Tag: Hanchinala

  • ಹಂಚಿನಾಳ ಗ್ರಾಮದ ಅಲೆಮಾರಿಗಳಿಗೆ ಸೂರು ಸಿಗುವುದು ಯಾವಾಗ?

    ಹಂಚಿನಾಳ ಗ್ರಾಮದ ಅಲೆಮಾರಿಗಳಿಗೆ ಸೂರು ಸಿಗುವುದು ಯಾವಾಗ?

    ಯಾದಗಿರಿ: ನಿರ್ದಿಷ್ಟ ಸೂರಿಲ್ಲದೇ ಊರೂರು ಸುತ್ತಾಡುತ್ತ, ಯಾರಾದ್ದೋ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿ, ಚಾಪೆ ಬುಟ್ಟಿಗಳನ್ನು ಹೆಣೆಯುವ ಮೂಲಕ ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮದ ಕೆಲವು ಕುಟುಂಬಗಳು ಜೀವನ ನಡೆಸುತ್ತಿವೆ.

    ಹಂಚಿನಾಳ ಗ್ರಾಮದಲ್ಲಿ ಸುಮಾರು 66 ಕುಟುಂಬಗಳು ವಾಸ ಮಾಡುತ್ತಿದ್ದು, ಅವರ ಮೂಲ ವೃತ್ತಿ ಈಚಲು ಮರದ ಗರಿಗಳಿಂದ ಬುಟ್ಟಿ ಚಾಪೆಗಳನ್ನು ಹೆಣೆಯುವುದು. ಹೀಗಾಗಿ ಅಲೆಮಾರಿ ಜೀವನ ನಡೆಸುತ್ತಿರುವ ಅವರು ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೇ ಬೇರೆ ಬೇರೆ ಗ್ರಾಮಗಳಿಗೆ ಹೋಗುತ್ತಾರೆ. ಅಲ್ಲಿ ಅಭ್ಯವಿರುವ ಖಾಲಿ ಜಾಗದಲ್ಲಿ ಒಂದಷ್ಟು ದಿನ ಶೇಡ್ ಹಾಕಿಕೊಂಡು ಚಾಪೆ, ಬುಟ್ಟಿ ತಯಾರಿಸುತ್ತಾರೆ.

    ಅಲೆಮಾರಿ ಜನಾಂಗದವರು ಸತತ ಮೂರು ವರ್ಷಗಳಿಂದ ಒಂದು ನಿರ್ದಿಷ್ಟ ಸೂರು ಕಂಡುಕೊಳ್ಳಲು ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಯಾದಗಿರಿ ಜಿಲ್ಲಾಧಿಕಾರಿಗಳು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಹಂಚಿನಾಳ ಗ್ರಾಮದಲ್ಲಿ ಸರ್ವೆ ನಂಬರ್ 59ರಲ್ಲಿ 2 ಎಕರೆ ಭೂಮಿ ಮಂಜೂರು ಮಾಡಿದ್ದರು. ಆದರೆ ಈಗ ಅಧಿಕಾರಿಗಳು ಕಾಯ್ದಿರಿಸಿದ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಹಕ್ಕು ಪತ್ರ ವಿತರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

     

    ಹಂಚಿನಾಳ ಗ್ರಾಮದ ಅಲೆಮಾರಿ ಜನಾಂಗದವರು ನಿರ್ದಿಷ್ಟ ಸೂರಿನಲ್ಲಿ ವಾಸ ಮಾಡಲು ಹಪಪಿಸುತ್ತಿದ್ದಾರೆ. ನಿವೇಶನ ನಿರ್ಮಿಸಿ, ಹಕ್ಕು ಪತ್ರ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುವಂತೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಸರ್ಕರಕ್ಕೆ ಮನವಿ ಮಾಡಿದರು.

    https://youtu.be/nuAI9tfSQSQ

  • ಭೀಕರ ಅಗ್ನಿ ದುರಂತ: 25ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಬಣವೆ, 14 ಜಾನುವಾರುಗಳು ಭಸ್ಮ

    ಭೀಕರ ಅಗ್ನಿ ದುರಂತ: 25ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಬಣವೆ, 14 ಜಾನುವಾರುಗಳು ಭಸ್ಮ

    ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಮೇವಿನ ಬಣವೆ, 14 ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ.

    ಶನಿವಾರ ಸಂಜೆ ಸುಮಾರು 4.30ರ ವೇಳೆಗೆ ಗ್ರಾಮದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಊರ ಹೊರಗಡೆ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬೆಂಕಿಯ ಕೆನ್ನಾಲಿಗೆ ಗ್ರಾಮಕ್ಕೂ ಸಹ ಆವರಿಸಿ ಶೇ.70 ರಷ್ಟು ಗ್ರಾಮ ಬೆಂಕಿಗಾಹುತಿಯಾಗಿದೆ. ಮನೆಗಳಿಗೆ ಬೆಂಕಿ ಬಿದ್ದಿದ್ದರಿಂದ 25ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಿವೆ.

    ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದ ಆಗಮಿಸಿರುವ 10ಕ್ಕೂ ಹೆಚ್ಚು ಅಗ್ನಿ ಶಾಮಕದಳದ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಬೆಂಕಿ ಹತೋಟಿಗೆ ಬರುತ್ತಿಲ್ಲ. ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ.

    ಶನಿವಾರ ರಾತ್ರಿ ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಹೊರಬಂದು ರಸ್ತೆಬದಿಯಲ್ಲಿ ಕುಳಿತಿದ್ದರು. ಸದ್ಯ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಕುಟುಂಬಗಳಿಗೆ ತಾತ್ಕಾಲಿಕ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.

    https://youtu.be/p6_BxagEP_g