Tag: Hanagal

  • ಉಪಚುನಾವಣೆ, ಕಾಂಗ್ರೆಸ್ ಟಿಕೆಟ್‍ಗಾಗಿ ಭಾರೀ ಪೈಪೋಟಿ

    ಉಪಚುನಾವಣೆ, ಕಾಂಗ್ರೆಸ್ ಟಿಕೆಟ್‍ಗಾಗಿ ಭಾರೀ ಪೈಪೋಟಿ

    ಹಾವೇರಿ: ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.

    ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ಹಾನಗಲ್ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆಯ ಟಿಕೆಟ್‍ಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಹಾನಗಲ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ ಸೇರಿದಂತೆ ಇನ್ನು ಆನೇಕರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಧ್ಯಕ್ಷರಾದ ಸಲೀಂ ಅಹಮ್ಮದ್, ಧ್ರುವನಾರಾಯಣರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ, ಪಂಚಮಸಾಲಿ ಸಮುದಾಯದಕ್ಕೆ ಟಿಕೆಟ್ ಕೊಡಿಸುವಂತೆ ಶ್ರೀಗಳ ಮೂಲಕ ಒತ್ತಡ

    ಸ್ಥಳೀಯರಿಗೆ ಟಿಕೆಟ್ ನೀಡಬೇಕು ನಾವು ಗಂಡಸರೇ, ಟಿಕೆಟ್ ನೀಡದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕೈ ನಾಯಕರಿಗೆ ಬಹಿರಂಗವಾಗಿಯೇ ಎಚ್ಚರಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲೆ ಹಾವೇರಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಲೀಂ ಅಹಮದ್, ಹಾಗೂ ಧ್ರುವನಾರಾಯಣರನ್ನು ಭೇಟಿ ಮಾಡಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ- ಟಿಕೆಟ್‍ಗಾಗಿ ಬಿಜೆಪಿ, ಕಾಂಗ್ರೆಸ್ ಆಕಾಂಕ್ಷಿಗಳು ತೆರೆಮರೆಯ ಕಸರತ್ತು

    ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕಂಪದ ಅಲೆಯಿದ್ದು, ಉದಾಸಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡುತ್ತದೆ ಎಂಬ ವಿಷಯ ದಟ್ಟವಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ ಹಾನಗಲ್ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಗೆಲ್ಲುವ ಕುದರೆಗೆ ಮಣೆಹಾಕಲು ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ತೀವ್ರ ಕೂತುಹಲ ಕೇರಳಿಸಿದೆ.

  • ಉಪಚುನಾವಣೆ ಟಿಕೆಟ್‍ಗೆ ಲಾಬಿ – ಮನೋಹರ್ ತಹಶೀಲ್ದಾರ್ ಭೇಟಿಗೆ ಒಪ್ಪದ ಸಿದ್ದರಾಮಯ್ಯ

    ಉಪಚುನಾವಣೆ ಟಿಕೆಟ್‍ಗೆ ಲಾಬಿ – ಮನೋಹರ್ ತಹಶೀಲ್ದಾರ್ ಭೇಟಿಗೆ ಒಪ್ಪದ ಸಿದ್ದರಾಮಯ್ಯ

    – ಆರ್‍ಎಸ್‍ಎಸ್ ಜೊತೆ ಸಿಎಂ ಬೊಮ್ಮಾಯಿ ಚರ್ಚೆ

    ಬೆಂಗಳೂರು: ಹಾನಗಲ್, ಸಿಂದಗಿ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್‍ನಲ್ಲಿ ಟಿಕೆಟ್ ಲಾಬಿ ಜೋರಾಗಿದೆ. ಕಾಂಗ್ರೆಸ್‍ನಲ್ಲಿ ಟಿಕೆಟ್ ಘೋಷಣೆಗೂ ಮೊದಲೇ ಬಂಡಾಯದ ಕೂಗು ಎದ್ದಿದೆ.

    ಇಂದು ಬೆಳಗ್ಗೆ ತಮ್ಮ ಮನೆಗೆ ಬಂದ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ರನ್ನು ಸಿದ್ದರಾಮಯ್ಯ ಭೇಟಿ ಮಾಡದೇ ವಾಪಸ್ ಕಳಿಸಿದ್ದಾರೆ. ಇದರಿಂದ ಫುಲ್ ಗರಂ ಆಗಿರುವ ಮನೋಹರ್ ತಹಶೀಲ್ದಾರ್, ನಮ್ಮ ಕ್ಷೇತ್ರದ ಯಾರಿಗೆ ಟಿಕೆಟ್ ಕೊಟ್ರೂ ಓಕೆ.. ಆದರೆ ಹೊರಗಿನ ಶ್ರೀನಿವಾಸ್ ಮಾನೆಗೆ ಟಿಕೆಟ್ ಕೊಟ್ರೆ ಮಾತ್ರ ಸುಮ್ಮನಿರಲ್ಲ. ಯಾಕೆ ನಮ್ಮ ಕ್ಷೇತ್ರದಲ್ಲಿ ನಾವು ಗಂಡಸರಲ್ವಾ ಎಂದು ಪಕ್ಷದ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

    ಈ ಮಧ್ಯೆ ಇಂದು ಕೇಶವಕೃಪಾಗೆ ಭೇಟಿ ನೀಡಿದ್ದ ಸಿಎಂ, ಉಪಚುನಾವಣೆ ಸಂಬಂಧ ಸಂಘಪರಿವಾರದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಕಳೆದ ರಾತ್ರಿ ಮುಖ್ಯಮಂತ್ರಿಗಳನ್ನು ಸಂಸದ ಶಿವಕುಮಾರ್ ಉದಾಸಿ ಭೇಟಿ ಮಾಡಿ ಚರ್ಚೆ ನಡೆಸಿದ್ರು. ಸಿಂದಗಿ ಟಿಕೆಟ್ ಆಕಾಂಕ್ಷಿ ರಮೇಶ್ ಭೂಸನೂರು, ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಇನ್ನು 2ದಿನದಲ್ಲಿ ಸಂಭಾವ್ಯರ ಪಟ್ಟಿ ಹೈಕಮಾಂಡ್‍ಗೆ ಕಳಿಸಿಕೊಡ್ತೀವಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.

  • ಹಾನಗಲ್ ಉಪಚುನಾವಣೆ- ಟಿಕೆಟ್‍ಗಾಗಿ ಬಿಜೆಪಿ, ಕಾಂಗ್ರೆಸ್ ಆಕಾಂಕ್ಷಿಗಳು ತೆರೆಮರೆಯ ಕಸರತ್ತು

    ಹಾನಗಲ್ ಉಪಚುನಾವಣೆ- ಟಿಕೆಟ್‍ಗಾಗಿ ಬಿಜೆಪಿ, ಕಾಂಗ್ರೆಸ್ ಆಕಾಂಕ್ಷಿಗಳು ತೆರೆಮರೆಯ ಕಸರತ್ತು

    ಹಾವೇರಿ: ಮಾಜಿ ಸಚಿವ ಹಾಗೂ ಶಾಸಕ ಸಿ.ಎಂ.ಉದಾಸಿ ನಿಧನದಿಂದ ತೆರವಾಗಿದ್ದ ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದೆ. ಇದರ ಬೆನ್ನಲ್ಲೇ ಇದೀಗ ಎರಡೂ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ತೆರೆಮರೆಯ ಪ್ರಯತ್ನ ನಡೆದಿದ್ದಾರೆ.

    ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಟಿಕೆಟ್‍ಗಾಗಿ ತೆರೆಮರೆಯಲ್ಲೇ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ನಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ, ಪ್ರಕಾಶಗೌಡ ಪಾಟೀಲ್, ಸೋಮಶೇಖರ ಕೋತಂಬ್ರಿ, ಬಿ.ಕೆ.ಮೋಹನಕುಮಾರ್ ಸೇರಿದಂತೆ ಹಲವರು ಟಿಕೆಟ್‍ಗಾಗಿ ಕಸರತ್ತು ನಡೆಸಿದ್ದಾರೆ. ಇದನ್ನೂ ಓದಿ: ಅವಧಿಗೂ ಮುನ್ನವೇ ಪೂರ್ಣಗೊಳ್ಳಲಿದೆ ಏಷ್ಯಾದ ಉದ್ದ ಸುರಂಗ ರಸ್ತೆ

    ಬಿಜೆಪಿ ಪಕ್ಷದಲ್ಲಿಯೂ ಸಂಸದ ಶಿವಕುಮಾರ ಉದಾಸಿ ಪತ್ನಿ ರೇವತಿ ಉದಾಸಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಈಳಿಗೇರ, ಮಾಜಿ ಶಾಸಕ ಶಿವರಾಜ ಸಜ್ಜನ ಸೇರಿದಂತೆ ಹಲವರು ಟಿಕೆಟ್ ಗಾಗಿ ತಮ್ಮ ನಾಯಕರ ಮೂಲಕ ಕಸರತ್ತು ನಡೆಸಿದ್ದಾರೆ. ಈಗಾಗಲೇ ಜೆಡಿಎಸ್ ತಮ್ಮ ಅಭ್ಯರ್ಥಿಯಾಗಿ ನಿಯಾಜ್ ಶೇಖ್ ಹೆಸರು ಘೋಷಣೆ ಮಾಡಿದೆ. ಆದರೆ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ಸಿಗುತ್ತೆ ಎಂಬುದನ್ನು ಕಾದುನೋಡಬೇಕಾಗಿದೆ.

  • ಹಾನಗಲ್, ಸಿಂಧಗಿ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ನಿಗದಿ

    ಹಾನಗಲ್, ಸಿಂಧಗಿ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ನಿಗದಿ

    ಬೆಂಗಳೂರು: ಹಾನಗಲ್, ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ನಿಗದಿಯಾಗಿದೆ.

    ಅಕ್ಟೋಬರ್ 30ಕ್ಕೆ ಮತದಾನ ನಡೆದರೆ ನವೆಂಬರ್ 2ಕ್ಕೆ ಮತ ಎಣಿಕೆ ನಡೆಯಲಿದೆ. ಹಾವೇರಿಯ ಹಾನಗಲ್ ಸಿಎಂ ಉದಾಸಿ ನಿಧನದಿಂದ ತೆರವಾಗಿದ್ದರೆ, ವಿಜಯಪುರದ ಸಿಂಧಗಿ ಎಂಸಿ ಮನಗೂಳಿ ನಿಧನದಿಂದ ತೆರವಾಗಿದೆ.  ಇದನ್ನೂ ಓದಿ:  ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ಯಾವ ದಿನ ಏನು?
    ಅಕ್ಟೋಬರ್ 1 ಅಧಿಸೂಚನೆ ಪ್ರಕಟವಾಗಲಿದ್ದು, ಅಕ್ಟೋಬರ್ 8 ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ನಾಮಪತ್ರ ಪರಿಶೀಲನೆ ಅಕ್ಟೋಬರ್ 11ರಿಂದ ಆರಂಭವಾದರೆ ನಾಮಪತ್ರ ವಾಪಸ್ ಗೆ ಅಕ್ಟೋಬರ್ 13 ಕೊನೆಯ ದಿನಾಂಕವಾಗಿದೆ. ಇದನ್ನೂ ಓದಿ: ಕೋವಿಡ್ 19 ಬೂಸ್ಟರ್ ಡೋಸ್ ಪಡೆದ ಜೋ ಬೈಡನ್

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಸಿಂದಗಿಯಲ್ಲಿ ಕಳೆದ ಬಾರಿ ಜೆಡಿಎಸ್ ಜಯಗಳಿಸಿತ್ತು, ಈ ಸಲ ಕಾಂಗ್ರೆಸ್ ವ್ಯೂಹ ರಚಿಸುತ್ತಿದೆ. ಇದನ್ನೂ ಓದಿ: ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್‌ಗಳು

  • ಬಸ್- ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

    ಬಸ್- ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

    ಹಾವೇರಿ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ, ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ನಡೆದಿದೆ.

    ಮೃತ ಬೈಕ್ ಸವಾರನನ್ನು ಗಜೇಂದ್ರ ಪೂಜಾರ (25) ವರ್ಷ ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಕರವಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. ಬಸ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಜೇಂದ್ರ ಗಂಭೀರವಾಗಿ ಗಾಯಗೊಂಡು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನು ಬದುಕಿಸಲು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ತಲೆ ಹಾಗೂ ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಬೈಕ್ ಸವಾರ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾನೆ. ಇದನ್ನೂ ಓದಿ: ನಾನಿರುವಾಗ ಪೊಲೀಸರು, ಕೋರ್ಟ್‍ಗೆ ಹೆದರಿಬೇಡಿ: ತ್ರಿಪುರಾ ಸಿಎಂ

    ವಿಷಯ ತಿಳಿಯುತ್ತಿದ್ದಂತೆ ಘಟನ ಸ್ಥಳಕ್ಕೆ ಹಾನಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಆಗೋ ಹುಮ್ಮಸ್ಸಲ್ಲಿ ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮಾತಾಡ್ತಿದ್ದಾರೆ: ಶಿವರಾಮ್ ಹೆಬ್ಬಾರ್

  • ಹಾನಗಲ್ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಜೆಡಿಎಸ್

    ಹಾನಗಲ್ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಜೆಡಿಎಸ್

    ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಿಯಾಜ್ ಶೇಖ್ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.

    ನಿಯಾಜ್ ಶೇಖ್ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಪಕ್ಷದ ಬಾವುಟ ನೀಡಿ ನಿಯಾಜ್ ಶೇಖ್ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಯ್ಯದ್ ಅಲ್ತಾಫ್ ಉಪಸ್ಥಿತರಿದ್ದರು. ನಿಯಾಜ್ ಶೇಖ್ ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

    ಕಳೆದ ವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಲಿ ಹಾನಗಲ್ ವಿಧಾನಸಬಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಸಿ.ಎಂ.ಉದಾಸಿ ಅವರು ನಿಧಾನರಾದ ಹಿನ್ನೆಲೆಯಲ್ಲಿ ತೆರವಾಗಿರುವ ಈ ಕ್ಷೇತ್ರಕ್ಕೆ ಉಪಚುನಾವಣೆ ಸದ್ಯದಲ್ಲೇ ನಡೆಯಲಿದ್ದು, ಜೆಡಿಎಸ್‍ನಿಂದ ನಿಯಾಜ್ ಶೇಖ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ.

  • ಗುರು ಇಲ್ಲದೇ ಬೆಳೆದ ರಾಜಕೀಯ ನಾಯಕ, ಹಾನಗಲ್ ತಾಲೂಕಿನ ಅಭಿವೃದ್ಧಿಯ ಹರಿಕಾರ

    ಗುರು ಇಲ್ಲದೇ ಬೆಳೆದ ರಾಜಕೀಯ ನಾಯಕ, ಹಾನಗಲ್ ತಾಲೂಕಿನ ಅಭಿವೃದ್ಧಿಯ ಹರಿಕಾರ

    – ಹಾನಗಲ್ ಶಾಸಕ ಸಿಎಂ ಉದಾಸಿ ನಿಧನ
    – ಹಾವೇರಿ ಜಿಲ್ಲೆ ರಚನೆಯಲ್ಲಿ ಪ್ರಮುಖ ಪಾತ್ರ

    ಬೆಂಗಳೂರು: ಬಿಜೆಪಿ ಹಿರಿಯ ಶಾಸಕ, ಮಾಜಿ ಸಚಿವ ಸಿ.ಎಂ.ಉದಾಸಿ ಇವತ್ತು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇವತ್ತು ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ. 84 ವರ್ಷದ ಉದಾಸಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

    ಅಣ್ಣಾವ್ರು ಎಂದೇ ಖ್ಯಾತರಾದ ಮಾಜಿ ಸಚಿವರು, ಶಾಸಕ ಸಿ.ಎಂ.ಉದಾಸಿ ಅವರು ತಮ್ಮ ಸುದೀರ್ಘ ರಾಜಕಾರಣದಲ್ಲಿ ಹಾಲವಾರು ಏಳು ಬೀಳುಗಳನ್ನು ಕಂಡವರು. ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದ ಅವರು ರಾಜ್ಯದ ರಸ್ತೆಗಳಿಗೆ ಹೊಸ ಕಾಯಕಲ್ಪ ನೀಡಿದವರು. ರಸ್ತೆಗಳು ಅಭಿವೃದ್ಧಿ ಆದರೆ ರಾಜ್ಯ ಅಭಿವೃದ್ಧಿಯಾದಂತೆ ಎಂಬ ತತ್ವದಡಿ ಕಾರ್ಯ ನಿರ್ವಹಿಸಿದ್ದ ಅವರು ಗ್ರಾಮೀಣಾಭಿವೃದ್ಧಿಯ ರೂವಾರಿ, ಜಿಲ್ಲೆಯ ಹಿರಿಯ ರಾಜಕಾರಣಿ, ರೈತರ ಕಣ್ಮಣಿ ಹಾಗೂ ಹಾನಗಲ್ ತಾಲೂಕಿನ ಅಭಿವೃದ್ಧಿಯ ಹರಿಕಾರರು ಹೌದು.

    ರಾಜಕೀಯ ಜೀವನದಲ್ಲಿ ರಾಜಕೀಯ ಗುರು ಇಲ್ಲದೇ ಸತತ ಹೋರಾಟ ಹಾಗೂ ನಾಯಕತ್ವದ ಗುಣಗಳಿಂದ ಪರಸಭಾ ಸದಸ್ಯರಾಗಿ, ಪುರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ ಕೆಲಸ ನಿರ್ವಹಿಸಿ ರಾಜ್ಯಾದ್ಯಂತ ಹೆಸರು ಮಾಡಿದ ಸಿ.ಎಂ.ಉದಾಸಿ ಅವರದು ಒಂದು ವಿಶಿಷ್ಟ ವ್ಯಕ್ತಿತ್ವ.

    ಶರಣ ಸಾವಿತ್ರಮ್ಮಮಹಾಲಿಂಗಪ್ಪನವರ ಪುತ್ರರಾಗಿ ಫೆ 2. 1937ರಲ್ಲಿ ಜನಿಸಿದ ಚನ್ನಬಸಪ್ಪ ಉದಾಸಿ ಅವರು ಹಾನಗಲ್ಲ ತಾಲೂಕಿನಲ್ಲಿ ವಿದ್ಯಾಭ್ಯಾಸ ಆರಂಭಿಸಿ ಆರ್ಥಿಕ ತೊಂದರೆಯಿಂದ ಹಾವೇರಿಗೆ ತೆರಳಿ ಹಾವೇರಿಯಲ್ಲಿ ವಾರದ ಮನೆಯ ಊಟ ಮಾಡಿ, ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬಡತನದಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾದರು. ಮುಂದೆ ವ್ಯಾಪಾರ ಮತ್ತು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಈ ಎರಡೂ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಮಾಡಿದರು. ಇದನ್ನೂ ಓದಿ: ಸಿಎಂ ಉದಾಸಿ ನಿಧನಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಾಪ

    ವಿದ್ಯಾಭ್ಯಾಸ ಮೊಟಕುಗೊಳಿಸಿ ವ್ಯಾಪಾರ ವೃತ್ತಿ ಆರಂಭಿಸಿದ ಇವರು ಹಗಲಿರುಳು ವ್ಯಾಪಾರ ತೊಡಗಿದ್ದ ಉದಾಸಿಯವರಿಗೆ ರಾಜಕೀಯ ಮಾತ್ರ ದೂರ ಉಳಿದಿತ್ತು. ಆದರೆ 1974ರಲ್ಲಿ ಹಿರಿಯರ ಒತ್ತಾಸೆಗೆ ಮಣಿದು ಪುರಸಭೆಗೆ ಸ್ಪರ್ಧಿಸಿ ಪ್ರಥಮ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಪುನಃ 1980ರಲ್ಲಿ ಅಧ್ಯಕ್ಷ ಅವಧಿ ಮುಗಿದ ನಂತರ ವ್ಯಾಪಾರದಲ್ಲಿ ಮುಂದುವರೆದ ಇವರಿಗೆ ತಾಲೂಕಿನ ರೈತರು, ಹಾಗೂ ರಾಜಕೀಯ ಮುಖಂಡರು ಬೆನ್ನು ಬಿಡದೇ ಒತ್ತಾಯ ಮಾಡಿದ್ದರಿಂದಾಗಿ 1983ರಲ್ಲಿ ಪಕ್ಷೇತರರ ಅಭ್ಯರ್ಥಿಯಾಗಿ ಹಾನಗಲ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದರು. ನಂತರ ರಾಮಕೃಷ್ಣ ಹೆಗಡೆ ಅವರ ಸರಕಾರದಲ್ಲಿ ಉದಾಸಿಯವರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ನಿಗಮವನ್ನು ಲಾಭದಲ್ಲಿ ತಂದರು. 1985ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು.

    ಸಚಿವರಾದ ನಂತರ ಶಿಕ್ಷಣ ಕ್ಷೇತ್ರಕ್ಕೆ ಸೇರಿದಂತೆ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಅವರು, ತಾಲೂಕಿನಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜ್, ಮೊರಾರ್ಜಿ ವಸತಿ ಶಾಲೆ, ಪಾಲಿಟೆಕ್ನಿಕ್, ಪದವಿ ಕಾಲೇಜ್ ಹೀಗೆ ಹಲವಾರು ಕಾಲೇಜುಗಳನ್ನು ಆರಂಭಿಸುವ ಮೂಲಕ ಶಿಕ್ಷಣ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಉದಾಸಿಯವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಹಿಂದುಳಿದ ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

    ಉದಾಸಿಯವರು ರೈತರ, ತಾಲೂಕಿನ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ತಾಲೂಕಿನ ಅಭಿವೃದ್ಧಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಪ್ರತಿವರ್ಷ ಬೆಳೆಸಾಲ, ಬೆಳೆವಿಮಾ ಪರಿಹಾರ ಒದಗಿಸಿಕೊಡುವಲ್ಲಿ ವಿಶೇಷ ಕಾಳಜಿ ವಹಿಸಿದರು. ನಂತರದ 1989ರ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅವಿಭವಿಸಿದರೂ ಅಂಜದೇ ತಮ್ಮ ಜನಪರ ಕಾರ್ಯ ಶ್ರಮಿಸುತ್ತಿದ್ದಾರೆ ಗಳನ್ನು ಮುಂದುವರೆಸಿದರು. ನಂತರ 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದಿಂದ ಚುನಾಯಿತರಾಗಿ ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡರು. ಈ ಅವಧಿಯಲ್ಲಿಯೇ ತಾಲೂಕಿನ ಅನೇಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರು. ನಂತರ 1999ರ ಚುನಾವಣೆಯಲ್ಲಿ ಸೋಲುಂಡ ಅವರು, ಬದಲಾದ ರಾಜಕೀಯ ಸ್ಥಿತಿಗತಿಯಲ್ಲಿ ಜನತಾದಳ ತೊರೆದು, ಭಾರತೀಯ ಜನತಾ ಪಕ್ಷ ಸೇರಿ ಜಿಲ್ಲೆಯಲ್ಲಿರುವ ತಮ್ಮ ಬೆಂಬಲಿಗರನ್ನು ಕೂಡಾ ಭಾರತೀಯ ಜನತಾ ಪಕ್ಷಕ್ಕೆ ಕರೆತಂದು, 2004ರ ಚುನಾವಣೆಯಲ್ಲಿ ತಾವೂ ಆಯ್ಕೆಯಾಗುವ ಮೂಲಕ ತಮ್ಮ ಬೆಂಬಲಿಗ ಯುವ ನಾಯಕರಾದ ಶಿವರಾಜ ಸಜ್ಜನರ, ನೆಹರೂ ಓಲೇಕಾರ, ಜಿ.ಶಿವಣ್ಣ ಅವರನ್ನು ಬಿಜೆಪಿಗೆ ಕರೆತಂದು ಟಿಕೆಟ್ ಕೊಡಿಸಿ ಶಾಸಕರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

    ನಂತರ ಬಿಜೆಪಿ-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದರು. ನಂತರ 2008ರ ಚುನಾವಣೆಯಲ್ಲಿಯು ಸಹ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ 5 ಬಿಜೆಪಿ ಶಾಸಕರು ಆಯ್ಕೆ ಯಾಗಲು ಶ್ರಮಿಸಿದರು.

    2013ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದರು. ಇವರ ಹಾಗೂ ಇವರ ಎದುರಾಳಿ ಮನೋಹರ ತಹಶೀಲ್ದಾರ ನಡುವೆ ಸೋಲು-ಗೆಲುವಿನ ಜುಗಲ್ ಬಂದಿ ನಡೆದುಕೊಂಡು ಬಂದಿತ್ತು. 2018 ವಿಧಾನಸಭಾ ಚುನಾವಣೆಯಲ್ಲಿ ಉದಾಸಿ ಅವರು ಎದರಾಳಿ ಬದಲಾಗಿದ್ದರು. ಶ್ರೀನಿವಾಸ ಮಾನೆ ಅವರು ಸಿ.ಎಂ.ಉದಾಸಿ ಅವರ ಎದುರಾಳಿಯಾಗಿ ತೀವೃ ಪೈಪೋಟಿ ಡಿದ್ದರು. ಕೊನೆಯ ಕ್ಷಣದಲ್ಲಿ ಸಿ.ಎಂ.ಉದಾಸಿ ಅವರು ಗೆಲವು ದಾಖಲಿಸಿದ್ದರು. ಸಿ.ಎಂ.ಉದಾಸಿ ಅವರ ಪುತ್ರ ಶಿವಕುಮಾರ ಉದಾಸಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವು ದಾಖಲಿಸುವ ಮೂಲಕ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಹಾವೇರಿ ಜಿಲ್ಲೆಯ ರಚನೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಉದಾಸಿ ಅವರು ಹಾಗೂ ಪರಿಸರ ಮತ್ತು ಬಂಧಿಖಾನೆ ಸಚಿವರಾಗಿದ್ದ ಬಸವರಾಜ ಶಿವಣ್ಣನವರ ಇಬ್ಬರು ಸೇರಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಹಾವೇರಿ ಜಿಲ್ಲೆ ಘೋಷಿಸುವಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿದೆ. ಸಿ.ಎಂ. ಉದಾಸಿ ಅವರು ಜಿಲ್ಲೆಯ ಹಾಗೂ ಹಾನಗಲ್ಲ ತಾಲೂಕಿನ ಜನತೆಯ ನೆಚ್ಚಿನ ನಾಯಕರಾಗಿ, ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಸದಾ ಕ್ರಿಯಾಶೀಲರಾಗಿದ್ದ ಉದಾಸಿ ಇತ್ತೀಚಿನ ದಿನಗಳಲ್ಲಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.

  • ಹಾನಗಲ್‍ನಿಂದ ಪಾದಯಾತ್ರೆಯಲ್ಲಿ ಬಂದ 76 ವರ್ಷದ ಭಕ್ತ

    ಹಾನಗಲ್‍ನಿಂದ ಪಾದಯಾತ್ರೆಯಲ್ಲಿ ಬಂದ 76 ವರ್ಷದ ಭಕ್ತ

    ಉಜಿರೆ: ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ 76 ವರ್ಷದ ಮಾಲತೇಶಗೊರಪಜ್ಜ ಪಾದಯಾತ್ರೆ ಮೂಲಕ ಶನಿವಾರ ಧರ್ಮಸ್ಥಳ ತಲುಪಿದ್ದಾರೆ. ಕಳೆದ 40 ವರ್ಷಗಳಿಂದ ಪ್ರತಿವರ್ಷ ಲಕ್ಷ ದೀಪೋತ್ಸವಕ್ಕೆ ಧರ್ಮಸ್ಥಳಕ್ಕೆ ಅವರು ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ.

    ನವೆಂಬರ್ 17 ರಂದು ಅವರು ಹಾನಗಲ್‍ನಿಂದ ಪಾದಯಾತ್ರೆ ಪ್ರಾರಂಭಿಸಿದ್ದರು. ಪಾದಯಾತ್ರೆಯಲ್ಲಿ ತನಗೆ ಎಲ್ಲರೂ ಸಹಕಾರ ನೀಡುತ್ತಾರೆ. ಪಾದಯಾತ್ರೆಯಿಂದ ತನ್ನ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗಿದೆ. ಮಾನಸಿಕ ನೆಮ್ಮದಿ, ಶಾಂತಿ, ಸಂತೋಷ ಸಿಕ್ಕಿದೆ ಎಂದು ಅಭಿಮಾನದಿಂದ ಹೇಳುತ್ತಾರೆ ಮಾಲತೇಶಗೊರಪಜ್ಜ.

     

  • ಮನೆ ಬುನಾದಿ ತೆಗೆಯುತ್ತಿದ್ದಾಗ 169 ಬೆಳ್ಳಿ, 2 ಬಂಗಾರ ನಾಣ್ಯಗಳು ಪತ್ತೆ

    ಮನೆ ಬುನಾದಿ ತೆಗೆಯುತ್ತಿದ್ದಾಗ 169 ಬೆಳ್ಳಿ, 2 ಬಂಗಾರ ನಾಣ್ಯಗಳು ಪತ್ತೆ

    ಹಾವೇರಿ: ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ಮನೆಯೊಂದರ ನಿರ್ಮಾಣಕ್ಕಾಗಿ ಬುನಾದಿ ತೆಗೆಯುತ್ತಿದ್ದಾಗ ಬೆಳ್ಳಿ ಹಾಗೂ ಬಂಗಾರದ ನಾಣ್ಯಗಳು ಪತ್ತೆಯಾಗಿವೆ.

    ಗ್ರಾಮದ ಲಕ್ಷ್ಮವ್ವ ಕುರುಬರ ಎಂಬವರ ಮನೆ ಬುನಾದಿ ತೆಗೆಯುತ್ತಿದ್ದಾಗ ನಾಣ್ಯಗಳು ಪತ್ತೆಯಾಗಿವೆ. 169 ಬೆಳ್ಳಿ ನಾಣ್ಯಗಳು ಹಾಗೂ 2 ಬಂಗಾರದ ನಾಣ್ಯಗಳು ಸೇರಿದಂತೆ 6 ಬೆಳ್ಳಿಯ ಮುದ್ರೆಗಳು ಪತ್ತೆಯಾಗಿವೆ. ಮಣ್ಣಿನ ಮಡಿಕೆಯಲ್ಲಿ ನಾಣ್ಯಗಳು ಮತ್ತು ಮುದ್ರೆಗಳು ದೊರೆತಿವೆ.

    1904, 1908 ಇಸ್ವಿ ಇರುವ ನಾಣ್ಯಗಳು ಇವತ್ತು ಲಭ್ಯವಾಗಿವೆ. ಕಳೆದ ಎರಡು ತಿಂಗಳ ಹಿಂದೆ ಅತಿವೃಷ್ಠಿ ಮತ್ತು ವರದಾ ನದಿ ನೀರಿನಿಂದ ಮನೆ ಬಿದ್ದಿದ್ದರಿಂದ ಹೊಸದಾಗಿ ಮನೆ ನಿರ್ಮಿಸಲು ಬುನಾದಿ ತೆಗೆಯುತ್ತಿದ್ದ ವೇಳೆ ನಾಣ್ಯಗಳು ಹಾಗೂ ಮುದ್ರೆಗಳು ಪತ್ತೆಯಾಗಿವೆ. ಅವುಗಳನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಒಂದು ಜಮೀನಿನಲ್ಲಿ 18 ವೆರೈಟಿ ಸಾವಯವ ಭತ್ತ: ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ರೈತ

    ಒಂದು ಜಮೀನಿನಲ್ಲಿ 18 ವೆರೈಟಿ ಸಾವಯವ ಭತ್ತ: ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ರೈತ

    ಹಾವೇರಿ: ಒಂದು ಜಮೀನಿನಲ್ಲಿ ಅಬ್ಬಬ್ಬಾ ಅಂದ್ರೆ ಎರಡ್ಮೂರು, ಮೂರ್ನಾಲ್ಕು ವಿವಿಧ ತಳಿಯ ಭತ್ತ ಬೆಳೆಯಬಹುದು. ಆದರೆ ಹಾನಗಲ್ ತಾಲೂಕಿನ ಕಾಮನಹಳ್ಳಿ ಗ್ರಾಮದ ಮುತ್ತಣ್ಣ ಪೂಜಾರ ಅವರು ಜಮೀನಿನಲ್ಲಿ 18 ತಳಿಯ ಭತ್ತ ಬೆಳೆದಿದ್ದಾರೆ.

    ಮುತ್ತಣ್ಣ ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನವರು. ಕುರಿಗಾಯಿ ಆಗಿದ್ದ ಮುತ್ತಣ್ಣ, ಕುರಿ ಕಾಯುತ್ತಾ ಬಂದು ಕೆಲವು ವರ್ಷಗಳ ಹಿಂದೆ ಕಾಮನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನು ಖರೀದಿಸಿದ್ದಾರೆ. ಬಳಿಕ ಸಾವಯವ ಕೃಷಿ ಮೂಲಕ ಅದ್ಭುತವಾದ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ಮುತ್ತಣ್ಣ ಅವರು ತಮ್ಮ ಎಂಟು ಎಕರೆ ಜಮೀನಿನಲ್ಲಿ 20 ಬಗೆಯ ಭತ್ತ ಬೆಳೆದಿದ್ದಾನೆ. ಎರಡು ತಳಿಗಳನ್ನು ಹೊರತುಪಡಿಸಿ ಹದಿನೆಂಟು ತಳಿಯ ಭತ್ತ ದೇಶೀಯ ತಳಿಯ ಭತ್ತಗಳಾಗಿವೆ. ಬಹುತೇಕ ತಳಿಯ ಭತ್ತಗಳು ಈಗಾಗಲೇ ಅವಸಾನದ ಅಂಚಿನಲ್ಲಿವೆ. ಅಂತಹ ಭತ್ತಗಳನ್ನ ಬೆಳೆದು ರೈತರಿಗೆ ನೀಡುವುದರ ಜೊತೆಗೆ ದೇಶೀಯ ತಳಿಯ ಭತ್ತ ಉಳಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗದಿಂದ ಬಗೆಬಗೆಯ ತಳಿಯ ಭತ್ತದ ಬೀಜಗಳನ್ನ ತಂದು ಬಿತ್ತನೆ ಮಾಡಿದ್ದರು. ಈಗ ಇಪ್ಪತ್ತು ತಳಿಯ ಭತ್ತದ ಫಸಲು ಭರಪೂರ ಬೆಳೆದು ನಿಂತಿದೆ.

    ಮೈಸೂರು ಮಲ್ಲಿಗೆ, ಮ್ಯಾಜಿಕ್, ಸಿದ್ದಸಣ್ಣ ಹೀಗೆ ವಿವಿಧ ಹೆಸರಿನ ಭತ್ತದ ಫಸಲು ಜಮೀನಿನ ತುಂಬ ಕಂಪು ಸೂಸುತ್ತಿದೆ. ಕೆಲವು ತಳಿಯ ಭತ್ತಗಳಂತೂ ಆಳೆತ್ತರಕ್ಕೆ ಬೆಳೆದು ನಿಂತಿದೆ. ಕಡಿಮೆ ಪ್ರಮಾಣದಲ್ಲಿ ದೊರೆತಿದ್ದ ಎರಡು ಹೈಬ್ರಿಡ್ ತಳಿಯ ಬೀಜ ಹೊರತುಪಡಿಸಿ ಹದಿನೆಂಟು ತಳಿಯ ಬೀಜಗಳು ಈಗ ಸಾಕಷ್ಟು ಪ್ರಮಾಣದ ಜಮೀನಿಗೆ ಬಿತ್ತನೆಗೆ ಸಾಕಾಗುವಷ್ಟು ಬೆಳೆದಿವೆ. ಬಹುತೇಕ ದೇಶೀಯ ತಳಿಯ ಭತ್ತಗಳು ಯಾವುದೇ ರೋಗ, ಸೋಂಕಿಲ್ಲದಂತೆ ಬೆಳೆದು ನಿಂತಿವೆ. ಅಷ್ಟಾಗಿ ಶಾಲೆಯನ್ನು ಕಲಿಯದ ಮುತ್ತಣ್ಣ ಕುರಿಗಾಯಿಯಾಗಿ ಬಂದು ನೆಲೆ ನಿಂತು ಈಗ ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಯಶಸ್ಸು ಕಾಣುತ್ತಿದ್ದಾರೆ. ಮುತ್ತಣ್ಣ ಅವರ ಸಾವಯವ ಕೃಷಿ ಮತ್ತು ಕೃಷಿಯಲ್ಲಿನ ವಿಭಿನ್ನ ಪ್ರಯತ್ನಗಳಿಗೆ ಕೃಷಿ ಇಲಾಖೆ ಮತ್ತು ಸ್ಥಳೀಯ ರೈತರು ಸಾಥ್ ನೀಡುತ್ತಿದ್ದಾರೆ.

    ಒಂದು ಜಮೀನಿನಲ್ಲಿ ಒಂದು ತಳಿಯ ಭತ್ತ ಬೆಳೆಯುವುದಕ್ಕೆ ರೈತರು ಇನ್ನಿಲ್ಲದ ಹರಸಾಹಸ ಪಡುತ್ತಾರೆ. ಅದರಲ್ಲೂ ದೇಶೀಯ ತಳಿಯ ಭತ್ತದ ಬೆಳೆಯುವುದು ಅಂದ್ರೆ ಸಾಮಾನ್ಯವಲ್ಲ. ಆದರೂ ಇಪ್ಪತ್ತು ತಳಿಯ ಭತ್ತದ ಬೆಳೆದು ರೈತ ಮುತ್ತಣ್ಣ ಅವರು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.