Tag: Hanagal

  • Haveri | ಮಾದಕ ವಸ್ತು ಮಾರಾಟ – ನಾಲ್ವರು ಅರೆಸ್ಟ್

    Haveri | ಮಾದಕ ವಸ್ತು ಮಾರಾಟ – ನಾಲ್ವರು ಅರೆಸ್ಟ್

    – ಸುಮಾರು 2 ಕೆಜಿಯಷ್ಟು ಮಾದಕ ವಸ್ತು ವಶಕ್ಕೆ

    ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ಅಕ್ಕಿಆಲೂರು ಪಟ್ಟಣದಲ್ಲಿ ಬಳಿ ನಡೆದಿದೆ.

    ಅಕ್ಕಿಆಲೂರು ಪಟ್ಟಣದ ದನಮಾರುಕಟ್ಟೆಯಲ್ಲಿ ಬಳಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.20 ಲಕ್ಷ ಮೌಲ್ಯದ 2 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನ ಮುಬಾರಕ್ ಮಕಾಂದರ್, ಮುಕ್ತಿಯಾರ್ ಮಕಾಂದರ್, ಮಹಮ್ಮದ್ ಫಜ್ಜಲ್ ಹಾಗೂ ಮಹಮ್ಮದ್ ಸಾಧಿಕ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗಕ್ಕೆ ವಿಪಕ್ಷಗಳ ಸಿದ್ಧತೆ

    ಆರೋಪಿತರು ಹಾನಗಲ್ ಮತ್ತು ಹಾವೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾನಗಲ್ ಪಿಎಸ್‌ಐ ಸಂಪತ್ತ ಆನಿಕಿವಿ ನೇತೃತ್ವದಲ್ಲಿ ಗಾಂಜಾ ಮಾರಾಟಗಾರರ ಬಂಧನ ಮಾಡಲಾಗಿದೆ. ಇದನ್ನೂ ಓದಿ: ಸಿಎಂ ವಿರುದ್ಧ 24 ಕೊಲೆಗಳ ಆರೋಪ – ಯಾವುದೇ ಕ್ಷಣದಲ್ಲಿ ತಿಮರೋಡಿ ಬಂಧನ ಸಾಧ್ಯತೆ

  • ಹಾನಗಲ್ ಗ್ಯಾಂಗ್ ರೇಪ್ | ಆರೋಪಿಗಳಿಗೆ ಜಾಮೀನು – ಜೈಲಿನಿಂದಲೇ 5 ಕಾರು, ಹಿಂಬಾಲಕರೊಂದಿಗೆ ರೋಡ್ ಶೋ

    ಹಾನಗಲ್ ಗ್ಯಾಂಗ್ ರೇಪ್ | ಆರೋಪಿಗಳಿಗೆ ಜಾಮೀನು – ಜೈಲಿನಿಂದಲೇ 5 ಕಾರು, ಹಿಂಬಾಲಕರೊಂದಿಗೆ ರೋಡ್ ಶೋ

    ಹಾವೇರಿ: ಹಾನಗಲ್(Hanagal) ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳು ಜಾಮೀನು ಸಿಕ್ಕ ಬೆನ್ನಲ್ಲೇ ಆರೋಪಿಗಳು ಭರ್ಜರಿ ರೋಡ್ ಶೋ ನಡೆಸಿರುವ ಘಟನೆ ಹಾವೇರಿ(Haveri) ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಪಟ್ಟಣದಲ್ಲಿ ನಡೆದಿದೆ.

    ಕಳೆದ 3 ದಿನಗಳ ಹಿಂದೆ ಹಾವೇರಿ ಸಬ್ ಜೈಲಿನಿಂದ ಅಕ್ಕಿ ಆಲೂರಿನವರೆಗೆ(Akki Alur) ಆರೋಪಿಗಳು ರೋಡ್ ಶೋ ನಡೆಸಿದ್ದಾರೆ. 5 ಕಾರುಗಳಲ್ಲಿ 20ಕ್ಕೂ ಹೆಚ್ಚು ಹಿಂಬಾಲಕರ ಜೊತೆ ಅಕ್ಕಿ ಆಲೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿರೋ ವೀಡಿಯೋಗಳು ವೈರಲ್ ಆಗಿದೆ. ಇದನ್ನೂ ಓದಿ: ಯೂಟ್ಯೂಬ್‌ ಸಂದರ್ಶನ ನೀಡಿ ತಗಲಾಕಿಕೊಂಡ ದಾಸ – ಕೋರ್ಟ್‌ನಿಂದ ದರ್ಶನ್‌, ವಿಜಯಲಕ್ಷ್ಮಿಗೆ ಸಮನ್ಸ್‌

    ಕಳೆದ 3 ದಿನಗಳ ಹಿಂದೆ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಸಂತ್ರಸ್ತೆ ಆರೋಪಿಗಳನ್ನು ಗುರುತಿಸಲು ವಿಫಲವಾದ ಹಿನ್ನಲೆ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢ

     ಎ1 ಆರೋಪಿ ಅಪ್ತಾಬ್ ಚಂದನಕಟ್ಟಿ, ಎ2 ಮದರ್ ಸಾಬ್ ಮಂಡಕ್ಕಿ, ಎ3 ಸಮಿವುಲ್ಲಾ ಲಾಲನವರ, ಎ4 ಮಹಮದ್ ಸಾದಿಕ್  ಅಗಸಿಮನಿ, ಎ8 ಶೊಯಿಬ್ ಮುಲ್ಲಾ, ಎ11 ತೌಸಿಪ್ ಚೋಟಿ, ಎ13 ರಿಯಾಜ್ ಸಾವಿಕೇರಿಗೆ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಬೆಂಗಳೂರು ಕಂಪನಿಯಿಂದ ದೇಶದ ಮೊದಲ ಎಐ ಆಧಾರಿತ ಆಟೋಪೈಲಟ್ ಕಾರು ಅಭಿವೃದ್ಧಿ

    2024, ಜನವರಿ 8ರಂದು ಹಾನಗಲ್ ಹೊರವಲಯದಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜೈಲುಪಾಲಾಗಿದ್ದ 19 ಆರೋಪಿಗಳ ಪೈಕಿ 12 ಆರೋಪಿಗಳು 10 ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು. ಆದರೆ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಗಳನ್ನು ಹಲವು ಬಾರಿ ನ್ಯಾಯಾಲಯ ತಿರಸ್ಕರಿಸಿತ್ತು. ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನಲೆ ಆರೋಪಿಗಳಿಗೆ ಈಗ ಜಾಮೀನು ಸಿಕ್ಕಿದೆ. ಇದನ್ನೂ ಓದಿ: ಮಂಗಳೂರು | ಮದುವೆಯ ವಿಚಾರಕ್ಕೆ ಕಿರಿಕ್ – ಸಂಧಾನಕ್ಕೆ ಬಂದಿದ್ದ ನೆಂಟನ ಬರ್ಬರ ಹತ್ಯೆ

    ಆರೋಪಿಗಳು ಜಾಮೀನು ಸಿಕ್ಕ ಬೆನ್ನಲ್ಲೇ ಕಾರಿನಲ್ಲಿ ರೋಡ್ ಶೋ ನಡೆಸಿರುವುದು ಜಿಲ್ಲೆಯ ಜನರ ಆಕ್ರೋಶ ಕಾರಣವಾಗಿದೆ. ಪೊಲೀಸ್ ಇಲಾಖೆ ಮತ್ತೆ ಪ್ರಕರಣ ದಾಖಲಿಸಿಕೊಂಡು ಜಾಮೀನು ರದ್ದು ಮಾಡುವಂತೆ ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.

  • ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವು

    ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವು

    ಹಾವೇರಿ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹಾವೇರಿ(Haveri) ಜಿಲ್ಲೆ ಹಾನಗಲ್(Hanagal) ತಾಲೂಕಿನ ಚಿಕ್ಕಂಶಿ ಹೊಸೂರು ಗ್ರಾಮದಲ್ಲಿ ನಡೆದಿದೆ.

    ಮೃತರನ್ನ ಮಾಲತೇಶ ಕುರುಬರ(19), ಬಸವರಾಜ್(38) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಹಲವು ಮಹಿಳೆಯರ ರೇಪ್‌, ವೀಡಿಯೋ ಮಾಡಿ ಸುಲಿಗೆ – ಪೊಲ್ಲಾಚಿ ಕೇಸ್‌ನ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಮಾಲತೇಶ ರಕ್ಷಣೆಗೆ ಹೋದ ಬಸವರಾಜ್ ಸೇರಿ ಇಬ್ಬರೂ ನೀರಿನಿಂದ ಹೊರಬರಲಾರದೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ, ಮಾಲತೇಶ ಶವ ಮೇಲಕ್ಕೆತ್ತಿದ್ದಾರೆ. ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ಲೋಕಾ ರೇಡ್ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓ

    ಇನ್ನೋರ್ವ ವ್ಯಕ್ತಿ ಬಸವರಾಜ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಹಾನಗಲ್ ಪೊಲೀಸ್ ಠಾಣೆಯ(Hanagal Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹಾವೇರಿ | ಬಿರುಗಾಳಿ ಸಹಿತ ಮಳೆ – ಸಿಡಿಲಬ್ಬರಕ್ಕೆ ಇಬ್ಬರು ಬಲಿ

    ಹಾವೇರಿ | ಬಿರುಗಾಳಿ ಸಹಿತ ಮಳೆ – ಸಿಡಿಲಬ್ಬರಕ್ಕೆ ಇಬ್ಬರು ಬಲಿ

    ಹಾವೇರಿ: ಸಿಡಿಲು ಬಡಿದು(Lightning strikes) ಇಬ್ಬರು ವೃದ್ಧರು ಮೃತಪಟ್ಟಿರುವ ಪ್ರತ್ಯೇಕ ಘಟನೆ ಹಾವೇರಿ(Haveri) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹಾನಗಲ್(Hanagal) ತಾಲೂಕಿನ ಕೊಂಡೊಜಿ ಗ್ರಾಮದ ಮರಿಯವ್ವ ನಾಯ್ಕರ್(60) ಮೃತರು. ಮೂಲತಃ ಗದಗ(Gadag) ಜಿಲ್ಲೆ ಬಸಾಪುರ ಗ್ರಾಮದ ನಿವಾಸಿಯಾದ ಮರಿಯವ್ವ ಕಳೆದ ಕೆಲವು ತಿಂಗಳಿನಿಂದ ಮಾವಿನ ತೋಟದಲ್ಲಿ ಕೆಲಸ ಮಾಡಿಕೊಂಡಿಕೊಂಡಿದ್ದರು. ಇಂದು ಸಂಜೆ ಸಿಡಿಲು ಬಡಿದು ಮರಿಯವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಪಾಕ್‌ ಜೊತೆ ಮಾತುಕತೆ ನಡೆದ್ರೆ ಭಯೋತ್ಪಾದನೆ, POK ಬಗ್ಗೆ ಮಾತ್ರ: ಮೋದಿ ಖಡಕ್‌ ಮಾತು

    ಜಿಲ್ಲೆಯ ಹಿರೇಕೆರೂರು(Hirekeruru) ತಾಲೂಕಿನ ಡಮ್ಮಳ್ಳಿ(Dammalli) ಗ್ರಾಮದ ನಾಗಪ್ಪ ಕನಸೋಗಿ(62) ಮೃತ ದುರ್ದೈವಿ. ಗ್ರಾಮದ ದೊಡ್ಡ ಕೆರೆಬಳಿ ದನಕಾಯಲು ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇನ್ನು ಪಾಕ್ ಕೆಮ್ಮಿದ್ರೂ ಭಾರತೀಯ ಸೇನೆ ಬಾರ್ಡರ್‌ಗೆ ನುಗ್ಗುತ್ತೆ: ಪ್ರಹ್ಲಾದ್ ಜೋಶಿ

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರೇಕೆರೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲೆಯ ಹಲವೆಡೆ ಬಿರುಗಾಳಿ ಸಮೇತ ಮಳೆಯಾಗಿದ್ದು, ಜಿಲ್ಲೆಯಲ್ಲಿ ಮಳೆರಾಯ ತಂಪೆರೆದಿದ್ದಾನೆ.

  • ಹೊಸ ಬೈಕ್ ಖರೀದಿಸಿ ಮನೆಗೆ ತೆರಳುತ್ತಿದ್ದಾಗ ಅಪಘಾತ – ಸವಾರ ಸ್ಥಳದಲ್ಲೇ ಸಾವು

    ಹೊಸ ಬೈಕ್ ಖರೀದಿಸಿ ಮನೆಗೆ ತೆರಳುತ್ತಿದ್ದಾಗ ಅಪಘಾತ – ಸವಾರ ಸ್ಥಳದಲ್ಲೇ ಸಾವು

    ಹಾವೇರಿ: ಹೊಸ ಬೈಕ್ ಖರೀದಿಸಿ ಮನೆಗೆ ತೆರಳುತ್ತಿದ್ದ ವೇಳೆ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ(Haveri) ತಾಲೂಕಿನ ಗೌರಾಪುರ(Gowarapura) ಗ್ರಾಮದಲ್ಲಿ ನಡೆದಿದೆ.

    ಹಾನಗಲ್ ತಾಲೂಕಿನ ವರ್ದಿ ಗ್ರಾಮದ ನಿವಾಸಿ ನಾಗರಾಜ್ ಪವಾಡಿ(35) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ದಾವಣಗೆರೆ | ರೌಡಿಶೀಟರ್ ಮುಖಕ್ಕೆ ಪೆಪ್ಪರ್ ಸ್ಪ್ರೈ ಮಾಡಿ ಕೊಲೆ

    ನಾಗರಾಜ್ ಸೋಮವಾರ ಹೊಸ ಬೈಕ್ ಖರೀದಿಸಿ ಮನೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಇನ್ನೋರ್ವ ವ್ಯಕ್ತಿಗೂ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ವಿಚಾರಣಾಧೀನ ಕೈದಿ ಪೊಲೀಸ್ ವಶಕ್ಕೆ

    ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ(Haveri Rural Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಹಾವೇರಿ| ನಿಧಿ ಆಸೆಗಾಗಿ ಕೋಣಕಲ್ಲ ಭರಮ ದೇವರ ಕಲ್ಲು ಅಗೆದ ಕಳ್ಳರು

    ಹಾವೇರಿ| ನಿಧಿ ಆಸೆಗಾಗಿ ಕೋಣಕಲ್ಲ ಭರಮ ದೇವರ ಕಲ್ಲು ಅಗೆದ ಕಳ್ಳರು

    ಹಾವೇರಿ: ನಿಧಿ ಆಸೆಗಾಗಿ ಕಳ್ಳರು ಕೋಣಕಲ್ಲ ಭರಮ ದೇವರ ಕಲ್ಲು ಅಗೆದಿರುವ ಘಟನೆ ಜಿಲ್ಲೆಯ ಹಾನಗಲ್(Hanagal) ತಾಲೂಕು ಮಲಗುಂದ(Malagunda) ಗ್ರಾಮದಲ್ಲಿ ನಡೆದಿದೆ. ನಿಧಿಗಳ್ಳರ ಹಾವಳಿಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

    ಗ್ರಾಮದ ಹೊರವಲಯದಲ್ಲಿರುವ ಜಾಗದಲ್ಲಿ ನಿಧಿ ಆಸೆಗಾಗಿ ಗ್ರಾಮದ ಜನ ಆರಾಧಿಸುತ್ತಿದ್ದ ಕೋಣಕಲ್ಲ ಭರಮ ದೇವರ ಕಲ್ಲನ್ನು ಅಗೆದು ಹಾಕಿದ್ದಾರೆ. ಆರಾಧ್ಯ ದೇವರ ಕಲ್ಲು ಅಗೆದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

    ಕಳೆದ 2-3 ದಿನಗಳಿಂದ ಪುರಾತನ ಕಾಲದ ದೇವಾಲಯ ಬಳಿ ನಿಧಿಗಳ್ಳರು ಓಡಾಡುತ್ತಿದ್ದಾರೆ. ನಿಧಿ ಆಸೆಗಾಗಿ ಕಲ್ಲು ಅಗೆದ ದುಷ್ಕರ್ಮಿಗಳು ಪತ್ತೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆಡೂರು ಪೊಲೀಸ್ ಠಾಣೆಯ(Aduru Police Station) ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 80ರ ಇಳಿವಯಸ್ಸಲ್ಲಿ ಇ-ಸ್ವತ್ತಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಅಜ್ಜಿ ಹೋರಾಟ

  • ಮೇವು ತಿನ್ನುವ ವೇಳೆ ಕಚ್ಚಾ ನಾಡಬಾಂಬ್ ಬ್ಲಾಸ್ಟ್ – ಎಮ್ಮೆ ಸಾವು

    ಮೇವು ತಿನ್ನುವ ವೇಳೆ ಕಚ್ಚಾ ನಾಡಬಾಂಬ್ ಬ್ಲಾಸ್ಟ್ – ಎಮ್ಮೆ ಸಾವು

    ಹಾವೇರಿ: ಎಮ್ಮೆ ಮೇವು ತಿನ್ನುವ ವೇಳೆ ಕಚ್ಚಾ ನಾಡಬಾಂಬ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಎಮ್ಮೆ (Buffalo) ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಬಳಿ ನಡೆದಿದೆ.

    ಗ್ರಾಮದ ರೈತ ಬಾಷಾಸಾಬ್ ಬಂಕಾಪುರ ಎಂಬ ರೈತನಿಗೆ ಸೇರಿದ ಎಮ್ಮೆ ಮೃತಪಟ್ಟಿದೆ. ಕಾಡು ಹಂದಿ ಬೇಟೆಗಾಗಿ ಬೇಟೆಗಾರರು ಇಟ್ಟಿದ್ದ ಕಚ್ಚಾ ನಾಡಬಾಂಬ್ ಸೇವಿಸಿ ಈ ದುರ್ಘಟನೆ ನಡೆದಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ದನಗಳು ಮೇಯಿಸಲು ಹೋಗಿದ್ದ ವೇಳೆ ದುರಂತ ಸಂಭವಿಸಿದೆ. ಇದನ್ನೂ ಓದಿ: ಛತ್ತೀಸ್‌ಗಢ| ಇಬ್ಬರು ನಾಗರಿಕರ ಹತ್ಯೆ ಮಾಡಿದ ನಕ್ಸಲರು

    ಕಚ್ಚಾ ನಾಡಬಾಂಬ್ ಇಟ್ಟವರ ಮೇಲೆ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ. ಎಮ್ಮೆ ಕಳೆದುಕೊಂಡ ಬಡ ರೈತನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲಾಗಿದೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಉತ್ತರಾಖಂಡದ ಬಳಿಕ ಗುಜರಾತ್‌ನಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ

  • ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ; ಎರಡು ಸ್ಥಳದಲ್ಲಿ ಸಾಮೂಹಿಕವಾಗಿ ರೇಪ್ ಮಾಡಿದ್ದಾರೆ: ಸಂತ್ರಸ್ತೆ ಸಂಬಂಧಿ

    ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ; ಎರಡು ಸ್ಥಳದಲ್ಲಿ ಸಾಮೂಹಿಕವಾಗಿ ರೇಪ್ ಮಾಡಿದ್ದಾರೆ: ಸಂತ್ರಸ್ತೆ ಸಂಬಂಧಿ

    ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ (Hanagal Gang Rape) ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರಿ ಮೇಲೆ ಹಲ್ಲೆ ಮಾಡಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಎರಡು ಸ್ಥಳದಲ್ಲಿ ಸಾಮೂಹಿಕವಾಗಿ ರೇಪ್ ಮಾಡಿದ್ದಾರೆ ಎಂದು ಸಂತ್ರಸ್ತೆ ಸಂಬಂಧಿ ಸೈಯದ್ ಬಸೀರ್ ಹೇಳಿಕೆ ನೀಡಿದ್ದಾರೆ.

    ಪ್ರಕರಣ ಸಂಬಂಧ ಸಂತ್ರಸ್ತೆ ಕುಟುಂಬದರು ಸಿಎಂಗೆ ಮನವಿ ಸಲ್ಲಿಸಲು ಹಾವೇರಿಯ (Haveri) ನರಸೀಪುರದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂತ್ರಸ್ತೆ ಸಂಬಂಧಿ ಬಸೀರ್, ಮೊದಲ ದಿನ ಅತ್ಯಾಚಾರ ಬಗ್ಗೆ ಹೇಳಿಕೆ ನೀಡದಂತೆ ಒತ್ತಡ ಬಂದಿತ್ತು. ಪ್ರಕರಣದ ಬಗ್ಗೆ ಸರಿಯಾದ ತನಿಖೆ ಮಾಡಬೇಕು. ಸಂತ್ರಸ್ತೆಗೆ ಸರ್ಕಾರಿ ಉದ್ಯೋಗ ನೀಡಬೇಕು, ಪರಿಹಾರ ಕೊಡಬೇಕು. ಸಂತ್ರಸ್ತೆ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಬೇಕು. ಬೆದರಿಕೆ ಹಾಕಿದರೂ ನಾವು ಅಂಜುವುದಿಲ್ಲ ಎಂದರು. ಇದನ್ನೂ ಓದಿ: ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ: ಕಾಂಗ್ರೆಸ್ ಕಿಡಿ

    ಈ ಕುರಿತು ರಹೀಮಾ ಪ್ರತಿಕ್ರಿಯಿಸಿದ್ದು, ಸಂತ್ರಸ್ತೆ ನನಗೆ ಸಹೋದರಿ ಆಗಬೇಕು. ಅವರಿಗೆ ಬಹಳ ತೊಂದರೆ ಆಗಿದೆ. ನಮ್ಮ ಸಹೋದರಿಗೆ ಯಾರೂ ಭೇಟಿ ಆಗಲಿಲ್ಲ, ಏನು ಹೇಳಲೂ ಇಲ್ಲ. ನಮಗೆ ಪರಿಹಾರ ನೀಡಬೇಕು. ಅವರಿಗೆ ಮತ್ತೆ ಈಗ ಹುಷಾರಿಲ್ಲ, ಚಿಕಿತ್ಸೆ ನೀಡಬೇಕಿದೆ. ಪೋಲೀಸರು ಏಕಾಏಕಿ ಬಂದು ಮನೆಗೆ ಕರೆದುಕೊಂಡು ಬಿಟ್ಟು ಹೋಗಿದ್ದಾರೆ. ಪೊಲೀಸರು ಏನು ಹೇಳಲಿಲ್ಲ. ಬಂದು ಮನೆಗೆ ಬಿಟ್ಟು ಹೋದರು ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ಘೀಳಿಡುತ್ತಾ ಅಟ್ಟಾಡಿಸಿದ ಒಂಟಿ ಸಲಗ – ಸ್ಕೂಟಿಯನ್ನು ಬಿಟ್ಟು ಮರ ಏರಿ ಪಾರಾದ ಇಟಿಎಫ್ ಸಿಬ್ಬಂದಿ

  • ಬಂಧಿಸಿದ ಇಬ್ಬರು ಅತ್ಯಾಚಾರವೆಸಗಿದವರಲ್ಲ.. ಬೇರೆಯವರನ್ನ ಬಂಧಿಸಿದ್ದಾರೆ: ಸಂತ್ರಸ್ತೆ

    ಬಂಧಿಸಿದ ಇಬ್ಬರು ಅತ್ಯಾಚಾರವೆಸಗಿದವರಲ್ಲ.. ಬೇರೆಯವರನ್ನ ಬಂಧಿಸಿದ್ದಾರೆ: ಸಂತ್ರಸ್ತೆ

    – ಹಾವೇರಿ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆ ಸ್ಪಷ್ಟನೆ
    – ಜೀವ ಭಯವಿದ್ದರೂ ಮನೆ ಬಳಿ ಪೊಲೀಸರನ್ನ ನಿಯೋಜಿಸಿಲ್ಲ ಎಂದು ಆರೋಪ

    ಕಾರವಾರ: ಹಾನಗಲ್ (Hanagal) ಗ್ಯಾಂಗ್ ರೇಪ್ (Gang Rape) ಪ್ರಕರಣಕ್ಕೆ ಇದೀಗ ಟ್ಟಿಸ್ಟ್ ಸಿಕ್ಕಿದ್ದು, ಬಿಜೆಪಿಗರು (BJP) ಸಂತ್ರಸ್ತೆಯನ್ನು ಭೇಟಿಯಾಗಲು ಬರುತ್ತಿದ್ದಂತೆ ಆಕೆಯನ್ನು ಹಾವೇರಿ (Haveri) ಪೊಲೀಸರು ಶಿರಸಿ ನಿವಾಸಕ್ಕೆ ಕರೆತಂದು ಬಿಟ್ಟಿದ್ದಾರೆ.

    ಇನ್ನು ಇದೇ ಮೊದಲಬಾರಿಗೆ ಮಾತನಾಡಿದ ಸಂತ್ರಸ್ತೆ (Victim), ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದವರಲ್ಲಿ ಇಬ್ಬರು ಈ ಪ್ರಕರಣದಲ್ಲಿ ಇಲ್ಲದವರು. ಪೊಲೀಸರು ಬೇರೆಯವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ: ಶೆಟ್ಟರ್

    ಪೊಲೀಸರು ಇಬ್ಬರ ಫೋಟೋ ತೋರಿಸಿದ್ದರು. ಆ ಇಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಲ್ಲ. ಆರು ಮಂದಿ ಬಂಧಿಸಿದವರಲ್ಲಿ ಇಬ್ಬರು ಈ ಪ್ರಕರಣದಲ್ಲಿ ಇಲ್ಲದವರು. ವಿಡಿಯೋದಲ್ಲಿ ಇದ್ದವರು ಆ ಇಬ್ಬರಲ್ಲ. ಸ್ಥಳ ಪರಿಶೀಲನೆ ಎಂದು ಹೇಳಿ ಇದೀಗ ಮನೆಗೆ ತಂದು ಬಿಟ್ಟಿದ್ದಾರೆ. ನನ್ನ ಕುಟುಂಬಸ್ಥರಿಗೂ ಮಾಹಿತಿ ನೀಡದೇ ಮನೆಗೆ ಬಿಟ್ಟು ಹೋಗಿದ್ದಾರೆ. ಜೀವ ಭಯವಿದ್ದರೂ ಪೊಲೀಸರನ್ನು ಮನೆ ಬಳಿ ನಿಯೋಜಿಸಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡೇ ಬಂದ ವೃದ್ಧೆ; ಸರ್ಕಾರಕ್ಕೆ ಹೆಚ್‍ಡಿಕೆ ತರಾಟೆ

  • ರೂಮಿನಲ್ಲಿ ಮಹಿಳೆ, ಪುರುಷನಿಗೆ ಥಳಿತ – ಹಾವೇರಿಯಲ್ಲಿ ನೈತಿಕ ಪೊಲೀಸ್‌ಗಿರಿ, ಇಬ್ಬರು ಅರೆಸ್ಟ್

    ರೂಮಿನಲ್ಲಿ ಮಹಿಳೆ, ಪುರುಷನಿಗೆ ಥಳಿತ – ಹಾವೇರಿಯಲ್ಲಿ ನೈತಿಕ ಪೊಲೀಸ್‌ಗಿರಿ, ಇಬ್ಬರು ಅರೆಸ್ಟ್

    ಹಾವೇರಿ: ರಾಜ್ಯದಲ್ಲಿ ಇತ್ತೀಚಿಗೆ ನೈತಿಕ ಪೊಲೀಸ್‌ಗಿರಿ (Moral Policing) ಹೆಚ್ಚಾಗುತ್ತಿದ್ದು, ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿ ಬಿದ್ದು ಇಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಹಾನಗಲ್ (Hanagal) ತಾಲೂಕಿನ ನಾಲ್ಕರ ಕ್ರಾಸ್ ಬಳಿ ಇರುವ ಹೋಟೆಲಿನಲ್ಲಿ ಈ ಘಟನೆ ನಡೆದಿದೆ. ಅನ್ಯಕೋಮಿನ ವಿವಾಹಿತ ಮಹಿಳೆ ಮತ್ತು ಪುರುಷನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ‌ಆಟೋ ಚಾಲಕನೊಬ್ಬನ ಮಾಹಿತಿ ಮೇರೆಗೆ, 5 ಜನರ ಯುವಕರ ಗುಂಪು ಏಕಾಏಕಿ ಲಾಡ್ಜ್‌ಗೆ ನುಗ್ಗಿದ್ದಾರೆ. ರೂಮಿನಲ್ಲಿ ನೀರು ಬರುತ್ತಾ ಇಲ್ವೋ ಎಂಬುದರ ಬಗ್ಗೆ ಪರೀಕ್ಷೆ ಮಾಡಬೇಕು ಎಂದು ಹೇಳಿ ಯುವಕರು ಬಾಗಿಲು ತೆಗೆಸಿದ್ದಾರೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!

    ಈ ವೇಳೆ ಬುರ್ಖಾ ಹಾಕಿಕೊಂಡು ಬಂದು ಮಲಗಿದ್ಯಾ ಎಂದು ಪ್ರಶ್ನಿಸಿ ಮಹಿಳೆಯನ್ನು ಮತ್ತು ಪುರುಷ ಸೋಮಶೇಖರ್ ಚೆನ್ನಾಗಿ ಥಳಿಸಿದ್ದಾರೆ. ನಿನಗೆ ನಮ್ಮ ಹುಡುಗಿಯೇ ಬೇಕಾ ಎಂದು ಹೇಳಿ ಸೋಮಶೇಖರ್‌ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ.

    ಪ್ರಕರಣ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ರೂಂ ಬಾಯ್ ವಿನಯ್ ಕ್ಯಾಸನೂರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಾಹಿತ ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

     

    ಹಲ್ಲೆ ನಡೆಸಿದ ಅಕ್ಕಿಆಲೂರು ಗ್ರಾಮದ ಅಲ್ತಾಫ್‌ ಮತ್ತು ಮರ್ದಾನ್ ಸಾಬ್ ಎಂಬುವರನ್ನ ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಮೂವರು ಆರೋಪಿಗಳ ಪತ್ತೆಗೆ ಹಾನಗಲ್ ಪೊಲೀಸರು ಬಲೆ ಬೀಸಿದ್ದಾರೆ.

    ಮಹಿಳೆ ಮೇಲೆ ಹಲ್ಲೆ ಮಾಡಿದ ಬಳಿಕ ಮತ್ತೆ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಜೊತೆಗೆ ಆ ವಿವಾಹಿತ ಮಹಿಳೆಗೆ ಹಲ್ಲೆ ಮಾಡಿ 500 ಕೊಟ್ಟು ರೂಪಾಯಿ ಕೊಟ್ಟು ಕಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ್ದಾರೆ.