದೇ ವೇಳೆ ಜನರಿಗೆ ಸಂದೇಶ ರವಾನಿಸಿದ್ರು.


    ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಮತಗಟ್ಟೆ ನಂ.116 ರಲ್ಲಿ ಸಿಂಗರ್ ಹನುಮಂತ ಲಮಾಣಿ ತಮ್ಮ ಮತ ಚಲಾಯಿಸಿದ್ದಾರೆ. ಹನುಮಂತ ಹಾವೇರಿ ಎಲೆಕ್ಷನ್ ಐಕಾನ್ ಆಗಿದ್ದಾರೆ.

    ಕರ್ನಾಟಕ ಸೇರಿದಂತೆ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈಗಾಗಲೇ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಮಾಡುವುದು ನಮ್ಮ ಜವಾಬ್ದಾರಿ. ತಪ್ಪದೇ ಮತ ಹಾಕಿ. ದೇಶದ ಭವಿಷ್ಯಕ್ಕಾಗಿ ನಿಮ್ಮ ಹಕ್ಕು ಚಲಾಯಿಸಿ.

  • ಒಂದೇ ಒಂದು ಚಾನ್ಸ್ ಕೊಡಿ – ಹನುಮಂತ ಅಭಿಮಾನಿ ಮನವಿ

    ಒಂದೇ ಒಂದು ಚಾನ್ಸ್ ಕೊಡಿ – ಹನುಮಂತ ಅಭಿಮಾನಿ ಮನವಿ

    ಬೆಂಗಳೂರು: ಸರಿಗಮಪದ ಹನುಮಂತ ಈಗ ಎಲ್ಲರ ಮನೆ ಮಾತಾಗಿದ್ದಾರೆ. ಅವರ ಮುಗ್ಧತೆ ಹಾಗೂ ಹಾಡುಗಾರಿಕೆಗೆ ಕರ್ನಾಟಕವೇ ಇಷ್ಟ ಪಡಲು ಶುರು ಮಾಡಿದೆ. ಇದೀಗ ಹನುಮಂತನ ಫ್ಯಾನ್ ವಿಶಿಷ್ಟವಾದ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ ರುದ್ರಪ್ಪ ಗಾರ್ಡನ್ ಗಲ್ಲಿಯೊಂದರಲ್ಲಿ ‘ಗ್ರೇಟ್ ಲುಕ್ಸ್’ ಎಂಬ ಸಣ್ಣ ಸಲೂನ್ ಶಾಪ್ ಇಟ್ಟುಕೊಂಡಿರುವ ಸಿರಂಜೀವಿ ಎಂಬವರೇ ಹುನುಮಂತ ಅವರ ಅಭಿಮಾನಿ. ಹನುಮಂತರ ಹಾಡುಗಳು ನಮ್ಮ ಮನೆಯ ಎಲ್ಲ ಸದಸ್ಯರಿಗೆ ತುಂಬಾನೇ ಇಷ್ಟ. ಹಳ್ಳಿಗಾಡಿನಿಂದ ಬಂದು ಈ ಮಟ್ಟಕ್ಕೆ ಸಾಧನೆ ಮಾಡಿರೋದು ನಮ್ಮಲ್ಲರಿಗೂ ಸ್ಪೂರ್ತಿ. ನಾನು ಹನುಮಂತಪ್ಪನಿಗೆ ಅಭಿಮಾನಿಯಾಗಿ ನನ್ನ ಸಲೂನ್ ನಲ್ಲಿ ಅವರಿಗೆ ಒಂದು ಮೇಕ್ ಓವರ್ ನೀಡಬೇಕೆಂಬುವುದು ನನ್ನ ಆಸೆ ಎಂದು ಸಿರಂಜೀವಿ ಹೇಳುತ್ತಾರೆ.

    ಈ ಸಿರಂಜೀವಿ ತಂದೆ ಸೆಲೂನ್ ಅಲ್ಲಿ ಕೆಲಸ ಮಾಡ್ತಿದ್ರೂ ಈತ ಈ ಕೆಲಸ ಕಲಿತಿರಲಿಲ್ಲ. ಬೇರೆ ಬೇರೆ ಕೆಲಸಗಳನ್ನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಒಮ್ಮೆ ಅಪಘಾತದಲ್ಲಿ ಎರಡೂ ಕೈ ಪ್ರಾಕ್ಚರ್ ಆಗಿದ್ದರಿಂದ ಅನಿವಾರ್ಯವಾಗಿ ಈ ಕೆಲಸ ಕಲಿಬೇಕಾಯ್ತು. ಹಿರಿಯರು ಮಾಡುತ್ತಿದ್ದ ಕೆಲಸವೇ ನನ್ನ ಕೈ ಹಿಡಿದಿತ್ತು. ಕುರಿ ಮೇಯಿಸುತ್ತಿದ್ದ ನಮ್ಮ ಹನುಮಂತ ಈ ಮಟ್ಟಿನ ಸಾಧನೆ ಮಾಡಿರೋದು ನಮ್ಮೆಲ್ಲರಿಗೂ ಮಾದರಿ. ಆದ್ದರಿಂದ ಅವರಿಗೆ ಒಂದು ಸಣ್ಣ ಮೇಕ್ ಓವರ್ ಮಾಡೋ ಆಸೆ ಎಂದು ಸಿರಂಜೀವಿ ಮನವಿ ಮಾಡಿಕೊಂಡಿದ್ದಾರೆ.

  • ಹುಬ್ಬಳ್ಳಿಯಲ್ಲಿ ಜೂನಿಯರ್ ಹನುಮಂತ

    ಹುಬ್ಬಳ್ಳಿಯಲ್ಲಿ ಜೂನಿಯರ್ ಹನುಮಂತ

    ಧಾರವಾಡ/ಹುಬ್ಬಳ್ಳಿ: ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತ ಈಗ ಫುಲ್ ಫೇಮ್ ಆಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದರೆ ಇವರು ಎಲ್ಲಿ ಹೋದ್ರೂ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳ್ತಿದ್ದಾರೆ. ಈ ಸಿಂಗರ್ ಹನುಮಂತನ ಖ್ಯಾತಿ ಇಲ್ಲೊಬ್ಬ ಯುವಕನಿಗೆ ತಲೆ ನೋವು ತಂದೊಡ್ಡಿದೆ.

    ಹುಬ್ಬಳ್ಳಿ ತಾಲೂಕಿನ ಕಟ್ನೂರ್ ಗ್ರಾಮದ ನಿವಾಸಿ ಪ್ರಕಾಶ್ ಅಂಗಡಿ ಎಂಬ ಯುವಕ ನೋಡೋದಕ್ಕೆ ಹನುಮಂತನನ್ನ ಹೋಲುತ್ತಾರೆ. ಪ್ರಕಾಶ್ ಎಲ್ಲೇ ಹೋದರು ಜನರು ಹನುಮಂತ ಎಂದು ಸೆಲ್ಫಿ ತೆಗೆದುಕೊಳ್ಳಲು ಮುಗಿದುಬೀಳುತ್ತಾರೆ. ಕೊನೆಗೆ ನಾನು ಹನುಮಂತ ಅಲ್ಲ ಎಂದು ಹೇಳಿ ಜನರ ಗುಂಪಿನಿಂದ ಹೊರ ಬರುವಂತಾಗಿದೆ ಎಂದು ಪ್ರಕಾಶ್ ಹೇಳುತ್ತಾರೆ.

    ಕಾಲೇಜಿನಲ್ಲಿ ಸ್ನೇಹಿತರು ಸಹ ಪ್ರಸನ್ನನನ್ನು ಜೂನಿಯರ್ ಹನುಮಂತ ಎಂದೇ ಕರೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಹಾವೇರಿಯ ಸಂತ ಶಿಶುನಾಳ ಜಾತ್ರೆಗೆ ತೆರಳಿದಾಗ ಜನ ಇವರನ್ನೇ ಹನುಮಂತ ಅಂತಾ ತಿಳಿದು ಸೆಲ್ಪಿ ಸೆಲ್ಫಿ ತೆಗೆದುಕೊಂಡಿದ್ದರು. ಗ್ರಾಮದಲ್ಲಿಯೂ ಬಹುತೇಕ ಜನರು ಜೂ.ಹನುಮಂತ ಎಂದು ಕರೆಯಲಾರಂಭಿಸಿದ್ದಾರೆ. ಒಂದು ಕಡೆ ದಿನೇ ದಿನೇ ಹನುಮಂತನ ಖ್ಯಾತಿ ಹೆಚ್ಚಾಗ್ತಿದ್ರೆ, ಇತ್ತ ಪ್ರಸನ್ನಗೆ ಸೆಲ್ಫಿ ಕಾಟವೂ ಜೋರಾಗುತ್ತಿದೆ.

    https://www.youtube.com/watch?v=g_McGuvUxAQ

  • ಮೈ ಮರೆತು ಹಾಡು ಹೇಳ್ತಿದ್ದ ಹನುಮಂತನ ಮೊಬೈಲ್ ಕದ್ದ ಕಳ್ಳರು

    ಮೈ ಮರೆತು ಹಾಡು ಹೇಳ್ತಿದ್ದ ಹನುಮಂತನ ಮೊಬೈಲ್ ಕದ್ದ ಕಳ್ಳರು

    ಹಾವೇರಿ: ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಹನುಮಂತರ ಮೊಬೈಲ್ ಕಳ್ಳತನವಾಗಿದೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಮೊಬೈಲ್ ಕಳ್ಳತನವಾಗಿದೆ.

    ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಪಡೆದ ಬಳಿಕ ಹನುಮಂತರ ಜೀವನವೇ ಬದಲಾಗಿದೆ. ಹನುಮಂತ ರಾಜ್ಯಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರನ್ನು ರಂಜಿಸುತ್ತಾ ಬರುತ್ತಿದ್ದಾರೆ. ಕೇವಲ ಮೊಬೈಲ್ ನಲ್ಲಿ ಹಾಡುಗಳನ್ನು ಕೇಳಿಕೊಂಡು, ಸಂತ ಶಿಶುನಾಳ ಶರೀಫ್ ಅಜ್ಜರನ್ನು ಗುರುವಾಗಿಸಿಕೊಂಡ ಹನುಮಂತ ಸಂಗೀತ ಕಲಿತಿದ್ದರು. ಇದೀಗ ಅದೇ ಶಿಶುನಾಳ ಗ್ರಾಮದಲ್ಲಿ ಹಾಡು ಹೇಳುತ್ತಿದ್ದ ಸಂದರ್ಭದಲ್ಲಿ ಕಳ್ಳರು ಹನುಮಂತ ಅವರ ಮೊಬೈಲ್ ಕದ್ದಿದ್ದಾರೆ.

    ಉಡುಗೊರೆಯ ಮೊಬೈಲ್:
    ರಿಯಾಲಿಟಿ ಶೋದಲ್ಲಿ ಭಾಗಿಯಾಗುವ ಮುನ್ನ ಸಾಧಾರಣ ಮೂಬೈಲ್ ಇಟ್ಟುಕೊಂಡಿದ್ದ ಹನುಮಂತರಿಗೆ ಸಹ ಸ್ಪರ್ಧಿಯಾಗಿದ್ದ ಡಾ.ಅಭಿಷೇಕ್ ಸ್ಮಾರ್ಟ್ ಫೋನ್ ಉಡುಗೊರೆಯಾಗಿ ನೀಡಿದ್ದರು. ಮೊಬೈಲ್ ಕಳ್ಳತನವಾಗಿದ್ದನ್ನ ಅರಿತ ಹನುಮಂತ ವೇದಿಕೆಯಲ್ಲಿ ನನ್ನ ಮೊಬೈಲ್ ನೀಡಿ ಎಂದು ನೆರೆದಿದ್ದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಡಾ.ಅಭಿಷೇಕ್ ನೀಡಿದ್ದ ಮೊಬೈಲ್ ಕಳೆದುಕೊಂಡ ಹನುಮಂತ ದುಃಖದಲ್ಲಿದ್ದರೂ, ಹಾಡು ಹೇಳಿ ಜನರನ್ನು ರಂಜಿಸಿದರು. ಮೊಬೈಲ್ ಬೇಕಾದ್ರೆ ಇಟ್ಟುಕೊಳ್ಳಿ, ಸಿಮ್ ಆದ್ರೂ ಕೊಡಿ ಎಂದು ಹನುಮಂತ ಸಾರ್ವಜನಿರಕಲ್ಲಿ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೈನಲ್ ತಲುಪಿದ ಹನುಮಂತನಿಗೆ ಲತಾ ಹಂಸಲೇಖರಿಂದ ಗಿಫ್ಟ್

    ಫೈನಲ್ ತಲುಪಿದ ಹನುಮಂತನಿಗೆ ಲತಾ ಹಂಸಲೇಖರಿಂದ ಗಿಫ್ಟ್

    ಬೆಂಗಳೂರು: ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಎಂತಲೇ ಖ್ಯಾತಿ ಪಡೆದಿರುವ ಹನುಮಂತ ಅವರು ಸರಿಗಮಪ ಸೀಸನ್ 15ರ ಫೈನಲ್ ಹಂತ ತಲುಪಿದ್ದಾರೆ. ಫೈನಲ್ ಹಂತ ತಲುಪಿದ ಹನುಮಂತ ಅವರಿಗೆ ವಿಶೇಷ ಉಡುಗೊರೆ ಸಿಕ್ಕಿದೆ.

    ಸರಿಗಮಪ ಕಾರ್ಯಕ್ರಮದಲ್ಲಿ ಫೈನಲ್ ಗೆ ಹೋದ ಹನುಮಂತ ಅವರಿಗೆ ಹಾರ್ಮೋನಿಯಂ ಉಡುಗೊರೆ ಸಿಕ್ಕಿದೆ. ಹನುಮಂತ ಅವರು ಸೆಮಿ ಫೈನಲ್ ನಲ್ಲಿ ‘ಜೋಗಿ’ ಸಿನಿಮಾದ ‘ಬೇಡುವೇನು ವರವನ್ನು..’ ಹಾಡನ್ನು ಹಾಡಿದ್ದರು.  ತಮ್ಮ ಗಾಯನ ಪ್ರತಿಭೆ ಮೂಲಕ ಹನುಮಂತ ಅವರು ಸೆಮಿ ಫೈನಲ್ ನಲ್ಲಿಯೇ ಪ್ಲಾಟಿನಮ್ ಟಿಕೆಟ್ ಪಡೆದು ಫೈನಲ್ ಗೆ ಹೋಗಿದ್ದರು.

    ಹನುಮಂತ ಅವರಿಗೆ ನಾದಬ್ರಹ್ಮ ಹಂಸಲೇಖ ಅವರ ಪತ್ನಿ ಲತಾ ಅವರ ಕಡೆಯಿಂದ ಉಡುಗೊರೆಯಾಗಿ ಹಾರ್ಮೋನಿಯಂ ಸಿಕ್ಕಿದೆ. ಕಳೆದ ವಾರದ ಸಂಚಿಕೆಗೆ ಬಂದಿದ್ದ ಲತಾ ಹಂಸಲೇಖ ಅವರು ತಮ್ಮ ಕೈಯಾರೇ ಹನುಮಂತ ಅವರಿಗೆ ಹಾರ್ಮೋನಿಯಂ ನೀಡಿ ಶುಭಾಶಯ ತಿಳಿಸಿದ್ದರು.

    ಲತಾ ಹಂಸಲೇಖ ಅವರು ಈ ಹಿಂದೆ ಅಂದರೆ ಸರಿಗಮಪ ಸೀಸನ್ 14ರ ಅತಿ ಕಿರಿಯ ಸ್ಪರ್ಧಿಯಾಗಿದ್ದ ನೇಹಾಗೆ ಚಿನ್ನದ ಉಂಗುರ ನೀಡಿದ್ದರು. ಈ ಹಿಂದೆ ಹನುಮಂತ ಅವರಿಗೆ ಕಾರ್ಯಕ್ರಮದ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು ಇಯರ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

    ಸರಿಗಮಪ ಕಾರ್ಯಕ್ರಮದ ಅಂತಿಮದಲ್ಲಿ ಕೀರ್ತನ್, ವಿಜೇತ್, ಸಾಸ್ವಿನಿ, ನಿಹಾಲ್, ಋತ್ವಿಕ್ ಹಾಗೂ ಹನುಮಂತ ಒಟ್ಟು ಆರು ಸ್ಪರ್ಧಿಗಳು ಫೈನಲ್ ಹಂತ ತಲುಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಲೆಂಜಿಂಗ್ ಸ್ಟಾರ್ ಚಿತ್ರಕ್ಕೆ ಹನುಮಂತನ ಗಾನಾಭಿಷೇಕ..!

    ಚಾಲೆಂಜಿಂಗ್ ಸ್ಟಾರ್ ಚಿತ್ರಕ್ಕೆ ಹನುಮಂತನ ಗಾನಾಭಿಷೇಕ..!

    ಬೆಂಗಳೂರು: ಕುರಿಗಾಯಿ ಅಂತಾನೇ ಖ್ಯಾತಿ ಪಡೆದಿರುವ ಸರಿಗಮಪ ಕಾರ್ಯಕ್ರಮದ ಸ್ಪರ್ಧಿ ಹನುಮಂತನಿಗೆ ಈಗಾಗಲೇ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಇದರ ಬೆನ್ನಲ್ಲೆ ಮತ್ತೊಂದು ಸಿನಿಮಾದಲ್ಲಿ ಹಾಡುವ ಅವಕಾಶ ದೊರೆತಿದೆ.

    ಹನುಮಂತನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಈ ಮೂಲಕ ಮತ್ತೊಮ್ಮೆ ಹನುಮಂತನಿಗೆ ಅದೃಷ್ಟ ಒಲಿದು ಬಂದಿದೆ. ಈ ಹಿಂದೆ ಸರಿಗಮಪ ವೇದಿಕೆಯಲ್ಲಿಯೇ ಯೋಗರಾಜ್ ಭಟ್ರು ಸಿನಿಮಾದಲ್ಲಿ ಹಾಡುವಂತೆ ಅವಕಾಶ ಕೊಟ್ಟಿದ್ದರು. ಭಟ್ರು ಹಾಡಿಗೆ ಟ್ಯೂನ್ ಮಾಡೋದಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಹೇಳಿದ್ದರು. ಈ ಹಾಡಿಗೆ ಧ್ವನಿಯಾಗಿ ಹನುಮಂತ ಹಾಡಲಿದ್ದಾರೆ. ಹನುಮಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಮುಂದಿನ ಚಿತ್ರದಲ್ಲಿ ಹಾಡುತ್ತಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸರಿಗಮಪ ಕಾರ್ಯಕ್ರಮದಲ್ಲಿ ದಾಖಲೆ ಬರೆದ ಹನುಮಂತ!

    ನಟ ದರ್ಶನ್ ಮುಂದಿನ ಚಿತ್ರ ‘ರಾಬರ್ಟ್’ ಗಾಗಿ ಅರ್ಜುನ್ ಜನ್ಯಾ ಟ್ಯೂನ್ ಮಾಡುತ್ತಿದ್ದಾರೆ. ಈ ಚಿತ್ರದ ಒಂದು ಹಾಡಿಗೆ ಯೋಗರಾಜ್ ಭಟ್ರು ಹಾಡು ಬರೆಯಲಿದ್ದಾರೆ ಎನ್ನಲಾಗುತ್ತಿದೆ. ಇದೇ ಹಾಡನ್ನ ಹನುಮಂತನ ಕೈಯಿಂದಲೇ ಹಾಡಿಸಬೇಕು ಎಂದು ಅರ್ಜುನ್ ಜನ್ಯಾ ತೀರ್ಮಾನ ಮಾಡಿದ್ದಾರಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಯಾಗುತ್ತಿದೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಸರಿಗಮಪ’ ಕಾರ್ಯಕ್ರಮದ ಸ್ಪರ್ಧಿ ಆಗಿರುವ ಕುರಿಗಾಹಿ ಹನುಮಂತ ದಾಖಲೆ ಮಾಡಿದ್ದರು. ಸರಿಗಮಪ ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳಿಗೆ ವಾರಕ್ಕೆ ಇಂತಿಷ್ಟು ಹಣವನ್ನು ಸಂಭಾವನೆಯಾಗಿ ನೀಡುತ್ತಾರೆ. ಅದೇ ರೀತಿ ಹನುಮಂತ ಅವರಿಗೆ 10 ಸಾವಿರ ರೂ.ಯನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಅವರ ಸಂಭಾವನೆ 25 ರಿಂದ 30 ಸಾವಿರಕ್ಕೆ ಏರಿಕೆಯಾಗಿದೆ ಎಂಬ ಸುದ್ದಿ ಕೇಳಿ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅನುಶ್ರೀಗೆ ಕೊಟ್ಟ ಮಾತಿನಂತೆ ನಡೆದ್ಕೊಂಡ ಹನುಮಂತನ ತಾಯಿ

    ಅನುಶ್ರೀಗೆ ಕೊಟ್ಟ ಮಾತಿನಂತೆ ನಡೆದ್ಕೊಂಡ ಹನುಮಂತನ ತಾಯಿ

    ಬೆಂಗಳೂರು: ಸರಿಗಮಪ ಕಾರ್ಯಕ್ರಮದಲ್ಲಿ ಕುರಿಗಾಯಿ ಎಂದೇ ಖ್ಯಾತಿಯಾಗಿರುವ ಹನುಮಂತ ಅವರ ತಾಯಿ ಶೀಲವ್ವ ಅವರು ಕೊನೆಗೂ ನಿರೂಪಕಿ ಅನುಶ್ರೀ ಆಸೆಯನ್ನು ನೆರವೇರಸಿದ್ದು, ಈ ಮೂಲಕ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

    ಈ ಬಗ್ಗೆ ಅನುಶ್ರೀ ತಮ್ಮ ಫೇಸ್‍ಬುಕ್, ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. “ತಮ್ಮ ಹನುಮಂತ ಕೊಟ್ಟ ಕೊಡಿಗೆ, ಅವರ ತಾಯಿಯ ಉಡುಗೆ” ಎಂದು ಬರೆದು ಕೊಂಡಿದ್ದು, ಅವರ ತಾಯಿ ಕೊಟ್ಟ ಉಡುಪನ್ನು ತೊಟ್ಟು ಹನುಮಂತ ಮತ್ತು ತಾಯಿ ಶೀಲವ್ವ ಜೊತೆ ಸೆಲ್ಫಿ ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ಇಂದು ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮ ಪ್ರೋಮೋವನ್ನು ವಾಹಿನಿ ತನ್ನ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದೆ. ಅದರಲ್ಲಿ ಮೊದಲಿಗೆ ಹನುಮಂತ್ ದಿವಂಗತ ಡಾ. ರಾಜ್‍ಕುಮಾರ್ ಅಭಿನಯದ ‘ಸಂಪತ್ತಿಗೆ ಸವಾಲ್, ಸಿನಿಮಾದ ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಹಾಡನ್ನು ಹಾಡಿದ್ದಾರೆ. ಆಗ ಅನುಶ್ರೀ ಹನುಮಂತನ ತಾಯಿ ಕೊಟ್ಟಿರುವ ಉಡುಗೆ ತೊಟ್ಟು ವೇದಿಕೆಯ ಮೇಲೆ ಎಂಟ್ರಿಕೊಟ್ಟಿದ್ದಾರೆ. ಅನುಶ್ರೀ ಅವರನ್ನು ಆ ಉಡುಪಿನಲ್ಲಿ ನೋಡಿ ಸಂಗೀತ ನಿರ್ದೇಶಕ ಹಂಸಲೇಖ ಅವರು, ಈ ಭೂಷಣ ಧರಿಸಿರುವುದರಿಂದ ನಮಗೆ ಹೆಮ್ಮೆ, ಗೌರವವಾಗಿದೆ ಎಂದು ಖುಷಿಯಿಂದ ಹೇಳಿದ್ದಾರೆ. ಇದನ್ನೂ ಓದಿ: ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    https://www.instagram.com/p/BsQCrpuhQN4/

    ಅನುಶ್ರೀಗೆ ನೀಡಿರುವ ಉಡುಗೊರೆಯಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ ಅವರು ಧರಿಸಿದ್ದ ಉಡುಪಿನಲ್ಲಿದ್ದ ಮುತ್ತು-ಹವಳ, ಮಣಿ, ಕನ್ನಡಿ ಎಲ್ಲವನ್ನು ಹನುಮಂತನ ತಾಯಿ ಶೀಲವ್ವ ಅವರು ಸ್ವತಃ ತಮ್ಮ ಕೈಯಾರೆ ಪೋಣಿಸಿದ್ದಾರೆ. ಶೀಲವ್ವ ಪ್ರೀತಿಯಿಂದ ಕೊಟ್ಟಂತಹ ಉಡುಗೆಯಿಂದ ಅನುಶ್ರೀ ಸಂತಸ ಪಟ್ಟಿದ್ದು, ಪ್ರತಿಯಾಗಿ ವೇದಿಕೆಯ ಮೇಲೆಯೇ ಶೀಲವ್ವ ಅವರ ಕೆನ್ನೆಗೆ ಒಂದು ಮುತ್ತು ಕೊಟ್ಟಿದ್ದಾರೆ.

    ಈ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹನುಮಂತನ ತಾಯಿ ಶೀಲವ್ವ ಅವರನ್ನು ವೇದಿಕೆಯ ಮೇಲೆ ಕರೆಸಿದ್ದರು. ಈ ವೇಳೆ ನಿರೂಪಕಿ ಅನುಶ್ರೀ, ಶೀಲವ್ವ ಧರಿಸಿದ್ದ ಉಡುಗೆಯನ್ನು ತನಗೂ ಕೊಡಿಸುವಂತೆ ಕೇಳಿಕೊಂಡಿದ್ದರು. ಅಂದರಂತೆಯೇ ಅವರ ತಾಯಿ ಅನುಶ್ರೀಗಾಗಿ ಲಂಬಾಣಿ ಶೈಲಿಯ ಉಡುಗೆಯನ್ನು ತಂದು ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv