ಕನ್ನಡದ ‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಮದುವೆಯಾಗಿ 2 ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೊಸ ಮನೆ ಗೃಹಪ್ರವೇಶ (House Warming) ಮಾಡಿದ ಸಂಭ್ರಮದಲ್ಲಿದ್ದಾರೆ. ಮನೆಗೆ ಕಾಲಿಟ್ಟಿರುವ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಹೊಸ ಆರಂಭ’ ಎಂದು ಶೀರ್ಷಿಕೆ ನೀಡಿ ಮನೆಯ ಗೃಹಪ್ರವೇಶದ ಚೆಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪತಿ ಜೊತೆ ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿರುವ ಹನ್ಸಿಕಾಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಅಂದಹಾಗೆ, ಮದುವೆಯ ನಂತರವೂ ಹನ್ಸಿಕಾ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸುವ ಅವಕಾಶ ಸಿಗದೆ ಇದ್ದರೂ ಬಂದ ಆಫರ್‌ಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಇನ್ನೂ 2022ರಲ್ಲಿ ಉದ್ಯಮಿ ಸೋಹೈಲ್ ಜೊತೆ ಹನ್ಸಿಕಾ ಮದುವೆಯಾದರು. ಮೊದಲ ಪತ್ನಿಗೆ ಡಿವೋರ್ಸ್ ನೀಡಿದ ಬಳಿಕ ಹನ್ಸಿಕಾರನ್ನು ಪ್ರೀತಿಸಿ ಸೋಹೈಲ್ ಮದುವೆಯಾದರು.
ಸೌತ್ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟರು. ಸೊಹೈಲ್ (Sohail) ಜೊತೆ ಖುಷಿಯಾಗಿ ಸಂಸಾರ ಸಾಗಿಸುತ್ತಿರುವ ನಟಿ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಈ ನಡುವೆ ತೂಕ ಇಳಿಸಿಕೊಂಡಿರುವ ಹನ್ಸಿಕಾ ಬಗ್ಗೆ ಹೊಸ ಚರ್ಚೆವೊಂದು ಶುರುವಾಗಿದೆ. ಮದುವೆಯಾದ್ಮೇಲೆ ಸರ್ಜರಿ ಮಾಡಿಸಿಕೊಂಡ್ರಾ ಅಂತಾ ಹೊಸ ಕಥೆ ಶುರುವಾಗಿದೆ. ಈ ಕುರಿತು ನಟಿಯ ಇತ್ತೀಚಿನ ಫೋಟೋ ಟ್ರೋಲ್ ಕೂಡ ಆಗುತ್ತಿದೆ. ಇದನ್ನೂ ಓದಿ:ಮಗು ನನ್ನನ್ನೇ ಹೋಲುತ್ತಿದೆ: ಸಂಭ್ರಮ ಹಂಚಿಕೊಂಡ ನಟ ರಾಮ್ ಚರಣ್
ಚಿಕ್ಕ ವಯಸ್ಸಿನಲ್ಲೇ ನಟನೆಗೆ ಎಂಟ್ರಿ ಕೊಟ್ಟವರು ಹನ್ಸಿಕಾ ಮೋಟ್ವಾನಿ ಆಗಲೇ ಅವರ ಬಗ್ಗೆ ಒಂದು ಅಪಾದನೆ ಇತ್ತು. ಸಿನಿಮಾ ಅವಕಾಶಕ್ಕಾಗಿ ಯುವತಿಯಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ರು ಎಂದು ಹೇಳಲಾಗಿತ್ತು. ಈಗ ಮದುವೆಯಾಗಿ ಸಂಸಾರ ಸಾಗರದಲ್ಲಿ ಬ್ಯುಸಿಯಿರುವ ನಟಿ ಬಗ್ಗೆ ಹೊಸ ವಿಷ್ಯವೊಂದು ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ. ಮದುವೆಯಾದ್ಮೇಲೆ ಇಷ್ಟು ಫಿಟ್ ಆಗಲು ದೇಹದ ಸರ್ಜರಿ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಮದುವೆಯಾದ ಮೇಲೆ ಈಕೆ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ೩೧ ವರ್ಷದ ಹನ್ಸಿಕಾ ಮೋಟ್ವಾನಿ ಈ ಫೋಟೋಗಳಲ್ಲಿ ಸ್ಲಿಮ್ ಆಗಿ ಕಾಣಿಸುವ ಹಿಂದೆ ಏನಪ್ಪಾ ಸೀಕ್ರೇಟ್ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬಾಲ್ಯದಿಂದಲೂ ಸರ್ಜರಿ ಅದೂ ಇದೂ ಎಂದೆಲ್ಲಾ ಟ್ರೋಲ್ ಆಗಿದ್ದ ನಟಿಗೆ ಈಗಲೂ ಅದನ್ನೇ ಜನರು ಪ್ರಶ್ನಿಸುತ್ತಿದ್ದಾರೆ. ಮದುವೆಯಾದ ಮೇಲೆ ಈಕೆ ತಮ್ಮ ದೇಹಕ ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಗುಸುಗುಸು ಶುರುವಾಗಿದೆ. ಈಕೆಗೂ ನೇರವಾಗಿ ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇದಕ್ಕೆ ಈಗ ಉತ್ತರಿಸಿರುವ ಹನ್ಸಿಕಾ, ಯೋಗ, ಧ್ಯಾನದ ಮೂಲಕ ತಮ್ಮ ತೂಕ ಇಳಿಸಿಕೊಂಡಿರುವುದಾಗಿ ಪರೋಕ್ಷವಾಗಿ ಫೋಟೋ ಶೇರ್ ಮಾಡುವ ಮೂಲಕ ಹೇಳಿದ್ದಾರೆ. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನದಂದು ಕೆಲವೊಂದು ಯೋಗ ಭಂಗಿಗಳ ಫೋಟೋಗಳನ್ನು ಶೇರ್ ಮಾಡಿರುವ ಅವರು, ಯೋಗ ದಿನವನ್ನು ಆಚರಿಸುತ್ತಿದ್ದೇನೆ, ಇಂದು ಹಾಗೂ ಪ್ರತಿದಿನ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಸಣ್ಣಗಾಗಲು ಯೋಗ-ಧ್ಯಾನದ ಮೊರೆ ಹೋಗುತ್ತಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. ಆದರೆ ಹನ್ಸಿಕಾ ಪೋಸ್ಟ್ಗೆ ಈಗಲೂ ಕೆಲವರು ಸಮ್ಮತಿ ಸೂಚಿಸುತ್ತಿಲ್ಲ. ಮದುವೆ ನಂತರ ಹನ್ಸಿಕಾ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದು, ಯೋಗ ಮಾಡುವ ಡ್ರಾಮಾ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ. ಇನ್ನು ಹಲವರು, ಇದು ನಿಜ ಯೋಗ, ಧ್ಯಾನದ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು ಮಾತ್ರವಲ್ಲದೆ ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದಿದ್ದಾರೆ.
ದಕ್ಷಿಣದ ಖ್ಯಾತ ನಟಿ ಹನ್ಸಿಕಾ ಮೊಟ್ವಾಣಿ (Hansika Motwani) ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಸಿನಿ ಕೆರಿಯರ್ ಆರಂಭದ ದಿನಗಳಲ್ಲಿ ನಡೆದ ಆ ಘಟನೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಆ ನಟನಿಂದಾಗಿ ಸಾಕಷ್ಟು ಹಿಂಸೆ ಮತ್ತು ಅವಮಾನವನ್ನು ಎದುರಿಸಬೇಕಾಯಿತು ಅಂದಿದ್ದಾರೆ.
ಅದು ನನ್ನ ಸಿನಿಮಾ ರಂಗದ ಆರಂಭದ ದಿನಗಳು. ಸಿನಿಮಾ ರಂಗದಲ್ಲೇ ನೆಲೆಯೂರಬೇಕು ಎಂದು ಬಂದವಳಿಗೆ ಸಾಕಷ್ಟು ಅವಮಾನಗಳು ಆಗಿವೆ. ಅದರಲ್ಲೂ ಆ ನಟನೊಬ್ಬ ಆತನೊಂದಿಗೆ ಡೇಟ್ ಮಾಡುವಂತೆ ಸಾಕಷ್ಟು ತೊಂದರೆ ಕೊಟ್ಟ. ನಾನು ಒಪ್ಪದೇ ಇದ್ದಾಗ ಅವಮಾನಿಸಿದ. ಆ ನೋವಿನಿಂದ ಆಚೆ ಬರುವುದಕ್ಕೆ ಸಾಕಷ್ಟು ಕಷ್ಟಪಟ್ಟೆ ಎಂದಿದ್ದಾರೆ ಹನ್ಸಿಕಾ. ಆದರೆ, ಆ ನಟ ಯಾರು ಎನ್ನುವುದನ್ನು ಅವರು ಹೇಳಿಲ್ಲ. ಇದನ್ನೂ ಓದಿ:ಕನ್ನಡದ ‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ನಿಧನ
ದೇಶಮುದುರು ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಹನ್ಸಿಕಾ, ಆನಂತರ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಹನ್ಸಿಕಾ ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ, ನಾಯಕಿಯಾಗಿ ನೆಲೆಯೂರಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಿನಿಮಾಗಳ ಹಿಟ್ ನಂತರ ತೆಲುಗು (Telugu), ತಮಿಳು ಹಾಗೂ ಕನ್ನಡ ಸಿನಿಮಾಗಳ ಸೂಪರ್ ಸ್ಟಾರ್ ಗಳ ಜೊತೆಯೇ ತೆರೆ ಹಂಚಿಕೊಂಡಿದ್ದಾರೆ.
ತಮಿಳು (Tamil) ಸಿನಿಮಾ ರಂಗದಲ್ಲಿ ಹನ್ಸಿಕಾಗೆ ತನ್ನದೇ ಅಭಿಮಾನಿ ಬಳಗವಿದ್ದು, ಅವಳಿಗಾಗಿ ದೇವಸ್ಥಾನವನ್ನೂ ಕಟ್ಟಿದ್ದರು. ಅಲ್ಲದೇ, ಹನ್ಸಿಕಾ ಹೆಸರಿನಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನೂ ಅವರ ಅಭಿಮಾನಿಗಳು ಮಾಡಿದ್ದಾರೆ.
ಕನ್ನಡದ `ಬಿಂದಾಸ್’ (Bindas) ಚಿತ್ರದ ಮೂಲಕ ಮನಗೆದ್ದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಇತ್ತೀಚೆಗೆ ಉದ್ಯಮಿ ಸೋಹೈಲ್ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ತಮಿಳು ನಟ ಸಿಂಬು (Actor Simbu) ಜೊತೆಗಿನ ಬ್ರೇಕಪ್ ಬಗ್ಗೆ ಹನ್ಸಿಕಾ ಬಾಯ್ಬಿಟ್ಟಿದ್ದಾರೆ.
ನಟಿ ಹನ್ಸಿಕಾ (Actress Hansika) ಸದ್ಯ ತಮ್ಮ ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಜೈಪುರ ಪ್ಯಾಲೇಸ್ ಹನ್ಸಿಕಾ-ಸೋಹೈಲ್ (ಡಿ.4)ರಂದು ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈಗ ತಮ್ಮ ಮಾಜಿ ಬಾಯ್‌ಫ್ರೆಂಡ್ ಸಿಂಬು ಬಗ್ಗೆ ನಟಿ ಹನ್ಸಿಕಾ ಮಾತನಾಡಿದ್ದಾರೆ.
ಕಾರಣಾಂತರಗಳಿಂದ ಸಿಂಬು- ಹನ್ಸಿಕಾ ರಿಲೇಷನ್‌ಶಿಪ್ ಬ್ರೇಕಪ್ ಆಗಿತ್ತು. ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಕೊನೆಯ ಸಂಬಂಧ ಬಹಳ ವಿಚಿತ್ರವಾಗಿತ್ತು. ಆದರೆ ಅದು ಈಗ ಕಥೆಯ ಅಂತ್ಯವಾಗಿದೆ. ಬ್ರೇಕಪ್ ಆದ ನಂತರ ಮತ್ತೆ ಲವ್‌ಗೆ ಯೆಸ್ ಎಂದು ಹೇಳಲು 7-8 ವರ್ಷ ಬೇಕಾಯಿತು. ದೇವರು ಒಳ್ಳೆಯ ದಾರಿ ತೋರಿಸಿದ್ದಾನೆ ಎಂದು ನಟಿ ಮಾತನಾಡಿದ್ದಾರೆ.
ನಾನೊಬ್ಬ ರೊಮ್ಯಾಂಟಿಕ್ ವ್ಯಕ್ತಿ ಎಂದ ಹನ್ಸಿಕಾ ಪ್ರೀತಿ, ಮದುವೆಯಲ್ಲಿ ನನಗೆ ನಂಬಿಕೆ ಇದೆ ಎಂದಿದ್ದಾರೆ. ಸೋಹೈಲ್ ನನ್ನ ಜೀವನದಲ್ಲಿ ಬಂದ ನಂತರ ನನಗೆ ಪ್ರೀತಿಯಲ್ಲಿ ನಂಬಿಕೆ ಹೆಚ್ಚಿದೆ ಎಂದು ಹನ್ಸಿಕಾ ಹೇಳಿದ್ದಾರೆ. ಈಗ ಹೊಸ ಪಯಣ ಆರಂಭಿಸಿದ್ದೇನೆ ಎಂದು ಹನ್ಸಿಕಾ ಖುಷಿಯಿಂದ ಹೇಳಿದ್ದಾರೆ.
LIVE TV
[brid partner=56869869 player=32851 video=960834 autoplay=true]
ಕನ್ನಡದ ಬಿಂದಾಸ್ (Bindas Film) ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಸದ್ಯ ಸೋಹೈಲ್ ಜೊತೆ ದಾಂಪತ್ಯ ಜೀವನವನ್ನ ಖುಷಿಯಾಗಿ ಕಳೆಯುತ್ತಿದ್ದಾರೆ. ಇದರ ನಡುವೆ ಒಂದಷ್ಟು ಪ್ರಶ್ನೆಗಳಿಗೆ, ಗಾಸಿಪ್‌ಗಳಿಗೆ ಅವರು ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಮಗಳು ಬೇಗ ದೊಡ್ಡವಳಂತೆ ಕಾಣಿಸಬೇಕು ಎಂದು ಹನ್ಸಿಕಾಗೆ ಚಿಕ್ಕ ವಯಸ್ಸಿನಲ್ಲೇ ಅವರ ತಾಯಿ ಹಾರ್ಮೋನ್ ಇಂಜೆಕ್ಷನ್ (Harmon Injection) ಕೊಟ್ಟಿದ್ದರು ಎಂಬ ವದಂತಿ ಹಲವು ಬಾರಿ ಕೇಳಿಬಂದಿತ್ತು. ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಅಮ್ಮ-ಮಗಳು ಮಾತನಾಡಿದ್ದಾರೆ. ಇಂಥ ವದಂತಿಗಳು ನಮಗೆ ನೋವುಂಟು ಮಾಡುತ್ತವೆ ಎಂದು ಬೇಸರ ಹೊರ ಹಾಕಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗಿ ನಟಿಸಿದ್ದ ಹನ್ಸಿಕಾ ಅವರು ಇತ್ತೀಚಿಗೆ ಉದ್ಯಮಿ ಸೋಹೈಲ್ (Sohael) ಜೊತೆ ಮದುವೆಯಾದ ಬೆನ್ನಲ್ಲೇ ಗೆಳತಿಯ ಪತಿಯನ್ನೇ ಪಟಾಯಿಸಿದ್ದಳು ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಬಳಿಕ ನನ್ನ ಮೊದಲ ಮದುವೆಯ ಡಿವೋರ್ಸ್‌ಗೂ ಹನ್ಸಿಕಾ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಅಂತಾ ಸೋಹೈಲ್ ಸ್ಪಷ್ಟನೆ ನೀಡಿದ್ದರು. ಈಗ ಹಾರ್ಮೋನ್ ಇಂಜೆಕ್ಷನ್ ಸುದ್ದಿ ಬಗ್ಗೆ ಹನ್ಸಿಕಾ ಮತ್ತು ಅವರ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಸೆಲೆಬ್ರಿಟಿಯಾಗಿ ಇಂಥ ಪರಿಸ್ಥಿತಿಗಳನ್ನು ಎದುರಿಸುವುದು ತುಂಬ ಕಷ್ಟವಾಗಿರುತ್ತದೆ. ನಾನು ಆಗ ಹಾರ್ಮೋನ್ ಇಂಜೆಕ್ಷನ್ ಪಡೆದುಕೊಂಡಿದ್ದರೆ, ಈಗಲೂ ಪಡೆಯುತ್ತಿರಬೇಕಲ್ಲವೇ? ನನ್ನ ತಾಯಿಯೇ ನನಗೆ ಹಾರ್ಮೋನ್ ಇಂಜೆಕ್ಷನ್ ನೀಡಿದ್ದರು ಎಂದು ವದಂತಿ ಹಬ್ಬಿತ್ತು. ಆ ಎಲ್ಲಾ ವದಂತಿಗಳನ್ನು ನಾನು ತಳ್ಳಿಹಾಕುತ್ತೇನೆ ಎಂದು ನಟಿ ಹನ್ಸಿಕಾ ಹೇಳಿದ್ದಾರೆ.
ಇನ್ನು ಹನ್ಸಿಕಾ ತಾಯಿ ಮೋನಾ (Mona) ಮೋಟ್ವಾನಿ ಕೂಡ ಪ್ರತಿಕ್ರಿಯಿಸಿದ್ದು, ಆ ರೀತಿ ಹಾರ್ಮೋನ್ ಇಂಜೆಕ್ಷನ್ ಖರೀದಿ ಮಾಡಬೇಕೆಂದರೆ, ನಾವು ಟಾಟಾ, ಬಿರ್ಲಾಗಿಂತ ಜಾಸ್ತಿ ಶ್ರೀಮಂತರಾಗಿರಬೇಕು ಅಥವಾ ನಾನು ಮಿಲಿಯನೇರ್ ಆಗಿರಬೇಕು. ಈ ರೀತಿಯ ವದಂತಿಗಳು ಹೇಗೆ ಹುಟ್ಟುತ್ತವೆ ಎಂದು ನನಗೆ ತಿಳಿದಿಲ್ಲ. ಇದನ್ನು ಹಬ್ಬಿಸುವ ಜನರಿಗೆ ಸಾಮಾನ್ಯ ಜ್ಞಾನವಿಲ್ಲ. ನಾವು ಪಂಜಾಬಿಗಳು, ನಮ್ಮ ಹುಡುಗಿಯರು 12 ರಿಂದ 16 ವರ್ಷಗಳ ನಡುವೆ ವೇಗವಾಗಿ ಬೆಳೆಯುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ರಜನಿಕಾಂತ್ ದಂಪತಿ
ಇನ್ನೂ ಹನ್ಸಿಕಾ ಮೋಟ್ವಾನಿ ಬಾಲನಟಿಯಾಗಿ ಐದಾರು ಸಿನಿಮಾ ಮಾಡಿದ್ದರು. 16ನೇ ವಯಸ್ಸಿಗೆ ನಾಯಕಿಯಾಗಿ ಹನ್ಸಿಕಾ ಮಿಂಚಿದ್ದರು. ಹಾಗಾಗಿ ಈ ತರಹದ ಸುದ್ದಿಗಳು ಹರಿದಾಡಿತ್ತು.
LIVE TV
[brid partner=56869869 player=32851 video=960834 autoplay=true]
ಕನ್ನಡದ `ಬಿಂದಾಸ್’ (Bindas Film) ಸಿನಿಮಾಗೆ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗುವ ಮೂಲಕ ಪರಿಚಿತರಾದ ಹನ್ಸಿಕಾ ಮೋಟ್ವಾನಿ (Hansika Motwani) ಇತ್ತೀಚಿಗಷ್ಟೆ ಉದ್ಯಮಿ ಸೋಹೈಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಸ್ನೇಹಿತೆಯ ಪತಿಯನ್ನೇ ಪಟಾಯಿಸಿ ಮದುವೆಯಾದಳು ಎಂಬ ನೆಟ್ಟಿಗರ ಮಾತಿಗೆ ಹನ್ಸಿಕಾ ಮೋಟ್ವಾನಿ ಸ್ಪಷ್ಟನೆ ನೀಡಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗಿರುವ `ಲವ್ ಶಾದಿ ಡ್ರಾಮಾ’ದಲ್ಲಿ (Love Shadi Drama) ನಟಿ ಮನಬಿಚ್ಚಿ ಮಾತನಾಡಿದ್ದಾರೆ.
ದಕ್ಷಿಣ ಭಾರತದ ಪಗತಿಭಾನ್ವಿತ ನಟಿ ಹನ್ಸಿಕಾ ಮೋಟ್ವಾನಿ ಅವರು ಕಳೆದ ವರ್ಷದ ಅಂತ್ಯದಲ್ಲಿ ಡಿ.4ರಂದು ಸೋಹೈಲ್ (Sohael Katuriya) ಜೊತೆಗೆ ಹೊಸ ಬಾಳಿಗೆಬ ಕಾಲಿಟ್ಟರು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಮದುವೆಯೆಂಬ ಮುದ್ರೆ ಒತ್ತುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟರು. ಇನ್ನೂ ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರಗಳನ್ನ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಹೀಗಿರುವಾಗ ತಮ್ಮ ಸಂಭ್ರಮವನ್ನ ಫ್ಯಾನ್ಸ್ ಮುಂಡಿಡಲು ನಟಿ ಭಿನ್ನ ಪ್ರಯತ್ನ ಮಾಡಿದ್ದಾರೆ.
ಒಟಿಟಿ ಮೂಲಕ ಹನ್ಸಿಕಾ-ಸೋಹೈಲ್ ಜೋಡಿಗಳ ಲವ್ ಲೈಫ್ ಬಗ್ಗೆ ಒಂದಷ್ಟು ರಹಸ್ಯಗಳನ್ನು ಜನರ ಮುಂದೆ ತೆರೆದಿಟ್ಟು, ಮದುವೆಯ ಝಲಕ್ ತೋರಿಸಲಾಗುತ್ತಿದೆ. ಈಗ ಖಾಸಗಿ ಒಟಿಟಿಯಲ್ಲಿ ಹನ್ಸಿಕಾ- ಸೋಹೈಲ್ ಮದುವೆ ವಿಡಿಯೋ ಪ್ರಸಾರ ಆಗುತ್ತಿದೆ. ಇದರ ಮೊದಲ ಎಪಿಸೋಡ್‌ನಲ್ಲಿ ಒಂದಷ್ಟು ವಿಚಾರಗಳನ್ನು ಹನ್ಸಿಕಾ ಹೇಳಿಕೊಂಡಿದ್ದಾರೆ. ಉದ್ಯಮಿ ಸೋಹೈಲ್ ಈ ಮೊದಲೇ ಒಂದು ಮದುವೆ ಆಗಿದ್ದರು. ಅವರ ಮಾಜಿ ಪತ್ನಿಯ ಹೆಸರು ರಿಂಕಿ. ರಿಂಕಿ ಮತ್ತು ಹನ್ಸಿಕಾ ಫ್ರೆಂಡ್ಸ್ ಆಗಿದ್ದರು. ಸೋಹೈಲ್ ಹಾಗೂ ರಿಂಕಿ ಮದುವೆಯಲ್ಲಿ ಹನ್ಸಿಕಾ ಕೂಡ ಭಾಗಿ ಆಗಿದ್ದರು. ಸೋಹೈಲ್ ಜತೆ ಹನ್ಸಿಕಾ ಮದುವೆ ಘೋಷಣೆ ಮಾಡಿಕೊಳ್ಳುತ್ತಿದ್ದಂತೆಯೇ ಒಂದಷ್ಟು ಮಂದಿ `ಆಪ್ತ ಸ್ನೇಹಿತೆಯ ಗಂಡನನ್ನೇ ಕದ್ದಳು’ ಎಂದು ಹನ್ಸಿಕಾ ಅವರನ್ನು ಟೀಕೆ ಮಾಡಿದರು. ಲವ್ ಶಾದಿ ಡ್ರಾಮಾದಲ್ಲಿ ಹನ್ಸಿಕಾ ಈ ಬಗ್ಗೆ ಅಸಲಿ ಮಾತನ್ನ ಬಿಚ್ಚಿಟ್ಟಿದ್ದಾರೆ.
ಆ ಸಮಯದಲ್ಲಿ ಈ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ ತಪ್ಪು ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ಪಬ್ಲಿಕ್ ಫಿಗರ್ ಆಗಿರುವುದರಿಂದ ಜನರಿಗೆ ನನ್ನ ಕಡೆ ಬೆರಳು ಮಾಡಿ, ನನ್ನನ್ನು ವಿಲನ್ ಮಾಡೋದು ಸುಲಭ. ಸೆಲೆಬ್ರಿಟಿ ಆಗಿರುವುದರಿಂದ ನಾನು ತೆರುತ್ತಿರುವ ಬೆಲೆ ಇದು ಎಂದು ಹನ್ಸಿಕಾ ಹೇಳಿದ್ದಾರೆ. ಇದನ್ನೂ ಓದಿ: ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್
ನಾನು ಈ ಮೊದಲು ಮದುವೆ ಆಗಿದ್ದೆ. ಅದು ಮುರಿದು ಬಿತ್ತು. ಈ ವಿಚಾರ ಪ್ರಪಂಚಕ್ಕೆ ಗೊತ್ತಾಯಿತು. ಆದರೆ, ತಪ್ಪಾದ ರೀತಿಯಲ್ಲಿ ಈ ಮಾಹಿತಿಯನ್ನು ಹೇಳಲಾಯಿತು. ಹನ್ಸಿಕಾ ಅವರಿಂದ ನನ್ನ ಹಾಗೂ ರಿಂಕಿ ಸಂಬಂಧ ಹಾಳಾಯಿತು ಎಂದು ಹೇಳಲಾಯಿತು. ಇದು ಸುಳ್ಳು ಹಾಗೂ ಆಧಾರ ರಹಿತವಾದುದ್ದು. ನಾವಿಬ್ಬರೂ ಸ್ನೇಹಿತರು. ಹನ್ಸಿಕಾ (Hansika Motwani) ನನ್ನ ಮದುವೆಗೆ ಹಾಜರಾದ ಫೋಟೋ ನೋಡಿದ್ದರಿಂದ ಈ ಊಹಾಪೋಹ ಪ್ರಾರಂಭವಾಯಿತು ಎಂದು ಸೋಹೈಲ್ ಸ್ಪಷ್ಟನೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸೌತ್ ನಟಿ ಹನ್ಸಿಕಾ ಮೋಟ್ವಾನಿ, ಉದ್ಯಮಿ ಸೋಹೈಲ್ ಜೊತೆ ಖುಷಿಯಿಂದ ವೈವಾಹಿಕ (Wedding) ಜೀವನವನ್ನು ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೇ ಜೈಪುರದಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿದ್ದರು. ಈಗ ಮದುವೆಯ ಬಳಿಕ ಹನ್ಸಿಕಾ ಚೆಂದದ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ಸಖತ್ ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ್ದಾರೆ.
ಸ್ಯಾಂಡಲ್‌ವುಡ್‌ಗೆ (Sandalwood) `ಬಿಂದಾಸ್’ (Bindas) ಚಿತ್ರದ ಮೂಲಕ ಗಮನ ಸೆಳೆದ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಬಹುಭಾಷೆಗಳಲ್ಲಿ ಮಿಂಚಿದ್ದಾರೆ. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಟಾಪ್ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಈಗ ಮದುವೆ, ಸಂಸಾರ ಅಂತಾ ನಟಿ ಬ್ಯುಸಿಯಾಗಿದ್ದಾರೆ.
ನೇರಳೆ ಬಣ್ಣದ ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ಹನ್ಸಿಕಾ ಕಾಣಿಸಿಕೊಂಡಿದ್ದಾರೆ. ಸ್ಲಿವ್ ಲೆಸ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಈ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
Live Tv
[brid partner=56869869 player=32851 video=960834 autoplay=true]
`ಬಿಂದಾಸ್’ (Bindas Kannada) ನಟಿ ಹನ್ಸಿಕಾ ಮೋಟ್ವಾನಿ (Hansika Motwani), ಉದ್ಯಮಿ ಸೊಹೈಲ್ ಕಥುರಿಯಾ (Sohael Katuriya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ನಟಿ ಭಾರಿ ಟ್ರೋಲ್ ಆಗಿದ್ದಾರೆ. ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದು ಹನ್ಸಿಕಾಗೆ ಟ್ರೋಲ್ ಮಾಡ್ತಿದ್ದಾರೆ.
ಬಹುಭಾಷಾ ನಟಿ ಹನ್ಸಿಕಾ ಡಿಸೆಂಬರ್ 4ರಂದು ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾದರು. ಒಬ್ಬರನೊಬ್ಬರು ಪ್ರೀತಿಸಿ, ಗುರುಹಿರಿಯರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ತಮ್ಮ ವಿವಾಹದ ಫೋಟೋಸ್‌ಗಳನ್ನ ನಟಿ ಶೇರ್ ಮಾಡಿದ್ದಾರೆ. ಬ್ರೈಟ್ ರೆಡ್ ಸೀರೆಯಲ್ಲಿ ಮಿಂಚಿದ್ದಾರೆ. ಈ ಬೆನ್ನಲ್ಲೇ ನಟಿಗೆ ಖಡಕ್ ಪ್ರಶ್ನೆಯೊಂದು ಎದುರಾಗಿದೆ. ನಿಮ್ಮ ಮದುವೆಗೆ ಎಲ್ಲಾ ಹೊಸದು ಆದರೆ, ಗಂಡ ಯಾಕೆ ಹಳಬ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಹನ್ಸಿಕಾ ಪತಿ ಸೊಹೈಲ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. ಹನ್ಸಿಕಾ ಬೆಸ್ಟ್ ಫ್ರೆಂಡ್ ರಿಂಕೆ ಬಜಾಜ್ (Rinky Bajaj) ಅವರನ್ನ ಮದುವೆಯಾಗಿದ್ದರು. ಕಾರಣಾಂತರಗಳಿಂದ ಇಬ್ಬರೂ ಡಿವೋರ್ಸ್ (Divorce) ಪಡೆದುಕೊಂಡರು. ಬಳಿಕ ಸೊಹೈಲ್ ಜೀವನಕ್ಕೆ ಹನ್ಸಿಕಾ ಎಂಟ್ರಿಯಾಗಿತ್ತು. ಹಲವು ವರ್ಷಗಳ ಡೇಟಿಂಗ್ ನಂತರ ಈ ಜೋಡಿ ಮದುವೆಯಾಗಿದ್ದಾರೆ. ಹಾಗಾಗಿ ಸೆಕೆಂಡ್ ಹ್ಯಾಂಡ್ ಗಂಡ ಯಾಕೆ ಎಂದು ನಟಿಗೆ ಭಾರಿ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ: ಚುಮು ಚುಮು ಚಳಿಗೆ ಜಾನ್ವಿಯ ಹಸಿಬಿಸಿ ಫೋಟೋಸ್
`ಬಿಂದಾಸ್’ (Bindas Kannada) ನಟಿ ಹನ್ಸಿಕಾ ಮೋಟ್ವಾನಿ (Hansika Motwani) ತನ್ನ ಬಹುಕಾಲದ ಗೆಳೆಯ ಸೋಹೈಲ್ ಕಥುರಿಯಾ(Sohael Kathuriya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೈಪುರದ ಮುಂಡೋಟಾ ಕೋಟೆಯಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಕನ್ನಡದ `ಬಿಂದಾಸ್’ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ, ಸೋಹೈಲ್ ಕಥುರಿಯಾ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರಾದಯದ ಪ್ರಕಾರ ಮದುವೆ ಆಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಜೈಪುರದಲ್ಲಿ ಮದುವೆ (Wedding) ನಡೆದಿದೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್
ಇನ್ನೂ ಕೆಲ ದಿನಗಳ ಹಿಂದೆ ಪ್ಯಾರೀಸ್‌ನಲ್ಲಿ ಹನ್ಸಿಕಾಗೆ ಸೋಹೈಲ್ ಪ್ರಪೋಸ್ ಮಾಡಿದ್ದರು. ಈ ಕುರಿತ ಫೋಟೋಗಳನ್ನ ಶೇರ್ ತನ್ನ ಜೀವನ ಸಂಗಾತಿಯನ್ನ ಸೋಷಿಯಲ್ ಮೀಡಿಯಾ ಮೂಲಕ ನಟಿ ಪರಿಚಯಿಸಿದ್ದರು.
ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಅಭಿಮಾನಿಗಳು, ಸಿನಿಮಾರಂಗದ ಸ್ನೇಹಿತರು ಶುಭಹಾರೈಸುತ್ತಿದ್ದಾರೆ. ಸದ್ಯ ತಮ್ಮ ಮದುವೆಯ ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕನ್ನಡದ `ಬಿಂದಾಸ್’ (Bindas Kannada) ಚಿತ್ರದ ನಾಯಕಿ ಹನ್ಸಿಕಾ ಮೋಟ್ವಾನಿ(Hansika Motwani) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬ್ಯುಸಿನೆಸ್‌ಮ್ಯಾನ್ ಸೊಹೈಲ್ (Sohael) ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಸದ್ಯ ಈ ಜೋಡಿ ಪ್ರೀ ವೆಡ್ಡಿಂಗ್ ಸಂಭ್ರಮದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ಫೋಟೋಗಳು ಸದ್ದು ಮಾಡುತ್ತಿದೆ. ಮದುವೆಯ ಪೂರ್ವ ತಯಾರಿ ಫೋಟೋ ನೆಟ್ಟಿಗರಿಗೆ ಮೋಡಿ ಮಾಡ್ತಿದೆ.
ಬಾಲನಟಿಯಾಗಿ ಎಂಟ್ರಿ ಕೊಟ್ಟು, ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಸದ್ಯ ಪ್ರೀ ವೆಡ್ಡಿಂಗ್ ಶೂಟ್ ಸಂಭ್ರಮದಲ್ಲಿ ಈ ಜೋಡಿ ಮಿಂಚಿದ್ದಾರೆ. ಡಿಸೆಂಬರ್ 4ರಂದು ರಾತ್ರಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.