Tag: Hanuma Flag

  • ಕೆರಗೋಡು ಹನುಮಧ್ವಜ ವಿವಾದ – ಅಯೋಧ್ಯೆ ರಾಮ ಮಂದಿರ ಮುಂದೆ ಪಣ ತೊಟ್ಟ ಹಿಂದೂ ಕಾರ್ಯಕರ್ತರು

    ಕೆರಗೋಡು ಹನುಮಧ್ವಜ ವಿವಾದ – ಅಯೋಧ್ಯೆ ರಾಮ ಮಂದಿರ ಮುಂದೆ ಪಣ ತೊಟ್ಟ ಹಿಂದೂ ಕಾರ್ಯಕರ್ತರು

    ಮಂಡ್ಯ: ಇಲ್ಲಿನ ಕೆರಗೋಡು (Keragodu) ಹನುಮಧ್ವಜ (Hanuma Flag) ತೆರವು ಪ್ರಕರಣ ಅಯೋಧ್ಯೆಯ ಅಂಗಳದಲ್ಲಿ ಸದ್ದು ಮಾಡಿದೆ. ಹಿಂದೂ ಕಾರ್ಯಕರ್ತರು ಅಯೋಧ್ಯೆಯ ಬಾಲರಾಮನ ದರ್ಶನ ಪಡೆದು, ಮತ್ತೆ ಹನುಮಧ್ವಜ ಹಾರಿಸುತ್ತೇವೆ ಎಂದು ದೇವಾಲಯದ ಆವರಣದಲ್ಲಿ ಘೋಷಣೆ ಕೂಗಿದ್ದಾರೆ.

    ಹನುಮಧ್ವಜ ವಿವಾದದ ಬಳಿಕ ಕೆರಗೋಡು ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಅಯೋಧ್ಯೆ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಶ್ರೀರಾಮನ ದರ್ಶನ ಪಡೆದ ಗ್ರಾಮಸ್ಥರು ಶ್ರೀರಾಮನ ಸನ್ನಿಧಿಯಲ್ಲಿ ನಿಂತು ಹನುಮಧ್ವಜ ಹಾರಿಸುವ ಘೋಷಣೆ ಕೂಗಿದ್ದಾರೆ. ಈ ಮೂಲಕ ಕೆರಗೋಡಿನಲ್ಲಿ ಮತ್ತೆ ಹನುಮಧ್ವಜ ಹಾರಿಸಲು ಗ್ರಾಮಸ್ಥರು ಪಣ ತೊಟ್ಟಿದ್ದಾರೆ. ಇದನ್ನೂ ಓದಿ: ರಾಮನಗರ ವಕೀಲರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ – ಐಜೂರು ಠಾಣೆಯ ಪಿಎಸ್ಐ ಅಮಾನತು

    ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು 108 ಅಡಿ ಎತ್ತರದಲ್ಲಿ ಹನುಮಧ್ವಜ ಹಾರಿಸಿದ್ದಕ್ಕೆ ಆ ಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದರು. ಹನುಮಧ್ವಜ ಇಳಿಸಿದ್ದಕ್ಕೆ ಗ್ರಾಮದಲ್ಲಿ ಪ್ರತಿಭಟನೆ ಸಹ ನಡೆದಿತ್ತು. ಹನುಮಧ್ವಜ ಹಾರಿಸಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಇದೇ ವಿಚಾರವಾಗಿ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಕಾಂಗ್ರೆಸ್ (Congress) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಹಿಂದೂ ಸಂಘಟನೆಗಳು ಮಂಡ್ಯ (Mandya) ಬಂದ್ ಸಹ ಮಾಡಿ ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಇದೀಗ ಮತ್ತೆ ಕೆರಗೋಡು ಗ್ರಾಮಸ್ಥರು ರಾಮನ ಸನ್ನಿಧಿಯಲ್ಲಿ ನಿಂತು ಕೆರಗೋಡಲ್ಲಿ ಹನುಮ ಧ್ವಜ ಹಾರಿಸುವ ಪಣ ತೊಟ್ಟಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ಖ್ಯಾತ ವಕೀಲ ಫಾಲಿ ನಾರಿಮನ್ ನಿಧನ

  • ಇಂದು ರಾಜ್ಯಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸಾ ಪಠಣಕ್ಕೆ VHP ಕರೆ

    ಇಂದು ರಾಜ್ಯಾದ್ಯಂತ ಸಾಮೂಹಿಕ ಹನುಮಾನ್ ಚಾಲೀಸಾ ಪಠಣಕ್ಕೆ VHP ಕರೆ

    ಮಂಗಳೂರು: ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ (Hanuma Flag Keregodu) ತೆರವುಗೊಳಿಸಿದ ಪ್ರಕರಣ ತಣ್ಣಗಾಗಿದ್ರೂ ಮತ್ತೆ ಅದೇ ಸ್ಥಳದಲ್ಲಿ ಧ್ವಜ ಮರುಸ್ಥಾಪನೆಗೆ ವಿಶ್ವ ಹಿಂದೂ ಪರಿಷತ್ (VHP) ಪಟ್ಟು ಹಿಡಿದಿದೆ. ಧ್ವಜ ತೆರವು ಮಾಡಿರೋದನ್ನ ಖಂಡಿಸಿ ವಿಎಚ್‍ಪಿ-ಬಜರಂಗದಳ ರಾಜ್ಯಾದ್ಯಂತ ವಿಭಿನ್ನ ಪ್ರತಿಭಟನೆಗೆ ಕರೆ ನೀಡಿದೆ. ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಎದುರು ಹನುಮಾನ್ ಚಾಲಿಸ್ ಪಠಣಕ್ಕೆ ತಯಾರಿ ನಡೆಸಿದೆ.

    ಕಳೆದ ಫೆ.2ರಂದು ಮಂಗಳೂರಿನ ವಿಎಚ್‍ಪಿ (VHP) ಕಚೇರಿಯಲ್ಲಿ ಹನುಮ ಧ್ವಜ ಹಾರಿಸಿದ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ ಆರ್, ಅಂದೇ ಈ ಅಭಿಯಾನ ನಡೆಸಲು ಕರೆ ನೀಡಿದ್ದರು. ಮಂಡ್ಯದ ಘಟನೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿದೆ. ಸಮಾಜಕ್ಕೆ ವಿಶ್ವಾಸ ತುಂಬಿಸಲು ಧಾರ್ಮಿಕ ಕೇಂದ್ರ ಹಾಗೂ ಹಿಂದೂಗಳ ಮನೆಮನೆಯಲ್ಲಿ ಹನುಮಧ್ವಜ ಹಾರಿಸಲಾಗಿದೆ. ಜೊತೆಗೆ ಹುನುಮಾನ್ ಚಾಲೀಸಾ ಪಠಣಕ್ಕೂ ಬಜರಂಗದಳ ರಾಜ್ಯದ ಹಿಂದೂ ಸಮಾಜಕ್ಕೆ ಕರೆ ನೀಡಿದೆ. ಇದನ್ನೂ ಓದಿ: ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್‌

    ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಎದುರು ಹನುಮ ಚಾಲೀಸಾ (Hanuman Chalisa) ಪಠಣ ನಡೆಯಲಿದೆ. ಅಲ್ಲೇ ಧರಣಿ ಸತ್ಯಾಗ್ರಹವನ್ನೂ ನಡೆಸಲಿದ್ದು, ಈ ಮೂಲಕ ಕೆರೆಗೋಡಿನಲ್ಲಿ ಹನುಮ ಧ್ವಜ ಇದ್ದ ಸ್ಥಳದಲ್ಲೇ ಮತ್ತೆ ಹನುಮ ಧ್ವಜ ಹಾರಿಸಲು ಒತ್ತಾಯಿಸಲಾಗುವುದು. ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಜರಂಗದಳ ಎಚ್ಚರಿಕೆ ನೀಡಿದೆ.

    ಒಟ್ಟಿನಲ್ಲಿ ರಾಜ್ಯದಲ್ಲಿ ಹನುಮ ಧ್ವಜ ವಿವಾದವನ್ನು ಹಿಂದೂ ಸಂಘಟನೆಗಳು ಬಿಡುವ ಲಕ್ಷಣ ಕಾಣುತ್ತಿಲ್ಲ. ಕೆರೆಗೋಡಿನಲ್ಲಿ ಈ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾದ್ರೂ ವಿಎಚ್‍ಪಿ -ಬಜರಂಗದಳ ತನ್ನ ಪಟ್ಟು ಬಿಡುತ್ತಿಲ್ಲ. ಮತ್ತೆ ಅದೇ ಸ್ಥಳದಲ್ಲಿ ಹನುಮ ಧ್ವಜ ಹಾರಿಸಿಯೇ ಸಿದ್ಧ ಅನ್ನೋ ಪ್ರಯತ್ನದಲ್ಲಿದೆ ಬಜರಂಗದಳ. ಮುಂದಿನ ದಿನಗಳಲ್ಲಿ ಕೆರೆಗೋಡಿನಲ್ಲಿ ಧ್ವಜ ಹಾರಿಸಲು ಅನುಮತಿ ನೀಡದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ. ಇದಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

  • ಹನುಮಧ್ವಜ ವಿವಾದ – ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ ಹಾಕಿದ್ರೆ ಬೀಳುತ್ತೆ ಕೇಸ್‌!

    ಹನುಮಧ್ವಜ ವಿವಾದ – ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ ಹಾಕಿದ್ರೆ ಬೀಳುತ್ತೆ ಕೇಸ್‌!

    – ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಆದೇಶ

    ಮಂಡ್ಯ: ಕೆರಗೋಡು ಹನುಮಧ್ವಜ ವಿವಾದಕ್ಕೆ (Hanuman Flag Controversy) ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳು, ಪೋಸ್ಟರ್‌ಗಳು ಹಾಗೂ ಉದ್ರಿಕ್ತ ಭಾಷಣಗಳನ್ನ ಹಂಚಿಕೊಳ್ಳದಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Mandya SP) ಆದೇಶಿಸಿದ್ದಾರೆ.

    ಆದೇಶ ಪ್ರತಿಯಲ್ಲಿ ಏನಿದೆ?
    ಹನುಮಧ್ವಜ ಸಂಘರ್ಷ ಸಂಬಂಧ ಪ್ರಕಟಣೆ ಹೊರಡಿಸಿರುವ ಎಸ್ಪಿ, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಾದ X, Facebook, Whatsaap, Instagram, Youtube ಇತ್ಯಾದಿಗಳಲ್ಲಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುವ ಚಿತ್ರಗಳು, ವಿಡಿಯೋಗಳು, ಪ್ರಚೋದನಾಕಾರಿ ಹೇಳಿಕೆಗಳು, ಪೋಸ್ಟರ್‌ಗಳು ಹಾಗೂ ಉದ್ರೇಕಕಾರಿ ಭಾಷಣಗಳನ್ನ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸಬಾರದು. ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವಿಗೆ ಆಕ್ರೋಶ- ಮಂಡ್ಯದಲ್ಲಿ ಕಲ್ಲು ತೂರಾಟ, ಲಾಠಿಚಾರ್ಜ್

    ಒಂದು ವೇಳೆ ಕಳುಹಿಸಿದರೆ ಹಾಗೂ ಇದಕ್ಕೆ ಪ್ರಚೋದನೆ ನೀಡುವಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೆ ಜಿಲ್ಲಾಡಳಿತವು ತೀವ್ರತರವಾದ ನಿಗಾ ಇಟ್ಟಿರುತ್ತದೆ ಎಂದು ಆದೇಶ ಪ್ರತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿಯೊಬ್ಬರ ಮಗ ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ: ಚಲುವರಾಯಸ್ವಾಮಿ

    ಏನಿದು ಪ್ರಕರಣ?
    ಕಳೆದ ಜನವರಿ 28ರಂದು ಮಂಡ್ಯದ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭದಲ್ಲಿ ಹಾರಾಡುತ್ತಿದ್ದ ಹನುಮಧ್ವಜವನ್ನು ಪೊಲೀಸ್‌ ಅಧಿಕಾರಿಗಳು ತೆರವುಗೊಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಕೆರಗೋಡು ಗ್ರಾಮಸ್ಥರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿದ್ದರು. ಭಾರೀ ಹೈಡ್ರಾಮಾ ನಡುವೆ ತಳ್ಳಾಟ-ನೂಕಾಟವೂ ನಡೆದಿತ್ತು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದರು. ಈ ವಿವಾದ ರಾಜಾದ್ಯಂತ ವ್ಯಾಪಿಸಿತು. ಇದನ್ನೂ ಓದಿ: ಹನುಮಂತನ ಕೆಣಕಿದ್ದಕ್ಕೆ ಲಂಕ ದಹನವಾಯ್ತು, ಅದೇ ರೀತಿ ನಿಮ್ಮ ಅವನತಿಯಾಗುತ್ತೆ: ಹೆಚ್‍ಡಿಕೆ ವಾಗ್ದಾಳಿ

  • ಹನುಮಧ್ವಜ ಇಳಿಸಿದಂತೆಯೇ ನಿಮ್ಮನ್ನು ಹಿಂದೂಗಳು ಕುರ್ಚಿಯಿಂದ ಇಳಿಸುವ ದಿನ ದೂರವಿಲ್ಲ: ಸಿಎಂಗೆ ಆರ್.ಅಶೋಕ್ ಠಕ್ಕರ್

    ಹನುಮಧ್ವಜ ಇಳಿಸಿದಂತೆಯೇ ನಿಮ್ಮನ್ನು ಹಿಂದೂಗಳು ಕುರ್ಚಿಯಿಂದ ಇಳಿಸುವ ದಿನ ದೂರವಿಲ್ಲ: ಸಿಎಂಗೆ ಆರ್.ಅಶೋಕ್ ಠಕ್ಕರ್

    ಬೆಂಗಳೂರು: ಕೆರಗೋಡಿನಲ್ಲಿ ಧ್ವಜಸ್ತಂಭದಿಂದ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ವಿಧಾನಸಭಾ ವಿಪಕ್ಷ ನಾಯಕ ಆರ್‌.ಅಶೋಕ್‌ (R.Ashok) ಠಕ್ಕರ್‌ ಕೊಟ್ಟಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಆರ್‌.ಅಶೋಕ್‌, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ (Hanuma Flag) ಇಳಿಸಿದ ಮೇಲೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ರಾಷ್ಟ್ರ ಧ್ವಜದ ಮೇಲೆ ಎಲ್ಲಿಲ್ಲದ ಭಕ್ತಿ ಉಕ್ಕಿ ಹರಿಯುತ್ತಿದೆ. 2011ರಲ್ಲಿ ಗಣರಾಜ್ಯೋತ್ಸವದ ದಿನದಂದು ಜಮ್ಮು-ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಏಕ್ತಾ ಯಾತ್ರೆ ಕೈಗೊಂಡಿದ್ದಾಗ ರಾಷ್ಟ್ರಧ್ವಜ ಹಾರಿಸಲು ಬಿಡದೆ ಬಿಜೆಪಿ ನಾಯಕರನ್ನು ಬಂದಿಸಿದ್ದು ಇದೇ ಕಾಂಗ್ರೆಸ್ ಪಕ್ಷದ ಸರ್ಕಾರ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹನುಮಧ್ವಜ ತೆರವು ಖಂಡಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

    ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವುದನ್ನೂ ತಡೆದಿದ್ದು ಕೂಡ ಇದೇ ಕಾಂಗ್ರೆಸ್ ಪಕ್ಷ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 75 ವರ್ಷಗಳ ನಂತರ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಿದ್ದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ. ಕೇಸರಿ, ಕುಂಕುಮ ಕಂಡರೆ ನನಗೆ ಭಯ ಅಂತ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವ ತಮಗೆ ಹನುಮಧ್ವಜದ ಮೇಲಿನ ನಿಮ್ಮ ದ್ವೇಷವನ್ನ ಮರೆಮಾಚಲು ರಾಷ್ಟ್ರಧ್ವಜದ ಮುಖವಾಡ ಹಾಕಿಕೊಳ್ಳುವ ಅಗತ್ಯ ಏನಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

    ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಬಣ್ಣವಿದೆ. ಕೇಸರಿ ಬಣ್ಣ ಹಿಂದೂ ಧರ್ಮದ ಸಾಧು-ಸಂತರು, ಸನ್ಯಾಸಿಗಳು, ಮಠಾಧಿಪತಿಗಳು ಧರಿಸುವ ಬಣ್ಣ. ಹಿಂದೂಗಳ ಪರಮ ಪವಿತ್ರ ಲಾಂಛನ ಕೇಸರಿ ಬಣ್ಣ. ತ್ಯಾಗದ ಸಂಕೇತವಾದ ಕೇಸರಿ ಬಣ್ಣ ಶಾಶ್ವತವೆ ಹೊರತು ತಮ್ಮ ಅಧಿಕಾರವಲ್ಲ. ತಾವು ಹನುಮ ಧ್ವಜವನ್ನು ಇಳಿಸಿದ ರೀತಿಯಲ್ಲೇ ಹಿಂದೂಗಳು ತಮ್ಮನ್ನು ಕುರ್ಚಿಯಿಂದ ಇಳಿಸುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿಯೊಬ್ಬರ ಮಗ ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ: ಚಲುವರಾಯಸ್ವಾಮಿ

  • ಜಾತಿ, ಧರ್ಮಗಳ ನಡುವೆ ಕಿತ್ತಾಟ ನಡೆಯುವಂತಹ ವಾತಾವರಣ ಸೃಷ್ಟಿಸಿರೋದು ಬೇಸರ: ಸುಮಲತಾ

    ಜಾತಿ, ಧರ್ಮಗಳ ನಡುವೆ ಕಿತ್ತಾಟ ನಡೆಯುವಂತಹ ವಾತಾವರಣ ಸೃಷ್ಟಿಸಿರೋದು ಬೇಸರ: ಸುಮಲತಾ

    – ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು
    – ತಾರಕ್ಕೇರುತ್ತಿದೆ ಪ್ರತಿಭಟನೆಯ ಕಿಚ್ಚು

    ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಪೊಲೀಸರು ಹನುಮಧ್ವಜ (Hanuma Flag) ತೆರವುಗೊಳಿಸಿದ್ದು, ಸಂಘರ್ಷಕ್ಕೆ ಕಾರಣವಾಗಿದೆ. ಕೆರಗೋಡು ಗ್ರಾಮದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಪೊಲೀಸರು ಗ್ರಾಮಸ್ಥರ ನಡುವೆ ತಳ್ಳಾಟ ನೂಕಾಟವೂ ನಡೆದಿದೆ.

    ಪೊಲೀಸರ (Mandya Police) ವಿರುದ್ಧವೇ ಘರ್ಷಣೆಗೆ ಮುಂದಾಗಿರುವ ಹಿಂದೂ ಕಾರ್ಯಕರ್ತರು ಧ್ವಜಸ್ತಂಬದ ಸುತ್ತಲೂ ನಿಂತು ಮತ್ತೆ ರಾಮನ ಫೋಟೋ ಕಟ್ಟಿದ್ದಾರೆ. ಸದ್ಯ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಹನುಮಧ್ವಜ ತೆರವುಗೊಳಿಸಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಘಟನೆ ಕುರಿತು ಹಲವು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಂಡ್ಯ ಸಂಸದೆ ಸುಮಲತಾ (Sumalatha Ambareesh )ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ ಪುಟದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಫೇಸ್‌ ಬುಕ್‌ ಪುಟದಲ್ಲಿ ಏನಿದೆ?
    ಮಂಡ್ಯ ತಾಲ್ಲೂಕು ಕೆರೆಗೋಡು ಗ್ರಾಮದ ಶ್ರೀ ಗೌರಿ ಶಂಕರ್ ಸೇವಾ ಟ್ರಸ್ಟ್ ಮೂರು ದಶಕಗಳಿಂದ ಧಾರ್ಮಿಕ, ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದೆ. ಈ ಬಾರಿ 108 ಅಡಿ ಧ್ವಜ ಸ್ಥಂಬ ನಿರ್ಮಿಸಿ ಹನುಮಧ್ವಜ ಹಾರಿಸಿದೆ. ಇದೀಗ ವಿವಾದವಾಗಿ ಏರ್ಪಟ್ಟಿರುವುದು ಅತ್ಯಂತ ನೋವು ತಂದಿದೆ. ಸೇವಾ ಟ್ರಸ್ಟ್, ಹಾಗೂ ಊರಿನ ಮುಖಂಡರು ಈವರೆಗೂ ಯಾವುದೇ ಜಾತಿ, ಧರ್ಮ ಲೆಕ್ಕಿಸದೇ ಇಂತಹ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಬಾರಿ ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆ ಆಗಿರುವುದರಿಂದ ಆ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಹೊರಟಿದ್ದರು. ಆದರೆ, ರಾಜಕೀಯ ಕಾರಣಕ್ಕಾಗಿ ಈ ಸಂಭ್ರಮವನ್ನು ತಡೆಯುವ ಪ್ರಯತ್ನ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

    ಏಕಾಏಕಿ ಹನುಮಧ್ವಜ ಕೆಳಗಿಳಿಸಿ, ರಾಮನ ಬ್ಯಾನರ್ ಕಿತ್ತು ಹಾಕಿರುವುದು ಸರಿಯಾದ ಕ್ರಮವಲ್ಲ. ಜಿಲ್ಲಾಡಳಿತ ಅಥವಾ ಸ್ಥಳೀಯ ಅಧಿಕಾರಿಗಳು ಊರಿನ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ಸಲಹೆ ನೀಡಬೇಕಿತ್ತು. ಯಾವುದಕ್ಕಾಗಿ ಅನುಮತಿ ನೀಡಲಾಗಿದೆ ಎನ್ನುವ ಅರಿವು ನೀಡಬೇಕಿತ್ತು. ಆದರೆ, ಬಲವಂತದ ಕ್ರಮ ತೆಗೆದುಕೊಂಡು ಜಾತಿ, ಧರ್ಮಗಳ ನಡುವೆ ಕಿತ್ತಾಟ ನಡೆಯುವಂತಹ ವಾತಾವರಣ ಸೃಷ್ಟಿ ಮಾಡಿರುವುದು ಬೇಸರ ತಂದಿದೆ.

    ಊರಿನ ಮುಖಂಡರ ಜೊತೆ ಅಧಿಕಾರಿಗಳು ಮಾತನಾಡಿ, ಅಲ್ಲಿ ಜರೂರಾಗಿ ಶಾಂತಿ ನೆಲೆಸುವಂತ ಮಾಡಿ. ಧಾರ್ಮಿಕ ಆಚರಣೆಗೆ ಅನುವು ಮಾಡಿಕೊಟ್ಟು ಸೌಹಾರ್ದಕ್ಕೆ ಹೆಸರಾಗಿರುವ ಮಂಡ್ಯ ಜಿಲ್ಲೆಗೆ ಕಪ್ಪು ಚುಕ್ಕಿ ತರದಂತೆ ಆಡಳಿತ ವ್ಯವಸ್ಥೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡುವೆ. ಈ ಸಮಯದಲ್ಲಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು, ಜನರ ಭಾವನೆಗಳಿಗೆ ಧಕ್ಕೆ ತರದಂತೆ, ಅವಮಾನಿಸದಂತೆ ಜಿಲ್ಲಾ ಆಡಳಿತ ಮತ್ತು ಜನಪ್ರತಿನಿಧಿಗಳು ನಡೆದುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಬರೆದುಕೊಂಡಿದ್ದಾರೆ.

  • ರಾಷ್ಟ್ರ ಧ್ವಜ ಹಾರಿಸೋ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ – ಸಿದ್ದರಾಮಯ್ಯ

    ರಾಷ್ಟ್ರ ಧ್ವಜ ಹಾರಿಸೋ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ – ಸಿದ್ದರಾಮಯ್ಯ

    – ಮಂಡ್ಯದಲ್ಲಿ ಹನುಮ ಧ್ವಜ ಘರ್ಷಣೆ, ಕೆರಗೋಡು ಗ್ರಾಮ ಉದ್ವಿಗ್ನ
    – ಕಾಂಗ್ರೆಸ್‌ನದ್ದು ರಾಮ ವಿರೋಧಿ ನೀತಿ ಎಂದ ಅಶೋಕ್‌

    ಚಿತ್ರದುರ್ಗ/ಮಂಡ್ಯ: ರಾಷ್ಟ್ರ ಧ್ಬಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ.

    ಚಿತ್ರದುರ್ಗದ ಎಸ್.ಜೆಎಂ ಶಾಲಾ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದ (Mandya) ಕೆರಗೋಡು ಗ್ರಾಮಮದಲ್ಲಿ ಪೊಲೀಸರು (Mandya Police) ಹನುಮಧ್ವಜ ಇಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ರಾಷ್ಟ್ರ ಧ್ಬಜ ಹಾಗೂ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಆದ್ರೆ ರಾಷ್ಟ್ರ ಧ್ಬಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ

    ಇದು ಕಾಂಗ್ರೆಸ್‌ನ ರಾಮ ವಿರೋಧಿ ನೀತಿ:
    ಸಿದ್ದರಾಮಯ್ಯ `ಜೈ ಶ್ರೀರಾಮ್’ ಅಂದರು, ಡಿಕೆ ಶಿವಕುಮಾರ್ ಶಿವ ಅಂದರು. ಕುಕ್ಕರ್ ಬಾಂಬ್ ಹಿಡಿದುಬಂದನಿಗೆ ಬ್ರದರ್ ಅಂದರು, ಅವರ ಹೃದಯದಲ್ಲಿ ಟಿಪ್ಪು ತುಂಬಿದ್ದಾನೆ. ಹನುಮಧ್ವಜ ಕೆಳಗಿಳಿಸಲು ನೇರವಾಗಿ ಕಾಂಗ್ರೆಸ್ ಕಾರಣ. ಇದು ಹಿಂದೂ ವಿರೋಧಿ ಹಾಗೂ ರಾಮ ವಿರೋಧಿ ನೀತಿ. ಏಕಾಏಕಿ ಪೋಲಿಸರನ್ನ ಕರೆದುಕೊಂಡು ಹೋಗಿ ಧ್ವಜ ತೆಗೆಸುವಂತಹದ್ದು ಏನಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.

    ಸಿದ್ದರಾಮಯ್ಯ ಅವರೇ ನಿಮ್ಮ ಹೆಸರಲ್ಲಿ ರಾಮ ಇದ್ರೆ ಆಗಲ್ಲ, ಮನಸ್ಸಿಲ್ಲಿ ಇರೋದು ಟಿಪ್ಪು. ಹನುಮ ಧ್ವಜ ಕಿತ್ತುಹಾಕಿರುವುದು ಹಿಂದೂಗಳಿಗೆ ಮಾಡಿರುವ ಅವಮಾನ. ಗ್ರಾಮ ಪಂಚಾಯಿತಿಯಲ್ಲೇ ತೀರ್ಮಾನ ಮಾಡಿದ ಬಳಿಕ ಹನುಮಧ್ವಜ ಹಾಕಲಾಗಿತಗ್ತು. ಆದ್ರೆ ಕಾಂಗ್ರೆಸ್‌ಗೆ ಹನುಮನ ಬಗ್ಗೆ ದ್ವೇಷದಿಂದ ಈ ಕೆಲಸ ಮಾಡಿದೆ ಎಂದು ಕೆಂಡ ಕಾರಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ – ಡಿಕೆ ಶಿವಕುಮಾರ್

    ನಾವು ಕೆರೆಗೋಡಿಗೆ ಹೋಗಿ ಅಲ್ಲಿ ಪ್ರತಿಭಟನೆ ಮಾಡ್ತಿವಿ, ಅಲ್ಲಿ ಗ್ರಾಮಸ್ಥರ ಮೇಲೆ ಲಾಟಿ ಚಾರ್ಜ್ ಆಗಿದೆ. ಅಲ್ಲೇ ನಾವು ಹನುಮಧ್ವಜ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

  • ಹನುಮಧ್ವಜ ಕೆಳಗಿಳಿಸಿದ ಪೊಲೀಸರು – ಸ್ಥಳೀಯರ ಮೇಲೆ ಲಾಠಿ ಚಾರ್ಜ್‌, ಕೆರಗೋಡು ಗ್ರಾಮ ಉದ್ವಿಗ್ನ

    ಹನುಮಧ್ವಜ ಕೆಳಗಿಳಿಸಿದ ಪೊಲೀಸರು – ಸ್ಥಳೀಯರ ಮೇಲೆ ಲಾಠಿ ಚಾರ್ಜ್‌, ಕೆರಗೋಡು ಗ್ರಾಮ ಉದ್ವಿಗ್ನ

    – ರಾಮನ ಬ್ಯಾನರ್ ಕಿತ್ತು ಹಾಕಿದ ಪೊಲೀಸರು
    – ಹೆಚ್ಚಿದ ಪ್ರತಿಭಟನೆ ಕಿಚ್ಚು, ಕಣ್ಣೀರಿಟ್ಟ ಗ್ರಾಮಸ್ಥರು

    ಮಂಡ್ಯ: ಭಾರೀ ಹೈಡ್ರಾಮಾ ನಡುವೆ 108 ಅಡಿ ಎತ್ತರದಲ್ಲಿದ್ದ ಹನುಮಧ್ವಜವನ್ನು ಪೊಲೀಸರು (Mandya Police) ಕೆಳಗಿಳಿಸಿದ್ದಾರೆ. ಇದರಿಂದ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದ್ದು, ಜಿಲ್ಲಾಡಳಿತದ ಕೆರಗೋಡು ಗ್ರಾಮದಲ್ಲಿ ಸೆಕ್ಷನ್ 144 (144 Section) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಮಂಡ್ಯ (Mandya) ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಕೆಳಗಿಳಿಸುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಧುಮುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರಗೋಡಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಸ್ಥಳದಲ್ಲಿ ನೂರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ.

    ಗ್ರಾಮಸ್ಥರ ಮೇಲೆ ಪೊಲೀಸರ ಲಾಠಿ ಚಾರ್ಜ್:
    ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿಯನ್ನ ತಿಳಿಗೊಳಿಸಲು ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಲ್ಲದೇ ಶ್ರೀರಾಮನ ಬ್ಯಾನರ್ ಕಿತ್ತು ಹಾಕಿದ್ದಾರೆ. ಬೃಹತ್ ಧ್ವಜಸ್ತಂಬವನ್ನು ಕಟ್ ಮಾಡೋದಕ್ಕೆ ಗ್ಯಾಸ್‌ಕಟ್ಟರ್ ತರಿಸಿದ್ದಾರೆ.

    ಪೊಲೀಸರ ನಡೆಗೆ ಗ್ರಾಮಸ್ಥರು, ಹಿಂದೂ ಕಾರ್ಯಕರ್ತರು, ಮಹಿಳೆಯರು ಶಾಪ ಹಾಕಿದ್ದಾರೆ. ಕಣ್ಣೀರಿಟ್ಟು, ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಶಾಸಕ ಗಣಿಗ ರವಿ ಫೋಟೋಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಶಾಸಕರ ಕುಮ್ಮಕ್ಕಿನಿಂದ ಈ ರೀತಿ ಕೆಲಸವಾಗ್ತಿದೆ ಎಂದು ಕಿಡಿ ಕಾರಿದ್ದಾರೆ.

    ರಸ್ತೆ ತಡೆದು ಪ್ರತಿಭಟನೆ:
    ಹನುಮ ಧ್ವಜ ಇಳಿಸಿದ್ದರ ವಿರುದ್ಧ ಆಕ್ರೋಶ ಹೊರಹಾಕಿದ ಕೆರೆಗೋಡು ಗ್ರಾಮಸ್ಥರು ಮಂಡ್ಯ-ಯಡಿಯೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೈ ಶಾಸಕ ಗಣಿಗ ರವಿಕುಮಾರ್ ಫ್ಲೆಕ್ಸ್ ಹರಿದು, ಒಲೆ ಹಚ್ಚಿ, ರಸ್ತೆಯಲ್ಲೇ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಹನುಮನ ದೇವಸ್ಥಾನದ ಮುಂಭಾಗದಲ್ಲಿ ಯುವಕರೊಟ್ಟಿಗೆ ಮಹಿಳೆಯರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಆದ್ರೆ ಇದಕ್ಕೆ ಆಸ್ಪದ ನೀಡದ ಪೊಲೀಸರು ಅಡುಗೆ ಮಾಡುವುದನ್ನ ತಡೆದಿದ್ದಾರೆ. ಅಡುಗೆ ಪಾತ್ರೆಗಳಲ್ಲಿದ್ದ ನೀರನ್ನು ರುಸಿದು, ಪಾತ್ರೆಯನ್ನ ಹೊತ್ತೊಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಇಡೀ ಶಾಪ ಹಾಕಿದ್ದಾರೆ.

  • ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿ – ರೊಚ್ಚಿಗೆದ್ದ ಗ್ರಾಮಸ್ಥರು

    ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿ – ರೊಚ್ಚಿಗೆದ್ದ ಗ್ರಾಮಸ್ಥರು

    – ಜೈಶ್ರೀರಾಮ್ ಘೋಷಣೆಯೊಂದಿಗೆ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಆಕ್ರೋಶ

    ಮಂಡ್ಯ: ರಾತ್ರೋರಾತ್ರಿ ಹನುಮ ಧ್ವಜ (Hanuma Flag) ತೆರವಿಗೆ ಅಧಿಕಾರಿಗಳು ಆಗಮಿಸಿದ ಸಂದರ್ಭ ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದ ಘಟನೆ ಮಂಡ್ಯ (Mandya) ಜಿಲ್ಲೆಯಲ್ಲಿ ನಡೆದಿದೆ.

    ಅಧಿಕಾರಿಗಳು ಭಾನುವಾರ (ಜ.28) ಮುಂಜಾನೆ 3 ಗಂಟೆ ವೇಳೆಗೆ ಗ್ರಾಮಕ್ಕೆ ಆಗಮಿಸಿ ಧ್ವಜ ತೆರವಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಮಂಡ್ಯ ತಾಲೂಕಿನ ಕೆರೆಗೋಡು (Keregodu) ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಹನುಮ ಧ್ವಜ ತೆರವು ಮಾಡದಂತೆ ನೂರಾರು ಜನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 6,000 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಕೇಸ್ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಅರೆಸ್ಟ್

    ಮಂಡ್ಯ ಎಸಿ ಶಿವಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಧ್ವಜ ಇಳಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ಜೈ ಶ್ರೀರಾಮ್, ಜೈ ಹನುಮ ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸಿದ್ದು, ಧ್ವಜ ಕಂಬದ ಬಳಿಯೇ ಮಹಿಳೆಯರು ಹಾಗೂ ಯುವಕರು ಕುಳಿತಿದ್ದಾರೆ. ಅಲ್ಲದೇ ಕೆರೆಗೋಡು ಗ್ರಾಮಸ್ಥರಿಗೆ ಸಾಥ್ ನೀಡಲು ಹಲವು ಹಿಂದೂ ಸಂಘಟನೆಗಳು ಧಾವಿಸಿವೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿಂದು ಶೋಷಿತ ಸಮುದಾಯಗಳ ಬೃಹತ್ ಸಮಾವೇಶ – 2 ಲಕ್ಷಕ್ಕೂ ಅಧಿಕ ಜನ ಭಾಗಿ ನಿರೀಕ್ಷೆ

    ಹನುಮನ ಧ್ವಜ ಉಳಿವಿಗಾಗಿ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಹಿಂದೂ ಧರ್ಮದ ಪ್ರತೀಕ ಹನುಮ ಧ್ವಜ. ನಾವು ಧ್ವಜವನ್ನು ಯಾವುದೇ ಕಾರಣಕ್ಕೂ ಇಳಿಸಲ್ಲ. ರಾತ್ರಿ ಎಲ್ಲಾ ಊಟ, ನಿದ್ದೆ ಬಿಟ್ಟು ಹನುಮ ಧ್ವಜ ಕಾದಿದ್ದೇವೆ. ಕಾರಣವನ್ನು ಹೇಳದೆ ಧ್ವಜ ಇಳಿಸಲು ಬಂದಿದ್ದಾರೆ. ಹನುಮ ಧ್ವಜ ಇಳಿಸಲು ಬಂದವರಿಗೆ ಶಾಪ ತಟ್ಟದೇ ಬಿಡಲ್ಲ ಎಂದು ಮಹಿಳೆಯರು `ಪಬ್ಲಿಕ್ ಟಿವಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಾಪೋಕ್ಲು ಬಳಿಯ ನೆಲಜಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ