Tag: HamsaLekha

  • ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರಕ್ಕೆ ಹಂಸಲೇಖ ಸಂಗೀತ

    ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರಕ್ಕೆ ಹಂಸಲೇಖ ಸಂಗೀತ

    ಕನ್ನಡ ಚಿತ್ರರಂಗದ ಲೆಜೆಂಡ್ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರು ಓಂಪ್ರಕಾಶ್ ರಾವ್ ನಿರ್ದೇಶನದ ಫೀನಿಕ್ಸ್ ಹಾಗೂ ಗೆರಿಲ್ಲಾ ವಾರ್ (Guerilla War) ಚಿತ್ರಗಳಿಗೆ ಸಂಗೀತ ನೀಡಲಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 49 ಹಾಗೂ 50ನೇ ಚಿತ್ರಗಳಾಗಿದೆ.

    ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರಕ್ಕೆ ಹಂಸಲೇಖ ಅವರ ಕೊಡುಗೆ ಅಪಾರ. ಅವರಿಗೆ ಅವರೆ ಸಾಟಿ. ನನ್ನ ನಿರ್ದೇಶನದ ಲಾಕಪ್ ಡೆತ್, ಸಿಂಹದ ಮರಿ, AK 47, ಪಾಳೆಗಾರ ಹೀಗೆ ಒಂದಕ್ಕಿಂತ ಒಂದು ಸೂಪರ್ ಹಿಟ್ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟವರು ಗುರುಗಳಾದ ಹಂಸಲೇಖ ಅವರು. ಈಗ ನನ್ನ ನಿರ್ದೇಶನದ ಫೀನಿಕ್ಸ್ (Phoenix) ಹಾಗೂ ಗೆರಿಲ್ಲಾ ವಾರ್ ಚಿತ್ರಗಳಿಗೂ ಹಂಸಲೇಖ ಅವರು ಸಂಗೀತ ಸಂಯೋಜಿಸಲು ಒಪ್ಪಿಕೊಂಡಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ (Om Prakash Ra) ತಿಳಿಸಿದ್ದಾರೆ.

    ಈ ಪೈಕಿ ಚಿತ್ರೀಕರಣ ಮುಕ್ತಾಯ ಹಂತದಲ್ಲಿರುವ ಫೀನಿಕ್ಸ್ ಚಿತ್ರವನ್ನು ಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ. ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಗೆರಿಲ್ಲಾ ವಾರ್ ಚಿತ್ರವನ್ನು ಎಂ.ಆರ್ ಟಾಕೀಸ್ ಲಾಂಛನದಲ್ಲಿ ನಯನ ಗೌಡ ಅವರು ನಿರ್ಮಿಸುತ್ತಿದ್ದು, ಮಂಡ್ಯ ಲೋಕಿ ನಾಯಕನಾಗಿ ಹಾಗೂ ನಿಮಿಕ ರತ್ನಾಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 50 ನೇ ಚಿತ್ರವಾಗಿದ್ದು, ಆಗಸ್ಟ್‌ನಲ್ಲಿ ಆರಂಭವಾಗಲಿದೆ.

  • ಹಂಸಲೇಖ, ರವಿಚಂದ್ರನ್ `ಯಾ’ ಸಾಹಿತ್ಯದ ಹಿಟ್ ಸೀಕ್ರೆಟ್..!

    ಹಂಸಲೇಖ, ರವಿಚಂದ್ರನ್ `ಯಾ’ ಸಾಹಿತ್ಯದ ಹಿಟ್ ಸೀಕ್ರೆಟ್..!

    ನ್ನಡ ಚಿತ್ರರಂಗದ ಸಂಗೀತ ಲೋಕದ ಇತಿಹಾಸದಲ್ಲಿ ಎಂದೂ ಅಳಿಸಲಾಗದ ಹೆಜ್ಜೆ ಗುರುತನ್ನ ಮೂಡಿಸಿದ ಜೋಡಿ ಕ್ರೇಜಿಸ್ಟಾರ್ ರವಿಚಂದ್ರನ್ (V.Ravichandran) ಹಾಗೂ ನಾದಬ್ರಹ್ಮ ಹಂಸಲೇಖ (Hamsalekha). ಸ್ಯಾಂಡಲ್‌ವುಡ್‌ನ ದಿಗ್ಗಜ ಜೋಡಿಗಳಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಕೂಡಾ ಪ್ರಮುಖ ಪಾತ್ರವಹಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸೂಪರ್ ಹಿಟ್ ಹಾಡುಗಳು ಮೂಡಿಬಂದಿವೆ. ಇಂದಿಗೂ ಆ ಹಾಡುಗಳು ಕೇಳುಗರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.

    ನಾದಬ್ರಹ್ಮ ಹಂಸಲೇಖ ಅವರು ತಮ್ಮ 74ನೇ ಹುಟ್ಟುಹಬ್ಬವನ್ನ ಬಹಳ ವಿಶೇಷವಾಗಿ ಹಾಗೂ ತುಂಬಾನೇ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಈ ಹಿಂದೆ ಎಲ್ಲೂ ಮಾತನಾಡದ ಹಲವಾರು ಸಂಗತಿಗಳನ್ನ ಮುಕ್ತವಾಗಿ ಮಾತನಾಡಿದ್ದಾರೆ. ರವಿಚಂದ್ರನ್ ಸಿನಿಮಾಗೆ ಬರೆದ ಕೆಲವು ಸಾಹಿತ್ಯಗಳು ಯಾಕೆ ಹಿಟ್ ಆಗುತ್ತಿದ್ದವು ಅನ್ನೋ ಬಗ್ಗೆ ಮಾತಾಡಿದ್ದಾರೆ. ಇದನ್ನೂ ಓದಿ: ಫಸ್ಟ್ ಲವ್ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

    ಯಾರೆಲೆ ನಿನ್ನ ಮೆಚ್ಚಿದವನು, ಯಾರೇ ನೀನು ಚೆಲುವೆ, ಯಾರಿಗೆ ಬೇಕು ಈ ಲೋಕ, ಯಾರೇ ನೀನು ರೋಜಾ ಹೂವೆ, ಯಾರಿವಳು ಯಾರಿವಳು ಸೂಜಿಮಲೆ ಕಣ್ಣಿನವಳು, ಯಾರೆ ನೀನು ಸುಂದರ ಚೆಲುವೆ. ಹೀಗೆ `ಯಾ’ ಇಂದ ಶುರುವಾಗುವ ಹಾಡುಗಳು ಸ್ಯಾಂಡಲ್‌ವುಡ್‌ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿವೆ.

    ಕ್ರೇಜಿಸ್ಟಾರ್ ಸಿನಿಮಾಗೆ ಹಂಸಲೇಖ ಹಾಡುಗಳನ್ನ ಬರೆಯೊಕೆ ಶುರುಮಾಡುವ ವೇಳೆ ಎಲ್ಲರೂ `ಯಾ’ ಅಕ್ಷರದಿಂದ ಶುರುವಾಗುವ ಸಾಹಿತ್ಯವನ್ನ ನಿರೀಕ್ಷೆ ಮಾಡುತ್ತಿದ್ದರಂತೆ. ಯಾಕಂದ್ರೆ `ಯಾ’ ಇಂದ ಶುರುವಾದ ಸಾಕಷ್ಟು ಗೀತೆಗಳು ಸೂಪರ್ ಹಿಟ್ ಲಿಸ್ಟ್ ಸೇರಿದ್ದವು. ಈ ಬಗ್ಗೆ ಸ್ವತಃ ಹಂಸಲೇಖ ಅವ್ರು ಹಳೆ ನೆನಪು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಥಗ್ ಲೈಫ್ ಸೋಲು – ಕ್ಷಮೆ ಕೇಳಿದ ನಿರ್ದೇಶಕ ಮಣಿರತ್ನಂ

  • ನನ್ನ ಹಂಸಲೇಖ ನಡುವೆ ಮನಸ್ತಾಪ ಯಾಕೆ ಗೊತ್ತಾ – ಕ್ರೇಜಿಸ್ಟಾರ್ ಮನದಾಳ

    ನನ್ನ ಹಂಸಲೇಖ ನಡುವೆ ಮನಸ್ತಾಪ ಯಾಕೆ ಗೊತ್ತಾ – ಕ್ರೇಜಿಸ್ಟಾರ್ ಮನದಾಳ

    ನಾದಬ್ರಹ್ಮ ಹಂಸಲೇಖ (Hamsalekha) ಅವರ 74ನೇ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಘೋಷಣೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಹಂಸಲೇಖ ಅವರ ಆಪ್ತ ಗೆಳೆಯರು, ನಿರ್ದೇಶಕರು ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಆಗಮಿಸಿ ಶುಭಾಶಯ ಕೋರಿದ್ದಾರೆ. ಜೊತೆಗೆ ಹಂಸಲೇಖ ಹಾಗೂ ಕ್ರೇಜಿಸ್ಟಾರ್ ನಡುವಿನ ಸ್ನೇಹ ಹಾಗೂ ಮನಸ್ತಾಪದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ ನಟ ರವಿಚಂದ್ರನ್. ಹಂಸಲೇಖ ಹುಟ್ಟುಹಬ್ಬದ ವೇದಿಕೆ ಮೇಲೆ ಕ್ರೇಜಿಸ್ಟಾರ್ ಮಾತಾಡಿದ ಮಾತುಗಳು ಕನ್ನಡ ಸಿನಿಮಾ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ.

    ”ನಮ್ಮಿಬ್ಬರ ಸ್ನೇಹ ದೂರಾಗಿದ್ದಕ್ಕೆ ಕಾರಣವಿಲ್ಲ. ಯಾವತ್ತೂ ಜಗಳ ಮಾಡಿ ದೂರಾಗಲಿಲ್ಲ. ಹೇಗೆ ಸೇರಿದ್ದೇವೋ ಹಾಗೆ ದೂರಾದೆವು. ನಾನು ಪೆನ್ನು ಪೇಪರ್ ಹಿಡಿಬೇಕು ಅಂತಾ ಇತ್ತೋ ಏನೋ ಹೀಗಾಗಿ ನಾವು ದೂರವಾಗಿದ್ದಿರಬಹುದು. ಈಗ ನನ್ನ ಜಾಗಕ್ಕೆ ರಾಜು (ಹಂಸಲೇಖ) ಬಂದಿದ್ದಾರೆ. ನಾನು ಹೃದಯ ಆದ್ರೆ ನೀವು ನಮ್ಮ ಹಾರ್ಟ್ ಬೀಟ್” ಎಂದು ಹಂಸಲೇಖ ಬರ್ತ್ ಡೇ ದಿನ ಕ್ರೇಜಿಸ್ಟಾರ್ ಮನಬಿಚ್ಚಿ ಮಾತಾಡಿದ್ದಾರೆ. ಅದೆಷ್ಟೋ ವರ್ಷಗಳಿಂದ ತಮ್ಮ ಮನಸ್ಸಲ್ಲಿದ್ದ, ಮುಕ್ತವಾಗಿ ಹೇಳಬೇಕೆಂದುಕೊಂಡಿದ್ದ ಮನದಾಳದ ಇಂಗಿತವನ್ನ ತೋಡಿಕೊಂಡಿದ್ದಾರೆ. ಇದನ್ನೂ ಓದಿ: `ಸುದೀಪ್ ಸರ್ ನನ್ನ ದೇವರು’..ಅವ್ರೇನ್ ಮಾಡ್ತಾರೆ – ನಂದಕಿಶೋರ್ ವಿರುದ್ಧ ದೂರು ಕೊಟ್ಟ ಶಬರೀಶ್ ಮಾತು

    ಕ್ರೇಜಿಸ್ಟಾರ್ ರವಿಚಂದ್ರನ್ ಸ್ನೇಹ ಹಾಗೂ ಅವರು ಸಪೋರ್ಟ್ ಮಾಡಿದ ಬಗೆಯನ್ನ ಹಂಸಲೇಖ ಎಳೆಎಳೆಯಾಗಿ ವಿವರಿಸಿದರು. ಈಗಲೂ ಕ್ರೇಜಿಸ್ಟಾರ್ 10 ಕೆಜಿ ತೂಕ ಕಡಿಮೆ ಮಾಡಿ ನಿಂತರೆ, ಸ್ಪುರದೃಪಿ ನಟರು. ಅತೀ ಹೆಚ್ಚು ಲೇಡಿ ಅಭಿಮಾನಿಗಳು ಇರುವ ಇರುವ ಏಕೈಕ ನಟ ಅದು ಕ್ರೇಜಿಸ್ಟಾರ್ ಎಂದು ಗುಣಗಾನ ಮಾಡಿದರು. ಅಲ್ಲದೇ ಎಂಜಿ ರೋಡ್ ಕಡೆ ತಿರುಗಿಕೊಂಡಿದ್ದ ಪ್ರೇಕ್ಷಕರನ್ನು ಗಾಂಧಿನಗರಕ್ಕೆ ಕರೆದಕೊಂಡು ಬಂದವರು ರವಿಚಂದ್ರನ್. ನನ್ನ ಜೀವನದ ಫಸ್ಟ್ ಪಾಸಿಟಿವ್ ಪರ್ಸಾನಾಲಿಟಿ ರವಿಚಂದ್ರನ್ ಎಂದು ಕೊಂಡಾಡಿದರು. ಇದನ್ನೂ ಓದಿ: ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

    ಒಟ್ಟಿನಲ್ಲಿ ಸ್ಯಾಂಡಲ್‌ವುಡ್ ಇಬ್ಬರು ದಿಗ್ಗಜರ ಸಮಾಗಮ. ಸ್ನೇಹ, ಪ್ರೀತಿಯ ಮಾತುಗಳು ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳಿಗೆ ಕರುನಾಡಿನ ಜನತೆಗೆ ಮತ್ತಷ್ಟು ಉತ್ಸಾಹ ನಂಬಿಕೆ ಭರವಸೆಯನ್ನು ಮೂಡಿಸಿದೆ.

  • Exclusive | ಗಿಟಾರ್‌ಗಿಂತ ಮುಂಚೆ ಮತ್ತೊಂದು ಚಿತ್ರ ನಿರ್ದೇಶಿಸಲಿದ್ದಾರೆ ಹಂಸಲೇಖ

    Exclusive | ಗಿಟಾರ್‌ಗಿಂತ ಮುಂಚೆ ಮತ್ತೊಂದು ಚಿತ್ರ ನಿರ್ದೇಶಿಸಲಿದ್ದಾರೆ ಹಂಸಲೇಖ

    ಸ್ಯಾಂಡಲ್‌ವುಡ್‌ನ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರು ಗಿಟಾರ್ (Guitar) ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಈ ಹಿಂದೆ ಘೋಷಿಸಿದ್ದರು. ಅದೊಂದು ಪ್ಯಾನ್‌ವರ್ಲ್ಡ್ ಸಿನಿಮಾ ಆಗಲಿದೆ ಅಂತಾನೂ ಹೇಳಿದ್ದರು. ಈಗ ಆ ಸಿನಿಮಾಗಿಂತ ಮುಂಚೆ ಮತ್ತೊಂದು ಸಿನಿಮಾ ಘೋಷಿಸಲಿದ್ದಾರೆ. ಅವರ ಹುಟ್ಟುಹಬ್ಬದಂದು ಹೊಸ ಚಿತ್ರಕ್ಕೆ ಚಾಲನೆ ಸಿಗಲಿದೆ.ಇದನ್ನೂ ಓದಿ: `ಕಪಟ ನಾಟಕ ಸೂತ್ರಧಾರಿ’ಯ ಟ್ರೈಲರ್ ಬಿಡುಗಡೆ

    ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ `ಓಕೆ’ ಎಂದು ಹೆಸರಿಟ್ಟಿದ್ದಾರೆ ಹಂಸಲೇಖ. ಜೂ.23ರಂದು ಹಂಸಲೇಖ ಅವರ ಹುಟ್ಟುಹಬ್ಬವಿದ್ದು. ಅಂದು ಈ ಚಿತ್ರದ ಚಿತ್ರೀಕರಣದ ಕಾಯಕಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ವಿ.ರವಿಚಂದ್ರನ್, ಬಿಎನ್ ಗಂಗಾಧರ್ ಮತ್ತು ಲತಾ ಹಂಸಲೇಖ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನ ಕೂಡ ಮಾಡಲಾಗುತ್ತಿದೆ.

    ಆಕಾಂಕ್ಷ ಪ್ರೊಡಕ್ಷನ್ ಮತ್ತು ಐದನಿ ಎಂಟರ್ಟೈನಮೆಂಟ್ ಲಾಂಛನದಲ್ಲಿ ಈ ಚಿತ್ರ ಮೂಡಿಬರಲಿದ್ದು, ನಾಗೇಶ್ ವಾಷ್ಟರ್ ಮತ್ತು ಸೂರ್ಯಪ್ರಕಾಶ್ ಈ ಚಿತ್ರದ ನಿರ್ಮಾಪಕರು. ಹೆಚ್ಚಿನ ಮಾಹಿತಿಯನ್ನು ತಮ್ಮ ಹುಟ್ಟುಹಬ್ಬದಂದೇ ಹಂಸಲೇಖ ಅವರು ಹಂಚಿಕೊಳ್ಳಲಿದ್ದಾರೆ.ಇದನ್ನೂ ಓದಿ: ನರೇಗಾದಲ್ಲಿ ಭಾರೀ ಗೋಲ್ಮಾಲ್‌ – ಬಿಲ್ ಪಡೆಯಲು ಸೀರೆಯುಟ್ಟ ಯುವಕ!

  • ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ: ಹಂಸಲೇಖ

    ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗ್ತೀರಿ: ಹಂಸಲೇಖ

    – ‘ಮಿಸ್ಟರ್ ತಮಿಳು ಹಾಸನ್’ ಎಂದು ಕರೆದ ಹಂಸಲೇಖ

    ನೀವು ಕ್ಷಮೆ ಕೇಳಿದರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲ ಅಂದ್ರೆ ಆ ಹಾಸನ್ ಆಗುತ್ತೀರಿ ಎಂದು ಕಮಲ್ ಹಾಸನ್ (Kamal Haasan)ವಿವಾದಾತ್ಮಕ ಹೇಳಿಕೆಗೆ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಕಿಡಿಕಾರಿದ್ದಾರೆ.

    ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂಬ ನಟ ಕಮಲ್ ಹಾಸನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಮಲ್ ಹಾಸನ್ ಅವರನ್ನು ‘ಮಿಸ್ಟರ್ ತಮಿಳು ಹಾಸನ್’ ಎಂದು ಕರೆದರು. ತಮಿಳು ಮುಖ್ಯಮಂತ್ರಿ ಸ್ಟಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನಸು ಕಟ್ಟುತ್ತಿದ್ದಾರೆ. ತೆಂಕಣವನ್ನು ಕಟ್ಟಬೇಕು ಅನ್ನೋದು ಸ್ಟಾಲಿನ್ ಕನಸು. ಅವರ ಕನಸಿಗೆ ಕಮಲ್ ಮಾತು ಸಹಾಯ ಮಾಡಬೇಕಿತ್ತು. ನೀವು ಆ ಪಕ್ಷದ ಮಿತ್ರ ಪಕ್ಷ. ನೀವು ಒಳ್ಳೆಯ ಮಾತುಗಳನ್ನು ಆಡಬೇಕು. ಯೋಚಿಸಿ ಮಾತಾಡಬೇಕು ಎಂದರು. ಇದನ್ನೂ ಓದಿ: ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ

    ನಾನು ಕನ್ನಡಿಗರು, ಭಾಷಾ ಪ್ರಿಯರು. ಭಾಷಾ ಅಂಧತೆ ನಮಗಿಲ್ಲ. ನಮ್ಮ ಕನ್ನಡ ದೇಶದ ಸಾಂಸ್ಕೃತಿ ರಾಯಭಾರಿ ಬಸವಣ್ಣ. ಬಸವಣ್ಣ ನಮಗೆ ಕೊಟ್ಟಿದ್ದು ವಚನಗಳು. ನಾವು ವಚನಗಳಿಗೆ ಯಜಮಾನರು. ವಚನಗಳು ಅಂದರೆ ಮಾತು ಸ್ವಾಮಿ. ಮಾತು ಎಚ್ಚರಿಕೆಯಿಂದ ಆಡಬೇಕು ಎಂದು ಹೇಳಿದರು. ಇದನ್ನೂ ಓದಿ: ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ

    ತಮಿಳಿಗೆ ಲಿಪಿಯನ್ನು ಕೊಟ್ಟಿದ್ದು ಕನ್ನಡ ಭಾಷೆ ಎಂದು ವಿದ್ವಾಂಸರು ಹೇಳುತ್ತಾರೆ. ಅದರ ಬಗ್ಗೆ ಸ್ವಲ್ಪ ವಿಚಾರಿಸಿ ನೋಡಿ. ನಾವು ಕಲಾವಿದರು, ತೆಂಕಣವನ್ನು ಕಟ್ಟುವ ಕನಸು ಹೊತ್ತವರು. ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನುವ ಭಾರತಿಯರು. ಹಾಗಾಗಿ ನೀವು ದಯವಿಟ್ಟು ಕ್ಷಮೆ ಕೇಳಿ, ಏನೂ ತಪ್ಪಿಲ್ಲ. ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲ ಅಂದ್ರೆ ಆ ಹಾಸನ್ ಆಗುತ್ತೀರಿ. ಆ ಹಾಸನ್‌ನಲ್ಲಿ ಮತಾಂಧತೆ, ಭಾಷಾಂಧತೆ ಅನ್ನುವ ಕೊಳೆತ, ಕೊಳಕು ಬೀಜಗಳು ಇವೆ ಅನ್ನೋ ಅನುಮಾನ ಇದೆ ಎಂದರು. ಇದನ್ನೂ ಓದಿ: ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು

  • Landmarks of Sandalwood: ‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ

    Landmarks of Sandalwood: ‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ

    – ಕನ್ನಡ ಚಿತ್ರರಂಗಕ್ಕೆ 90 ವರ್ಷಗಳ ಸಂಭ್ರಮ

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ 90 ವರ್ಷಗಳ ಸಂಭ್ರಮ. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕಾಗಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದೆ.‌

    ಭಾನುವಾರ ಬೆಂಗಳೂರಿನ ರಾಜಾಜಿನಗದರದಲ್ಲಿ ನಡೆದ ‘Landmarks of Sandalwood- ಚಂದನವನದ ಚಿಲುಮೆಗಳು’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕ ಟಿ.ಎಸ್.ನಾಗಭರಣ, ನಾಗತಿಹಳ್ಳಿ ಚಂದ್ರಶೇಖರ್, ನಟ ಶ್ರೀಮುರುಳಿ ಸೇರಿದಂತೆ ಕನ್ನಡ ಸಿನಿರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು.

     

    ಪತ್ರಕರ್ತ ಎಸ್.ಶ್ಯಾಮ್ ಪ್ರಸಾದ್ ಹಾಗೂ ಪಬ್ಲಿಕ್ ಟಿವಿ ಸಿನಿಮಾ ಬ್ಯೂರೋದ ಮುಖ್ಯಸ್ಥ ಡಾ. ಶರಣು ಹುಲ್ಲೂರು ಅವರು ಈ ಚಂದನವನದ ಚಿಲುಮೆಗಳು ಪುಸ್ತಕವನ್ನ ಬೆರೆದಿದ್ದಾರೆ. 90 ವರ್ಷದ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿರೋ 90 ಚಿತ್ರಗಳ ಬಗ್ಗೆ ಈ ಪುಸ್ತಕದಲ್ಲಿ ವಿಸ್ತೃತವಾದ ವಿವರಣೆಗಳನ್ನ ದಾಖಲಿಸಿದ್ದಾರೆ.

  • ಮಗು ತಪ್ಪು ಮಾಡಿದಾಗ ತಂದೆಗೆ ಆಗುವಷ್ಟು ನೋವು ನನಗೂ ಆಗ್ತಿದೆ: ಹಂಸಲೇಖ ಭಾವುಕ

    ಮಗು ತಪ್ಪು ಮಾಡಿದಾಗ ತಂದೆಗೆ ಆಗುವಷ್ಟು ನೋವು ನನಗೂ ಆಗ್ತಿದೆ: ಹಂಸಲೇಖ ಭಾವುಕ

    ಮಂಡ್ಯ: ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ, ನಾನು ಅಷ್ಟೇ ನೋವು ತಿಂತಿದ್ದೀನಿ. ಆ ಮಗು ಕೂಡ ಅಷ್ಟೇ ನೋವು ಅನುಭವಿಸುತ್ತಿರುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಭಾವುಕರಾಗಿದ್ದಾರೆ.

    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್‌ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವಿಚಾರ ಕುರಿತು ಮಂಡ್ಯದಲ್ಲಿ (Mandya) ಮಾತನಾಡಿದ ಅವರು, ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ, ನಾನು ಅಷ್ಟೇ ನೋವು ತಿಂತಿದ್ದೀನಿ. ಆ ಮಗು ಕೂಡ ಅಷ್ಟೇ ನೋವು ತಿಂತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ಗಮನ ಕೊಡೋಣ ಎಂದು ತಿಳಿಸಿದ್ದಾರೆ.

    ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಗೆ ಬೀಳೋದು ಬೇಡ. ಕೇರಳ ಚಿತ್ರೋದ್ಯಮ ಹೀಗೇ ಆಗಿತ್ತು. ಅದೀಗ ಉತ್ತುಂಗದಲ್ಲಿದೆ. ಕೆಳಗೆ ಬಿದ್ದು ಮತ್ತೆ ಮೇಲೆ ಎದ್ದಿದೆ. ನಮ್ಮದು ಚಂದನವನ. ಒಂದು ಮಳೆಗೆ ಮರ ಒಣಗಿದರೇನಂತೆ. ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕೆಟ್ಟ ಕಾಮೆಂಟ್ ಮಾಡೋರನ್ನ ಬ್ಲಾಕ್ ಮಾಡಿಬಿಡಿ ಅಷ್ಟೇ: ಅದ್ವಿತಿ ಶೆಟ್ಟಿ

    ಸಿನಿಮಾ ಕಲಾವಿದರಾದವರು ಚಿಕ್ಕದಾಗಿ ಯೋಚನೆ ಮಾಡಬೇಕು. ಸಿಟ್ಟನ್ನ ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು. ನಾವು ಆ ರೀತಿ ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ. ನಿಜ ಜೀವನದಲ್ಲಿ ಸ್ಕ್ರಿಪ್ಟನ್ನ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಆಗಬಾರದು. ಇದು ಕಲಾವಿದರ ಕರ್ತವ್ಯ ಎಂದು ನಟ ದರ್ಶನ್‌ಗೆ ಹಂಸಲೇಖ ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಪಿಎಂ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ನೀಡಿದ ‘ಮಾಣಿಕ್ಯ’ ನಟಿ

  • ‘ಕಲ್ಜಿಗ’ ಟೈಟಲ್ ಅನಾವರಣ ಮಾಡಿದ ಸಂಗೀತ ನಿರ್ದೇಶಕ ಹಂಸಲೇಖ

    ‘ಕಲ್ಜಿಗ’ ಟೈಟಲ್ ಅನಾವರಣ ಮಾಡಿದ ಸಂಗೀತ ನಿರ್ದೇಶಕ ಹಂಸಲೇಖ

    ರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಒಂದಷ್ಟು ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ `ಕಲ್ಜಿಗ’ (Kaljiga) ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಇದೀಗ ಅನಾವಣಗೊಂಡಿದೆ. ಚಿತ್ರತಂಡ, ನಾನಾ ಕ್ಷೇತ್ರದ ಗಣ್ಯರು ಮತ್ತು ನಾದಬ್ರಹ್ಮ ಹಂಸಲೇಖ (Hamsalekha) ಸಮ್ಮುಖದಲ್ಲಿ ಕಲ್ಜಿಗದ ಟೈಟಲ್ (Title) ಹಾಗೂ ಪೋಸ್ಟರ್ ಬಿಡುಗಡೆಗೊಂಡಿದೆ.

    ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರವನ್ನು ಸುಮನ್ ಸುವರ್ಣ (Suman Suvarna) ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಗೀತರಚನೆಯತ್ತಲೂ ಹೊರಳಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಖುದ್ದು ಹಂಸಲೇಖ ಅವರೇ ಹಾಜರಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡವನ್ನು ಮೆಚ್ಚಿಕೊಳ್ಳುತ್ತಲೇ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಲವತ್ತಕ್ಕೂ ಹೆಚ್ಚು ಸಿನಿಮಾಗಳ ಆಫರ್ ಗಳನ್ನು ತಿರಸ್ಕರಿಸಿ, ಕಲ್ಜಿಗ ಚಿತ್ರದತ್ತ ಆಕರ್ಷಿತರಾದುದಕ್ಕೆ ಕಾರಣಗಳನ್ನು ಬಿಚ್ಚಿಟ್ಟರು. ಒಟ್ಟಾರೆಯಾಗಿ, ನಾದಬ್ರಹ್ಮನ ಮಾತುಗಳಲ್ಲಿ ಒಂದಿಡೀ ಚಿತ್ರ ಮೂಡಿ ಬಂದಿರಬಹುದಾದ ರೀತಿಯ ಬಗ್ಗೆ ಮೆಚ್ಚುಗೆ ಹೊಮ್ಮುತ್ತಿತ್ತು.

    ಇನ್ನುಳಿದಂತೆ, ಗಿರ್ ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ `ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್ ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಸದ್ಯದ ಮಟ್ಟಿಗೆ ಕಲ್ಜಿಗದ ಆಂತರ್ಯವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಈಗಾಗಲೇ ಉಡುಪಿ, ಮಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಇದೀಗ ಮುಕ್ಕಾಲು ಭಾಗ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಸಮಾಪ್ತಿಗೊಂಡಿದೆ. ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ತಯಾರಾಗಿರುವ ಈ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗಿದೆಯಂತೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆಯಂತೆ. ಈ ಪೋಸ್ಟರ್ ಮತ್ತು ಟೈಟಲ್ ಅನಾವರಣದ ವೇದಿಕೆಯಲ್ಲಿ ಚಿತ್ರತಂಡದ ಕಡೆಯಿಂದ ಇವಿಷ್ಟು ಮಾಹಿತಿಗಳು ಜಾಹೀರಾಗಿವೆ.

    ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸಚಿನ್ ಶೆಟ್ಟಿ, ಕುಲದಲ್ಲಿ ಕೀಳ್ಯಾವುದೋ ಸಿನಿಮಾ ನಿರ್ಮಾಪಕ ಸಂತೋಷ್ ಕುಮಾರ್, ನಿರ್ವತ್ತ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ಮತ್ತು ಚಿತ್ರತಂಡ ಹಾಜರಿತ್ತು. ಹಂಸಲೇಖ ಸಂಗೀತ, ಸಾಹಿತ್ಯ, ಸಚಿನ್ ಶೆಟ್ಟಿ ಛಾಯಾಗ್ರಹಣ, ಪ್ರಸಾದ್ ಕೆ ಶೆಟ್ಟಿ ಹಿನ್ನೆಲೆ ಸಂಗೀತ, ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ಕಲ್ಜಿಗ ಸೆಪೆಂಬರ್ ತಿಂಗಳಲ್ಲಿ ತೆರೆಗಾಣೋದು ಖಾತರಿಯಾಗಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಂಪೂರ್ಣಗೊಂಡ ನಂತರದಲ್ಲಿ ಚಿತ್ರತಂಡ ಮತ್ತೊಂದಷ್ಟು ವಿಚಾರಗಳೊಂದಿಗೆ ಪ್ರೇಕ್ಷಕರನ್ನು ತಲುಪಿಕೊಳ್ಳಲಿದೆ.

  • ಮೈಸೂರಿನ ಐತಿಹಾಸಿಕ ದಸರಾ ಜೀವಂತ ಮಹಾಕಾವ್ಯ: ಕಾರ್ಯಕ್ರಮಗಳಿಗೆ ಹಂಸಲೇಖ ಚಾಲನೆ

    ಮೈಸೂರಿನ ಐತಿಹಾಸಿಕ ದಸರಾ ಜೀವಂತ ಮಹಾಕಾವ್ಯ: ಕಾರ್ಯಕ್ರಮಗಳಿಗೆ ಹಂಸಲೇಖ ಚಾಲನೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಐತಿಹಾಸಿಕ ದಸರಾ (Dasara) ಮಹೋತ್ಸವದ ಸಂಭ್ರಮ ಕಳೆಕಟ್ಟಿದೆ. 414ನೇ ದಸರಾಗೆ ವಿದ್ಯುಕ್ತ ಚಾಲನೆ ದೊರಕಿದೆ. ಶುಭ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ (Hamsalekha) ಅವರು ಮೈಸೂರು ದಸರಾವನ್ನು ಉದ್ಘಾಟಿಸಿದ್ದಾರೆ.

    ನಾಡದೇವಿಗೆ ಪುಷ್ಪಾರ್ಷನೆ ಸಲ್ಲಿಸುವ ಮೂಲಕ ದಸರಾ ಹಬ್ಬವನ್ನು ಉದ್ಘಾಟಿಸಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಡಾ. ಹಂಸಲೇಖ ಅವರ ಪತ್ನಿ ಕೂಡಾ ಪುಷ್ಪಾರ್ಚನೆ ವೇಳೆ ಭಾಗಿಯಾಗಿದ್ದರು.

    ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ಕರ್ನಾಟಕದ ಏಕೀಕರಣಕ್ಕೆ 50 ವರ್ಷ. ನನ್ನ ಕಲಾ ಕಾಯಕಕ್ಕೂ 50 ವರ್ಷ. ಇಂದು ನಾಡಹಬ್ಬ ದಸರಾಗೆ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ಬಹಳ ಬಹಳ ಬೆಲೆಯುಳ್ಳದ್ದು. ಈ ಅವಕಾಶಕ್ಕಾಗಿ ನಾನು ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕೆ ಹಲವರು ಕಾರಣರಿದ್ದಾರೆ. ಅಪ್ಪ ಗೋವಿಂದರಾಜು, ಅಮ್ಮ ರಾಜಮ್ಮ, ಗುರುವನ್ನೆ, ಸಂಗೀತವನ್ನೆ, ಕನ್ನಡಿಗರನ್ನೆ ಸಂವಿಧಾನವನ್ನೆ, ಸಿಂಗಲ್ ಸಿಂಹ ಸಿದ್ದರಾಮಯ್ಯ, ಪ್ರಬಲ ಶಕ್ತಿ ಸಂಘಟಕ ಡಿಕೆ ಶಿವಕುಮಾರ್, ಹೆಂಡತಿ, ಮಕ್ಕಳನ್ನೆ, ಭೀಮ ಪಡೆಯನ್ನೆ ಯಾರು ಯಾರನ್ನು ನೆನೆಯಲಿ ಹೇಳಿ? ಭೂಮಿ ತಾಯಿಯ ನೆನೆದು ಬಿಟ್ಟರೆ ಇವರನ್ನೆಲ್ಲಾ ನೆನೆದಂತೆ ಎಂದು ನುಡಿದರು.

    ನಾನು ಈಗ ಕನ್ನಡದ ದೀಪ ಹಚ್ಚಿದ್ದೇನೆ. ಕನ್ನಡಿಗರ ಆಶಯದಂತೆ ದೀಪ ಹಚ್ಚಿದ್ದೇನೆ. ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ. ವಿಜಯನಗರದ ಮಹಾ ಸಾಮ್ರಾಜ್ಯ ಆರಂಭಿಸಿದ ಮಹಾಕಾವ್ಯವಿದು. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು. ಅಭಿವೃದ್ಧಿ ನಮ್ಮ ಕೃತಿ ಆಗಬೇಕು ಎಂದರು.

    ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಭಾವಕ್ಕೆ ಮಿತಿ ಎಲ್ಲಿದೆ? ನಮಗೆ ದೆಹಲಿ ಬೇಕು. ದೆಹಲಿಗೂ ನಾವು ಬೇಕು. ಆದರೆ ದೆಹಲಿಗೆ ಕನ್ನಡವೇ ಬೇಕಾಗುತ್ತಿಲ್ಲ. ಇದಕ್ಕೆ ತಲೆ ಕೆಡಿಸಿಕೊಳ್ಳೋದು ಬೇಡ. ನಾವು ಕನ್ನಡವನ್ನು ಜಗತ್ತಿನಲ್ಲಿ ಮೆರೆಸಬೇಕಿದೆ. ಕರ್ನಾಟಕದ ಶಾಂತಿ ಸಮೃದ್ಧಿ ಕನ್ನಡಿಗರ ಮಂತ್ರ ಆಗಬೇಕು. ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲಾ ಕನ್ನಡಿಗರು. ಇವರಲ್ಲಿ ಯಾರಿಗೆ ಕನ್ನಡ ಮಾತಾಡಲು ಬರಲ್ಲ? ಯಾರಿಗೆ ಅರ್ಥವಾಗಲ್ಲ? ಈ ಬಗ್ಗೆ ಒಂದು ಸಮೀಕ್ಷೆ ಆಗಬೇಕು. ಕಾರ್ಪೊರೇಟ್ ಸಂಸ್ಥೆಯೇ ಈ ಸಮೀಕ್ಷೆ ಮಾಡುತ್ತದೆ. ಇದಕ್ಕೆ ಜನರ ಸಹಕಾರ ಇರಲಿ ಎಂದು ಆಶಿಸಿದರು. ಇದನ್ನೂ ಓದಿ: ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ

    ಪ್ರತಿಭೆ ಮತ್ತು ಉದ್ಯಮ ಅಗತ್ಯವಾದುದು. ಹುಬ್ಬಳ್ಳಿ-ಬೆಳಗಾವಿ ಜೋಡಿ ಆಗಬೇಕು. ಮಂಗಳೂರು-ಮೈಸೂರು ಜೋಡಿ ಆಗಬೇಕು. ಈ 2 ಜಿಲ್ಲೆಗಳಲ್ಲಿ ವ್ಯಾಪಾರ ಇದೆ. ಸಂಪ್ರದಾಯಿಕ ವೈಭೋಗವಿದೆ. ನಮ್ಮ ಜಿಲ್ಲೆಗಳು ನಮ್ಮ ಜಿಲ್ಲೆಗಳ ನಡುವೆಯೆ ಜೋಡಿ ಆಗಬೇಕು. 29 ಜಿಲ್ಲೆಗಳನ್ನು ಎರಡೆರಡು ಜಿಲ್ಲೆಗಳಗಿ ಜೋಡಿಸಿ ವ್ಯಾಪಾರ, ಅಭಿವೃದ್ಧಿಗೆ ಯೋಜನೆ ಮಾಡಬೇಕು. ಕೃಷಿಕ-ಕಾರ್ಪೋರೆಟ್ ಜೋಡಿ ಆಗಬೇಕು. ಅವರ ಕಷ್ಟ ಇವರಿಗೆ ಇವರ ಕಷ್ಟ ಅವರಿಗೆ ಗೊತ್ತಾಗಬೇಕು. ಕನ್ನಡದ ಪಟ್ಟದ ಕೆಲಸಕ್ಕೆ ನಾನು ನನ್ನ ಎಲ್ಲಾ ಸಮಯ ಕೊಡುತ್ತೇನೆ. ಇದರಲ್ಲಿ ಸಕ್ರಿಯವಾಗಿ ಭಾಗಿ ಆಗುತ್ತೇನೆ ಎಂದು ಹೇಳಿದರು.

    ಕನ್ನಡದ ಶಾಂತಿ ಮಂತ್ರವನ್ನು ವಿಶ್ವಕ್ಕೆ ಮುಟ್ಟಿಸೋಣ, ರಾಷ್ಟ್ರದ ಜೊತೆ, ವಿಶ್ವದ ಜೊತೆ ಕನ್ನಡವನ್ನು ಸಮೀಕರಿಸಬೇಕು. ನಾವು ಕನ್ನಡದ ಅಭಿವೃದ್ಧಿ ಮಾಡೋಣಾ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರ ಆಗಬೇಕು ಎಂದರು. ಇದನ್ನೂ ಓದಿ: ನವರಾತ್ರಿ 2023: ಶೈಲಪುತ್ರಿಯ ಮಹತ್ವವೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐತಿಹಾಸಿಕ ಮೈಸೂರು ದಸರಾಕ್ಕೆ ಕ್ಷಣಗಣನೆ – ಹಂಸಲೇಖರಿಂದ ನಾಳೆ ಚಾಲನೆ

    ಐತಿಹಾಸಿಕ ಮೈಸೂರು ದಸರಾಕ್ಕೆ ಕ್ಷಣಗಣನೆ – ಹಂಸಲೇಖರಿಂದ ನಾಳೆ ಚಾಲನೆ

    ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವಕ್ಕೆ ಭಾನುವಾರ (ಅ.15) ಮೈಸೂರಿನ ಚಾಮುಂಡಿಬೆಟ್ಟದಲ್ಲಿ (Chamundi Hills) ವಿಧ್ಯುಕ್ತ ಚಾಲನೆ ದೊರೆಯಲಿದೆ.

    ನಾಳೆ ಬೆಳಗ್ಗೆ 10.15 ರಿಂದ 10.35ರ ವೃಶ್ಚಿಕ ಲಗ್ನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಹಲವೆಡೆ ವಿದ್ಯುತ್ ವ್ಯತ್ಯಯ; Ind Vs Pak ಮ್ಯಾಚ್ ನೋಡುವ ಫ್ಯಾನ್ಸ್‌ಗೆ ನಿರಾಸೆ ಸಾಧ್ಯತೆ

    ಬಳಿಕ ಚಾಮುಂಡಿ ಬೆಟ್ಟದಲ್ಲೇ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಉತ್ಸವಕ್ಕೆ ಕ್ಷಣಗಣನೆ ಬಾಕಿಯಿದ್ದು, ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]