ನಮ್ಮ ದೇವರು ನನ್ನ ಇವತ್ತು ಕರೆಸಿಕೊಳ್ಳುತ್ತಿದ್ದಾನೆ. ನಮ್ಮ ಬೋರ್ವೆಲ್ ಪಂಪ್ಸೆಡ್ನಲ್ಲಿ ನನ್ನ ಉಸಿರು ನಿಂತಿದೆ. ತಮ್ಮ, ಅಪ್ಪನನ್ನು ಚೆನ್ನಾಗಿ ನೋಡಿಕೋ ಎಂದು ಸ್ಟೇಟಸ್ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ನ ಸಮಗ್ರ ತನಿಖೆಯಾಗಲಿ: ಬೊಮ್ಮಾಯಿ
ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ನಿಶ್ಚಿತಾರ್ಥದ ಬಳಿಕ ಮದುವೆಯಾಗಲು (Marriage) ನಿರಾಕರಿಸಿದ ಯುವತಿಗೆ ವಿಷ ಕುಡಿಸಿ ಹತ್ಯೆ ಮಾಡಿದ ಘಟನೆ ಹಾನಗಲ್ (Hangal) ತಾಲೂಕಿನ ಬೈಚವಳ್ಳಿ ಗ್ರಾಮದ ಬಳಿ ನಡೆದಿದೆ.
ಹತ್ಯೆಗೀಡಾದ ಯುವತಿಯನ್ನು ದೀಪಾ ಗೊಂದಿ (21) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮಾಲತೇಶ್ ಬಾರ್ಕಿ (35) ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಆರೋಪಿ ಮಾಲತೇಶ್, ಸೊಸೆ ದೀಪಾಳೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ನಿಶ್ಚಿತಾರ್ಥದ ನಂತರ ಮಾವನೊಂದಿಗೆ ಮದುವೆಯಾಗಲು ಯುವತಿ ನಿರಾಕರಿಸಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು
ಏ.22 ರಂದು ಮದುವೆ ಫಿಕ್ಸ್ ಆಗಿತ್ತು. ತಕ್ಷಣ ಮದುವೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಮಾಲತೇಶ್ ಯುವತಿಯನ್ನು ಕರೆದೊಯ್ದು ಸಮೀಪದ ತೋಟವೊಂದಕ್ಕೆ ಕರೆದೊಯ್ದು ಆಕೆಗೆ ವಿಷ ಕುಡಿಸಿದ್ದಾನೆ. ಬಳಿಕ ಆಕೆಗೆ ನೇಣು ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಹಾವೇರಿ: ಬಟ್ಟೆ ಅಂಗಡಿಯ ಟ್ರಯಲ್ ರೂಮ್ನಲ್ಲಿ ಯುವತಿಯ ಅಶ್ಲೀಲ ಫೋಟೋ ತೆಗೆದುಕೊಂಡು ಆಕೆಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಹಾನಗಲ್ (Hangal) ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನ ಮೈನುದ್ದೀನ್ ಮುಂಡಗೋಡ (32) ಎಂದು ಗುರುತಿಸಲಾಗಿದೆ. ಮಕರವಳ್ಳಿ ಗ್ರಾಮದ ಯುವತಿಯೊಬ್ಬಳು ಬಟ್ಟೆ ಖರೀದಿಗೆ ನಗರದ ಅಂಗಡಿಯೊಂದಕ್ಕೆ ತೆರಳಿದ್ದ ವೇಳೆ ಆರೋಪಿ, ಯುವತಿಯ ಅಶ್ಲೀಲ ಫೋಟೋ ತೆಗೆದುಕೊಂಡಿದ್ದ. ಬಳಿಕ ಯುವತಿಯ ಮೊಬೈಲ್ ನಂಬರ್ ಪಡೆದು ವೀಡಿಯೋ ಕಾಲ್ ಮಾಡಿ ನಗ್ನವಾಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕ್ರಿಕೆಟ್ ನೋಡುತ್ತಿದ್ದ ವೇಳೆ ಪಾಕ್ಗೆ ಜೈಕಾರ ಹಾಕಿದ ಕಿಡಿಗೇಡಿಗಳು – ಇಬ್ಬರು ಅರೆಸ್ಟ್
ಇಷ್ಟೇ ಅಲ್ಲದೇ ಆರೋಪಿ, ಯುವತಿಯಿಂದ 50 ಸಾವಿರ ರೂ. ಹಾಗೂ ಚಿನ್ನದ ಸರ ಪಡೆದಿದ್ದಾನೆ. ದಿನೇ ದಿನೇ ಆತನಿಂದ ಕಿರುಕುಳ ಹೆಚ್ಚಾಗುತ್ತಿದ್ದಂತೆ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಾವೇರಿ: ವಿಜಯದಶಮಿ (Vijayadashami) ದಿನದಂದು ದೇವರ ಪಲ್ಲಕ್ಕಿ ಕೊಂಡೊಯ್ಯುವ ವೇಳೆ ಕೆಲವು ಕಿಡಿಗೇಡಿಗಳು ತಡೆದು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಘಟನೆ ಹಾನಗಲ್ನಲ್ಲಿ ನಡೆದಿದೆ.
ಐತಿಹಾಸಿಕ ಹಾನಗಲ್ (Hangal) ತಾರಕೇಶ್ವರ ದೇವರ (Tarakeshwara Temple) ಬನ್ನಿ ಮುಡಿಯುವ ಪಲ್ಲಕ್ಕಿ ಉತ್ಸವದ ವೇಳೆ ಈ ಘಟನೆ ನಡೆದಿದೆ. ಹಾನಗಲ್ ನಗರದ ಗ್ರಾಮದೇವಿ ಪಾದಗಟ್ಟಿ ಸರ್ಕಲ್ನಿಂದ ಕಾಶ್ಮೀರಿ ದರ್ಗಾ ಮಾರ್ಗವಾಗಿ ಪಲ್ಲಕ್ಕಿ ಹೊರಟಿತ್ತು. ಬಳಿಕ ವಾಪಸ್ ತಾರಕೇಶ್ವರ ದೇವಸ್ಥಾನಕ್ಕೆ ಸಾಗುವ ವೇಳೆ ಶಾಂತಯುತವಾಗಿ ಸಾಗುತ್ತಿದ್ದ ಮೆರವಣಿಗೆಯನ್ನು ತಡೆದು ಈ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ
ಈ ವೇಳೆ ದರ್ಗಾ ಬಳಿ ಬಂದಾಗ ಪಲ್ಲಕ್ಕಿ ತಡೆಯೋ ಅಗತ್ಯ ಏನಿತ್ತು? ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಪೊಲೀಸರು ಬಂದು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ಕಾರವಾರ: ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಎಸೆದು ಹೋಗಿದ್ದ ಮೂವರು ಆರೋಪಿಗಳನ್ನು ಬನವಾಸಿ (Banavas) ಪೊಲೀಸರು (Police) ಬಂಧಿಸಿದ್ದಾರೆ. ಆರೋಪಿಗಳು ಹಣಕ್ಕಾಗಿ ಕೊಲೆಗೈದು ಬಳಿಕ ಕೊರ್ಲಕಟ್ಟಾ – ವಡ್ಡಿನಕೊಪ್ಪ ರಸ್ತೆಯ ಅರಣ್ಯದಲ್ಲಿ ಶವವನ್ನು ಎಸೆದು ಹೋಗಿದ್ದರು.
ಬಂಧಿತ ಆರೋಪಿಗಳನ್ನು ಹಾನಗಲ್ನ (Hangal) ಗೆಜ್ಜೆಹಳ್ಳಿಯ ಕಿರಣ್ ಸುರಳೇಶ್ವರ (23), ನಿರಂಜನ ಗೋವಿಂದಪ್ಪ ತಳವಾರ (19) ಹಾಗೂ ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ (19) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಚೈತ್ರಾ ಡೀಲ್ ಕೇಸ್; ನನ್ನ ಹೆಸರು ಬಂದಿರೋದು ಬೇಸರವಾಗಿದೆ- ವಜ್ರದೇಹಿ ಮಠದ ಸ್ವಾಮೀಜಿ
ಆರೋಪಿಗಳು ಅದೇ ಗ್ರಾಮದ ಅಶೋಕ್ ಉಪ್ಪಾರ್ (55) ಎಂಬಾತನನ್ನು ಮೂರು ದಿನಗಳ ಹಿಂದೆ ಕೊಲೆ ಮಾಡಿದ್ದರು. ಬಳಿಕ ಗುರುತು ಸಿಗದಂತೆ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಆರೋಪಿಗಳಿಂದ ಸ್ವಿಪ್ಟ್, ಕ್ರೇಟಾ ಕಾರ್ ಹಾಗೂ ಒಂದು ಬೈಕ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾವೇರಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಮಾವನನ್ನೇ ಕೊಲೆ ಮಾಡಿದ ಘಟನೆ ಹಾನಗಲ್ನ (Hangal) ಆಡೂರು ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮೈಲಾರಪ್ಪ (೪೩) ಎಂದು ಗುರುತಿಸಲಾಗಿದೆ. ಮಾವ ಹಾಗೂ ಅಳಿಯ ರಮೇಶ್ ನಡುವೆ ಜಗಳ ನಡೆದಿದೆ. ಈ ವೇಳೆ ಸಿಟ್ಟಿನಿಂದ ಮೈಲಾರಪ್ಪನನ್ನು ಗೋಡೆಗೆ ಬಲವಾಗಿ ತಳ್ಳಿದ್ದಾನೆ. ಇದರಿಂದ ಆತನ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು
ಇಬ್ಬರ ನಡುವೆ ಕೆಲವು ದಿನಗಳಿಂದ ನಿರಂತರ ಕಲಹ ನಡೆಯುತ್ತಿತ್ತು. ಅದು ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ರಮೇಶ್ನನ್ನು ಆಡೂರು ಪೊಲೀಸರು (Police) ಬಂಧಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ (Haveri) ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಿಚ್ಛೇದನಕ್ಕೆ ಒಪ್ಪದ ಪತ್ನಿಯ ಕೊಲೆಗೆ ಸ್ಕೆಚ್- ಅಪಘಾತಕ್ಕೆ ಯತ್ನಿಸಿ ಸಿಕ್ಕಿಬಿದ್ದ ಪತಿ
ಹಾವೇರಿ: ಮಿತಿ ಮೀರಿ ಜನ ತುಂಬಿದ್ದ ಸಾರಿಗೆ ಬಸ್ನಿಂದ (Bus) ಬಿದ್ದು 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಹಾನಗಲ್ (Hangal) ತಾಲ್ಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಮಧು ಕುಂಬಾರ ಎಂದು ಗುರುತಿಸಲಾಗಿದೆ. ಬಸ್ನಲ್ಲಿ ಭಾರೀ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ದರಿಂದಾಗಿ ಬಾಲಕಿ ಬಾಗಿಲ ಬಳಿಯೇ ನಿಂತಿದ್ದಳು. ದುರಾದೃಷ್ಟವಶಾತ್ ಆಯತಪ್ಪಿ ಕೆಳಗಡೆ ಬಿದ್ದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಾಟ್ಸಾಪ್ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ
ಬಾಲಕಿ ವಾಸನ ಗ್ರಾಮದಿಂದ ಕುಸನೂರು ಗ್ರಾಮದ ಶಾಲೆಗೆ ಬಸ್ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಪ್ರೌಢ ಶಾಲೆಗೆ ದಾಖಲಾಗಿದ್ದಳು. ಕುಟುಂಬದಲ್ಲಿ ಒಬ್ಬಳೇ ಮಗಳಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ
ದಾವಣಗೆರೆ: ಮಾ.23 ರಂದು ದಾವಣಗೆರೆ (Davanagere) ರಿಂಗ್ ರಸ್ತೆಯಲ್ಲಿ ಮಹಾಂತೇಶ್ (35) ಎಂಬ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣದ ಸತ್ಯ ತನಿಖೆಯಿಂದ ಹೊರಬಿದ್ದಿದೆ. ಪತ್ನಿ ಶ್ವೇತಾ (27) ಸಂಚು ರೂಪಿಸಿ ಪ್ರಿಯಕರ ಚಂದ್ರಶೇಖರ್ (28) ಜೊತೆ ಸೇರಿ ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ.
ಹತ್ಯೆಯಾದ ಮಹಾಂತೇಶ್ ಹಾವೇರಿ ಜಿಲ್ಲೆಯ ಹಾನಗಲ್ (Hangal) ತಾಲೂಕಿನ ಬೈಚವಳ್ಳಿ ಗ್ರಾಮದ ನಿವಾಸಿ. ದಾವಣಗೆರೆಯಲ್ಲಿ ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ.
ಶ್ವೇತಾ, ಮೆಡಿಕಲ್ ರೆಪ್ (Medical Representative) ಆಗಿದ್ದ ಬಾಲ್ಯ ಸ್ನೇಹಿತ ಚಂದ್ರಶೇಖರ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ವಿದ್ಯಾನಗರ (Vidyanagar) ಠಾಣೆ ಪೊಲೀಸರು ಕೊಲೆ ರಹಸ್ಯವನ್ನು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪನ
ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಲು ಬಂದ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿ, ಫಲಿತಾಂಶ ಬರಲು ಇನ್ನೂ ಸಮಯವಿದೆ. ಹಾನಗಲ್ನಲ್ಲಿ ಈ ರೀತಿಯ ಪೈಪೋಟಿ ನಿರೀಕ್ಷೆಯಲ್ಲಿದ್ದೆವು. ಯಾವಾಗಲೂ ಅಲ್ಲಿ ಪೈಪೋಟಿ ಇರುತ್ತದೆ. ಆದರೆ ಟಿಕೆಟ್ ವ್ಯತ್ಯಾಸದಿಂದ ಪೈಪೈಪೋಟಿಯಲ್ಲ. ಮೊದಲಿನಿಂದಲೂ ಆ ಕ್ಷೇತ್ರ ಪೈಪೋಟಿಯ ಕ್ಷೇತ್ರವಾಗಿದೆ. ಇನ್ನೂ ಬಹಳ ಸುತ್ತುಗಳಿದೆ. ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಒಟ್ಟು 1,71,264 ಮಂದಿ ಮತದಾನ ಮಾಡಿದ್ದು 16 ಟೇಬಲ್ ನಲ್ಲಿ 22 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿಯ ಶಾಸಕ ಸಿಎಂ ಉದಾಸಿ ಅವರ ಅಕಾಲಿಕ ನಿಧನದಿಂಧ ತೆರವಾದ ಕ್ಷೇತ್ರಕ್ಕೆ ಕಳೆದ ಶನಿವಾರ ಮತದಾನ ನಡೆದಿತ್ತು. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅರೆಸ್ಟ್