Tag: hanuman film

  • ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿ- ಕನ್ನಡಕ್ಕೆ ಬಂದ ‘ಹನುಮಾನ್’ ಖ್ಯಾತಿಯ ಅಮೃತಾ ಅಯ್ಯರ್

    ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿ- ಕನ್ನಡಕ್ಕೆ ಬಂದ ‘ಹನುಮಾನ್’ ಖ್ಯಾತಿಯ ಅಮೃತಾ ಅಯ್ಯರ್

    ಬಿಜಿಲ್, ಹನುಮಾನ್ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಸೌತ್ ನಟಿ ಅಮೃತಾ ಅಯ್ಯರ್ (Amritha Aiyer) ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದಾರೆ.

    ಬೆಂಗಳೂರಿನಲ್ಲೇ ಓದಿ ಬೆಳೆದಿರುವ ಅಮೃತಾ ಅಯ್ಯರ್ ತೆಲುಗು, ತಮಿಳಿನಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೈಪ್ ಕ್ರಿಯೆಟ್ ಮಾಡಿದ್ದಾರೆ. ಈಗ ಗಣೇಶ್‌ಗೆ ನಾಯಕಿಯಾಗಿ ಕನ್ನಡದ ಸಿನಿಮಾಗೆ ಅವರು ಪಾದಾರ್ಪಣೆ ಮಾಡ್ತಿದ್ದಾರೆ. ‘ಲವ್ ಇನ್ ಮಂಡ್ಯ’ ಖ್ಯಾತಿಯ ನಿರ್ದೇಶಕ ಅರಸು ಅಂತಾರೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

    ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಕೈಯಲ್ಲೂ ಬಿಗ್ ಬಜೆಟ್ ಸಿನಿಮಾಗಳಿವೆ. ಸಾಲು ಸಾಲು ಸಿನಿಮಾಗಳು ಅವರು ಬ್ಯುಸಿಯಾಗಿದ್ದಾರೆ. ಇದರ ನಡುವೆ ಅರಸು ಅಂತಾರೆ ನಿರ್ದೇಶಕನ ಕಥೆ ಇಷ್ಟವಾಗಿ ಈ ಸಿನಿಮಾಗೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:‘ದಿ ಡೆವಿಲ್’ ಚಿತ್ರದ ಶೂಟಿಂಗ್ ಶುರು- ದರ್ಶನ್ ಭಾಗಿ

    ಫ್ಯಾಮಿಲಿ ಓರಿಯೆಂಟೆಡ್ ಕಥಾಹಂದರವಿರುವ ಚಿತ್ರವಾಗಿದೆ. ಇನ್ನೂ ಏ.6ರಂದು ಬೆಂಗಳೂರಿನಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಏ.7ರಿಂದ ಮೊದಲ ಹಂತದ ಶೂಟಿಂಗ್ ಶುರುವಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಈ ಸಿನಿಮಾದ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

    ದಕ್ಷಿಣದ ಸಿನಿಮಾಗಳಲ್ಲಿ ಮನೆ ಮಾತಾಗಿರುವ ಅಮೃತಾ ಅವರು ಕನ್ನಡದ ಮೊದಲ ಸಿನಿಮಾದಲ್ಲೇ ಗಣೇಶ್‌ಗೆ ಜೋಡಿಯಾಗಿ ಬರುತ್ತಿರೋದು, ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಎದುರು ನೋಡ್ತಿದ್ದಾರೆ.

  • ‌ಮಹಾಕಾಳಿ ಕಥೆ ಹೇಳಲು ಸಜ್ಜಾದ ‘ಹನುಮಾನ್‌’ ಡೈರೆಕ್ಟರ್- ಚಿತ್ರದ ಪೋಸ್ಟರ್‌ ರಿಲೀಸ್

    ‌ಮಹಾಕಾಳಿ ಕಥೆ ಹೇಳಲು ಸಜ್ಜಾದ ‘ಹನುಮಾನ್‌’ ಡೈರೆಕ್ಟರ್- ಚಿತ್ರದ ಪೋಸ್ಟರ್‌ ರಿಲೀಸ್

    ‘ಹನುಮಾನ್’ (Hanuman) ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prashanth Varma) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಹನುಮಾನ್ 2’ ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಶಾಂತ್ ಅವರು ‘ಮಹಾಕಾಳಿ’ ಕಥೆಯನ್ನು ಹೇಳೋದ್ದಕ್ಕೆ ಹೊರಟಿದ್ದಾರೆ.

    ಸಿನಿಮ್ಯಾಟಿಕ್ ಯೂನಿವರ್ಸ್ ನಡಿ ಪ್ರಶಾಂತ್ ವರ್ಮಾ ಮೂರನೇ ಚಿತ್ರ ಘೋಷಣೆ ಮಾಡಿದ್ದಾರೆ. ‘ಮಹಾಕಾಳಿ’ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಆದ್ರೆ ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿರುವುದು ವಿಶೇಷ. ಈ ಹಿಂದೆ ‘ಮಾರ್ಟಿನ್ ಲೂಥರ್ ಕಿಂಗ್’ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಅವರು ‘ಮಹಾಕಾಳಿ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿ ಮಾತೆಯ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಇದೀಗ ‘ಮಹಾಕಾಳಿ’ (Mahakali) ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಹುಡುಗಿಯೊಬ್ಬಳು ಹುಲಿಯ ಹಣೆ ಮೇಲೆ ತಲೆ ಇಟ್ಟು ನಿಂತಿರುವ ಲುಕ್ ನ್ನು ಅನಾವರಣ ಮಾಡಲಾಗಿದೆ. ಇದನ್ನೂ ಓದಿ:ಮಗುವಿನ ಮುಖ ರಿವೀಲ್ ಮಾಡಿದ ‘ಲಕ್ಷ್ಮಿ ಬಾರಮ್ಮ’ ನಟಿ ಕವಿತಾ

    ‘ಮಹಾಕಾಳಿ’ ಸಿನಿಮಾವನ್ನು ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಮಹಾಕಾಳಿ’ ಸಿನಿಮಾವು ಬಹುಭಾಷೆಗಳಲ್ಲಿ ಮೂಡಿ ಬರಲಿದೆ. ಶೀಘ್ರದಲ್ಲೇ ಚಿತ್ರದ ತಾರಾಬಳಗ ಹಾಗೂ ಉಳಿದ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

  • ವಿನಯ್ ರೈ ಜೊತೆ ಪ್ರೀತಿಯಲ್ಲಿ ಬಿದ್ರಾ ಕನ್ನಡದ ‘ಆಪ್ತರಕ್ಷಕ’ ನಟಿ?

    ವಿನಯ್ ರೈ ಜೊತೆ ಪ್ರೀತಿಯಲ್ಲಿ ಬಿದ್ರಾ ಕನ್ನಡದ ‘ಆಪ್ತರಕ್ಷಕ’ ನಟಿ?

    ವಿಷ್ಣುವರ್ಧನ್ ನಟನೆಯ ‘ಆಪ್ತರಕ್ಷಕ’ (Aptharakshaka) ಚಿತ್ರದಲ್ಲಿ ನಾಗವಲ್ಲಿ ಪಾತ್ರದಲ್ಲಿ ನಟಿಸಿದ್ದ ವಿಮಲಾ ರಾಮನ್ (Vimala Raman) ಇದೀಗ ಖಳನಟ ವಿನಯ್ ರೈ (Vinay Rai) ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಪ್ರೀತಿಯಲ್ಲಿ ಬಿದ್ರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಚರ್ಚೆ ಶುರುವಾಗಿದೆ.

    ‘ಹನುಮಾನ್’ (Hanuman) ಚಿತ್ರದ ವಿಲನ್ ವಿನಯ್ ರೈ ಜೊತೆ ವಿಮಲಾ ಕ್ಲೋಸ್‌ ಆಗಿರುವ ಫೋಟೋಗಳು ಇನ್ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಶೇರ್ ಮಾಡುತ್ತಿರುತ್ತಾರೆ. ಇದೀಗ ಮತ್ತೆ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಈ ಜೋಡಿ ಸುದ್ದಿಯಲ್ಲಿದೆ. ಇದನ್ನೂ ಓದಿ:ಕಾರು ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಂ ದುರ್ಮರಣ

    40 ವರ್ಷ ಮೇಲ್ಪಟ್ಟಿರುವ ವಿನಯ್ ಮತ್ತು ವಿಮಲಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸದ್ಯಲ್ಲೇ ಈ ಜೋಡಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತಾರಾ ಎಂದು ಕಾದುನೋಡಬೇಕಿದೆ.

    ವಿನಯ್ ರೈ ಅವರು ಮುಂಬೈನ ತುಳು ಕುಟುಂಬದಲ್ಲಿ ಜನಿಸಿದವರು. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಹನುಮಾನ್ ಚಿತ್ರದಲ್ಲಿ ತೇಜಾ ಸಜ್ಜಾಗೆ ಖಡಕ್ ವಿಲನ್ ಆಗಿ ನಟಿಸಿದ್ದರು.

    ಆಪ್ತರಕ್ಷಕ, ರಾಜರಾಜೇಂದ್ರ ಚಿತ್ರದಲ್ಲಿ ವಿಮಲಾ ರಾಮನ್ ನಟಿಸಿದ್ದಾರೆ. ಸೌತ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂದಹಾಗೆ, ವಿನಯ್ ಮತ್ತು ವಿಮಲಾ ಜೋಡಿ `ಗಾಂಡೀವಧಾರಿ ಅರ್ಜುನ’ ಚಿತ್ರದಲ್ಲಿ ದಂಪತಿಗಳಾಗಿ ನಟಿಸಿದ್ದರು.

  • ‘ಹನುಮಾನ್’- 2ನಲ್ಲಿ ರಾಕಿ ಬಾಯ್: ಯಶ್ ಕೊಟ್ರು ಕ್ಲ್ಯಾರಿಟಿ

    ‘ಹನುಮಾನ್’- 2ನಲ್ಲಿ ರಾಕಿ ಬಾಯ್: ಯಶ್ ಕೊಟ್ರು ಕ್ಲ್ಯಾರಿಟಿ

    ಕೆಜಿಎಫ್, ಕೆಜಿಎಫ್ 2 (KGF 2) ಚಿತ್ರದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಬಗ್ಗೆ ಸದಾ ಒಂದಲ್ಲಾ ಒಂದು ವಿಚಾರವಾಗಿ ಚಾಲ್ತಿಯಲ್ಲಿರುತ್ತಾರೆ. ಸುದ್ದಿಗೋಷ್ಠಿಯೊಂದರಲ್ಲಿ ಶಾರುಖ್ ಖಾನ್, ಕರೀನಾ ಕಪೂರ್ ‘ಟಾಕ್ಸಿಕ್’ ಚಿತ್ರಕ್ಕೆ ಎಂಟ್ರಿ ಕೊಡ್ತಾರಾ ಎಂಬ ವಿಚಾರಕ್ಕೆ ಯಶ್ ಸ್ಪಷ್ಟನೆ ನೀಡಿದ್ದರು. ಅದರಂತೆ ‘ಹನುಮಾನ್’ 2ನಲ್ಲಿ ರಾಕಿಬಾಯ್ ನಟಿಸ್ತಾರಾ ಎಂಬ ವಿಚಾರಕ್ಕೆ ಸ್ವತಃ ಯಶ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ವಿನ್ನರ್ ಕಾರ್ತಿಕ್ ತಂಗಿ ಮಗುವಿಗೆ ಚಿನ್ನದ ಗಿಫ್ಟ್ ಕೊಟ್ಟ ತನಿಷಾ

    ‘ಹನುಮಾನ್’ ಪಾರ್ಟ್ 2ನಲ್ಲಿ ನಾನು ನಟಿಸುತ್ತಿಲ್ಲ. ಈಗ ‘ಟಾಕ್ಸಿಕ್’ (Toxic) ಸಿನಿಮಾ ಬಿಟ್ಟು ಬೇರೆ ಕಡೆ ಯೋಚನೆ ಮಾಡುತ್ತಿಲ್ಲ. ಪರಭಾಷೆಯಿಂದ ಸಾಕಷ್ಟು ಸಿನಿಮಾಗಳು ನನ್ನನ್ನು ಅರಸಿ ಬಂದಿರೋದು ನಿಜ. ಆದರೆ ಯಾವ ಚಿತ್ರಕ್ಕೂ ನಾನು ಸಹಿ ಹಾಕಿಲ್ಲ ಎಂದು ಯಶ್ ಉತ್ತರಿಸಿದ್ದಾರೆ. ಅಲ್ಲಿಗೆ ಹನುಮಾನ್ 2ನಲ್ಲಿ ಯಶ್ ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ತೇಜ ಸಜ್ಜ ನಟಿಸಿರುವ ‘ಹನುಮಾನ್’ (Hanuman) ಸಿನಿಮಾ ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ಪಾರ್ಟ್ 2 ಮಾಡಲು ತೆರೆಮರೆಯಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಹೀಗಿರುವಾಗ ಪ್ರದೀಪ್ ವರ್ಮಾ ಅವರ ನಿರ್ದೇಶನದಲ್ಲಿ ‘ಹನುಮಾನ್ ಪಾರ್ಟ್ 2’ ಮೂಡಿ ಬರಲಿದ್ದು, ಯಶ್ ಲೀಡ್ ರೋಲ್‌ನಲ್ಲಿ ನಟಿಸುತ್ತಾರೆ ಎಂದೇ ಸುದ್ದಿಯಾಗಿತ್ತು. ಅದಕ್ಕೆ ರಾಕಿಭಾಯ್ ಈಗ ಉತ್ತರ ನೀಡಿದ್ದಾರೆ.

    ‘ಟಾಕ್ಸಿಕ್’ ಶೂಟಿಂಗ್ ಇಷ್ಟರಲ್ಲೇ ಶುರು ಆಗಲಿದೆ. ದೊಡ್ಡ ಮಟ್ಟದ ಪ್ಲ್ಯಾನ್ ನಡೆಯುತ್ತಿದೆ. ‘ಟಾಕ್ಸಿಕ್’ (Toxic) ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಯಶ್ ಹೇಳಿದ್ದಾರೆ.

    ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೂಡಿ ಬರುತ್ತಿದೆ. ಕೆವಿಎನ್ ಸಂಸ್ಥೆ (KVN Productions) ಜೊತೆ ಯಶ್ ಕೈಜೋಡಿಸಿದ್ದಾರೆ.

  • ತೇಜ ಸಜ್ಜ ನಟನೆಯ ‘ಹನುಮಾನ್‌’ ಚಿತ್ರದ ಟ್ರೈಲರ್‌ ಔಟ್‌

    ತೇಜ ಸಜ್ಜ ನಟನೆಯ ‘ಹನುಮಾನ್‌’ ಚಿತ್ರದ ಟ್ರೈಲರ್‌ ಔಟ್‌

    ಪ್ರಶಾಂತ್ ವರ್ಮಾ (Prashanth Varma) ನಿರ್ದೇಶನದ ತೇಜ ಸಜ್ಜ (Teja Sajja) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಹನು-ಮಾನ್’ (Hanuman Film) ಟೀಸರ್ ಬಿಡುಗಡೆಯಾಗಿದೆ. ಪ್ರೈಮ್ ಶೋ ಎಂಟಟೈನ್ಮೆಂಟ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಟ್ರೈಲರ್ ಝಲಕ್ ಮೂಲಕ ಪ್ರೇಕ್ಷಕರೆದುರು ಸೂಪರ್ ಹೀರೋ ‘ಹನುಮಾನ್’ ದರ್ಶನ ಕೊಟ್ಟಿದ್ದಾರೆ.

    ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ ‘ಹನು-ಮಾನ್’ ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜ ನಟಿಸುತ್ತಿದ್ದು, ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿರೋದು ಟ್ರೈಲರ್ ನೋಡಿದಾಗಲೇ ತಿಳಿದು ಬರುತ್ತೆ. ಚಿತ್ರದಲ್ಲಿ ನಾಯಕಿಯಾಗಿ ಅಮೃತಾ ಐಯ್ಯರ್ (Amrutha Iyer) ನಟಿಸಿದ್ದಾರೆ. ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ನಾಯಕ ನಟ ತೇಜ ಸಜ್ಜ ಲುಕ್, ಚಿತ್ರದ ಮೇಕಿಂಗ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಎಲ್ಲವೂ ಗಮನ ಸೆಳೆಯುತ್ತಿದೆ.

    ಯಥೋ ಧರ್ಮ ತತೋ ಹನುಮಾ. ಯಥೋ ಹನುಮ ತತೋ ಜಯ ಅಂದರೆ ಎಲ್ಲಿ ಸದಾಚಾರವಿದೆಯೋ ಅಲ್ಲಿ ಹನುಮಂತನು, ಮತ್ತು ಎಲ್ಲಿ ಹನುಮಂತ ಇದ್ದಾನೋ ಅಲ್ಲಿ ಜಯವಿದೆ ಎಂಬ ಡೈಲಾಗ್ ಮೂಲಕ ಹನುಮಾನ್ ಪ್ರಪಂಚನ್ನು ಪರಿಚಯಿಸಲಾಗಿದೆ. ಅಂಜನಾದ್ರಿ ಬೆಟ್ಟ, ಹನುಮಾನ್ ಪ್ರತಿಮೆ ಟ್ರೈಲರ್ ಹೈಲೆಟ್ಸ್ ಗಳಲ್ಲೊಂದು. ಇದನ್ನೂ ಓದಿ:ಯಶ್ ಜೊತೆಗಿನ ಸ್ನೇಹ, ಜೀವನ ಪೂರ್ತಿ ಮುಂದುವರೆಯಲಿದೆ: ಪ್ರಶಾಂತ್ ನೀಲ್

    ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ.

    ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಹನುಮಾನ್ ಸಿನಿಮಾ ರಿಲೀಸ್ ಆಗ್ತಿದೆ. ಭಾರತೀಯ ವಿವಿಧ ಭಾಷೆಗಳಾದ ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಇಂಗ್ಲೀಷ್, ಸ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯದಲ್ಲೇ ರಿಲೀಸ್‌ ಬಗ್ಗೆ ಹೆಚ್ಚಿನ ಅಪ್‌ಡೇಟ್‌ ಸಿಗಲಿದೆ.