Tag: hamsa

  • BBK 11 – ದೊಡ್ಮನೆಯಿಂದ ಹಂಸ ಔಟ್

    BBK 11 – ದೊಡ್ಮನೆಯಿಂದ ಹಂಸ ಔಟ್

    ಬಿಗ್ ಬಾಸ್ (BBK 11) ಮನೆಯ ಆಟ ರಂಗೇರಿದೆ. ಯಮುನಾ ಬಳಿಕ ಬಿಗ್ ಬಾಸ್ ಮನೆಯಿಂದ ಹಂಸ (Hamsa) ಔಟ್ ಆಗಿದ್ದಾರೆ. ಹಂಸ ಅವರ ದೊಡ್ಮನೆಯ ಆಟಕ್ಕೆ ಬ್ರೇಕ್ ಹಾಕಿದ್ದಾರೆ.

    ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಆಕ್ಟೀವ್ ಆಗಿದ್ದ ನಟಿ ಹಂಸ ಅವರು ನರಕವಾಸಿ ರಂಜಿತ್ ಆಟದಿಂದ ಮನೆಯ ಕ್ಯಾಪ್ಟನ್ ಆಗಿದ್ದರು. ಈಗ ಅವರ ಆಟಕ್ಕೆ ಬ್ರೇಕ್ ಬಿದ್ದಿದೆ.

    ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಎರಡು ಕಾರ್ ಗಳು ಮನೆಗೆ ಎಂಟ್ರಿ ಕೊಟ್ಟಿದ್ದು, ಬಾಟಮ್ ಎರಡಲ್ಲಿ ಕಡೆಯದಾಗಿ ಹಂಸ, ಮೋಕ್ಷಿತಾ ಪೈ ಉಳಿದುಕೊಂಡಿದ್ದರು. 9 ಸ್ಪರ್ಧಿಗಳಲ್ಲಿ ಕಡೆಯದಾಗಿ ಇವರಿಬ್ಬರೂ ಉಳಿದುಕೊಂಡಿದ್ದರು. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಒಂದು ಕಾರಿನಲ್ಲಿ ಹಂಸ, ಮತ್ತೊಂದು ಕಾರಿನಲ್ಲಿ ಮೋಕ್ಷಿತಾ ಪೈ ಅವರನ್ನು ಕೂರಿಸಿಕೊಂಡು ಮನೆಯಿಂದ ಹೊರಗೆ ಹೋಯಿತು. ಸ್ವಲ್ಪ ಸಮಯ ಬಳಿಕ ಎಂಟ್ರಿ ಕೊಟ್ಟ ಕಾರಿನಲ್ಲಿ ಮೋಕ್ಷಿತಾ ಇದ್ದರು. ಅಲ್ಲಿಗೆ ಈ ವಿಭಿನ್ನ ಎಲಿಮಿನೇಷನ್ ನಲ್ಲಿ‌ ಹಂಸ ಔಟ್ ಆಗಿದ್ದಾರೆ ಅನ್ನೋದು ಅಧಿಕೃತವಾಯಿತು.

    ಈ ಎಲಿಮಿನೇಷನ್ ನಂತರ ಅಸಲಿ ಆಟ ಶುರು ಅಂತ ಮೋಕ್ಷಿತಾ ಸವಾಲು ಹಾಕಿದ್ದಾರೆ. ತನ್ನನ್ನು ಟಾರ್ಗೆಟ್ ಮಾಡೋರಿಗೆ ನಟಿ ಎಚ್ಚರಿಕೆ ನೀಡಿದ್ದಾರೆ.

  • BBK 11: ‘ಬಿಗ್’ ಮನೆಗೆ ಹಂಸಾ, ಮೋಕ್ಷಿತಾ, ಐಶ್ವರ್ಯಾ, ಚೈತ್ರಾ, ಮಂಜು ಗ್ರ್ಯಾಂಡ್ ಎಂಟ್ರಿ

    BBK 11: ‘ಬಿಗ್’ ಮನೆಗೆ ಹಂಸಾ, ಮೋಕ್ಷಿತಾ, ಐಶ್ವರ್ಯಾ, ಚೈತ್ರಾ, ಮಂಜು ಗ್ರ್ಯಾಂಡ್ ಎಂಟ್ರಿ

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ 11ಕ್ಕೆ (Bigg Boss Kannada 11) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಹಂಸಾ, ಐಶ್ವರ್ಯಾ, ಮೋಕ್ಷಿತಾ ಪೈ(Mokshitha Pai), ಉಗ್ರಂ ಖ್ಯಾತಿಯ ಮಂಜು, ರಂಜಿತ್‌ ಕುಮಾರ್‌ (Ranjith Kumar) ದೊಡ್ಮನೆಗೆ ಕಾಲಿಟ್ಟಿದ್ದಾರೆ. ಒಟ್ಟು ಬಿಗ್‌ ಬಾಸ್‌ಗೆ 17 ಸ್ಪರ್ಧಿಗಳ ಆಗಮನವಾಗಿದೆ.

    ದೊಡ್ಮನೆ ಆಟಕ್ಕೆ ಇಂದು (ಸೆ.29) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಕಿರುತೆರೆ ನಟಿ ಹಂಸಾ, ನಾಗಿಣಿ 2 ಖ್ಯಾತಿಯ ಐಶ್ವರ್ಯಾ ಸಿಂದೋಗಿ, ಪಾರು ಖ್ಯಾತಿಯ ಮೋಕ್ಷಿತಾ ಪೈ, ಶನಿ ಸೀರಿಯಲ್‌ನ ರಂಜಿತ್‌ ಕುಮಾರ್‌, ಚೈತ್ರಾ ಕುಂದಾಪುರ (Chaithra Kundapura), ಉಗ್ರಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮಂಜು ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ.

    ದೊಡ್ಮನೆಯಲ್ಲಿ ಈಗ ಸ್ವರ್ಗ ಮತ್ತು ನರಕ ಎಂದು ಎರಡು ತಂಡಗಳಾಗಿ ಮಾಡಿ ಅದರಲ್ಲಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಯ ಆಟದ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡಿಸಿದೆ.

    ಭವ್ಯಾ ಗೌಡ (Bhavya Gowda), ಯಮುನಾ, ಮಾನಸಾ, ತ್ರಿವಿಕ್ರಮ್‌, ಶಿಶಿರ್‌ ಶಾಸ್ತ್ರಿ, ಅನುಷಾ ರೈ, ಧರ್ಮ ಕೀರ್ತಿರಾಜ್‌, ಧನರಾಜ್‌, ಗೋಲ್ಡ್‌ ಸುರೇಶ್‌,ಗೌತಮಿ ದೊಡ್ಮನೆಯ ಸ್ಪರ್ಧಿಗಳಾಗಿದ್ದಾರೆ. ಪ್ರತಿದಿನ ರಾತ್ರಿ 9:30 ಶೋ ಪ್ರಸಾರವಾಗಲಿದೆ.