Tag: hands

  • ಏಷ್ಯಾದಲ್ಲೇ ಫಸ್ಟ್- ಎರಡೂ ಕೈಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಏಷ್ಯಾದಲ್ಲೇ ಫಸ್ಟ್- ಎರಡೂ ಕೈಗಳ ಶಸ್ತ್ರಚಿಕಿತ್ಸೆ ಯಶಸ್ವಿ

    ಮುಂಬೈ: ಎರಡೂ ಕೈಗಳನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಇದೀಗ ಎರಡೂ ತೋಳುಗಳನ್ನು ಶಸ್ತ್ರಚಿಕಿತ್ಸೆಯ (Arm Transplant) ಮೂಲಕ ಜೋಡಣೆ ಮಾಡುವಲ್ಲಿ ಮುಂಬೈ ವೈದ್ಯರು ಯಶಸ್ವಿಯಾಗಿದ್ದಾರೆ.

    ಪ್ರೇಮಾ ರಾವ್ (33) ಎರಡೂ ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿ. ರಾಜಸ್ಥಾನದ ಅಜ್ಮೀರ್ (Rajasthan’s Ajmer) ಮೂಲದವರಾಗಿರುವ ಇವರಿಗೆ ಸದ್ಯ ಯಶಸ್ವಿಯಾಗಿ ತೋಳುಗಳ ಕಸಿ ಮಾಡಲಾಗಿದ್ದು, ಏಷ್ಯಾ (Asia) ದಲ್ಲಿಯೇ ಇದು ಮೊದಲ ಯಶಸ್ವಿ ಪ್ರಯತ್ನವಾಗಿದೆ.

    ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡವು ನಿರಂತರವಾಗಿ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಕೋಲಾರ ಬೇಡ, ವರುಣಾದಿಂದ್ಲೇ ಸ್ಪರ್ಧಿಸಿ- ಸಿದ್ದರಾಮಯ್ಯಗೆ ಖರ್ಗೆ, ರಾಹುಲ್ ಗಾಂಧಿ ಸಲಹೆ

    ಕೈಗಳನ್ನು ಕಳೆದುಕೊಂಡಿದ್ದು ಹೇಗೆ..?: ಕಳೆದ 10 ವರ್ಷದ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರೇಮಾ ರಾಮ್ ಅವರಿಗೆ ವಿದ್ಯುತ್ ಕಂಬ ತಾಗಿ ಶಾಕ್‍ನಿಂದ ಎರಡೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದವು. ಪರಿಣಾಮ ಎರಡೂ ಕೈಗಳನ್ನು ಕತ್ತರಿಸುವ ಅನಿವಾರ್ಯ ಎದುರಾಯಿತು. ಸದ್ಯ 10 ವರ್ಷಗಳ ಬಳಿಕ ಇದೀಗ ಎರಡೂ ಕೈಗಳನ್ನು ಕಸಿ ಮಾಡಿಸಿಕೊಂಡಿದ್ದಾರೆ. ಈ ರೀತಿ ಕಸಿ ಮಾಡಿಕೊಂಡ ಏಷ್ಯಾದ ಮೊದಲ ವ್ಯಕ್ತಿ ಪ್ರೇಮ್‍ರಾವ್ ಆಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಪ್ರೇಮಾ ರಾವ್, ನನ್ನ ಎರಡೂ ಕೈಗಳನ್ನು ಕಳೆದುಕೊಂಡ ನಂತರ ನಾನು ತುಂಬಾ ನೊಂದುಕೊಂಡಿದ್ದೆ. ಇದೀಗ ನನಗೆ ಎರಡೂ ಕೈಗಳು ಬಂದಿದ್ದು, ಕುಟುಂಬ ಹಾಗೂ ವೈದ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಚಿಕನ್ ಬೇಯಿಸಲು ಕುದಿಯೋ ಎಣ್ಣೆಗೆ ಕೈ ಹಾಕಿದ – ವೀಡಿಯೋ ವೈರಲ್

    ಚಿಕನ್ ಬೇಯಿಸಲು ಕುದಿಯೋ ಎಣ್ಣೆಗೆ ಕೈ ಹಾಕಿದ – ವೀಡಿಯೋ ವೈರಲ್

    ಸ್ತೆಬದಿಯಲ್ಲಿ ಆಹಾರ ವ್ಯಾಪಾರ ಮಾಡುವ ವ್ಯಕ್ತಿಯೊರ್ವ ಬಾಣಲಿಯಲ್ಲಿ ಕುದಿಯುವ ಎಣ್ಣೆಗೆ ಕೈ ಹಾಕಿ ಚಿಕನ್ ಬೇಯಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ನಾನ್‍ವೆಜ್ ಫುಡ್ಡಿ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ವ್ಯಕ್ತಿಯೋರ್ವ ತನ್ನ ಕೈಗಳನ್ನು ಕುದಿಯುವ ಎಣ್ಣೆಗೆ ಅದ್ದಿ ನಂತರ ಅದನ್ನು ತಕ್ಷಣ ತೆಗೆಯುವುದನ್ನು ಕಾಣಬಹುದಾಗಿದೆ. ವ್ಯಕ್ತಿ ಬಿಸಿ ಎಣ್ಣೆಗೆ ಕೈ ಅದ್ದಿ ಕರಿದ ಚಿಕನ್ ತುಂಡುಗಳನ್ನು ಒಂದೊಂದಾಗಿ ಹೊರಗೆ ತೆಗೆದು ಅದನ್ನು ಪಾತ್ರೆಯಲ್ಲಿ ಹಾಕುತ್ತಾನೆ. ಬಳಿಕ ಅದಕ್ಕೆ ಒಂದಷ್ಟು ಮಸಾಲೆಗಳನ್ನು ಬೆರೆಸುತ್ತಾನೆ. ಇದನ್ನೂ ಓದಿ: ನೀವಿಬ್ಬರು ಇಲ್ಲ ಅನ್ನೋದು ನಂಬಲಾಗ್ತಿಲ್ಲ – ಅಪ್ಪು, ಅಂಬಿ ನೆನೆದು ಸುಮಲತಾ ಭಾವುಕ

     

    View this post on Instagram

     

    A post shared by SHAILESH | JAIPUR (@nonvegfoodie)

    ಈ ವೀಡಿಯೋ ಜೊತೆಗೆ ಚಿಕನ್ ಹೊರಗೆ ತೆಗೆಯಲು ಕುದಿಯುವ ಎಣ್ಣೆಗೆ ಕೈ ಹಾಕುವ ಇವರಿಗೆ ಕೈ ಸುಡುವುದಿಲ್ಲವೇ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಪ್ರಶ್ನಿಸಲಾಗಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ ಸುಮಾರು 59,000ಕ್ಕೂ ಹೆಚ್ಚು ಲೈಕ್ ಹಾಗೂ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹಾಟ್ ಬೆಡಗಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು

  • ವೈರಲ್ ಆಯ್ತು ಮುಖದ್ಮೇಲೆ ಬಾಲ ಇರುವ ಕ್ಯೂಟ್ ನಾಯಿಮರಿ

    ವೈರಲ್ ಆಯ್ತು ಮುಖದ್ಮೇಲೆ ಬಾಲ ಇರುವ ಕ್ಯೂಟ್ ನಾಯಿಮರಿ

    ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಈಗ ಮುಖದ ಮೇಲೆ ಬಾಲವಿರುವ ಕ್ಯೂಟ್ ನಾಯಿ ಮರಿ ಸಖತ್ ವೈರಲ್ ಆಗಿದ್ದು. ಈ ನಾಯಿ ಮರಿಯನ್ನು ಕಂಡು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

    ಒಂದು ಬಾಲವಿರುವ ನಾಯಿಯನ್ನು ನೋಡಿರುತ್ತೇವೆ. ಆದರೆ ಅಮೆರಿಕದ ಮಿಸ್ಸೌರಿಯಲ್ಲಿ ಬೀದಿ ನಾಯಿ ಮರಿಯೊಂದಕ್ಕೆ ಎರಡೆರಡು ಬಾಲವಿದೆ. ಅದರಲ್ಲೂ ವಿಚಿತ್ರವೆಂದರೆ ನಾಯಿ ಮರಿಗೆ ಮುಖದ ಮೇಲೆ ಬಾಲವಿದೆ. ಈ ನಾಯಿ ಮರಿ ಹುಟ್ಟಿದಾಗಿಂದಲೇ ಮುಖದ ಮೇಲೆ ಬಾಲವಿತ್ತೆಂದು ಹೇಳಲಾಗುತ್ತಿದ್ದು, ಸದ್ಯ ಎಲ್ಲೆಡೆ ಈ ನಾಯಿ ಮರಿಯದ್ದೇ ಚರ್ಚೆ ಶುರುವಾಗಿದೆ.

    ನಾಯಿ ಮರಿಯನ್ನು ಕಂಡ ಜನರು ಇದಕ್ಕೆ ಕ್ಯೂಟ್ ಯೂನಿಕಾರ್ನ್ ಎಂದು ಕರೆಯುತ್ತಿದ್ದಾರೆ. ಯೂನಿಕಾರ್ನ್ ಎಂದರೆ ಹಣೆಯ ಮೇಲೆ ಕೊಂಬು ಇರುವ ಕುದುರೆ. ಮಕ್ಕಳ ಕಥೆಗಳಲ್ಲಿ ಬರುವ ಯೂನಿಕಾರ್ನ್‍ಗೆ ಕೊಡಿರುವಂತೆ ಈ ನಾಯಿ ಮರಿಗೆ ಹಣೆಯ ಮೇಲೆ ಬಾಲವಿದೆ. ಆದರೆ ಈ ನಾಯಿ ಮರಿಯ ಅಸಲಿ ಹೆಸರು ನಾರ್ವಲ್. ನಾಯಿ ಮರಿಯನ್ನು ಬೀದಿಯಲ್ಲಿ ಕಂಡು ಎನ್‍ಜಿಓವೊಂದು ಇದನ್ನು ರಕ್ಷಿಸಿದೆ.

    https://twitter.com/dog_rates/status/1194660457451159552

    ಈ ನಾಯಿ ಮರಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಇದನ್ನು ಮ್ಯಾಕ್ ಮಿಷನ್ಸ್ ಚಾರಿಟಿ ರಕ್ಷಣೆ ಮಾಡಿತ್ತು. ಈ ವೇಳೆ ಈ ಪುಟ್ಟ ನಾಯಿ ಮರಿಯ ಹಣೆಯ ಭಾಗದಲ್ಲಿ ಪುಟ್ಟ ಬಾಲವಿರುವುದನ್ನು ಗಮನಿಸಿದ ಸದಸ್ಯರು ಪಶು ವೈದ್ಯರ ಬಳಿ ಕರೆದೊಯ್ದಿದ್ದಾರೆ.

    ಅಲ್ಲಿ ವೈದ್ಯರು ನಾರ್ವಲ್‍ನನ್ನು ತಪಾಸಣೆ ನಡೆಸಿದ ಬಳಿಕ ನಾಯಿ ಮರಿಯ ಮುಖದ ಮೇಲಿರುವ ಬಾಲ ದೇಹಕ್ಕೆ ಜೋಡಣೆಯಾಗಿಲ್ಲ ಎಂಬುದು ತಿಳಿದು ಬಂದಿದೆ. ಇದರಿಂದ ಅದಕ್ಕೆ ಯಾವುದೇ ಅಪಾಯವಿಲ್ಲ ಎಂದು ಬಾಲವನ್ನು ಕತ್ತರಿಸದೇ ಸುಮ್ಮನೆ ಬಿಟ್ಟಿದ್ದಾರೆ.

    ಈ ಮುದ್ದಾದ ನಾಯಿ ಮರಿಯ ಫೋಟೋಗಳನ್ನು ‘ವಿ ರೇಟ್ ಡಾಗ್ಸ್’ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಅಪರೂಪದ ನಾಯಿ ಮರಿಗೆ ಕ್ಯೂಟ್‍ನೆಸ್‍ಗೆ ಪ್ರಾಣಿ ಪ್ರೀಯರು ಫಿದಾ ಆಗಿದ್ದಾರೆ. ಯೂನಿಕಾರ್ನ್ ತರಹ ಈ ನಾಯಿ ಮರಿಗೆ ಪಪ್ಪಿಕಾರ್ನ್ ಎಂದು ಪ್ರೀತಿಯಿಂದ ಕರೆದಿದ್ದಾರೆ.

  • ವಿಡಿಯೋ ಶೇರ್ ಮಾಡಿ ಅಳು ತಡೆಯಲಾಗಲಿಲ್ಲ ಎಂದ ಆನಂದ್ ಮಹೀಂದ್ರಾ

    ವಿಡಿಯೋ ಶೇರ್ ಮಾಡಿ ಅಳು ತಡೆಯಲಾಗಲಿಲ್ಲ ಎಂದ ಆನಂದ್ ಮಹೀಂದ್ರಾ

    ನವದೆಹಲಿ: ಮಹೀಂದ್ರ ಮೋಟರ್ ಮಾಲೀಕ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಟ್ವಿಟ್ಟರ್ ಮೂಲಕ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ವಿಡಿಯೋವೊಂದನ್ನು ಶೇರ್ ಮಾಡಿ ನನಗೆ ಅಳು ತಡೆಯಲಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಹೌದು. ರಷ್ಯಾ ದೇಶದ ಪುಟ್ಟ ಬಾಲಕಿ ಹುಟ್ಟುವಾಗಲೇ ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಹೀಗಾಗಿ ಕಾಲುಗಳ ಮೂಲಕವೇ ಆಹಾರ ಸೇವಿಸುತ್ತಿರುವ ವಿಡಿಯೋವನ್ನು ಆನಂದ್ ಅವರು ಶೇರ್ ಮಾಡಿಕೊಂಡಿದ್ದಾರೆ. 2 ವರ್ಷದ ಬಾಲಕಿಯ ಈ ವಿಡಿಯೋ ಮನಕಲಕುವಂತಿದೆ.

    ವಿಡಿಯೋದಲ್ಲೇನಿದೆ?
    ಪುಟ್ಟ ಬಾಲಕಿಯೊಬ್ಬಳು ಫೋರ್ಕ್ ಮೂಲಕ ಆಹಾರ ಸೇವಿಸುತ್ತಾಳೆ. ಫೋರ್ಕನ್ನು ತನ್ನ ಕಾಲಿನ ಬೆರಳುಗಳ ಮಧ್ಯೆ ಇಟ್ಟುಕೊಂಡು ಕಾಲನ್ನು ಮೇಲಕ್ಕೆತ್ತಿ ತಿನ್ನಲು ಪ್ರಯತ್ನಿಸುತ್ತಿದ್ದಾಳೆ. ಇದು ಸಾಧ್ಯವಾಗದಿದ್ದಾಗ ಮತ್ತೆ ಪೋರ್ಕನ್ನು ಇನ್ನೊಂದು ಕಾಲಿನಲ್ಲಿ ಸರಿಪಡಿಸಿಕೊಂಡು ನಂತರ ತಾನೇ ಬಗ್ಗಿ ಆಹಾರ ಸೇವಿಸಿದ್ದಾಳೆ. 17 ನಿಮಿಷಗಳ ಈ ವಿಡಿಯೋವನ್ನು ನೋಡಿದರೆ ನಿಜಕ್ಕೂ ಕಣ್ಣೀರು ತರಿಸುತ್ತದೆ.

    ಟ್ವೀಟ್‍ನಲ್ಲೇನಿದೆ..?
    ಇತ್ತೀಚೆಗಷ್ಟೇ ನಾನು ನನ್ನ ಮೊಮ್ಮಗನನ್ನು ನೋಡಿದ್ದೇನೆ. ಈ ಮಧ್ಯೆ ವಾಟ್ಸಾಪ್ ನಲ್ಲಿ ಬಂದಂತಹ ಈ ವಿಡಿಯೋವನ್ನು ನೋಡಿ ನನಗೆ ಅಳು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡು ಬಾಲಕಿಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ ಬೇಸರಗೊಂಡಿರುವ ಆನಂದ್ ಅವರು, ನ್ಯೂನ್ಯತೆ, ಸವಾಲುಗಳು ಕೆಲವರ ಜೀವನಕ್ಕೆ ಸಿಕ್ಕ ಗಿಫ್ಟ್ ಆಗಿವೆ. ಆದರೆ ಇವುಗಳನ್ನೆಲ್ಲ ಹೇಗೆ ಮೆಟ್ಟಿ ನಿಲ್ಲುತ್ತೇವೆ ಎಂಬುದು ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡ ಈ ವಿಡಿಯೋಗೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ 10 ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಹಲವರು ಮಗುವಿನ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಕೆಲವರು ವಿಶೇಷಚೇತನ ಮಕ್ಕಳ ವಿಡಿಯೋಗಳನ್ನು ಹಾಕಿದ್ದಾರೆ. ಅದರಲ್ಲೊಬ್ಬರು ಇಂಥವರು ನಮ್ಮ ಭಾರತದಲ್ಲಿಯೂ ಇದ್ದಾರೆ ಎಂದು ಬರೆದುಕೊಂಡು ಕರ್ನಾಟಕದ ಶಾಲಾ ವಿದ್ಯಾರ್ಥಿಯೊಬ್ಬ ಊಟ ತೆಗೆದುಕೊಂಡು ಹೋಗಿ ಬಳಿಕ ಎಲ್ಲರೊಂದಿಗೆ ಕುಳಿತು ಊಟ ಮಾಡುತ್ತಿರುವ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಿಂಧು ಜಿಮ್ ಟ್ರೈನಿಂಗ್ ವಿಡಿಯೋ ನೋಡಿ ಆಯಾಸಗೊಂಡೆ ಎಂದ ಆನಂದ್ ಮಹೀಂದ್ರಾ

    https://twitter.com/Gkyadav11590/status/1175272793266503686

  • ಬಾಂಬ್ ಬ್ಲಾಸ್ಟ್ ನಲ್ಲಿ ಎರಡೂ ಕೈ ಕಳೆದುಕೊಂಡ್ರೂ ಜೀವನದಲ್ಲಿ ಗೆಲುವು ಕಂಡ ಯುವತಿಯ ಸ್ಟೋರಿ ಓದಿ

    ಬಾಂಬ್ ಬ್ಲಾಸ್ಟ್ ನಲ್ಲಿ ಎರಡೂ ಕೈ ಕಳೆದುಕೊಂಡ್ರೂ ಜೀವನದಲ್ಲಿ ಗೆಲುವು ಕಂಡ ಯುವತಿಯ ಸ್ಟೋರಿ ಓದಿ

    ಮುಂಬೈ: ಜೀವನದಲ್ಲಿ ನಡೆಯೋ ಕೆಲವೊಂದು ಕೆಟ್ಟ ಸನ್ನಿವೇಶಗಳನ್ನ ಮೆಟ್ಟಿ ನಿಂತು ನಾನು ಸಮರ್ಥವಾಗಿ ಬದುಕಬಲ್ಲೇ ಅನ್ನೋದನ್ನ ಈ ಯುವತಿಗಿಂತ ಬೇರ್ಯಾರು ಉತ್ತಮವಾಗಿ ಕಲಿಸಲು ಸಾಧ್ಯವಿಲ್ಲ ಅಂದ್ರೆ ತಪ್ಪಾಗಲ್ಲ. ತನ್ನ 13ನೇ ವಯಸ್ಸಿನಲ್ಲಿ ಬಾಂಬ್ ಬ್ಲಾಸ್ಟ್‍ನಲ್ಲಿ ಎರಡೂ ಕೈ ಕಳೆದುಕೊಂಡು, ಸದ್ಯ ಮೋಟಿವೇಷನಲ್ ಸ್ಪೀಕರ್ ಆಗಿರೋ ಮುಂಬೈನ ಮಾಳವಿಕಾ ಐಯ್ಯರ್ ಅವರ ಸಾಧನೆಯ ಕಥೆ ಇದು.

    ಬಾಂಬ್ ಬ್ಲಾಸ್ಟ್ ನಲ್ಲಿ ಎರಡೂ ಕೈ ಕಳೆದುಕೊಂಡ ಮಾಳವಿಕಾ, ಅದರಿಂದ ಚೇತರಿಸಿಕೊಳ್ಳಲು ತುಂಬಾ ಸಮಯವೇ ಬೇಕಾಯಿತು. ಆದ್ರೆ ಅವರು ಬದುಕುಳಿದಿದ್ದು ಮಾತ್ರವಲ್ಲ, ಇತರರಿಗೆ ಸ್ಫೂತಿಯಾಗುವಂತೆ ಈಗ ತಮ್ಮ ಬದುಕನ್ನೇ ಬದಲಾಯಿಸಿದ್ದಾರೆ. ಮಾಳವಿಕಾ ಬದುಕಿನ ಕಥೆಯನ್ನ ಹ್ಯೂಮನ್ಸ್ ಆಫ್ ಬಾಂಬೇ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಎಂಥವರಿಗೂ ಸ್ಫೂರ್ತಿಯಾಗುವಂತಿದೆ ಇವರ ಸ್ಟೋರಿ.

    ಪೋಸ್ಟ್ ನಲ್ಲಿ ಮಾಳವಿಕಾ, ತನ್ನ ಬದುಕನ್ನೇ ಬದಲಿಸಿದ ಒಂದು ಅಪಘಾತದ ಬಗ್ಗೆ ಹೇಳಿದ್ದಾರೆ. ಹತ್ತಿರದ ಯುದ್ಧಸಾಮಗ್ರಿಗಳ ಡಿಪೋದಲ್ಲಿ ಬೆಂಕಿ ಅವಘಡ ಉಂಟಾಗಿ ಅದರ ತುಣುಕುಗಳು ಎಲ್ಲಾ ಕಡೆ ಬಿದ್ದಿದ್ದವು. ನಮ್ಮ ಮನೆಯ ಗ್ಯಾರೇಜ್‍ನಲ್ಲಿ ಗ್ರೆನೇಡ್‍ವೊಂದು ಬಂದು ಬಿತ್ತು. ಅದನ್ನ ಹಿಡಿದುಕೊಂಡಾಗ ಸ್ಫೋಟಗೊಂಡಿತು. ಅದರಿಂದ ನನ್ನ ಎರಡೂ ಕೈಗಳನ್ನ ಕಳೆದುಕೊಂಡೆ. ಕಾಲುಗಳಿಗೂ ತೀವ್ರ ಗಾಯಗಳಾಗಿ ನರಗಳು ಪಾಶ್ರ್ವವಾಯುಗೆ ತುತ್ತಾದವು ಎಂದು ಹೇಳಿದ್ದಾರೆ.

    ಮೊದಲಿಗೆ ವ್ಹೀಲ್‍ ಚೇರ್‍ಗೆ ಸೀಮಿತರಾಗಿದ್ದ ಮಾಳವಿಕಾ ನಂತರ ಮತ್ತೆ ನಡೆದಾಡುವುದನ್ನ ಕಲಿತರು ಹಾಗೂ ಪ್ರಾಸ್ಥೆಟಿಕ್ ಕೈಗಳನ್ನ ಬಳಸುವುದು ಕಲಿತರು. ಅಂದಿನಿಂದ ಮಾಳವಿಕಾ ಹಿಂದೆ ತಿರುಗಿ ನೋಡಲಿಲ್ಲ. ಸಹಾಯಕರೊಬ್ಬರ ನೆರವಿನಿಂದ 10ನೇ ಕ್ಲಾಸ್ ಪರೀಕ್ಷೆ ಪೂರ್ಣಗೊಳಿಸಿದ್ರು, ನಂತರ ಸ್ಟೇಟ್ ರ‍್ಯಾಂಕ್ ಕೂಡ ಪಡೆದರು. ಅನಂತರ ತನ್ನ ವಿದ್ಯಾಭ್ಯಾಸ ಮುಂದುವರೆಸಿ ಪಿಹೆಚ್‍ಡಿ ಕೂಡ ಮಾಡಿದ್ರು. ಮನಸ್ಸು ಮಾಡಿದ್ರೆ ಯಾವುದೇ ಕೆಲಸ ಅಸಾಧ್ಯವಲ್ಲ ಎಂಬುದನ್ನ ಮಾಳವಿಕಾ ಸಾಬೀತು ಮಾಡಿದ್ದಾರೆ.

    ನಾನು ಅಪರಿಪೂರ್ಣಳು ಎಂದೆನಿಸುತ್ತಿತ್ತು. ಘಟನೆ ಬಗ್ಗೆ ಮಾತನಾಡುವುದನ್ನ ಅವಾಯ್ಡ್ ಮಾಡ್ತಿದ್ದೆ. ಈ ವೇಳೆ ನನ್ನ ಕುಟುಂಬದವರು ನನ್ನ ಜೊತೆ ನಿಂತರು. ಇದೇ ವೇಳೆ ನನ್ನ ಜೀವನ ಸಂಗಾತಿಯನ್ನ ಭೇಟಿ ಮಾಡಿದೆ. ನಾನು ಅತ್ಯಂತ ಪರಿಪೂರ್ಣ ವ್ಯಕ್ತಿ ಎಂಬಂತೆ ಅವರು ನನ್ನನ್ನು ಕಾಣುತ್ತಿದ್ದರು. ನನ್ನ ಅಂಗೈಕಲ್ಯ ಅವರಿಗೆ ದೊಡ್ಡ ವಿಚಾರವಾಗಿರಲಿಲ್ಲ. ಆದ್ರೆ ನನಗ್ಯಾಕೆ ಅದು ದೊಡ್ಡದೆನಿಸಿತ್ತು? ಹೀಗಾಗಿ ನಾನು ಬದುಕಿರುವುದೇ ಒಂದು ದೊಡ್ಡ ಪವಾಡ ಎಂಬುದನ್ನ ನನಗೆ ನಾನು ನೆನಪಿಸಲು ಶುರು ಮಾಡಿದೆ. ಅಪಘಾತದಿಂದ ಪಾರಾಗಿದ್ದೀನಿ ಅಂದ್ರೆ ನಾನು ಏನು ಬೇಕಾದರೂ ಮಾಡಬಹುದು ಎಂದು ನಂಬಲು ಶುರು ಮಾಡಿದೆ ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ.

    ಅನೇಕ ವರ್ಷಗಳ ಅಭದ್ರತೆ, ನನ್ನ ದೇಹವನ್ನ ಮರೆಮಾಚುವುದು, ಅಪರಿಚಿತರಿಂದ ಸಾವಿರಾರು ಪ್ರಶ್ನೆಗಳನ್ನ ಎದುರಿಸಿದ ನಂತರ 2012ರಲ್ಲಿ ನನ್ನ ಅಪಘಾತದ ವಾರ್ಷಿಕೋತ್ಸವದಂದು ನಾನು ನಡೆದ ಘಟನೆಯನ್ನ ವಿವರಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದೆ. ಆ ಪೋಸ್ಟ್ ವೈರಲ್ ಆಯಿತು ಎಂದು ಅವರು ಹೇಳಿದ್ದಾರೆ.

    ಟೆಡೆಕ್ಸ್ ನಲ್ಲಿ ತನ್ನ ಮೊದಲ ಭಾಷಣ ಅನಂತರ ಸಾಕಷ್ಟು ಭಾಷಣ ಹಾಗೂ ಸಾಧನೆಗಳ ಬಗ್ಗೆ ಮಾಳವಿಕಾ ಹೇಳಿಕೊಂಡಿದ್ದಾರೆ. ಕಳೆದ ವರ್ಷ ನನಗೆ ವಿಶ್ವಸಂಸ್ಥೆ ಮುಖ್ಯ ಕಚೇರಿಯಲ್ಲಿ ಮಾತನಾಡಲು ಆಹ್ವಾನ ಬಂದಿತ್ತು. ನವದೆಹಲಿಯ ದಿ ವೆರ್ಲ್ಡ್ ಎಕಾನಾಮಿಕ್ಸ್ ಫೋರಂಸ್ ಇಂಡಿಯಾ ಎಕನಾಮಿಕ್ ಸಮಿತ್‍ನಲ್ಲಿ ಪಾಲ್ಗೊಳ್ಳುವ ಅವಕಾಶವೂ ಬಂತು ಎಂದು ಅವರು ತಿಳಿಸಿದ್ದಾರೆ.

    ಜೀವನದಲ್ಲಿ ಸಾಕಷ್ಟು ಏರಿಳಿತಗಳಾಗಿವೆ ಎಂಬುದನ್ನ ಮಾಳವಿಕಾ ಒಪ್ಪಿಕೊಳ್ತಾರೆ. ತಡೆದುಕೊಳ್ಳಲಾಗದ ನೋವಿನಿಂದ ಎಷ್ಟೋ ದಿನ ನಾನು ಬದುಕುವುದೇ ಬೇಡ ಎಂದು ಅನ್ನಿಸಿತ್ತು. ಇಂದಿಗೂ ನಾನು ಭಾರತಕ್ಕೆ ಭೇಟಿ ನೀಡಿದಾಗ ಕೃತಕ ಕೈ ಬಳಸದಿದ್ದರೆ ತರತಮ್ಯ ಎದುರಿಸುತ್ತೇನೆ. ಆದ್ರೆ ನಾನು ಅದನ್ನ ಬದಲಾಯಿಸುವ ಮಾರ್ಗದಲ್ಲಿದ್ದೇನೆ. ಸದ್ಯಕ್ಕೆ ನಾನು ನನ್ನ ಮೊಣಕೈ ಯಿಂದಲೇ ಅಡುಗೆ ಮಾಡುವುದನ್ನ ಕಲಿಯುತ್ತಿದ್ದೇನೆ ಎಂದು ಅವರು ಹೇಳ್ತಾರೆ.

    ನೀವು ನೀವಾಗಿರುವುದೇ ನಿಮ್ಮ ದೊಡ್ಡ ಶಕ್ತಿ ಎಂಬುದನ್ನ ನಾನು ಜಗತ್ತಿಗೆ ತೋರಿಸಬೇಕಿದೆ. ನನ್ನನ್ನು ನೋಡಿ, ನಾನು ಕೈಗಳಿಲ್ಲದೆ ಪಿಹೆಚ್‍ಡಿ ಮಾಡಿದ್ದೀನಿ. ಕೆಟ್ಟ ಸನ್ನಿವೇಶ ಅಥವಾ ವಿಕಲತೆ ಜೀವನದ ಒಂದು ಭಾಗವಷ್ಟೇ… ಅದೇ ನಿಮ್ಮ ಇಡೀ ಜೀವನದ ಕಥೆಯಲ್ಲ. ನಿಮ್ಮ ಜೀವನದ ಕಥೆಯ ಸುಖಾಂತ್ಯ ಬರೆಯುವವರು- ‘ನೀವು’ ಎಂದು ಮಾಳವಿಕಾ ಪೋಸ್ಟ್ ಕೊನೆಗೊಳಿಸಿದ್ದಾರೆ.

    https://www.facebook.com/humansofbombay/photos/a.188058468069805.1073741828.188056068070045/783298078545838/?type=3