ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Result 2023) ಯಲ್ಲಿ ಕಾಂಗ್ರೆಸ್ ಜಯಬೇರಿ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‍ನಿಂದ ಹನುಮಾನ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಜನತೆಯ ಒಳಿಗಾಗಿ ಪ್ಯಾಲೇಸ್ ರಸ್ತೆಯ ಬಾಲಬೃಹಿ ಬಳಿ ಇರುವ ಹನುಮಾನ್ (Hanuman) ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಜೈ ಭಜರಂಗ ಬಲಿ ಅಂತಾ ಘೋಷಣೆ ಕೂಗುತ್ತಾ ಕಾಂಗ್ರೆಸ್ (Congress) ಗೆ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋ ಮಾಡಿದ್ದ ಮೈಸೂರಿನ ರಸ್ತೆಗೆ ಸಗಣಿ ನೀರು ಹಾಕಿ ಸ್ವಚ್ಛ
ದೇವಸ್ಥಾನದ ಮುಂಭಾಗ ಗ್ಯಾಸ್ ಸಿಲಿಂಡರ್ (Gas Cylinder) ಜೋಡಿಸಿ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಗ್ಯಾಸ್ ಸಿಲಿಂಡರ್ ಗೆ ಪೂಜೆ ಮಾಡಿದ್ದಾರೆ. ಗ್ಯಾಸ್ ರೇಟ್ ಜಾಸ್ತಿ ವಿರುದ್ಧ ಹೋರಾಟ ಮಾಡ್ತಾನೆ ಬರ್ತಿರೋ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಗೆದ್ದ ಮೇಲೂ ಬಿಡದೇ ಗ್ಯಾಸ್ ಸಿಲಿಂಡರ್ ಗೆ ಪೂಜೆ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಉರುಳು ಸೇವೆಯನ್ನೂ ಮಾಡಿದ್ದಾರೆ.
ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್, ಸ್ಪಷ್ಟ ಬಹುಮತ ಬಂದ ಹಿನ್ನಲೆ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಪ್ರಧಾನಿ ಮೋದಿ ಭಜರಂಗಬಲಿ ಘೋಷಣೆ ಕೂಗಿದ್ರು. ನಾವು ರಾಜಕೀಯಕ್ಕೆ ದೇವರ ಹೆಸರು ಬಳಸಲ್ಲ. ನಾವು ದೇವರ ಹೆಸರು ದುರ್ಬಳಕೆ ಮಾಡಲ್ಲ. ಚುನಾವಣೆಗೆ ಮೊದಲೂ ನೆನೆಸಿಕೊಂಡಿದ್ದೆವು, ಈಗಲೂ ನೆನೆಸಿಕೊಳ್ತಿದ್ದೇವೆ. ಬಿಜೆಪಿ ತರಹ ಮರೆಯುವವರು ನಾವಲ್ಲ ಎಂದು ತಿಳಿಸಿದ್ದಾರೆ.
ಭೋಪಾಲ್: ಹನುಮಂತನ (Hanuman) ಚಿತ್ರದ ಎದುರೇ ಬಿಕಿನಿ (Bikini) ತೊಟ್ಟು ಮಹಿಳೆಯರ ದೇಹದಾಢ್ಯ ಸ್ಪರ್ಧೆ (Women Bodybuilding Competition) ನಡೆಸಲಾಗಿದ್ದು, ಬಳಿಕ ವಿವಾದ ಭುಗಿಲೆದ್ದಿದೆ. ಈ ಬಗ್ಗೆ ರಾಜಕೀಯ ಪಕ್ಷಗಳು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿವೆ.
ಮಧ್ಯಪ್ರದೇಶದ (Madhya Pradesh) ರತ್ಲಾಮ್‌ನಲ್ಲಿ ನಡೆದ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ದೇಹದಾರ್ಢ್ಯ ಪಟುಗಳು ಭಗವಾನ್ ಹನುಮಂತನ ಚಿತ್ರದ ಎದುರು ಬಿಕಿನಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಘಟನೆ ಬಳಿಕ ಕಿಡಿ ಕಾರಿರುವ ಕಾಂಗ್ರೆಸ್ (Congress), ಈ ಕಾರ್ಯಕ್ರಮ ಹಿಂದೂ (Hindu) ಭಾವನೆಗಳಿಗೆ ನೋವುಂಟು ಮಾಡಿದೆ. ಇದು ದೇವರಿಗೆ ಮಾಡಿರುವ ಅವಮಾನ, ಈ ಕೂಡಲೇ ಕಾರ್ಯಕ್ರಮದ ಆಯೋಜಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.
बीजेपी नेताओं ने किया हनुमान जी का अपमान :
रतलाम में भाजपा के बीजेपी विधायक चैतन्य कश्यप और महापौर प्रह्लाद पटेल ने हनुमान जी की मूर्ति स्टेज पर रखकर अश्लीश कार्यक्रम का आयोजन किया।
ಈ ನಡುವೆ ಸಮಾಜವಾದಿ ಪಕ್ಷವೂ ಕೂಡಾ ಈ ಕಾರ್ಯಕ್ರಮ ಹಿಂದೂ ದೇವರಿಗೆ ಅವಮಾನ ಮಾಡಿದೆ ಎಂದು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ವರದಿಗಳ ಪ್ರಕಾರ ಮಾರ್ಚ್ 4 ಮತ್ತು 5 ರಂದು ನಡೆದ 13 ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆಯನ್ನು ರತ್ಲಾಮ್‌ನ ಮೇಯರ್ (ಬಿಜೆಪಿ) ಪ್ರಹ್ಲಾದ್ ಪಟೇಲ್ ಆಯೋಜಿಸಿದ್ದರು. ಇದರಲ್ಲಿ ರಾಜ್ಯ ಶಿಕ್ಷಣ ಸಚಿವ ಮೋಹನ್ ಯಾದವ್ ಭಾಗವಹಿಸಿದ್ದರು. ಮಹಿಳಾ ದೇಹದಾರ್ಢ್ಯ ಪಟುಗಳು ಹನುಮಂತನ ಚಿತ್ರದ ಮುಂದೆ ಪೋಸ್ ಕೊಟ್ಟಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದಾದ ಬಳಿಕ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯ್ದಿವೆ.
ಬಳಿಕ ಹೇಳಿಕೆ ನೀಡಿದ ರಾಜ್ಯ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಕೆಕೆ ಮಿಶ್ರಾ, ಹನುಮಂತನ ಚಿತ್ರದ ಎದುರು ನಗ್ನತೆಯನ್ನು ಪ್ರದರ್ಶಿಸಲಾಗಿದ್ದು, ಬಿಜೆಪಿ ನಾಯಕರ ಸಮ್ಮುಖದಲ್ಲೂ ಪ್ರದರ್ಶನ ಮಾಡಲಾಗಿದೆ. ಬಿಜೆಪಿ ತನ್ನನ್ನು ರಾಮಭಕ್ತ ಪಕ್ಷ ಎಂದು ಕರೆದುಕೊಳ್ಳುತ್ತದೆ. ಆದರೆ ಮತ್ತೊಂದೆಡೆ ಅದರ ನಾಯಕರೇ ಹನುಮಂತನನ್ನು ಅವಮಾನಿಸುತ್ತಿದ್ದಾರೆ. ಹಿಂದೂ ದೇವತೆಯನ್ನು ಅವಮಾನಿಸಿದ್ದಕ್ಕಾಗಿ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಸಭ್ಯತೆಯ ಆರೋಪದ ಬಗ್ಗೆ ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಹಿತೇಶ್ ಬಾಜ್‌ಪೇಯ್, ಕುಸ್ತಿ, ಜಿಮ್ನಾಸ್ಟಿಕ್ ಅಥವಾ ಈಜು ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕಾಂಗ್ರೆಸ್ಸಿಗರು ನೋಡಲು ಇಷ್ಟಪಡುವುದಿಲ್ಲ. ಏಕೆಂದರೆ ಅವರೊಳಗಿನ ದೆವ್ವ ಇದನ್ನು ನೋಡಿ ಎಚ್ಚರಗೊಳ್ಳುತ್ತದೆ. ಅವರು ಆಟದ ಮೈದಾನದಲ್ಲಿ ಮಾತ್ರವೇ ಮಹಿಳೆಯರನ್ನು ತಮ್ಮ ಕೊಳಕು ಕಣ್ಣುಗಳಿಂದ ನೋಡುತ್ತಾರೆ. ಅವರಿಗೆ ನಾಚಿಕೆ ಆಗಲ್ವಾ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸೊಳ್ಳೆ ಔಷಧಿ ಸಿಂಪಡಿಸಿದವರಿಗೆ ಬಿಲ್ ಬಾಕಿ ಆರೋಪ – ಬಿಬಿಎಂಪಿ ವಿರುದ್ಧ ಪೊಲೀಸ್ ಠಾಣೆಗೆ ದೂರು
ಪುಣೆ: ಶ್ರೀಕೃಷ್ಣ ಮತ್ತು ಹನುಮಂತ ಇಬ್ಬರೂ ಶ್ರೇಷ್ಠ ರಾಜತಾಂತ್ರಿಕರು ಎಂದು ವಿದೇಶಾಂಗ ಸಚಿವ ಜೈಶಂಕರ್ (S Jaishankar) ಬಣ್ಣಿಸಿದ್ದಾರೆ.
ತಮ್ಮ The India Way: Strategies for an Uncertain World ಪುಸ್ತಕದ ಮರಾಠಿ ಅನುವಾದ ʼಭಾರತ್ ಮಾರ್ಗ್ʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಮಹಾಭಾರತ ಮತ್ತು ರಾಮಾಯಣದ ಕಥೆಗಳಲ್ಲಿ ಬರುವ ಸಂದರ್ಭಗಳನ್ನು ವಿವರಿಸಿ ರಾಜತಾಂತ್ರಿಕತೆಯ ಮಹತ್ವವವನ್ನು ವಿವರಿಸಿದರು.
ಶ್ರೀಕೃಷ್ಣ ಮತ್ತು ಹನುಮಂತ (Hanuman) ಜಗತ್ತಿನ ಅತಿದೊಡ್ಡ ರಾಜತಾಂತ್ರಿಕರು. ಹನುಮಂತ ರಾಜತಾಂತ್ರಿಕತೆಯನ್ನು ಮೀರಿ ಹೋಗಿದ್ದನು. ಸೀತೆಯ ಜೊತೆ ಮಾತನಾಡಿದ್ದು ಅಲ್ಲದೇ ಲಂಕೆಗೆ ಬೆಂಕಿ ಹಾಕಿದ್ದ ಎಂದು ಹೇಳಿದರು.
ಜೈಶಂಕರ್ ಅವರು ಕೌರವರು ಮತ್ತು ಪಾಂಡವರ ನಡುವೆ ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರವನ್ನು ‘ಬಹುಧ್ರುವ ಭಾರತ’ ಎಂದು ಬಣ್ಣಿಸಿದರು. ಕಾರ್ಯತಂತ್ರದ ವಂಚನೆ ವಿಷಯದ ಬಗ್ಗೆ ಪ್ರಸ್ತಾಪಿಸಿದ ಜೈಶಂಕರ್ ಅವರು ಕೃತಕವಾಗಿ ಸೂರ್ಯಾಸ್ತಮಾನ ಸೃಷ್ಟಿಸಿದ ಕೃಷ್ಣನ (Krishna) ಉದಾಹರಣೆಯನ್ನು ನೀಡಿದರು.
ಅರ್ಜುನನ ಮಗ ಅಭಿಮನ್ಯುವನ್ನು ಕೌರವನ ಕಡೆಯ ಅನೇಕ ಯೋಧರು ಮೋಸ ಮಾಡಿ ಹತ್ಯೆ ಮಾಡಿದರು. ತನ್ನ ಮಗನನ್ನು ಹತ್ಯೆ ಮಾಡಿದ ಜಯದ್ರಥನನ್ನು ಮರುದಿನ ಸಂಜೆಯ ಒಳಗಡೆ ಹತ್ಯೆ ಮಾಡುತ್ತೇನೆ ಎಂದು ಅರ್ಜುನ ಶಪಥ ಮಾಡುತ್ತಾನೆ. ಈ ಶಪಥ ಈಡೇರದೇ ಇದ್ದರೆ ನಾನು ಉರಿಯುವ ಬೆಂಕಿಗೆ ಹಾರಿ ಪ್ರಾಣ ಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಈ ವಿಷಯ ತಿಳಿದ ಕೌರವರು ಜಯದ್ರಥನನ್ನು ದಿನಪೂರ್ತಿ ಮರೆ ಮಾಡುತ್ತಾರೆ. ಸೂರ್ಯ ಮುಳುಗಿದ ವಿಚಾರ ತಿಳಿದು ಜಯದ್ರಥ ಕಾಣಿಸಿಕೊಂಡಾಗ ಕೃಷ್ಣ ಅರ್ಜುನನಿಗೆ ಬಾಣ ಹೊಡೆಯುವಂತೆ ಹೇಳುತ್ತಾನೆ. ಅರ್ಜುನ ಬಾಣ ಹೊಡೆದು ಜಯದ್ರಥನನ್ನು ಕೊಲ್ಲುತ್ತಾನೆ. ಕೌರವರಿಗಿಂತ ಉತ್ತಮರು ಈ ಕಾರಣಕ್ಕೆ ಕೃಷ್ಣ ಪಾಂಡವರನ್ನು ಬೆಂಬಲಿಸಿದ ಎಂದು ವಿವರಿಸಿದರು.
Lord Hanuman and Lord Krishna were the best diplomats in the World says EAM Dr. S. Jaishankar.
ಜೈಶಂಕರ್ ಅವರು ಯುಧಿಷ್ಠಿರನು ಅಶ್ವತ್ಥಾಮನ ಸಾವಿನ ಬಗ್ಗೆ ಸುಳ್ಳು ಹೇಳಿದ ಉದಾಹರಣೆಗಳನ್ನು ನೀಡುವ ಮೂಲಕ “ತಂತ್ರಗಾರಿಕೆಯ ಹೊಂದಾಣಿಕೆʼ ವಿಚಾರದ ಬಗ್ಗೆ ವಿವರಿಸಿದರು.
ದ್ರೋಣಾಚಾರ್ಯರು ಕೌರವರ ಸೇನಾಧಿಪತಿಗಳಾಗಿದ್ದರು. 5 ದಿನಗಳ ಕಾಲ ಉಗ್ರವಾಗಿ ಹೋರಾಡಿದರೂ ಪಾಂಡವರಿಗೆ ಅವರನ್ನು ತಡೆಯಲು ಸಾಧ್ಯವಾಗಿರಲಿಲ್ಲ. ದ್ರೋಣಾಚಾರ್ಯರು ಯುಧಿಷ್ಠರನನ್ನು ಮಾತ್ರ ನಂಬುತ್ತಾರೆಯೇ ಹೊರತು ಬೇರೆ ಯಾರನ್ನೂ ನಂಬುವುದಿಲ್ಲ ಎಂಬುದನ್ನು ತಿಳಿದ ಪಾಂಡವರು ದ್ರೋಣಾಚಾರ್ಯರನ್ನು ಮೋಸಗೊಳಿಸಲು ಗೇಮ್ ಪ್ಲಾನ್ ಮಾಡಿದರು.
“If they call the Indian government as Hindu Nationalist, then governments in Europe/US must be called as Christian Nationalists”
ಈ ಸಂದರ್ಭದಲ್ಲಿ, ದ್ರೋಣನ ಏಕೈಕ ದೌರ್ಬಲ್ಯವೆಂದರೆ ಅವನ ಮಗ ಅಶ್ವತ್ಥಾಮ ಎಂದು ಕೃಷ್ಣನಿಗೆ ತಿಳಿದಿತ್ತು. ಹಾಗಾಗಿ ಅಶ್ವತ್ಥಾಮ ಸತ್ತಿದ್ದಾನೆ ಎಂಬ ಸುದ್ದಿಯನ್ನು ಹರಡುವಂತೆ ಯುಧಿಷ್ಠಿರನನ್ನು ಕೇಳುತ್ತಾನೆ. ಯುಧಿಷ್ಠರ ಅಶ್ವತ್ಥಾಮ ಸತ್ತಿದ್ದಾನೆ ಎಂದು ಹೇಳಿದಾಗ ದ್ರೋಣಾಚಾರ್ಯರು ಶಸ್ತ್ರತ್ಯಾಗ ಮಾಡಿದರು ಎಂದು ಕಥೆಯನ್ನು ವಿವರಿಸಿದರು.
ನೆರೆಹೊರೆಯವರನ್ನು ಆಯ್ಕೆ ಮಾಡಲು ಭಾರತದ ಭೌಗೋಳಿಕ ಮಿತಿಗಳ ಬಗ್ಗೆ ಮಾತನಾಡಿದ ಅವರು, ಪಾಂಡವರಿಗೆ ಯಾರು ಸಂಬಂಧಿಗಳು ಸಹಾಯ ಮಾಡಲು ಬರಲಿಲ್ಲ ಎಂದು ಹೇಳಿ ಪಾಕಿಸ್ತಾನದ ಉದಾಹರಣೆ ನೀಡಿದರು.
"Being the foreign secretary was the limit of my ambition, never even dreamt of becoming a minister" says EAM Jaishankar. Thanking PM Modi, points, "not sure any PM, other than Narendra Modi would have made me minister" pic.twitter.com/AMleXrWMTn
ಭಯೋತ್ಪಾದನೆಯಿಂದಾಗಿ ಪಾಕಿಸ್ತಾನ ಜಾಗತಿಕ ಸಮುದಾಯದಿಂದ ಹಿನ್ನಡೆಯನ್ನು ಅನುಭವಿಸುತ್ತಿದೆ. ಪಾಕಿಸ್ತಾನವು ಈಗ ಕೆಲವೇ ಮಿತ್ರರಾಷ್ಟ್ರಗಳನ್ನು ಹೊಂದಿದೆ. ಅದರಲ್ಲೂ ಟರ್ಕಿ ಪಾಕಿಸ್ತಾನಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ಚೀನಾ ಎಂದಿಗೂ ಅನುದಾನವನ್ನು ನೀಡುವುದಿಲ್ಲ ಆದರೆ ಸಾಲವನ್ನು ಮಾತ್ರ ನೀಡುತ್ತದೆ ಎಂದರು.
ವಿದೇಶಾಂಗ ಸಚಿವರನ್ನಾಗಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ ಅವರು, ವಿದೇಶಾಂಗ ಕಾರ್ಯದರ್ಶಿಯಾಗುವುದು ನನ್ನ ಮಹತ್ವಾಕಾಂಕ್ಷೆಯಾಗಿತ್ತು. ಮಂತ್ರಿಯಾಗುವ ಕನಸು ಕೂಡ ಕಂಡಿರಲಿಲ್ಲ. ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಪ್ರಧಾನಿಗಳು ನನ್ನನ್ನು ಮಂತ್ರಿ ಮಾಡಬಹುದು ಎಂಬುದನ್ನು ನಾನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದರು.
Live Tv
[brid partner=56869869 player=32851 video=960834 autoplay=true]
ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಿರುವ ತೇಜ ಸಜ್ಜ ನಟನೆಯ ಬಹು ನಿರೀಕ್ಷಿತ ತೆಲುಗು ಸಿನಿಮಾ ‘ಹನು-ಮಾನ್’ ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಟೀಸರ್ ಝಲಕ್ ಮೂಲಕ ಪ್ರೇಕ್ಷಕರೆದುರು ಬಂದಿರುವ ‘ಹನು – ಮಾನ್’ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಕೇಕ್ ಕತ್ತರಿಸಿ ಸಕ್ಸಸ್ ಆಚರಿಸಿದ ʻಗಂಧದ ಗುಡಿʼ ಟೀಮ್
ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ಪ್ರತಿಭಾವಂತ ನಟ ತೇಜ ಸಜ್ಜ ನಟಿಸುತ್ತಿದ್ದು, ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿರೋದು ಟೀಸರ್ ಝಲಕ್ ನೋಡಿದಾಗಲೇ ತಿಳಿದು ಬರುತ್ತೆ. ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಐಯ್ಯರ್ ನಟಿಸಿದ್ದಾರೆ. ಬಿಡುಗಡೆಯಾಗಿರುವ ಟೀಸರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ನಾಯಕ ನಟ ತೇಜ ಸಜ್ಜ ಲುಕ್, ಚಿತ್ರದ ಮೇಕಿಂಗ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಎಲ್ಲವೂ ಗಮನ ಸೆಳೆಯುತ್ತಿದೆ.
ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ. ಕೆ. ನಿರಂಜನ್ ರೆಡ್ಡಿ ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಡಿ ಅದ್ದೂರಿಯಾಗಿ, ಬಿಗ್ ಬಜೆಟ್ ನಲ್ಲಿ ‘ಹನು-ಮಾನ್’ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.
Live Tv
[brid partner=56869869 player=32851 video=960834 autoplay=true]
ಭೋಪಾಲ್: ಕೇಸರಿ ಧ್ವಜ ಮತ್ತು ಹನುಮಂತನ ಫೋಟೋವಿರುವ ನಾಲ್ಕು ಸ್ಟೆಪ್ಸ್‍ನ ದೇವಾಲಯದ ಆಕಾರವಿರುವ ಕೇಕ್ ಅನ್ನು ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ(Congress chief and former Madhya Pradesh Chief Minister) ಕಮಲ್‍ನಾಥ್ (Kamal Nath) ಅವರು, ಕತ್ತರಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಧಾರ್ಮಿಕ ಚಿಹ್ನೆಗಳಿರುವ ಕೇಕ್ ಕತ್ತರಿಸುವ ಮೂಲಕ ಕಮಲ್ ನಾಥ್ ಅವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಆರೋಪಿಸಿದ್ದಾರೆ. ಇದನ್ನೂ ಓದಿ: ವೈಟ್‍ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ
#Watch: मध्य प्रदेश के पूर्व सीएम ने मंदिर के आकार का केक काटा, केक में हनुमान जी की फोटो भी लगी हुई थी। वीडियो वायरल होने पर BJP के प्रदेश प्रवक्ता बोले- किसी दूसरे धर्म के आराध्य का केक काटा होता तो सिर धड़ से अलग करने के नारे लग जाते।#MadhyaPradesh#Kamalnath#Viralvideopic.twitter.com/GpQ9xlqABu
ಕಮಲ್‍ನಾಥ್ ಮತ್ತು ಅವರ ಪಕ್ಷದವರು ದೇವರ ಮೇಲೆ ಯಾವುದೇ ಭಕ್ತಿಯನ್ನು ಹೊಂದಿಲ್ಲ. ಅವರೆಲ್ಲಾ ಸುಳ್ಳು ಭಕ್ತರು. ರಾಮ ಮಂದಿರ ನಿರ್ಮಿಸುವಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಈ ವಿಚಾರದಿಂದ ಚುನಾವಣೆ ಸಮಯದಲ್ಲಿ ತೊಂದರೆಯಾಗಬಹುದು ಎಂದು ಅರಿತು, ಇದೀಗ ಹನುಮಂತನ ಭಕ್ತರಾಗಿ ಬದಲಾಗಿದ್ದಾರೆ. ಯಾರಾದರೂ ಹುಟ್ಟುಹಬ್ಬಕ್ಕೆ ಹನುಮಂತನ ಫೋಟೋವಿರುವ ಕೇಕ್ ಅನ್ನು ತಯಾರಿಸುತ್ತಾರಾ? ಹನುಂತನ ಫೋಟೋವಿರುವ ಕೇಕ್ ಕತ್ತರಿಸುತ್ತಾರಾ? ಇದು ಸನಾತನ ಧರ್ಮ ಮತ್ತು ಇದರಿಂದ ಹನುಮಂತನ ಭಕ್ತರಿಗೆ ಅಪಮಾನವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಡಿಕೆಶಿ ರಾಮನಗರ ಸಸ್ಪೆನ್ಸ್- ಡಿಕೆಸು ಬದಲಿಗೆ ಇಕ್ಬಾಲ್‍ಗೆ ಟಿಕೆಟ್ ಸಾಧ್ಯತೆ
ಗುರುವಾರ ಕಮಲ್‍ನಾಥ್ ಅವರು 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಕಮಲ್‍ನಾಥ್ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿಧಾನಸಭಾ ಕ್ಷೇತ್ರ ಛಿಂದ್ವಾರಾ ಜಿಲ್ಲೆಯಲ್ಲಿರುವ ಅವರ ನಿವಾಸದಲ್ಲಿ ಹುಟ್ಟುಹಬ್ಬವನ್ನು ಮುಂಚಿತವಾಗಿಯೇ ಆಚರಿಸಿದರು.
Live Tv
[brid partner=56869869 player=32851 video=960834 autoplay=true]
ಚೆನ್ನೈ: ನಟಿ ಮೆಘನಾ ರಾಜ್ ಹಾಗೂ ಅವರ 8 ತಿಂಗಳ ಮಗ ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ಕೊರೊನಾ ಮಹಾಮಾರಿಯಿಂದಾಗಿ ಅವರು ನಟ ಅರ್ಜುನ್ ಸರ್ಜಾ ಅವರ ಆಂಜನೇಯನ ದೇವಸ್ಥಾನದ ಉದ್ಘಾಟನೆಗೂ ತೆರಳಿಲ್ಲ. ಹೀಗಾಗಿ ಅರ್ಜುನ್ ಸರ್ಜಾ ಅವರು ತಾಯಿ- ಮಗನಿಗೆ ವೀಡಿಯೋ ಕಾಲ್ ನಲ್ಲೇ ದೇವರ ದರ್ಶನ ಮಾಡಿಸಿದ್ದಾರೆ.
ಹೌದು. ಬುಧವಾರ ಅರ್ಜುನ್ ಸರ್ಜಾ ಅವರು ಮೇಘನಾರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಅಮ್ಮ-ಮಗನಿಗೆ ತಾವು ಕಟ್ಟಿಸಿರುವ ಆಂಜನೇಯನ ದರ್ಶನ ಮಾಡಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಅರ್ಜುನ್ ಸರ್ಜಾ ನಂತರ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೊರೊನಾದಿಂದ ಭೇಟಿ ನೀಡಲು ಸಾಧ್ಯವಾಗದ ಕಾರಣ ಹನುಮಾನ್ ದೇವಾಲಯವನ್ನು ವೀಡಿಯೋ ಕಾಲ್ ಮೂಲಕ ತೋರಿಸಿದ್ದಾರೆ. ಫೋಟೋದಲ್ಲಿ, ಜೂ. ಚಿರು ನೇರವಾಗಿ ಕ್ಯಾಮೆರಾವನ್ನೇ ನೋಡುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ
ಕೋವಿಡ್-19 ಕಾರಣದಿಂದಾಗಿ ಕುಂಬಾಭಿಷೇಕಕ್ಕೆ ಬರಲು ಸಾಧ್ಯವಾಗದ ಕಾರಣ ಚಿರು ಮಗನಿಗೆ ದೇವಾಲಯವನ್ನು ತೋರಿಸಿರುವುದಾಗಿ ಫೋಟೋ ಮೇಲೆ ಬರೆದುಕೊಂಡಿದ್ದಾರೆ. ಇದನ್ನು ಅರ್ಜುನ್ ಸರ್ಜಾ ಅವರ ಮಗಳು, ನಟಿ ಐಶ್ವರ್ಯಾ ಅರ್ಜುನ್ ಕೂಡ ತಮ್ಮ ಇನ್‍ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ
ದಿವಂಗತ ಚಿರಂಜೀವಿ ಸರ್ಜಾ ಅವರ ಮಾವ ಅರ್ಜುನ್ ಸರ್ಜಾ ಅವರು ಚೆನ್ನೈನ ಹನುಮಾನ್ ದೇವಾಲಯವನ್ನು ಉದ್ಘಾಟಿಸಿದ್ದಾರೆ. ಈ ಸಮಾರಂಭದಲ್ಲಿ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಹಾಜರಾಗಿದ್ದರೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೇಘನಾ ಮತ್ತು ಜೂನಿಯರ್ ಚಿರು ಅವರಿಗೆ ಸಾಧ್ಯವಾಗಲಿಲ್ಲ.
ಆಕ್ಷನ್ ಕಿಂಗ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಅರ್ಜುನ್ ಸರ್ಜಾ ಅವರು ಇತ್ತೀಚೆಗೆ ಚೆನ್ನೈನ ಹೊರವಲಯದಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದ್ದಾರೆ. ಹನುಮನ ಕಟ್ಟಾ ಭಕ್ತನಾಗಿರುವುದರಿಂದ ದೇವಾಲಯವನ್ನು ನಿರ್ಮಿಸುವುದು ಅವರ ಕನಸಾಗಿತ್ತು. ಈ ಕನಸು ಇದೀಗ ನನಸಾಗಿದ್ದು, ಜುಲೈ 1 ಮತ್ತು 2 ರಂದು ಕುಂಬಾಭಿಷೇಕದೊಂದಿಗೆ ದೇವಾಲಯವನ್ನು ಉದ್ಘಾಟಿಸಲಾಯಿತು.
ರಾಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ಹನುಮನಿರುವನು..ಹನುಮನ ಸ್ಮರಣೆ ಎಲ್ಲಿರುವುದೋ ಅಲ್ಲಿ ರಾಮನಿರುವನು..ಹೀಗೆ ರಾಮ ಮತ್ತು ಹನುಮ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಆಪ್ತಮಿತ್ರರು, ಗುರು ಶಿಷ್ಯರು. ರಾಮನನ್ನ ಪೂಜಿಸುವುವರು ಹನುಮಂತನನ್ನ ಪೂಜಿಸುತ್ತಾರೆ. ಹನುಮಂತನನ್ನ ಪೂಜಿಸುವವರು ರಾಮನನ್ನ ಪೂಜಿಸೇ ಪೂಜಿಸುತ್ತಾರೆ. ಆದ್ರೆ, ರಾಮ ಹುಟ್ಟಿದ್ದು ಅಯೋಧ್ಯೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಹನುಮಂತ ಹುಟ್ಟಿದ್ದು ಎಲ್ಲಿ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೆಲವರಿಗೆ ಗೊಂದಲಗಳು ಇವೆ.
ಆಂಜನೇಯ ಹುಟ್ಟಿದ್ದು ಕರ್ನಾಟಕದಲ್ಲಿ. ಅಂಜನಾದ್ರಿ ಪರ್ವತದಲ್ಲಿ ಅಂಜನಾದೇವಿ ಹನುಮಂತನಿಗೆ ಜನ್ಮ ನೀಡುತ್ತಾಳೆ. ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಇದರ ಉಲ್ಲೇಖವಿದೆ. ‘ಕಿಷ್ಕಿಂಧೆ’ ಎಂದರೆ ನಮ್ಮ ರಾಜ್ಯದ ಹಂಪೆಯ ಪ್ರದೇಶ. ಅಪ್ಸರೆಯಾಗಿದ್ದ ಅಂಜನಾ ಋಷಿಮುನಿಗಳ ಶಾಪದಿಂದ ಭೂಮಿಯ ಮೇಲೆ ವಾನರ ಕುಲದಲ್ಲಿ ಜನ್ಮತಾಳಬೇಕಾಯ್ತು. ಆದ್ರೆ, ಗಂಡು ಮಗುವಿಗೆ ಜನ್ಮ ಕೊಟ್ಟರೇ ಮಾತ್ರ ಅವಳ ಶಾಪ ವಿಮೋಚನೆಯಾಗುವಂತಿತ್ತು. ಈ ಸಂದರ್ಭದಲ್ಲಿ ಕೇಸರಿಯೊಂದಿಗೆ ಅಂಜನಾದೇವಿಯ ಮದುವೆಯಾಗುತ್ತೆ. ಆದ್ರೆ, ಅವಳ ಶಾಪ ವಿಮೋಚನೆ ಆಗುವುದಕ್ಕೆ ಗಂಡು ಮಗ ಜನಿಸಬೇಕಿತ್ತು. ಹಾಗಾಗಿ ಶಿವನ ಆರಾಧನೆ ಮಾಡಿ ವರ ಪಡೆದುಕೊಳ್ಳುತ್ತಾಳೆ. ಅದಾದ ಬಳಿಕ ಅತ್ಯಂತ ಬಲಶಾಲಿ ಆಂಜನೇಯನಿಗೆ ಅಂಜನಾದೇವಿ ಜನ್ಮ ನೀಡುತ್ತಾಳೆ. ಹನುಮನ ಜನ್ಮ ಬಗ್ಗೆ ಹಲವು ರೀತಿಯ ಕಥೆಗಳನ್ನ ಹೇಳಲಾಗುತ್ತೆ. ಒಂದು ಕಥೆಯ ಪ್ರಕಾರ ವಾಯುದೇವನೊಂದಿ ಮೋಹಿಸಿ ಅಂಜನಾದೇವಿ ವಾಯುಪುತ್ರನಿಗೆ ಜನ್ಮ ನೀಡಿದಳೆಂದು. ಇನ್ನೊಂದು ಕಥೆಯ ಪ್ರಕಾರ, ಪುತ್ರ ಕಾಮೇಷ್ಠಿಯಾಗ ಮಾಡಿ ಅದರ ಪ್ರಸಾದವನ್ನ ದಾಶ್ರತನು ತನ್ನ ಪತ್ನಿಯರಿಗೆ ನೀಡುವಾಗ ಕಾಗೆಯೊಂದು ಸ್ವಲ್ಪ ಭಾಗ ಕಿತ್ತುಕೊಂಡು ಹೋಗುತ್ತೆ. ಅದನ್ನ ತಪಸ್ಸು ಮಾಡುತ್ತಿದ್ದ ಅಂಜನಾದೇವಿಯ ಕೈಯಲ್ಲಿ ಬೀಳುವಂತೆ ವಾಯುದೇವ ಮಾಡುತ್ತಾನೆ. ಆಗ ಅಂಜನಾದೇವಿ ಗರ್ಭವತಿಯಾಗಿ ಆಂಜನೇಯನಿಗೆ ಅಂಜನಾದ್ರಿ ಬೆಟ್ಟದ ಮೇಲೆ ಜನ್ಮ ನೀಡುತ್ತಾಳೆ.
ಸೂರ್ಯನನ್ನೆ ನುಂಗಲು ಹೋಗಿದ್ದು:
ಆಂಜನೇಯನು ಬಾಲ್ಯದಲ್ಲಿ ಸೂರ್ಯನನ್ನ ಕೆಂಪು ಹಣ್ಣು ಎಂದು ತಿನ್ನಲು ಹಾರಿ ಹೋಗಿದ್ದು ಇದೆ ಅಂಜನಾದ್ರಿ ಪರ್ವತದಿಂದ. ರಾವಣ ಸೀತೆಯನ್ನ ಅಪಹರಿಸಿದಾಗ, ಸೀತೆಯ ಸುಳಿವುಗಳನ್ನು ಹುಡುಕುತ್ತ ರಾಮ ಲಕ್ಷ್ಮಣರು ಆಗಮಿಸುವ ಸ್ಥಳ ಕಿಷ್ಕಿಂಧೆ. ಈ ಒಂದು ಸ್ಥಳದಲ್ಲಿಯೇ ರಾಮನಿಗೆ ಅವನ ಪರಮ ಭಕ್ತನಾದ ಆಂಜನೇಯನ ಭೇಟಿಯಾಗುತ್ತದೆ.
ಈಗಲೂ ಆಂಜನೇಯನ ದರ್ಶನವಾಗುತ್ತೆ:
ಕೆಲವು ಭಕ್ತರು ಹೇಳುವ ಪ್ರಕಾರ, ಈಗಲೂ ಅಂಜನಾದ್ರಿ ಬೆಟ್ಟದ ಮೇಲೆ ದೊಡ್ಡ ಕೋತಿಯೊಂದಿದೆ. ಅದು ಬೆಳಿಗ್ಗೆ ಮತ್ತು ಸಂಜೆ ದರ್ಶನ ನೀಡುತ್ತೆ. ಅಪರೂಪಕ್ಕೆ ಬಂದು ದರ್ಶನ ಕೊಡುತ್ತೆ. ಅದು ಸಾಕ್ಷಾತ್ ಆಂಜನೇಯನೇ ಅನ್ನೋದು ಭಕ್ತರ ನಂಬಿಕೆ.
ಎಷ್ಟು ದೂರವಿದೆ?
ಬೆಂಗಳೂರಿನಿಂದ 345 ಕಿ.ಮೀ ದೂರವಿದ್ದರೆ ಹಂಪಿಯಿಂದ 18 ಕಿ.ಮೀ., ಗಂಗಾವತಿಯಿಂದ 6 ಕಿಮೀ. ದೂರದಲ್ಲಿ ಅಂಜನಾದ್ರಿ ಪರ್ವತವಿದೆ. ಹಂಪಿಯಿಂದ ಅಂಜನಾದ್ರಿ ಬೆಟ್ಟ ಹತ್ತಿರದಲ್ಲೆ ಇರೋದ್ರಿಂದ 580 ಮೆಟ್ಟಿಲುಗಳನ್ನ ಏರಿ ಅಂಜನಾದ್ರಿ ಬೆಟ್ಟದ ಮೇಲೆ ತಲುಪಿದ ನಂತರ, ಮೆಟ್ಟಿಲು ಏರಿದ ಆಯಾಸವೆಲ್ಲ ಮಾಯವಾಗುತ್ತೆ. ಕಾರಣ, ಅಲ್ಲಿಂದ ಕಾಣುವ ತುಂಗಭದ್ರಾ ನದಿ ಹಾಗೂ ಹಂಪಿಯ ಕೆಲವು ದೇವಾಲಯಗಳು, ಪ್ರಕೃತಿಯ ಸೊಬಗು ಎಲ್ಲವನ್ನೂ ಮರೆಸುತ್ತೆ.
ಅಷ್ಟೇ ಅಲ್ಲದೇ ಇಲ್ಲಿ ಹಲವು ಗುಹೆಗಳು ಇವೆ. ಬೆಟ್ಟದ ಮೇಲೆ ಮಾರುತಿಯ ದೊಡ್ಡ ಸೈನ್ಯ ಕೂಡ ಇದೆ. ಆದ್ರೆ, ಯಾರಿಗೂ ಏನೂ ಮಾಡಲ್ಲ. ಇನ್ನು ಬೆಟ್ಟದ ಮೇಲೆ ಒಂದೇ ಒಂದು ಮರವಿದೆ. ಬೆಟ್ಟದ ಮೇಲೆ ಸೂರ್ಯಾಸ್ತ ನೋಡಿದ್ರೆ ಮನಸ್ಸಿಗೆ ಏನೋ ಆನಂದ ಸಿಗುತ್ತೆ. ನೀವು ಆಂಜನೇಯನ ಭಕ್ತರಾಗಿದ್ದರೇ ಮೊದಲು ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಅಂಜನಾದೇವಿ, ಹಾಗೂ ಆಂಜನೇಯನ ದರ್ಶನ ಪಡೆಯಿರಿ.
ತುಮಕೂರು: ಸಾಮಾನ್ಯವಾಗಿ ಕೃಷ್ಣ ಜಯಂತಿಯಲ್ಲಿ ತಮ್ಮ ಮುದ್ದಾದ ಮಕ್ಕಳಿಗೆ ಕೃಷ್ಣನ ವೇಷ ಹಾಕುತ್ತಾರೆ. ಆದರೆ ಕಲ್ಪತರು ನಾಡಿನಲ್ಲಿ ಹನುಮ ಜಯಂತಿ ದಿನದಂದು ಕೆಲ ಚಿಣ್ಣರು ಆಂಜನೇಯ ವೇಷಭೂಷಣದಲ್ಲಿ ಕಂಡಿದ್ದು ವಿಶೇಷವಾಗಿತ್ತು.
ವಕೀಲರಾದ ಹಿಮಾನಂದ ಮತ್ತು ರೇಖಾ ದಂಪತಿ ತಮ್ಮ ಮುದ್ದಾದ ಮಗಳಿಗೆ ಹನುಮನ ವೇಷ ತೊಡಿಸಿ ಕೈಯಲ್ಲಿ ಗದೆಯನ್ನು ಕೊಟ್ಟಿದ್ದಾರೆ. ಅಲ್ಲದೆ ಆಂಜನೇಯ ದೇವಸ್ಥಾನದ ಬೃಹತ್ ಹನುಮನ ಪ್ರತಿಮೆಯ ಮುಂದೆ ಫೋಟೋ ಕ್ಲಿಕ್ಕಿಸಿದ್ದು, ಸಖತ್ ಸದ್ದಾಗಿದೆ. ಹಿರಿ ಆಂಜನೇಯನ ಕೆಳಗೆ ಕಿರಿ ಆಂಜನೇಯ ಕಂಡು ಬಂದು ಅಚ್ಚರಿ ಮೂಡಿಸಿದ್ದಾಳೆ.
ನಾಲ್ಕು ವರ್ಷದ ಬಾಲಕಿ ತನ್ವಿ ಕೊರಳ ತುಂಬ ಮುತ್ತಿನಂಥ ಹಾರಗಳನ್ನು ಹಾಕಿ ಸಿಂಗಾರಗೊಂಡಿದ್ದಳು. ಹನುಮಂತ ಪ್ರತಿಮೆಯ ಮುಂದಿನ ರಸ್ತೆಯಲ್ಲಿ ತನ್ವಿಯನ್ನು ನಿಲ್ಲಿಸಿ ಪೋಷಕರು ಫೋಟೋ ಕ್ಲಿಕ್ಕಿಸುತ್ತಿದ್ದರೆ ಜನ ನಿಂತು ತನ್ವಿ ಸಿಂಗಾರವನ್ನು ನೋಡಿ ಸಂತೋಷಪಟ್ಟರು.
ತನ್ವಿಳ ಎಡಗೈಯಲ್ಲಿದ್ದ ಗದೆಯನ್ನು ನೆಲಕ್ಕೆ ಒತ್ತಿ ಹಿಡಿದು ಫೋಟೋವೊಂದಕ್ಕೆ ಪೋಸ್ ನೀಡಿದ್ದಾಳೆ. ಸದ್ಯ ಬಾಲ ಆಂಜನೇಯನ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಲಕ್ನೋ: ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಮ್ಮ ಮಗ, ಮಗಳ ಮದುವೆ ಆಮಂತ್ರಣ ಪ್ರತಿಕೆಯಲ್ಲಿ ರಾಮನ ಭಂಟ ಹನುಮನ ಚಿತ್ರವನ್ನು ಮುದ್ರಿಸಿ ಕುಟುಂಬ ಭಕ್ತಿ ಮೆರೆದಿದೆ.
ಹೌದು. ಉತ್ತರ ಪ್ರದೇಶ ಚಾರೇರ ಗ್ರಾಮದ ಮುಸ್ಲಿಂ ಕುಟುಂಬ ಶ್ರೀರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ. ಅಷ್ಟೇ ಅಲ್ಲದೆ ಈ ಪತ್ರಿಕೆಯಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಕೂಡ ಕುಟುಂಬ ಮುದ್ರಿಸಿದೆ. ರಸೂಲಾಬಾದ್‍ನ ಹೋಮಿಯೋಪತಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮ್ಮದ್ ಮುಬೀನ್ ಅವರು ತಮ್ಮ ಮಗ ಮತ್ತು ಮಗಳು ಲಗ್ನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ ಮುದ್ರಿಸಿದ್ದಾರೆ. ಮುಬೀನ್ ಅವರ ಮಗ ಮೊಹಮದ್ ನಸೀರ್ ಹಾಗೂ ಮಗಳು ಅಮೀನಾ ಬಾನೋ ಅವರ ಮದುವೆ ನಡೆಯಲಿದೆ. ಶುಕ್ರವಾರ ನಸೀರ್ ಮದುವೆಯಾದರೆ, ರವಿವಾರದಂದು ಅಮೀನಾ ಮದುವೆ ನಡೆಯಲಿದೆ. ಹೀಗಾಗಿ ಮುಬೀನ್ ಅವರು ತಮ್ಮ ಮಕ್ಕಳ ಮದುವೆಗೆ ಹಿಂದೂ ದೇವರುಗಳುಳ್ಳ ವಿಶೇಷ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬ, ನಮ್ಮ ಅಲ್ಲಾಹುವಿನ ಮೇಲೆ ನಮಗೆ ಎಷ್ಟು ನಂಬಿಕೆ ಇದೆಯೋ ಅಷ್ಟೇ ನಂಬಿಕೆ ಹಿಂದೂ ದೇವ, ದೇವತೆಯರ ಮೇಲಿದೆ ಎಂದು ಹೇಳಿ ಎಲ್ಲರ ಮನ ಗೆದ್ದಿದ್ದಾರೆ.
ಮುಬೀನ್ ಅವರು ಈ ಬಗ್ಗೆ ಮಾತನಾಡಿ, ಲಗ್ನ ಪತ್ರಿಕೆ ಮುದ್ರಿಸುವ ವಿಚಾರದಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಿರಲಿಲ್ಲ. ಕುಟುಂಬ ಸದಸ್ಯರ ಅನುಮತಿ, ಅಭಿಪ್ರಾಯ ಪಡೆದು ನಾನು ಪತ್ರಿಕೆ ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ.
ಈಗಾಗಲೇ 700 ಮಂದಿಗೆ ಲಗ್ನ ಪತ್ರಿಕೆ ಹಂಚಿದ್ದೇನೆ. ಹಿಂದೂ ಮಿತ್ರರಿಗೂ ಲಗ್ನ ಪತ್ರಿಕೆ ಹಂಚಿ ಮದುವೆಗೆ ಕರೆದಿದ್ದೇನೆ. ಯಾರೂ ಕೂಡ ಈವರೆಗೆ ಇದಕ್ಕೆ ವಿರೋಧಿಸಿಲ್ಲ. ನನ್ನ ಸಂಬಂಧಿಕರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಮಕ್ಕಳು ಕೂಡ ಖುಷಿಯಿಂದ ಲಗ್ನ ಪತ್ರಿಕೆಯನ್ನು ಒಪ್ಪಿದ್ದಾರೆ. ಎಲ್ಲರೂ ಇದು ಒಳ್ಳೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಖುಷಿಯಿಂದ ಮುಬೀನ್ ಹೇಳಿದ್ದಾರೆ.
ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಇಲ್ಲಿ ಪರಿಪೂರ್ಣ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ. ಈ ಸಾಮರಸ್ಯ ಎರಡು ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದೆ ಎಂದು ಸ್ಥಳೀಯರೊಬ್ಬರು ಮುಬೀನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ರ‍್ಯಾಪರ್ ಹಾಗೂ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದಾರೆ.
ಚಂದನ್ ಶೆಟ್ಟಿ ಹೊಸಪೇಟೆಯಲ್ಲಿ ನೂತನ ಸಿನಿಮಾ ಪ್ರೊಡಕ್ಷನ್ ಹೌಸ್ ಓಪನಿಂಗ್‍ಗೆ ಬಂದಿದ್ದರು. ಈ ವೇಳೆ ಅವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಹನುಮ ಜನಿಸಿದ ನಾಡು ಎಂದೇ ಪ್ರಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟಕ್ಕೆ ಒಟ್ಟು 575 ಮೆಟ್ಟಿಲುಗಳಿದೆ. ಚಂದನ್ ಈ ಬೆಟ್ಟ ಹತ್ತಿ ಹನುಮನ ದರ್ಶನ ಪಡೆದಿದ್ದಾರೆ.
ಕಳೆದ ತಿಂಗಳಷ್ಟೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಕೂಡ ಅಂಜನಾದ್ರಿ ಬೆಟ್ಟಗೆ ಭೇಟಿ ನೀಡಿ ಹನುಮನ ದರ್ಶನ ಪಡೆದಿದ್ದರು. ಅಂಜನಾದ್ರಿ ಬೆಟ್ಟಕ್ಕೆ ಈ ಹಿಂದೆ ಪ್ರಮುಖ ರಾಜಕಾರಣಿಗಳು ಹಾಗೂ ಸಿನಿಮಾ ಕಲಾವಿದರು ಗಳು ಭೇಟಿ ನೀಡಿದ್ದರು.
ಸೋಮವಾರ ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.
ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಸೋಮವಾರ ಚಂದನ್, ನಿವೇದಿತಾಗೆ ಮತ್ತೊಮ್ಮೆ ರಿಂಗ್ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.