Tag: hand pump

  • ಹ್ಯಾಂಡ್ ಪಂಪ್‍ನಲ್ಲಿ ನೀರಿನೊಂದಿಗೆ ಬೆಂಕಿ

    ಹ್ಯಾಂಡ್ ಪಂಪ್‍ನಲ್ಲಿ ನೀರಿನೊಂದಿಗೆ ಬೆಂಕಿ

    ಭೋಪಾಲ್: ಹ್ಯಾಂಡ್ ಪಂಪ್‍ವೊಂದರಲ್ಲಿ ನೀರಿನೊಂದಿಗೆ ಬೆಂಕಿಯು ಬರುತ್ತಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.

    ಮಧ್ಯಪ್ರದೇಶದ ಛತ್ತರ್‍ಪುರ ಜಿಲ್ಲೆಯ ಕಚಾರ್ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲಾಣದಲ್ಲಿ ಪಂಪ್ ಮೂಲಕ ನೀರು ಹಾಗೂ ಬೆಂಕಿ ಎರಡು ಬರುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ಥಾಪನೆಯಾಗಲಿದೆ 8 ವಿವಿ – ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ

    ಘಟನೆ ಸಂಬಂಧಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದಾರೆ. ಘಟನೆ ಸಂಬಂಧಿಸಿ ಹ್ಯಾಂಡ್ ಪಂಪ್‍ನಿಂದ ನೀರು ಹಾಗೂ ಬೆಂಕಿ ಎರಡನ್ನು ಬರುತ್ತಿರುವುದನ್ನು ನೋಡಿ ಸ್ಥಳೀಯರು ಅಚ್ಚರಿಕೊಂಡಿದ್ದಾರೆ. ಇದನ್ನು ನೋಡಲು ದೂರದ ಊರಿನಿಂದ ಜನರ ದಂಡೇ ಬರುತ್ತಿದೆ. ಇದನ್ನೂ ಓದಿ: ಯಾವಾಗಲೂ ಕಾಂಗ್ರೆಸ್ಸಿಗರು ಜಿನ್ನಾನನ್ನೇ ಕನಸಿನಲ್ಲಿ ಕಾಣ್ತಾರೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಸೊಂಡಿಲಿನಿಂದ ಹ್ಯಾಂಡ್‍ಪಂಪ್ ಹೊಡೆದು ನೀರು ಕುಡಿದ ಆನೆ

    ಸೊಂಡಿಲಿನಿಂದ ಹ್ಯಾಂಡ್‍ಪಂಪ್ ಹೊಡೆದು ನೀರು ಕುಡಿದ ಆನೆ

    ನೆಗಳು ಬುದ್ಧಿವಂತ ಪ್ರಾಣಿಯಾಗಿದ್ದು, ಅವು ಜ್ಞಾಪಕ ಶಕ್ತಿಯನ್ನು ಸಹ ಹೊಂದಿರುತ್ತದೆ. ಆನೆಗಳು ಭೂಮಿಯಲ್ಲಿರುವ ಎಲ್ಲಾ ಪ್ರಾಣಿಗಳಿಗಿಂತಲೂ ಅತಿದೊಡ್ಡ ಮೆದುಳನ್ನು ಹೊಂದಿದ್ದು, ಮನುಷ್ಯರಿಗಿಂತ ಮೂರು ಪಟ್ಟು ನರಕೋಶಗಳನ್ನು ಹೊಂದಿವೆ.

    ಸದ್ಯ ವಿಡಿಯೋವೊಂದರಲ್ಲಿ ಆನೆ ಬುದ್ಧಿವಂತ ಪ್ರಾಣಿ ಮತ್ತು ಮನುಷ್ಯರನ್ನು ಸುಲಭವಾಗಿ ಅನುಕರಣೆ ಮಾಡಬಲ್ಲವು ಎಂಬುವುದನ್ನು ತೋರಿಸಿದೆ. ಬಾಯಾರಿಕೆಗೊಂಡಿದ್ದ ಆನೆಯೊಂದು ನೀರು ಕುಡಿಯಲು ಯಾರ ಸಹಾಯವನ್ನು ಪಡೆಯದೇ ತನ್ನ ಸೊಂಡಿಲಿನಿಂದ ಹ್ಯಾಂಡ್‍ಪಂಪ್‍ನನ್ನು ಹೊಡೆಯುತ್ತದೆ. ನಂತರ ಪಂಪ್‍ನಿಂದ ನೀರು ಹೊರಬಂದ ತಕ್ಷಣ ನೀರು ಕುಡಿಯುತ್ತದೆ. ಈ ದೃಶ್ಯ ಅಲ್ಲಿದ್ದ ಜನರು ಅಚ್ಚರಿಗೊಳ್ಳುವಂತೆ ಮಾಡಿದೆ.

    ವೈರಲ್ ಆಗುತ್ತಿರುವ ಈ ವೀಡಿಯೋ ಎಲ್ಲಿಯದು ಎಂಬುವುದು ತಿಳಿದು ಬಂದಿಲ್ಲ. ಆದರೆ ದೇಸಿ ಆನೆಯ ಸ್ಟೈಲ್ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಆನೆಯ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.