Tag: hanagal by election

  • ಬಿಜೆಪಿ ಜೊತೆ ಕ್ಷಮೆ ಕೇಳಿದ ಶಾಸಕ ಜಮೀರ್!

    ಬಿಜೆಪಿ ಜೊತೆ ಕ್ಷಮೆ ಕೇಳಿದ ಶಾಸಕ ಜಮೀರ್!

    ಹಾವೇರಿ: ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಕಣ ರಂಗೇರಿದ್ದು, ರಾಜಕೀಯ ನಾಯಕರ ವಾಕ್ಸಮರ ಮುಂದುವರಿದಿದೆ. ವಾಗ್ದಾಳಿ ಭರದಲ್ಲಿ ತಾವು ಮಾಡಿದ ತಪ್ಪಿನ ಅರಿವಾದ ನಂತರ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಬಿಜೆಪಿ ಜೊತೆ ಕ್ಷಮೆ ಕೇಳಿದ್ದಾರೆ.

    ಹೌದು. ಹಾನ್‍ಗಲ್ ಉಪಚುನಾವಣೆಯ ಪ್ರಚಾರದ ಭರದಲ್ಲಿ ಜಮೀರ್ ಅವರು ಬಿಜೆಪಿ ವಿರುದ್ಧ ಅವಾಚ್ಯ ಪದ ಬಳಸಿದ್ದರು. ಆದರೆ ಸಂಜೆ ವೇಳೆ ತಮ್ಮ ತಪ್ಪನ್ನು ಅರಿತ ಜಮೀರ್ ಬಿಜೆಪಿಗೆ ಕ್ಷಮೆ ಕೇಳಿದ್ದಾರೆ.

    ಜಮೀರ್ ಹೇಳಿದ್ದೇನು..?
    ಹಾನಗಲ್ ನರೇಗಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಜಮೀರ್ ಅವರು, ಇಲ್ಲಿಯವರೆಗೆ ಬಿಜೆಪಿಯವರು ನಾವು ಇಂತಹ ಕೆಲಸ ಮಾಡಿದ್ದೇವೆ ನಮಗೆ ವೋಟು ಕೊಡಿ ಅಂತ ಕೇಲ್ಲ. ಬದಲಾಗಿ ಬರೀ ಜಾತಿ.. ಹಿಂದೂ, ಮುಸ್ಲಿಂ ಅಂತ ಮು… ಬರೀ ಅದೇ ಎಂದು ಆಕ್ರೋಶದ ಧ್ವನಿಯಲ್ಲಿ ನಾಲಿಗೆ ಹರಿಬಿಟ್ಟಿದ್ದರು. ಇದನ್ನೂ ಓದಿ: JDSಗೆ ಬದ್ದತೆ ಇಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ: ದಿನೇಶ್ ಗುಂಡೂರಾವ್

    ಕ್ಷಮೆ ಕೇಳಿದ ಶಾಸಕ:
    ಇದಾದ ಬಳಿಕ ಸಂಜೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಮೀರ್, ಗೊತ್ತಿಲ್ಲ. ಬೇಕೂಂತ ಹೇಳಿಲ್ಲ. ಮಾತಿನ ಭರದಲ್ಲಿ ಹೇಳಿರಬಹುದು. ನಾನು ಆ ಪದ ಬಳಕೆ ಮಾಡಿದ್ದರೆ ಕ್ಷಮೆ ಕೇಳುತ್ತೇನೆ. ರಾಜಕಾರಣಿಗಳು ಅಂತಹ ಪದವನ್ನು ಉಪಯೋಗಿಸಬಾರದು. ನಾನು ಹೇಳಿದ್ದೀನಿ ಅಂತ ನನಗೆ ಗೊತ್ತಿಲ್ಲ, ನೀವು ಹೇಳಿದ ನಂತರವೇ ನನಗೆ ಗೊತ್ತಾಗಿರೋದು. ಒಂದು ವೇಳೆ ಆ ರೀತಿ ನಾನು ಹೇಳಿದ್ದರೆ ಬಿಜೆಪಿ ಜೊತೆ ಕ್ಷಮೆ ಕೇಳುತ್ತೇನೆ ಎಂದು ಜಮೀರ್ ತಿಳಿಸಿದರು. ಇದನ್ನೂ ಓದಿ: ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರು ತಾಯಿ ದ್ರೋಹಿಗಳು: ಸಿದ್ದರಾಮಯ್ಯ

  • ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ – ಬಿಜೆಪಿ ಗೇಲಿ

    ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ – ಬಿಜೆಪಿ ಗೇಲಿ

    ಬೆಂಗಳೂರು: ಒಂದೆಡೆ ಅಭಿವೃದ್ಧಿ ವಿಷಯದ ಚರ್ಚೆ ಆದರೆ ಮತ್ತೊಂದೆಡೆ ಅಕ್ಕಿ ಸಮರ. ಬಿಜೆಪಿ ಟ್ವಿಟರ್‍ನಲ್ಲಿ ಸರಣಿ ಟ್ವೀಟ್ ಮಾಡಿ ಟೀಕಿಸಿದೆ.

    ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿಗೆ ತಲುಪಿಸಿದ್ದೇ ಸಿದ್ದರಾಮಯ್ಯ ಸಾಧನೆ. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಪ್ರತಿ ಪ್ರಜೆ ಮೇಲೆ 44 ಸಾವಿರಕ್ಕೂ ಹೆಚ್ಚು ಸಾಲದ ಹೊರೆ ಹೇರಿದ್ದೀರಿ. ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ..? ಭೂಮಿಯ ಮೇಲಿದೆಯೋ, ಮಂಗಳ ಗ್ರಹದಲ್ಲಿದೆಯೋ? ಘೋಷಣೆ ಮಾಡಿದ ಮಾತ್ರಕ್ಕೆ ಮನೆ ರ್ಮಾಣವಾಗುತ್ತದೆಯೇ..? ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ .. ಬುರುಡೆರಾಮಯ್ಯ ಅಂತ ಬಿಜೆಪಿ ಛೇಡಿಸಿದೆ. ಇದನ್ನೂ ಓದಿ: ತಂದೆಯಂತೆ ಮಧು ಬಂಗಾರಪ್ಪ ನಾಯಕರಾಗಿ ಬೆಳೆಯುತ್ತಾರೆ: ಸಿದ್ದರಾಮಯ್ಯ

    ಈ ಬೆನ್ನಲ್ಲೇ ಸಿದ್ದರಾಮಯ್ಯ ಪ್ರತಿಕಾ ಪ್ರಕಟಣೆಯನ್ನೇ ಹೊರಡಿಸಿದ್ದಾರೆ. 2013ರಲ್ಲಿ ಅನ್ನಭಾಗ್ಯ ಯೋಜನೆ ತಂದು, ಪ್ರತಿ ಕುಟುಂಬಕ್ಕೆ 35 ಕೆಜಿ ಅಕ್ಕಿಯನ್ನು ಕೆಜಿಗೆ ಕೇವಲ 1 ರೂ.ಗೆ ನೀಡಿದ್ದೇವೆ. 2017 ಏಪ್ರಿಲ್‍ನಿಂದ ಕುಟುಂಬಗಳ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಬೇಳೆ ವಿತರಿಸಿದ್ವಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಅಕ್ಕಿಯನ್ನು 2 ಕೆಜಿಗೆ ಇಳಿಸಿದೆ ಅಂತ ವಿವರಣೆ ನೀಡಿದ್ದಾರೆ. ಜೊತೆಗೆ ಹಾನಗಲ್‍ನಲ್ಲಿ ಮಾತಾಡಿ, ನನ್ನ ಯೋಜನೆ ಜನರಿಗೆ ತಲುಪಿಲ್ಲ ಅಂತಾರೆ. ನಾನು ಕೊಟ್ಟ 7 ಕೆಜಿ ಅಕ್ಕಿ ನಿಮಗೆ ತಲುಪಿಲ್ವಾ..? ಅಂತ ಹಾನಗಲ್ ಜನಕ್ಕೆ ಸಿದ್ದರಾಮಯ್ಯ ಪ್ರಶ್ನಿಸಿದಾಗ.. ನಮಗೆ ಸಿಕ್ಕಿದೆ ಅಂತ ಜನ ಉತ್ತರ ಹೇಳಿದ್ದಾರೆ. ಇದನ್ನೂ ಓದಿ:  ಬಸ್ ಓಡಿಸಿಕೊಂಡಿದ್ದವನನ್ನು ಕರ್ಕೊಂಡು ಬಂದು ಶಾಸಕ ಮಾಡಿದೆ -ಜಮೀರ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

  • ಕಾಂಗ್ರೆಸ್ಸಿನಲ್ಲಿ ಯಂಕ, ನಾಣಿ, ಸೀನ ಅನ್ನೋ ಎಂಪಿಗಳಿದ್ದಾರೆ ಅಷ್ಟೇ: ಬಿಎಸ್‍ವೈ

    ಕಾಂಗ್ರೆಸ್ಸಿನಲ್ಲಿ ಯಂಕ, ನಾಣಿ, ಸೀನ ಅನ್ನೋ ಎಂಪಿಗಳಿದ್ದಾರೆ ಅಷ್ಟೇ: ಬಿಎಸ್‍ವೈ

    – ರಾಜೀನಾಮೆ ಬಿಸಾಕಿ ಬಂದೆ ಎಂದ ಯಡಿಯೂರಪ್ಪ

    ಹಾವೇರಿ: ದೇಶದ ಅಲ್ಲಿ ಇಲ್ಲಿ ಯಂಕ-ನಾಣಿ-ಸೀನ ಅಂತ ಕೆಲವು ಕಾಂಗ್ರೆಸ್ ಎಂಪಿಗಳಿದ್ದಾರೆ ಅಷ್ಟೇ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾಲೆಳೆದಿದ್ದಾರೆ.

    ಹಾನಗಲ್ ಉಪಚುನಾವಣೆಯ ಭರ್ಜರಿ ಪ್ರಚಾರದ ವೇಳೆ ಮಾತನಾಡಿದ ಅವರು, ನಾವು ಮಾಡಿರುವ ಅಭಿವೃದ್ಧಿ ಹೇಳ್ಕೊಂಡು ಮತ ಕೇಳ್ತಿದ್ದೇವೆ. ಹಣ, ಹೆಂಡ, ಪ್ರಭಾವ ಬಳಸಿ ವೋಟು ಕೇಳುವ ಕಾಲ ಹೋಗಿದೆ. ಜನ ಈಗ ಬುದ್ಧಿವಂತರಾಗಿದ್ದಾರೆ ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.

    ಕಾಂಗ್ರೆಸ್ ನವ್ರ ಬುಡಬುಡಿಕೆ ಮಾತುಗಳಿಗೆ ಜನ ಬೆಲೆ ಕೊಡಲ್ಲ. ಕಾಂಗ್ರೆಸ್ ರಾಜಕೀಯ ದೊಂಬರಾಟ ಮಾಡಿ ಜನರ ಮನಸು ಗೆಲ್ಲಕ್ಕಾಗಲ್ಲ. ನಮ್ಮ ಪ್ರಚಾರದ ವೇಳೆ ಕಾಂಗ್ರೆಸ್ ನವರ ಹೆಸರು ಹೇಳುವ ಅಗತ್ಯ ಇಲ್ಲ. ಯಾಕಂದ್ರೆ ಜನ ಈಗ ಕಾಂಗ್ರೆಸ್ ನವ್ರನ್ನು ಮರೆತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯನನ್ನು ಒಂದು ತಿಂಗಳು ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್

    ನಾನೇ ಸ್ವತ: ರಾಜೀನಾಮೆ ಕೊಟ್ಟೆ. ನನಗೆ ಯಾರೂ ಒತ್ತಾಯ ಮಾಡಲಿಲ್ಲ. ಅಧಿಕಾರ ಮುಖ್ಯ ಅಲ್ಲ ನನಗೆ. ಬೇರೆಯವರು ಸಿಎಂ ಆಗಬೇಕು ಅಂತ ರಾಜೀನಾಮೆ ಕೊಟ್ಟೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಬಿಸಾಕಿದೆ. ಇವತ್ತು ಬೊಮ್ಮಾಯಿ ಸಿಎಂ ಆಗಿದ್ದಾರೆ. ನನಗೆ ಅಧಿಕಾರ ಇಲ್ಲದಿದ್ರೂ ಜನ ಪ್ರೀತಿ, ಬೆಂಬಲ ತೋರಿಸ್ತಾರೆ. ನವೆಂಬರ್ 15 ರ ಬಳಿಕ ರಾಜ್ಯ ಪ್ರವಾಸ ಮಾಡ್ತೇನೆ. ಬಿಜೆಪಿ ಸ್ವಂತ ಬಲದಿಂದ ಅಧಿಕಾರ ಹಿಡಿಯುವಂತೆ ಮಾಡುವುದು ನನ್ನ ಸಂಕಲ್ಪ ಎಂದು ಹೇಳಿದರು.

    ನಾವು ದೊಡ್ಡ ಅಂತರದಲ್ಲಿ ಗೆದ್ದಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಬೇಕಿದೆ. ಚುನಾವಣೆ ಬಳಿಕ ವಿಜಯೋತ್ಸವ ಮಾಡೋಣ. 50-60 ಸಾವಿರ ಜನ ಸೇರಿಸಿ ವಿಜಯೋತ್ಸವ ಆಚರಿಸೋಣ ಎಂದು ತಿಳಿಸಿದರು. ಇದನ್ನೂ ಓದಿ: ನಮಗೆ ಯಾರ ಬಗ್ಗೆ ಕೂಡ ಸಾಫ್ಟ್ ಕಾರ್ನರ್ ಇಲ್ಲ: ಹೆಚ್.ಡಿ ಕುಮಾರಸ್ವಾಮಿ