Tag: hand

  • ಮುರಿದ ಕೈಗೆ ಮರುಜೀವ ಕೊಟ್ಟ ವಿಮ್ಸ್ ವೈದ್ಯರು

    ಮುರಿದ ಕೈಗೆ ಮರುಜೀವ ಕೊಟ್ಟ ವಿಮ್ಸ್ ವೈದ್ಯರು

    ಬಳ್ಳಾರಿ: ಅಪಘಾತದಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಕೈಯನ್ನು ವೈದ್ಯರು ಮರುಜೋಡಣೆ ಮಾಡಿರುವ ಅಪರೂಪದ ಘಟನೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಸಾಕ್ಷಿಯಾಗಿದ್ದು, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಉಚಿತವಾಗಿ ಆಪರೇಷನ್ ಮಾಡಿ ಯಶಸ್ವಿಯಾಗಿದ್ದಾರೆ.

    ಕೈ ಕಳೆದುಕೊಂಡು ಜೀವನವೇ ಮುಗಿದು ಹೋಯ್ತು ಎಂದುಕೊಂಡಿದ್ದ ಮಹಿಳೆಗೆ ಇದೀಗ ಮರು ಜೀವ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮುಮ್ತಾಜ್ ಎಂಬವರು ಬಿಸಿಯೂಟ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಡಿಸೆಂಬರ್ ನಲ್ಲಿ ಎರಡು ಟ್ರಾಕ್ಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾದ ಪರಿಣಾಮ ಮಮ್ತಾಜ್ ತಮ್ಮ ಕೈಯನ್ನು ಮುರಿದುಕೊಂಡಿದ್ದರು. ಅಪಘಾತವಾದ ತಕ್ಷಣ ಮಹಿಳೆಯನ್ನು ಮೊಳಕಾಲ್ಮೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.

    ಮುಮ್ತಾಜ್ ಅವರ ಕೈ ಜೋಡಣೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಹತ್ತು ವೈದ್ಯರ ತಂಡ ಚಾಲೆಂಜ್ ರೀತಿಯಲ್ಲಿ ತೆಗೆದುಕೊಂಡಿದ್ದರು. ಹಾಗೆಯೇ ಸತತ ಮೂರು ಗಂಟೆಗಳ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮುಮ್ತಾಜ್ ಅವರಿಗೆ ಕೈ ಮರುಜೋಡಣೆ ಮಾಡಿದ್ದಾರೆ. ಇದೊಂದು ಅಪರೂಪದ ಆಪರೇಷನ್ ಆಗಿದ್ದು, ಲಕ್ಷಕ್ಕೊಬ್ಬರಿಗೆ ಈ ರೀತಿಯ ಆಪರೇಷನ್ ಯಶಸ್ವಿಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆತ್ತ ಮಗನಿಂದಲೇ ತಾಯಿಯ ಕೈ ಕಟ್..!

    ಹೆತ್ತ ಮಗನಿಂದಲೇ ತಾಯಿಯ ಕೈ ಕಟ್..!

    ಹಾಸನ: ಪಾಪಿ ಮಗನೊಬ್ಬ ತನ್ನ ಹೆತ್ತತಾಯಿಯ ಕೈಯನ್ನು ಕತ್ತರಿಸಿ ಭೀಕರವಾಗಿ ಹಲ್ಲೆ ಮಾಡಿರುವ ಅಮಾನುಷ ಘಟನೆ ಹಾಸನದಲ್ಲಿ ನಡೆದಿದೆ.

    ಸಕಲೇಶಪುರದ ತಾಲೂಕಿನ ಯಡವರಹಳ್ಳಿಯಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಲಲಿತಮ್ಮ ತನ್ನ ಹೆತ್ತ ಮಗನಿಂದಲೇ ಹಲ್ಲೆಗೊಳಗಾದ ನತದೃಷ್ಟ ತಾಯಿ. ಆರೋಪಿ ದಿಲೀಪ್ ಈ ಕೃತ್ಯ ಎಸಗಿರುವ ಪಾಪಿ ಪುತ್ರ.

    ಪಾಪಿ ದಿಲೀಪ್ ಮದುವೆ ಆಗಿ ಮೊದಲನೆ ಪತ್ನಿಯನ್ನು ಬಿಟ್ಟಿದ್ದು ಎರಡನೇ ಮದುವೆ ಆಗಿರುವ ವಿಚಾರವಾಗಿ ತಾಯಿಮಗನಲ್ಲಿ ವೈಮನಸ್ಸು ಇತ್ತು. ಮತ್ತು ಆಸ್ತಿ ವಿಚಾರವಾಗಿ ಪದೇ ಪದೇ ದಿಲೀಪ್ ತನ್ನ ತಾಯಿಯ ಬಳಿ ಜಗಳವಾಡುತಿದ್ದನು. ಒಂದು ದಿನ ಮುಂಚಿತವಾಗಿ ಕತ್ತಿ ಹಿಡಿದುಕೊಂಡು ಓಡಾಡುತ್ತಿದ್ದ ದುರುಳ ಶುಕ್ರವಾರ ರಾತ್ರಿ ತನ್ನ ತಾಯಿಯ ಮೇಲೆ ಏಕಾಏಕಿ ಎಗರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

    ತನ್ನ ಹೆತ್ತಮ್ಮನ ಮೇಲೆ ಮಚ್ಚು ಬೀಸಿದ್ದಾನೆ. ಒಂದು ಕೈ ಸ್ಥಳದಲ್ಲಿಯೇ ಕತ್ತರಿಸಿ ಹೋಗಿದ್ದು ಮತ್ತೊಂದು ಕೈನ ಎರಡು ಬೆರಳುಗಳು ತುಂಡಾಗಿದೆ. ಕೃತ್ಯ ಎಸಗಿದ ಪಾಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಸಮೀಪದ ಶುಕ್ರವಾರಸಂತೆ ಗ್ರಾಮದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಬಲವಾದ ಪೆಟ್ಟು ಬಿದ್ದಿರುವ ಲಲಿತಮ್ಮ ಈಗ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪಾಪಿ ಪುತ್ರನಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಸಂಬಂಧಿಕರು ಆಗ್ರಹಿಸಿದ್ದಾರೆ.

    ಸದ್ಯ ಆರೋಪಿ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾವಿನ ಹೆಡೆಯಂತಿದೆ ಬಾಲಕನ ಎಡಗೈ- ಬೆಳಗಾವಿಯಲ್ಲೊಂದು ಅಚ್ಚರಿ

    ಹಾವಿನ ಹೆಡೆಯಂತಿದೆ ಬಾಲಕನ ಎಡಗೈ- ಬೆಳಗಾವಿಯಲ್ಲೊಂದು ಅಚ್ಚರಿ

    – ಹುತ್ತದ ಬಳಿಯೇ ಬಾಲಕನ ವಾಸ್ತವ್ಯ

    ಬೆಳಗಾವಿ: ಸರ್ಪಶಾಪದಿಂದಾಗಿ ಬಾಲಕನೊಬ್ಬ ನರಕಯಾತನೆ ಅನುಭವಿಸುತ್ತಿರೋ ಘಟನೆಯೊಂದು ಬೆಳಗಾವಿ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಬಾಲಕನ ಕೈ ಹಾವಿನ ಹೆಡೆಯನ್ನೇ ಹೋಲುತ್ತಿದೆ. ಆತನ ಎಡಗೈಯ ಎರಡು ಬೆರಳುಗಳು ಒಂದಾಗಿ ಸರ್ಪದ ಹೆಡೆಯಂತಾಗಿದ್ದು, ಅಚ್ಚರಿ ಹುಟ್ಟಿಸಿದೆ. ಕನಸಲ್ಲಿ ಹಾವು ಬರುತ್ತೆ ಅಂತಾ ಬಾಲಕ ಒದ್ದಾಡುತ್ತಾನೆ. ಅಲ್ಲದೇ ರಾತ್ರೋರಾತ್ರಿ ಹುತ್ತದ ಬಳಿ ಕುಳಿತಿರುತ್ತಾನೆ. ಯಾವುದೇ ಆಸ್ಪತ್ರೆಗೆ ಕರೆದೊಯ್ದರೂ ಪರಿಹಾರ ಸಿಕ್ಕಿಲ್ಲ. ನಾಗರಹಾವನ್ನು ಮುಟ್ಟಿದ್ರೂ ಈತನಿಗೆ ಕಚ್ಚೋದಿಲ್ಲ. ಶಾಲೆಯಲ್ಲಿ ಫ್ರೆಂಡ್ಸ್ ಜೊತೆ ಇರಬೇಕಾದ ಬಾಲಕನಿಗೆ ಇದೆಂಥಾ ಶಾಪ ಅನ್ನೋ ಪ್ರಶ್ನೆಯೊಂದು ಇದೀಗ ಕಾಡುತ್ತಿದೆ.

    ಜಿಲ್ಲೆಯ ಪೂಜೇರಿ ಕುಟುಂಬಕ್ಕೆ ತಲೆ ತಲಾಂತರಗಳಿಂದ ಸರ್ಪದ ಶಾಪವಿದೆಯಂತೆ. ಹಲವಾರು ಆಸ್ಪತ್ರೆಗಳಿಗೆ ಹೋದರೂ ಇದಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಪೂಜೇರಿ ಕುಟುಂಬದವರ ಹೇಳುತ್ತಾರೆ. ಈ ಸಮಸ್ಯೆಯಿಂದ ಬಾಲಕ ತನ್ನ ವಿದ್ಯಾಭ್ಯಾಸವನ್ನೂ ಮೊಟಕುಗೊಳಿಸಿದ್ದಾನೆ. ಒಂದೆಡೆ ಕಿತ್ತು ತಿನ್ನುವ ಬಡತನ ಇನ್ನೊಂದೆಡೆ ಬಾಲಕನ ಸಮಸ್ಯೆ ಪಾಲಕರ ನಿದ್ದೆಗೆಡಿಸಿದೆ.

    ರಾತ್ರಿ ನನ್ನ ಕನಸಲ್ಲಿ ಹಾವು ಬರುತ್ತದೆ. ಬಳಿಕ ಹುತ್ತದ ಬಳಿ ಬಂದು ಕುಳಿತರೆ ಸಮಾಧಾನವಾಗುತ್ತದೆ. ನಾನು ಸಣ್ಣ ಇರುವಾಗಿಂದಲೂ ಇದೆ. ತಲೆತಲಾಂತರದಿಂದ ಈ ದೋಷ ನಮಗೆ ಇದೆ ಅಂತ ಬಾಲಕ ತಿಳಿಸಿದ್ದಾನೆ.

    ತಲೆತಲಾಂತರದ ಶಾಪ ಇದಾಗಿದ್ದು, ಈ ಮನೆಯಲ್ಲಿ ಪೂರ್ವಜರು ಹಾವನ್ನು ಹೊಡೆದಿದ್ದಾರಂತೆ. ಆ ಬಳಿಕದಿಂದ ಹಾವು ಮನೆಯಲ್ಲೇ ಇರುತ್ತಿತ್ತಂತೆ. ಹಾವಿನ ಮೇಲೆ ಹಾಲಿನ ಪಾತ್ರೆ ಇಟ್ಟು ಸಾಯಿಸಿದ್ದರಂತೆ. ಹೀಗಾಗಿ ಈ ಕುಟುಂಬಕ್ಕೆ ದೋಷ ಅಂಟಿಕೊಂಡಿದೆ. ಸದ್ಯ ಬಾಲಕನ ಈ ಸಮಸ್ಯೆಯಿಂದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಅಂತ ತಿಳಿದುಬಂದಿದೆ. ಸದ್ಯ ಬಾಲಕನ ಕುಟುಂಬಸ್ಥರು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಅಥವಾ ತಮಿಳುನಾಡಿನ ದೇವಾಲಯಕ್ಕೆ ತೆರಳಿ ಪೂಜೆ-ಪುನಸ್ಕಾರಗಳನ್ನು ಮಾಡುವ ಯೋಚನೆ ಮಾಡಿದ್ದಾರೆ.

    ಬಾಲಕ ಇತರ ಮಕ್ಕಳಂತೆ ಚಟುವಟಿಕೆಯಿಂದರಲ್ಲ. ಬದಲಾಗಿ ತನ್ನ ಪಾಡಿಗೆ ತಾನು ಕುಳಿತುಕೊಂಡಿರುತ್ತಾನೆ. ಕಣ್ಣಲ್ಲಿ ನೀರು ಬರುತ್ತಿರುತ್ತದೆ. ಅಲ್ಲದೇ ಮಲಗುವ ಸಂದರ್ಭದಲ್ಲೂ ಹಾವಿನ ರೀತಿಯೇ ಮಲಗಿರುತ್ತಾನೆ. ಒಟ್ಟಿನಲ್ಲಿ ಬಾಲಕನ ಈ ಸಮಸ್ಯೆಯಿಂದ ಆದಷ್ಟು ಬೇಗ ಮುಕ್ತವಾಗಲಿ ಎಂಬುದೇ ಸ್ಥಳೀಯರ ಆಶಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಪ್ಪಿತಪ್ಪಿಯೂ ದೇಹದ ಈ ಅಂಗಗಳನ್ನು ಬರಿಗೈಯಲ್ಲಿ ಮುಟ್ಟಬೇಡಿ

    ಅಪ್ಪಿತಪ್ಪಿಯೂ ದೇಹದ ಈ ಅಂಗಗಳನ್ನು ಬರಿಗೈಯಲ್ಲಿ ಮುಟ್ಟಬೇಡಿ

    ಸಾಕಷ್ಟು ಜನರು ಸುಮ್ಮನೆ ಕುಳಿತಿದ್ದಾಗ ಬರಿಗೈಯಲ್ಲಿ ತನ್ನ ಕಣ್ಣು, ಕಿವಿ, ಮೂಗನ್ನು ಟಚ್ ಮಾಡುತ್ತಾ ಅಥವಾ ಆ ಅಂಗಗಳನ್ನು ಬರಿಗೈಯಲ್ಲಿ ಉಜ್ಜುವ ಅಭ್ಯಾಸ ಇರುತ್ತದೆ. ಆದರೆ ಬರಿಗೈಯಲ್ಲಿ ಈ ದೇಹದ ಅಂಗಗಳನ್ನು ಮುಟ್ಟಿದರೆ ನಿಮ್ಮ ಆರೋಗ್ಯಕ್ಕೆ ಹಾನಿಕರ. ಅಲ್ಲದೇ ಇನ್ಫೇಕ್ಷನ್ ಆಗುವ ಸಾಧ್ಯತೆಯೂ ಇರುತ್ತದೆ.

    1. ಕಣ್ಣು: ತುಂಬಾ ಜನರಿಗೆ ಸುಮ್ಮನೆ ಕುಳಿತಿದ್ದಾಗ ತಮ್ಮ ಕಣ್ಣನ್ನು ಉಜ್ಜಿಕೊಳ್ಳುವ ಅಭ್ಯಾಸವಿರುತ್ತದೆ. ಕಣ್ಣು ಮೃದುವಾದ ಅಂಗವಾಗಿದ್ದು, ಅದು ತುಂಬಾ ಬೇಗ ಇನ್ಫೆಕ್ಷನ್ ಆಗುತ್ತದೆ. ಕಣ್ಣು ಉಜ್ಜುವ ಸಮಯ ನಮ್ಮ ಕೈ ಹಾಗೂ ಉಗುರುನಲ್ಲಿರುವ ಕಿಟಾಣುಗಳು ಸುಲಭವಾಗಿ ಕಣ್ಣಿನೊಳಗೆ ಪ್ರವೇಶಿಸುತ್ತದೆ. ಹಾಗಾಗಿ ಸುಮ್ಮನೆ ಕಣ್ಣು ಉಜ್ಜಿಕೊಳ್ಳಬೇಡಿ.

    2. ತುರಿಕೆ: ಬ್ಯಾಕ್ಟೀರಿಯಾ ಹೆಚ್ಚಾಗಿ ಇರುವುದರಿಂದ ತುರಿಕೆ ಆಗುತ್ತದೆ. ಇದು ದೇಹದ ಬೇರೆ ಅಂಗಗಳ ಮೇಲೂ ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ. ತುರಿಕೆಯನ್ನು ಮುಟ್ಟಿದರೆ ಅದು ಬೇರೆ ರೋಗಗಳಿಗೂ ಆಹ್ವಾನ ನೀಡುತ್ತದೆ.

    3. ಮೂಗು: ಸಾಕಷ್ಟು ಮಂದಿ ಮೂಗನ್ನು ತಮ್ಮ ಕೈಯಲ್ಲಿ ಕ್ಲೀನ್ ಮಾಡಿಕೊಳ್ಳುತ್ತಾರೆ. ಆದರೆ ಅವರು ಮೂಗು ಕ್ಲೀನ್ ಮಾಡುವುದರ ಬದಲು ಮೂಗನ್ನು ಗಲೀಜು ಮಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಮೂಗನ್ನು ಬೆರಳಿನಿಂದ ಕ್ಲೀನ್ ಮಾಡುವ ಸಮಯದಲ್ಲಿ ನಿಮ್ಮ ಕೈಯಲ್ಲಿ ಇರುವ ಕಿಟಾನು ಮೂಗಿನೊಳಗೆ ಪ್ರವೇಶಿಸುತ್ತದೆ. ಈ ರೀತಿ ಮಾಡುವುದರಿಂದ ನೇಜಲ್ ಇನ್ಫೆಕ್ಷನ್ ಹಾಗೂ ಫಂಗಲ್ ಇನ್ಫೆಕ್ಷನ್ ಆಗುತ್ತದೆ. ನೀವು ನಿಮ್ಮ ಮೂಗನ್ನು ಕ್ಲೀನ್ ಮಾಡಬೇಕೆಂದರೆ ಸ್ಯಾನಿಟೈಸ್ ಟಿಶ್ಯೂ ಉಪಯೋಗಿಸಿ.

    4. ಬಾಯಿ: ಸಾಕಷ್ಟು ಜನರಿಗೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇನ್ನೂ ಕೆಲವರು ಬಾಯಿಗೆ ಕೈ ಹಾಕುತ್ತಿರುತ್ತಾರೆ. ಕೈ ಕ್ಲೀನ್ ಆಗಿದೆ ಎಂದು ತುಂಬಾ ಜನ ಬಾಯಿಗೆ ಕೈ ಹಾಕುತ್ತಾರೆ. ಆದರೆ ಅವರ ಕೈಯ ಚರ್ಮದಲ್ಲಿ ಬ್ಯಾಕ್ಟೀರಿಯಾ ಅಡಗಿರುತ್ತದೆ. ಅದು ನೇರವಾಗಿ ನಿಮ್ಮ ಬಾಯಿಗೆ ಹೋಗುತ್ತದೆ.

    ಒಟ್ಟಿನಲ್ಲಿ ಈ ಮೇಲೆ ತಿಳಿಸಿದಂತಹ ದೇಹದ ಅಂಗಗಳನ್ನು ಅಪ್ಪಿತಪ್ಪಿಯೂ ಬರಿಗೈಯಲ್ಲಿ ಮುಟ್ಟಬೇಡಿ. ಇದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯವಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರೇಯಸಿಯೊಂದಿಗೆ ಪ್ರವಾಸಕ್ಕೆ ಬಂದಿದ್ದ ಪ್ರೇಮಿಯ ಮುಂಗೈ ಕತ್ತರಿಸಿದ ದುಷ್ಕರ್ಮಿಗಳು!

    ಪ್ರೇಯಸಿಯೊಂದಿಗೆ ಪ್ರವಾಸಕ್ಕೆ ಬಂದಿದ್ದ ಪ್ರೇಮಿಯ ಮುಂಗೈ ಕತ್ತರಿಸಿದ ದುಷ್ಕರ್ಮಿಗಳು!

    ಬೆಂಗಳೂರು: ಪ್ರೇಯಸಿಯ ಜೊತೆ ಪ್ರವಾಸಕ್ಕೆ ಬಂದಿದ್ದ ಪ್ರೇಮಿಯೊಬ್ಬನ ಮುಂಗೈಯನ್ನು ಕತ್ತರಿಸಿದ ಅಮಾನವೀಯ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದ ಬೆಟ್ಟದ ಬಳಿ ನಡೆದಿದೆ.

    ಚಿತ್ರದುರ್ಗ ಮೂಲದ ರವೀಶ್ (23) ಕೈ ಕಳೆದುಕೊಂಡ ಪ್ರೇಮಿ. ರವೀಶ್ ಆನೇಕಲ್ ತಾಲೂಕಿನ ಯಾರಂಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪ್ರೇಯಸಿ ಕೂಡಾ ಚಿತ್ರದುರ್ಗದ ಮೂಲದವಳಾಗಿದ್ದು, ನಗರದಲ್ಲಿಯೇ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾಳೆ. ಕೈ ಕತ್ತರಿಸಿ ಪರಾರಿಯಾದ ದುಷ್ಕರ್ಮಿಗಳ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ಇವತ್ತೇನಾಯ್ತು?
    ಇಂದು ಇಬ್ಬರು ಸೇರಿ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದ ಹಿಂಭಾಗದಿಂದ ಸುವರ್ಣಮುಖಿ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಅರಣ್ಯ ಪ್ರದೇಶದ 3 ಕಿ.ಮೀ. ಕಾಲು ದಾರಿಯ ಮೂಲಕವೇ ಹೋಗಬೇಕು. ಈ ವೇಳೆ ದಾರಿ ಮಧ್ಯದಲ್ಲಿಯೇ ಕೆಲ ದುಷ್ಕರ್ಮಿಗಳು ಲಾಂಗು ಹಾಗೂ ಮಚ್ಚು ಬಳಸಿ, ಯುವಕನ ಬಲಭಾಗದ ಮುಂಗೈ ಕತ್ತರಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದೇ ವಿಕೃತಿ ಮೆರೆದ ದುಷ್ಕರ್ಮಿಗಳು ಕತ್ತರಿಸಿ ಕೈಯನ್ನು ಕೊಂಡೊಯ್ದಿದ್ದಾರೆ.

    ಕೈ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಿಯಕರನನ್ನು ಕಾಪಾಡಿ ಎಂದು ಯುವತಿ ಸ್ಥಳೀಯರಲ್ಲಿ ಕೇಳಿಕೊಂಡಿದ್ದಾಳೆ. ಬಳಿಕ ಸ್ಥಳೀಯರ ಸಹಾಯದಿಂದ ರವೀಶ್ ನನ್ನು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ರವೀಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಸದ್ಯ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಘಟನೆಯಿಂದಾಗಿ ಯುವತಿ ಗಾಬರಿಗೊಂಡಿದ್ದು, ದಾಳಿ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಎಷ್ಟು ಜನ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಕೇಳಿದ ಪ್ರಶ್ನೆಗೆ ಒಂದು ಬಾರಿ ಇಬ್ಬರು ಎಂದರೆ, ಮತ್ತೊಮ್ಮೆ ಮೂವರು ಎಂದು ಹೇಳುತ್ತಿದ್ದಾಳೆ. ಯಾವುದೇ ಮಾಹಿತಿ ಕೇಳಿದರೂ ಗೊಂದಲದ ಉತ್ತರ ನೀಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲಕಿ ಕೈಮೇಲೆ ಬಿದ್ದ ಬೆಂಚ್- ಬಲಗೈನ 3 ಬೆರಳುಗಳು ಕಟ್!

    ಬಾಲಕಿ ಕೈಮೇಲೆ ಬಿದ್ದ ಬೆಂಚ್- ಬಲಗೈನ 3 ಬೆರಳುಗಳು ಕಟ್!

    ಚಿತ್ರದುರ್ಗ: ಶಾಲಾ ಕೊಠಡಿಯಲ್ಲಿ ಬಾಲಕಿ ಕೈ ಮೇಲೆ ಬೆಂಚ್ ಬಿದ್ದು ಕೈ ಬೆರಳುಗಳು ಅರ್ಧಕ್ಕೆ ಕಟ್ ಆಗರೋ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದಿದೆ.

    ಸರ್ಕಾರಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಸರದಿಯಂತೆ ನಿತ್ಯವೂ ಇಬ್ಬರು ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಕೊಠಡಿಗಳ ಕಸ ಗುಡಿಸುತ್ತಿದ್ದರು. ಹೀಗಾಗಿ 7 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೋರ್ವಳು ಶಾಲಾ ಕೊಠಡಿಯ ಕಸಗುಡಿಸುವ ವೇಳೆ ಬೆಂಚ್ ಎತ್ತಿಡುವಾಗ ತನ್ನ ಕೈ ಮೇಲೆ ಹಾಕಿಕೊಂಡಿದ್ದಾಳೆ. ಪರಿಣಾಮ ಆಕೆಯ ಬಲಗೈನ ಮೂರು ಬೆರಳುಗಳು ಅರ್ಧಕ್ಕೆ ತುಂಡಾಗಿದ್ದು, ತೀವ್ರ ರಕ್ತಸ್ರಾವವಾಗಿ ಆಕೆ ಮೂರ್ಛೆ ಹೋಗಿದ್ದಳು. ತಕ್ಷಣ ಆಕೆಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಘಟನೆಯಿಂದಾಗಿ ಗ್ರಾಮಸ್ಥರು ಹಾಗೂ ಪೋಷಕರು, ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶಕ್ಕೊಳಗಾಗಿದ್ದು, ಈ ಘಟನೆ ಶಿಕ್ಷಕರ ನಿರ್ಲಕ್ಷ್ಯದಿಂದಾಗಿದೆ ಎಂದು ಆರೋಪಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಬಾಲಕಿಯ ಜೀವಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ ಅಗತ್ಯ ಚಿಕಿತ್ಸೆ ನೀಡಿರೋ ಜಿಲ್ಲಾಸ್ಪತ್ರೆ ವೈದ್ಯರು ಆಕೆಯ ಬೆರಳುಗಳನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಬಹುದೆಂಬ ಭರವಸೆಯನ್ನ ನೀಡಿದ್ದಾರೆ.

    ಘಟನೆ ಸಂಬಂಧ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

  • ನಾಟಿವೈದ್ಯನ ಎಡವಟ್ಟಿನಿಂದಾಗಿ ಕೈಯನ್ನೇ ಕಳೆದುಕೊಂಡ 8ರ ಬಾಲಕ!

    ನಾಟಿವೈದ್ಯನ ಎಡವಟ್ಟಿನಿಂದಾಗಿ ಕೈಯನ್ನೇ ಕಳೆದುಕೊಂಡ 8ರ ಬಾಲಕ!

    ರಾಯಚೂರು: ಜಿಲ್ಲೆಯಲ್ಲಿ ನಾಟಿ ವೈದ್ಯನೊಬ್ಬನ ಎಡವಟ್ಟಿನಿಂದ ಎಂಟು ವರ್ಷದ ಬಾಲಕನೋರ್ವ ತನ್ನ ಕೈಯನ್ನೇ ಕಳೆದುಕೊಂಡಿದ್ದಾನೆ.

    ಲಿಂಗಸುಗೂರಿನ ಗುರುಶಾಂತಪ್ಪ ಎಂಬವರ ಮಗ ಆದರ್ಶ ಆಟವಾಡುತ್ತಿದ್ದಾಗ ಬಿದ್ದು ತನ್ನ ಬಲಗೈ ಮುರಿದುಕೊಂಡಿದ್ದನು. ಕೂಡಲೇ ಆತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ದೇವದುರ್ಗದ ಚಿಂಚೋಡಿಯ ನಾಟಿವೈದ್ಯ ಪರಮಣ್ಣ ಬನಗಂಡಿ ಎಂಬವನಿಗೆ ತೋರಿಸಿದ್ದಾರೆ.

    ಪರಮಣ್ಣ ಕೈಗೆ ಪಟ್ಟಿಯೊಂದನ್ನು ಕಟ್ಟಿ ಕಳುಹಿಸಿದ್ದಾನೆ. ನೋವು ಕಂಡರೂ ಪಟ್ಟಿ ಬಿಚ್ಚದಂತೆ ಸೂಚಿಸಿದ್ದರಿಂದ ಪೋಷಕರು ಸುಮ್ಮನಾಗಿದ್ದರು. ಇಪ್ಪತ್ತು ದಿನಗಳ ಬಳಿಕ ನೋವು ತೀವ್ರಗೊಂಡಾಗ ಪುನಃ ತಾಲೂಕಾಸ್ಪತ್ರೆಗೆ ಕೈರೆದ್ಯೊಯ್ದಿದ್ದಾರೆ. ಕೈ ಕೊಳೆತಿದ್ದರಿಂದ ಹೆಚ್ವಿನ ಚಿಕಿತ್ಸೆಗೆ ಉತ್ತಮ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.

    ಮಹಾರಾಷ್ಟ್ರದ ಮೀರಜ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಅನಿವಾರ್ಯವಾಗಿ ಪೋಷಕರ ಒಪ್ಪಿಗೆ ಮೇರೆಗೆ ಆದರ್ಶನ ಬಲಗೈ ಕತ್ತರಿಸಿದ್ದಾರೆ. ನಾಟಿ ವೈದ್ಯ ಪರಮಣ್ಣನ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಗನಿಗಾದ ಅನ್ಯಾಯಕ್ಕೆ ನ್ಯಾಯಕೊಡಿ ಅಂತ ಪೋಷಕರು ಅಂಗಲಾಚುತ್ತಿದ್ದಾರೆ.

  • ಪೋರ್ನ್ ವಿಡಿಯೋ ನೋಡಿದ್ದಕ್ಕೆ ತಂದೆಯಿಂದ ಮಗನ ಕೈ ಕಟ್!

    ಪೋರ್ನ್ ವಿಡಿಯೋ ನೋಡಿದ್ದಕ್ಕೆ ತಂದೆಯಿಂದ ಮಗನ ಕೈ ಕಟ್!

    ಹೈದರಾಬಾದ್: ಮಧ್ಯರಾತ್ರಿವರೆಗೂ ಮಗ ಮೊಬೈಲ್ ಹಿಡಿದು ಪೋರ್ನ್ ವಿಡಿಯೋ ನೋಡುತ್ತಿದ್ದ ಎಂದು ತಂದೆಯೇ ತನ್ನ ಮಗನ ಕೈ ಕಟ್ ಮಾಡಿದ ಘಟನೆ ಸೋಮವಾರದಂದು ಹೈದರಾಬಾದ್‍ನ ಪಹದಿಶರೀಫ್ ಹೊರವಲಯದಲ್ಲಿ ನಡೆದಿದೆ.

    ಖಾಲೀದ್ ಖುರೇಶಿ(19) ಕೈ ಕಳೆದುಕೊಂಡ ಯುವಕ. ಖಾಲೀದ್ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಹೊಸ ಸ್ಮಾರ್ಟ್ ಫೋನ್ ಖರೀದಿಸಿದ್ದನು. ಮಧ್ಯರಾತ್ರಿವರೆಗೂ ಫೋನ್‍ನಲ್ಲಿ ಪೋರ್ನ್ ವಿಡಿಯೋವನ್ನು ನೋಡುತ್ತಿದ್ದನು. ಇದರಿಂದ ಕೋಪಗೊಂಡ ಆತನ ತಂದೆ ಖಾಯುಮ್ ಖುರೇಶಿ, ಖಾಲೀದ್ ಗೆ ಫೋನ್ ಕಡಿಮೆ ಉಪಯೋಗಿಸು ಎಂದು ಎಚ್ಚರಿಕೆ ನೀಡಿದ್ದರು.

    ತಂದೆಯ ಮಾತಿನಿಂದ ಕೋಪಗೊಂಡು ಖಾಲೀದ್ ಮನೆಯಿಂದ ಹೊರಗೆ ಹೋಗಿದ್ದ. ನಂತರ ರಾತ್ರಿ ಮನೆಗೆ ಹಿಂದುರುಗಿದಾಗ ಖಾಲೀದ್ ತನ್ನ ಫೋನಿನಲ್ಲಿ ಮತ್ತೆ ಪೋರ್ನ್ ವಿಡಿಯೋ ನೋಡುತ್ತಿದ್ದನು. ಇದರಿಂದ ಮತ್ತಷ್ಟು ಕೋಪಗೊಂಡ ತಂದೆ ಸೋಮವಾರ ಆತ ಮಲಗಿದ್ದ ವೇಳೆ ಆತನ ಬಲಗೈಯನ್ನೇ ಕಟ್ ಮಾಡಿದ್ದಾರೆ.

    ಖಲೀದ್ ನೋವಿನಿಂದ ಜೋರಾಗಿ ಕಿರುಚಿಗೊಂಡಾಗ ಮನೆಯವರಿಗೆ ಎಚ್ಚರವಾಗಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಕೈ ಮರುಜೋಡಣೆ ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಖಾಲೀದ್ ತಂದೆ ಖಾಯುಮ್ ನನ್ನು ಪೊಲೀಸರು ಬಂಧಿಸಿದ್ದು, ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.

  • ಇಟ್ಟಿಗೆ ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಬಲಗೈನ ಅಂಗೈ ಅಪ್ಪಚ್ಚಿ!

    ಇಟ್ಟಿಗೆ ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಬಲಗೈನ ಅಂಗೈ ಅಪ್ಪಚ್ಚಿ!

    ಕೋಲಾರ: ಇಟ್ಟಿಗೆ ಕಾರ್ಖಾನೆಯ ಯಂತ್ರಕ್ಕೆ ಕೈ ಸಿಲುಕಿ ಕೂಲಿ ಕಾರ್ಮಿಕರೊಬ್ಬರು ಕೈ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಮಾಲೂರು ತಾಲೂಕಿನ ದ್ಯಾಪಸಂದ್ರ ಗ್ರಾಮದ ರಾಜಾರಾಮ್ ಇಟ್ಟಿಗೆ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು, 30 ವರ್ಷದ ಅಕ್ಬರ್ ಅಲಿ ಕೈಕಳೆದುಕೊಂಡ ಕೂಲಿ ಕಾರ್ಮಿಕರಾಗಿದ್ದಾರೆ.

    ಇಟ್ಟಿಗೆ ಕೊಯ್ಯುವಾಗ ಅಚಾನಕ್ಕಾಗಿ ಕಾರ್ಮಿಕ ಅಕ್ಬರ್ ಅಲಿಯ ಬಲಗೈ ಯಂತ್ರದಲ್ಲಿ ಸಿಲುಕಿದ್ದು, ಪರಿಣಾಮ ಅಂಗೈ ಸಂಪೂರ್ಣ ನಜ್ಜು ಗುಜ್ಜಾಗಿದೆ. ಕೂಡಲೇ ಗಾಯಾಳುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

    25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

    ಢಾಕಾ: ವರ್ಷದ ಹಿಂದೆ ಬಾಂಗ್ಲಾದೇಶದ ವ್ಯಕ್ತಿಯೊಬ್ಬರ ಮೈತುಂಬಾ ತೊಗಟೆ ರೀತಿಯಲ್ಲಿ ಬೆಳೆದು ಶಸ್ತ್ರಚಿಕಿತ್ಸೆ ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ರು. ಆದ್ರೆ 25 ಬಾರಿ ಶಸ್ತ್ರಚಿಕಿತ್ಸೆಯ ನಂತರವೂ ಆ ವ್ಯಕ್ತಿಯ ಕೈಯಲ್ಲಿ ಮತ್ತೆ ತೊಗಟೆ ಬೆಳೆಯಲು ಶುರುವಾಗಿದೆ.

    ರಿಕ್ಷಾ ತಳ್ಳುವ ಕೆಲಸ ಮಾಡಿಕೊಂಡಿದ್ದ ಅಬುಲ್ ಬಜಂದರ್ ಈ ರೀತಿಯ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು `ಟ್ರಿ ಮ್ಯಾನ್’ ಅಂತಾನೇ ಕರೆಯಲಾಗುತ್ತಿದೆ.

    24ನೇ ಬಾರಿಯ ಶಸ್ತ್ರಚಿಕಿತ್ಸೆಯ ಬಳಿಕ ಇವರ ಕೈ ಹಾಗೂ ಕಾಲುಗಳಲ್ಲಿ ಬೆಳೆದಿದ್ದ ತೊಗಟೆ ರೀತಿಯ ಅಂಶವನ್ನು ತೆಗೆದ ನಂತರ ಕಾಯಿಲೆ ವಾಸಿಯಾಗಿರುವುದಾಗಿ ವೈದ್ಯರು ಹೇಳಿದ್ದರು. ಅದಾಗಿ ವರ್ಷ ಕಳೆಯುವಷ್ಟರಲ್ಲಿ ಬಜಂದರ್ ಕೈಯಲ್ಲಿ ಮತ್ತೆ ತೊಗಟೆಯ ಬೆಳವಣಿಗೆ ಶುರುವಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಖಾಯಿಲೆಯನ್ನ ಗುಣಪಡಿಸಿದ್ದು ವೈದ್ಯಕೀಯ ಇತಿಹಾಸದಲ್ಲೇ ಮೇಲುಗಲ್ಲು ಎಂದು ವೈದ್ಯರು ಹೇಳಿಕೊಂಡಿದ್ದರು. ಆದ್ರೆ ಇದೀಗ ಅದೇ ಕಾಯಿಲೆಯಿಂದ ಅವರು ಬಳಲುತ್ತಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲನೇ ಬಾರಿಗಿಂತಲೂ ಈ ಬಾರಿ ಈ ಪ್ರಕರಣ ನಮಗೆ ಅತ್ಯಂತ ದೊಡ್ಡ ಸವಾಲಾಗಿದೆ ಅಂತ ಸರ್ಜನ್ ಸಮಂತ್ ಲಾಲ್ ಸೇನ್ ಹೇಳಿದ್ದಾರೆ.

    ಈ ಕಾಯಿಲೆಯಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಬಜಂದರ್ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇವರ ಜೊತೆ ಕುಟುಂಬವೂ ಆಸ್ಪತ್ರೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಮತ್ತೆ ನನ್ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುತ್ತಾರಾ ಎಂಬ ಆತಂಕ ಶುರುವಾಗಿದೆ. ಇದರಿಂದ ನನ್ನ ಕೈ ಹಾಗೂ ಪಾದಗಳು ಸರಿಯಾಗುತ್ತದೆ ಎಂಬ ಭರವಸೆ ನನಗಿಲ್ಲ ಎಂದು ಢಾಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 27 ವರ್ಷದ ಬಜಂದರ್ ಹೇಳಿದ್ದಾರೆ. ಬಜಂದರ್ ಅವರು ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಶಸ್ತ್ರ ಚಿಕಿತ್ಸೆ ಮಾಡಿ ಕೈ ಮತ್ತು ಕಾಲಿನಿಂದ ಸುಮಾರು 5 ಕೆಜಿ ತೂಕದ ಮರದಂತೆ ಬೆಳೆದ ಭಾಗವನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಮತ್ತೆ ಶಸ್ತ್ರ ಚಿಕಿತ್ಸೆ ಪಡೆಯಲು ಅವರು ಭಯಪಡುತ್ತಿದ್ದಾರೆ.

    ಇದೇ ಆಸ್ಪತ್ರೆಯ ಒಂದು ಪುಟ್ಟ ಕೋಣೆಯಲ್ಲಿ ಬಜಂದರ್ ಪತ್ನಿ ಹಾಗೂ 4 ವರ್ಷದ ಮಗಳು ಕೂಡ ವಾಸವಾಗಿದ್ದಾರೆ. ಇದೇ ವಾರ ಬಜಂದರ್ 25ನೇ ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. 4 ವರ್ಷದ ಮಗಳನ್ನ ನೋಡಿಕೊಳ್ಳುತ್ತಿರೋ ಬಜಂದರ್ ಪತ್ನಿ ಗಂಡನ ಆರೋಗ್ಯ ಸುಧಾರಿಸಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

    ಬಜಂದರ್ ಅವರ ವಿಚಿತ್ರ ಕಾಯಿಲೆಗೆ ಈವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಬಜಂದರ್ ತನ್ನ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತಿಯಲ್ಲಿದ್ದಾರೆ. ನನ್ನ ಮಗಳು ಡಾಕ್ಟರ್ ಆಗಬೇಕೆಂದು ಯಾವಾಗ್ಲೂ ಬಯದಿದ್ದೆ. ಆದ್ರೆ ನನ್ನ ಸ್ಥಿತಿ ಮತ್ತಷ್ಟು ಹದಗೆಟ್ಟರೆ ಆಕೆಯನ್ನು ಶಾಲಾಗೆ ತಾನೇ ಹೇಗೆ ಕಳಿಸಲಿ ಎಂದು ಬಂಜಂದರ್ ಚಿಂತೆಯಲ್ಲಿದ್ದಾರೆ.

    ಬಜಂದರ್ ಬಳಲುತ್ತಿರುವ ಕಾಯಿಲೆಗೆ ಎಪಿಡರ್ಮೊ ಡಿಸ್ಪ್ಲೇಸಿಯಾ ವೆರುಸಿಫಾರ್ಮಿಸ್ ಎಂದು ಕರೆಯಲಾಗುತ್ತದೆ. ಅಪರೂಪದಲ್ಲಿ ಅಪರೂಪವೆಂಬಂತೆ ಜಗತ್ತಿನಾದ್ಯಂತ ಅರ್ಧ ಡಜನ್ ನಷ್ಟು ಮಂದಿ ಈ ಕಾಯಿಲೆ ಹೊಂದಿದ್ದಾರೆ. ಮರದ ತೊಗಟೆಯಂತೆ ಬೆಳೆಯುವ ಕಾರಣ ಇದಕ್ಕೆ ಟ್ರಿ ಮ್ಯಾನ್ ಡಿಸೀಸ್ ಅಂತಲೂ ಕರೆಯಲಾಗುತ್ತದೆ.

    ಈ ಬಗ್ಗೆ ಮತ್ತಷ್ಟು ತನಿಖೆ ಮಾಡಿ ಅವರ ಕಾಯಿಲೆ ಗುಣಪಡಿಸಿ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದೇವೆ. ಆದ್ರೆ ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.