Tag: Hanagal

  • ಸಿಂದಗಿ, ಹಾನಗಲ್ ಉಪಚುನಾವಣಾ ಕದನ – ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ

    ಸಿಂದಗಿ, ಹಾನಗಲ್ ಉಪಚುನಾವಣಾ ಕದನ – ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ

    ಬೆಂಗಳೂರು: ಇಂದು ಸಂಜೆ ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಕದನದ ಪ್ರಚಾರಕ್ಕೆ ಅಂತಿಮ ತೆರೆ ಬೀಳಲಿದೆ. ಜೊತೆಗೆ ಸಂಜೆ ರಾಜಕೀಯ ನಾಯಕರ ಮಧ್ಯೆ ಕೊನೆಯ ಮಾತಿನ ಸಮರ ನಡೆಯಲಿದೆ.

    ಮಂಗಳವಾರ ಸಿಎಂ ಕಂಬಳಿ ಹಾಕಿದ್ದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಇಡೀ ಬಿಜೆಪಿ ನಾಯಕರೇ ತಿರುಗಿ ಬಿದ್ದಿದ್ರು. ಅವನು ಕುರುಬರಲ್ಲಿ ಹುಟ್ಟಿದ್ದನಾ ಎಂಬುದನ್ನೇ ಆಯುಧ ಮಾಡಿಕೊಂಡ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೈನಾರಿಟಿ ವೋಟಿಗಾಗಿ ಜೊಲ್ಲು ಸುರಿಸುತ್ತಾರೆ – ಅರಗ ಜ್ಞಾನೇಂದ್ರ

    ಸಿ.ಟಿ ರವಿ, ಎಚ್.ವಿಶ್ವನಾಥ್, ಸೋಮಣ್ಣ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೇ ನನ್ನದು ಒಂದು ಇರಲಿ ಎಂದು ಕುಮಾರಸ್ವಾಮಿಯೂ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ. ಬನ್ನಿ ನಿಮಗೆ ಕಂಬಲಿ ಹೆಣೆಯಲು ಬರುತ್ತಾ ಅಂತ ನೋಡೇ ಬಿಡೋಣ ಎಂದು ಆಹ್ವಾನಿಸಿದ್ದಾರೆ. ಜೊತೆಗೆ ಸಿಂದಗಿಯಲ್ಲಿ ಗೋವಿಂದ ಕಾರಜೋಳ ಕೂಡ ಭಾಗ್ಯಗಳ ಹೆಸರಿನಲ್ಲಿ ಸಿದ್ದರಾಮಯ್ಯಗೆ ತಿವಿದಿದ್ದಾರೆ.

  • ಹಾನಗಲ್‍ನಲ್ಲಿ ಹರೀತಿದ್ಯಾ ಹಣದ ಹೊಳೆ..? – ಸಿದ್ದರಾಮಯ್ಯ, ಡಿಕೆಶಿ ಬಳಿಕ ಹೆಚ್‍ಡಿಕೆ ಆರೋಪ

    ಹಾನಗಲ್‍ನಲ್ಲಿ ಹರೀತಿದ್ಯಾ ಹಣದ ಹೊಳೆ..? – ಸಿದ್ದರಾಮಯ್ಯ, ಡಿಕೆಶಿ ಬಳಿಕ ಹೆಚ್‍ಡಿಕೆ ಆರೋಪ

    ಹಾವೇರಿ: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರು ಪಕ್ಷಗಳ ರಾಜಕೀಯ ನಾಯಕರು ವಾಕ್ಸಮರ ಮುಂದುವರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆರೋಪ ಮಾಡಿದ ಬೆನ್ನಲ್ಲೇ ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೂಡ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಹೌದು. ಇಂದು ಹಾನಗಲ್ ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಜಿ ಸಿಎಂ ಅವರು, ಹಾನಗಲ್‍ಗೆ ಗೋಣಿಚೀಲದಲ್ಲಿ ದುಡ್ಡು ತಂದಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ಈ ಕ್ಷೇತ್ರಕ್ಕೆ ಏನು ಕೊಟ್ಟಿದ್ದಾರೆ..?. ಯಾವುದೋ ಒಂದೆರಡು ರಸ್ತೆಗಳನ್ನ ಮಾಡಿದ್ದು ಬಿಟ್ಟರೆ ಏನೂ ಮಾಡಿಲ್ಲ. ಇಷ್ಟು ಮಾಡಿದ್ರೆ ಜನರ ಸಂಕಷ್ಟಗಳು ನಿವಾರಣೆ ಆಗುವುದಿಲ್ಲ. ಇಲ್ಲಿ ಬಂದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಅಭಿವೃದ್ಧಿ ಕೆಲಸದ ಬಗ್ಗೆ ಸವಾಲು ಹಾಕಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಬಸ್ ಓಡಿಸಿಕೊಂಡಿದ್ದವನನ್ನು ಕರ್ಕೊಂಡು ಬಂದು ಶಾಸಕ ಮಾಡಿದೆ -ಜಮೀರ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

    ನಿಮಗೆ ಮನುಷ್ಯತ್ವ ಮತ್ತು ತಾಯಿ ಹೃದಯ ಇದೆಯಾ..? ಈಗ ಹಾನಗಲ್‍ನಲ್ಲಿ ಚೀಲದಲ್ಲಿ ಹಣ ತಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಯಾರ ದುಡ್ಡು, ಸಾರ್ವಜನಿಕರ ದುಡ್ಡು. ಭ್ರಷ್ಟಾಚಾರ ಬಗ್ಗೆ ಚರ್ಚೆ ಮಾಡಿದ್ರೆ ನಿಮಗೆ ಏನು ಲಾಭ..? ನಮ್ಮ ಪಕ್ಷದ ಅಭ್ಯರ್ಥಿ ಪರ ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಇಲ್ಲಿ ಏಕಾಂಗಿ ಆಗಿಲ್ಲ, ಈ ಕ್ಷೇತ್ರದಲ್ಲಿ ನಾವು ಮೂರು ತಿಂಗಳ ಹಿಂದೆಯೇ ಅಭ್ಯರ್ಥಿಯನ್ನ ಘೋಷಣೆ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ಸಿನಲ್ಲಿ ಯಂಕ, ನಾಣಿ, ಸೀನ ಅನ್ನೋ ಎಂಪಿಗಳಿದ್ದಾರೆ ಅಷ್ಟೇ: ಬಿಎಸ್‍ವೈ

    ಗ್ರಾಮೀಣ ಮಟ್ಟದಲ್ಲಿ ಅಭ್ಯರ್ಥಿ ಪಕ್ಷ ಸಂಘಟನೆ ಮಾಡಿದ್ದಾರೆ. ನನ್ನ ಉದ್ದೇಶ ಈ ಉಪಚುನಾವಣೆಯಲ್ಲಿ ಗೆಲ್ಲುವುದಲ್ಲ. ನಾನು ಮಶಿನ್ 123 ಗುರಿ ಇಟ್ಟುಕೊಂಡಿದ್ದೇನೆ. 2023 ರ ಚುನಾವಣೆಯಲ್ಲಿ ಗೆಲ್ತೀವಿ. ನಮ್ಮ ಪಕ್ಷದಲ್ಲಿ ನಾಯಕರ ಕೊರತೆಯಿದೆ. ಮತ್ತೊಂದು ದಿನ ಹಾನಗಲ್ ನಲ್ಲಿ ಪ್ರಚಾರ ಮಾಡ್ತೀನಿ. ಈ ಚುನಾವಣೆಯಿಂದ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಹೋಗಬಹುದು. ನನ್ನ ಗುರಿ ಬೈ ಎಲೆಕ್ಸನ್ ಅಲ್ಲ, 2023. ಹಣದ ಚೀಲ ಹೇಗೆ ತರಬೇಕು ಎನ್ನುವ ಅನುಭವ ಎರಡು ಪಕ್ಷದವರಿಗೆ ಇರಬಹುದು ಎಂದು ವಾಗ್ದಾಳಿ ನಡೆಸಿದರು.

  • ಸಿಂದಗಿ, ಹಾನಗಲ್‍ನಲ್ಲಿ ಹಣ ಹಂಚ್ತಿದ್ಯಾ ಬಿಜೆಪಿ? – ಡಿಕೆಶಿ, ಸಿದ್ದು ಗಂಭೀರ ಆರೋಪ

    ಸಿಂದಗಿ, ಹಾನಗಲ್‍ನಲ್ಲಿ ಹಣ ಹಂಚ್ತಿದ್ಯಾ ಬಿಜೆಪಿ? – ಡಿಕೆಶಿ, ಸಿದ್ದು ಗಂಭೀರ ಆರೋಪ

    ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಗೆ ಇನ್ನು 9 ದಿನ ಬಾಕಿ ಇರುವಂತೆಯೇ ಆರೋಪ-ಪ್ರತ್ಯಾರೋಪ ಜೋರಾಗಿದೆ. ನಿನ್ನೆ-ಮೊನ್ನೆಯೆಲ್ಲಾ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದ ಜನನಾಯಕರು ಇವತ್ತು ಇನ್ನೊಂದು ಮಜಲು ತಲುಪಿದ್ದಾರೆ.

    ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ಸಿಗರು ಹಣ ಹಂಚಿಕೆಯ ಆರೋಪ ಹೊರಿಸಿದ್ದಾರೆ. ಸಿಂದಗಿ ಹಾಗೂ ಹಾಗನಲ್‍ನಲ್ಲಿ ಸೋಲೋ ಮುನ್ಸೂಚನೆ ಸಿಕ್ತಿದ್ದಂತೆಯೇ ಸಿಎಂ ದುಡ್ಡು ಹಂಚೋಕೆ ಹೇಳಿದ್ದಾರೆ. ಗೋಣಿಚೀಲದಲ್ಲಿ ತಂದು ಪ್ರತಿ ವೋಟ್‍ಗೆ 2 ಸಾವಿರ ಹಂಚ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮೇಲಿನ ಐಟಿ ದಾಳಿಗೆ ಬಿಗ್ ಟ್ವಿಸ್ಟ್ – 750 ಕೋಟಿಯಲ್ಲಿ 600 ಕೋಟಿ ಬೇನಾಮಿ

    ಕೈ ನಾಯಕರ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಯಾರು ತಾನು ಕಳ್ಳನೋ; ಅವನು ಬೇರೆಯವರನ್ನು ನಂಬಲ್ಲ ಅಂತ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಇನ್ನೊಂದೆಡೆ, ಸಚಿವ ಮುನಿರತ್ನ, ದುಡ್ಡು ಎಲ್ಲಿಂದ ಬಂತು ಅನ್ನೋದ್ರ ಮಾಹಿತಿ ಕೊಡ್ಲಿ ಅಂತಾ ಸವಾಲಾಕಿದ್ರು. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ

    ಅಷ್ಟೇ ಅಲ್ಲದೆ ದುಡ್ಡು ಹಂಚೋದನ್ನ ಚುನಾವಣೆ ಆಯೋಗದ ಗಮನಕ್ಕೆ ಯಾಕೆ ತಂದಿಲ್ಲ..? ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಹಣ ಪಡೆಯಿರಿ ಅನ್ನೋದು ಎಷ್ಟು ಸರಿ ಅಂತಾ ಕಿಡಿಕಾರಿದ್ರು.

  • ಡಿಕೆಶಿ ಹುಚ್ಚಾಸ್ಪತ್ರೆಗೆ ಸೇರಿದರೆ ಸರ್ಕಾರದಿಂದ ಉಚಿತ ಚಿಕಿತ್ಸೆ: ರಾಜೂ ಗೌಡ

    ಡಿಕೆಶಿ ಹುಚ್ಚಾಸ್ಪತ್ರೆಗೆ ಸೇರಿದರೆ ಸರ್ಕಾರದಿಂದ ಉಚಿತ ಚಿಕಿತ್ಸೆ: ರಾಜೂ ಗೌಡ

    – ಗೋಣಿ ಚೀಲ ಹೇಳಿಕೆಗೆ ಶಾಸಕ ತಿರುಗೇಟು

    ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹುಚ್ಚಾಸ್ಪತ್ರೆಗೆ ಸೇರಿದರೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.

    ಹಾನಗಲ್ ನ ಗಡಿಯಂಕನಹಳ್ಳಿ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಹುಚ್ಚಾಸ್ಪತ್ರೆಗೆ ಭೇಟಿ ನೀಡ್ತೀವಿ ಅಂತ ಹೇಳಿದ್ದಾರೆ. ಅವರು ಭೇಟಿ ನೀಡಿದರೆ ಖಂಡಿತ ನಾವು ಹಣ್ಣು-ಹಂಪಲು ತಗೊಂಡು ನಾವು ಆರೋಗ್ಯ ವಿಚಾರಿಸಿ ಬರುತ್ತೇವೆ ಎಂದು ವ್ಯಂಗ್ಯವಾಡಿದರು.

    ಕೊರೊನಾಗೆ ಹೇಗೆ ಫ್ರೀ ಟ್ರೀಟ್ಮೆಂಟ್ ಕೊಟ್ಟಿದ್ರೋ ಅದೇ ರೀತಿ ಹುಚ್ಚಾಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುವಂತೆ ಸಿಎಂಗೆ ಮನವರಿಕೆ, ಮನವಿ ಮಾಡುತ್ತೇವೆ. ಅಧ್ಯಕ್ಷರಾದ ಮೇಲೆ ಎಲ್ಲಾ ಚುನಾವಣೆ ಸೋತಿದ್ದಾರೆ. ಸೋತ ಮೇಲೆ ಪಾಪ ಎಲ್ಲಿಗೆ ಹೋಗಬೇಕು ಅವರು?, ಅವರು ಹುಚ್ಚಾಸ್ಪತ್ರೆಗೇ ಹೋಗಬೇಕು ಎಂದು ರಾಜುಗೌಡ ತಿಳಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್‍ಡಿಕೆ ತರಾಟೆ

    ಇದೇ ವೇಳೆ ಡಿಕೆಶಿ ಗೋಣಿ ಚೀಲದ ಹೇಳಿಕೆಗೆ ತಿರುಗೇಟು ನಿಡಿದ ಶಾಸಕರು, ಡಿಕೆ ಶಿವಕುಮಾರ್ ಅವರು ಏನು ಕೆಲಸ ಮಾಡಿದ್ದಾರೋ ಅದನ್ನ ನೆನಸಿಕೊಂಡು ಮಾತನಾಡುತ್ತಾರೆ. ಅವರು ಸಚಿವರಿದ್ದ ಸಮಯದಲ್ಲಿ ಗೋಣಿ ಚೀಲದಲ್ಲಿ ದುಡ್ಡು ತಗೊಂಡು ಹೋಗಿ ಎಲೆಕ್ಷನ್ ಮಾಡಿದ್ದಾರೆ ಪಾಪ. ಅವರು ಏನ್ ಮಾಡಿದ್ದಾರೋ ಅದನ್ನೇ ಹೇಳಬೇಕಾಗುತ್ತೆ, ಅದನ್ನ ಬಿಟ್ಟು ಬೇರೆ ಹೇಳೋಕೆ ಬರಲ್ಲ. ಅವರು ಯಾವತ್ತಾದ್ರೂ ಬೂತ್ ಕಮಿಟಿ ಸಭೆ ಮಾಡಿದ್ದಾರಾ..? ಎಲ್ಲ ಸಮುದಾಯದವರನ್ನ ಕರೆದು ಮಾತನಾಡಿದ್ದಾರಾ..? ಪಾಪ ಅವರು ಏನು ಕೆಲಸ ಮಾಡಿದ್ದಾರೆ ಅದನ್ನು ಹೇಳಿದ್ದಾರೆ ಎಂದರು.  ಇದನ್ನೂ ಓದಿ: ಕಾಂಗ್ರೆಸ್ಸಿಗೆ ದ್ರೋಹ ಮಾಡಿರುವ ಸುಧಾಕರ್ ಅಧಿಕಾರದ ಮದದಿಂದ ವರ್ತಿಸ್ತಿದ್ದಾರೆ: ಸಿದ್ದರಾಮಯ್ಯ

  • ಸಿದ್ದರಾಮಯ್ಯ ಗಿಮಿಕ್ ಮಾಡೋದನ್ನು ಬಿಟ್ಟು ಡಿಕೆಶಿ ಜೈಲಿಗೆ ಯಾಕೆ ಹೋದ್ರು ಅನ್ನೋದನ್ನು ತಿಳಿಸಲಿ: ಎಸ್‍ಟಿಎಸ್

    ಸಿದ್ದರಾಮಯ್ಯ ಗಿಮಿಕ್ ಮಾಡೋದನ್ನು ಬಿಟ್ಟು ಡಿಕೆಶಿ ಜೈಲಿಗೆ ಯಾಕೆ ಹೋದ್ರು ಅನ್ನೋದನ್ನು ತಿಳಿಸಲಿ: ಎಸ್‍ಟಿಎಸ್

    ಹಾನಗಲ್(ಹಾವೇರಿ): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡುವುದನ್ನು ಬಿಟ್ಟು ಡಿ.ಕೆ ಶಿವಕುಮಾರ್ ಜೈಲಿಗೆ ಯಾಕೆ ಹೋದರು..? ಐಟಿ ದಾಳಿ ಯಾಕೆ ಆಯಿತು..? ಎಂಬುದನ್ನು ಜನತೆಗೆ ತಿಳಿಸಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸವಾಲೆಸೆದರು.

    ಹಾನಗಲ್ ನಲ್ಲಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಡಿಯೂರಪ್ಪ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂದಾದರೆ ಲೋಕಾಯುಕ್ತ ಇದೆ, ಐಟಿ ಇದೆ. ಲಿಖಿತವಾಗಿ ದೂರು ಕೊಡಲಿ, ಆದರೆ ಯಾವ ದೂರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

    ಸೋಲುವುದು ಗೊತ್ತಾಗುತ್ತಿದ್ದಂತೆ ಈ ರೀತಿ ಗಿಮಿಕ್ ಮಾಡ್ತಾರೆ. ಗೃಹ ಸಚಿವರಾಗಿ, ನೀರಾವರಿ ಸಚಿವರಾಗಿ ಈಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರ ಮೇಲೆ ಯಾವುದಾದರೂ ಆರೋಪವಿದೆಯೇ ಜನರಿಗೆ ಒಳ್ಳೆಯ ಕೆಲಸ ಮಾಡಬೇಕೆಂದು ಬಂದಿದ್ದಾರೆ. ಮೋದಿ ಅವರಿಗೆ ವಿಶ್ವದಲ್ಲಿ ಒಳ್ಳೆ ಹೆಸರಿದೆ. ಭಾರತಕ್ಕೆ ಹೆಸರು ತಂದುಕೊಟ್ಟವರು ಎಂದರು.

    ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಣ ಹಂಚಿಕೆ ಮಾಡಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಬಿಜೆಪಿ ಹಣ ಹಂಚುವ ಕೆಲಸ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಕಾರ ಮತಯಾಚಿಸುತ್ತೇವೆ ಹೊರತು ಮತದಾರರಿಗೆ ಹಣ ಹಂಚುವ ಕೆಲಸ ಮಾಡಿಲ್ಲ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಬ್ಬರಿಗೊಬ್ಬರಿಗೆ ಬಗೆಹರಿಯುತ್ತಿಲ್ಲ. ಅವರದ್ದು ಬಗೆಹರಿಸಿಕೊಳ್ಳಲು ಹೊಸ ಹೊಸದನ್ನು ಹುಡುಕುತ್ತಾರೆ ಎಂದು ಹೇಳಿದರು.

    ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಹಲವು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಲು ಹುಮ್ಮಸ್ಸು ಹೊಂದಿದ್ದಾರೆ. ಪಕ್ಷದ ಪರ ಮನೆಮನೆ ಪ್ರಚಾರ ಮಾಡಲಾಗುವುದು. ಮುಖ್ಯಮಂತ್ರಿಗಳು ಮತ್ತು ಸಚಿವ ಬಿ.ಸಿ.ಪಾಟೀಲ್ ಅವರು ಇದೇ ಜಿಲ್ಲೆಯವರಾದ್ದರಿಂದ ಬಿಜೆಪಿ ಗೆಲುವು ಸಾಧಿಸಲಿದೆ. ಜನರು ಸಹ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು ಅದನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ ಎಂದು ಭರವಸೆ ನೀಡಿದರು.

    ಇದೇ ವೇಳೆ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಲ್ಲಿ ಜಿಲ್ಲೆಯ ಎಲ್ಲರಿಗೂ ಸಾಲ ನೀಡದೆ ಕೇವಲ ಎರಡು ಮೂರು ಕ್ಷೇತ್ರದವರಿಗಷ್ಟೇ ಸಾಲ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಕುರಿತು ಸಭೆ ಕೂಡ ಮಾಡಲಾಗಿದೆ. ಕೋಲಾರ ಡಿಸಿಸಿ ಬ್ಯಾಂಕಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ಕೂಡ ಸರಿಯಾಗಿ ಸಾಲ ಕೊಡುತ್ತಿಲ್ಲ ಎಂದು ದೂರು ಬಂದಿದ್ದು ತನಿಖೆ ಮಾಡಲಾಗುತ್ತಿದೆ. ಉಳಿದಂತೆ 19 ಡಿಸಿಸಿ ಬ್ಯಾಂಕ್ ಗಳು ಅಲ್ಪಾವಧಿ, ದೀರ್ಘಾವಧಿ ಸಾಲ ನೀಡುತ್ತಿವೆ. ಎಸ್ ಸಿ, ಎಸ್ ಟಿ, ಒಬಿಸಿ ಸೇರಿದಂತೆ ಎಲ್ಲಾ ಜನಾಂಗದವರಿಗೆ ಸಾಲ ನೀಡಬೇಕೆಂದು ಹೇಳಲಾಗಿದೆ. 20,810 ಕೋಟಿ ರೂ. ಕೃಷಿ ಸಾಲವನ್ನು 30.86 ಲಕ್ಷ ರೈತರಿಗೆ ವಿತರಿಸುವ ಗುರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.  ಇದನ್ನೂ ಓದಿ: ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ

    ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಬುಧವಾರ ಹಾನಗಲ್, ಆಡರು ಸೇರಿದಂತೆ ನಾನಾಕಡೆ ಶಿವರಾಜ ಸಜ್ಜನ ಪರವಾಗಿ ಪ್ರಚಾರದಲ್ಲಿ ತೊಡಗಿಕೊಂಡು ಮತಯಾಚಿಸಿದರು. ಹಿರೆಹುಳ್ಳಾಳ ಗ್ರಾಮ ಪಂಚಾಯತ್ ನ ತಮರಿಕೊಪ್ಪ, ಬಾಳಂಬೀಡ ಗ್ರಾಮದಲ್ಲಿ ಮುಖಂಡರ ಸಭೆ ನಡೆಸಿದರು. ಇದಕ್ಕೂ ಮುನ್ನ ವಿರಕ್ತಮಠಕ್ಕೆ ಭೇಟಿ ನೀಡಿ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ, ಮುತ್ತಿನಕಂತಿ ಮಠ, ಶಿವಬಸವ ಮಹಾಸ್ವಾಮೀಜಿಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕರು, ಯುವ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ್ ಕುಮಾರ್ ಕೆ.ಸಿ. ಹಾಗೂ ಪ್ರಮುಖ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

  • ಉದಾಸಿ, ಸಜ್ಜನರ್ ಸೇರಿ ಖಾಲಿ ಚೀಲಗಳನ್ನೂ ಬಿಡದಂತೆ ಸಕ್ಕರೆ ಕಾರ್ಖಾನೆ ನುಂಗಿದ್ದಾರೆ: ಸಿದ್ದರಾಮಯ್ಯ

    ಉದಾಸಿ, ಸಜ್ಜನರ್ ಸೇರಿ ಖಾಲಿ ಚೀಲಗಳನ್ನೂ ಬಿಡದಂತೆ ಸಕ್ಕರೆ ಕಾರ್ಖಾನೆ ನುಂಗಿದ್ದಾರೆ: ಸಿದ್ದರಾಮಯ್ಯ

    ಹಾವೇರಿ: ಸಂಗೂರಿನಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಇತ್ತು. ಆಗ ಉದಾಸಿ ಅಧ್ಯಕ್ಷ ಆಗಿದ್ದರು, ಶಿವರಾಜ್ ಸಜ್ಜನರ್ ಉಪಾಧ್ಯಕ್ಷ ಆಗಿದ್ದರು. ಇಬ್ಬರೂ ಸೇರಿ ಖಾಲಿ ಚೀಲಗಳನ್ನೂ ಬಿಡದಂತೆ ಸಹಕಾರಿ ಸಕ್ಕರೆ ಕಾರ್ಖಾನೆ ನುಂಗಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರಿ ಸಕ್ಕರೆ ಕಾರ್ಖಾನೆ ಹಾಳಾಗಲು ಮಿಸ್ಟರ್ ಸಜ್ಜನರ್ ಕಾರಣ. ಸಜ್ಜನ್ ಈಗ ಬಿಜೆಪಿ ಅಭ್ಯರ್ಥಿ ಅವರಿಗೆ ವೋಟು ಹಾಕಬೇಡಿ, ಅವನಿಗೆ ಖಾಲಿ ಚೀಲ ಕೊಟ್ಟು ಕಳುಹಿಸಿ, ಹಿಂದೆ ತಿಂದಿದ್ದನ್ನೆಲ್ಲ ಈಗ ಕಕ್ಕಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ- ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

    ಇದು ಸಾರ್ವತ್ರಿಕ ಚುನಾವಣೆಯಲ್ಲ, ಈ ಚುನಾವಣೆಯಲ್ಲಿ ಶ್ರೀನಿವಾಸ ಮಾನೆಯವರಿಗೆ ಆಶೀರ್ವಾದ ಮಾಡಬೇಕು. ಸಾರ್ವತ್ರಿಕ ಚುನಾವಣೆ 2023ರಲ್ಲಿ ನಡೆಯುತ್ತದೆ. ಶಾಸಕರಾಗಿದ್ದ ಉದಾಸಿಯವರು ಅಗಲಿದ ಮೇಲೆ ಅವರ ಜಾಗ ಭರ್ತಿ ಮಾಡಲು ಉಪಚುನಾವಣೆ ಬಂದಿದೆ. ಈ ಚುನಾವಣೆ ಬರಲಿ ಎಂದು ಯಾರು ಕೂಡ ಬಯಸಿರಲಿಲ್ಲ. ಉದಾಸಿಯವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕೇವಲ ಆರು ಸಾವಿರ ಮತಗಳಿಂದ ಸೋತರು. ಸೋತ ನಂತರವೂ ಶ್ರೀನಿವಾಸ ಮಾನೆ ನಿರಂತರವಾಗಿ ನಿಮ್ಮ ಜೊತೆಗಿದ್ದು, ತಮ್ಮ ಕೈಲಾದ ಸಹಾಯ ಮಾಡಿದ್ದಾರೆ ಎಂದರು.

    ಕ್ಷೇತ್ರದ ಶಾಸಕರಾಗಿದ್ದ ಉದಾಸಿಯವರು ಹಾಸಿಗೆ ಹಿಡಿದರು. ಅವರ ಮಗ ಸಂಸದರಾಗಿದ್ದರೂ ಕೂಡ ಈ ಕ್ಷೇತ್ರದ ಕಡೆಗೆ ತಲೆ ಹಾಕಲಿಲ್ಲ. ನಮ್ಮ ಅಭ್ಯರ್ಥಿ ಆಗಿರುವ ಮಾನೆ ಕೊರೊನಾ ಕಷ್ಟಕಾಲದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅದು ಅವರ ಕೆಲಸ ಆಗಿರಲಿಲ್ಲ ಆದರೂ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ ಪ್ರಕರಣ ದಾಖಲು

  • ಹಾನಗಲ್ ಉಪಚುನಾವಣೆ- ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

    ಹಾನಗಲ್ ಉಪಚುನಾವಣೆ- ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

    ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ಬುಧವಾರ 4 ಜನ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ.

    ಬಿಜೆಪಿಯ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸಿ.ಆರ್.ಬಳ್ಳಾರಿ ನಾಮಪತ್ರ ಸಲ್ಲಿಸಿದ್ದರು. ಮಂಗಳವಾರ ದಾವಣಗೆರೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿ.ಆರ್.ಬಳ್ಳಾರಿ ಅವರನ್ನು ಕರೆಸಿಕೊಂಡು ಚರ್ಚಿಸಿ ನಾಮಪತ್ರ ಮರಳಿ ಪಡೆಯುವಂತೆ ಮನವೊಲಿಸಿದ್ದರು. ಈ ಹಿನ್ನೆಲೆ ಸಿ.ಆರ್.ಬಳ್ಳಾರಿ ಪಂಚಮಸಾಲಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ, ಬೊಮ್ಮಾಯಿ ಅವರ ಮಾತಿಗೆ ಮನ್ನಣೆ ನೀಡಿ ಬುಧವಾರ ನಾಮಪತ್ರ ಹಿಂಪಡೆದಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಗಿದ್ದ ಬಂಡಾಯ ಶಮನಗೊಂಡಂತಾಗಿದೆ. ಇದನ್ನೂ ಓದಿ: ನಮ್ಮ‌ ಕ್ಷೇತ್ರದಲ್ಲಿ ನಾವು ಗಂಡಸರಲ್ವಾ…? ಹೊರಗಿನವರಿಗೆ ಟಿಕೆಟ್ ಕೊಟ್ರೆ ನಾವು ಕೆಲಸ ಮಾಡಲ್ಲ: ಮನೋಹರ್ ತಹಶೀಲ್ದಾರ್

    ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಶೋಕ ಪಾಂಡಪ್ಪ ಹಣಜಿ, ಜಾಕೀರ್ ಹುಸೇನ್ ಮೌಲಾಲಿ ಅರಳಿಮರದ ಹಾಗೂ ಸಿಕಂದರ್ ಮೋದಿನಖಾನ ಮತ್ತಿಹಳ್ಳಿ ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ ಪ್ರಕರಣ ದಾಖಲು

    ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು:
    ನಿಯಾಜ್ ಶೇಖ್ (ಜೆಡಿಎಸ್), ಶಿವರಾಜ ಸಜ್ಜನರ್ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ್ (ಲೋಕಶಕ್ತಿ ಪಕ್ಷ), ಉಮೇಶ್ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ನಜೀರ ಅಹ್ಮದ್ ಸವಣೂರ (ಪಕ್ಷೇತರ), ಪರಶುರಾಮ ಹೊಂಗಲ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್.ಎಸ್.ದೊಡ್ಡಲಿಂಗಣ್ಣನವರ (ಪಕ್ಷೇತರ), ಸೋಮಶೇಖರ್ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ(ಪಕ್ಷೇತರ) ಅವರು ಅಂತಿಮ ಕಣದಲ್ಲಿ ಉಳಿದಿದ್ದಾರೆ.

  • ಸಿಂದಗಿ, ಹಾನಗಲ್‍ಗೆ ಇಂದು ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ಸಿಂದಗಿ, ಹಾನಗಲ್‍ಗೆ ಇಂದು ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    – ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ
    – ಮುನಿಸು ಮರೆತ್ರಾ ಸಿದ್ದರಾಮಯ್ಯ, ಡಿಕೆಶಿ..?

    ವಿಜಯಪುರ/ಹಾವೇರಿ: ರಾಜ್ಯದಲ್ಲಿ ಉಪಚುನಾವಣಾ ಕದನ ಜೋರಾಗಿದೆ. ಸಿಂದಗಿ, ಹಾನಗಲ್ ಕ್ಷೇತ್ರಗಳಿಂದ ಮೂರೂ ಪಕ್ಷದ ಅಭ್ಯರ್ಥಿಗಳು ಫೈನಲ್ ಆಗಿದ್ದು, ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.

    ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ್ ಸಜ್ಜನರ್, ಕಾಂಗ್ರೆಸ್‍ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್‍ನಿಂದ ನಿಯಾಜ್ ಶೇಖ್ ಕಣದಲ್ಲಿದ್ರೆ. ಇತ್ತ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರು, ಕಾಂಗ್ರೆಸ್‍ನಿಂದ ಅಶೋಕ್ ಮನಗೂಳಿ, ಜೆಡಿಎಸ್‍ನಿಂದ ನಾಜಿಯಾ ಅಂಗಡಿ ಸ್ಪರ್ಧೆಗಿಳಿದಿದ್ದಾರೆ. ಇದನ್ನೂ ಓದಿ: ಗಾಂಧೀಜಿಗೆ ಗುಂಡಿಕ್ಕಿದ ನೀವು ಸಮಾಜದ ಉದ್ಧಾರ ಮಾಡುತ್ತೀರಾ? – ಸಿಟಿ ರವಿಗೆ ಎಚ್‌ಡಿಕೆ ತಿರುಗೇಟು

    ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದರಿಂದ ಇಂದು ಬಿಜೆಪಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಬಿವೈ ವಿಜಯೇಂದ್ರ, ಸಚಿವ ಬಿಸಿ ಪಾಟೀಲ್ ಭಾಗಿಯಾಗಲಿದ್ದಾರೆ. ಸಿಂದಗಿಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಕೂಡ ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ.

    ಇಲ್ಲಿ ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರು ಸಾಥ್ ನೀಡಲಿದ್ದಾರೆ. ಉಳಿದ ಅಭ್ಯರ್ಥಿಗಳು ಈಗಾಗ್ಲೇ ತಮ್ಮ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 2ಕ್ಕೆ ಫಲಿತಾಂಶ ಹೊರಬೀಳಲಿದೆ.

  • ಸಿಂದಗಿ, ಹಾನಗಲ್ ಉಪ ಚುಣಾವಣೆ- ಇಂದು ಹೈಕಮಾಂಡ್ ಕೈ ಸೇರಲಿದೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

    ಸಿಂದಗಿ, ಹಾನಗಲ್ ಉಪ ಚುಣಾವಣೆ- ಇಂದು ಹೈಕಮಾಂಡ್ ಕೈ ಸೇರಲಿದೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

    ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಇಂದು ಹೈಕಮಾಂಡ್‍ಗೆ ಕಳುಹಿಸಲಿದೆ. ಇಂದು ನಡೆಯುವ ಬಿಜೆಪಿ ಕೋರ್ ಕಮಿಟಿ ಸಹ ನಡೆಯಲಿದೆ.

    ಹಾನಗಲ್‍ನಲ್ಲಿ ಸಂಸದ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿ ಉದಾಸಿ ಬಿಜೆಪಿ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉದಾಸಿ ತಂದೆ ಸಿ.ಎಂ.ಉದಾಸಿ ನಿಧನದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಜೊತೆಗೆ ಮಾಜಿ ಎಂಎಲ್‍ಸಿಗಳಾದ ಶಿವರಾಜ್ ಸಜ್ಜನರ್, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಇಳಿಗೇರ್, ಸಿ.ಆರ್.ಬಳ್ಳಾರಿ ಸಹ ಬಿಜೆಪಿ ಟಿಕೆಟ್‍ಗಾಗಿ ಸ್ಪರ್ಧೆಯಲ್ಲಿದ್ದಾರೆ. ಇದನ್ನೂ ಓದಿ: ಅಡುಗೆ ಎಣ್ಣೆ ಇನ್ನಷ್ಟು ದುಬಾರಿ

    ಪತ್ನಿಗೆ ಟಿಕೆಟ್ ಕೊಡಿಸುವ ಸಲುವಾಗಿ ಮೂರು ದಿನಗಳಿಂದ ಶಿವಕುಮಾರ್ ಉದಾಸಿ ಬೆಂಗಳೂರಲ್ಲೇ ಬೀಡು ಬಿಟ್ಟಿದ್ದು, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಅನುಕಂಪದ ಲೆಕ್ಕಾಚಾರ ಹಾಕಿದರೆ ಆಗ ಸಿ.ಎಂ.ಉದಾಸಿ ಸೊಸೆ ರೇವತಿ ಉದಾಸಿಯೇ ಅಭ್ಯರ್ಥಿ ಆಗಬಹುದು. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಇನ್ನು ಸಿಂದಗಿ ಚುನಾವಣಾ ಉಸ್ತುವಾರಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಗಲಿಗೆ ಹಾಕುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಮಾಜಿ ಶಾಸಕ ರಮೇಶ್ ಭೂಸನೂರ ಟಿಕೆಟ್‍ನ ಪ್ರಬಲ ಆಕಾಂಕ್ಷಿ ಆಗಿದ್ದು, ಬೆಂಗಳೂರಲ್ಲೇ ಇದ್ದು ಲಾಬಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

  • ಹಾನಗಲ್, ಸಿಂದಗಿ ಉಪ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಆಯ್ಕೆ: ಈಶ್ವರಪ್ಪ

    ಹಾನಗಲ್, ಸಿಂದಗಿ ಉಪ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಆಯ್ಕೆ: ಈಶ್ವರಪ್ಪ

    ಶಿವಮೊಗ್ಗ: ಹಾನಗಲ್, ಸಿಂದಗಿ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ನಾಳೆ ಅಂತಿಮಗೊಳಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಭಾನುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಅಭೆಯಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು. ಇದನ್ನೂ ಓದಿ: ರೈತರಿಗೆ ದಾಖಲೆ ನೀಡಲು ಸತಾಯಿಸುತ್ತಿದ್ದ ಅಧಿಕಾರಿಗಳಿಗೆ ತರಾಟೆ- ಸೂ….ಮಕ್ಕಳು ಎಂದ ರಮೇಶ್ ಕುಮಾರ್

    ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತದೆ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿದೆ. ಹೀಗಾಗಿಯೇ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪಕ್ಷ ಬೆಳೆದಂತೆ ಆಕಾಂಕ್ಷಿಗಳ ಸಂಖ್ಯೆ ಸಹ ಹೆಚ್ಚಾಗುವುದು ಸ್ವಾಭಾವಿಕ ಎಂದರು.