Tag: Hanuma

  • ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಹನುಮ ಮಾಲಾಧಾರಿಗಳು

    ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಹನುಮ ಮಾಲಾಧಾರಿಗಳು

    ಕಲಬುರಗಿ: ವಿಶ್ವ ಹಿಂದೂ ಪರಿಷತ್ (Vishwa Hindu Parishad) ಬಜರಂಗದಳ (Bhajarangdal) ಕರ್ನಾಟಕ ಉತ್ತರ ಕರ್ನಾಟಕದ ವತಿಯಿಂದ ಶ್ರೀ ಹನುಮ ಮಾಲಾ ಕಾರ್ಯಕ್ರಮದ ನಿಮಿತ್ತ ಕಲಬುರಗಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದ ಆನೆಗುಂದಿ ಅಂಜನಾದ್ರಿ ಪರ್ವತಕ್ಕೆ ನೂರಾರು ಹನುಮ ಮಾಲಾಧಾರಿಗಳು ಪ್ರಯಾಣ ಬೆಳೆಸಿದರು.

    ನಗರದ ನೆಹರೂ ಗಂಜ್ ಪ್ರದೇಶದ ಹನುಮಾನ್ ಮಂದಿರದಲ್ಲಿ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ನಸುಕಿನ ಜಾವ ಹನುಮಂತನಿಗೆ ರುದ್ರಾಭಿಷೇಕ, ಹೋಮ ಹವನ, ನವಗ್ರಹ ಪೂಜೆಯ ನಂತರ 450 ಜನ ಹನುಮ ಮಾಲಾಧಾರಿಗಳಿಗೆ ಮಾಲಾಧಾರಣೆ ಮಾಡಲಾಯಿತು. ಇದನ್ನೂ ಓದಿ: ಸಿದ್ದರಾಮಯ್ಯ ಹೆಸರು ದೇವರ ಹೆಸರಿನಿಂದ ಬಂದಿದೆ, ಟೀಕಿಸಿದ್ರೆ ಹುಷಾರ್: ಎಂ.ಬಿ ಪಾಟೀಲ್

    ಕಲಬುರಗಿ ನಗರದ ನೆಹರೂ ಗಂಜ್ ಪ್ರದೇಶದಿಂದ 11 ರಾಜಹಂಸ ಡಿಲಕ್ಸ್ ಬಸ್ ಗಳಿಗೆ ಚಂದು ಪಾಟೀಲ್ ಚಾಲನೆ ನೀಡುವ ಮುಖಾಂತರ ಮಾಲಾಧಾರಣೆ ಮಾಡಿದ ಮಾಲಾಧಾರಿಗಳ ಪ್ರಯಾಣ ಕೊಪ್ಪಳಕ್ಕೆ ಪ್ರಯಾಣ ಬೆಳೆಸಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಶಿವರಾಜ್ ಸಂಗೋಳಗಿ, ಜಿಲ್ಲಾ ಅಧ್ಯಕ್ಷ ರಾಜು ನವಲದಿ, ಪ್ರಶಾಂತ್ ಗುಡ್ಡಾ, ಅಶ್ವಿನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಮಾಲಾಧಾರಿಗಳು ಕಲಬುರಗಿಯಿಂದ ಕೊಪ್ಪಳದ ಗವಿ ಸಿದ್ದೇಶ್ವರ ಸಂಸ್ಥಾನಕ್ಕೆ ತೆರಳಿ, ವಿಶ್ರಾಂತಿ ಪಡೆದು ಬೆಳಗ್ಗೆ ಪೂಜೆಯ ನಂತರ ಕಿಷ್ಕಿಂದ ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳಸಲಿದೆ. ಇದನ್ನೂ ಓದಿ: ರೌಡಿಗಳನ್ನು ರೌಡಿಗಳೆನ್ನಬೇಡಿ – ಇದು ಮಾಜಿ ರೌಡಿ ಶೀಟರ್ ಸಿ.ಟಿ ರವಿ ಫಾರ್ಮಾನು: ಕಾಂಗ್ರೆಸ್ ಲೇವಡಿ

    Live Tv
    [brid partner=56869869 player=32851 video=960834 autoplay=true]

  • ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ನಾಸಿಕ್ ಧರ್ಮಸಂಸದ್‍ನಲ್ಲಿ ಹನುಮ ಜನ್ಮಸ್ಥಳ ಗಲಾಟೆ- ಕಿಷ್ಕಿಂದೆ ಸ್ವಾಮೀಜಿ ಮೇಲೆ ಹಲ್ಲೆ ಯತ್ನ

    ಮುಂಬೈ: ಹನುಮನ ಜನ್ಮಸ್ಥಳ ಯಾವುದು..? ಅಂಜನಾದ್ರಿನಾ? ಅಂಜನೇರಿನಾ? ತಿರುಮಲನಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಸಿಕ್‍ನಲ್ಲಿ ನಡೆಸಲಾದ ಧರ್ಮ ಸಂಸದ್‍ನಲ್ಲಿ ಭಾರೀ ಗಲಾಟೆ ನಡೆದಿದೆ.

    ಹನುಮ ಜನ್ಮಸ್ಥಳದ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆ ತೆಗೆದಿದೆ. ಹಲವು ಸ್ವಾಮೀಜಿಗಳು, ಕಿಷ್ಕಿಂದೆಯ ಹನುಮಾನ್ ಜನ್ಮಭೂಮಿ ಕ್ಷೇತ್ರದ ಗೋವಿಂದಾನಂದ ಸ್ವಾಮೀಜಿ ವಿರುದ್ಧ ಮುಗಿಬಿದ್ದಿದ್ದಾರೆ. ಹಿಂದೆ ರಾವಣ ಸೀತೆಯನ್ನು ಹೊತ್ತೊಯ್ದಿದ್ದ, ಆದರೆ ಈಗ ನೀವು ಹನುಮಂತನ ಜನ್ಮಸ್ಥಳವನ್ನೇ ಹೈಜಾಕ್ ಮಾಡ್ತಿದ್ದೀರಿ ಅಂತಾ ಆರೋಪಿಸಿದ್ದಾರೆ. ಇದಕ್ಕೆ ಗೋವಿಂದಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

    ಸುಮ್ನೆ ಮಾತಾಡೋದಲ್ಲ, ದಾಖಲೆ ಕೊಡಿ ಅಂತಾ ಸವಾಲ್ ಹಾಕಿದ್ದಾರೆ. ಈ ಹಂತದಲ್ಲಿ, ಮಹಾಂತ ಸುಧೀರದಾಸರು, ಆದಿಗುರು ಶಂಕರಾಚಾರ್ಯರನ್ನು ಕಾಂಗ್ರೆಸ್ಸಿಗ ಎಂದಿದ್ದು ಕಿಷ್ಕಿಂದೆಯ ಗೋವಿಂದಾನಂದ ಸ್ವಾಮೀಜಿಯ ಆಗ್ರಹಕ್ಕೆ ಕಾರಣವಾಯ್ತು. ಕೂಡಲೇ ಕ್ಷಮೆಗೆ ಒತ್ತಾಯಿಸಿದ್ರು. ಈ ವೇಳೆ ಮಹಾಂತ ಸುಧೀರ್ ದಾಸರು, ಮೈಕ್ ಹಿಡಿದು ಹಲ್ಲೆಗೆ ಮುಂದಾದ್ರು. ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಗೋವಿಂದಾನಂದ ಸ್ವಾಮೀಜಿ, ಸ್ವಾಮೀಜಿಗಳಿಗೆ ಅಪಮಾನ ಮಾಡ್ತೀರಾ..? ನೀವು ಈ ಧರ್ಮಸಂಸದ್‍ಗೆ ಕಳಂಕ.. ಕೂಡ್ಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದ್ರು.

    ಕೊನೆಗೆ ಉಳಿದವರು ಸಮಾಧಾನ ಮಾಡೋ ಕೆಲಸ ಮಾಡಿದ್ರು. ಆದರೆ ನಾನು ಹಲ್ಲೆ ಮಾಡಲು ಯತ್ನಿಸಿಲ್ಲ. ಅವರೇ ಹಲ್ಲೆ ಮಾಡಿದರು ಅಂತಾ ನಾಟಕ ಮಾಡಿದ್ದಾರೆ ಎಂದು ಸುಧೀರ್ ದಾಸರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಧರ್ಮಸಂಸದ್‍ನಲ್ಲಿ ಭಾಗವಹಿಸದಂತೆ ಗೋವಿಂದಾನಂದ ಸ್ವಾಮೀಜಿಗೆ ತಡೆ ಒಡ್ಡಲು ಮಹಾರಾಷ್ಟ್ರ ಪೊಲೀಸರು ನೋಡಿದ್ರು. ನೀವು ಹನುಮನ ಜನ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡ್ತಿದ್ದೀರಿ. ಇದರಿಂದ ಅಂಜನೇರಿ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ನೀವು ಧರ್ಮಸಂಸದ್‍ನಲ್ಲಿ ಭಾಗವಹಿಸಬೇಡಿ. ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ರು.

    ಇದಕ್ಕೆ ಡೋಂಟ್‍ಕೇರ್ ಎಂದ ಸ್ವಾಮೀಜಿ ಧರ್ಮಸಂಸದ್‍ನಲ್ಲಿ ಪಾಲ್ಗೊಂಡ್ರು. ಆದರೆ ಅಲ್ಲೂ ಮಹಾರಾಷ್ಟ್ರದ ಸ್ವಾಮೀಜಿಗಳು ಕಿರಿಕ್ ಮಾಡಿದ್ರು. ಕೊನೆಗೆ ಸಭೆಯೂ ಅರ್ಧಕ್ಕೆ ಮೊಟಕಾಯ್ತು.

  • ರಾಮಮಂದಿರವಾಗುತ್ತಿರುವುದಕ್ಕೆ ಕರ್ನಾಟಕದ ಜನ ಹೆಚ್ಚು ಖುಷಿಪಡಬೇಕು: ಚಕ್ರವರ್ತಿ ಸೂಲಿಬೆಲೆ

    ರಾಮಮಂದಿರವಾಗುತ್ತಿರುವುದಕ್ಕೆ ಕರ್ನಾಟಕದ ಜನ ಹೆಚ್ಚು ಖುಷಿಪಡಬೇಕು: ಚಕ್ರವರ್ತಿ ಸೂಲಿಬೆಲೆ

    – ರಾಮ ಬಂಟ ಹನುಮನ ಗಾಳಿಪಟ ಹಾರಾಟ

    ಕೊಪ್ಪಳ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿರುವ ಹಿನ್ನೆಲೆಯಲ್ಲಿ ರಾಮ ಬಂಟ ಹನುಮನ ಜನ್ಮಸ್ಥಳದಲ್ಲಿ ಹನುಮನಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರೆವೇರಿಸಲಾಯಿತು.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮ ಜನ್ಮಸ್ಥಳ ಎಂದೇ ಪ್ರಖ್ಯಾತಿ ಪಡೆದ ಅಂಜನಾದ್ರಿ ಬೆಟ್ಟದಲ್ಲಿ ರಾಮ ಭಕ್ತರು ಮತ್ತು ಹಿಂದೂ ಪರ ಸಂಘಟನೆ ಮುಖಂಡರಿಂದ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಕೇಸರಿ ಧ್ವಜ ಹೂಗಳಿಂದ ಅಲಂಕರಿಸಿ ರಾಮಜಪ ಮಾಡುವ ಮೂಲಕ ರಾಮ ಮತ್ತು ಹನುಮನ ಆರಾಧನೆ ಮಾಡಲಾಯಿತು.

    ಕೆಲದಿನಗಳ ಹಿಂದೆಯಷ್ಟೇ ಶ್ರೀರಾಮ ಸೇನೆಯಿಂದ ಹನುಮನ ಜನ್ಮಸ್ಥಳದಿಂದ ಮೃತಿಕೆ, ಶಿಲೆ, ಜಲವನ್ನು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಳಿಸಿಕೊಡಲಾಗಿತ್ತು. ಅದರಂತೆ ಇಂದು ಶಿಲಾನ್ಯಾಸ ಪ್ರಯುಕ್ತವಾಗಿ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಕಾರ್ಯಕ್ರಮಕ್ಕೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ರಾಮಜಪದಲ್ಲಿ ಪಾಲ್ಗೊಂಡು ರಾಮನ ಆರಾಧನೆ ಮಾಡಿದರು.

    ರಾಮಮಂದಿರ ನಿರ್ಮಾಣದ ಒಳಿತಿಗಾಗಿ ಹನುಮನ ಸ್ಥಳದಲ್ಲಿ ಪೂರ್ಣಾಹುತಿ ಹೋಮ ಹವನ ಕೂಡ ನಡೆಸಲಾಯ್ತು. ಮಂಗಳೂರಿನಿಂದ ಆಗಮಿಸಿದ ತಂಡ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಗಾಳಿಪಟ ಹಾರಿಸಿ ಎಲ್ಲರನ್ನು ಗಮನಸೆಳೆಯುವಂತೆ ಮಾಡಿತು. ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಹಾರಿಸಿದ ಗಾಳಿಪಟದಲ್ಲಿ ಹನುಮನ ನಾಡಿನಿಂದ ರಾಮನ ಸೇವೆ ಎನ್ನುವ ಸಂದೇಶ ರವಾನಿಸಿದ ಮಂಗಳೂರಿನ ಟೀಂ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

    ಸೂಲಿಬೆಲೆ ಮಾತನಾಡಿ, ರಾಮನಿಗಾಗಿ ಶಬರಿ ಕಾಯುವ ಹಾಗೇ ರಾಮಮಂದಿರ ನಿರ್ಮಾಣಕ್ಕಾಗಿ ಇಡೀ ದೇಶ ಕಾದು ಕುಳಿತಿತ್ತು. ಇಂದು ರಾಮಮಂದಿರ ನಿರ್ಮಾಣದ ಮಹತ್ವದ ದಿನ ಒದಗಿಬಂದಂತಾಗಿದೆ. ಇಡೀ ದೇಶವೇ ಸಂತೋಷ ಪಡುವಂತ ದಿನವಾಗಿದೆ. ಅದರಲ್ಲೂ ಕರ್ನಾಟಕದ ಜನತೆಯಂತು ಹೆಚ್ಚು ಖುಷಿ ಪಡುವ ದಿನ, ಯಾಕೆಂದರೆ ರಾಮಾಯಣ ಅಂತ್ಯವಾಗುವುದೇ ಕರ್ನಾಟಕದ ಭೂಮಿಯಿಂದ. ಇಲ್ಲಿನ ಹನುಮ ಸ್ಥಳಕ್ಕೆ ಬಂದ ರಾಮ ರಾಜ್ಯದ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದನ್ನು ನಾವು ಈಗ ಸ್ಮರಿಸಬಹುದು ಎಂದು ಹೇಳಿದರು.

  • ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

    ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

    ಜೈಪುರ: ತನಗೆ ಮದುವೆ ಮಾಡಿಸಿಲ್ಲ ಎಂದು ಯುವಕನೋರ್ವ ಗುಡಿಯಲ್ಲಿದ್ದ ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿರುವ ಘಟನೆ ರಾಜಸ್ಥಾನ ಜೈಪುರ ಜಿಲ್ಲೆಯ ಛೊಮು ಪಟ್ಟಣದಲ್ಲಿ ನಡೆದಿದೆ.

    ಭೂಷಣ್ ಹನುಮನ ಮೂರ್ತಿ ಧ್ವಂಸಗೊಳಿಸಿದ ಯುವಕ. ಮದುವೆ ಮಾಡಿಸು ಎಂದು ಹನುಮಂತನನ್ನು ಭೂಷಣ್ ಪ್ರತಿದಿನ ಪೂಜಿಸುತ್ತಿದ್ದನು. ತನ್ನ ಪಾರ್ಥನೆಗೆ ದೇವರು ಸ್ಪಂದಿಸಲಿಲ್ಲವೆಂಬ ಹತಾಶೆಯಿಂದ ಮೂರ್ತಿಯನ್ನು ಧ್ವಂಸ ಮಾಡಿದ್ದಾನೆ. ಮಾನಸಿಕ ಅಸ್ವಸ್ಥನಾಗಿರುವ ಭೂಷಣ್ ನನಗೆ ಮದುವೆಯಾಗಿಲ್ಲ ಎಂದು ಈ ರೀತಿ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಹೇಳಿದ್ದಾನೆ.

    ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಹನುಮನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ ಎಂದು ಊರಿನ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶ್ವಾನದಳದ ಸಹಾಯದಿಂದ ಈ ಕೆಲಸವನ್ನು ಮಾಡಿರುವುದು ದೇವಸ್ಥಾನ ಮಾಲೀಕನ ಮೊಮ್ಮಗ ಭೂಷಣ್ ಎಂದು ಎರಡು ಗಂಟೆಯೊಳಗೆ ಕಂಡುಹಿಡಿದಿದ್ದಾರೆ.

    ಪೊಲೀಸರು ಭೂಷಣ್ ವಿಚಾರಣೆ ನಡೆಸಿದಾಗ ಕಳೆದ ಮೂರು ತಿಂಗಳಿನಿಂದ ತನ್ನ ಮದುವೆಗಾಗಿ ಹನುಮನಲ್ಲಿ ಪಾರ್ಥಿಸುತ್ತಿದೆ ಎಂದು ಹೇಳಿದ್ದಾನೆ. ಅದರೂ ನನಗೆ ಮದುವೆಯಾಗಿಲ್ಲ. ಆದ್ದರಿಂದ ತನ್ನ ಪಾರ್ಥನೆಗೆ ಸ್ಪಂದಿಸದೇ ಇದ್ದ ಹನುಮನನ್ನು ಶನಿವಾರ ಕಬ್ಬಿಣದ ರಾಡ್ ಅನ್ನು ತೆಗೆದುಕೊಂಡು ಒಡೆದು ಹಾಕಿದೆ. ನಂತರ ನಾನು ಮನಗೆ ಹೋಗಿ ಮಲಗಿಕೊಂಡೆ ಎಂದು ಹೇಳಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಬೆಗಾರಾಮ್, ಈ ಘಟನೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ. ಅಲ್ಲದೇ ಈ ದೇವಸ್ಥಾನ ಆತನ ಮನೆಯವರದೇ ಆದ ಕಾರಣ ಅವರು ದೂರನ್ನು ವಾಪಸ್ ಪಡೆದಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.

  • ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ- ಮಳೆಗಾಗಿ ತುಮಕೂರು ಜನ ಪ್ರಾರ್ಥನೆ

    ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ- ಮಳೆಗಾಗಿ ತುಮಕೂರು ಜನ ಪ್ರಾರ್ಥನೆ

    – ಮಹಿಳೆಯರ ಸಖತ್ ಸ್ಟೆಪ್

    ತುಮಕೂರು: ಒಂದಿಷ್ಟು ಊರಲ್ಲಿ ಸಾಕು ನಿಲ್ಲೋ ಮಳೆರಾಯ, ಇನ್ನೊಂದಿಷ್ಟು ಊರಲ್ಲಿ ಹುಯ್ಯೋ… ಹುಯ್ಯೋ… ಮಳೆರಾಯ ಎನ್ನುವ ಹಾಗೇ ಆಗಿದ್ದು, ತುಮಕೂರು ಜಿಲ್ಲೆಯಲ್ಲಿ ಜನರು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.

    ರಾಜ್ಯದ ಹಲವೆಡೆ ಮಳೆಯಿಂದ ಪ್ರವಾಹ ಉಂಟಾದರೆ, ತುಮಕೂರು ಜಿಲ್ಲೆಗೆ ಮಾತ್ರ ವರಣದೇವ ತನ್ನ ಕೃಪೆಯನ್ನು ತೋರಿಲ್ಲ. ಆದ್ದರಿಂದ ತುಮಕೂರಿನ ಜನರು ಮಳೆಯನ್ನು ಕರುಣಿಸು ದೇವ ಎಂದು ಹನುಮನ ಮೊರೆ ಹೋಗಿದ್ದಾರೆ.

    ರಾಜ್ಯದ ಉತ್ತರ ಕರ್ನಾಟಕ, ಕೊಡಗು ಮುಂತಾದ ಜಿಲ್ಲೆಗಳು ಮಹಾಮಳೆಗೆ ಸಿಕ್ಕಿ ನಲುಗಿ ಹೋಗಿವೆ. ಆದರೆ ತುಮಕೂರಲ್ಲಿ ಮಾತ್ರ ಮಳೆ ಮರೀಚಿಕೆಯಾಗಿ ಹೋಗಿದೆ. ಆದ್ದರಿಂದ ಜಿಲ್ಲೆಯ ಕೊರಟಗೆರೆ ತಾಲೂಕಿನ ಮರೇನಾಯಕನಹಳ್ಳಿ ಗ್ರಾಮಸ್ಥರು ಮಳೆ ಬರಲಿ ಎಂದು ಆಂಜನೇಯನಿಗೆ ಆರತಿ ಬೆಳಗಿದ್ದಾರೆ.

    ವಿಶೇಷ ಎಂದರೆ ಹನುಮನ ಮೆರವಣಿಗೆ ಮಾಡುವ ವೇಳೆ ಜಾನಪದ ಪದಗಳನ್ನು ಹೇಳುತ್ತಾ ಮಳೆಗಾಗಿ ಮಹಿಳೆಯರು ಸಖತ್ ಸ್ಟೇಪ್ ಹಾಕಿದ್ದಾರೆ. ಉತ್ತರಕ್ಕೆ ಮಳೆ ಕೊಟ್ಟೆ ನಮಗೂ ಮಳೆ ಕೊಡೋ ಹನುಮ.. ಮಳೆ ಕೋಡೋ ಹನುಮ.. ಎಂದು ಕುಣಿಯುವ ಮೂಲಕ ಮಹಿಳಾ ಮಣಿಯರು ಬೇಡಿಕೊಂಡಿದ್ದಾರೆ.