Tag: hanumanta

  • ಕುರಿಗಾಹಿ ಹನುಮಂತಗೆ ಮದುವೆ ಮಾಡಿಸೋಕೆ ರೆಡಿಯಾದ ಶೋ

    ಕುರಿಗಾಹಿ ಹನುಮಂತಗೆ ಮದುವೆ ಮಾಡಿಸೋಕೆ ರೆಡಿಯಾದ ಶೋ

    ವರು ಒಟ್ಟು 10 ಮಂದಿ ಕಿಲಾಡಿಗಳು. ಅದ್ರಲ್ಲೊಬ್ಬ ಸಿಂಗರ್. ಇನ್ನೊಬ್ಬ ಡಾನ್ಸರ್. ಮತ್ತೊಬ್ಬ ಹಾಸ್ಯಕ್ಕೆ ಪಂಟರ್. ಹಳ್ಳಿ ಹೈದರಿಗೆ ಮಾತೇ ಬಂಡವಾಳ. ಮಾತಿನಿಂದಲೇ ಸುರಸುಂದರಿಯರನ್ನ ಪಟಾಯಿಸೋದ್ರಲ್ಲಿ ಯಶಸ್ವಿಯಾಗ್ತಾರಾ? ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ಕೊಡ್ತಿರುವ ಹೊಸ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಗ್ರ್ಯಾಂಡ್ ಓಪನಿಂಗ್ ಸಖತ್ತಾಗಿತ್ತು.

    ಮಾತಲ್ಲೇ ಮನೆಕಟ್ಟೋ 10 ಹುಡುಗರು. ಮನಸ್ಸು ತುಂಬಾ ದೊಡ್ಡ ದೊಡ್ಡ ಕನಸು ಕಟ್ಟಿಕೊಂಡಿರುವ 10  ಹುಡುಗೀರು. ಈ ಹತ್ತೂ ಹುಡ್ಗೀರದ್ದು ಬಣ್ಣಬಣ್ಣದ ಕನಸು. ಆದರೆ ಈ ಹತ್ತು ಹುಡುಗರದ್ದು ಹುಡುಗಿಯರ ಮನ ಒಲಿಸೋಕೆ ಸರ್ಕಸ್ಸು. ಸೂಟು ಬೂಟು ಹಾಕೊಳ್ಳೋಕೆ ಬರಲ್ಲ. ಹೈಫೈ ಕಾರಂತೂ ಇಲ್ಲವೇ ಇಲ್ಲ. ಇಂಗ್ಲೀಷು ಬರಲ್ಲ. ಕನ್ನಡ ಬಿಟ್ಟು ನಾವಿಲ್ಲ ಎನ್ನುವ ಹಳ್ಳಿ ಹೈಕಳು.

    ಜೀ ಕನ್ನಡ ವಾಹಿನಿಯ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಗೆ ಚಾಲನೆ ಸಿಕ್ಕಿದೆ. ನಿರ್ಣಾಯಕರ ಸ್ಥಾನದಲ್ಲಿ ಕನಸುಗಾರ ರವಿಚಂದ್ರನ್ ಹಾಗೂ ಡಿಂಪಲ್‌ ಕ್ವೀನ್ ರಚಿತಾ ಕುಳಿತಿದ್ದಾರೆ. ದಶ ಹುಡುಗರು ದಶ ಹುಡುಗಿಯರು ಈ ರಿಯಾಲಿಟಿ ಶೋ ಮುಖ್ಯ ಸ್ಪರ್ಧಿಗಳು. ತಮ್ಮ ಟ್ಯಾಲೆಂಟ್‌ನಿಂದ ಈಗಾಗ್ಲೇ ಗುರುತಿಸಿಕೊಂಡಿದ್ದಾರೆ ಕಿಲಾಡಿಗಳು. ಆದರೆ ಇವರಿಗೆ ಹುಡ್ಗೀರ್ ಮಾತ್ರಾ ಬೀಳ್ತಿಲ್ಲ. ಯಾಕಂದ್ರೆ ಇವ್ರೆಲ್ಲಾ ಹುಡುಗರ ಬಗ್ಗೆ ದೊಡ್ಡ ದೊಡ್ಡ ಕನಸು ಹೊತ್ತ ಅಲ್ಟ್ರಾ ಮಾಡರ್ನ್ ಹುಡ್ಗೀರು.

    ವಿವಿಧ ಧಾರಾವಾಹಿಗಳಲ್ಲಿ ನಟನೆಯಿಂದ ಹೆಸರು ಮಾಡಿರುವ ನಟಿಯರೇ ಭರ್ಜರಿ ಬ್ಯಾಚುಲರ್ಸ್‍ ಗಳಿಗೆ ಸ್ವಯಂ ವರಕ್ಕೆ ನಿಂತಿರುವ ಸುಂದರಾಂಗಿಯರು. ಅಂದಚಂದ, ನೃತ್ಯ, ಹಾಡು ಓದು ಬರಹದಲ್ಲಿ ಮುಂದಿರುವ ಈ ಸುಂದರಿಯರಿಗೆ ತಕ್ಕಂಥ ಜೋಡಿ ಈ ದಶ ಕಿಲಾಡಿಗಳಲ್ಲಿ ಯಾರಾಗ್ತಾರೆ? ಎಲ್ಲರಿಗೂ ಕುತೂಹಲ ಇದೆ. ಒಬ್ಬೊಬ್ಬರಾಗೇ ಬ್ಯಾಚುಲರ್‌ಗಳು ಅಖಾಡಕ್ಕಿಳಿದು ಸುಂದರಿಯರನ್ನ ಒಲಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ.

    ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಭಾರೀ ಮಿಂಚಿರುವ ಪ್ರತಿಭೆಗಳು ತಮ್ಮ ನಟನೆ, ಮಾತಿನ ಚತುರತೆಯಿಂದ ಹುಡ್ಗೀರ ಮನ ಗೆಲ್ಲಬೇಕಿಗೆ. ಯಾಕಂದ್ರೆ ಲುಕ್ ಇಲ್ಲ. ಆದರೆ ಲಕ್‌ನಿಂದ ಯಾವ ಸುಂದರಿಯರೂ ಮಾತಿಗೆ ಕರುಗುತ್ತಿಲ್ಲ. ಹೀಗಾಗೇ ರಿಯಾಲಿಟಿ ಶೋ ಆರಂಭದಲ್ಲೇ ಹುಡ್ಗೀರ ಮನ ಕದಿಯಲು ಭರ್ಜರಿ ಸರ್ಕಸ್ ಮಾಡ್ತಿದ್ದಾರೆ ಭರ್ಜರಿ ಬ್ಯಾಚುಲರ್ಸ್.

    ಭರ್ಜರಿ ಬ್ಯಾಚುಲರ್ಸ್ ಪಟ್ಟಿಯಲ್ಲಿ ವಿಧ ವಿಧದ ಪ್ರತಿಭೆಗಳಿವೆ. ಮುಗ್ಧತೆಯಿಂದ ಹೆಸರು ಮಾಡಿರುವ ಕುರಿಗಾಹಿ ಸಿಂಗರ್ ಹನುಮಂತ. ಹುಡ್ಗೀರ್ ಕಂಡ್ರೆ ನಾಚಿಕೊಳ್ತಾನೆ. ಈ ಸ್ಪರ್ಧೆಯಲ್ಲಿ ಹೇಗೆ ಕಾಣಿಸ್ಕೊಳ್ತಾನೆ ಅನ್ನೋದು ಕುತೂಹಲ. ಇನ್ನು ಹುಡ್ಗೀರ ಪಾತ್ರದಲ್ಲೇ ಮಿಂಚುವ ರಾಘವೇಂದ್ರಾಗೆ ಹುಡ್ಗೀರ ಸ್ನೇಹವಷ್ಟೇ ಅಲ್ಲದೇ ಪ್ರೀತಿಯೂ ಸಿಗಬೇಕಿದೆ. ಹೇಗೆ ಯಶಸ್ವಿಯಾಗ್ತಾನೆ ಅನ್ನೋದು ನಿರೀಕ್ಷೆ.

    ರಾಕೇಶ್, ಮನೋಹರ್, ಸೂರಜ್ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಸಿಕ್ಕಿರುವ ಜೀ ಪ್ರತಿಭೆಗಳು. ಆದರೆ ನಗಿಸುವಷ್ಟು ಸುಲಭವಾ ಹುಡ್ಗೀರ ಮನ ಗೆಲ್ಲೋದು? ಅದನ್ನ ಸ್ವತಃ ಟ್ರೈ ಮಾಡೋಕೆ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಕಾಣಿಸ್ಕೊಂಡಿದ್ದಾರೆ. ಈ ಕಿಲಾಡಿಗಳಿಗೆ ಕಾಳ್ ಹಾಕೋದು ಸುಲಭ. ಆದರೆ ಆ ಕಾಳನ್ನ ಆರಿಸಿಕೊಳ್ಳೋಕೆ ಇಲ್ಲಿ ಹುಡ್ಗೀರಂತೂ ಸಿದ್ಧವಿಲ್ಲ.

    ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರೋ ಹಲವು ಪ್ರತಿಭೆಗಳು ಒಂದೆಡೆ ಸೇಕ್ಕೊಂಡು ಮಸ್ತ್ ಮನರಂಜನೆ ಕೊಡಲು ಬಂದಿದ್ದಾರೆ. ಆದರೆ ಹುಡ್ಗೀರ್ ಮಾತ್ರಾ ಪ್ರತಿಭೆ ಜೊತೆ ಪೈಲ್ವಾನ್ ಗುಣದ ಹುಡುಗ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ಭರ್ಜರಿ ಬ್ಯಾಚುಲರ್‌ಗಳಿಗೆ ಯಾವ ಯಾವ ಹುಡ್ಗೀರು ಸೆಟ್ ಆಗ್ತಾರೋ ನೋಡ್ಬೇಕಿದೆ.

  • ಹನುಮನಿಂದ ಪ್ರಸಾದ ಪಡೆಯುವ ಅಲಾಯಿ ದೇವರು – ಕೊಪ್ಪಳದಲ್ಲಿ ವಿಶೇಷ ಆಚರಣೆ

    ಹನುಮನಿಂದ ಪ್ರಸಾದ ಪಡೆಯುವ ಅಲಾಯಿ ದೇವರು – ಕೊಪ್ಪಳದಲ್ಲಿ ವಿಶೇಷ ಆಚರಣೆ

    ಕೊಪ್ಪಳ: ಮೊಹರಂ ಹಿಂದೂ ಮುಸ್ಲಿಮರು ಸೇರಿ ಆಚರಿಸುವ ಏಕೈಕ ಹಬ್ಬವಾಗಿದ್ದು, ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮದಲ್ಲಿ ಅತ್ಯಂತ ವಿಭಿನ್ನವಾಗಿ ಭಾವೈಕ್ಯತೆಯಿಂದ ಮೊಹರಂ ಆಚರಣೆ ಮಾಡಲಾಗುತ್ತಿದೆ.

    ಕೊಪ್ಪಳ ತಾಲೂಕಿನ ಮತ್ತೂರು ಗ್ರಾಮದಲ್ಲಿ ಹಿಂದೂಗಳ ಮನೆಯಲ್ಲೇ ಅಲಾಯಿ ದೇವರಿಗೆ ಪೂಜೆ ಮಾಡುತ್ತಿದ್ದು, ಈ ಗ್ರಾಮದಲ್ಲಿ ದೇವರನ್ನು ಅಂದಪ್ಪ ಬಡಿಗೇರ ಎಂಬುವರ ಮನೆಗೆ ಗ್ರಾಮಸ್ಥರು ಕರೆ ತಂದು ಸ್ಥಾಪನೆ ಮಾಡುತ್ತಾರೆ. ಮೊಹರಂನ 7 ದಿನದ ಸವಾರಿ ಭಾಗವಾಗಿ ಅಂದಪ್ಪ ಮನೆಗೆ ಬರುವ ದೇವರಿಗೆ ಭಕ್ತರು ಇಡೀ ದಿನ ಅಲ್ಲೇ ಪೂಜೆ ಮಾಡುತ್ತಾರೆ. ನಂತರ ಅಂದಪ್ಪ ಕುಟುಂಬ ಅನ್ನ ಸಂತರ್ಪಣೆ ಮಾಡುತ್ತಾರೆ. ಇದನ್ನೂ ಓದಿ: ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ

    ಮತ್ತೊಂದು ಕಡೆ ಅಲಾಯಿ ದೇವರು ಹನುಮಂತನಿಂದ ಪ್ರಸಾದ ಪಡೆಯುತ್ತದೆ. ಕೊಪ್ಪಳ ತಾಲೂಕಿನ ಕವಲೂರಿನಲ್ಲಿ ಈ ಆಚರಣೆ ನಡೆಯುತ್ತಿದೆ. ಶನಿವಾರ 7 ದಿನದ ಸವಾರಿಯಂದು ಹನುಮಂತ ದೇವರ ಗುಡಿಗೆ ಅಲಾಯಿ ದೇವರು ಭೇಟಿ ನೀಡುತ್ತಾನೆ. ಹನುಮಂತನಿಂದ ಪ್ರಸಾದ ಕೇಳುವ ಅಲಾಯಿ ದೇವರು, ಹನುಮಂತ ದೇವರ ಮುಡಿಯಲ್ಲಿದ್ದ ಹೂವಿನ ಪ್ರಸಾದ ಪಡೆಯುತ್ತಾನೆ. ಈ ದೃಶ್ಯ ವೈರಲ್ ಆಗಿದೆ. ಒಟ್ಟಾರೆ ಮೊಹರಂ ಹಬ್ಬ ಸೂಫಿ ಶರಣರ ನಾಡಿನಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಸಂಭವ – ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • ಕಲಬುರಗಿಯಲ್ಲಿ ಸಿಕ್ತು ಹನುಮಂತನಿಗೆ ಭರ್ಜರಿ ಸ್ವಾಗತ

    ಕಲಬುರಗಿಯಲ್ಲಿ ಸಿಕ್ತು ಹನುಮಂತನಿಗೆ ಭರ್ಜರಿ ಸ್ವಾಗತ

    ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಇಂದು ಸಂತ ಸೇವಾಲಾಲ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸರಿಗಮಪ ಸೀಸನ್ 15ರ ರನ್ನರಪ್ ಹನುಮಂತ ಹಾಗೂ ಸೀಸನ್ 13ರ ಚಾಂಪಿಯನ್ ಸುನಿಲ್ ಗುಜಗುಂಡ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು.

    ಈ ಕಾರ್ಯಕ್ರಮಕ್ಕೆ ಹನುಮಂತ ಅವರೇ ಕೇಂದ್ರ ಬಿಂದುವಾಗಿದ್ದರು. ಹನುಮಂತ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಯಡ್ರಾಮಿ ಪಟ್ಟಣದ ಪ್ರಮುಖ ವೃತಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಗೌರವಿಸಿದರು. ಈ ಸಂದರ್ಭದಲ್ಲಿ ಸರಿಗಮಪ ಸೀಸನ್ 13ರಲ್ಲಿ ಚಾಂಪಿಯನ್ ಆಗಿದ್ದ ಸುನೀಲ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ವೇದಿಕೆಗೆ ಬರುತ್ತಿದ್ದಂತೆ ಮೈಕ್ ಹಿಡಿದ ಹನುಮಂತ ಅವರು ಹಾಡು ಹಾಡಿ ಜನರ ಮನಸ್ಸು ಗೆದ್ದಿದ್ದಾರೆ. ಇನ್ನು ಹನುಮಂತ ಸಹ ಬಂಜಾರಾ ಸಮುದಾಯದ ಜನಾಂಗಕ್ಕೆ ಸೇರಿದ್ದು, ಲಂಬಾಣಿ ಭಾಷೆಯಲ್ಲಿ ಸಹ ಹಾಡು ಹಾಡಿ ಜನರನ್ನು ರಂಜಿಸಿದ್ದಾರೆ. ಅದಾದ ಬಳಿಕ ಸುನೀಲ್ ಹನುಮಂತ ಅವರಿಗೆ ಸಾಥ್ ನೀಡಿದ್ದು, ಇಬ್ಬರ ಹಾಡಿಗೆ ನೆರೆದ ಜನ ವಿಸಿಲ್ ಹಾಕಿ ಭರಪೂರ ಎಂಜಾಯ್ ಮಾಡಿದ್ದಾರೆ.

    ಬಂಜಾರಾ ಸಮುದಾಯದ ವತಿಯಿಂದ ಹನುಮಂತ ಹಾಗು ಸುನೀಲ್ ಅವರನ್ನು ಶಾಲು ಹೊದಿಸಿ ಸಮುದಾಯದ ಮುಖಂಡರು ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೂರ್ತಿ ಪತ್ತೆ- ಹನುಮಂತನನ್ನು ನೋಡಲು ಮುಗಿಬಿದ್ದ ಜನತೆ

    ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೂರ್ತಿ ಪತ್ತೆ- ಹನುಮಂತನನ್ನು ನೋಡಲು ಮುಗಿಬಿದ್ದ ಜನತೆ

    ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿರೋ ಗಾಳಿ ಆಂಜನೇಯ ದೇವಸ್ಥಾನದ ಬಳಿ ಹನುಮಂತನ ವಿಗ್ರಹವೊಂದು ಪತ್ತೆಯಾಗಿದ್ದು, ಇದೀಗ ಆ ಮೂರ್ತಿಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

    ರಾಜಕಾಲುವೆ ಸ್ವಚ್ಛತೆಯ ವೇಳೆ ಈ ಮೂರ್ತಿ ಪತ್ತೆಯಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ವಿಗ್ರಹ ಕಾಣಿಸಿಕೊಂಡಿದ್ದು, ಕೂಡಲೇ ರಾಜಕಾಲುವೆ ಸ್ವಚ್ಛತೆ ಸಿಬ್ಬಂದಿ ಅದನ್ನು ರಸ್ತೆಬದಿಯಿಟ್ಟಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿ ಪೂಜೆ ಸಲ್ಲಿಸಿದ್ದಾರೆ.


    ಬಿಬಿಎಂಪಿಯವರು ಮೋರಿ ಕ್ಲೀನ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಗ್ರಹ ಸಿಕ್ಕಿದೆ. ಬಳಿಕ ಅವರು ಆ ಮೂರ್ತಿಯನ್ನು ತೊಳೆದು ರಸ್ತೆ ಬದಿಯಲ್ಲಿಟ್ಟಿದ್ದಾರೆ. ನಂತರ ನಾವು ಅದಕ್ಕೆ ಪೂಜೆ ಸಲ್ಲಿಸಿದ್ದೇವೆ. ಹೀಗಾಗಿ ಇಲ್ಲಿ ದೇವಸ್ಥಾನ ಕಟ್ಟಬೇಕು. ಇಲ್ಲವೆಂದಲ್ಲಿ ನಾವೆಲ್ಲಾ ಸೇರಿ ಚಿಕ್ಕದಾದ ಒಂದು ದೇವಸ್ಥಾನವನ್ನು ಕಟ್ಟಿಯೇ ಕಟ್ಟುತ್ತೇವೆ ಅಂತ ಸ್ಥಳೀಯ ನಿವಾಸಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಶನಿವಾರವೇ ಮೂರ್ತಿ ಸಿಕ್ಕಿದ ಕಾರಣ ಇಲ್ಲಿ ದೇವಸ್ಥಾನವನ್ನು ಕಟ್ಟಬೇಕು. ಯಾಕಂದ್ರೆ ಈ ಪ್ರದೇಶದಲ್ಲಿ ಯಾವುದೇ ದೇವಸ್ಥಾನವಿಲ್ಲ. ಹೀಗಾಗಿ ಇಲ್ಲೊಂದು ದೇವಸ್ಥಾನವನ್ನು ಕಟ್ಟಿದ್ರೆ ಎಲ್ಲರಿಗೂ ಅನುಕೂಲವಾಗುತ್ತದೆ ಅಂತ ಮಹಿಳೆಯೊಬ್ಬರು ಶಾಸಕರು ಹಾಗೂ ಸ್ಥಳೀಯ ರಾಜಕೀಯ ಮುಖಂಡರಲ್ಲಿ ಆಗ್ರಹಿಸಿದ್ದಾರೆ. ಶನಿವಾರ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ್ರೆ ಶನಿ ಗ್ರಹದ ದೋಷಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv