Tag: Hangover

  • ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ಬೆಂಗಳೂರು: ಗಾಂಜಾ ಗುಂಗಿನಲ್ಲಿದ್ದ ಕಾಮುಕನೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಘಟನೆ ಬೆಂಗಳೂರಿನ ಕಲ್ಯಾಣನಗರ ಸಮೀಪ ಚಲ್ಲಕೆರೆ ಬಳಿ ನಡೆದಿದೆ.

    ಇದೇ ತಿಂಗಳ 8 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬದಿಯಿಂದ ಬಂದು ಕೈ ಹಿಡಿದ ಕಾಮುಕ ಆಕೆಯ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ಈ ವೇಳೆ ಬೀದಿ ಕಾಮುಕನಿಂದ ಬಿಡಿಸಿಕೊಳ್ಳಲು ರಸ್ತೆಯಲ್ಲಿ ಮಹಿಳೆ ಕಿರುಚಾಡಿದ್ದಾಳೆ. ಆಗ ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ನಿವಾಸಿಗಳು ಕಾಮುಕನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.

    ಡ್ರಗ್ಸ್ ಹಾಗೂ ಗಾಂಜಾ ಸೇವಿಸಿ ಬೀದಿಯಲ್ಲಿ ಓಡಾಡ್ತಿದ್ದ ಅಸಾಮಿ ಅಮಲಿನಲ್ಲಿ ಮಹಿಳೆಯನ್ನು ಎಳೆದಾಡಿದ್ದಾನೆ. ಘಟನೆ ಬಳಿಕ ಕಾಮುಕನನ್ನು ಹೆಣ್ಣೂರು ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ಮಾಡುವ ವೇಳೆ ಆರೋಪಿಯು ಯಲಹಂಕ ಮೂಲದ ಅಲುಮೀನ್ ಎಂಬುದು ಪತ್ತೆಯಾಗಿದೆ. ಗಾಂಜಾ ಸೇವನೆಗಾಗಿ ಹೆಣ್ಣೂರು ಕಡೆ ಬಂದಿದ್ದ ಆರೋಪಿ ಹೆಣ್ಣೂರು ಬಳಿಯ ವಿದೇಶಿ ಪ್ರಜೆಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಘಟನೆ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಜಿತ್ ಹೆಗಡೆಗೂ ಬಿಟ್ಟಿಲ್ಲ ‘ಹ್ಯಾಂಗೋವರ್’!

    ಸಂಜಿತ್ ಹೆಗಡೆಗೂ ಬಿಟ್ಟಿಲ್ಲ ‘ಹ್ಯಾಂಗೋವರ್’!

    ಬೆಂಗಳೂರು: ಸ್ಯಾಂಡಲ್‍ವುಡ್ ನ ಯುವ ಪ್ರತಿಭೆ ಗಾಯಕ ಸಂಜಿತ್ ಹೆಗಡೆ ಸದ್ಯ ‘ಹ್ಯಾಂಗೋವರ್’ನಲ್ಲಿದ್ದಾರೆ. ಖಾಸಗಿ ಚಾನೆಲ್‍ನ ರಿಯಾಲಿಟಿ ಶೋ ಮೂಲಕ ಎಲ್ಲರ ಮನಗೆದ್ದಿರುವ ಮೈಕ್ ಟೈಸನ್, ಸಂಜಿತ್ ಕನ್ನಡದ ಹ್ಯಾಂಗೋವರ್ ಸಿನಿಮಾಕ್ಕೆ ಹಾಡೊಂದನ್ನು ಹಾಡಿದ್ದಾರೆ.

    ಕಾಲೇಜ್ ಕುಮಾರ್, ಚಮಕ್ ಚಿತ್ರಗಳಲ್ಲಿ ಹಾಡುವ ಮೂಲಕ ಕೇಳುಗರನ್ನು ಮೋಡಿ ಮಾಡಿರುವ ಸಂಜಿತ್ ಅವಕಾಶಗಳ ಸುರಿಮಳೆ ಪ್ರಾರಂಭವಾಗಿವೆ. ಹ್ಯಾಂಗೋವರ್ ಚಿತ್ರದಲ್ಲಿರುವ ರಾಕಿಂಗ್ ಸ್ಟೈಲಿನಲ್ಲಿರುವ ಈ ಹಾಡು ವೀರ್ ಸಮರ್ಥ್ ಸಂಯೋಜನೆಯಲ್ಲಿ ಮೂಡಿಬಂದಿದ್ದು, ಚೇತನ್ ಬಹದ್ದೂರ್ ಬರೆದಿದ್ದಾರೆ.

    “ದಿನವೂ ಒಂದು ರೋಚಕ.. ಹುಡುಕೋ ಒಳ್ಳೆ ಕೌತುಕ.. ಸ್ನೇಹ ಅತಿ ಭಾವುಕ.. ಪ್ರೀತಿ ಮನ ಮೋಹಕ..” ಎನ್ನುತ್ತಾ ಚಿತ್ರದಲ್ಲಿ ಮೂವರು ನಾಯಕರು ಮತ್ತು ಮೂವರು ನಾಯಕಿಯರು ಜರ್ನಿ ಮಾಡುತ್ತಾ ಹಾಡುವ ಫ್ರೆಂಡ್ ಶಿಪ್ ಹಾಡನ್ನು ಸಂಜಿತ್ ಹಾಡಿದ್ದಾರೆ. ಸಂಜಿತ್ ಜೊತೆ ರಾಕ್ ಸಿಂಗರ್ ಧೀರೇಂದ್ರ ಅವರು ಕೂಡ ಸಾಥ್ ನೀಡಿದ್ದು “ಮೋಜು ಮಸ್ತಿಯ ಹುಚ್ಚು.. ಮರುಕಳಿಸಲಿ ಅತೀ ಹೆಚ್ಚು.. ಎಣಿಸುತಿದೆ ಈ ವಾಚು” ಹಾಡನ್ನು ಹಾಡಿದ್ದಾರೆ.

    ಸದ್ಯದಲ್ಲೇ ಹಾಡುಗಳು ಸಿ ಮ್ಯೂಜಿಕ್ ಸಂಸ್ಥೆಯ ಮೂಲಕ ಸಂಗೀತ ಪ್ರೇಮಿಗಳ ಮನಮುಟ್ಟಿಲಿವೆ. ರಮನೀ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ ಡಿ ರವರು ನಿರ್ಮಿಸಿ, ವಿಠಲ್ ಭಟ್ ನಿರ್ದೇಶಿಸಿದ ಹ್ಯಾಂಗೋವರ್ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸುತ್ತಿದೆ.

  • ‘ಹ್ಯಾಂಗೋವರ್’ಗೆ ನವರಸ ನಾಯಕ ಜಗ್ಗೇಶ್ ಧ್ವನಿ!

    ‘ಹ್ಯಾಂಗೋವರ್’ಗೆ ನವರಸ ನಾಯಕ ಜಗ್ಗೇಶ್ ಧ್ವನಿ!

    ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರ ಧ್ವನಿಯಿಂದಲೇ ಚಿತ್ರ ಆರಂಭ-ಅಂತ್ಯ ಮತ್ತು ಚಿತ್ರದಲ್ಲಿರುವ ಮೂವರು ನಾಯಕರ ಪರಿಚಯವೂ ಆಗುತ್ತದೆ. ಹ್ಯಾಂಗೋವರ್ ಅಂದ್ರೆ ಏನು? ಎಂಬುದನ್ನು ಜಗ್ಗೇಶ್ ಅವರ ಧ್ವನಿಯ ಮುಖಾಂತರ ಚಿತ್ರ ನಿರ್ದೇಶಕ ವಿಠಲ್ ಭಟ್ ಹೇಳಲು ಹೊರಟಿದ್ದಾರೆ.

    ಹೊಸಬರು ಚಿತ್ರರಂಗಕ್ಕೆ ಬರಬೇಕು, ಹೊಸಾ ತಂಡ ಉಳೀಬೇಕು-ಬೆಳೀಬೇಕು ಮತ್ತು ಕನ್ನಡ ಚಿತ್ರರಂಗ ಉನ್ನತ ಶಿಖರಕ್ಕೇರಬೇಕು ಎಂಬ ಚಿತ್ರರಂಗದ ಮೇಲಿನ ಪ್ರೀತಿಯಿಂದಲೇ ಜಗ್ಗೇಶ್ ಅವರು ಸಾಕಷ್ಟು ಹೊಸಬರಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇಲ್ಲಿಯೂ ಜಗ್ಗೇಶ್ ಅಣ್ಣ ಪ್ರೀತಿಯಿಂದ ತಮ್ಮ ಧ್ವನಿಯನ್ನು ನೀಡುವುದರಿಂದ ಹ್ಯಾಂಗೋವರ್ ತಂಡಕ್ಕೆ ಮತ್ತಷ್ಟು ಭರವಸೆ ಹುಟ್ಟಿದೆ.

    ರಮಣಿ ರೀಲ್ಸ್ ಸಂಸ್ಥೆಯ ಚೊಚ್ಚಲ ಕೂಸು ‘ಹ್ಯಾಂಗೋವರ್’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಸಿದ್ಧತೆಗಳನ್ನು ನಡೆಸುತ್ತಿದೆ. ವೀರ್ ಸಮರ್ಥ್ ಅವರ ಸಂಗೀತ ನಿರ್ದೇಶನ ಇರುವ ಹ್ಯಾಂಗೋವರ್ ಗೆ ಯೋಗಿ ಕ್ಯಾಮರಾ ಹಿಡಿದಿದ್ದು ರಾಕೇಶ್.ಡಿ ಹಣವನ್ನು ಹೊಂದಿಸಿದ್ದಾರೆ. ಕಿರಣ್ ಕತ್ತರಿಯಲ್ಲಿ ಚಿತ್ರ ಫೈನ್ ಟ್ಯೂನ್ ಆಗುತ್ತಿದೆ. ಏಪ್ರಿಲ್ ಕೊನೆಯ ವಾರ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ ಹ್ಯಾಂಗೋವರ್ ತಂಡ.