Tag: Hang Kong

  • ರೇಸ್ ಟ್ರ್ಯಾಕ್‍ನಿಂದಲೇ ಹೊರ ಹಾರಿತು 17ರ ಯುವತಿ ಡ್ರೈವ್ ಮಾಡ್ತಿದ್ದ ಕಾರ್-ವಿಡಿಯೋ ವೈರಲ್

    ರೇಸ್ ಟ್ರ್ಯಾಕ್‍ನಿಂದಲೇ ಹೊರ ಹಾರಿತು 17ರ ಯುವತಿ ಡ್ರೈವ್ ಮಾಡ್ತಿದ್ದ ಕಾರ್-ವಿಡಿಯೋ ವೈರಲ್

    ಮಕಾವ್: ಫಾರ್ಮುಲಾ ಥ್ರೀ ಮಕಾವ್ ಗ್ರ್ಯಾಂಡ್ ಪ್ರಿಕ್ಸ್ ರೇಸಿಂಗ್ ನಲ್ಲಿ 17ರ ಯುವತಿಯೊಬ್ಬಳು ಗಂಟೆಗೆ 274 ಕಿ.ಮೀ ವೇಗದಲ್ಲಿ ಕಾರನ್ನು ಕ್ರ್ಯಾಶ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಾನುವಾರ ಗೀಯಾ ಸರ್ಕ್ಯೂಟ್‍ನಲ್ಲಿ “ಫಾರ್ಮುಲಾ ಥ್ರೀ ಮಕಾವ್ ಗ್ರ್ಯಾಂಡ್ ಪ್ರಿಕ್ಸ್” ರೇಸಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಈ ರೇಸಿಂಗ್‍ನಲ್ಲಿ ವಿಶ್ವದ ಪ್ರಖ್ಯಾತ ಮಹಿಳಾ ರೇಸರ್ ಗಳು ಭಾಗಿಯಾಗಿದ್ದರು. ಈ ರೇಸಿಂಗ್‍ನಲ್ಲಿ ಜರ್ಮನಿಯ 17 ವರ್ಷದ ಸೋಫಿಯಾ ಫ್ಲೋರ್ಸ್ಚ್ 270 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿದ್ದಾಗ, ಆಕೆಯ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಜಪಾನ್ ರೇಸರ್ ಷೋ ಟ್ಸುಬಾಯ್ ಅವರ ಕಾರಿಗೆ ಡಿಕ್ಕಿ ಹೊಡೆದು, ನಂತರ ಅದೇ ವೇಗದಲ್ಲಿ ಗಾಳಿಯಲ್ಲಿ ಹಾರಿ ಮುಂದಿದ್ದ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದಿದೆ.

    ಕಾರ್ ಹಾರಿ ಬಿದ್ದ ಪರಿಣಾಮ, ಸೋಫಿಯಾ ಪ್ರಜ್ಞಾಹೀನರಾಗಿದ್ದು, ಷೋ ಟ್ಸುಬಾಯ್ ಹಾಗೂ ಇಬ್ಬರು ಛಾಯಾಚಿತ್ರಗಾರರ ಸ್ಥಿತಿಯೂ ಗಂಭೀರವಾಗಿದೆ. ಕೂಡಲೇ ಎಚ್ಚೆತ್ತ ಫಾರ್ಮುಲಾ ರೇಸಿಂಗ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

    ಸೋಫಿಯಾ ಚಲಾಯಿಸುತ್ತಿದ್ದ ಕಾರ್ ಹಾರಿ ಮುಂದಿರುವ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಇದೇ ಗೀಯಾ ಸರ್ಕ್ಯೂಟ್‍ನಲ್ಲಿ ಈ ಹಿಂದೆಯೂ ಇಂತಹ ಅವಘಡಗಳು ಸಂಭವಿಸಿ, ಮೂವರು ರೇಸರ್ ಗಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನೀರವ್ ಮೋದಿಯ ಹಾಂಗ್​ಕಾಂಗ್​ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ

    ನೀರವ್ ಮೋದಿಯ ಹಾಂಗ್​ಕಾಂಗ್​ನ 255 ಕೋಟಿ ರೂ. ಆಸ್ತಿ ಇಡಿ ವಶಕ್ಕೆ

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಮಾಡಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿಗೆ ಸೇರಿದ ಹಾಂಗ್​ಕಾಂಗ್​ನಲ್ಲಿರುವ ಸುಮಾರು 255 ಕೋಟಿ ರೂಪಾಯಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಇಡಿ ನೀರವ್ ಮೋದಿಯ ಆಸ್ತಿಯನ್ನು ವಶಪಡಿಸಿಕೊಂಡಿದ್ದು, ಗುರುವಾರವೂ ಸಹ ಹಾಂಗ್​ಕಾಂಗ್​ನಲ್ಲಿರುವ ಸುಮಾರು 255 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ಇಲ್ಲಿಯವರೆಗೂ ಇಡಿ ಅಂದಾಜು 4,744 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

    ದೇಶದಲ್ಲೇ ಸಂಚಲನ ಮೂಡಿಸಿದ್ದ ಪಿಎನ್‍ಬಿ ವಂಚನೆ ಬೆಳಕಿಗೆ ಬರುತ್ತಲೇ ವಜ್ರೋದ್ಯಮಿ ನೀರವ್ ಮೋದಿ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಇಡಿ ಇಂಟರ್ಪೋಲ್ ಮೂಲಕ ರೆಡ್‍ಕಾರ್ನರ್ ನೋಟಿಸ್ ಸಹ ಜಾರಿಗೊಳಿಸಿದೆ. ಅಕ್ಟೋಬರ್ ತಿಂಗಳೊಂದರಲ್ಲೇ ಭಾರತದ ಸೇರಿದಂತೆ 5 ದೇಶಗಳಲ್ಲಿ ಸುಮಾರು 637 ಕೋಟಿ ರುಪಾಯಿಯನ್ನು ಜಪ್ತಿಮಾಡಲಾಗಿದೆ.

    ಏನಿದು ಪ್ರಕರಣ?
    ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ.

    ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‍ಗೆ ಮನವಿ ಮಾಡಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv