Tag: hand

  • ವ್ಯಕ್ತಿಯ ಮೇಲೆ ಹಲ್ಲೆ ಮಾಡಿ 2 ಕೈಗಳನ್ನು ಕತ್ತರಿಸಿ ಕೊಂಡೊಯ್ದ ದುಷ್ಕರ್ಮಿಗಳು

    ವ್ಯಕ್ತಿಯ ಮೇಲೆ ಹಲ್ಲೆ ಮಾಡಿ 2 ಕೈಗಳನ್ನು ಕತ್ತರಿಸಿ ಕೊಂಡೊಯ್ದ ದುಷ್ಕರ್ಮಿಗಳು

    ಚಂಡೀಗಢ: ವ್ಯಕ್ತಿಯೊಬ್ಬನ (Man) 2 ಕೈಗಳನ್ನು (Hand) ಕತ್ತರಿಸಿ ಅದನ್ನು ತೆಗೆದುಕೊಂಡು ಹೋದ ಘಟನೆ ಹರಿಯಾಣದ (Haryana) ಕುರುಕ್ಷೇತ್ರದಲ್ಲಿ ನಡೆದಿದೆ.

    ಜುಗ್ನು ಹಲ್ಲೆಗೊಳಗಾದ ವ್ಯಕ್ತಿ. ಹತ್ತರಿಂದ ಹನ್ನೆರಡು ಮಂದಿ ಅಪರಿಚಿತರು ಮುಖ ಮುಚ್ಚಿಕೊಂಡು ಕುರುಕ್ಷೇತ್ರ ಹವೇಲಿಗೆ ನುಗ್ಗಿದ್ದರು. ಈ ವೇಳೆ ಅಲ್ಲೇ ಇದ್ದ ಜುಗ್ನು ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಆತನ 2 ಕೈಗಳನ್ನು ಕತ್ತರಿಸಿದ್ದಾರೆ. ಅಷ್ಟಕ್ಕೆ ತೃಪ್ತರಾಗದ ಅವರು ಅದನ್ನು ತೆಗೆದುಕೊಂಡು ಹೋಗಿದ್ದಾರೆ.

    crime

    ಈ ವೇಳೆ ರಕ್ತದ ಮಡುವಿನಲ್ಲಿ ಮಲಗಿದ್ದ ಜಗ್ನುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ:  ಮದುವೆ ಆಗಿಲ್ಲ ಎಂದು ಕಿಚಾಯಿಸಿದ ಸ್ನೇಹಿತನ ಕೊಲೆ

    ಘಟನೆಗೆ ಸಂಬಂಧಿಸಿದಂತೆ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಲಿಸಲಾಗುತ್ತಿದ್ದು, ಇನ್ನೂ ಘಟನೆಯ ಹಿಂದಿನ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೇಮಾವತಿ ದಡದಲ್ಲಿ ಮೀನು ಹಿಡಿಯಲು ಹೋಗಿದ್ದವರಿಗೆ ಗುಂಡೇಟು- ಓರ್ವ ಸಾವು, ಇಬ್ಬರು ಗಂಭೀರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2,500 ರೂ. ವಾಪಸ್ ಕೊಡದಿದ್ದಕ್ಕೆ ಯುವಕನ ಕೈಯನ್ನೆ ಕತ್ತರಿಸಿದ್ರು

    2,500 ರೂ. ವಾಪಸ್ ಕೊಡದಿದ್ದಕ್ಕೆ ಯುವಕನ ಕೈಯನ್ನೆ ಕತ್ತರಿಸಿದ್ರು

    ಗಾಂಧೀನಗರ: 2,500 ರೂ. ಹಣವನ್ನು (Money) ವಾಪಸ್ ನೀಡದಿದ್ದಕ್ಕೆ ಮೂವರು ವ್ಯಕ್ತಿಗಳು ಸೇರಿ ಯುವಕನ (Youth) ಕೈಯನ್ನು (Hand) ಕತ್ತರಿಸಿದ ಘಟನೆ ಗುಜರಾತ್‍ನಲ್ಲಿ (Gujarat) ನಡೆದಿದೆ.

    ಗುಜರಾತ್‍ನ ಅರಾವಳಿ ಜಿಲ್ಲೆಯ ಬಯಾದ್‍ನಲ್ಲಿ ಈ ಘಟನೆ ನಡೆದಿದ್ದು, ವಿಜಯ್ ಸಲಾತ್ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ. ಶೈಲೇಶ್ ಬರೋಟ್ ಎಂಬಾತನಿಂದ ವಿಜಯ್ 2,500 ರೂ. ಸಾಲ ಪಡೆದಿದ್ದ. ಆದರೆ ಅದನ್ನು ವಾಪಸ್ ನೀಡಿರಲಿಲ್ಲ. ಇದರಿಂದ ಶೈಲೇಶ್ ಹಣ ವಸೂಲಿ ಮಾಡಲು ಶಸ್ತ್ರ ಸಜ್ಜಿತನಾಗಿ ವಿಜಯ್ ಮನೆಗೆ ಬಂದಿದ್ದನು. ಶೈಲೇಶ್ ಜೊತೆಗೆ ಆತನ ತಂದೆ ಕಾನು ಹಾಗೂ ಸಹೋದರ ರವಿ ಬುರೋಟ್ ಬಂದಿದ್ದರು.

    ಈ ವೇಳೆ ಶೈಲೇಶ್ ತಕ್ಷಣ ಹಣವನ್ನು ಮರುಕಳಿಸುವಂತೆ ತಿಳಿಸಿದ್ದಾನೆ. ಆದರೆ ವಿಜಯ್ ಬಳಿ ಅಷ್ಟೊಂದು ಹಣವಿಲ್ಲದ್ದರಿಂದ ವಾಪಸ್ ನೀಡಲು ಆಗಲಿಲ್ಲ. ಇದರಿಂದ ಕೋಪಗೊಂಡ ಶೈಲೇಶ್ ವಿಜಯ್‍ನ ಕೈಯನ್ನು ಕತ್ತರಿಸಿದ್ದಾನೆ. ನಂತರ ಆತನ ಕಾಲಿಗೆ ಕತ್ತಿಯಿಂದ ಹೊಡೆದಿದ್ದಾನೆ. ಘಟನೆ ನಂತರ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ವಿಜಯ್‍ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ವೈದ್ಯರು ಆತನನ್ನು ಅಹಮದಾಬಾದ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಗ್ರಾಮದ ಯುವಕನೊಂದಿಗೆ ಪ್ರೀತಿ – ಮಗಳನ್ನೇ ಕೊಚ್ಚಿ ಕೊಂದ ತಂದೆ

    ಘಟನೆಗೆ ಸಂಬಂಧಿಸಿ ಆರೋಪಿ ಶೈಲೇಶ್, ಆತನ ತಂದೆ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ. ಈಗಾಗಲೇ ಶೈಲೇಶ್‍ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಪಟಾಕಿ ತಂದ ಆಪತ್ತು – ಮಕ್ಕಳ ಬಾಳಲ್ಲಿ ಕತ್ತಲೆ ತಂದ ಬೆಳಕಿನ ಹಬ್ಬ, 78 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಕ್ಷುಲ್ಲಕ ಕಾರಣಕ್ಕೆ ಜಗಳ ಅರಣ್ಯ ರಕ್ಷಕನ ಕೈ ತುಂಡು

    ಕ್ಷುಲ್ಲಕ ಕಾರಣಕ್ಕೆ ಜಗಳ ಅರಣ್ಯ ರಕ್ಷಕನ ಕೈ ತುಂಡು

    ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಅರಣ್ಯ ಇಲಾಖೆಯ ರಕ್ಷಕನ ಕೈಯನ್ನು ಕತ್ತರಿಸಿದ ಘಟನೆ ಮಡಿಕೇರಿ ತಾಲೂಕಿನ ಕಾಲೂರು ಸಮೀಪದ ಕಾನೆಕಂಡಿ ಬಳಿ ನಡೆದಿದೆ.

    ಗಾಳಿಬೀಡು ಅರಣ್ಯ ವಲಯದ ಗಾರ್ಡ್ ಆಗಿರುವ ಸಂಜೀವ(ಅಣ್ಣಪ್ಪ ರೈ-59) ಗಾಯಾಳು ಆಗಿದ್ದು, ಕೈ ಕತ್ತರಿಸಿದ ಆರೋಪಿ ತಿಮ್ಮಯ್ಯ(ಸಣ್ಣಕ್ಕ-52) ಕೃತ್ಯ ನಡೆಸಿ ಅರಣ್ಯದಲ್ಲಿ ತಲೆಮರೆಸಿ ಕೊಂಡಿದ್ದಾನೆ. ಗಾಯಾಳು ಸಂಜೀವ ಹಾಗೂ ಆರೋಪಿ ತಿಮ್ಮಯ್ಯ ಇಬ್ಬರು ಒಂದೇ ಊರಿನವರಾಗಿದ್ದಾರೆ. ಇದನ್ನೂ ಓದಿ:  ತನ್ನ ಪುಟ್ಟ ಮಗುವಿನೊಂದಿಗೆ ಪತ್ನಿಗಾಗಿ ಅಲೆದಾಡುತ್ತಿರುವ ಪತಿ 

    CRIME 2

    ತಿಮ್ಮಯ್ಯ ಮನೆ ಪಕ್ಕದಲ್ಲಿ ಕಸ ವಿಲೇವಾರಿ ಘಟಕ ಮಾಡಲು ಉದ್ದೇಶಿಸಲಾಗಿದೆ. ಇದೇ ವಿಚಾರ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕತ್ತಿಯಿಂದ ತಿಮ್ಮಯ್ಯ ಸಂಜೀವನ ಎಡಗೈಗೆ ಬೀಸಿದ್ದಾನೆ. ಪರಿಣಾಮ ಎಡಗೈನ ಹಸ್ತದ ಪೂರ್ಣ ಭಾಗ ತುಂಡಾಗಿ ನೆಲಕ್ಕೆ ಬಿದ್ದಿದೆ.

    ತುಂಡಾಗಿರುವ ಹಸ್ತದ ಭಾಗವನ್ನು ಜೋಡಿಸಲು ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಸಂಜೀವನನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಯಾರು ದೀಪ ಬೆಳಗಿಸಲು ಕೆಲಸ ಮಾಡುತ್ತಿಲ್ಲ: ಟ್ವಿಟ್ಟರ್ ಸಿಇಒ

  • ಬ್ಲೇಡ್ ನಿಂದ ಅಪ್ಪು  ಎಂದು ಕೈ ಮೇಲೆ ಕುಯ್ದುಕೊಂಡ ವಿದ್ಯಾರ್ಥಿನಿ

    ಬ್ಲೇಡ್ ನಿಂದ ಅಪ್ಪು  ಎಂದು ಕೈ ಮೇಲೆ ಕುಯ್ದುಕೊಂಡ ವಿದ್ಯಾರ್ಥಿನಿ

    ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಗಲುವಿಕೆ ಸಹಿಸಲಾಗದೆ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರ ಬೆನ್ನಲ್ಲೇ ವಿದ್ಯಾರ್ಥಿನಿಯೊಬ್ಬಳು ಬೇಸತ್ತು ಬ್ಲೇಡ್ ನಿಂದ ಕೈ ಕೊಯ್ದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮೈಸೂರಿನ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಯಶಸ್ವಿನಿ ಎಂಬ ವಿದ್ಯಾರ್ಥಿನಿ ಅದೇ ಸಂಸ್ಥೆಗೆ ಸೇರಿದ ಹಾಸ್ಟೆಲ್ ನಲ್ಲಿದ್ದಳು. ಚಿಕ್ಕಂದಿನಿಂದಿಲೂ ಅಪ್ಪುವಿನ ಅಪ್ಪಟ ಅಭಿಮಾನಿಯಾಗಿರುವ ಯಶಸ್ವಿನಿ ಅಪ್ಪು ಹಠಾತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಖಿನ್ನತೆಗೊಳಗಾದ ಈಕೆ ಕೈ ಮೇಲೆ ಮೇಲೆ ಬ್ಲೇಡ್ ನಿಂದಲೇ ಅಪ್ಪು  ಎಂದು ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಕರವಸ್ತ್ರ ಹಾಗು ಬಿಳಿ ಹಾಳೆ ಮೇಲೆ ತನ್ನ ರಕ್ತದಿಂದಲೇ ಐ ಲವ್ ಯು ಅಪ್ಪು ಎಂದು ಬರೆದಿದ್ದಾಳೆ. ರಕ್ತಸ್ರಾವ ದಿಂದ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

  • ಬಸ್‍ನಲ್ಲಿ ನಿದ್ದೆ ಮಾಡುವ ಅಭ್ಯಾಸ ಇದೆಯೇ?- ಈ ಸುದ್ದಿ ಓದಿ

    ಬಸ್‍ನಲ್ಲಿ ನಿದ್ದೆ ಮಾಡುವ ಅಭ್ಯಾಸ ಇದೆಯೇ?- ಈ ಸುದ್ದಿ ಓದಿ

    ಹಾವೇರಿ: ನಿದ್ದೆಯ ಮಂಪರಿನಲ್ಲಿ ಬಸ್ ಕಿಟಕಿಯಿಂದ ಕೈ ಹೊರ ಚಾಚಿ ಪ್ರಯಾಣಿಕ ಕೈ ಕಳೆದುಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ.

    ನದೀಮ್ ತಾವರಗಿ(28) ಕೈ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ. ಹಿರೇಕೇರೂರು ಮೂಲದ ನಿವಾಸಿಯಾಗಿದ್ದಾನೆ. ಅಂಕೋಲಾದಿಂದ ಶಿರಸಿಗೆ ಪ್ರಯಾಣಮಾಡುತ್ತಿದ್ದ ವೇಳೆ ಬಸ್‍ನಲ್ಲಿ ನಿದ್ದೆಗೆ ಜಾರಿ ಕಿಟಕಿಯಲ್ಲಿ ಕೈ ಚಾಚಿ ಕುಳಿತವನ ಒಂದು ಕೈ ಕಟ್ ಆಗಿದೆ. ಇದನ್ನೂ ಓದಿ:  ಮಳೆಗಾಗಿ ಭಕ್ತನಿಂದ ಆಂಜನೇಯನಿಗೆ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಹನುಮಂತ

    ಅಂಕೋಲಾದಿಂದ ಶಿರಸಿಗೆ ರಾತ್ರಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಳಿತ ಸೀಟಿನಲ್ಲಿ ನಿದ್ದೆ ಮಾಡುತ್ತಿದ್ದ. ನಿದ್ದೆ ಮಂಪರಿನಲ್ಲಿ ಕಿಟಕಿಯಿಂದ ಕೈ ಹೊರ ಚಾಚಿದ ಎದುರಿನಿಂದ ವೇಗವಾಗಿ ಚಲಿಸುತ್ತಿದ್ದ ಲಾರಿ ಕೈಗೆ ತಾಗಿದೆ, ಲಾರಿ ವೇಗಕ್ಕೆ ಕೈ ಕಿತ್ತುಕೊಂಡೇ ಹೋಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಈ ಕುರಿತಂತೆ ಲಾರಿ ಚಾಲಕ ವಿರುದ್ಧ ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ವಿಡಿಯೋ: ವಾಟರ್ ಜಗ್‍ನೊಳಗೆ ಕೈ ಹಾಕಿ ಪೋಷಕರಿಗೆ ಚಮಕ್ ಕೊಟ್ಟ ಕಂದಮ್ಮ

    ವಿಡಿಯೋ: ವಾಟರ್ ಜಗ್‍ನೊಳಗೆ ಕೈ ಹಾಕಿ ಪೋಷಕರಿಗೆ ಚಮಕ್ ಕೊಟ್ಟ ಕಂದಮ್ಮ

    – ಬಾಲಕಿಯ ನಟನಾ ಕೌಶಲ್ಯಕ್ಕೆ ನೆಟ್ಟಿಗರು ಫಿದಾ

    ಪುಟ್ಟ ಮಕ್ಕಳು ಏನೇ ಮಾಡಿದ್ರೂ ನೋಡೋಕೆ ಚಂದ. ಅವರು ಆಡುವ ತುಂಟಾಟ, ನಗು, ಅಳು, ಕೋಪ ಹೀಗೆ ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ. ಮನೆಯಲ್ಲೊಂದು ಮಗು ಇದ್ದರೆ ನಾವು ಎಂತದ್ದೇ ಪರಿಸ್ಥಿತಿಯಲ್ಲಿದ್ದರೂ ಒಂದು ಬಾರಿ ಮನಸ್ಸು ನಿರಾಳ ಎನಿಸುವುದು ಸಹಜ. ಹೀಗೆ ಇಲ್ಲೊಂದು ಪುಟ್ಟ ಮಗು ತನ್ನ ಮನೆಯವರನ್ನು ಪ್ರ್ಯಾಂಕ್ ಮಾಡಿದ ಘಟನೆ ನಡೆದಿದೆ.

    ಹೌದು. ಪುಟ್ಟ ಬಾಲಕಿಯೊಬ್ಬಳು ನೀರಿನ ಜಗ್ ಒಳಗೆ ಕೈ ಹಾಕಿ ಅಳಲು ಶುರು ಮಾಡಿದ್ದಾಳೆ. ಕೂಡಲೇ ಆಕೆಯ ಪೋಷಕರು ಬಂದು ಜಗ್ ಒಳಗಿಂದ ಕೈ ತೆಗೆದಿದ್ದಾರೆ. ಈ ವೇಳೆ ಬಾಲಕಿ ನಗುತ್ತಾ ಮತ್ತೆ ಅದೇ ರೀತಿ ಮಾಡಲು ಮುಂದಾಗುತ್ತಾಳೆ. ಈಕೆಯ ಕುಚೇಷ್ಟೆಯಿಂದ ಸುಸ್ತಾದ ಮನೆಯವರು ನೀರಿನ ಜಗ ಇಡುವ ಜಾಗವನ್ನು ಬದಲಾಯಿಸುತ್ತಾರೆ. ಪುಟ್ಟ ಕಂದಮ್ಮಳ ಈ ಕುಚೇಷ್ಟೆಯನ್ನು ಮನೆಯವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಬ್ಯಾಕ್ ಟು ನೇಚರ್ ಎಂಬ ಟ್ವಿಟ್ಟರ್ ಅಕೌಂಟ್ ಅಪ್ಲೋಡ್ ಮಾಡಿದೆ. 16 ಸೆಕೆಂಡಿನ ಈ ವಿಡಿಯೋ ಇದೂವರೆಗೂ ಸುಮಾರು 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಸಾಕಷ್ಟು ಕಾಮೆಂಟ್ ಗಳು ಬಂದಿದ್ದು, ಪುಟ್ಟ ಬಾಲಕಿಯ ಕುಚೇಷ್ಟೆಗೆ ನೆಟ್ಟಿಗೆ ಮಾರು ಹೋಗಿದ್ದಾರೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪುಟ್ಟ ಹುಡುಗಿಯ ನಟನಾ ಕೌಶಲ್ಯಕ್ಕೆ ಫಿದಾ ಆಗಿರುವ ಟ್ವಿಟ್ಟರ್ ಬಳಕೆದಾರರು, ತುಂಬಾ ತಮಾಷೆಯಾಗಿದೆ. ಆದರೂ ಉತ್ತಮ ನಟನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಹೀಗೆ ಹಲವಾರು ಕಾಮೆಂಟ್ ಗಳು ಬಂದಿವೆ.

    https://twitter.com/backt0nature/status/1306005877602889728

  • ತುಮಕೂರಿನಲ್ಲಿ ಡಾಕ್ಟರ್ ಎಡವಟ್ಟು- ಯುವಕನ ಮೂಳೆ ಮುರಿತಕ್ಕಿಲ್ಲ ಸೂಕ್ತ ಚಿಕಿತ್ಸೆ

    ತುಮಕೂರಿನಲ್ಲಿ ಡಾಕ್ಟರ್ ಎಡವಟ್ಟು- ಯುವಕನ ಮೂಳೆ ಮುರಿತಕ್ಕಿಲ್ಲ ಸೂಕ್ತ ಚಿಕಿತ್ಸೆ

    – ನ್ಯಾಯ ಕೇಳಿದ್ದಕ್ಕೆ ರೌಡಿ ಡಾಕ್ಟರ್ ಅವಾಜ್

    ತುಮಕೂರು: ಬೈಕಿನಿಂದ ಬಿದ್ದು ಹುಡುಗನ ಮೊಣ ಕೈ ಮೂಳೆ ಮುರಿದಿತ್ತು. ಶಸ್ತ್ರ ಚಿಕಿತ್ಸೆ ಮಾಡಿ ಯಥಾಸ್ಥಿತಿಗೂ ತರಲಾಗಿತ್ತು. ಇನ್ನೇನು ಕೈ ಸರಿಹೋಯ್ತು ಅನ್ನೋಷ್ಟರಲ್ಲಿ ವೈದ್ಯರ ಎಡವಟ್ಟಿನಿಂದಾಗಿ ಆ ಹುಡುಗ ಮತ್ತೆ ಕೊರಗುವಂತಾಗಿದೆ.

    ಹೌದು. ತುಮಕೂರಿನ ರಾಜೀವ್ ಗಾಂಧಿ ನಗರದ ಯುವಕ ವಾಸೀಂ ಪಾಷಾಗೆ ಬೈಕಿನಿಂದ ಬಿದ್ದು ಮೊಣಕೈ ಮುರಿದಿತ್ತು. ಹೀಗಾಗಿ ಯುವಕನನ್ನು ತುಮಕೂರು ನಗರದ ಮಂಜುನಾಥ ನಗರದಲ್ಲಿರುವ ಸುಕೃತ ಆಸ್ಪತ್ರೆಗೆ ಕರೆದೊಯ್ದಿದ್ದರು. ವಾಸೀಂ ಪಾಷಾನ ಕಂಡಿಷನ್ ನೋಡಿದ್ದ ಡಾಕ್ಟರ್ ಶ್ರೀನಿವಾಸ್ ತಕ್ಷಣ ಸರ್ಜರಿ ಮಾಡಲೇಬೇಕು. ಇಲ್ಲಾಂದ್ರೆ ತುಂಬಾ ಪ್ರಾಬ್ಲಂ ಆಗುತ್ತೆ ಅಂತ 35 ಸಾವಿರ ರೂಪಾಯಿ ಪೀಕಿ ಸರ್ಜರಿಯನ್ನೂ ಮಾಡಿದ್ದರು. ಆದರೆ ಪದೇ ಪದೇ ರಕ್ತಸ್ರಾವವಾಗುತ್ತಾ ಕೀವು ಸೇರಿ, ನೋವು ಬಂದಿದೆ. ಸರ್ ಹೀಗಾಗಿದ್ಯಲ್ಲ ಅಂದ್ರೆ ಇದೆಲ್ಲಾ ಕಾಮನ್ ಧೈರ್ಯ ತಗೋ ಅಂತ ಡಾ. ಶ್ರೀನಿವಾಸ್ ಹೇಳಿರುವುದಾಗಿ ವಾಸೀಂ ತಿಳಿಸಿದ್ದಾರೆ.

    ಕೈನೋವು ತಾಳಲಾರದೆ ಮತ್ತೆ ಆಸ್ಪತ್ರೆಗೆ ಹೋದ್ರೆ, ಡಾಕ್ಟರ್ ಶ್ರೀನಿವಾಸ್ ಮಾತ್ರ ಇಲ್ಲಿ ವಾಸಿ ಮಾಡೋಕೆ ಸಾಧ್ಯವೇ ಇಲ್ಲ. ಬೇರೆ ಕಡೆ ಹೋಗಿ ಬೇಕಾದ್ರೆ 5 ಲಕ್ಷ ಹಣವನ್ನು ನಾನೇ ಕೊಡ್ತೀನಿ. ಇದನ್ನು ಯಾರ ಬಳಿಯೂ ಹೇಳಲು ಹೋಗಬೇಡಿ ಅಂತ ಮೊದಲಿಗೆ ನೈಸ್ ಮಾಡಿದ್ದಾರೆ. ಆ ನಂತರ ನಂಗೆ ಎಂಎಲ್‍ಎ ಗೊತ್ತು, ಎಂಪಿ ಗೊತ್ತು, ಹಣನೂ ಕೊಡಲ್ಲ, ಏನೂ ಕೊಡಲ್ಲ. ಏನ್ ಮಾಡ್ಕೋತ್ತೀರೋ ಮಾಡ್ಕಳಿ ಅಂತ ಅವಾಜ್ ಹಾಕಿರುವುದಾಗಿ ವಾಸೀಂ ತಾಯಿ ಆರೋಪಿಸಿದ್ದಾರೆ. ಅಲ್ಲದೆ ಬೇರೆ ಡಾಕ್ಟರ್‍ಗೆ ತೋರಿಸಿದ್ರೆ ವಾಸೀಂ ಕೈಮೂಳೆಯನ್ನು ಹುಳುಗಳು ತಿಂದಿವೆ. ಹಾಗಾಗಿ ಅವರ ಕೈ ಸರಿ ಹೋಗುವುದು ಕಷ್ಟ ಅಂತ ಹೇಳಿದ್ದಾರಂತೆ.

    ಒಟ್ಟಿನಲ್ಲಿ ಜೀವ ಉಳಿಸಿ ನೊಂದವರ ಪಾಲಿಗೆ ನಂದಾದೀಪವಾಗಬೇಕಿದ್ದ ವೈದ್ಯ ಶ್ರೀನಿವಾಸ್ ಇಲ್ಲಿ ತಪ್ಪಿತಸ್ಥನಾಗಿರೋದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ, ನೊಂದ ಯುವಕ ವಾಸೀಂಗೆ ನ್ಯಾಯ ಒದಗಿಸಬೇಕಿದೆ.

  • ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಅರ್ಧ ಕೈ ಕಟ್

    ಕೋಲಾರ: ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕಾರ್ಮಿಕನ ಕೈ ಅರ್ಧ ತುಂಡಾದ ಘಟನೆ ಕೋಲಾರದ ನತಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ನಹಾರ್ಸ್ ಎಂಜಿನಿಯರಿಂಗ್ ಇಂಡಿಯಾ ಕಂಪನಿಯಲ್ಲಿಂದು ಈ ಘಟನೆ ನಡೆದಿದೆ. ಹೈದರ್ ಎಂಬ ಕಾರ್ಮಿಕನ ಕೈ ತುಂಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಕಾರ್ಖಾನೆಯ ಆಡಳಿತ ಮಂಡಳಿಯಿಂದ ಸೂಕ್ತ ಚಿಕಿತ್ಸೆ ಹಾಗೂ ಭದ್ರತೆ ನೀಡದ ಆರೋಪ ಕೇಳಿಬಂದಿದೆ. ಕಾರ್ಖಾನೆ ಎದುರು ನೂರಾರು ಕಾರ್ಮಿಕರು ಭದ್ರತೆ ಹಾಗೂ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದರು. ಗಾಯಾಳುಗೆ ಸೂಕ್ತ ಪರಿಹಾರ ನೀಡುವಂತೆ, ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇಎಸ್‍ಐ ನೀಡುವಂತೆ ಆಗ್ರಹ ಮಾಡಿದರು.

    ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಮಾಲೀಕನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮಹಿಳೆ

    ಮಾಲೀಕನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮಹಿಳೆ

    ಬೆಂಗಳೂರು: ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆಯೊಬ್ಬರು ತನ್ನ ಕೈ ಕಳೆದುಕೊಂಡ ಘಟನೆ ನಗರದ ಕೋಣನಕುಂಟೆಯಲ್ಲಿ ನಡೆದಿದೆ.

    ಶಾರದಮ್ಮ (39) ಕೈಕಳೆದುಕೊಂಡ ಮಹಿಳೆ. ಶಾರದಮ್ಮ ದೊಡ್ಡ ಲಕ್ಕಸಂದ್ರ ವಿಲ್ಲಾಸ್ ಪ್ರೈಡ್ ಅಪಾರ್ಟ್‍ಮೆಂಟ್‍ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕಸವನ್ನು ಮೆಷಿನ್‍ಗೆ ಹಾಕುತ್ತಿದ್ದಾಗ ಈ ಅವಘಡ ನಡೆದಿದ್ದು, ಬಲಗೈ ತುಂಡಾಗಿದೆ.

    ಶಾರದಮ್ಮ ಅಪಾರ್ಟ್‍ಮೆಂಟ್ ಸುತ್ತ ಮುತ್ತಲಿನ ಕಸವನ್ನು ಗುಡಿಸಿ ರಾಶಿ ಹಾಕಿದ್ದರು. ಕಸವನ್ನು ಮಷಿನ್‍ಗೆ ಹೇಗೆ ಹಾಕುವುದೆಂದು ಅಪಾರ್ಟ್ ಮೆಂಟ್ ಮಾಲೀಕ ಕುಮಾರ್ ಶಾರದಮ್ಮಗೆ ಹೇಳಿಕೊಟ್ಟಿರಲಿಲ್ಲ. ಆದರೂ ಕಸವನ್ನು ಮಷಿನ್‍ಗೆ ಹಾಕುವಂತೆ ಕುಮಾರ್ ಹೇಳಿದ್ದರು. ಇದರಿಂದಾಗಿ ಶಾರದಮ್ಮ ಮೆಷಿನ್‍ನಲ್ಲಿ ಕಸ ಹಾಕಿ ಕಡ್ಡಿಯಿಂದ ದೂಡುತ್ತಿದ್ದರು. ಈ ವೇಳೆ ಕಡ್ಡಿ ಮೆಷಿನಿನೊಳಗೆ ಬಿದ್ದಿದೆ. ತಕ್ಷಣವೇ ಕಡ್ಡಿಯನ್ನು ತೆಗೆಯಲು ಮುಂದಾದ ಶಾರದಮ್ಮ, ಆಯ ತಪ್ಪಿ ಮೆಷಿನ್‍ನಲ್ಲಿ ಬಲಗೈ ಇಟ್ಟಿದ್ದಾರೆ. ಪರಿಣಾಮ ಮೆಷಿನಿಗೆ ಸಿಲುಕಿದ ಶಾರದಮ್ಮಳ ಬಲಗೈ ತುಂಡಾಗಿದೆ.

    ಶಾರದಮ್ಮ ನೋವಿನಿಂದ ಅಳುತ್ತಿದ್ದ ಧ್ವನಿ ಕೇಳಿ ಸ್ಥಳಕ್ಕೆ ಆಗಮಿಸಿದ ಸಹೋದ್ಯೋಗಿಳು ಕಣ್ಣೀರು ಹಾಕಿದರು. ಗಂಭೀರವಾಗಿ ಗಾಯಗೊಂಡಿದ್ದ ಶಾರದಮ್ಮ ಅವರಿಗೆ ನೀರು ಕುಡಿಸಿ, ಕೈಗೆ ಬಟ್ಟೆ ಕಟ್ಟಿ ರಕ್ತಸ್ರಾವ ತಡೆಯಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಕೆಲವರು ಅಂಬುಲೆನ್ಸ್ ಗೆ ಕರೆ ಮಾಡಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.

    ತರಬೇತಿ ಹಾಗೂ ಸುರಕ್ಷತೆ ನೀಡದೆ ಕೆಲಸ ಮಾಡುವಂತೆ ಹೇಳಿದ ಅಪಾರ್ಟ್‍ಮೆಂಟ್ ಮಾಲೀಕ ಕುಮಾರ್ ವಿರುದ್ಧ ಕೊಣನಕುಂಟೆ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ತಿಮ್ಮಪ್ಪನ ಕೈಗೆ 2.25 ಕೋಟಿ ಮೌಲ್ಯದ ಚಿನ್ನದ ಹಸ್ತ ದಾನ

    ತಿಮ್ಮಪ್ಪನ ಕೈಗೆ 2.25 ಕೋಟಿ ಮೌಲ್ಯದ ಚಿನ್ನದ ಹಸ್ತ ದಾನ

    ಹೈದರಾಬಾದ್: ಉದ್ಯಮಿ ಭಕ್ತರೊಬ್ಬರು ಲಾರ್ಡ್ ಬಾಲಾಜೀ ತಿರುಪತಿಗೆ ಚಿನ್ನದ ಎರಡು ಹಸ್ತಗಳನ್ನು ದಾನ ಕೊಟ್ಟಿದ್ದಾರೆ.

    ತಮಿಳುನಾಡಿನ ನಿವಾಸಿ ತಂಗಡೋರೈ ಅವರು ಬರೋಬ್ಬರಿ 2.25 ಕೋಟಿ ಮೌಲ್ಯ ಬೆಲೆ ಬಾಳುವ ಚಿನ್ನದ ಅಭಯ ಹಸ್ತ ಮತ್ತು ಕಟಿ ಹಸ್ತವನ್ನು ತಿರುಪತಿಯ ಬಾಲಾಜಿ ದೇವಾಲಯಕ್ಕೆ ದಾನ ಮಾಡಿದ್ದಾರೆ. ಇವರು ತಮಿಳುನಾಡಿನ ಉದ್ಯಮಿ ಎಂದು ತಿಳಿದು ಬಂದಿದೆ.

    ತಂಗಡೋರೈ ಶನಿವಾರ “ಸುಪ್ರಭಾತ ಸೇವಾ” ಸಂದರ್ಭದಲ್ಲಿ ತಿರುಮತಿ ತಿರುಮಲ ದೇವಸ್ಥಾನದ ಅಧಿಕಾರಿಗಳಿಗೆ ಚಿನ್ನದ ‘ಅಭಯ ಹಸ್ತ’ ಮತ್ತು ‘ಕಟಿ ಹಸ್ತ’ ಆಭರಣಗಳನ್ನು ಅರ್ಪಿಸಿದ್ದಾರೆ. ಈ ಎರಡು ಚಿನ್ನದ ಕೈಗಳು ತಲಾ 6 ಕಿ.ಗ್ರಾಂ ತೂಕವಿದೆ.

    ಶುಕ್ರವಾರ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರು ಇಲ್ಲಿನ ಭಗವಾನ್ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.